ಹೆಣ್ಣು ಸಮಾಜದ ಕಣ್ಣು: ಈ ಮಾತನ್ನು ಕೇಳಿ ಕೇಳಿ ಸಾಕಾಯಿತು !

Team Udayavani, Jun 1, 2018, 6:00 AM IST

z-21.jpg

ಹೆಣ್ಣು ಸಮಾಜದ ಕಣ್ಣು’- ಈ ಮಾತು ತುಂಬಾ ಹಳೆಯದು. ಕೇಳಿ ಕೇಳಿ ಸಾಕಾಯಿತು. ಇದನ್ನು ಬಿಟ್ಟು ಹೊಸದೇನಾದರೂ ಇದೆಯೇ ಎಂದು ಅನಿಸಿದರೂ ತಪ್ಪಾಗಲಾರದು. ಆದರೆ ಈ ಮಾತಿನ ಅರ್ಥ ಮಾತ್ರ ಈಗ ಬದಲಾಗಿದೆ. ಹಳೆಯ ಕಾಲದಲ್ಲಿ ಮನೆಯಲ್ಲಿ ಒಬ್ಬಳು ಹೆಣ್ಣು ಮಗಳಿದ್ದರೆ ಆ ಸಂಸಾರ ಅರ್ಥಗರ್ಭಿತವಾಗಿರುತ್ತದೆ. ಅವಳು ಒಂದು ಕಣ್ಣಿದ್ದಂತೆ, ಕಣ್ಣಿಗೆ ಸ್ವಲ್ಪ ನೋವಾದರೂ ನೀರು ಬರುತ್ತದೆ. ಹಾಗೆಯೇ ಹೆಣ್ಣು ಬಹು ಸೂಕ್ಷ್ಮ ಮನಸ್ಸಿನವಳು. ನಮ್ಮ ಕಣ್ಣು ಹೇಗೆ ಕೆಟ್ಟದ್ದು ಮತ್ತು ಒಳ್ಳೆಯದನ್ನು ಸಮಾನ ರೀತಿಯಲ್ಲಿ ನೋಡುತ್ತದೆಯೇ ಅದೇ ರೀತಿ ಹೆಣ್ಣು ಕೂಡ ಕೆಟ್ಟದ್ದು ಮತ್ತು ಒಳ್ಳೆಯದನ್ನು ಸಮಾನ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾಳೆ ಎಂದರ್ಥವಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣೊಬ್ಬಳು ವೇಷಭೂಷಣಧಾರಿಯಾಗಿ ರಸ್ತೆಯಲ್ಲಿ ಹೋದರೆ ಸಾಕು ಸಮಾಜವೆಲ್ಲ ಅವಳನ್ನೇ ನೋಡುತ್ತದೆ. ಸಮಾಜದ ಎಲ್ಲಾ ಕಣ್ಣುಗಳು ಅವಳನ್ನು ಕೇಂದ್ರೀಕರಿಸುತ್ತವೆ. ಇದು ಈಗಿನ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ.

ಹೆಣ್ಣು ಅಂದಕೂಡಲೇ ಅನೇಕರು ಸೌಂದರ್ಯದ ಮತ್ತು ಭೋಗದ ವಸ್ತು ಎಂದುಕೊಂಡಿದ್ದಾರೆ. ಅವಳು ತುಂಬಾ ಸೂಕ್ಷ್ಮ. ಕಣ್ಣೀರಿನ ಕೊಡ. ಎಲ್ಲವನ್ನೂ ಸಹಿಸಿಕೊಂಡು ಮೌನಿಯಾಗಿ ಬಾಳುವ ನಾರಿ. ಎಷ್ಟಾದರೂ ಹೆಣ್ಣು ಅಬಲೆ, ನಾಚಿಕೆ ಸ್ವಭಾವದವಳು ಎಂಬ ಭಾವನೆಗಳು ಅನೇಕರಲ್ಲಿ ಇದ್ದರೂ ನಮ್ಮ ಕಣ್ಣೆದುರಲ್ಲೇ ಹಲವಾರು ಸಾಧನೆಗಳನ್ನು ಮಾಡಿ ಇತಿಹಾಸ ಸೃಷ್ಟಿಸಿದ ಅನೇಕ ಮಹಿಳಾಮಣಿಗಳು ಈ ಎಲ್ಲಾ ಭಾವನೆಗಳಿಗೆ ಮಣ್ಣೆರಚಿರುವುದು ಮಾತ್ರ ಸತ್ಯ. ಈ ರೀತಿಯ ಮಹಿಳಾಮಣಿಗಳು ಬೆರಳೆಣಿಕೆಯಷ್ಟಿರುವುದರಿಂದ ಪ್ರಾಬಲ್ಯತೆಯನ್ನು ಇನ್ನೂ ಕಂಡಿಲ್ಲ. ಪ್ರಾಬಲ್ಯತೆ ಕಾಣಲು ಬೇಕಾಗಿರುವ ಎಲ್ಲಾ ಕಾನೂನು ಚೌಕಟ್ಟುಗಳು ಇದ್ದರೂ ಹಲವು ರೀತಿಯ ವೈಯಕ್ತಿಕ ವಿಚಾರಗಳು ಅವರ ಸಾಧನೆಗೆ ಧಕ್ಕೆಯುಂಟು ಮಾಡುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣನ್ನು ಹಲವಾರು ರೀತಿಯ ಅಸಂಬದ್ಧ ಕಟ್ಟುಪಾಡುಗಳಲ್ಲಿ ಸಿಲುಕಿಸಿರುವುದನ್ನು ಕೂಡ ನಾವು ಬಹಳಷ್ಟು ನೋಡಿದ್ದೇವೆ. ಅಲ್ಲದೆ ಹೆಣ್ಣು ಸ್ವಲ್ಪ ಗಟ್ಟಿ ಹೃದಯದವಳಾಗಿದ್ದರೂ ಸಾಕು ಅವಳನ್ನು ಗಂಡುಬೀರಿ ಎಂದು ತಮಾಷೆ ಮಾಡುತ್ತಾರೆ. 

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಾಗ ಹೆಣ್ಣಿಗೆ ಯಾಕೆ ಮೀಸಲಾತಿಗಳು ಎಂಬುದು ಕೆಲವರ ವಾದ. ಆದರೆ ಇವರುಗಳು ಹೆಣ್ಣು ಹೀಗಿರಬೇಕು, ಹೀಗಿದ್ದರೆ ಚಂದ, ಹೆಣ್ಣಿನ ಶಿಷ್ಟಾಚಾರಗಳ ಬಗ್ಗೆ ಮಾತನಾಡುವಾಗ ಈ ಕಾನೂನಿನ ಬಗ್ಗೆ ಯೋಚಿಸುವುದಿಲ್ಲವೇ?
ಹೆಣ್ಣಿಗೆ ಹೆಣ್ಣೇ ಮಾರಿ ಎಂಬಂತೆ ಹೆಣ್ಣು ಸಮಾಜಕ್ಕೆ ಕಳಂಕ ಬರುವುದು ಹೆಣ್ಣಿನಿಂದಲೇ ಎಂದರೆ ಆಶ್ಚರ್ಯವಿಲ್ಲ. ಕೆಲವೊಂದು ಪ್ರೇಮ ಪ್ರಕರಣಗಳಲ್ಲಿ ಹೆಣ್ಮಕ್ಕಳೇ ಹುಡುಗರನ್ನು ಪ್ರೇಮಕ್ಕೆ ಸೆಳೆದು ದಾರಿ ತಪ್ಪಿಸಿ ಕೊನೆಗೆ ಅಪಾರ ಮಟ್ಟದ ನೋವನ್ನು ಕೊಡುತ್ತಾರೆ ಎನ್ನುತ್ತಾರೆ. ಇಂಥ ಘಟನೆಗಳು ನಡೆದಾಗ ಸಾಮಾನ್ಯವಾಗಿ ಹುಡುಗರು ಇಡೀ ಹೆಣ್ಣು ಸಮಾಜವನ್ನು ದೂಷಿಸುವುದು ಸಹಜ. ತಪ್ಪು ಅಥವಾ ಮೋಸ ಹೆಣ್ಣಿನಿಂದಲೇ ಆಗಿದೆ ಎನ್ನುವುದು ಸರಿಯಲ್ಲ. ಅಲ್ಲದೆ ಅದಕ್ಕಾಗಿ ಇಡೀ ಹೆಣ್ಣು ಕುಲವನ್ನು ದೂಷಿಸುವ ಅಗತ್ಯವೂ ಇಲ್ಲ. ಹೆಣ್ಣು ಮಾತ್ರವಲ್ಲ, ಗಂಡಿನಿಂದ‌ಲೂ ಈ ರೀತಿಯ ಮೋಸ ನಡೆಯಬಹುದು. ಆದ್ದರಿಂದ ನಾವು ಇದನ್ನು ಹೆಣ್ಣು ಅಥವಾ ಗಂಡು ಎಂಬ ಪಂಗಡವನ್ನು ಮಾಡಲು ಸಾಧ್ಯವಿಲ್ಲ. ಇದೊಂದು ಸಮಾಜಘಾತಕ ಜನರ ಚಟವಾದ್ದರಿಂದ ಪ್ರತಿಯೊಬ್ಬನೂ ಅದರಲ್ಲೂ ವಿದ್ಯಾವಂತರಾದ ಯುವಶಕ್ತಿ ಈ ರೀತಿಯ ಮೋಸಗಳಲ್ಲಿ ಪಾಲುದಾರರಾಗುವ ಮೊದಲು ಬಹಳಷ್ಟು ಜಾಗೃತವಾಗಿರುವುದು ಒಳಿತು. ಕೆಲವೊಮ್ಮೆ ಕಾನೂನಿನ ದುರುಪಯೋಗಗಳನ್ನು ನೋಡಿದ್ದೇವೆ. ಕೆಲವೊಂದು ಕಡಿವಾಣಗಳನ್ನು ಹೇಗೆ ಹೆಣ್ಮಕ್ಕಳಿಗೋಸ್ಕರ ಮಾಡುತ್ತಾರೋ ಅದೇ ರೀತಿ ಗಂಡು ಮಕ್ಕಳಿಗೂ ಅಂತಹ ಕೆಲವು ಕಡಿವಾಣಗಳನ್ನು ವಿಧಿಸಿದರೆ ಸಮಾಜದಲ್ಲಿ ಅಂದರೆ ನಮ್ಮ ಸುತ್ತಮುತ್ತ ಒಂದು ಸಣ್ಣ ರೀತಿಯ ಉನ್ನತಿಯ ಬದಲಾವಣೆ ಕಾಣಬಹುದು ಅಲ್ಲವೇ?

ಐಶ್ವರ್ಯಾ ರೈ,  ಶ್ರೀನಿವಾಸ ತಾಂತ್ರಿಕ ವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.