ತರೀಕೆರೆ: Tarikere

 • ಪೆಟ್ಟಿಗೆ ಅಂಗಡಿ ತೆರವು ಕಾರ್ಯಾಚರಣೆ

  ತರೀಕೆರೆ: ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ, ಸಾರ್ವಜನಿಕ ಆಸ್ಪತ್ರೆ ಮಾರ್ಗದಲ್ಲಿದ್ದ ಮತ್ತು ಬಯಲುರಂಗ ಮಂದಿರದಲ್ಲಿ ಹಾಕಿಕೊಂಡಿದ್ದ ಪೆಟ್ಟಿಗೆ ಅಂಗಡಿ, ದೂಡುವ ಕೈಗಾಡಿಗಳನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿದರು. ಬುಧವಾರ ಬೆಳಗ್ಗೆ…

 • ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ

  ತರೀಕೆರೆ: ಪೌರ ಕಾರ್ಮಿಕರಿಗೆ ಶಾಶ್ವತ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಪುರಸಭೆ, ನಗರಸಭೆ ಮತ್ತು ಪಪಂನಲ್ಲಿ ವಸತಿ ಗೃಹ ನಿರ್ಮಿಸುತ್ತಿದೆ ಎಂದು ಶಾಸಕ ಡಿ.ಎಸ್‌. ಸುರೇಶ್‌ ಹೇಳಿದರು. ಪಟ್ಟಣದ ಬಾಪೂಜಿ ಕಾಲೋನಿಯಲ್ಲಿ 1.30 ಕೋಟಿ ವೆಚ್ಚದ ನಾಲ್ಕು ವಸತಿ…

 • ಮೂರು ದಿನಗಳಕಾಲ ಪೋಲಿಯೋ ಲಸಿಕೆ ಅಭಿಯಾನ

  ತರೀಕೆರೆ: ಜನವರಿ 19ರಂದು ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 3 ದಿನಗಳ ಕಾಲ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌ ತಿಳಿಸಿದರು. ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ…

 • ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿಗೆ ಬದ್ಧ

  ತರೀಕೆರೆ: ನಾನು ಮೊದಲ ಬಾರಿ ಶಾಸಕನಾಗಿದ್ದ ಸಮಯದಲ್ಲಿ ಬಾವಿಕೆರೆಯಿಂದ ಕರಕುಚ್ಚಿ ಗ್ರಾಮದ ಸಿದ್ದೇಗೌಡರ ಸರ್ಕಲ್‌ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ನಂತರ ಬಂದ ಜನಪ್ರತಿನಿ ಧಿಗಳು ರಸ್ತೆ ಕಡೆ ಗಮನ ಹರಿಸದ ಕಾರಣ ಪೂರ್ಣವಾಗಿ ಹಾಳಾಗಿದೆ. ಪುನಃ ಈ ರಸ್ತೆ…

 • ಪ್ರಧಾನಿ ಆದರ್ಶ ಗ್ರಾಮವಾಗಿ ಕಾಮನದುರ್ಗ ಆಯ್ಕೆ

  ತರೀಕೆರೆ: ಗ್ರಾಪಂನ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಕಡೆಗೆ ಪಡೆದು ಉತ್ತಮ ಗ್ರಾಮ ಪಂಚಾಯಿತಿಯಾಗಿರುವ ಕಾಮನದುರ್ಗ ಪಂಚಾಯಿತಿ ಗಾಂಧಿ  ಗ್ರಾಮ ಪುರಸ್ಕಾರ ಪಡೆದು ಈಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಮತ್ತಷ್ಟು…

 • ಸರ್ಕಾರಿ ಪ್ರೌಢಶಾಲೆಗೆ ಸುವರ್ಣ ಸಂಭ್ರಮ

  „ಶೇಖರ್‌ ವಿ.ಗೌಡ ತರೀಕೆರೆ: ಕಳೆದ 50 ವರ್ಷಗಳಿಂದ ನಿರಂತರವಾಗಿ ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಅಕ್ಷರ ದಾಸೋಹದ ಜೊತೆಗೆ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ಇಲ್ಲಿ ಸಾವಿರಾರು ಪ್ರತಿಭೆಗಳು…

 • ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ವ ಸಿದ್ಧತೆ

  ತರೀಕೆರೆ: ಜನವರಿ 14 ಮತ್ತು 15 ರಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ 847ನೇ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವವನ್ನು ಆಚರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಎನ್‌.ರಾಜು ಹೇಳಿದರು. ಶ್ರೀ…

 • ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

  ತರೀಕೆರೆ: ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಹಂತ ಹಂತವಾಗಿ ತಾಲೂಕಿನಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಸರಕಾರದ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ…

 • ಉತ್ತಮ ಪರಿಸರದಿಂದ ಒತ್ತಡ ಶಮನ

  ತರೀಕೆರೆ: ದೈನಂದಿನ ಬದುಕಿನಲ್ಲಿ ಒತ್ತಡದ ನಡುವೆ ಜೀವನ ಸಾಗಿಸುತ್ತಿರುವ ಮನುಷ್ಯ ಜೀವನದುದ್ದಕ್ಕೂ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದಾನೆ. ಉತ್ತಮ ಪರಿಸರ, ಪ್ರಕೃತಿಯ ನಡುವೆ ಜೀವಿಸಿದರೆ ಒತ್ತಡ ಶಮನವಾಗುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು….

 • ಜನರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ

  ತರೀಕೆರೆ: ಉಪ ವಿಭಾಗದ ವ್ಯಾಪ್ತಿಯಲ್ಲಿ ಬಗೆಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವ್ಯಾಪ್ತಿ ಮೀರಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸುಳ್ಳು ಹೇಳಿ ನಿಮ್ಮನ್ನು ಸಮಾಧಾನಪಡಿಸುವ ಕೆಲಸ ಮಾಡುವುದಿಲ್ಲ ಎಂದು ಹಿರಿಯ ಉಪ ವಿಭಾಗಾಧಿಕಾರಿ ಬಿ.ಆರ್‌.ರೂಪಾ ತಿಳಿಸಿದರು….

 • ಕುವೆಂಪು ವಿವಿ ರಾಜ್ಯದಲ್ಲೇ ಪ್ರಥಮ ಸ್ಥಾನ

  ತರೀಕೆರೆ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯಿಂದ ಎಲ್ಲಾ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಕುವೆಂಪು ವಿವಿ ರಾಜ್ಯದ ವಿವಿಗಳಲ್ಲಿ ಪ್ರಥಮ ಸ್ಥಾನ ಹಾಗೂ 62 ವಿಶ್ವವಿದ್ಯಾಲಯಗಳಲ್ಲಿ 3ನೇ ಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಕುವೆಂಪು ವಿವಿ ಅನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು…

 • ಒತ್ತಡಕ್ಕೆ ಮಣಿಯದೇ ಜನರ ಕೆಲಸ ಮಾಡಲು ಮುಂದಾಗಿ

  ತರೀಕೆರೆ: ಅಧಿಕಾರಿಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಬೇಕು. ಒತ್ತಡದಿಂದ ತಪ್ಪುಗಳಾದಲ್ಲಿ ಅಧಿಕಾರಿಗಳನ್ನು ಅದರ ಹೊಣೆಯನ್ನು ಹೊರಬೇಕಾಗುತ್ತದೆ. ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಪ್ರಭಾರ ಡಿವೈಎಸ್‌ಪಿ ಸಚಿನ್‌ಕುಮಾರ್‌ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ…

 • ಗಣಪತಿ ಮೂರ್ತಿ ಅದ್ದೂರಿ ವಿಸರ್ಜನೆ

  ತರೀಕೆರೆ: ಪಟ್ಟಣದ ಶ್ರೀ ಸಾಲುಮರದಮ್ಮ ದೇವಸ್ಥಾನದ ಬಳಿ ಶ್ರೀ ಗಣೇಶೋತ್ಸವದ ದಿನ ಪ್ರತಿಷ್ಠಾಪನೆಗೊಂಡಿದ್ದ ಹಿಂದು ಮಹಾಸಭಾ ಗಣಪತಿ ಮೂರ್ತಿಯನ್ನು ಚಿಕ್ಕೆರೆಯಲ್ಲಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ, ಲಿಂಗದಹಳ್ಳಿ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ಸಾವಿರಾರು…

 • ತುಂಬಿದ ಭದ್ರೆಗೆ ಸಂಸದೆ ಶೋಭಾ ಬಾಗಿನ

  ತರೀಕೆರೆ: ನೀರಿಲ್ಲದೆ ಮಾನವನ ಬದುಕೇ ಇಲ್ಲ. ಕೆಲವಡೆ ಅತಿವೃಷ್ಟಿ ಮತ್ತೆ ಕೆಲವೆಡೆ ಅನಾವೃಷ್ಟಿ ಕಾಡುತ್ತಿದೆ. ನೀರಿನ ಸದ್ಬಳಕೆ ಮಾಡಬೇಕು. ನೀರನ್ನು ಪೋಲು ಮಾಡಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭದ್ರಾ ನದಿಗೆ…

 • ಹದಗೆಟ್ಟ ರಸ್ತೆ ಕಾಮಗಾರಿಗೆ ಆಗ್ರಹ

  ತರೀಕೆರೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬದ ಕುರಿತು ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸದಸ್ಯ ಕೆಂಪೇಗೌಡ ಅವರು, ಸಿದ್ಧೇಶ್ವರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ…

 • ಭದ್ರಾ ಜಲಾಶಯದ ಭದ್ರತೆಗೆ ಅಗತ್ಯ ಕ್ರಮ

  ತರೀಕೆರೆ: ತಾಲೂಕಿನ ವ್ಯಾಪ್ತಿಯಲ್ಲಿರುವ ಭದ್ರಾ ಜಲಾಶಯದ ಭದ್ರತೆ ಮತ್ತು ಒಂದೊಮ್ಮೆ ವಿಪತ್ತು ಸಂಭವಿಸಿದಲ್ಲಿ ಪೂರಕ ಕ್ರಮಗಳನ್ನು ರೂಪಿಸಿಕೊಳ್ಳುವ ಕುರಿತು ತರೀಕೆರೆ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಲಾಯಿತು ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಹೇಳಿದರು. ಪಟ್ಟಣದ ಉಪ ವಿಭಾಗಾಧಿಕಾರಿಗಳ…

 • ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ

  ತರೀಕೆರೆ: ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮಾನಸಿ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಿಂದ ಕಡೂರು ಪಟ್ಟಣಕ್ಕೆ ಕೊಂಡೊಯ್ಯಲಾಗುತ್ತಿರುವ ಪೈಪ್‌ಲೈನ್‌ಮೂಲಕ ಕೆರೆಗೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ, ನೀರು ಪೂರೈಕೆಗೆಕ್ರಮ ಕೈಗೊಳ್ಳಬೇಕೆಂದು ಶಾಸಕ ಡಿ.ಎಸ್‌.ಸುರೇಶ್‌…

 • ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ

  ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವಿಲ್ಲದ, ಕಲಬೆರಕೆರಹಿತ ಹಲಸಿನ ಹಣ್ಣು ನಿರ್ಲಕ್ಷಕ್ಕೆ ಒಳಗಾಗಿದೆ. ರೈತರಿಗೆ ಹಲಸಿನ ಹಣ್ಣಿನ ಮಹತ್ವದ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು. ಪಟ್ಟಣದ ಡಾ| ಅಂಬೇಡ್ಕರ್‌ ಭವನದಲ್ಲಿ…

 • ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಶುರು

  ಶೇಖರ್‌ ವಿ.ಗೌಡ ತರೀಕೆರೆ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಲಿಂಗದಹಳ್ಳಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಆಲೂಗಡ್ಡೆ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ನಡೆದಿತ್ತು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ ಬಾರದ ಕಾರಣ ಬಿತ್ತನೆ ಕುಂಠಿತವಾಗಿದ್ದು, ಮಳೆ ನಿರೀಕ್ಷೆಯಲ್ಲಿರುವ…

 • ಕಾಡಾನೆ ದಾಳಿ: ಬಾಳೆ ಬೆಳೆ ನಾಶ

  ತರೀಕೆರೆ: ತಾಲೂಕಿನ ಲಿಂಗದಹಳ್ಳಿ ಹೋಬಳಿ ತಣಿಗೆಬೈಲು, ಹುಣಸೆಬೈಲು, ಜೈಪುರ, ತಿಮ್ಮನಬೈಲು ಗ್ರಾಮಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ರೈತರ ಜಮೀನಿನಲ್ಲಿ ಬೆಳೆದು ನಿಂತಿರುವ ಲಕ್ಷಾಂತರ ರೂ.ಮೌಲ್ಯದ ಫಸಲು ನಾಶ ಮಾಡುತ್ತಿವೆ. ಕಾಡಾನೆ ಜೊತೆಗೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿರುವುದರಿಂದ…

ಹೊಸ ಸೇರ್ಪಡೆ