ಚಿತ್ರದುರ್ಗ: Chitadurga:

 • ಎಬಿಎಆರ್‌ಕೆ ಕಾರ್ಡ್‌ ಸೇವಾ ಕೇಂದ್ರದಲ್ಲಿ ಲಭ್ಯ

  ಚಿತ್ರದುರ್ಗ: ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‌ಗಳನ್ನು ಈವರೆಗೆ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದಾಗಿತ್ತು. ಈಗ ಎಬಿಎಆರ್‌ಕೆ ಕಾರ್ಡ್‌ನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು…

 • ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ

  ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಹೊಳಲ್ಕೆರೆ ತಾಲೂಕು ಎನ್‌.ಜಿ. ಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆರ್‌. ಗೊಲ್ಲರಹಳ್ಳಿ, ಕಡ್ಲಪ್ಪನಟ್ಟಿ, ಉಪ್ಪಾರಹಟ್ಟಿ ಹೊಸಹಟ್ಟಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ  ಬೀದಿನಾಟಕವನ್ನು ಪ್ರದರ್ಶಿಸಲಾಯಿತು….

 • ಲೋಕ ಅದಾಲತ್‌ನಲ್ಲಿ 3577 ಪ್ರಕರಣ ಇತ್ಯರ್ಥ

  ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3577 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ವೈ. ವಟವಟಿ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ 28,982 ಪ್ರಕರಣಗಳ…

 • ನಾಳೆಯಿಂದ ಶಾಲಾ ಲಸಿಕಾ ಅಭಿಯಾನ: ವಿನೋತ್‌ ಪ್ರಿಯಾ

  ಚಿತ್ರದುರ್ಗ: ಡಿಪಿಟಿ ಬೂಸ್ಟರ್‌ ಹಾಗೂ ಟಿ.ಡಿ. ಲಸಿಕೆ ಹಾಕುವ ಶಾಲಾ ಲಸಿಕಾ ಅಭಿಯಾನವನ್ನು ಡಿ. 11 ರಿಂದ 31 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 2.67 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ…

 • ಕನಕ ಜಯಂತಿ ಆಚರಣೆಗೆ ಸಿದ್ಧತೆ: ವಿನೋತ್‌ ಪ್ರಿಯಾ

  ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ನ. 15 ರಂದು ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನಕ ಜಯಂತಿ ಪೂರ್ವಭಾವಿ ಸಭೆಯ…

 • ರಸ್ತೆ ಅಗಲೀಕರಣಕ್ಕೆ ಮತ್ತೆ ಟೆಂಡರ್‌

  ಚಿತ್ರದುರ್ಗ: ನಗರದ ಪ್ರವಾಸಿಮಂದಿರದಿಂದ ಗಾಂಧಿ ವೃತ್ತದ ಮೂಲಕ ಕನಕ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಮತ್ತೂಮ್ಮೆ ಟೆಂಡರ್‌ ಕರೆಯಲು ರ್ನಿರಿಸಲಾಗಿದ್ದು, ಡಿಸೆಂಬರ್‌ ತಿಂಗಳಲ್ಲಿ ಅಂತಿಮವಾಗಬಹುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು. ನಗರಸಭೆ ಕಚೇರಿಯಲ್ಲಿ ಸೋಮವಾರ ವಿವಿಧ…

 • ನೆರೆ ಪರಿಹಾರ ನೀಡಲು ಆಗ್ರಹ

  ಚಿತ್ರದುರ್ಗ: ಮಳೆಯಿಂದ ಬಿದ್ದ ಮನೆಗಳ ನಿರ್ಮಾಣಕ್ಕೆ ಪರಿಹಾರ ನೀಡಲು ಆಗ್ರಹಿಸಿ ರಾಮಗಿರಿ ಟಿ. ವಡೇರಹಳ್ಳಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ನೆರೆ ಸಂತ್ರಸ್ತರು, ಮಳೆಯಿಂದ ನಮ್ಮ ಜೀವನವೇ…

 • ಸರಸ್ವತಿಯ ಆಲಯಕ್ಕೆ 94ರ ಹರೆಯ!

  ಚಿತ್ರದುರ್ಗ: ಶತಮಾನ ಪೂರೈಸಲು ಇನ್ನು ಆರು ವರ್ಷ ಮಾತ್ರ ಬಾಕಿ. ಬರೋಬ್ಬರಿ 94 ವರ್ಷವಾಗಿದ್ದರೂ ಎತ್ತಲಿಂದ ನೋಡಿದರೂ ಸಣ್ಣ ಬಿರುಕೂ ಕಾಣದಷ್ಟು ಸುಸಜ್ಜಿತ ಗಟ್ಟಿಮುಟ್ಟಾಗಿರುವ ಕಟ್ಟಡ. ಇದು ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜೇಂದ್ರ ಗ್ರಂಥಾಲಯ. 1925ರಲ್ಲಿ ನಿರ್ಮಾಣವಾದ…

 • ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಲು ಸೂಚನೆ

  ಚಿತ್ರದುರ್ಗ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ ಹೇಳಿದರು. ಸ್ಲಂ ಜನಾಂದೋಲನ-ಕರ್ನಾಟಕ ಜಿಲ್ಲಾ ಸಮಿತಿ ಕಾರ್ಯಕರ್ತರು ಹಾಗೂ…

 • ನಾಲ್ಕು ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ : ನಗರಸಭೆ ಎದುರು ಸಾರ್ವಜನಿಕರ ಆಕ್ರೋಶ

  ಚಿತ್ರದುರ್ಗ: ನಾಲ್ಕು ವರ್ಷದ ಕಂದನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಆಜಾದ್ ನಗರದಲ್ಲಿ ನಡೆದಿದೆ. ನಾಯಿಗಳು ನಾಲ್ಕು ವರ್ಷದ ಗೌಸಿಯಾ ಎಂಬ ಮಗುವಿಗೆ ವಿಪರೀತ ಕಚ್ಚಿವೆ. ಪರಿಣಾಮವಾಗಿ ಬಾಲಕಿ ಗಂಭೀರವಾಗಿ…

 • ಚಿತ್ರದುರ್ಗ: ಈಜಲು ತೆರಳಿದ್ದ ಯುವಕ ನೀರುಪಾಲು

  ಚಿತ್ರದುರ್ಗ: ವೇದಾವತಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲೂಕು ಕಾರೆಹಳ್ಳಿ ಬಳಿ ನಡೆದಿದೆ. ಪ್ರವೀಣ್(22)ಮೃತ ಯುವಕ. ಕಾರೇಹಳ್ಳಿ ಬಳಿ ನಿರ್ಮಿಸಿರು  ಬ್ಯಾರೇಜ್ ಬಳಿ ಈಜಲು ತೆರಳಿದ್ದ ವೇಳೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಶ್ರೀರಾಂಪುರ ಪೊಲೀಸ್…

 • ವೈಚಾರಿಕ ದಸರಾಕ್ಕೆ ಮುರುಘಾ ಮಠ ಸಜ್ಜು

  ಚಿತ್ರದುರ್ಗ: ಮಧ್ಯ ಕರ್ನಾಟಕದ “ವೈಚಾರಿಕಾ ದಸರಾ’ ಎಂದೇ ಹೆಸರಾಗಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಮುರುಘಾ ಮಠ ಸಜ್ಜಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಮಂಗಳವಾರ ಶ್ರೀಮಠದ ಆವರಣದಲ್ಲಿ ಉತ್ಸವದ ಪೂರ್ವಸಿದ್ಧತೆ ವೀಕ್ಷಿಸಿ ಶರಣರು ಮಾತನಾಡಿದರು. ಹಿಂದೆ…

 • ವಾಲ್ಮೀಕಿ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ:ಡಿಸಿ

  ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ. 13 ರಂದು ಜಿಲ್ಲಾ ಕೇಂದ್ರದಲ್ಲಿವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು. ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

 • ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳ್ಳಲಿ

  ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಅನ್ನೆಹಾಳ್‌, ಹುಲ್ಲೂರು, ಮಾನಂಗಿ ಸಿದ್ದಾಪುರ, ಕಾಟಿಹಳ್ಳಿ, ಚಿಕ್ಕಪುರ,…

 • ಶ್ರೀಕೃಷ್ಣನ ತತ್ವಾದರ್ಶ ಪಾಲಿಸಿ: ಜಯಮ್ಮ

  ಚಿತ್ರದುರ್ಗ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಗೊಲ್ಲರಹಟ್ಟಿಗಳಲ್ಲಿ ಮನೆ ಮಾಡಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಬಹುದು ಎಂದು ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ…

 • ಜಂಗಮರು ಜ್ಞಾನ ಸಂಸ್ಕೃತಿಯ ಹರಿಕಾರರು

  ಚಿತ್ರದುರ್ಗ: ಜಂಗಮರು ತಮ್ಮ ವೈಯಕ್ತಿಕ ಬದುಕಿಗಿಂತ ಸಾಮಾಜಿಕ ಬದುಕಿಗೆ ಅರ್ಪಿಸಿಕೊಂಡು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಾರೆ. ಹಾಗಾಗಿ ಜಂಗಮರು ಜ್ಞಾನ ಸಂಸ್ಕೃತಿಯ ಹರಿಕಾರರು ಎಂದು ತುಮಕೂರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಶಾಲಾ…

 • ಮುರುಕಲು ಮನೆಯಾದ ಶಾಲಾ ಕೊಠಡಿ!

  ಹರಿಯಬ್ಬೆ ಹೆಂಜಾರಪ್ಪ ಚಿತ್ರದುರ್ಗ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ, ಆಂಗ್ಲ ಭಾಷೆ ವ್ಯಾಮೋಹ ಬಿಡಿ ಎನ್ನುವುದು ಘೋಷಣೆಗಷ್ಟೇ ಸೀಮಿತವಾಗುತ್ತದೆಯೇ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಅದೇ ರೀತಿ 1962ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿರುವ ಸಾವಿರಾರು ಮಕ್ಕಳು ಕಲಿತ ಕುಗ್ರಾಮದಲ್ಲಿನ ಸರ್ಕಾರಿ…

 • ತರಾಸು ಬರಹದಲ್ಲಿ ಪ್ರಾಂತೀಯ ಸೊಗಡು-ಸಾಮಾಜಿಕ ಪ್ರಜ್ಞೆ

  ಚಿತ್ರದುರ್ಗ: ಜಿಲ್ಲೆಯ ಹೆಮ್ಮೆಯ ಸಾಹಿತಿ ತರಾಸುರವರ ಬರವಣಿಗೆಯಲ್ಲಿ ಪ್ರಾಂತೀಯ ಸೊಗಡು ಮತ್ತು ಸಾಮಾಜಕ ಪ್ರಜ್ಞೆ ಇರುತ್ತಿತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ| ಪ್ರೇಮಪಲ್ಲವಿ ಹೇಳಿದರು. ಇಲ್ಲಿನ ತರಾಸು ರಂಗಮಂದಿರದಲ್ಲಿ ನಡೆಯುತ್ತಿರುವ…

 • ಜಿಲ್ಲಾದ್ಯಂತ ಸಂಭ್ರಮದ ಈದ್‌-ಉಲ್-ಫಿತರ್‌

  ಚಿತ್ರದುರ್ಗ: ನಗರ ಹಾಗೂ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬುಧವಾರ ರಂಜಾನ್‌ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಲಾಯಿತು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಲಾಯಿತು. ಕಳೆದ ಒಂದು ತಿಂಗಳಿಂದ ಮನೆಯಲ್ಲಿ ಮಕ್ಕಳಾದಿಯಾಗಿ ರೋಜಾ…

 • ಆಂಧ್ರದಿಂದ ನೀರು ತರುವ ಸ್ಥಿತಿ!

  ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬರ ಮುಂದುವರೆದಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಜನರು ನೆರೆಯ ಆಂಧ್ರಪ್ರದೇಶದ ಹಳ್ಳಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ…

ಹೊಸ ಸೇರ್ಪಡೆ