ಚಿತ್ರದುರ್ಗ: Chitradurga:

 • ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಪ್ರವಾಸಿಗರಿಗೆ ನಿರ್ಬಂಧ

  ಚಿತ್ರದುರ್ಗ: ಕೊರೊನಾ ವೈರಸ್‌ ಹರಡುವ ಭೀತಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೂ ತಟ್ಟಿದ್ದು, ಅರಣ್ಯ ಇಲಾಖೆ ಮಾ. 23 ರವರೆಗೆ ಮೃಗಾಲಯಕ್ಕೆ ಪ್ರವಾಸಿಗರು ಬಾರದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಶನಿವಾರ ತೆರೆದಿದ್ದ ಮೃಗಾಲಯ ಭಾನುವಾರ ಮಧ್ಯಾಹ್ನದಿಂದ ಇದ್ದಕ್ಕಿದ್ದಂತೆ ಬಂದ್‌ ಆಗಿತ್ತು….

 • ಸಾರ್ವಜನಿಕ ಸ್ಥಳಗಳ ಮೇಲೆ ನಿಗಾ ಇಡಿ

  ಚಿತ್ರದುರ್ಗ: ಕೊರೊನಾ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಪಕ್ಕದ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಗ್ರಾಮಗಳ ಮೂಲಕ ಸಂಚರಿಸುವ ಬಸ್‌ಗಳು ಹಾಗೂ ಅನ್ಯ ರಾಜ್ಯಗಳ ನಾಗರಿಕರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರ ಮೂಲಕ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚಿಸಿದರು. ಕೊರೊನಾ…

 • ಉತ್ತಮ ಮಾವು ಫಸಲಿಗೆ ಮುಂಜಾಗ್ರತಾ ಕ್ರಮ ಅನುಸರಿಸಿ

  ಚಿತ್ರದುರ್ಗ: ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿರುವ ಮಾವು ಈ ವರ್ಷ ಉತ್ತಮವಾಗಿ ಫಸಲು ಹಿಡಿದಿದ್ದು, ಅದನ್ನು ಉಳಿಸಿಕೊಂಡು ಉತ್ತಮ ಫಸಲು ಪಡೆಯಲು ರೈತರು ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಲು ತೋಟಗಾರಿಕೆ ಇಲಾಖೆ ಸೂಚಿಸಿದೆ. ಹಣ್ಣುಗಳ ರಾಜನೇ ಆಗಿರುವ ಮಾವನ್ನು…

 • ಅಪಘಾತ ನಿಯಂತ್ರಣಕ್ಕೆ ಬೇಕಿದೆ ಇಚ್ಛಾಶಕ್ತಿ

  ಚಿತ್ರದುರ್ಗ: ಅಪಘಾತಗಳ ನಿಯಂತ್ರಣಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂಬುದು ಕೋಟೆ ನಾಡಿನ ಜನರ ಆಕ್ರೋಶದ ಪ್ರಶ್ನೆ. ಇದರ ಬಗ್ಗೆ ಇರುವ ಅಸಹನೆ ಜಿಲ್ಲೆಯ ಸೋಷಿಯಲ್‌ ಮೀಡಿಯಾಗಳಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಹೆಲ್ಮೆಟ್‌ ಇಲ್ಲದೆ ಅಪಘಾತವಾಗಿ ದಿನವೂ ಪ್ರಾಣ ಕಳೆದುಕೊಳ್ಳುತ್ತಿದ್ದರೂ…

 • ಕೊರೊನಾ ತಡೆಗೆ ಜಾಗೃತಿ ಅಗತ್ಯ

  ಚಿತ್ರದುರ್ಗ: ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಪ್ರಚಾರ ವಾಹನಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಅರಿವು…

 • ಪ್ರಕೃತಿಗಿದೆ ದುರಹಂಕಾರ ಅಡಗಿಸುವ ಶಕ್ತಿ

  ಚಿತ್ರದುರ್ಗ: ವೈಭವೋಪೇತ, ಅದ್ಧೂರಿ ಬದುಕು ನಡೆಸುವವರ ಭ್ರಮೆಯನ್ನು ನಿಸರ್ಗ ಮುರಿದು ಹಾಕುತ್ತದೆ. ಎಲ್ಲರ ದುರಂಹಂಕಾರ ಅಡಗಿಸುವ ಶಕ್ತಿ ಪ್ರಕೃತಿಗಿದೆ ಎಂದು ಡಾ|ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಮುರುಘಾ ಮಠ, ಎಸ್‌ಜೆಎಂ ವಿದ್ಯಾಪೀಠ…

 • ಕೆಲಸಕ್ಕೆ ಹಿಂಜರಿಯುವ ಕಾಲ ಈಗಿಲ್ಲ

  ಚಿತ್ರದುರ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಗಂಡಿನಷ್ಟೇ ಸರಿಸಮನಾಗಿ ಕೆಲಸ ಮಾಡುತ್ತಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಎಲ್ಲಾ ಅಧಿಕಾರಿಗಳು ಮಹಿಳೆಯರೇ ಇರುವುದು ಖುಷಿಯ ವಿಚಾರ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಹೇಳಿದರು….

 • ಆರೋಗ್ಯ ಮೇಳ ಆಯೋಜನೆಗೆ ಸೂಚನೆ

  ಚಿತ್ರದುರ್ಗ: ಸರ್ಕಾರದ ಸೂಚನೆಯಂತೆ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚು ಸಂಖ್ಯೆಯಲ್ಲಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ಹೇಳಿದರು. ಆರೋಗ್ಯ…

 • ರೋಗ ಬಾರದಂತೆ ಜಾಗ್ರತೆ ವಹಿಸಿ

  ಚಿತ್ರದುರ್ಗ: ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗ ಬರುವುದಕ್ಕಿಂತ ಮುಂಚೆಯೇ ಜಾಗ್ರತೆ ವಹಿಸಬೇಕು. ಅದಕ್ಕಾಗಿ ಸ್ವತ್ಛತೆ ಕಾಪಾಡಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಕೆಮ್ಮ ದಮ್ಮು ಬಾರದಂತೆ ನೋಡಿಕೊಂಡು ಸುರಕ್ಷಿತವಾಗಿರಿ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು…

 • ಕೋಟೆನಾಡಿಗೆ ಬೇವು-ಬೆಲ್ಲ!

  ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಜನತೆಗೆ ಯುಗಾದಿಗೆ ಮೊದಲೇ ಬೇವು-ಬೆಲ್ಲ ಎರಡನ್ನೂ ನೀಡಿದಂತಾಗಿದೆ. ಜಿಲ್ಲೆಯ ಮಟ್ಟಿಗೆ ಬಜೆಟ್‌ನಲ್ಲಿ ಬೇವೂ-ಬೆಲ್ಲ ಎರಡೂ ಇದೆ. ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ…

 • ಹಕ್ಕು-ಕರ್ತವ್ಯ ಅರಿತು ಪಾಲಿಸಿ

  ಚಿತ್ರದುರ್ಗ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ. ಎಲ್ಲರೂ ನಿಯಮಗಳನ್ನು ಅರಿತು ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್‌.ವೈ. ವಟವಟಿ ಕರೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ನಗರಸಭೆ,…

 • ಸಾಮಾಜಿಕ ಅನಿಷ್ಟ ಪದ್ಧತಿ ನಿವಾರಣೆಗೆ ಶಿಕ್ಷಣವೇ ಅಸ್ತ್ರ: ಡಿಡಿಪಿಐ

  ಚಿತ್ರದುರ್ಗ: ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ. ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಹೇಳಿದರು….

 • ರಾಜಕೀಯ ವೈಭವೀಕರಣದಿಂದ ಪ್ರಗತಿ ಕುಂಠಿತ

  ಚಿತ್ರದುರ್ಗ: ಗ್ರಾಮೀಣ ಭಾಗದ ಒಂದೊಂದು ಮನೆಯಲ್ಲೂ ಮೂರ್‍ನಾಲ್ಕು ಪಕ್ಷ, ದ್ವೇಷ, ಅಸೂಯೆ, ಗಲಭೆ, ರಾಜಕಾರಣ ಹೆಚ್ಚಾಗಿದೆ. ಇಂತಹ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ಕನಸಾಗಿಯೇ ಉಳಿದಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಎಚ್‌. ಹನುಮಂತಪ್ಪ ಬೇಸರ…

 • 6ರಿಂದ ತಿಂಗಳ ಕಾಲ ಜಲಾಶಯದಿಂದ ಕಾಲುವೆಗೆ ನೀರು

  ಚಿತ್ರದುರ್ಗ: ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯದಿಂದ ಕಾಲುವೆಗಳಿಗೆ ಮಾರ್ಚ್‌ 6 ರಿಂದ ಒಂದು ತಿಂಗಳ ಕಾಲ ನೀರು ಹರಿಸುವಂತೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯೂರು ಘಟಕದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಕುರಿತು ಶುಕ್ರವಾರ…

 • ಜಿಲ್ಲೆಯ 12 ಶಾಲೆಗಳಿಗೆ ಮಧ್ಯಪ್ರದೇಶ ಪ್ರೇರಣಾ ತಂಡ ಭೇಟಿ

  ಚಿತ್ರದುರ್ಗ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗಾಗಿ ಅನುಷ್ಠಾನಗೊಂಡಿರುವ ಪ್ರೇರಣಾ ಕಾರ್ಯಕ್ರಮದ ವೀಕ್ಷಣೆಗಾಗಿ ಮಧ್ಯಪ್ರದೇಶದ ಸಮಾವೇಶ ಸೊಸೈಟಿ ಫಾರ್‌ ಡೆವಲಪ್‌ಮೆಂಟ್‌ ತಂಡದ ನಿರ್ದೇಶಕರು ಹಾಗೂ ಸದಸ್ಯರು ಫೆ. 26 ರಿಂದ 28 ರವರೆಗೆ ಜಿಲ್ಲೆಯ 12 ಶಾಲೆಗಳಿಗೆ ಪ್ರವಾಸ ಮಾಡಿ ಪ್ರೇರಣಾ…

 • ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ಕೊಡಿ

  ಚಿತ್ರದುರ್ಗ: ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್‌ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ…

 • ಸರ್ಕಾರಿ ಶಾಲೆ ಉಳಿವಿಗೆ ಮುಂದಾಗಿ

  ಚಿತ್ರದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಒತ್ತು ನೀಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರ ಕೂಡಾ ಸರ್ಕಾರಿ ಶಾಲೆಗಳ ಉಳಿವಿಗೆ ಗಮನಹರಿಸಬೇಕಾಗಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ…

 • ಸರ್ಕಾರಿ ಸೌಲಭ್ಯ ಪಡೆಯಲು ಹಿಂದೇಟು ಏಕೆ?

  ಚಿತ್ರದುರ್ಗ: ವಿವಿಧ ಇಲಾಖೆಗಳಲ್ಲಿ ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳಿದ್ದು, ನರೇಗಾ ಅಡಿ ಬಹಳಷ್ಟು ಅನುಕೂಲಗಳಿವೆ. ಆದರೆ ಜಿಲ್ಲೆಯ ಜನತೆ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ. ಇದಕ್ಕೆ ಮಾಹಿತಿ ಕೊರತೆಯೋ ಅಥವಾ ಜನರ ನಿರಾಸಕ್ತಿಯೋ ತಿಳಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ…

 • ಜಾಗರಣೆ-ಶಿವ ಧ್ಯಾನ ಮಾಡಿದ ಭಕ್ತ ಗಣ

  ಚಿತ್ರದುರ್ಗ: ಜಿಲ್ಲೆಯಾದ್ಯಂತ ಶಿವರಾತ್ರಿ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಬಹುತೇಕ ಎಲ್ಲಾ ಶಿವನ ದೇಗುಲಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ, ರುದ್ರಾಭಿಷೇಕ, ಪೂಜೆ, ಭಜನೆ, ಶಿವನಾಮ ಸ್ಮರಣೆ ಮಾಡಲಾಯಿತು. ನಗರದ ನೀಲಕಂಠೇಶ್ವರ ದೇವಸ್ಥಾನ, ಪಾತಾಳಲಿಂಗೇಶ್ವರ ದೇವಸ್ಥಾನ, ಕರುವರ್ತಿ ಈಶ್ವರ ದೇವಸ್ಥಾನ ಸೇರಿದಂತೆ ಎಲ್ಲೆಡೆಯೂ…

 • ಸರ್ವಜ್ಞ ಎಲ್ಲರ ಅಚ್ಚು ಮೆಚ್ಚಿನ ಕವಿ

  ಚಿತ್ರದುರ್ಗ: ತ್ರಿಪದಿಗಳ ಮೂಲಕ ಸಮಾದ ಅಂಕುಡೊಂಕುಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ಸರ್ವಜ್ಞರ ತ್ರಿಪದಿಗಳನ್ನು ಟೀಕಿಸುವ ಸಾಹಿತ್ಯ ಇದುವರೆಗೆ ಬಂದಿಲ್ಲ ಎಂದು ಪರಶುರಾಂಪುರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಟಿ. ಮಹಾಂತೇಶ್‌ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ಹೊಸ ಸೇರ್ಪಡೆ