ಸಾವಿರ ಗುರುತಿನ ಸಮವಸ್ತ್ರ


Team Udayavani, Nov 15, 2019, 4:58 AM IST

ff-17

ಸಾಂದರ್ಭಿಕ ಚಿತ್ರ

ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ ಮುಂದೆ ಬಂದು ನಿಂತಾಗ ಯಾರಾದರೂ “ನೀನು ಈ ಡ್ರೆಸ್‌ನಲ್ಲಿ ನೀನು ತುಂಬಾ ಚಂದ ಕಾಣಿ¤’ ಎಂದು ಹೇಳಿದರೆ ಸಾಕು, ಪುಟ್ಟ ಮುಖಗಳಲ್ಲಿ ಅರಳುವ ಕೆಂಪು ನಗೆ ನಮ್ಮ ಮುಖದಲ್ಲಿ ನಗು ತರಿಸುತ್ತದೆ. ಆದರೆ, ಸಾಮಾನ್ಯವಾಗಿ ಮಕ್ಕಳು ಸಮವಸ್ತ್ರಗಳನ್ನು ಇಷ್ಟಪಡುವುದೇ ಇಲ್ಲ! ದಿನಾ ಹಾಕಿ ಬೇಜಾರಾಗಿಯೊ ಅಥವಾ ಇನ್ನು ಹಲವು ಕಾರಣಗಳಿಗೆ ಸಮವಸ್ತ್ರವೆಂದರೆ ಮಕ್ಕಳಿಗೆ ಅದೇಕೋ ಇರುಸುಮುರುಸು.

ಈಗಿನ ವ್ಯವಸ್ಥೆಯಲ್ಲಿ ಶಾಲೆಗಳಲ್ಲೇ ಸಮವಸ್ತ್ರ ಕೊಡುವುದರಿಂದ ಸಮಸ್ಯೆ ಇಲ್ಲ. ಆದರೆ, ನಮ್ಮ ಕಾಲದಲ್ಲಿ ಹಾಗಲ್ಲ. ನಮ್ಮ ಸಮವಸ್ತ್ರಗಳನ್ನು ನಾವೇ ಹೊಲಿಸಿಕೊಳ್ಳಬೇಕಿತ್ತು. ಸಮವಸ್ತ್ರ ಚಂದ ಕಾಣಲಿ ಎಂದು ಹೊಲಿಸುತ್ತಿರಲಿಲ್ಲ. ಅಳತೆ ಕೊಡುವಾಗ ಅಮ್ಮಂದಿರು ಟೈಲರ್‌ ಬಳಿ, “ದೊಡ್ಡದಾಗಿ ಹೊಲೀರಿ, ಮುಂದಿನ ವರ್ಷಕ್ಕೂ ಇದೇ ಆಗಬೇಕು’ ಎಂದು ನಮ್ಮನ್ನು ನಾವು ಆ ದೊಗಲೆ ಬಟ್ಟೆಯಲ್ಲಿ ಹೇಗಪ್ಪ ನೋಡಿಕೊಳ್ಳುವುದೆಂಬ ಯೋಚನೆಗೆ ಸಿಲುಕಿಸುತ್ತಿತ್ತು. ಹಾಗೆ ವರ್ಷದ ಮೊದಲ ದಿನ ಸಮವಸ್ತ್ರ ಧರಿಸಿ ಬರುತ್ತಿದ್ದರೆ ಒಬ್ಬೊಬ್ಬರದ್ದು ಒಂದೊಂದು ಹಾಸ್ಯಮಯ ಫ‌ಜೀತಿ. ಒಬ್ಬರ ಸಮವಸ್ತ್ರ ಗಿಡ್ಡ, ಇನ್ನಿಬ್ಬರದ್ದು ದೊಗಲೆ, ಕೆಲವರಿಗೆ ಉದ್ದ, ಇನ್ನೂ ಕೆಲವರು ರಜೆಯಲ್ಲಿ ಅಡಿಕೆ ಮರದಂತೆ ಬೆಳೆದು ತೆಂಗಿನಕಾಯಿಯಂತೆ ಊದಿ ಸಮವಸ್ತ್ರದ ಹೊಲಿಗೆಯೇ ಬಿಚ್ಚಿ ಹೋಗುತ್ತದೇನೋ ಎನ್ನುವಷ್ಟು ಟೈಟ್‌ ಆಗಿರುತಿತ್ತು. ಮೂರು ವರ್ಷಕ್ಕೆ ಆಗಲಿ ಎಂದು ಹೊಲಿಸಿದವರು ಬರುತ್ತಿದ್ದರೆ ಅವರು ಸಮವಸ್ತ್ರ ಧರಿಸಿ ಬರುತ್ತಿ¨ªಾರೋ ಅಥವಾ ಸಮವಸ್ತ್ರವೆ ಇವರನ್ನು ಎಳೆದುಕೊಂಡು ಬರುತ್ತಿದೆಯೋ ಎಂದು ಅನುಮಾನ ಆಗುತ್ತಿತ್ತು.

ಈಗ ಅದೇ ಶಾಲೆಯ ಸಮವಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ಅಮ್ಮ ತೋರಿಸಿ ನಗುತ್ತಿರುತ್ತಾಳೆ. “ನೋಡು, ಆಗ ನೀನು ಎಷ್ಟು ಸಣ್ಣ ಇದ್ದಿ’ ಎಂದು. ಆಗ ಬಾಲ್ಯವೆಲ್ಲ ಒಮ್ಮೆಲೆ ನೆನಪಾಗುತ್ತದೆ. ಸಮವಸ್ತ್ರ ಕಳೆದು ಹೋದ ಬಾಲ್ಯದ ಒಂದು ಸಿಹಿ ಗುರುತು. ಅದೊಂಥರಾ ಬೆಳವಣಿಗೆಯ ಮಾಪನವಾಗಿತ್ತು. ಆಟವಾಡಿ ಕೊಳೆ ಆಗುತ್ತಿದ್ದರೂ ಅದೊಂದು ಕಲೆಯನ್ನು ಹೇಳಿಕೊಡುತ್ತಿತ್ತು. ಬಾಲ್ಯದಲ್ಲಿ ಸಮವಸ್ತ್ರದ ಜೇಬಿಗೆ ನಾವು ಕೈ ಹಾಕಿದಾಗಲೆಲ್ಲ ಒಂದು ಆತ್ಮವಿಶ್ವಾಸ ಮೂಡು ತ್ತ ದೆ. ಶೀತ ಆದಾಗ ಅಮ್ಮ ಕಳಿಸಿದ ಕರವಸ್ತ್ರವನ್ನ ಹೇಸಿಗೆ ಪಟ್ಟುಕೊಳ್ಳದೆ ಇದು ಹಿಡಿದುಕೊಂಡಿದೆ. ಅರ್ಧ ತಿಂದ ತಿಂಡಿ-ತಿನಿಸುಗಳನ್ನು ಶಿಕ್ಷಕರಿಗೆ ಕಾಣದಂತೆ ಕೆಲವೊಮ್ಮೆ ಮುಚ್ಚಿಟ್ಟುಕೊಂಡಿದೆ. ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಸಮವಸ್ತ್ರ ಬೇರೆಯದೇ ಆದ ಭಾವನಾತ್ಮಕವಾದ ಸಂಬಂಧವನ್ನು ಇಟ್ಟುಕೊಂಡಿದೆ.

ಸಮವಸ್ತ್ರ ಸಮಾನತೆಯ ಸಂಕೇತ. ಎಲ್ಲರೂ ಸಮಾನರು, ಕೇವಲ ಬಟ್ಟೆಯಿಂದ ಅವರು ಮೇಲು ಇವರು ಕೀಳು ಎಂಬ ಭಾವನೆ ಇಟ್ಟುಕೊಂಡರೆ ಅದು ನಮ್ಮ ಮೂರ್ಖತನದ ಪರಮಾವಧಿ, ವಿದ್ಯೆಯಿಂದ ಮಾತ್ರ ಒಳ್ಳೆಯ ಸ್ಥಾನ ತಲುಪುತ್ತಾರೆಯೇ ಹೊರತು ಬಟ್ಟೆಯಿಂದಲ್ಲ ಎಂಬ ಜೀವನದ ಸರಳ ಸಂದೇಶವನ್ನು ಸಮವಸ್ತ್ರ ನಮಗೆಲ್ಲರಿಗೂ ಹೇಳಿಕೊಟ್ಟಿದೆ. ಆದ್ದರಿಂದ ನಾವೆಲ್ಲರೂ ಸಮವಸ್ತ್ರವನ್ನು ಗೌರವಿಸೋಣ.

ಅಮಿತಾ ಎಂ.ವಿ.
ಪ್ರಥಮ ಬಿಎ (ಪತ್ರಿಕೋದ್ಯಮ), ಎಸ್‌ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.