CONNECT WITH US  

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

 ಜೈಲರ್‌: ಏನಪ್ಪಾ ನಿನ್ನನ್ನು ನೋಡಲು ಯಾರೂ ಬರ್ತಾ ಇಲ್ವಲ್ಲಾ ಯಾಕೆ?
ಪಚ್ಚ: ಹೇಗೆ ಬರ್ತಾರೆ ಸಾರ್‌, ನನ್ನ ಇಡೀ ಕುಟುಂಬ ಇಲ್ಲೇ ಇದೆ.

ಪಚ್ಚ: ಒಂದು ಇಂಜೆಕ್ಷನ್‌ ಕೊಟ್ಟು ಎರಡು ಡಜನ್‌ ಮಾತ್ರೆ ಕೊಟ್ಟಿದ್ದೀರಲ್ಲ.. ಯಾಕ್ರೀ ಹೀಗೆ..?
ಡಾಕ್ಟ್ರು  : ಇಂಜೆಕ್ಷನ್‌ ನೀವು ಬದ್‌ಕೋಕೆ, ಮಾತ್ರೆ ಕೊಟ್ಟಿದ್ದು ನಾನು ಬದ್ಕೋಕೆ!

 ಗುಂಡ: ನಮ್ಮ ದೇಶ ವಿವಿಧ ಕಾರಣಕ್ಕೆ ಹಿಂದುಳಿದಿದೆ. ಮುಂದೆ ಹೋಗ್ತಾ ಇಲ್ಲ, ಯಾಕೆ?
ಪಚ್ಚ: ಹಿಮಾಲಯ ಪರ್ವತ ಅಡ್ಡ ಇದೆ ಅದಕ್ಕೆ!

 ಪಚ್ಚ: ದೋಸೆ ಚೆನ್ನಾಗಿದೆ. ಒಳ್ಳೆ ತುಪ್ಪ ಹಾಕಿದ್ದೀರಾ ಅನ್ಸುತ್ತೆ...
ಹೋಟೆಲ್‌ನವ: ಓ ಸ್ಸಾರಿ... ನನಗೆ ಅಂತ ಮಾಡಿದ್ದ ದೋಸೆ ನಿಮಗೆ ಕೊಟ್ಟಿದ್ದಾರೆ ಅನ್ಸುತ್ತೆ!

ಹೆಂಡತಿ: ಯಾಕ್ರೀ... ನನ್ನ ಬರ್ತ್‌ ಡೇಗೆ ಏನೂ ಗಿಫ್ಟ್‌… ತಂದಿಲ್ಲ?
ಪಚ್ಚ: ಗಿಫ್ಟ್‌  ವಿಷ್ಯದಲ್ಲಿ ನಿಂಗೆ "ಸರ್‌ ಫ್ರೈಸ್‌' ಕೊಡ್ತೀನಿ ಅಂತ ನಿನ್ನೇನೇ ಹೇಳಿದ್ನಲ್ಲಾ!

 ಟೀಚರ್‌: ಯಾಕೋ ಗಣಿತ ಹೋಂವರ್ಕ್‌ ಮಾಡಿಲ್ಲ?
ಮರಿಪಚ್ಚ: ನಮ್ಮಪ್ಪಂಗೆ ಲೆಕ್ಕ ಬರಲ್ಲ ಟೀಚರ್‌!

ಮಗಳು: ಅಪ್ಪಾ ಒಬ್ಬ ಹುಡುಗ ಐ ಲವ್‌ ಯೂ ಅಂತಿದ್ದಾನೆ...
ಪಚ್ಚ:ಅವ್ನನ್ನೇ ಮದ್ವೆ ಆಗುವಿಯಂತೆ. ಮತ್ತೆಂದೂ ಆತ ಐ ಲವ್‌ ಯೂ ಅಂತ ಹೇಳಲ್ಲ! 

ಪಚ್ಚ: ನೀವು ಕೊಟ್ಟ ಚೀಟಿಲಿದ್ದ ಎಲ್ಲಾ ಮಾತ್ರೆ ಸಿಕ್ತು . ಆದ್ರೆ ಚೀಟಿ ಹಿಂದೆ ಬರ್ದಿದ್ದ ಮಾತ್ರೆ ಸಿಕ್ಕಿಲ್ಲ.
ಡಾಕ್ಟ್ರು : ರೀ... ಅದು ಮಾತ್ರೆ ಹೆಸ್ರಲ್ಲ... ಪೆನ್ನು ಬರೀಲಿಲ್ಲ ಅಂತ ಸುಮ್ನೆ ಗೀಚಿದ್ದೆ...

 ಪಚ್ಚ: ತಲೆಗೂದಲು ಚಿಕ್ಕದಾಗಿ ಕತ್ತರಿಸು
 ಕ್ಷೌರಿಕ: ಚಿಕ್ಕದಾಗಿ ಅಂದ್ರೆ ಎಷ್ಟು ಸಾರ್‌?
ಪಚ್ಚ: ನನ್ನ ಹೆಂಡ್ತಿ ಕೈಗೆ ಸಿಗದಷ್ಟು! 

ಪಚ್ಚ: ಕಾಲಿಂಗ್‌ ಬೆಲ್‌ ಹಾಳಾಗಿದೆ, ರಿಪೇರಿ ಮಾಡೋಕೆ ಹೇಳಿದ್ರೂ ಯಾಕೆ ಬಂದಿಲ್ಲ?
ಎಲೆಕ್ಟ್ರೀಷಿಯನ್‌: ನಿನ್ನೆ ಬಂದಿದ್ದೆ ಸಾರ್‌.10-15 ಸಲ ಬೆಲ್‌ ಮಾಡಿದ್ರೂ ಯಾರೂ ಬಾಗಿಲು ತೆಗೀಲಿಲ್ಲ. ಹಾಗೇ ವಾಪಸ್‌ ಹೋದೆ...

ಪಚ್ಚ: ಐ ಲವ್‌ ಯೂ..
ಹುಡುಗಿ: ಲವ್‌ ಯೂ ಟೂ.. ಆದ್ರೆ ವರದಕ್ಷಿಣೆ ವಿಷ್ಯ ತೆಗೀಬಾರ್ದು!
ಪಚ್ಚ: ವರದಕ್ಷಿಣ ಏನ್‌ ಬಂತು, ಮದ್ವೆ ವಿಷ್ಯಾನೇ ತೆಗಿಯಲ್ಲ!

ಪತ್ನಿ: ರೀ... ರಾತ್ರಿ ಬರೋದು ಲೇಟಾಗುತ್ತೆ. ಎಲ್ಲ ಕೆಲಸ ಮುಗಿಸಿ ಮಲ್ಕೊಳ್ಳಿ...
ಪಚ್ಚ: (ಎಸ್ಸೆಮ್ಮೆಸ್‌ ಓದಿ ಸುಮ್ಮನಾದ)
ಪತ್ನಿ: ರೀ... ನಿಮಗೆ ವಿಸ್ಕಿ ತರಲೋ,ಬ್ರಾಂದಿಯೋ?
ಪಚ್ಚ: ವಿಸ್ಕಿಯೇ...

ಗುಂಡ: ಸಿಕ್ಕಾಪಟ್ಟೆ ಸೊಳ್ಳೆ.ಏನ್ಮಾಡೋದೋ?
ಪಚ್ಚ: ಒಂದ್ಕೆಲ್ಸ ಮಾಡೋಣ. ಭಯಂಕರ ಸ್ಟ್ರಾಂಗ್‌ ವಿಷ ಕುಡಿಯೋಣ. ಕಚ್ಚಿದ ಸೊಳ್ಳೆ ಎಲ್ಲಾ ಸಾಯ್ಬೇಕು!

ಮೇಷ್ಟ್ರು: ನಿಮಗೆ ಸ್ಕೂಲು ಹೇಗಿದ್ದರೆ ಇಷ್ಟ..?
ಮರಿಪಚ್ಚ: ಮುಚ್ಚಿದ್ದರೆ ಇಷ್ಟ!

ಗುಂಡ: ಯಾಕೋ.. ಹೆಂಡ್ತೀ ಫೋಟೋ ಹೀಗೆ ನೋಡ್ತಿದ್ದೀಯಾ? ಗುರುತು ಸಿಕ್ಕಿಲ್ವಾ?
ಪಚ್ಚ: ಹೌದೋ.. ಈ ಫೋಟೋದಲ್ಲಿ ಆಕೆ ಬಾಯ್ಮುಚ್ಚಿಕೊಂಡಿದ್ದಾಳೆ. ಅದ್ಕೆ ಸಿಕ್ಕಿಲ್ಲ!

ಗುಂಡ: ಏನೋ.. ನಿಮ್ಮ ಮನೆ ಛಾವಣಿ ಸೋರ್ತಾ ಇರೋ ಹಾಗಿದೆ..?

ಪಚ್ಚ: ಯಾವಾಗ್ಲೂ ಸೋರಲ್ಲ.. ಮಳೆ ಬಂದಾಗ ಮಾತ್ರ.

ಟೀಚರ್‌: ಏನೋ ನೀನು...
ಪಾಠ ಕೇಳ್ಳೋದು ಬಿಟ್ಟು ಬರೀ ಹುಡ್ಗೀರ್  ಜೊತೆ ಮಾತಾಡ್ತಿರ್ತೀಯಲ್ಲ?
ಮರಿಪಚ್ಚ: ಏನ್ಮಾಡೋದು ಟೀಚರ್‌... ನನ್ನತ್ರ ಫೋನೂ ಇಲ್ಲ, ಇಂಟರ್ನೆಟ್ಟೂ ಇಲ್ಲ!
 

ಉಗ್ರಗಾಮಿಗೆ ಪಚ್ಚ: ನೀನು ದಾಳ ಉರುಳಿಸು. 1,2,3,4,5 ಬಿದ್ದರೆ ನಿನ್ನನ್ನು ಗಲ್ಲಿಗೇರಿಸುವುದು ಖಚಿತ.

ಉಗ್ರಗಾಮಿ: ಒಂದು ವೇಳೆ 6 ಬಿದ್ದರೆ ಪಚ್ಚ: ಮತ್ತೂಮ್ಮೆ ದಾಳ...

ಸಂದರ್ಶನದಲ್ಲಿ..
ಆಫೀಸರ್‌: ನಿಮ್ಮ ವಿದ್ಯಾರ್ಹತೆ ಏನು?
ಪಚ್ಚ: ಕಣ್ಣು, ಚಹಾ, ಕಣ್ಣು ಸರ್‌!
ಆಫೀಸರ್‌: ಹಂಗಂದ್ರೆ ಏನ್ರೀ..?
ಪಚ್ಚ: ಐ.ಟಿ.ಐ. ಸರ್‌!

Back to Top