ಹಾಸ್ಟೆಲ್‌ ಲೈಫ್ ಹೀಗೇನಾ?


Team Udayavani, Nov 8, 2019, 4:30 AM IST

cc-16

ಸಾಮಾನ್ಯವಾಗಿ “ಹಾಸ್ಟೆಲ್‌’ಎಂದೊಡನೆ ಮೂಗುಮುರಿಯುವ ಜನರೆಡೆಯಲ್ಲಿ ನಾನೊಬ್ಬಳು ವಿಚಿತ್ರ ಹಾಸ್ಟೆಲ್‌ ಪ್ರೇಮಿ! ನನಗಂತೂ ಬಹಳ ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು ಶಿಕ್ಷಣ ಪಡೆಯಬೇಕೆಂಬ ಬಹುದೊಡ್ಡ ಕನಸಿತ್ತು. ಬಹುಶಃ ಸಿನಿಮಾಗಳಲ್ಲಿ ಬರುವ ಹಾಸ್ಟೆಲ್‌ ಜೀವನ ನೋಡಿಯೋ ಅಥವಾ ಹಾಸ್ಟೆಲಿನಿಂದ ಮನೆಗೆ ಬರುವಾಗ ಸಿಗುತ್ತಿದ್ದ ವಿಶೇಷ ಆತಿಥ್ಯವೋ ಏನೋ ಇದೊಂದು ಕನಸಾಗಿಯೇ ಇತ್ತು. ಅನಿವಾರ್ಯ ಕಾರಣಗಳಿಂದ ಪದವಿ ಶಿಕ್ಷಣದ ಕೊನೆಯ ವರ್ಷ ಹಾಸ್ಟೆಲ್‌ ಸೇರಬೇಕಾದ ಸೌಭಾಗ್ಯ ನನ್ನದಾಯಿತು. ಹಾಸ್ಟೆಲ್‌ನಲ್ಲಿ “ವಿಚಿತ್ರ ಜೀವಿ’ಗಳಿದ್ದಾರೆ ಎಂದು ಕೇಳಿದ್ದೆ. ಆದರೆ, ಅಲ್ಲಿ ಹೋಗಿಯೇ ಅವುಗಳ ಪರಿಚಯ ಸಾಧ್ಯವಾದದ್ದು.

ಹಾಸ್ಟೆಲಿನಲ್ಲಿನ ಮೊದಲ ದಿನ ಬಹಳ ಉತ್ಸುಕದಿಂದಿದ್ದ ನನಗೆ ಆ ರಾತ್ರಿ ಸ್ಥಳ ಬದಲಾದ್ದರಿಂದ ಕೊಂಚ ನಿದ್ದೆ ಬರುವುದು ತಡವಾಯಿತು. ಆಚೀಚೆ ಹೊರಳುತ್ತಿದ್ದ ನನಗೆ ಪಕ್ಕದ ಹಾಸಿಗೆಯಿಂದ ಹಿ…ಹಿ…ಹಿ… ಎನ್ನುವ ನಗು ಮಾತ್ರ ಕೇಳಿಸುತ್ತಿತ್ತು. ಅದೇನೆಂದು ಸೂಕ್ಷ್ಮವಾಗಿ ಗಮನಿ ಸಿದಾಗ ಆ ನಡುರಾತ್ರಿಯಲ್ಲಿ ನನ್ನ ರೂಮ್‌ಮೇಟ್‌ ಮೊಬೈಲ್‌ನೊಳಗೆ ಮುಳುಗಿಹೋಗಿದ್ದು ಕಂಡುಬಂತು. ಆದರೆ, ಆ ರಾತ್ರಿ ಅವರ ನಗೆಯ ಸದ್ದಿಗೆ ನಿ¨ªೆಯೇ ಇಲ್ಲದಾಯಿತು. ಇದಾಗಿ, ಒಂದು ದಿನ ರಾತ್ರಿ ನೀರು ಕುಡಿಯಲೆಂದು ಎದ್ದು ವಾಟರ್‌ ಫಿಲ್ಟರ್‌ ಕಡೆಗೆ ಹೋದಾಗ ಸಮಯ ಸುಮಾರು ಎರಡು ಗಂಟೆಯಷ್ಟಿರಬಹುದು, ನಿಶ್ಶಬ್ದವಾಗಿದ್ದ ಅಲ್ಲಿ ಅದೇನೋ ಪಟ ಪಟ ಸದ್ದು ಆಯಿತೆಂದು ನೋಡಿದರೆ ಯಾರೋ ಒಬ್ಬಳು ಆ ಮಧ್ಯರಾತ್ರಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಹಗಲಿಡೀ ಅದೆಷ್ಟು ಕಡೆದು ಕಟ್ಟೆ ಹಾಕುವಷ್ಟು ಕೆಲಸ ಅವಳಿಗಿತ್ತೋ ಯಾರು ಬಲ್ಲರು! ಹೆಚ್ಚಿ ನ ವರು ರಜಾ ದಿನಗಳಲ್ಲಿ ರಾತ್ರಿಯೆಲ್ಲಾ ಎಚ್ಚರವಿದ್ದು ಹಗಲು ಗಡದ್ದಾಗಿ ಗೊರಕೆ ಹೊಡೆಯುವವರು.

ಕಾಲೇಜು ಶುರುವಾಗುವುದು ಒಂಬತ್ತು ಗಂಟೆಗಾದರೂ ಹಾಸ್ಟೆಲ್‌ನವರು ಎದ್ದೇಳುವುದು ಮಾತ್ರ ಎಂಟೂವರೆಗೆ. ಇನ್ನೂ ಕೆಲವರಂತು ಎಂಟೂ ಐವತ್ತಕ್ಕೆ ಎದ್ದು ಬರುವವರೂ ಇದ್ದಾರೆ. ಇವರಿಗೆ ಊಟ-ತಿಂಡಿಯ ಅಗತ್ಯವೇ ಇಲ್ಲ. ಇನ್ನು ಸಂಜೆ ಕಾಲೇಜಿನಿಂದ ಬಂದು ಸಮವಸ್ತ್ರ ಬಿಚ್ಚುವ ಶಕ್ತಿ ಇಲ್ಲದೆ ಬೆಡ್‌ ದಾಸರಾಗುತ್ತಾರೆ. ಆದರೂ ಕೆಲವು ಎಕ್ಸೆಪ್ಷನಲ್‌ ಕೇಸುಗಳು ಇವೆ. ರಾತ್ರಿ ಏಳು ಗಂಟೆಗೆ ಹಸಿವಾಗದಿದ್ದರೂ ಊಟ ಮಾಡಲೇಬೇಕಾದ ಅನಿವಾರ್ಯತೆ. ಇದಾಗಿ, ಹತ್ತೂಮೂವತ್ತರ ತನಕ ಓದುವ ಸಮಯ (ಸ್ಟಡಿ ಅವರ್ಸ್‌). ಎಷ್ಟೇ ಸಹಿಸಿದರೂ ಮತ್ತೆ ಹತ್ತೂವರೆಗೆ ಹಸಿವೋ ಹಸಿವು. ಈ ಹಸಿವಿನ ಸಮಯದಲ್ಲೇ ಬೆಂಕಿ ಇಲ್ಲದೆ ಅಡುಗೆ ಮಾಡುವ ಸಾಹ ಸ ಮಯ ಆಲೋಚನೆಗಳು ಹೊಳೆಯುವುದು. ಇಸ್ತ್ರಿ ಪೆಟ್ಟಿಗೆಯಲ್ಲಿ ಮಾಡುವ ಮ್ಯಾಗಿ, ಸುಟ್ಟು ಕರಕಲಾದ ಚಪಾತಿ ಮೃಷ್ಟಾನ್ನ !

ಆದಿತ್ಯವಾರ ಬೆಳಿಗ್ಗೆ ಮಾತ್ರ ಸೂರ್ಯ ವಂಶದವರು ಬೇಗನೆ ಎದ್ದು ಮಸಾಲಾದೋಸೆ ತಿನ್ನುತ್ತಾರೆ. ಏಕೆಂದರೆ, ಸ್ವಲ್ಪ ವೆರೈಟಿಯಾಗಿ ಸಿಗುತ್ತಿದ್ದ ಬ್ರೇಕ್‌ ಫಾಸ್ಟ್‌ ಅದೊಂದು ಮಾತ್ರ. ದೋಸೆ ತಿಂದು ಮತ್ತೆ ಚಂದ್ರ ಬರುವ ತನಕ ಮಲಗುವವರು ಇದ್ದರು. ಶನಿವಾರ ರಾತ್ರಿಯಾಯಿತೆಂದರೆ ಕೆಲವರಿಗೆ ಹಾರರ್‌ ಮೂವಿ ನೋಡುವ ಕೌತುಕ. ಇವರು ಸಿನಿಮಾ ನೋಡಲು ಕುಳಿತಾಗ ಮಾಡುವ ಶಬ್ದಗಳಿಂದ ಪಕ್ಕದ ರೂಮಿನವರಿಗೆ ಜಾಗರಣೆ ಗ್ಯಾರಂಟಿ. ಹಾಸ್ಟೆಲಿನಲ್ಲಿ ನನ್ನದೇ ಕ್ಲಾಸ್‌ಮೇಟ್‌ ಒಬ್ಬಳು ರಾತ್ರಿ ಸ್ಟಡಿ ಅವ ರ್‌ ನಲ್ಲಿ ಅವಳ ಕೋಣೆಯೊಂದನ್ನು ಬಿಟ್ಟು ಮತ್ತೆಲ್ಲರ ಕೋಣೆಗೆ ಹೋಗಿ ಸರ್ವೆ ಮಾಡುವುದೇ ಅವಳ ಕೆಲಸ. ಎಕ್ಸಾಮ್‌ ಟೈಮಿನಲ್ಲಂತೂ ಪ್ರತಿಯೊಂದು ರೂಮಿಗೆ ಅವಳ ವಿಸಿಟ್‌ ಇದ್ದದ್ದೇ. ಇನ್ನೊಬ್ಬಳು ಮಧ್ಯರಾತ್ರಿ ಮೆಸ್‌ ಪ್ರವೇಶಿಸಿ ಊಟ ಮಾಡುವ ಸಾಹಸ ಮಾಡುತ್ತಿದ್ದಳು. ಕೆಲವೊಮ್ಮೆ ಅವರು ಮಾಡುತ್ತಿದ್ದ ಪಲ್ಯಗಳಿಗೆ ವ್ಯತ್ಯಾಸವೇ ತಿಳಿಯದೇ ಬೆಂಡೆಕಾಯಿ ಪಲ್ಯವೆಂದು ಹಾಗಲಕಾಯಿ ಪಲ್ಯ ತಟ್ಟೆ ತುಂಬಾ ಹಾಕಿಕೊಂಡದ್ದೂ ಇದೆ.

ಹಾಸ್ಟೆಲ್‌ ಮೆಟ್ಟಿಲುಗಳು ಪ್ರೇಮಿಗಳ ಸಂಗಮ ಸ್ಥಳವೆಂದರೆ ತಪ್ಪಾಗದು. ರಾತ್ರಿ ಹತ್ತೂವರೆ ಬೆಲ್‌ ಹೊಡೆದ ಕೂಡಲೇ ಪ್ರಿಯತಮೆಯರೆಲ್ಲ ಮೆಟ್ಟಿಲುಗಳ ತುದಿತುದಿಯನ್ನು ಅಕ್ರಮಿಸಿಕೊಂಡಿರುತ್ತಾರೆ. ಪ್ರಿಯಕರನಿಗೂ ಕೇಳಿಸದಷ್ಟು ಮೆಲುದನಿಯಲ್ಲಿ ಇಯರ್‌ ಫೋನ್‌ ಕಿವಿಯೊಳಗೆ ತೂರಿಸಿಕೊಂಡು ನುಲಿಯುತ್ತಿರುತ್ತಾರೆ. ಅವರ ಸಲ್ಲಾಪಗಳಿಗೆ ಕಿವಿಕೊಟ್ಟರೆ ನಮ್ಮ ಕಿವಿಗಳಿಗಂತೂ ಬಹಳ ಇಂಪು. ಇವರು ತಮ್ಮದೇ ಲೋಕದಲ್ಲಿ ಮುಳುಗಿರುವಾಗ ಅವರ ಬದಿಯಲ್ಲಿ ಹೆಗ್ಗಣಗಳು ಓಡಿದರೂ ಅದರ ಪರಿವೆಯೇ ಇರುವುದಿಲ್ಲ ಇವರಿಗೆ.

ಸ್ಟಡಿ ಅವರ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ವಾರ್ಡನ್‌ ಕಣ್ಣು ತಪ್ಪಿಸಿ ಒತ್ತುವ ನಿಸ್ಸೀಮರಿಗೇನೂ ಕಡಿಮೆ ಇರಲಿಲ್ಲ. ಕೆಲವರಂತೂ ಪುಸ್ತಕದ ಎಡೆಯಲ್ಲಿ, ಪ್ಯಾಂಟಿನ ಜೇಬಿನಲ್ಲಿ, ತಲೆದಿಂಬಿನ ಅಡಿಯಲ್ಲಿಟ್ಟು ಬಳಸಿದರೆ, ಇನ್ನು ಕೆಲವರು ಕಪಾಟಿನೊಳಗೆ ತೂರಿಕೊಂಡು ಅದರೊಳಗೆ ಲೀಲಾಜಾಲವಾಗಿ ಬಳಸುತ್ತಿದ್ದರು. ಇವರು ಮೂರಡಿ ಏರುವ ಸಾಹಸ ಮಾಡಿದರೆ ವಾರ್ಡನ್ನುಗಳು ಎಷ್ಟೇ ಆದರೂ ನಮಗಿಂತ ಐದಾರು ವರ್ಷ ಮೊದಲು ಹುಟ್ಟಿದವರಲ್ಲವೆ? ಹಾಗಾಗಿ, ಕಳ್ಳರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬೀಳುತ್ತಿದ್ದರು. ಮೊಬೈಲ್‌ಗಿಂತಲೂ ಹೆಚ್ಚು ಸೀಝ್ ಆಗುತ್ತಿದ್ದ ವಸ್ತುಗಳೆಂದರೆ ಕನ್ನಡಿ, ಬಾಚಣಿಗೆ, ಲಿಪ್‌ಸ್ಟಿ ಕ್‌, ನೆಯಿಲ್‌ ಪಾಲಿಶ್‌, ಮನುಷ್ಯ ಗಾತ್ರದ ಟೆಡ್ಡಿ ಬೇರ್‌ ಗೊಂಬೆಗಳು.

ಹಾಸ್ಟೆಲ್‌ ಸೇರಿದ ಕೆಲವರಂತೂ ಎಷ್ಟು ಸೋಮಾರಿಗಳೆಂದರೆ ವಾರಗಟ್ಟಲೆ ಒಗೆಯುವ ಬಟ್ಟೆಗಳ ಸ್ಟಾಕ್‌ ಮಾಡಿ ಹಾಕಲು ಬಟ್ಟೆ ಇಲ್ಲದಾಗ ಲಾಂಡ್ರಿ ಅಂಗಡಿಯವರಂತೆ ಎಲ್ಲವನ್ನೂ ಒಮ್ಮೆಲೇ ಒಗೆಯಲು ಪ್ರಾರಂಭಿಸುತ್ತಾರೆ. ಇನ್ನು ಕೆಲವರೂ ಬೆಡ್ಡಿಂದ ಏಳಲು ಮನ ಸ್ಸಾಗದೆ ಸ್ನಾನ ಮಾಡದೇ ಫೇಸ್‌ವಾಶ್‌ ದಾಸರಾಗಿರುತ್ತಾರೆ. ಇಲ್ಲಿರುವ ಕೆಲವರಿಗಂತೂ ಫೊಟೋ ಕ್ರೇಝ್ ಸಿಕ್ಕಾಪಟ್ಟೆ ಇರುತ್ತದೆ. ತಮ್ಮಲ್ಲಿರುವ ಚಂದದ ಬಟ್ಟೆಯನ್ನು ಧರಿಸಿ ಅಂದದ ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದರಲ್ಲಿ ಇವರ ದಿನ ಕಳೆಯುತ್ತದೆ. ಇವರ ನಡುವೆ ಕೆಲವು ಭಗ್ನಪ್ರೇಮಿಗಳು ದುಃಖದ ಸ್ಟೇಟಸ್‌ಗಳನ್ನು ಅಪ್‌ಲೋಡ್‌ ಮಾಡಿಕೊಂಡು ಸದಾ ಅಳುಮುಂಜಿಗಳಂತೆ ಇರುತ್ತಾರೆ. ಏನೂ ಕೆಲಸವೇ ಇಲ್ಲದಿದ್ದಾಗ ಕ್ರಶ್‌ ಗಳ ಕುರಿತ ಗಾಸಿಪ್‌ಗ್ಳು, ಕೊರಿಯನ್‌ ಸೀರೀಸ್‌ ಕಥೆಗಳು, ಓಡಿ ಹೋದವರ ಪ್ರಸಂಗಗಳ ಹರಟೆ ಕಾರ್ಯಕ್ರಮಗಳು ನೆರವೇರುತ್ತವೆ.

ಹಾಸ್ಟೆಲಿನಿಂದ ಮನೆಗೆ ಹೋಗಬೇಕಾದರೆ ಪಡುವ ಪರಿಪಾಟಗಳು ಹೇಳತೀರದು. ಕ್ಲಾಸ್‌ ಅಡ್ವೆ„ಸ ರ್ಸ್‌, ಡೀನ್‌ಗಳ ಕಣ್ಣು ಕೆಂಪಾಗಿ, ಕೋಪಕ್ಕೆ ಬಲಿಪಶುಗಳಾಗಿ ಲೀವ್‌ ಅಪ್ಲಿಕೇಶನ್‌ಗೆ ಸೈನ್‌ ಸಿಕ್ಕಿದರೆ ನಿಟ್ಟುಸಿರು ಬಿಟ್ಟಂತೆ. ಇಷ್ಟೆಲ್ಲ ಆಗಿ ಮನೆಗೆ ಹೋಗಿ ಬಂದವರ ರೂಮಿಗೆ ತಕ್ಷಣ ಒಂದು ದಂಡೇ ಧಾವಿಸಿ ಹೋಗುತ್ತದೆ. ಕಾರಣ, ಮನೆಯಿಂದ ತಂದ ತಿನಿಸುಗಳನ್ನು ತಿನ್ನಲು. ಇವೆಲ್ಲದರ ಮಧ್ಯೆ ನನಗಿಷ್ಟವಾದದ್ದು ಸಂಜೆ ಕಾಫಿ ಕಪ್‌ ಹಿಡಿದು ಮುಳುಗುವ ಸೂರ್ಯನನ್ನು ನೋಡುತ್ತ ಜಂಜಾಟಗಳನ್ನು ಮರೆಯುವುದು.

ಹೀಗೇ ಮನೆಯ ವಾತಾವರಣ ಇಲ್ಲದಿದ್ದರೂ ಹಾಸ್ಟೆಲಿನಲ್ಲಿ ಕಠಿಣ ಶಿಸ್ತುಪಾಲನೆಯೆಡೆಯಲ್ಲಿ ಕೆಲವೊಂದು ಹಾಸ್ಯ ಘಟನೆಗಳು ಮೋಜಿನ ದಿನಗಳು ಮಾತ್ರ ಶಾಶ್ವತ ನೆನಪುಗಳು. ಅಕ್ಕರೆ ತೋರುವ ವಾರ್ಡನ್‌ಗಳು, ಮಾತಿಗೆ ಮುಂಚೆ ಹಾರಾಡುವ ವಾರ್ಡನ್‌ಗಳು, ಸೀಕ್ರೆಟ್‌ ಬರ್ತ್‌ ಡೇ ಪಾರ್ಟಿಗಳು, ಹಬ್ಬದಲ್ಲಿ ಮಾಡುತ್ತಿದ್ದ ದೇವರ ಪೂಜೆಗಳು, ಹಾರರ್‌ ಮೂವಿ ನೋಡಿದ ಖುಷಿಗಳು, ಊಟದಲ್ಲಿ ಸಿಗುತ್ತಿದ್ದ ಹುಳಗಳು, ರೂಮಿನ ತುಂಬಾ ಸೊಳ್ಳೆ-ಜಿರಳೆಗಳ ಗಾನ ಮಾಧುರ್ಯ, ಚಿಲ್ಲರೆ ಬಜೆಟ್‌ ತಿಂಡಿಗಳು, ಬಕೆಟ್‌ ಹಿಡಿದು ಬಾತ್‌ರೂಮ್‌ ಮುಂದೆ ಲೈನ್‌ ನಿಂತ ಕಷ್ಟಗಳು, ರೂಮ್‌ಮೇಟ್‌ ಜೊತೆಗೆ ಕಿತ್ತಾಡಿದ ದಿನಗಳು, ಹೊದಿಕೆಯೊಳಗಿನ ಕಣ್ಣೀರು, ಎಲ್ಲರೂ ಸೇರಿ ಆಟಗಳನ್ನಾಡಿ ಪಾಠಗಳನ್ನು ಓದಿದ ಸುಂದರ ಘಳಿಗೆಗಳು ಮತ್ತೆ ಸಿಗಲಾರದು. ಏನೇ ಆದರೂ ಹಾಸ್ಟೆಲ್‌ ಲೈಫ್ ಸುಂದರ ನೆನಪುಗಳೊಂದಿಗೆ ಜೀವನ ಕೌಶಲ್ಯಗಳನ್ನು ಬೆಳೆಸುತ್ತದೆ.

ದುರ್ಗಾ ಭಟ್‌ ಬೊಳ್ಳುರೋಡಿ
ತೃತೀಯ ಬಿಎ (ಪತ್ರಿಕೋದ್ಯಮ), ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.