ಬೀದರ: Bhidar:

 • ಅಲೆಮಾರಿಗಳಿಗಾಗಿ ತಾತ್ಕಾಲಿಕ ಅಂಗನವಾಡಿ

  ಬೀದರ: ನೌಬಾದ್‌ ಹತ್ತಿರದ ಕೆಐಎಡಿಬಿ ಹೌಸಿಂಗ್‌ ಲೇಔಟ್‌ನ ಹನುಮಾನ ಮಂದಿರದಲ್ಲಿ ಅಲೆಮಾರಿ ಸಮುದಾಯದವರ ಮಕ್ಕಳಿಗಾಗಿ ತಾತ್ಕಾಲಿಕವಾಗಿ ಆರಂಭಿಸಲಾದ ಅಂಗನವಾಡಿ ಕೇಂದ್ರವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ…

 • ಉತ್ತಮ ಕಾರ್ಯವೇ ಜನರ ಪ್ರೀತಿಗೆ ಮಾರ್ಗ

  ಬೀದರ: ಈ ಕಾಲದಲ್ಲಿ ದುಡ್ಡಿನಿಂದ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಚುನಾಯಿತ ಜನ ಪ್ರತಿನಿಧಿಗಳು ಅವರ ಕಾಲ ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ, ಜನರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡರೆ ಸಾಕು ಜನರು ಅವರನ್ನು ಮರೆಯುವುದಿಲ್ಲ ಎಂದು…

 • ಹಸಿರು ಹೆಚ್ಚಿಸಲು ಪರಿಸರ ಕಾಳಜಿ ಬೆಳೆಸಿಕೊಳ್ಳಿ: ಪೂಜಾರಿ

  ಬೀದರ: ಪರಿಸರವನ್ನು ಹಸಿರಾಗಿಸಲು ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರಿಸರ ಸ್ನೇಹಿಯಾಗಿ ಗಿಡ-ಮರಗಳ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಇಂದಿರಾಬಾಯಿ ಗುರುತಪ್ಪಾ ಶೆಟಕಾರ ಪ್ರೌಢಶಾಲೆಯ ಮುಖ್ಯಗುರು ಲಕ್ಷ್ಮಣ ಪೂಜಾರಿ ಹೇಳಿದರು. ನಗರದ ಹೊರವಲಯದ ಶಾಹಾಪುರ್‌ ಗೇಟ್ ಸಮೀಪದ…

 • ಜನಸಂಖ್ಯೆ ಹೆಚ್ಚಳದಿಂದ ಜಟಿಲ ಸಮಸ್ಯೆ

  ಬೀದರ: ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಬಡತನ, ನಿರುದ್ಯೋಗ, ಭಿಕ್ಷಾಟನೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಭಾರತೀಯ ಕುಟುಂಬ ಕಲ್ಯಾಣ ಯೋಜನೆ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಹೇಳಿದರು. ನಗರದ…

 • ಈ ವರ್ಷವೂ ಬರಗಾಲವೆ?

  •ದುರ್ಯೋಧನ ಹೂಗಾರ ಬೀದರ: ಆಕಾಶದಲ್ಲಿ ಕರಿ ಮೋಡಗಳು ಸಂಚರಿಸುತ್ತಿದ್ದರೂ ಕೂಡ ಮಳೆಯಾಗುತ್ತಿಲ್ಲ. ಬಿತ್ತಿದ ಬೆಳೆ ಕಣ್ಣೆದುರಿಗೆ ಒಣಗುತ್ತಿರುವುದನ್ನು ನೋಡಿ ರೈತರು ಮರುಗುತ್ತಿದ್ದು, ಈ ವರ್ಷ ಕೂಡ ಮತ್ತೆ ಬರಗಾಲವಾಗಲಿದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮುಂಗಾರು ಆರಂಭಗೊಂಡರೂ ಕೂಡ…

 • ಪಾರದರ್ಶಕ ಆಡಳಿತಕ್ಕೆ ಇ-ಆಫೀಸ್‌ ತಂತ್ರಾಂಶ ಜಾರಿ

  ಬೀದರ: ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಕಾಗದ ಬಳಕೆ ಕಡಿಮೆ ಮಾಡಲು, ಕಡತಗಳನ್ನು ಬೇಗ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಇ-ಆಫೀಸ್‌ ತಂತ್ರಾಂಶ ಜಾರಿ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ…

 • ಸರ್ಕಾರಿ ವೈದ್ಯರ ಖಾಸಗಿ ಕರ್ತವ್ಯ ಸಹಿಸಲ್ಲ

  ಬೀದರ: ಸ್ವಚ್ಛತೆ ಕೊರತೆಯಿಂದಾಗಿ ಸಾಕಷ್ಟು ರೋಗಗಳು ಬರುತ್ತವೆ. ಹಾಗಾಗಿ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ…

 • ನ್ಯಾಯಾಧೀಶರಿಂದ ಅಲೆಮಾರಿಗಳ ಸ್ಥಿತಿಗತಿ ಪರಿಶೀಲನೆ

  ಬೀದರ: ಅಲೆಮಾರಿ ಸಮುದಾಯದವರು ವಾಸ್ತವ್ಯ ಮಾಡಿದ ನೌಬಾದ್‌ ಬಳಿಯ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಅವರು ಗುರುವಾರ ಭೇಟಿ ನೀಡಿ ಅವರ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ…

 • ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಆದೇಶ

  ಬೀದರ: ಕಸ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ಸ್ಥಾಪಿಸಬೇಕು. ಆಯಾ ವಾರ್ಡ್‌ ಕಮೀಟಿಯವರಿಗೆ ಕೇಳಿ, ಕಸ ವಿಲೇವಾರಿ ಸರಿಯಾಗಿ ಆಗುತ್ತದೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಸಾರ್ವತ್ರಿಕ ಸಮಸ್ಯೆಯಾಗಿ ಪರಿಣಮಿಸಿದ ಪ್ಲಾಸ್ಟಿಕ್‌ ಬಳಕೆ ಜಿಲ್ಲೆಯಲ್ಲಿ ಸಂಪೂರ್ಣ ನಿಲ್ಲಬೇಕು. ಪ್ಲಾಸ್ಟಿಕ್‌ ನಿಷೇಧ…

 • ಬೆಳೆ ಸಾಲ ವಿತರಣೆಗೆ ಒತ್ತು ನೀಡಿ

  ಬೀದರ: ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಸಮರ್ಪಕ ರೀತಿಯಲ್ಲಿ ಬೆಳೆ ಸಾಲ ವಿತರಣೆಗೆ ಒತ್ತು ಕೊಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಖ ಅಧಿಕಾರಿ ಮಹಾಂತೇಶ ಬೀಳಗಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ…

 • ಅಂಗನವಾಡಿ-ಹಾಸ್ಟೆಲ್ ಆಹಾರ ಗುಣಮಟ್ಟ ಕಾಪಾಡಿ

  ಬೀದರ: ಅಂಗನವಾಡಿ, ವಸತಿ ನಿಲಯಗಳಲ್ಲಿ ಗುಣಮಟ್ಟದ ಮತ್ತು ಸಮರ್ಪಕ ರೀತಿಯಲ್ಲಿ ಆಹಾರ ಪೂರೈಕೆಯಾಗುತ್ತಿಲ್ಲ ಎಂದು ಯಾರೂ ಕೂಡ ದೂರುವಂತಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಗಮನ ಹರಿಸಿ ಕಾಳಜಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ…

 • ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆ

  ಬೀದರ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರವು ಬಹುಮತ ಇಲ್ಲದೆ ಅಲ್ಪಮತಕ್ಕೆ ಕುಸಿದು ಹೋಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು….

 • ಏಡ್ಸ್‌ ನಿಯಂತ್ರಣ ನೌಕರರ ಕಾಯಮಾತಿಗೆ ಮನವಿ

  ಬೀದರ: ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸುವುದು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖೀಲ ಭಾರತ ಏಡ್ಸ್‌ ನಿಯಂತ್ರಣ ನೌಕರರ ಸಂಘದಿಂದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರಧಾನ ಮಂತ್ರಿ, ಕೇಂದ್ರ ಆರೋಗ್ಯ…

 • ಸಾಮೂಹಿಕ ಹಲ್ಲೆ ತಡೆಯಲು ಆಗ್ರಹಿಸಿ ಪ್ರತಿಭಟನೆ

  ಬೀದರ: ದೇಶದಲ್ಲಿ ಧರ್ಮದ ಆಧಾರದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ತಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ದೇಶದಲ್ಲಿ ಪ್ರತಿನಿತ್ಯ ಧರ್ಮದ ಆಧಾರದ ವಿಭಜನೆ, ಕೋಮುವಾದ, ಧರ್ಮದ ಆಧಾರದ ಗುಂಪು ಹತ್ಯೆ ಮತ್ತು…

 • ರೈತರಿಗೆ ಕೃಷಿ ಪತ್ತಿನ ಸಂಘ ಜೀವಾಳ

  ಬೀದರ: ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಅಬ್ದುಲ ಸಲೀಮ ಹೇಳಿದರು. ನಗರದಲ್ಲಿ ವಿವಿಧ ಜಿಲ್ಲೆಗಳ ಪ್ರಾಥಮಿಕ…

 • ವರದಿ ಕೊಟ್ಟರೆ ಕಾರ್ಖಾನೆ ಮುಚ್ಚಲು ಕ್ರಮ

  ಬೀದರ: ಜಿಲ್ಲೆಯ ಕೋಳಾರ ಹಾಗೂ ಹುಮನಾಬಾದ ಕೈಗಾರಿಕೆ ಪ್ರದೇಶಗಳಲ್ಲಿನ ಕಾರ್ಖಾನೆಗಳು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತು ಜಿಲ್ಲಾಡಳಿತ ಸೂಕ್ತ ವರದಿ ನೀಡಿದರೆ ಕಾರ್ಖಾನೆ ಮುಚ್ಚುವ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ಪರಿಸರ…

 • ಜನ್ಮದಿನದಂದು ಸಸಿ ನೆಟ್ಟು ಪರಿಸರ ಉಳಿಸಿ: ಚಿದ್ರಿ

  ಬೀದರ: ಮನೆಗೊಂದು ಮರ ಊರಿಗೊಂದು ವನವಾಗಬೇಕು. ವಿದ್ಯಾರ್ಥಿಗಳು ಅವರ ಜನ್ಮದಿನದಂದು ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಸಲಹೆ ನೀಡಿದರು. ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ…

 • ಕೃಷಿ ಕ್ಷೇತ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ

  ಬೀದರ: ಮಹಾರಾಷ್ಟ್ರದ ಕಡವಂಚಿ ಗ್ರಾಮದ ಮಾದರಿಗೂ ಮೀರಿ ಅತ್ಯಾಧುನಿಕವಾಗಿ ಕೃಷಿ ಕ್ಷೇತ್ರ ಅಭಿವೃದ್ಧಿಗೆ ಜಿಲ್ಲೆಯ ಅಧಿಕಾರಿಗಳು ಕೃಷಿ ಯೋಜನೆಗಳನ್ನು ರೂಪಿಸಬೇಕು. ಪ್ರಾಯೋಗಿಕವಾಗಿ 100 ರೈತ ಸದಸ್ಯರನ್ನು ಸೇರಿಸಿ ಸಹಕಾರ ಸಂಘ ರಚಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು….

 • ಸಂಸತ್‌ನಲ್ಲಿ ಬಸವಣ್ಣನ ಸ್ಮರಣೆಗೆ ಹರ್ಷ

  ಬೀದರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್‌ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕಲ್ಯಾಣ ನಾಡಿನ ಅಣ್ಣ ಬಸವಣ್ಣನವರ ಹೆಸರು ಪ್ರಸ್ತಾಪಿಸಿ ಮಾತನಾಡಿರುವುದು ಗಡಿ ಜಿಲ್ಲೆಯ ಬಸವ ಭಕ್ತರಲ್ಲಿ ಸಂತಸ ಮೂಡಿಸಿದೆ. ಕೌಶಲ್ಯಾಭಿವೃದ್ಧಿ ಯೋಜನೆಯ ವಿವರ ನೀಡುವ ಸಂದರ್ಭದಲ್ಲಿ…

 • ಬಸ್‌ ಪಾಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

  ಬೀದರ: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವಂತೆ ಒತ್ತಾಯಿಸಿ ನಗರದ ಬಿವಿಬಿ ಕಾಲೇಜು ಮುಖ್ಯರಸ್ತೆಯಲ್ಲಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ರಾಜ್ಯದ ಎಲ್ಲ ವರ್ಗದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌…

ಹೊಸ ಸೇರ್ಪಡೆ