ಅವಳಿ ಪ್ರತಿಭೆಗಳು ಅರಳಿಸಿದ ಸೊಗಸು


Team Udayavani, Feb 7, 2020, 5:11 AM IST

Big-3

ಹಿಂದಿನ ಸಾಲು : ಅನಿತ್‌-ಅಂಕಿತ್‌, ಉಜ್ವಲ್‌-ಪ್ರಜ್ವಲ್‌, ಆದಿತ್ಯ ಗೌರಾಜ್‌-ಅನುಷಾ ಗೌರಾಜ್‌, ಮುಂದಿನ ಸಾಲು : ರೂಪಾ-ದೀಪಾ, ಸಹನಾ ಕೆ. ಆರ್‌.- ಸಾಧನಾ ಕೆ. ಆರ್‌., ಸಂಜನಾ ಡೋಂಗ್ರೆ-ಚಂದನಾ ಡೋಂಗ್ರೆ, ನಿಝುಹತುನ್ನೀಶಾ - ನಿಯಾಝುನ್ನೀಶಾ.

ಮಗುವೊಂದು ಓಡಾಡುತ್ತಿದ್ದರೆ ಮನೆಯಲ್ಲಿ ಸಂತಸದ ಹೊನಲೇ ಹರಿಯುತ್ತಿರುತ್ತದೆ. ಇನ್ನು ಅವಳಿ ಮಕ್ಕಳು ಹುಟ್ಟಿದರೆ ಪ್ರತಿದಿನವೂ ಹಬ್ಬದಂತೆ. ಇಬ್ಬರು ಮಕ್ಕಳನ್ನು ಏಕಕಾಲಕ್ಕೆ ನಿಭಾಯಿಸಲು ಅಮ್ಮನಾ ದವಳು ಪಡುವ ಪರಿಶ್ರಮವೂ ಸುಂದರವಾಗಿಯೇ ಕಾಣುತ್ತದೆ ಅಲ್ಲವೆ?

ಅವಳಿ ಮಕ್ಕಳಲ್ಲಿ ತದ್ರೂಪ (Monozygotic) ಅವಳಿಗಳು ಹಾಗೂ ಭಿನ್ನ ಅವಳಿ (Dizygotic)ಗಳೆಂದು ಎರಡು ವಿಧಗಳಿವೆ. ಭ್ರೂಣರಚನೆಯಾಗಿ ಮೊದಲ ವಾರದ ಬೆಳವಣಿಗೆಯ ನಂತರ ಅದು ಎರಡು ಭ್ರೂಣವಾಗಿ ಇಬ್ಭಾಗವಾದಾಗ ತದ್ರೂಪು ಅವಳಿಗಳು ಜನಿಸುತ್ತಾರೆ. ಎರಡು ಪ್ರತ್ಯೇಕ ಭ್ರೂಣ ರಚನೆಯಾದಾಗ ಭಿನ್ನ ರೂಪಿನ ಅವಳಿ ಮಕ್ಕಳು ಜನಿಸುತ್ತಾರೆ.

ಕೆಲವು ವರ್ಷಗಳ ಹಿಂದೆ ಕೇರಳದ ಮಲಪ್ಪುರಂ ನಗರದಿಂದ ಸುಮಾರು 15 ಕಿ. ಮೀ. ದೂರದ ಕೊಂಡಿನಿ ಎಂಬ ಹಳ್ಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಜಗತ್ತಿನಲ್ಲಿಯೇ ಅತೀ ಹೆಚ್ಚು ಮಂದಿ ಅವಳಿಗಳು ಜನಿಸಿದ ಊರು ಇದು ಎಂದು ಖ್ಯಾತಿ ಪಡೆದಿತ್ತು. ಈ ಊರಿನಲ್ಲೇಕೆ ಅವಳಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯಲೋಕವೂ ಅಚ್ಚರಿ ಪಟ್ಟಿದೆ. 2008ರಲ್ಲಿ 300 ಮಂದಿ ಮಹಿಳೆಯರು ಆ ಹಳ್ಳಿಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಮತ್ತಷ್ಟು ಮಾಹಿತಿ ಸಂಗ್ರಹಿಸಿದ್ದು, ಈ ಊರಿನಲ್ಲಿ ಅವಳಿ ಮಕ್ಕಳ ಜನನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನೂ ಗುರುತಿಸಿದ್ದರು. ಆ ಊರಿನ ಶಾಲೆಗಳಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ಅವಳಿ ಮಕ್ಕಳನ್ನು ದಾಖಲಿಸಿಕೊಳ್ಳುವುದೇ ಒಂದು ಸಂಭ್ರಮ. ಒಬ್ಬರು ಪೋಕರಿ ಕಿಟ್ಟಪ್ಪನಾಗಿದ್ದರೆ, ಮತ್ತೂಬ್ಬ ಶಾಂತಮೂರ್ತಿ. ತದ್ರೂಪು ಅವಳಿಗಳನ್ನು ಗುರುತಿಸುವ ಸವಾಲಂತೂ ಎಲ್ಲರನ್ನೂ ಕಾಡುವಂಥಾದ್ದೇ. ಅವಳಿ ಮಕ್ಕಳ ಕತೆಗಳು ಕಾಡಲು ಕಾರಣ, ಉಜಿರೆಯ ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಈ ವರ್ಷ 14 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅವಳಿಗಳು ಎಂಬುದು. ಪ್ರತಿಯೊಬ್ಬರ ಆಸಕ್ತಿಗಳೂ ಭಿನ್ನ.

ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರ ತರಗತಿಯಲ್ಲಿ ಕಲಿಯುತ್ತಿರುವ ರೂಪಾ- ದೀಪಾ, ಧರ್ಮಸ್ಥಳದ ಸಮೀಪದ ನೇತ್ರಾವತಿಯ ಅಚ್ಚುಕಟ್ಟಿನ ಪ್ರದೇಶದವರು. ಆಹಾರ ಕ್ರಮ ಹಾಗೂ ಅಭಿರುಚಿಗಳಲ್ಲಿ ಇಬ್ಬರದೂ ಸಮಾನ ಆಸಕ್ತಿ. ಒಂದೇ ರೀತಿಯ ಉಡುಗೆ-ತೊಡುಗೆಗಳೆಂದರೆ ಇಬ್ಬರಿಗೂ ಇಷ್ಟ. ಲೈಬ್ರೆರಿಯಿಂದ ಒಂದು ಪುಸ್ತಕ ತೆಗೆದುಕೊಂಡರೆ ಇಬ್ಬರೂ ಓದಿದ ಬಳಿಕವೇ ವಾಪಸ್‌ ಮಾಡುತ್ತಾರೆ. ಹಣಕಾಸು, ಲೆಕ್ಕಾಚಾರದ ಕ್ಷೇತ್ರವೇ ಅವರ ಆಯ್ಕೆ. ಹಾಗಾಗಿ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಇಬ್ಬರೂ ನಿಶ್ಚಯಿಸಿದ್ದಾರೆ.

ದ್ವಿತೀಯ ವಾಣಿಜ್ಯ ಶಾಸ್ತ್ರ ತರಗತಿಯಲ್ಲಿ ಓದುತ್ತಿರುವ ಅನುಷಾ ಗೌರಾಜ್‌ – ಆದಿತ್ಯ ಗೌರಾಜ್‌ ಬೆಂಗಳೂರಿನವರು. ಆದರೆ, ಇಬ್ಬರ ಆಸಕ್ತಿಯೂ ವಿಭಿನ್ನ. ಅನುಷಾಳಿಗೆ ಚಿತ್ರಕಲೆ, ಹಾಡು ಕೇಳುವ ಹವ್ಯಾಸವಿದ್ದರೆ ಆದಿತ್ಯನಿಗೆ ಕ್ರಿಕೆಟ್‌, ಕಬಡ್ಡಿ ಆಟಗಳು ಪ್ರಿಯ. ನೃತ್ಯ ಅವನ ಹವ್ಯಾಸ. ಇಬ್ಬರೂ ಒಂದೇ ರೀತಿಯ ಬಣ್ಣದ ಉಡುಗೆ ತೊಡಲು ಬಯಸುತ್ತಾರೆ. ಭಿನ್ನ ಅವಳಿಗಳಾದರೂ ಇಬ್ಬರಿಗೂ ಲೆಕ್ಕ ಪರಿಶೋಧಕರಾಗಬೇಕೆಂಬ ಗುರಿ ಇದೆ. ಒಂದೇ ತರಗತಿಯಲ್ಲಿ ಪರಸ್ಪರರ ನಡುವೆ ಆರೋಗ್ಯಕರ ಸ್ಪರ್ಧೆ ತರಗತಿಗೇ ಹೊಸ ಮೆರುಗು ನೀಡಿದೆ.

ದ್ವಿತೀಯ ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ನಿಝುಹತುನ್ನೀಶಾ ಮತ್ತು ನಿಯಾಝುನ್ನೀಶಾ ನಾವೂರಿನವರು. ಆಹಾರ ಶೈಲಿ ಹಾಗೂ ಅಭಿರುಚಿಗಳಲ್ಲಿ ಸಾಮ್ಯ ಮಾತ್ರವಲ್ಲ , ಇಬ್ಬರೂ ತಮ್ಮ ಅಂಗೈಗೂ, ಬೇರೆಯವರ ಅಂಗೈಗೂ ಮೆಹಂದಿ ಹಚ್ಚುವುದರಲ್ಲಿ ಭಾರೀ ಹುಶಾರು. ಒಂದೇ ರೀತಿಯ ಉಡುಗೆ-ತೊಡುಗೆಗಳೆಂದರೆ ಬಲು ಇಷ್ಟ . ವೈಮಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಕನಸುಕಂಗಳಲ್ಲಿ ಇಬ್ಬರೂ ಓದಿನತ್ತ ಶ್ರಮ ಹಾಕಿದ್ದಾರೆ.

ಅನಿತ್‌ – ಅಂಕಿತ್‌ ಬೇಲೂರಿನವರು. ಪ್ರಥಮ ವಿಜ್ಞಾನ ತರಗತಿಯಲ್ಲಿ ಓದುತ್ತಿದ್ದಾರೆ. ಆಹಾರ ಶೈಲಿ ಹಾಗೂ ಅಭಿರುಚಿಗಳಲ್ಲಿ ಬಹಳ ಭಿನ್ನತೆ. ಅನಿತ್‌ಗೆ ದಿನಪತ್ರಿಕೆ ಓದುವುದು ಹವ್ಯಾಸವಾದರೆ, ಅಂಕಿತ್‌ಗೆ ಕಥೆಪುಸ್ತಕ ಓದುವುದು ಹಾಗೂ ಕ್ರಿಕೆಟ್‌ ಆಡುವುದರಲ್ಲಿ ಆಸಕ್ತಿ. ಒಬ್ಬರು ಕೆಂಪು ಬಣ್ಣದ ಉಡುಪು ಧರಿಸಿದರೆ, ಮತ್ತೂಬ್ಬರು ಜಪ್ಪಯ್ಯ ಅಂದರೂ ಆ ಬಣ್ಣದ ಉಡುಪು ಧರಿಸುವುದಿಲ್ಲ. ಅನಿತ್‌ಗೆ ಇಂಜಿನಿಯರ್‌ ಆಗಬೇಕೆಂಬ ಆಸೆ ಇದೆ. ಅಂಕಿತ್‌ಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹಂಬಲ. ಮುಂದೆ ಬರುವ ಪರೀಕ್ಷೆಗಳನ್ನು ಉತ್ತರಿಸಲು ಶ್ರದ್ಧೆಯಿಂದ ಓದುತ್ತಿದ್ದಾರೆ. ಅಂದ ಹಾಗೆ ಇಬ್ಬರೂ ತದ್ರೂಪು ಅವಳಿಗಳು.

ಪ್ರಥಮ ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ಸಹನಾ ಕೆ. ಆರ್‌.- ಸಾಧನಾ ಕೆ. ಆರ್‌. ಕುಶಾಲನಗರದವರು. “ಅವಳಿಗಿಷ್ಟವಾದ ಆಹಾರ ಇವಳಿಗಿಷ್ಟ. ಅವಳಿಗಿಷ್ಟವಾದ ಚೂಡಿದಾರ ಇವಳಿಗಿಷ್ಟ’ ಎಂಬಂತೆ ಇಬ್ಬರೂ ಆಪ್ತರಾಗಿಯೇ ಓಡಾಡುತ್ತಾರೆ. ಇಬ್ಬರೂ ಸೇರಿ ಕಾರ್ಯಕ್ರಮ ನಿರೂಪಣೆ ಮಾಡಿದರೆ ಕೇಳಲು ಚಂದಚಂದ. ನೃತ್ಯವೂ ಅವರ ಹವ್ಯಾಸ. ಸಹನಾ ಮುಂದೆ ಅರಣ್ಯಾಧಿಕಾರಿ ಆಗಲು ಬಯಸಿದರೆ, ಸಾಧನಾಗೆ ಪಶುವೈದ್ಯೆಯಾಗುವ ಆಸೆ.

ಸಂಜನಾ ಡೋಂಗ್ರೆ- ಚಂದನಾ ಡೋಂಗ್ರೆ ಪ್ರಥಮ ವಿಜ್ಞಾನ ತರಗತಿಯಲ್ಲಿ ಕಲಿಯುತ್ತಿರುವರು. ಉಜಿರೆ ಸಮೀಪದ ಲಾಯಿಲ ಗ್ರಾಮದವರು. ಸಂಜನಾಳಿಗೆ ಹಾಡು ಹೇಳುವುದು, ನೃತ್ಯ, ಈಜು ಹಾಗೂ ಯೋಗವು ಹವ್ಯಾಸವಾದರೆ, ಚಂದನಾಳಿಗೆ ಚಿತ್ರಕಲೆ, ಸ್ಟ್ಯಾಂಪ್‌ ಹಾಗೂ ನಾಣ್ಯ ಸಂಗ್ರಹ, ಹಾಡುಗಾರಿಕೆ, ಈಜು ಹಾಗೂ ನೃತ್ಯಗಳು ಇಷ್ಟದ ಹವ್ಯಾಸಗಳಾಗಿವೆ. ಸಂಜನಾ ಡಯಟಿಷಿಯನ್‌ ಅಥವಾ ಹೋಮಿಯೋಪತಿ ಕ್ಷೇತ್ರದಲ್ಲೂ , ಚಂದನಾ ಆರ್ಕಿಟೆಕ್ಟ್ ಇಂಜಿನಿಯರಿಂಗ್‌ ಅಥವಾ ಕಂಪ್ಯೂಟರ್‌ಸೈನ್ಸ್‌ ಕ್ಷೇತ್ರದ‌ಲ್ಲಿ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದಾರೆ.

ಉಜ್ವಲ್‌- ಪ್ರಜ್ವಲ್‌ ಪ್ರಥಮ ವಾಣಿಜ್ಯಶಾಸ್ತ್ರ ತರಗತಿಯ ವಿದ್ಯಾರ್ಥಿಗಳು. ಹತ್ತಿರದ ಮುಂಡಾಜೆಯವರು. ಪತ್ರಿಕೆ ಓದುವುದರಲ್ಲಿ ಇಬ್ಬರೂ ನಿಪುಣರು. ಹಾಗಂತ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿಕೊಂಡು ಓಡಾಡುವುದು ಇಷ್ಟವಾಗುವುದಿಲ್ಲ. ಮುಂದಿನ ಗುರಿ ಏನು ಕೇಳಿದರೆ ಇನ್ನೂ ಸ್ಪಷ್ಟವಾಗಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಓದುವುದೇ ಅವರ ಶ್ರದ್ಧೆ.

ಪ್ರಸನ್ನಕುಮಾರ್‌ ಐತಾಳ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.