ಜೆಡಿಎಸ್‌

 • ಮರಳಿ ಮನೆಗೆ ಬನ್ನಿ! ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ಹೊರಟ್ಟಿ ಆಹ್ವಾನ

  ಬೆಂಗಳೂರು:ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದವರು. ಹೀಗಾಗಿ ಉಮೇಶ್ ಕತ್ತಿ ಅವರಿಗೆ ಮರಳಿ ಬನ್ನಿ ಎಂದು ಹೇಳಿದ್ದೇವೆ ಎಂಬುದಾಗಿ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಬುಧವಾರ ಶಾಸಕರ ಭವನದಲ್ಲಿ ಬಿಜೆಪಿಯ ಹಿರಿಯ ಮುಖಂಡ, ಶಾಸಕ ಉಮೇಶ್ ಕತ್ತಿ ಅವರ…

 • ಜೆಡಿಎಸ್‌ನಿಂದ ಕಳಚಲಿದೆ ಇನ್ನೊಂದು ವಿಕೆಟ್‌?

  ಬೆಂಗಳೂರು: ಹಿರಿಯ ರಾಜಕಾರಣಿ ಎಚ್‌.ವಿಶ್ವನಾಥ್‌ ನಂತರ ಜೆಡಿಎಸ್‌ನ ಮೈಸೂರು ಭಾಗದ ಮತ್ತೊಬ್ಬ ಪ್ರಭಾವಿ ಮುಖಂಡ ಜಿ.ಟಿ.ದೇವೇಗೌಡರ ಸೆಳೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ನೆಲೆ ಕಲ್ಪಿಸಲು ಬಿ.ಎಸ್‌.ಯಡಿಯೂರಪ್ಪ ರೂಪಿಸಿರುವ ಕಾರ್ಯತಂತ್ರವಿದು…

 • ಋಣಮುಕ್ತ ಕಾಯ್ದೆಗೆ ಜೆಡಿಎಸ್‌ “ಸಂಪರ್ಕ ಸೇತು’

  ಬೆಂಗಳೂರು: “ಋಣಮುಕ್ತ ಪರಿಹಾರ ಕಾಯ್ದೆ’ ಉಪಯೋಗ ಸಂಬಂಧ “ಸಂಪರ್ಕ ಸೇತು’ವಾಗಿ ಕೆಲಸ ಮಾಡಲು ಜೆಡಿಎಸ್‌ ನಿರ್ಧರಿಸಿದ್ದು, ಇದಕ್ಕಾಗಿಯೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲು ಮುಂದಾಗಿದೆ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ಮನ್ನಾಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ…

 • ಜೆಡಿಎಸ್‌ ಶಾಸಕರ ತಿಂಗಳ ವೇತನ ನೀಡಲು ತೀರ್ಮಾನ

  ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ನ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ತಮ್ಮ ಒಂದು ತಿಂಗಳ ವೇತನ ನೀಡಲು ತೀರ್ಮಾನಿಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಸಲುವಾಗಿ ನಮ್ಮ ಪಕ್ಷದ ಎಲ್ಲ ಶಾಸಕರು ಒಂದು ತಿಂಗಳ ವೇತನ ನೀಡಲು…

 • ಸಂತ್ರಸ್ತರ ಸಂಕಷ್ಟದತ್ತ ಸರ್ಕಾರ ಗಮನ ಹರಿಸಲಿ

  ಬೆಂಗಳೂರು: ‘ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು ರಾಜ್ಯ ಸರ್ಕಾರ ಪರಿಹಾರ ಕಾಮಗಾರಿಗಳತ್ತ ಗಮನಹರಿಸಬೇಕಾಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ‘ಇಂತಹ ಸಂದರ್ಭದಲ್ಲಿ ನಾನು ಯಾವುದೇ ಟೀಕೆ ಮಾಡಲು ಹೋಗುವುದಿಲ್ಲ. ಆದರೆ, ಸಂಕಷ್ಟದಲ್ಲಿರುವ…

 • ಮೋದಿ- ಶಾ ತೀರ್ಮಾನ ಏನೆಂದು ಯಾರಿಗ್ಗೊತ್ತು?: ಎಚ್‌ಡಿಡಿ

  ಬೆಂಗಳೂರು:ಯಡಿಯೂರಪ್ಪ ಮೂರು ವರ್ಷ ಎಂಟು ತಿಂಗಳು ಅಧಿಕಾರ ನಡೆಸಲಿ, ನನ್ನದೇನೂ ಅಭ್ಯಂತರವಿಲ್ಲ. ಆದರೆ, ನರೇಂದ್ರಮೋದಿ ಹಾಗೂ ಅಮಿತ್‌ ಶಾ ಏನು ತೀರ್ಮಾನ ಕೈಗೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ…

 • ಮೈತ್ರಿ ಚರ್ಚೆಗೆ ಇಂದು ಜೆಡಿಎಸ್‌ ಸಮಾವೇಶ

  ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನ ಬೆನ್ನಲ್ಲೇ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್‌, ಬುಧವಾರ ನಗರದ ಅರಮನೆ ಮೈದಾನದಲ್ಲಿ ಸಮಾವೇಶ ಆಯೋಜಿಸಿದ್ದು, ಕಾಂಗ್ರೆಸ್‌ ಜತೆ ಮೈತ್ರಿ ಮುಂದು ವರಿಸಬೇಕಾ? ಬೇಡವಾ? ಎಂಬ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಸಮಾವೇಶಕ್ಕೆ…

 • ಜೆಡಿಎಸ್‌ ಕಡೆಗಣಿಸಿದ್ದ ಕಾಂಗ್ರೆಸ್ಸಿಗರು: ಶಾಸಕರ ಆರೋಪ

  ನೆಲಮಂಗಲ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವನ್ನು ಕಡೆಗಣಿಸಿದರು. ಈ ಕಾರಣದಿಂದಲೇ ಸರ್ಕಾರ ಪತನವಾಗಿದ್ದು ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಪತ್ರಗಳನ್ನು ಕಡೆಗಣಿಸುತ್ತಿದ್ದರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌…

 • ರಮೇಶ್‌ ಬಾಬು ಜೆಡಿಎಸ್‌ ರಾಷ್ಟ್ರೀಯ ಪ್ರ.ಕಾರ್ಯದರ್ಶಿ

  ಬೆಂಗಳೂರು: ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರನ್ನು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಯಾ ಗಿದ್ದ ಡ್ಯಾನಿಶ್‌ ಅಲಿಯವರು ಬಿಎಸ್‌ಪಿಗೆ ಹೋದ ನಂತರ…

 • ದೋಸ್ತಿ ಖೇಲ್ ಖತಂ?

  ಬೆಂಗಳೂರು: ಸರ್ಕಾರ ಪತನಗೊಂಡ ಬೆನ್ನಲ್ಲೇ ದೂರ ದೂರ ಸರಿಯಲಾರಂಭಿಸಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಮುಂಬರುವ ಉಪಚುನಾವಣೆಯಲ್ಲಿ ಪ್ರತ್ಯೇಕವಾಗಿ ಸೆಣಸಲು ಮುಂದಾಗಿರುವುದು ಬಹುತೇಕ ಖಚಿತವಾಗಿದೆ. ರಾಜ್ಯ ವಿಧಾನಸಭೆಯ ಹದಿನೇಳು ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ಎದುರಿಸಲು ಮೂರೂ…

 • ಕಾಂಗ್ರೆಸ್ ಆಯ್ತು, ಜೆಡಿಎಸ್ ನ ಮೂವರು ಅನರ್ಹ ಶಾಸಕರು ಪಕ್ಷದಿಂದ ಉಚ್ಛಾಟನೆ

  ಬೆಂಗಳೂರು: ಬಂಡಾಯ ಸಾರಿದ್ದ 14 ಅನರ್ಹ ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಸದಸ್ಯತ್ವದಿಂದ ವಜಾಗೊಳಿಸಿದ ಬೆನ್ನಲ್ಲೇ ಜೆಡಿಎಸ್ ಕೂಡಾ ಮೂವರು ಅನರ್ಹ ಶಾಸಕರನ್ನು ಸದಸ್ಯತ್ವದಿಂದ ಬುಧವಾರ ವಜಾಗೊಳಿಸಿದೆ. ಮಂಗಳವಾರ ಕಾಂಗ್ರೆಸ್ ನ 14 ಮಂದಿ ಅನರ್ಹ ಶಾಸಕರನ್ನು ಪಕ್ಷದಿಂದ…

 • ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಬೇಡವೆಂದ ಕೈ ಶಾಸಕರು

  ಬೆಂಗಳೂರು: ಮುಂಬರುವ ಉಪ ಚುನಾವಣೆಗಳಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದು ಬೇಡ ಎಂದು ಕಾಂಗ್ರೆಸ್‌ ಶಾಸಕರು ಪಕ್ಷದ ನಾಯಕರಿಗೆ ಮುಂದೆ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಮೈತ್ರಿ…

 • ಜೆಡಿಎಸ್‌ ಮಹಿಳಾ ಸಮಾವೇಶ: ಚರ್ಚೆ

  ಬೆಂಗಳೂರು: ಮುಂದಿನ ತಿಂಗಳು ಜೆಡಿಎಸ್‌ ಮಹಿಳಾ ಸಮಾವೇಶ ಆಯೋಜಿಸುವ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೋಮವಾರ ಪಕ್ಷದ ಕಚೇರಿಯಲ್ಲಿ ಮಹಿಳಾ ಮುಖಂಡರು ಹಾಗೂ ನಾಯಕರ ಜತೆ ಸಮಾಲೋಚನೆ ನಡೆಸಿದರು. ಆ. 7ರಂದು ಮಹಿಳಾ ಸಮಾವೇಶ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ಧತೆ…

 • ಸ್ಪೀಕರ್ ತೀರ್ಪು ಸ್ವಾಗತಿಸುತ್ತೇವೆ: ಜೆಡಿಎಸ್‌ ವಕ್ತಾರ ರಮೇಶ್ ಬಾಬು

  ಬೆಂಗಳೂರು: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ತೀರ್ಪು ಹೊರಡಿಸಿದ್ದು, ಜಾತ್ಯಾತೀತ ಜನತಾ ದಳ ಈ ತೀರ್ಪನ್ನು ಸ್ವಾಗತಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್‌ ವಕ್ತಾರ ರಮೇಶ್ ಬಾಬು, ಸ್ಪೀಕರ್ ತೀರ್ಪು ಸ್ವಾಗತಿಸುತ್ತೇವೆ. ಪಕ್ಷದ ಬಿ…

 • ಬಿಜೆಪಿಯತ್ತ ಜೆಡಿಎಸ್‌ ಶಾಸಕರ ಒಲವು?

  ಬೆಂಗಳೂರು: ಕಾಂಗ್ರೆಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿ ಹದಿನಾಲ್ಕು ತಿಂಗಳಿಗೇ ಪತನವಾದ ಬೆನ್ನಲ್ಲೇ ಜೆಡಿಎಸ್‌ ಶಾಸಕರಲ್ಲಿ ಕಮಲ ಪಕ್ಷದತ್ತ ಒಲವು ಶುರುವಾಗಿದ್ದು, ಈಗಲ್ಲದಿ ದ್ದರೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಮರು ಮೈತ್ರಿಗೆ ‘ಚಾಯ್ಸ’ ಇಟ್ಟುಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ….

 • ಜೆಡಿಎಸ್‌ ಸಂಘಟನೆ ನಮ್ಮ ಗುರಿ’

  ಬೆಂಗಳೂರು: ‘ಮೈತ್ರಿ ಸರ್ಕಾರ ಪತನವಾಗಿರುವುದಕ್ಕೆ ನಮಗೇನೂ ತೊಂದರೆ ಇಲ್ಲ. ಸರ್ಕಾರ ರಚನೆ ಮಾಡಿ ನನ್ನ ಮಗ ಎಷ್ಟು ಕಷ್ಟ ಪಟ್ಟಿದ್ದಾನೆ ಎಂಬುದು ನನಗೆ ಗೊತ್ತಿದೆ. ಇದೇ ಜೆಪಿ ಭವನದಲ್ಲಿ ಹದಿನೈದು ನಿಮಿಷ ಕಣ್ಣೀರು ಹಾಕಿದ್ದಾನೆ’ ಎಂದು ಮಾಜಿ ಪ್ರಧಾನಿ…

 • ಬಿಎಸ್ ವೈ ಹೇಳಿಕೆಗೆ ಸ್ವಾಗತ; ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಹೇಳಿದ್ದೇನು?

  ಬೆಂಗಳೂರು:ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಸ್ವಾಮಿ ಸಿಎಂ ಆಗಿ ಎಷ್ಟು ನೋವು ತಿಂದಿದ್ದಾರೆ, ಎಷ್ಟು ಕಷ್ಟ ಪಟ್ಟಿದ್ದಾರೆ ಎಲ್ಲಾ ಗೊತ್ತಿದೆ. ಸರಕಾರ ಹೋದರೂ ಚಿಂತೆ ಇಲ್ಲ. ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ….

 • ಜನರ ಕಣ್ಣಲ್ಲಿ ಹಾಸ್ಯದ ವಸ್ತುಗಳಾದವರು

  ವಿಶ್ವಾಸಮತ ಯಾಚನೆಯ ಸರ್ಕಸ್ಸಿನ ಫ‌ಲಾಫ‌ಲ ಏನೇ ಇರಲಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೆರಡೂ ಜನರ ಕಣ್ಣಲ್ಲಿ ಹಾಸ್ಯಾಸ್ಪದ ವಸ್ತುಗಳಾಗಿರುವುದಂತೂ ನಿಜ. ಎರಡೂ ಪಕ್ಷಗಳ ನಾಯಕರು ಬಂಡಾಯ ಘೋಷಿಸಿದ ಭಿನ್ನಮತೀಯರ ನಡವಳಿಕೆಗಳ ಆಳ ಅಗಲಗಳನ್ನು ತಪ್ಪಾಗಿ ಲೆಕ್ಕ ಹಾಕಿದರು. ರಾಜೀನಾಮೆ…

 • ಜಿಲ್ಲೆಯಲ್ಲಿ ಮುಗಿದ ಜೆಡಿಎಸ್‌ ಅಧಿಕಾರ ವೈಭವ

  ಮಂಡ್ಯ: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನದೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಅಧಿಕಾರ ವೈಭವ ಮುಗಿದಂತಾಗಿದೆ. ವಿಶ್ವಾಸಮತದಲ್ಲಿ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಸಕರು ಹೊಂದಿದ್ದ ಸಚಿವ ಸ್ಥಾನ ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ…

 • 4 ಕ್ಷೇತ್ರಗಳ ಮುಖಂಡರ ಸಭೆ ಕರೆದ ಎಚ್‌ಡಿಡಿ

  ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಇದಕ್ಕೆ ಕಾರಣರಾದ ಬೆಂಗಳೂರು ನಗರದ ಶಾಸಕರ ಕ್ಷೇತ್ರಗಳ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೃಷ್ಟಿ ಹರಿಸಿದ್ದು, ಶನಿವಾರ ಮತ್ತು ಭಾನುವಾರ ನಾಲ್ಕು ಕ್ಷೇತ್ರಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ…

ಹೊಸ ಸೇರ್ಪಡೆ