CONNECT WITH US  

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

ಮರಿಪಚ್ಚ: ಅಪ್ಪಾ ಕಾಗೆ ಕೂಗಿದ್ರೆ, ಮನೆಗೆ ನೆಂಟ್ರಾ ಬರ್ತಾರೆ ಅಂತೆ.. ಹೌದಾ?

ಪಚ್ಚ: ಹೌದು.. 

ಮರಿಪಚ್ಚ: ಮತ್ತೆ ನೆಂಟ್ರಾ...

ಪಚ್ಚ: ನಿಮ್ಮ ಕ್ಲಾಸಲ್ಲಿ ಮಕ್ಕಳು ಕದೀತಾರಾ? ನನ್ನ ಮಗನ ಟವೆಲ್‌ ಕಳವಾಗಿದೆ.

ಟೀಚರ್‌: ಯಾರೋ ಆಕಸ್ಮಿಕವಾಗಿ ತಗೊಂಡಿರಬೇಕು. ಯಾವ ಬಣ್ಣ? ಏನು ಬರೆದಿತ್ತು ಅದರಲ್ಲಿ...

ಪಚ್ಚ: ಪೇಪರ್‌ ಓದಿದ್ಯಾ? ಸಮೀಕ್ಷೆ ಪ್ರಕಾರ ಶೇ.15 ಮಹಿಳೆಯರು ಮಾನಸಿಕ ಕಾಯಿಲೆಗೆ ಔಷಧತಗೊಳ್ತಾರಂತೆ. ಅಪಾಯಕಾರಿ ಸುದ್ದಿ.
ಪತ್ನಿ: ಅದರಲ್ಲೇನಿದೆ ವಿಶೇಷ? 
ಪಚ್ಚ: ಅಯ್ಯೋ ಪೆದ್ದಿ, ಉಳಿದಶೇ.85...

ಪಚ್ಚ: ಈಗ ಕಾಲ ಬದಲಾಗಿದೆ ಕಣೋ...
ಗುಂಡ: ಯಾಕೋ? ಏನಾಯ್ತು?
ಪಚ್ಚ: ಮೊದಲೆಲ್ಲ ಇಬ್ಬರು ಜಗಳಆಡ್ತಿದ್ರೆ ಮೂರನೆಯವರು
ಬಂದು ಬಿಡಿಸುತ್ತಿದ್ದರು. ಈಗವೀಡಿಯೋ ಶೂಟ್‌ ಮಾಡ್ತಾರೆ!

ಸೇಲ್ಸ್‌ಮನ್‌: ಸಾರ್‌, ನಿಮಗೆ ಯಾವ ಆ್ಯಪಲ್‌ ಪ್ರಾಡಕ್ಟ್ ತೋರಿಸ್ಲಿ?

ಪಚ್ಚ: ಆ್ಯಪಲ್‌ದು ಬೇಡ, ಸಣ್ಣದಾಯ್ತು. ಕಲ್ಲಂಗಡಿ ಪ್ರಾಡಕ್ಟ್ ಯಾವುದಾದ್ರೂ ಇದ್ರೆ...

ಪಚ್ಚ: ನಾಯಿಗೆ ಅಂಗಿ ಹೊಲಿಸೋಕೆ ಎಷ್ಟಾಗುತ್ತೆ..?

ಟೈಲರ್‌: ಹೇಗೆ ಹೇಳ್ಳೋದು, ನಾಯಿ ಇಲ್ಲಿ ತಂದ್ರೆ ಅಳತೆ ತೆಗೆದು ಹೇಳ್ಬೋದು!

ಪಚ್ಚ: ...

ಪಚ್ಚ ಮದುವೆಯಲ್ಲಿ ಕೇಳಿದ: ಪುರೋಹಿತರೇ ವಧುವನ್ನು ಬಲಕ್ಕೆ ಕೂರಿಸಬೇಕೋ, ಎಡಕ್ಕೆ ಕೂರಿಸಬೇಕೋ?
ಪುರೋಹಿತರು: ಎಲ್ಲೋ ಒಂದು ಕಡೆ ಕೂರಿಸಪ್ಪ. ಆಮೇಲೆ ಅವಳು ತಲೆ ಮೇಲೆ ಕೂತು ಕೊಳ್ತಾಳೆ.

ಪಚ್ಚ: ನನ್ನ ಕಣ್ಣನ್ನೇ ನೋಡು, ಏನಾದ್ರೂ ಕಾಣ್ಸುತ್ತಾ?
ಹೆಂಡತಿ: ನೈಜ ಪ್ರೀತಿ ಕಾಣ್ಸುತ್ತೆ ರೀ...
ಪಚ್ಚ: ಓವರ್‌ ಆಕ್ಟಿಂಗ್‌ ಸಾಕು, ಮೊದ್ಲು  ಕಣ್ಣಲ್ಲಿರೋ ಕಸ ತೆಗಿ!

ಗುಂಡ: ಕಾಲೇಜು ಕಲಿಕೆ ಎಲ್ಲ ಮುಗೀತಲ್ಲ.. ಏನ್‌ ಮಾಡ್ಕೊಂಡಿದ್ದೀಯಾ ಈಗ..?

ಮರಿಪಚ್ಚ: ಎಸ್‌.ಐ. ಅಂಕಲ್‌..

ಗುಂಡ: ಭಲೇ.. ಸಬ್‌ಇನ್ಸ್‌...

ಪಚ್ಚ: ಈ ಸಲವೂ ನಪಾಸಾದ್ರೆ ನನ್ನನ್ನ ಅಪ್ಪ ಅಂತ ಕರೀಬೇಡ...

ಮರಿಪಚ್ಚ: ಸರಿ ಅಪ್ಪಾ...

ಪಚ್ಚ (ಫ‌ಲಿತಾಂಶದ ನಂತರ):ರಿಸಲ್ಟ್ ಏನಾಯ್ತು...

ಕುಡಿದು ಟೈಟಾಗಿದ್ದ ಪಚ್ಚ ಮೊದಲ ಮಹಡಿಯಿಂದ ಕೆಳಬಿದ್ದ.
ಕುಟುಂಬಸ್ಥರು: ಯಾಕೆ?ಏನಾಯ್ತು?
ಪಚ್ಚ: ನಂಗೂ ಗೊತ್ತಿಲ್ಲ, ನಾನೂ ಈಗಷ್ಟೇ ಇಲ್ಲಿಗೆ ಬಂದೆ!

ಪಚ್ಚ ಹೇಳಿದ ರಜನೀಕಾಂತ್‌ ಜೋಕು:
ದೇವರಿಗೂ, ರಜನಿಗೂ ಭಾರೀ ಜಗಳ ಆಯ್ತಂತೆ.. ಮತ್ತೇನು.. ಈಗ ದೇವ್ರು ಸುಮ್ನೆ ಹೋಗಿ ಮೇಲೆ ಕೂತ್ಕೊಂಡಿದ್ದಾರೆ.. ಇಲ್ಲಿಲ್ಲ!

ಗುಂಡನಿಗೆ ಪಚ್ಚ ಹೇಳಿದ ವೇದವಾಕ್ಯ:
ಹೆಲ್ಮೆಟ್‌ ಮತ್ತು ಹೆಂಡತಿ ಎರಡನ್ನೂ ತಲೆ ಮೇಲೆ ಇಟ್ಕೊಬೇಕು. ಇಲ್ಲ ಅಂದ್ರೆ ಅಪಾಯ ತಪ್ಪಿದ್ದಲ್ಲ!

ಪಚ್ಚ ಮೊದಲ ಬಾರಿಗೆ ವಿಮಾನದಲ್ಲಿ ಕೂತಿದ್ದ.. ಆಗಸಕ್ಕೆ ನೆಗೆದ ಬಳಿಕ ಪೈಲಟ್‌ಗೆ ಹೋಗಿ ಎರಡೇಟು ಬಿಗಿದ.
ಪೈಲಟ್‌: ಯಾಕ್ರೀ.. ಏನಾಗಿದೆ ನಿಮಗೆ..?
ಪಚ್ಚ: ವಿಮಾನ ಬೇಕಾದ್ರೆ ಹಾರಿಸಿ, ಆದ್ರೆ ವೀಲಿಂಗ್‌...

ಪಚ್ಚ ಸಿಗ್ನಲ್‌ ಜಂಪ್‌ ಮಾಡಿದ ..
ಪೊಲೀಸ್‌: ಏನ್ರೀ.. ಕೆಂಪು ದೀಪ ಕಾಣಿಸ್ತಾ ಇಲ್ವಾ..?
ಪಚ್ಚ: ಕೆಂಪು ದೀಪ ಕಾಣ್ ಸ್ತಿದೆ   ಸರ್‌..ಆದ್ರೆ ನೀವು ನಿಂತಿರೋದು ಕಾಣಿಸ್ತಿಲ್ಲ!

ಜಾದೂಗಾರ: ನಾನೀಗ ಈ ಮಹಿಳೆಯನ್ನು ಎರಡು ಭಾಗವಾಗಿ ಕತ್ತರಿಸುತ್ತೇನೆ..

ಪಚ್ಚ(ಪ್ರೇಕ್ಷಕರ ಮಧ್ಯೆ ಎದ್ದುನಿಂತು): ಅಯ್ಯೋ.. ಇರೋ ಪ್ರಾಬ್ಲಂ ಅನ್ನು ಯಾಕೆ ಎರಡಾಗಿ...

ಜಾದೂಗಾರ: ನಾನೀಗ ಈ ಮಹಿಳೆಯನ್ನು ಎರಡು ಭಾಗವಾಗಿ ಕತ್ತರಿಸುತ್ತೇನೆ..

ಪಚ್ಚ(ಪ್ರೇಕ್ಷಕರ ಮಧ್ಯೆ ಎದ್ದುನಿಂತು): ಅಯ್ಯೋ.. ಇರೋ ಪ್ರಾಬ್ಲಿಂ ಅನ್ನು ಯಾಕೆ ಎರಡಾಗಿ...

ಪಚ್ಚನಿಗೂ, ಹೆಂಡತಿಗೂ ಜೋರು ಜಗಳ. ಕೊನೆಗೆ ಪಚ್ಚ ಸೀರೇಲಿ ನೇಣು ಹಾಕಿಕೊಳ್ತೇನೆ  ಅಂತ ಹೊರಟ..
ಹೆಂಡತಿ (ಕಾಲು ಹಿಡಿದು): ಬೇಡ ಕಣ್ರೀ...
ಪಚ್ಚ: ಯಾಕೇ ಬೇಡ..
ಹೆಂಡತಿ: ಆ ನೀಲಿ ಕಲರ್ರಿನ...

ಪಚ್ಚ: ಯಾಕೇ ನಿದ್ದೆಯಲ್ಲಿ ದಿನಾ ಆ ರೀತಿ ಒದೀತೀಯಾ?
ಹೆಂಡತಿ: ನಾನು ನಿದ್ದೆ ಮಾಡ್ತಿದ್ದೆ ಅಂತ ಯಾರು ಹೇಳಿದ್ದು?

Back to Top