ಕಾಂಗ್ರೆಸ್‌

 • ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ

  ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಂಡು ಆಡಳಿತ ಮತ್ತು ಪ್ರತಿಪಕ್ಷಗಳು ಅದಲು, ಬದಲಾಗಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ತಕ್ಷಣಕ್ಕೆ ಪ್ರತಿಪಕ್ಷದ ನಾಯಕರಾಗಲಿದ್ದಾರೆ. ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ ಪ್ರತಿಪಕ್ಷದ ಸ್ಥಾನದಲ್ಲಿ ಕೂಡುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪ್ರತಿಪಕ್ಷದ ನಾಯಕರು…

 • ಜನರ ಕಣ್ಣಲ್ಲಿ ಹಾಸ್ಯದ ವಸ್ತುಗಳಾದವರು

  ವಿಶ್ವಾಸಮತ ಯಾಚನೆಯ ಸರ್ಕಸ್ಸಿನ ಫ‌ಲಾಫ‌ಲ ಏನೇ ಇರಲಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೆರಡೂ ಜನರ ಕಣ್ಣಲ್ಲಿ ಹಾಸ್ಯಾಸ್ಪದ ವಸ್ತುಗಳಾಗಿರುವುದಂತೂ ನಿಜ. ಎರಡೂ ಪಕ್ಷಗಳ ನಾಯಕರು ಬಂಡಾಯ ಘೋಷಿಸಿದ ಭಿನ್ನಮತೀಯರ ನಡವಳಿಕೆಗಳ ಆಳ ಅಗಲಗಳನ್ನು ತಪ್ಪಾಗಿ ಲೆಕ್ಕ ಹಾಕಿದರು. ರಾಜೀನಾಮೆ…

 • ಅತೃಪ್ತರಿಗೆ ಮನವರಿಕೆಗೆ ಬಿಜೆಪಿ ಒತ್ತು

  ಬೆಂಗಳೂರು: ಪುಣೆಯಲ್ಲಿ ವಾಸ್ತವ್ಯ ಮುಂದುವರಿಸಿರುವ ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತ ಶಾಸಕರಿಗೆ ಕಾನೂನು ತಜ್ಞರಿಂದ ಮಾಹಿತಿ ಒದಗಿಸುವ ಮೂಲಕ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮಾಡುವ ಕಾರ್ಯಕ್ಕೆ ಬಿಜೆಪಿ ಒತ್ತು ನೀಡಿದಂತಿದೆ. ಈಗಾಗಲೇ ಪುಣೆಯಲ್ಲಿನ ಅತೃಪ್ತ ಶಾಸಕರ ಸಂಪರ್ಕದಲ್ಲಿರುವ ಮಾಜಿ ಡಿಸಿಎಂ ಆರ್‌.ಅಶೋಕ್‌,…

 • ಉಪ ಚುನಾವಣೆ ಎದುರಾದರೆ ಕೈ ಜತೆ ಮೈತ್ರಿಗೆ ಜೆಡಿಎಸ್‌ ಒಲವು

  ಬೆಂಗಳೂರು: ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಬಲೆಗೆ ಬಿದ್ದಿರುವ ಹದಿನೈದು ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆಯ ನಂತರ ಎದುರಾಗುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ಒಲವು ಹೊಂದಿದೆ. ಬಿಜೆಪಿ ವಿರುದ್ಧ ಹೋರಾಡಲು ಉಪ ಚುನಾವಣೆಯಲ್ಲೂ…

 • ಸುಧಾಕರ್‌ಗೆ ಕಾಂಗ್ರೆಸ್‌ ಬಾಗಿಲು ಬಂದ್‌

  ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ನ 14 ತಿಂಗಳ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಎರಡೂ ಪಕ್ಷಗಳ ಅತೃಪ್ತ ಶಾಸಕರ ಮುಂದಿನ ರಾಜಕೀಯ ನಡೆ ಸಾಕಷ್ಟು ನಿಗೂಢವಾಗಿದ್ದು, ಸರ್ಕಾರ ಬೀಳಿಸಿದ ಅಪವಾದಕ್ಕೆ ಗುರಿಯಾಗಿರುವ ಅತೃಪ್ತ ಶಾಸಕರನ್ನು ಮತ್ತೆ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲವೆಂದು ಉಭಯ…

 • ಕಾಂಗ್ರೆಸ್‌ ಜತೆ ನಮಗೆ ಈಗಲೂ ಭಿನ್ನಾಭಿಪ್ರಾಯವಿಲ್ಲ

  ಬೆಂಗಳೂರು: ಕಾಂಗ್ರೆಸ್‌ ಜತೆ ಈಗಲೂ ನಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಶಾಸಕರ ಸಭೆ ನಂತರ ಮಾತನಾಡಿದ ಅವರು, ಕಾಂಗ್ರೆಸ್‌ ಜತೆ ಈಗಲೂ ನಮಗೆ ಯಾವುದೇ ವ್ಯತ್ಯಾಸವಿಲ್ಲ. ಸಿದ್ದರಾಮಯ್ಯ ಹಾಗೂ…

 • ಕೈನಲ್ಲಿ ಪರ್ಯಾಯ ನಾಯಕತ್ವದ ಲೆಕ್ಕಾಚಾರ

  ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಬಹುಮತ ಸಾಬೀತು ಪಡಿಸದಿದ್ದರೆ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿ ಸರ್ಕಾರ ರಚನೆಗೆ ಪ್ರಸ್ತಾಪ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಪರ್ಯಾಯ ನಾಯಕತ್ವದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಪ್ರಸ್ತಾಪ ಸಲ್ಲಿಸುವ ಬಗ್ಗೆ…

 • ಶ್ರೀಮಂತ ಪಾಟೀಲ್ ಅಪಹರಣ: ‘ಕೈ’ ದೂರು

  ಬೆಂಗಳೂರು: ಕಾಂಗ್ರೆಸ್‌ನ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕಾಂಗ್ರೆಸ್‌ ವತಿಯಿಂದ ನಗರ ಪೊಲೀಸ್‌ ಆಯುಕ್ತ ಅಲೋಕ್‌ಕುಮಾರ್‌ಗೆ ದೂರು ಸಲ್ಲಿಸಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ನಟರಾಜ್‌ ಗೌಡ ಹಾಗೂ ವಕ್ತಾರ ಮಂಜುನಾಥ ಅದ್ದೆ ದೂರು…

 • ನಿಮ್ಮ ಅಜೆಂಡಾ ನನ್ನ ಅಜೆಂಡಾ ಅಲ್ಲ: ಸ್ಪೀಕರ್‌

  ವಿಧಾನಸೌಧ: ‘ನಿಮ್ಮ ಅಜೆಂಡಾ ನನ್ನ ಅಜೆಂಡಾ ಆಗುವುದಿಲ್ಲ. ನನ್ನ ಅಜೆಂಡಾ ವಿಶ್ವಾಸಮತ ಯಾಚನೆ ಚರ್ಚೆ ಸಂಬಂಧ ಕ್ರಿಯಾಲೋಪ ತೆಗೆದಿದ್ದು, ಅದರ ಚರ್ಚೆಗೆ ಅವಕಾಶ ನೀಡಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಸದನಕ್ಕೆ ತಿಳಿಸಿದರು. ಗುರುವಾರ ಮಧ್ಯಾಹ್ನ ಭೋಜನಾ ನಂತರದ…

 • ಮರುಹುಟ್ಟು ಪಡೆಯಲು ಕಾಂಗ್ರೆಸ್‌ ಏನು ಮಾಡಬಹುದು?

  ರಾಜಕೀಯದಂತಹ ವಾಸ್ತವಿಕತೆ ತುಂಬಿಕೊಂಡ ಕ್ಷೇತ್ರದಲ್ಲಿಯೂ ಕೆಲವೊಮ್ಮೆ ಸತ್ಯ ಕಾದಂಬರಿಗಿಂತಲೂ ವಿಚಿತ್ರವಾಗಿರುತ್ತದೆ. ಫ್ಯಾಂಟಸಿಯ ಅಂಶವನ್ನು ಹೊಂದಿರುತ್ತದೆ. ಈ ಮಾತಿಗೆ ದೊಡ್ಡ ಉದಾಹರಣೆ ಕಾಂಗ್ರೆಸ್‌ ಸಾಮ್ರಾಜ್ಯದ ಪತನ. ನೂರಾರು ವರ್ಷಗಳ ಕಾಲ ದೇಶದ ಜೀವಾಳವಾಗಿ ಹೋಗಿದ್ದ ಕಾಂಗ್ರೆಸ್‌ ದೇಶದಲ್ಲಿ ಇಷ್ಟು ಶಕ್ತಿಹೀನವಾಗಿ…

 • ಅತೃಪ್ತರ ಅರ್ಜಿ ಇಂದು ವಿಚಾರಣೆ

  ಹೊಸದಿಲ್ಲಿ: ಕರ್ನಾಟಕದ 10 ಮಂದಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ ರಮೇಶ್‌ ಕುಮಾರ್‌ ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ದೂರಿನ ವಿಚಾರಣೆ ಮಂಗಳವಾರ ನಡೆಯಲಿದ್ದು, ಇವರೊಂದಿಗೆ ಮುಂಬಯಿ ಸೇರಿರುವ…

 • ಪ್ರತಿಭಟಿಸಲೂ “ಕೈ’ಗೆ ಸಿಗದ ಕಾರ್ಯಕರ್ತರು

  ಬೆಂಗಳೂರು: ಯಾಕೋ ಕಾಂಗ್ರೆಸ್‌ಗೆ ಕಾಡುವ ಕಾಲ ಮುಗಿದಂತೆ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಸೋಲಿನ ನೋವಿನ ನಡುವೆಯೇ ಏಕಾಏಕಿ 13 ಮಂದಿ ಶಾಸಕರು ರಾಜೀನಾಮೆ ನೀಡಿ ಪಕ್ಷಕ್ಕೆ ಕೈ ಕೊಟ್ಟು ಮುಂಬೈ ಸೇರಿದ್ದರೆ, ಈ ನಡುವೆಯೇ ಅವರ ಕ್ಷೇತ್ರಗಳಲ್ಲಿ ಅವರ…

 • ಪ್ರತಿಪಕ್ಷದಲ್ಲಿ ಕೂರಲು ಮಾನಸಿಕವಾಗಿ ಕಾಂಗ್ರೆಸ್‌ ಸಿದ್ಧತೆ?

  ಬೆಂಗಳೂರು: ಕೆಲವು ದಿನಗಳಿಂದ ದಿನಂಪ್ರತಿ ವಿಚಿತ್ರ ವೈರುಧ್ಯಗಳನ್ನು ಪಡೆದುಕೊಳ್ಳುತ್ತಿರುವ ರಾಜ್ಯ ರಾಜಕೀಯವನ್ನು ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಮತ್ತು ಅದರ ಘಟಾನುಘಟಿ ನಾಯಕರು ಮೈತ್ರಿ ಸರ್ಕಾರದ ಪತನವನ್ನೇ ಕಾಯುತ್ತಿರುವಂತೆ ಭಾಸವಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು…

 • ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಇಂದು

  ಬೆಂಗಳೂರು: ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿರುವುದರಿಂದ ಸೋಮವಾರದಿಂದ ಯಾವುದೇ ಶಾಸಕರು ಸದನಕ್ಕೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಅದೇ ಕಾರಣಕ್ಕೆ ಸೋಮವಾರ ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನವೇ ಶಾಸಕಾಂಗ ಪಕ್ಷದ ನಾಯಕ…

 • ಸರ್ಕಾರ ಉಳಿಸಲು ಕಾಂಗ್ರೆಸ್‌ನಿಂದ “ಟಾರ್ಗೆಟ್‌ -9′

  ಬೆಂಗಳೂರು: ರಾಜೀನಾಮೆ ಕೊಟ್ಟು ಮೈತ್ರಿ ಪಕ್ಷವನ್ನು ಕೋಮಾದಲ್ಲಿಟ್ಟಿರುವ ಶಾಸಕರನ್ನು ವಾಪಸ್‌ ಕರೆಸಿ, ಸರ್ಕಾರವನ್ನು ಬಚಾವ್‌ ಮಾಡಲು ಕಾಂಗ್ರೆಸ್‌ ನಾಯಕರು “ಟಾರ್ಗೆಟ್‌ 9′ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಾಂಗ್ರೆಸ್‌ನ 13 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅವರಲ್ಲಿ ನಾಲ್ವರು ಮಾತ್ರ ಮುಂಬೈ…

 • ಪ್ರತಿಪಕ್ಷದಲ್ಲಿ ಕೂರಲು ಕಾಂಗ್ರೆಸ್‌ ಒಲವು

  ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಪ್ರತಿದಿನ ಸಂಘರ್ಷ ನಡೆಸುವುದಕ್ಕಿಂತ ಪ್ರತಿಪಕ್ಷದಲ್ಲಿಯೇ ಕೂರುವುದು ಉತ್ತಮ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ಬಹುತೇಕ ಶಾಸಕರು ಹೊಂದಿದ್ದಾರೆ. ಸರ್ಕಾರದ ಆರಂಭದಿಂದಲೂ ಮೈತ್ರಿ ಸರ್ಕಾರದಲ್ಲಿನ ಗೊಂದಲಗಳಿಂದ ಬೇಸತ್ತಿದ್ದ ಕಾಂಗ್ರೆಸ್‌ನ ಶಾಸಕರು, ಈಗ 13 ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ…

 • “ಕಾಂಗ್ರೆಸ್‌ ಬಿಡಲ್ಲ,ಬಿಜೆಪಿಗೆ ಹೋಗಲ್ಲ’

  ಸಾವಳಗಿ: ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸ್ಪಷ್ಟಪಡಿಸಿದ್ದಾರೆ. ಅತೃಪ್ತ ಬಣದಲ್ಲಿ ಸೇರಿಕೊಳ್ಳುತ್ತಾರೆಂಬ ವದಂತಿಗೆ ಶಾಸಕರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಬಗ್ಗೆ ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು….

 • ಬಿಜೆಪಿ ಜತೆ ರಾಜ್ಯಪಾಲರೂ ಶಾಮೀಲು: ಸೊರಕೆ

  ಉಡುಪಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿ ಜತೆಗೆ ರಾಜ್ಯಪಾಲರು ಕೂಡ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ. ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ…

 • ಡಿಕೆಶಿ ನಡೆಗೆ ದಂಗಾದ “ಕೈ’ ನಾಯಕರು

  ಬೆಂಗಳೂರು: ಮುಂಬೈಗೆ ತೆರಳಿರುವ ಅತೃಪ್ತ ಶಾಸಕರನ್ನು ಹೇಗಾದರೂ ಮಾಡಿ ಮನವೊಲಿಸಿ ವಾಪಸ್‌ ಕರೆ ತರಲು ಕಾಂಗ್ರೆಸ್‌ ನಾಯಕರು ಬೆಂಗಳೂರಿನಲ್ಲಿ ಕುಳಿತು ಕಾರ್ಯತಂತ್ರ ರೂಪಿಸುತ್ತಿದ್ದರೆ, ಬೆಳಗಾಗುವಷ್ಟರಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮುಂಬೈಗೆ ತೆರಳಿ, ಅಲ್ಲಿ ರಾಜೀನಾಮೆ ಸಲ್ಲಿಸಿರುವ…

 • ಸಂಸತ್‌ನಲ್ಲಿ ಕೋಲಾಹಲ

  ನವದೆಹಲಿ: ರಾಜ್ಯದಲ್ಲಿನ ರಾಜಕೀಯ ಹೈಡ್ರಾಮಾ ಸಂಸತ್‌ನಲ್ಲಿ ಪ್ರತಿಧ್ವನಿಸಿದ್ದೂ ಅಲ್ಲದೇ, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೂ ಕಾರಣವಾಯಿತು. ಲೋಕಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರೆ, ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು….

ಹೊಸ ಸೇರ್ಪಡೆ