ಮೊಬೈಲ್‌ ಇಲ್ಲದ ಮೊದಲ ರಾತ್ರಿ

Team Udayavani, Oct 25, 2019, 4:59 AM IST

ಸುಮಾರು ದಿನಗಳಿಂದ ಆಶಿಸುತ್ತಿದ್ದುದು ಅಂದು ಅನಿರೀಕ್ಷಿತವಾಗಿ ನಡೆದುಹೋಯಿತು. ಅದುವೇ, ಮೊಬೈಲ್‌ ಇಲ್ಲದೆ ಕೆಲ ಸಮಯ ಕಳೆಯುವ ಆಸೆ. ಆಸೆ ನಾನು ನನ್ನ ಇಂದ್ರಿಯಗಳ ಮೇಲೆ ಹಿಡಿತವಿಟ್ಟ ಪರಿಣಾಮವಾಗಿ ತೀರದುದಲ್ಲ, ಬದಲಾಗಿ, ನನ್ನ ತರಗತಿಯ ಗೆಳತಿಯರ ತುಂಟತನದ ಪರಿಣಾಮವಾಗಿ. ಸ್ನಾತಕೋತ್ತರ ಪದವಿಯಂತಹ ಗಂಭೀರ ಸ್ಥಾನದಲ್ಲಿದ್ದರೂ ಮೊಬೈಲ್‌ ತಪ್ಪಿಸಿಡುವುದು, ಬ್ಯಾಗ್‌ ತಪ್ಪಿಸಿಡುವುದು, ಸ್ವಲ್ಪ ಗೋಳಾಟ ಮಾಡಿಸಿ ನಂತರ ಅವರಿಗೆ ಹಿಂದಿರುಗಿಸುವುದು ಪ್ರತಿದಿನದ ಮಕ್ಕಳ ಆಟ. ಆದರೆ, ಆ ದಿನ ಹಾಗೆ ನಡೆಯಲಿಲ್ಲ. ಎಲ್ಲರನ್ನು ಗೋಳಾಡಿಸುವ ನಾನು, ಆ ದಿನ ಗೋಳಾಟ ಮಾಡಿಸಿಕೊಳ್ಳುವ ಸರದಿಯಲ್ಲಿದ್ದೆ. ನಾನು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಇದ್ದ ಮೊಬೈಲ್‌ ಸ್ವಲ್ಪ ಹೊತ್ತಿನ ನಂತರ ಮಾಯವಾಗಿತ್ತು. ಪ್ರತಿದಿನದ ಮಕ್ಕಳ ಆಟದ ಅರಿವಿದ್ದ ನಾನು ಹೆಚ್ಚು ತಲೆಬಿಸಿ ಮಾಡಿಕೊಳ್ಳಲಿಲ್ಲ. ಯಾರ ಜೊತೆಗೋ ಇರುತ್ತದೆ, ತರಗತಿಯಿಂದ ವಾಪಸ್‌ ಹೋಗುವಾಗ ಖಂಡಿತವಾಗಿ ಕೊಡುತ್ತಾರೆ ಎಂಬ ಅಚಲ ನಂಬಿಕೆಯಲ್ಲಿದ್ದೆ. ಈಗ ಮೊಬೈಲ್‌ ಎಲ್ಲಿದೆ ಎಂದು ವಿಚಾರಿಸಿಕೊಳ್ಳುತ್ತ ಸುತ್ತಾಡಿದರೆ ಗೋಳಾಟ ಜಾಸ್ತಿ ಮಾಡುವರು ಎಂಬ ಸಣ್ಣ ಅಂಜಿಕೆಯಿಂದ ಎಲ್ಲೂ ಯಾರಲ್ಲೂ ವಿಚಾರಿಸದೆ ಅತ್ತಿತ್ತ ತಿರುಗಾಡುತ್ತ ಮುಂದಿನ ವಾರದ ಪ್ರತಿಭಾ ದಿನಾಚರಣೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಅರ್ಧದಷ್ಟು ತರಗತಿ ಮಂದಿ ಮನೆಗೆ ಹೊರಟು ನನಗೆ ಹಾಸ್ಟೆಲ್‌ ಸೇರುವ ಸಮಯವು ಸಮೀಪಿಸುತ್ತಿದ್ದರೂ ಇನ್ನೂ ಮೊಬೈಲ್‌ ಕೈಗೆ ಸಿಗದೆ ಅಂಜಿಕೆ ಆರಂಭವಾಯಿತು. ಮೆಲ್ಲಮೆಲ್ಲನೆ ಅಲ್ಲಲ್ಲಿ ಪ್ರತಿಭಾ ದಿನಾಚರಣೆಗೆ ಅಭ್ಯಾಸ ನಡೆಸುತ್ತಿದ್ದ ಸಹಪಾಠಿಗಳ ಬಳಿ ಹೋಗಿ ಕೇಳಲು ಆರಂಭಿಸಿದೆ. ಸಂಶಯ ಇದ್ದವರನ್ನು ಮೊದಲು, ನಂತರ ಎಲ್ಲರನ್ನೂ ವಿಚಾರಿಸಿದೆ. ಎಲ್ಲರೂ, “ನನ್ನ ಬಳಿ ಇಲ್ಲ, ನಾನು ತೆಗೆದಿಲ್ಲ, ಅವರ ಆಣೆ, ಇವರ ಆಣೆ’ಎಂದಾಗ ದಿಗಿಲಾಯಿತು. ಯಾರು ಕದ್ದಿರಲ್ಲಿಕ್ಕಿಲ್ಲ, ಎಲ್ಲಾದರೂ ನಾನೇ ಬೇರೆ ಜಾಗದಲ್ಲಿ ಇಟ್ಟಿರಬಹುದು’ ಎಂದು ಇನ್ನೊಬ್ಬ ಗೆಳತಿ ಜೊತೆ ನನ್ನ ತರಗತಿ ಇಡೀ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಸತತ ಹುಡುಕಾಟದ ನಂತರವೂ ಸಿಗಲಿಲ್ಲವಾದ್ದರಿಂದ ಯಾರ ಬಳಿಯಾದರೂ ತಪ್ಪಿ ಬ್ಯಾಗಿನಲ್ಲಿ ಹೋಗಿರಬಹುದು ನಾಳೆ ತಂದು ಕೊಡುವರು ಎಂಬ ತುಂಬಿದ ಭರವಸೆಯಿಂದ ಹಾಸ್ಟೆಲಿಗೆ ತಲುಪಿದೆ.

ಮೊಬೈಲ್‌ ಕೈಯಲ್ಲಿ ಇಲ್ಲದ ಸಮಯವೇ ಅತಿ ಹೊಸತು ಎನಿಸಿತು. ಜೀವನದಲ್ಲಿ ಎಲ್ಲವನ್ನೂ ಒಮ್ಮೆಲೇ ಕಳೆದುಕೊಂಡಂತೆ ಭಾಸವಾಯಿತು. ಆದರೂ ಇಷ್ಟು ದಿನ ಕಾದ “ಮೊಬೈಲ್‌ ರಹಿತ’ ಸಮಯ ಇದೆನಿಸಿತು. ಹಾಸ್ಟೆಲಿನ ಗೆಳೆಯರಿಗೆ ಮೊಬೈಲ್‌ ಕಳೆದುಕೊಂಡ ಕಥೆ ತಿಳಿಸಿ ನಾಳೆ ಸಿಗಬಹುದೆಂಬ ಭರವಸೆಯನ್ನೂ ಪ್ರಕಟಿಸಿ ಮಾತನಾಡಲು ಕುಳಿತೆ. ಆರೇಳು ಮಂದಿ ಸೇರಿ ನಾವು ಪ್ರಸಕ್ತ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸಿ, ಒಳ್ಳೆಯ ಊಟ ಮಾಡಿ, ಮತ್ತೂಂದು ಅವಧಿಗೆ ನಮ್ಮ ಶಾಲಾ ಜೀವನಗಳನ್ನು ಮೆಲುಕು ಹಾಕಿದೆವು. ಪ್ರತಿದಿನ ವಾಟ್ಸಪ್‌, ಇನ್‌ಸ್ಟಾ ಗ್ರಾಮ್‌ನಲ್ಲಿ ತಡಕಾಡುತ್ತಿದ್ದ ನನಗೆ ಇಂತಹ ಮಾತುಕತೆ ನವೋತ್ಸಾಹವನ್ನು ನೀಡಿತು. ಹೀಗೆ ಮಾತಾಡುತ್ತಿದ್ದಾಗ ನನ್ನ ಸಹಪಾಠಿ ಹೇಗೋ ನನ್ನ ಹಾಸ್ಟೆಲಿನ ಗೆಳೆಯರಿಗೆ ಕರೆಮಾಡಿ ಮೊಬೈಲ್‌ ಎಲ್ಲಿದೆ ಎಂದು ತಿಳಿಸಿದಾಗ ಸಣ್ಣ ಮಟ್ಟಿಗೆ ಹೌಹಾರುವ ಸರದಿ ನನ್ನದಾಗಿತ್ತು. ನಾನು ಯಾರ ಬಳಿ ಅತೀ ಸಂಶಯ ಪಟ್ಟು ಮೊಬೈಲ್‌ ಇರುವಿಕೆಯ ಬಗ್ಗೆ ವಿಚಾರಿಸಿದ್ದೆನೋ, ಯಾರೂ ನನ್ನ ಬಳಿ ಇರಲು ಸಾಧ್ಯವೇ ಇಲ್ಲ ಎಂದಿದ್ದರು ಅವರ ಬಳಿಯೇ ನನ್ನ ಮೊಬೈಲ್‌ ಇರುವುದು ಗೊತ್ತಾಯಿತು. ತಮಾಷೆಗಾಗಿ ಬಚ್ಚಿಟ್ಟದ್ದು ಹಿಂದಿರುಗಿಸಲು ಅವರಿಗೆ ಮರೆತು ಹೋಗಿತ್ತು. ವಿಷಯ ತಿಳಿಸಿದ ಸಹಪಾಠಿಗೆ ಧನ್ಯವಾದ ತಿಳಿಸಿ ಮೊಬೈಲ್‌ ಸಿಕ್ಕಿತೆಂದು ಮನಸ್ಸಿನಲ್ಲೇ ಅಂದುಕೊಂಡು, ಈ ಸ್ವಾರಸ್ಯಕರ ಘಟನೆಯನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕೆಂದು ಈ ಲೇಖನವನ್ನು ಬರೆದು, ನಾಳೆ ಮೊಬೈಲ್‌ ಜೊತೆ ಬರುವ ಗೆಳತಿಗೆ ಹೆದರಿಸಲು ಸುಮ್ಮನೆ ಬೈಯಬೇಕೋ ಅಥವಾ ಮೊಬೈಲ್‌ ಇಲ್ಲದೆ ರಾತ್ರಿ ಸಮಯವನ್ನು ಕಳೆಯುವ ನನ್ನ ಬಹುದಿನಗಳ ಕನಸನ್ನು ಈಡೇರಿಸಿದ ಅವರಿಗೆ ಧನ್ಯವಾದ ಸಮರ್ಪಿಸಬೇಕೋ ಎಂದು ಯೋಚಿಸುತ್ತ, ಮೊದಲ ಬಾರಿ ಪಕ್ಕದಲ್ಲಿ ಮೊಬೈಲ್‌ ಇಲ್ಲದೆ ನಿದ್ರಿಸುವ ತಯಾರಿ ಮಾಡಿದೆ.

ಅನ್ಸಿಲ್‌ ಪ್ರಿನ್ಸಿಸ್ಟನ್‌ ಸೆರಾವೊ
ದ್ವಿತೀಯ ಎಂಎ, ಮಂಗಳೂರು ವಿ. ವಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಮ್ಮಾ. ಏನದು ಅಲ್ಲಿ ಶಬ್ದ? ಆತ ಸಿಟ್ಟಿನ ಧ್ವನಿಯಲ್ಲಿ ಕೇಳಿದ. ‘’ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ’’. ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ...

  • ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ...

  • ಇನ್ನೇನು ಸೆಮೆಸ್ಟರ್‌ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು....

  • ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ...

  • ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ...

ಹೊಸ ಸೇರ್ಪಡೆ