ಎಂದು ಬರುವೆ ಮಳೆಯೆ!

Team Udayavani, May 24, 2019, 6:00 AM IST

ಗುಡ್‌ ನೈಟ್ ಇದು ಸೊಳ್ಳೆಗಳಿಗೆ ರಾಮಬಾಣ ಎಂದು ರೂಪದರ್ಶಿಗಳು ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿಯ ಮದುವೆಯ ನಡುವೆ ಬಂದ ಜಾಹೀರಾತಿನಲ್ಲಿ ಹೇಳಿದೊಡನೆ ನೋಡುತ್ತ ಕುಳಿತಿದ್ದ ಸವಿತಕ್ಕನ ಕೆನ್ನೆ ಮೇಲೆ ಕುಳಿತ ಸೊಳ್ಳೆ ಕಚ್ಚಿ ರಕ್ತಹೀರಿ ಹಾರಿ ಹೋಯಿತು. ತಮ್ಮ ಕೆನ್ನೆಗೆ ತಾವೇ ಹೊಡೆದುಕೊಳ್ಳುತ್ತ, “ನಾಳೇನೇ ಹೋಗಿ ಗುಡ್‌ನೈಟ್‌ ತರಬೇಕು. ಇದಕ್ಕೆ ಪಾಠ ಕಲಿಸಬೇಕು’ ಎನ್ನುತ್ತ, ತಮ್ಮ ಮಲ್ಲಿಗೆ ಕಟ್ಟುವ ಕೆಲಸ ಮುಂದುವರಿಸಿದರು. ಅದಾಗಲೇ ಮಳೆ ಸುರಿದಿತ್ತು. ಮೊದಲ ಮಳೆಗೆ ಸಂತಸಗೊಂಡ ಮಲ್ಲಿಗೆ ಬಳ್ಳಿಗಳ ತುಂಬ ಹೂ ಬಿಟ್ಟಿದ್ದವು. ಸಂಜೆಯಾದರೆ ಧಾರಾವಾಹಿ ನೋಡುತ್ತ ಕೂತಿದ್ದ ಸ್ತ್ರೀವಾದಿಗಳಿಗೆ ಮತ್ತೂಂದು ಕೆಲಸ ಕೈಸೇರಿತ್ತು.

ಸಿದ್ಧತೆಯಾಗದೇ ಮಳೆ ಸುರಿದ ಕಾರಣವೋ, ಸ್ವಚ್ಛತೆಯ ಕೊರತೆಯ ಕಾರಣವೋ ಸೊಳ್ಳೆಗಳಂತೂ ಹೇರಳವಾಗಿದ್ದವು. ತಮ್ಮ ಸಂಗೀತಕ್ಕೆ, ಆಗಾಗ ಮಾನವನಿಂದಲೂ ಚಪ್ಪಾಳೆ, ಉದ್ಗಾರಗಳ ಸಾಥ್‌ ತರಿಸುತ್ತಿದ್ದವು. ಚಪ್ಪಾಳೆ-ಬೊಬ್ಬೆ ಹೊಡೆದು, ರಾತ್ರಿ ನಿದ್ದೆ ಬಾರದೆ ಹೊರಳಾಡಿ ಮರುದಿನವೇ ಹೋಗಿ ಗುಡ್‌ನೈಟ್, ಒಡಮಾಸ್‌, ಮಸ್ಕಿಟೋ ಬ್ಯಾಟ್, ಜೈವಿಕ ಸೊಳ್ಳೆನಾಶಕ ಹೊಗೆ ಬತ್ತಿಗಳನ್ನು ತಂದು ಹಚ್ಚಿಟ್ಟು ತಮ್ಮನ್ನು ತಾವು ರಕ್ಷಿಸಿದರೂ ತಮ್ಮ ಮನೆಸುತ್ತ ಶುಚಿಯಾಗಿಡ್ಬೇಕು ಅನ್ನೋ ಒಂದು ಬುದ್ಧಿ ಮಾತ್ರ ನಮಗ್ಯಾವತ್ತೂ ಬರುವುದಿಲ್ಲ. ಬಂದರೂ ಮಾಡುವವರ ಸಂಖ್ಯೆ ಕಡಿಮೆ. ಊರೂರು ಸುತ್ತಿ ಶುಚಿ ಮಾಡುತ್ತೇವೆ; ಸಂಘಸಂಸ್ಥೆಗಳ ಹೆಸರಲ್ಲಿ ಒಂದೆರಡು ದಿನ, ಹಲವು ಸೆಲ್ಫಿ-ಫೊಟೋಗ್ರಾಫ‌ರ್‌ಗಳ ಸಮ್ಮುಖದಲ್ಲಿ, ಆದರೆ, ನಮ್ಮ ಮನೆಯ ಪರಿಸರ?

ಒಂದು ಮಳೆ ಸುರಿದರೆ ಸಾಕು, ಸಾಂಕ್ರಾಮಿಕ ರೋಗಗಳ ಹಾವಳಿ ಶುರು. ಸೊಳ್ಳೆ ಗಾಳಿನೀರಿನಿಂದಲೂ ಹರಡುವ ಈ ರೋಗಗಳ ಮೂಲ ಕಾರಣ ಮಾಲಿನ್ಯ. ಹಣವಿಲ್ಲದೆ ಸಾಲಸೋಲ ಮಾಡಿ ಬದುಕುವ ಜೀವಗಳಿಗೆ ರೋಗಗಳ ಆಗಮನದ ನಂತರದ ಮುಕ್ತಿ ಸರಕಾರಿ ಆಸ್ಪತ್ರೆಯಿಂದಲೇ. ಅಲ್ಲಿ ಹೋದರೆ ವೈದ್ಯರ ಕೊರತೆ. ಮುಗಿಯದ ಸಮಸ್ಯೆ. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ, ಹಂದಿ ಜ್ವರ, ಇಲಿ ಜ್ವರ, ಆನೆಕಾಲು ರೋಗ- ಹೀಗೆ ಇರುವ ಎಲ್ಲಾ ಪ್ರಾಣಿಗಳ ಹೆಸರಿನಲ್ಲೂ , ಹೆಸರಿಲ್ಲದ ಅನಾಮಿಕ ಜ್ವರಗಳೂ ಭೂಮಿಯ ಮೇಲೆ ತಾಂಡವವಾಡುತ್ತಿರುತ್ತವೆ. ಒಂದು ಸಲ ರೋಗದಿಂದ ಬಳಲಿ ಹೇಗೋ ಚೇತರಿಕೆಯಾಗಿದ್ದರೂ, ಮರುವರ್ಷ ರೋಗಗಳ ಸೀಸನ್‌ ಎನ್ನಬಹುದಾದ ಮಳೆಗಾಲ ಬಂದರೂ ಮುಂಜಾಗ್ರತೆಯ ಸೋಗು ನಮಗೆ ನಾಟುವುದಿಲ್ಲ.

ನಮ್ಮ ಪರಿಸರವನ್ನು ನಾವು ಶುಚಿಯಾಗಿರಿಸೋಣ. ಎಲ್ಲೂ ನೀರು ಕಟ್ಟಿ ನಿಲ್ಲದಂತೆ, ಟಯರ್‌, ಗೆರಟೆ ಪಾತ್ರೆಗಳಲ್ಲೂ ನೀರು ನಿಲ್ಲದಂತೆ ಜಾಗರೂಕರಾಗೋಣ. ತ್ಯಾಜ್ಯಗಳ ಸಮರ್ಪಕ ಸಂಸ್ಕರಣೆಯತ್ತ ಗಮನ ಹರಿಸೋಣ. ಈ ಮಳೆಗಾಲವ ಆದಷ್ಟು ರೋಗಮುಕ್ತ ಮಳೆಗಾಲವನ್ನಾಗಿಸೋಣ.

ಸೌಮ್ಯಶ್ರೀ ಕೆ.
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಸ್‌ಡಿಎಮ್‌ ಕಾಲೇಜು, ಉಜಿರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹೆಸರುಗಳು ಬಹಳ ಹೊಸತಾಗಿರುತ್ತವೆ. ಅಂಕಿಅಂಶ, ದಾಖಲೆಗಳು, ಪರೀಕ್ಷಿಸಲ್ಪಟ್ಟ ವಿಚಾರಗಳನ್ನು ಆಧರಿಸಿದ ವಿಷಯವನ್ನು ವೈಜ್ಞಾನಿಕ...

  • ಶಾಪಿಂಗ್‌ ಬಗ್ಗೆ ಎಷ್ಟೇ ಬೈಕೊಂಡರೂ ಖರೀದಿಯ ಖುಷಿಯೊಂದು ಇದ್ದೇ ಇರುತ್ತದಲ್ಲ. ಆದ್ದರಿಂದಲೇ ಇಷ್ಟೊಂದು ಅಂಗಡಿಗಳು ವ್ಯಾಪಾರ ವ್ಯವಹಾರ ನಡೆಸುವುದು. ಪ್ರವಾಸದ...

  • ಸಮಯ ಕಾಲಿಗೆ ಚಕ್ರ ಕಟ್ಟಿಕೊಂಡಿದೆಯೇನೋ ಎಂಬತೆ ಓಡುತ್ತಿದೆ. ಅಯ್ಯೋ ಆ ಕಾಲವನ್ನೋ, ಸಮಯವನ್ನೋ ಒಮ್ಮೆ ತಡೆದು ನಿಲ್ಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತಿತ್ತು! ಬಾಲ್ಯ...

  • ನಾನು ಸ್ನಾತಕೋತ್ತರ ಪದವಿ ಓದುವ ಹಂತಕ್ಕೆ ಬಂದರೂ ರೈಲಿನಲ್ಲಿ ಪ್ರವಾಸ ಮಾಡಿರಲಿಲ್ಲ. ಆದರೆ ರೈಲು ನೋಡಿದ್ದೆ.  ಇತ್ತೀಚೆಗೆ ನ್ಯಾಷನಲ್‌ ಇಂಟಿಗ್ರೇಷನ್‌ ಕ್ಯಾಂಪ್‌ಗಾಗಿ...

  • ಇಂಗ್ಲಿಷ್‌ನಲ್ಲಿ ಅನೇಕ ಪದಗಳಿಗೆ ಲ್ಯಾಟಿನ್‌ ಭಾಷೆಯ ಪದಗಳೇ ಮೂಲ. Verto ಎಂಬ ಪದವೂ ಲ್ಯಾಟಿನ್‌ ಮೂಲದ್ದು. ಎಂದರೆ ಅದರ ಅರ್ಥ ತಿರುಗು. ಅಥವಾ turn. ಹಾಗಾಗಿಯೇ ಮನಸ್ಸನ್ನು...

ಹೊಸ ಸೇರ್ಪಡೆ