ಗುಳೇದಗುಡ್ಡ: Guledagudda:

 • ರಾಜ್ಯ ಹೆದ್ದಾರಿ ಕಾಮಗಾರಿಗೆ ಹಸಿರು ನಿಶಾನೆ

  ಗುಳೇದಗುಡ್ಡ: ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ ಕಾಮಗಾರಿ ತಡೆ ಇತ್ಯರ್ಥಗೊಂಡಿದ್ದು, ಕಾಮಗಾರಿ ಆರಂಭಗೊಳ್ಳುವ ಹಾದಿ ಸುಗಮಗೊಂಡಿದೆ. ಕಳೆದ ತಿಂಗಳು ಗುತ್ತಿಗೆದಾರರೊಬ್ಬರು ನ್ಯಾಯಾಲಯದ ಮೋರೆ ಹೋಗಿದ್ದರಿಂದ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ ಕಾಮಗಾರಿಗೆ ತಡೆ ಬಿದ್ದಿತ್ತು. ಈಗ ಎಲ್ಲವೂ ಬಗೆಹರಿದಿದೆ. ಹಲವು…

 • ಲಾಯದಗುಂದಿ ಗ್ರಾಪಂಗೆ ಮುತ್ತಿಗೆ-ಪ್ರತಿಭಟನೆ

  ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಪ್ರವಾಹದಿಂದ ಹಾನಿಯಾದವರಿಗೆ ಬಿಟ್ಟು ಬೇರೆಯವರಿಗೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿ ಲಾಯದಗುಂದಿ ಸಂತ್ರಸ್ತರು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನೆರೆ ಸಂತ್ರಸ್ತರ ಸರ್ವೇ ಅವೈಜ್ಞಾನಿಕವಾಗಿ ಮಾಡಲಾಗಿದ್ದು, ಇದರಿಂದ…

 • ನೆರೆ ಪರಿಹಾರ ನೀಡಲು ಆಗ್ರಹ

  ಗುಳೇದಗುಡ್ಡ: ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘದವರು ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಪ್ರವಾಹದಿಂದ ಬೆಳೆ ಹಾನಿಯಾಗಿ 7ತಿಂಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರಕಾರ ಬೆಳೆ ಹಾನಿಯಾದ…

 • ಕೂಲಿಗಾಗಿ ಆಗ್ರಹಿಸಿ ಕೋಟೆಕಲ್ಲ ಗ್ರಾಪಂಗೆ ಬೀಗ; ಪ್ರತಿಭಟನೆ

  ಗುಳೇದಗುಡ್ಡ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಸಮರ್ಪಕವಾಗಿ ಕೂಲಿ ಕೆಲಸ ನೀಡಿಲ್ಲ. ಕೆಲಸ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ತೋಗುಣಸಿ ಗ್ರಾಮದ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿ ಕೋಟೆಕಲ್ಲ ಗ್ರಾಪಂ ಕಚೇರಿಗೆ ಬೀಗ ಜಡಿದು…

 • ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರಿಂದ ಸಲಹೆ

  ಗುಳೇದಗುಡ್ಡ: ಪಟ್ಟಣದ ಪುರಸಭೆ ಸಭಾಭವನದಲ್ಲಿ ರವಿವಾರ ನಡೆದ ಪುರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಕಳೆದ ವರ್ಷ ನೀಡಿದ ಸಲಹೆಗಳನ್ನು ಕಾರ್ಯರೂಪಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡುವಂತೆ ನಿವಾಸಿಗಳು ಆಗ್ರಹಿಸಿದರು. ಪೂರ್ವಭಾವಿ ಸಭೆ ಆರಂಭವಾಗುತ್ತಿದ್ದಂತೆ ಗದ್ದಲದ ವಾತಾವರಣ ಕಂಡುಬಂದಿತು. ಪಟ್ಟಣದಲ್ಲಿ…

 • ಬರಗಾಲದಲ್ಲಿ ಹಸಿವು ನೀಗಿಸಿದ್ದ ಪೇಜಾವರ ಶ್ರೀ

  ಗುಳೇದಗುಡ್ಡ: ಉಡುಪಿಯ ಪೇಜಾವರ ಶ್ರೀಗಳಿಗೂ ಗುಳೇದಗುಡ್ಡಕ್ಕೂ ಅವಿನಾಭಾವ ಸಂಬಂಧವಿದೆ. ಅನೇಕ ಜನರೊಂದಿಗೆ ಒಡನಾಟ ಹೊಂದಿದ್ದರು. ಆದರೆ, ಹರಿಪಾದ ಸೇರಿರುವುದು ಜನತೆಗೆ ನೋವು ತರಿಸಿದೆ. ಪೇಜಾವರ ಶ್ರೀಗಳು ಗುಳೇದಗುಡ್ಡದ ರಾಘವೇಂದ್ರ ಮಠ, ಪರ್ವತಿಯ ಪರ್ವತೇಶ ದೇವಸ್ಥಾನ, ಲಕ್ಷ್ಮೀ ಬ್ಯಾಂಕಿನ ಶತಮಾನೋತ್ಸವ…

 • ಅಂಗನವಾಡಿಗಳ ಪ್ರಗತಿಯ ಸಾರ್ಥಕ ಸೇವೆ

  ಗುಳೇದಗುಡ್ಡ: ಪರಿಸರ ರಕ್ಷಣೆ, ಪ್ರಾಥಮಿಕ ಶಾಲೆಗಳು-ಅಂಗನವಾಡಿಗಳಲ್ಲಿ ಕಲಿಕಾ ಪ್ರಗತಿ ಸಾಧಿಸುವುದು, ಪೂರ್ವ ಪ್ರಾಥಮಿಕದಿಂದಲೇ ಮಕ್ಕಳಿಗೆ ಓದಲು, ಬರೆಯುವುದು ಕಲಿಸುವುದು, ಶಿಕ್ಷಕ-ವಿದ್ಯಾರ್ಥಿ ಇಬ್ಬರು ಖುಷಿ-ತೃಪ್ತಿ ಪಡುವುದು ಇಂತಹ ಮುಖ್ಯ ಉದ್ದೇಶಗಳನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಕೋಟೆಕಲ್‌-ಗುಳೇದಗುಡ್ಡ ಶಿಕ್ಷಣ ಹಾಗೂ ಪರಿಸರ ಅಭಿವೃದ್ಧಿ ಸಂಘಕ್ಕೆ…

 • ವಿದ್ಯುತ್‌ ಕೈ ಕೊಟ್ಟರೆ ಕೆಲಸಗಳು ಸ್ತಬ್ಧ

  ಗುಳೇದಗುಡ್ಡ: ಪಟ್ಟಣದ ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಕಚೇರಿ, ಪುರಸಭೆ ಕಚೇರಿಗಳಿಗೆನಿತ್ಯ ಒಂದಿಲ್ಲೊಂದು ಕೆಲಸಗಳಿಗೆ ನೂರಾರು ಜನರು ಬರುತ್ತಿದ್ದು, ವಿದ್ಯುತ್‌ ಕೈ ಕೊಟ್ಟರೆ ಮಾತ್ರ ಕಚೇರಿಗಳು ಸ್ತಬ್ದವಾಗಿ ಬಿಡುತ್ತವೆ. ಕಚೇರಿಗಳಲ್ಲಿ ಯುಪಿಎಸ್‌ ಸೌಲಭ್ಯ ಇಲ್ಲದೇ ಇರುವುದರಿಂದ ಜನರು ಕಚೇರಿಗಳಿಗೆ ಅಲೆಯುವುದು…

 • ಗುಳೇದಗುಡ್ಡ ಬಸ್‌ ನಿಲ್ದಾಣ ಕಾಮಗಾರಿ ಕಳಪೆ

  ಗುಳೇದಗುಡ್ಡ: ಕೋಟ್ಯಂತರ ರೂ. ಖರ್ಚು ಮಾಡಿ ನವೀಕರಿಸಿದ್ದ ಪಟ್ಟಣದ ಬಸ್‌ ನಿಲ್ದಾಣದ ಮೇಲ್ಛಾವಣಿ ಮಳೆ ಬಂದಾಗ ಸೋರುತ್ತಿದೆ. ಪಟ್ಟಣದಲ್ಲಿನ ಬಸ್‌ ನಿಲ್ದಾಣದ ನವೀಕರಣ, ರಸ್ತೆ ಕಾಂಕ್ರೀಟ್‌ ಕಾಮಗಾರಿ ಕೈಗೊಳ್ಳಲಾಗಿತ್ತು. ಗುತ್ತಿಗೆದಾರ, ಅ ಧಿಕಾರಿಗಳ ನಿರ್ಲಕ್ಷ್ಯಕ್ಕೆ ಯೋಜನೆ ವ್ಯರ್ಥವಾಗಿದೆ ಎಂದು ಸಾರ್ವಜನಿಕರು…

 • ಗುಳೇದಗುಡ್ಡ ಗ್ರಂಥಾಲಯಕ್ಕಿಲ್ಲ ಸ್ವಂತ ಸೂರು

  ಗುಳೇದಗುಡ್ಡ: ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆಗೊಂಡು ಸುಮಾರು 38 ವರ್ಷ ಕಳೆದರೂ ಗ್ರಂಥಾಲಯಕ್ಕೆ ಇನ್ನೂ ಸ್ವಂತ ಸೂರಿಲ್ಲ. ಪಟ್ಟಣದ ಬನ್ನಿಕಟ್ಟಿ ಹತ್ತಿರದ ಪುರಸಭೆ ಕಟ್ಟಡದಲ್ಲಿ 1980ರಲ್ಲಿ ಈ ಸಾರ್ವಜನಿಕ ಗ್ರಂಥಾಲಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಇದಕ್ಕೆ ಸ್ವಂತ ಜಾಗ ಇಲ್ಲ….

 • ಕಾಲೇಜ್‌ ಆರಂಭಗೊಂಡು ಆರು ತಿಂಗಳಾದ್ರೂ ಸಿಗದ ಸಂಯೋಜನೆ

  ಗುಳೇದಗುಡ್ಡ: ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ ಆರು ತಿಂಗಳು ಕಳೆದರೂ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಇದುವರೆಗೂ ಸಂಯೋಜನೆ ನೀಡಿರಲಿಲ್ಲ. ಅಷ್ಟೇ ಅಲ್ಲ ಪರೀಕ್ಷಾ ಅರ್ಜಿ ತುಂಬುವ ನೋಂದಣಿ ಸಂಖ್ಯೆಯನ್ನೂ ನೀಡಿರಲಿಲ್ಲ. ಹೀಗಾಗಿ ಪರೀಕ್ಷಾ ಅರ್ಜಿ…

 • ಭಾರಿ ಮಳೆ: ಕುಸಿದು ಬಿದ್ದ ಮನೆ

  ಗುಳೇದಗುಡ್ಡ; ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಪಟ್ಟಣದ ಬನ್ನಿಕಟ್ಟಿಯ ಶಂಕ್ರವ್ವ ರೇವಣಪ್ಪ ಮುರಗೋಡ ಎಂಬುವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಹಳ್ಳ ತುಂಬಿ ಹರಿದು ಪಟ್ಟಣದ ಬಸ್‌ ನಿಲ್ದಾಣದ ಎದುರಿನ ಧುತ್ತರಗಿ ಪೆಟ್ರೋಲ್‌ ಬಂಕ್‌,…

 • ಇದ್ದೂ ಇಲ್ಲದಂತಿರುವ ಶುದ್ಧೀಕರಣ ಘಟಕಗಳು

  ಗುಳೇದಗುಡ್ಡ: ಎಲ್ಲೆಂದರಲ್ಲಿ ತುಕ್ಕು ಹಿಡಿದ ಯಂತ್ರ.. ಅದರಿಂದಲೇ ಫಿಲ್ಟರ್‌ ಆಗಿ ಬರುವ ಜಂಗು ವಾಸನೆ ಹೊಂದಿರುವ ನೀರು… ಇದು ಸಮೀಪದ ಕೋಟೆಕಲ್‌ ಗ್ರಾಪಂ ವ್ಯಾಪ್ತಿಗೆ ಬರುವ ತೋಗುಣಶಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕದ ಕಥೆ-ವ್ಯಥೆ. ಇದೇ ಘಟಕದಿಂದ ಜನರಿಗೆ…

 • ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೋಟೆಕಲ್ಲನಲ್ಲಿ ಸ್ವಚ್ಛತೆ ಮರೀಚಿಕೆ

  ಗುಳೇದಗುಡ್ಡ: ಕೋಟೆಕಲ್‌ಗೆ ಗ್ರಾಪಂಗೆ ಮೂರು ಬಾರಿ “ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಊರಿನ ಕೆಲವು ಕಡೆ ಗಟಾರು ಕೊಳಚೆ ತುಂಬಿ ನಿತ್ಯವೂ ಗಬ್ಬು ವಾಸನೆ ಹರಡುತ್ತಿದೆ. ಸೊಳ್ಳೆಗಳ ಉತ್ಪತಿ ತಾಣವಾಗಿದೆ ಆದರೂ ಇತ್ತ ಗಮನ ಹರಿಸುವವರೇ…

 • 6 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

  ಗುಳೇದಗುಡ್ಡ: ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‌ ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರ ಕೋಟೆಕಲ್‌ ಗ್ರಾಮ ಪಂಚಾಯತ್‌ಗೆ ಮೂರನೇ ಬಾರಿ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು ಆರು ಪಂಚಾಯತ್‌ ಗಳನ್ನು…

 • ನೋಡ ಬನ್ನಿ ಹಿರೇಹಳ್ಳದ ದಿಡಗಿನ ವೈಯಾರ

  ಗುಳೇದಗುಡ್ಡ: ಪಟ್ಟಣದಲ್ಲಿ ಬುಧವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ಹಿರೇ ಹಳ್ಳದ ದಿಡಗಿನ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಗುಳೇದಗುಡ್ಡ ಭಾಗದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಈ ಹಿರೇಹಳ್ಳದ…

 • ನನ್ನ ಹೊಟ್ಯಾನ ಕಂದನ ಜೀವಾನೂ ಉಳಿಸಿದ್ರು..

  ಗುಳೇದಗುಡ್ಡ: ನಮ್ಮ ಮನಿಮಟಾ ಏನ್‌ ನೀರ್‌ ಬರ್ತೈತಿ. ಗರ್ಭಿಣಿ ಹೆಣ್ಮಕ್ಕಳನ್‌ ಕಟ್ಟಗೊಂಡು ಎಲ್ಲಿಗಿ ಹೋಗೂದಂತ ಅಪ್ಪ ಹೇಳ್ತಿದ್ರು. ಬಾಳ್‌ ನೀರ್‌ ಬಂದ್ರ ನೋಡೋಣಂತ ಮನೆಯಲ್ಲೇ ಇದ್ದೇವು. ಆದ್ರ ಒಮ್ಮೇ ಮನಿಮಟಾ ನೀರು ಬಂತು. ಮನ್ಯಾನ್‌ ಮಂದೆಲ್ಲ ಸಾಮಾನ ಜೋಡಸಾಕ್‌…

 • ಮಳೆಗಾಲ ಬಂದ್ರೆ ಈ ಮಾರ್ಗಗಳು ‘ಡೆಡ್ಲಿ’

  ಗುಳೇದಗುಡ್ಡ: ಗುಳೇದಗುಡ್ಡ-ನಂದಿಕೇಶ್ವರ ಹಾಗೂ ಗುಳೇದಗುಡ್ಡ-ಹುಲ್ಲಿಕೇರಿ ಮಾರ್ಗದ ರಸ್ತೆಗಳು ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವುದೇ ಆನಂದ. ಆದರೆ, ಮಳೆಗಾಲ ಬಂದರೆ ಮಾತ್ರ ಬಲು ಅಪಾಯಕಾರಿ ರಸ್ತೆಯಿದು. ಗುಳೇದಗುಡ್ಡದಿಂದ ಈ ಎರಡೂ ಪ್ರದೇಶಗಳಿಗೆ ತೆರಳಲು ಗುಡ್ಡ ಕಡಿದು ರಸ್ತೆ…

 • ಮನಿ, ಹೊಲವೆಲ್ಲಾ ನೀರಾಗ ಕೊಚಕೊಂಡು ಹೋಯ್ತು!

  ಮಲ್ಲಿಕಾರ್ಜುನ ಕಲಕೇರಿ ಗುಳೇದಗುಡ್ಡ: ಮನೀ, ಕಷ್ಟಪಟ್ಟ ಬೆಳೆದಿದ್ದ ಬೆಳಿ, ಹೋಲಾ ಎಲ್ಲ ನೀರಾಗ್‌ ಹೋಯ್ತು. ನಾವ್‌ ನೀರಾಗ್‌ ಹೋಗಿ ಬಿಟ್ಟಿದ್ರ ಚಲೋ ಇರತಿತ್‌ ನೋಡ್ರಿ. ಎಲ್ಲಾ ಕಳಕೊಂಡು ಇನ್ನೇನ್‌ ಮಾಡಬೇಕ್‌. ದೇವರ ಬಾಳ್‌ ಮೋಸ ಮಾಡಿದ. ನಾವ್‌ ಕಷ್ಟಪಟ್ಟ…

ಹೊಸ ಸೇರ್ಪಡೆ