CONNECT WITH US  

ಗುಂಡ: ಹೆಂಡತಿಗೂ, ಮೊಬೈಲ್‌ಗ‌ೂ ಏನು ವ್ಯತ್ಯಾಸ?
ಪಚ್ಚ: ಮೊಬೈಲನ್ನು ಸೈಲೆಂಟ್‌ ಮೋಡಲ್ಲಿಡಬಹುದು!

ಹೆಂಡತಿ: ರೀ... ಮನೆಗೆ ವಾಪಸ್‌ ಹೋಗೋಣ. ಸ್ಟವ್‌ ಆರಿಸೋದು ಮರ್ತಿದೀನಿ...
ಪಚ್ಚ: ಪರ್ವಾಗಿಲ್ಲ ಕಣೇ... ನಾನೂ ಬಾತ್‌ರೂಮಲ್ಲಿ ಟ್ಯಾಪ್‌ ಬಂದ್‌ ಮಾಡೋದು ಮರ್ತಿದೀನಿ. ಬೆಂಕಿ ಆರುತ್ತೆ!

ಟೀಚರ್‌: ನಿಮ್ಮಗ ಯಾಕೆ.. 1 ರಿಂದ 80ರವರೆಗೆ ಮಾತ್ರ ಹೇಳ್ತಾನೆ..?
ಪಚ್ಚ: 1ರಿಂದ 80ರವರೆಗೆ ಮಾತ್ರ ನಮ್ಮನೇಲಿ ಟೀವಿ ಚಾನೆಲ್‌ ಬರೋದು!

ತಿಮ್ಮ: ಟೀಚರ್‌ ಮತ್ತು ಪೊಲೀಸರಿಗೆ ಇರುವ ವ್ಯತ್ಯಾಸವೇನು?
ಮರಿಪಚ್ಚ: ಟೀಚರ್‌ ಒದ್ದು ಹೊರಗೆ ಹಾಕ್ತಾರೆ, ಪೊಲೀಸ್‌ ಒದ್ದು ಒಳಗೆ ಹಾಕ್ತಾರೆ!

ಮೇಷ್ಟ್ರು: 948ರಿಂದ 600 ಕಳೆದು, ಬಂದ ಉತ್ತರವನ್ನು ಐದರಿಂದ ಗುಣಿಸಿದರೆ ಏನು ಬರುತ್ತೆ?
ಮರಿಪಚ್ಚ: ತಲೆನೋವು ಸಾರ್‌!

ಮರಿಪಚ್ಚ: ಅಪ್ಪಾ, ಸ್ಕೂಲ್‌ಡೇ ನಾಟಕಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ...
ಪಚ್ಚ: ಹೌದಾ? ಯಾವ ಪಾತ್ರ? 
ಮರಿಪಚ್ಚ: ಗಂಡನ ಪಾತ್ರ.
ಪಚ್ಚ: ಪೆದ್ದಾ... ಯಾವುದಾದ್ರೂ ಡೈಲಾಗ್‌ ಇರೋ ಪಾತ್ರ...

ಪಚ್ಚ: ಪಲಾವ್‌ನಲ್ಲಿ ಯಾಕೆ ಟೂತ್‌ಪೇಸ್ಟ್‌ ವಾಸನೆ ಬರ್ತಿದೆ?
ಪತ್ನಿ: ಮನೆಯಲ್ಲಿ ಲವಂಗ, ಪುದಿನ,ಉಪ್ಪು ಇರಲಿಲ್ಲ. ಪೇಸ್ಟಲ್ಲಿ ಅದೆಲ್ಲ ಇದೆ ಅಂತಿತ್ತು. ಸ್ವಲ್ಪ ಹಾಕಿದೆ,ಅಷ್ಟೆ

ಪಚ್ಚ: ಮನೆ ಹಿತ್ತಿಲಲ್ಲಿ ಕಸ ಸುಡೋ ಹಾಗೂ ಇಲ್ಲ ಕಣೋ...
ಗುಂಡ: ಯಾಕೆ, ಏನಾಯ್ತು?
ಪಚ್ಚ: ನಿನ್ನೆ ಒಂದಷ್ಟು ಕಸ ಸುಟ್ಟೆ.ಬೆಳಗ್ಗೆ ಪಕ್ಕದ್ಮನೆ ಸಿದ್ಧ ಕೇಳಿದ..."ಎಷ್ಟಿತ್ತು?' ಅಂತ!

ಮೇಷ್ಟ್ರು: ಮಾರ್ಕ್ಸ್ ಕಾರ್ಡ್‌ನಲ್ಲಿರೋ ಮಾರ್ಕ್ಸ್  ಗಳನ್ನೆಲ್ಲ ತಿದ್ದಿದ್ಯಾಕೆ?
ಮರಿಪಚ್ಚ: ನೀವೇ ಹೇಳಿದ್ರಲ್ಲ ಸರ್‌, ನಮ್ಮ ತಪ್ಪುಗಳನ್ನು ನಾವೇ ತಿದ್ಕೋಬೇಕು ಅಂತ!

ಪಚ್ಚ: ಕಾಲಿಂಗ್‌ ಬೆಲ್‌ ಹಾಳಾಗಿದೆ, ರಿಪೇರಿ ಮಾಡೋಕೆ ಹೇಳಿದ್ರೂ ಯಾಕೆ ಬಂದಿಲ್ಲ?
ಎಲೆಕ್ಟ್ರೀಷಿಯನ್‌: ನಿನ್ನೆ ಬಂದಿದ್ದೆ ಸಾರ್‌.10-15 ಸಲ ಬೆಲ್‌ ಮಾಡಿದ್ರೂ ಯಾರೂ ಬಾಗಿಲು ತೆಗೀಲಿಲ್ಲ. ಹಾಗೇ ವಾಪಸ್‌ ಹೋದೆ...

ಹೆಂಡತಿ: ನಾವು ಮದ್ವೆ ಆಗಿ ಹತ್ತು ವರ್ಷ ಆಯ್ತು ಮರೆತು ಬಿಟ್ರಾ?
ಪಚ್ಚ: ನಿಂಗೊತ್ತಲ್ಲ.. ನಾನು ಜೀವನದಲ್ಲಿ ಒಳ್ಳೇದನ್ನು ಮಾತ್ರ ನೆನಪಿಟ್ಟುಕೊಳ್ಳೋದು!

ಟೀಚರ್‌: ಕೋಲಾರದಲ್ಲಿ ಚಿನ್ನದ ಗಣಿ ಇದೆ. ಕುದುರೆಮುಖದಲ್ಲಿ ಏನಿದೆ?
ಮರಿಪಚ್ಚ: ಕುದುರೆ ಮುಖದಲ್ಲಿ ಕಣ್ಣು, ಕಿವಿ, ಬಾಯಿ, ಮೂಗು ಇದೆ!

ಪಚ್ಚ: ಛೇ.. ಕರೆಂಟ್‌ ಹೋಯ್ತು.
ಗುಂಡ: ಮತ್ತೆ ಫ್ಯಾನ್‌ ತಿರುಗ್ತಾ ಇದೆ.
ಪಚ್ಚ: ಶ್‌..! ಮೆಲ್ಲಗೆ ಹೇಳು ಫ್ಯಾನಿಗೆ ಗೊತ್ತಾಗಿಲ್ಲ!

ಪಚ್ಚ: ನಾನೊಂದು ಪತ್ತೇದಾರಿ ಕಾದಂಬರಿ ಬರ್ದೀದ್ದೀನಿ.
ಗುಂಡ: ಅರೆ ಹೌದಾ? ಯಾರು ಅದನ್ನು ಪ್ರಕಟಿಸ್ತಾರೆ?
ಪಚ್ಚ: ಅದನ್ನು ಆ ಪತ್ತೇದಾರನೇ ಪತ್ತೆ ಮಾಡ್ತಾನೆ!

Back to Top