ನಿಜವಾದ ಶಿಕ್ಷಣ

Team Udayavani, May 31, 2019, 6:00 AM IST

ಕಾಲ ಏಕೆ ಹೀಗೆ ಬದಲಾಗುತ್ತಿದೆ ! ಮನಸ್ಸು ನಿಯಂತ್ರಣವನ್ನು ಮೀರುತ್ತಿದೆ. ಕನಸಲ್ಲಿ ಕಾಣುವ ಕಲ್ಪನಾಲೋಕ ಮೆಲ್ಲನೆ ದೂರವಾಗಲಾರಂಭಿಸಿದೆ. ನಡೆಯುವ ಹೆಜ್ಜೆಗಳಲ್ಲಿ ದೃಢತೆಯ ಭಾವವಿಲ್ಲ. ಮನಸ್ಸು ಭವಿಷ್ಯವನ್ನು ಚಿಂತಿಸಿ ವಿಚಲಿತ ಪಡುತ್ತಿದೆ.

ಸ್ವಾಮಿ ವಿವೇಕಾನಂದರು ಹೇಳಿದ್ದರು, ಶಿಕ್ಷಣದ ಗುರಿ “ಪುರುಷ ಸಿಂಹಗಳ ನಿರ್ಮಾಣ’ ಎಂದು. ಹಾಗಿದ್ದರೆ, ಶಿಕ್ಷಣ ನಮ್ಮಲ್ಲಿ ಶ್ರದ್ಧೆ- ಆತ್ಮವಿಶ್ವಾಸಗಳನ್ನು ಬಲಪಡಿಸ ಬೇಡವೆ? ಶಿಕ್ಷಣ ನಮ್ಮಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಬೇಡವೆ? ವಿವೇಕಾನಂದರು ಮುಂದುವರಿದು ಹೇಳುತ್ತಾರೆ, “ನಮ್ಮ ಈಗಿನ ಶಿಕ್ಷಣ ನಮಗೆ ದೌರ್ಬಲ್ಯ ಗಳನ್ನು ಮಾತ್ರ ಕಾಣಿಸುತ್ತಿದೆ. ನಮ್ಮ ಈಗಿನ ಶಿಕ್ಷಣ ನಮಗೆ ಸೋಲುವುದನ್ನು ಕಲಿಸುತ್ತದೆ. ನಮ್ಮ ಈಗಿನ ಶಿಕ್ಷಣ ನಮಗೆ ಯಾವುದನ್ನು ಸಾಧ್ಯವಿಲ್ಲ ಎಂಬುದನ್ನು ಕಲಿಸುತ್ತದೆ. ಪರಮ ಶಕ್ತಿಯ ಪ್ರತಿಪಾದಕರಾದ ನಾವು ನಮ್ಮಿಂದ ಸಾಧ್ಯವಿಲ್ಲ ಎನ್ನುವಂಥ‌ ಕಲ್ಪನೆಯಲ್ಲಿ ಮುಳುಗಿದ್ದೇವೆ. ಯಾವಾಗಲೂ ಭಯ ಮತ್ತು ಭ್ರಮೆಯ ನಡುವೆ ಪುಸ್ತಕದ ಪುಟಗಳನ್ನು ತಿರುವಿಹಾಕಲಾಗುತ್ತದೆ. ಅಸಂಖ್ಯ ತಲ್ಲಣಗಳ ನಡುವೆ ಅವರಿವರ ನಿಯಮಗಳು ತಲೆಗೆ ಹೋಗುತ್ತವೆ. ರಾಮಕೃಷ್ಣ , ಬುದ್ಧ , ಭಗತ್‌ ಸಿಂಗ್‌ ಆಜಾದ್‌, ಗಾಂಧೀಜಿ ಇಂಥ ಮಹಾತ್ಮರ ಉಸಿರು ಈ ಗಾಳಿಯಲ್ಲಿ ಇದೆ. ಆದರೆ, ಅದನ್ನು ಗುರುತಿಸಲಾಗುತ್ತಿಲ್ಲ. ನಾವು ನಮ್ಮನ್ನು ಕಂಡುಕೊಳ್ಳುವುದಕ್ಕೆ ಶಿಕ್ಷಣ ಕಾರಣವಾಗಬೇಕು.

ವಿಷ್ಣುವರ್ಧನ ಶೆಟ್ಟಿ
ಪ್ರಥಮ ಬಿ. ಎ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ