ಭರಮಸಾಗರ: Bharamasagara:

 • ರಂಗೇರಿದ ಸಹಕಾರ ಸಂಘದ ಚುನಾವಣಾ ಅಖಾಡ

  ಭರಮಸಾಗರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಜ. 16 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಅಖಾಡ ರಂಗೇರುತ್ತಿದೆ. ಆದರೆ 2013ರ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಹಲವು ನಿಬಂಧನೆಗಳನ್ನು…

 • ಪಾಸ್‌ ಇದ್ದರೂ ನಿಲ್ಲಿಸುತ್ತಿಲ್ಲ ಸರ್ಕಾರಿ ಬಸ್‌!

  ಭರಮಸಾಗರ: ಬಸ್‌ ಸೌಕರ್ಯವಿದ್ದರೂ ಇಲ್ಲದವರಂತೆ ಶಾಲಾ ಮಕ್ಕಳು ರಸ್ತೆ ಬದಿ ನಿಂತು ಕೈ ಸನ್ನೆ ಮಾಡಿ ಮೂರು ಕಿ.ಮೀ ದೂರದ ಶಾಲಾ ಕಾಲೇಜುಗಳಿಗೆ ಹರಸಾಹಸಪಟ್ಟು ತೆರಳುವ ಸಮಸ್ಯೆ ಎದುರಾಗಿದೆ. ಚಿತ್ರದುರ್ಗ ತಾಲೂಕಿನ ದ್ಯಾಪನಹಳ್ಳಿ ಗ್ರಾಮ ಭರಮಸಾಗರ- ಬಿಳಿಚೋಡು ಮುಖ್ಯ…

 • ಸರ್ವಿಸ್‌ ರಸ್ತೇಲಿ ಸಂಚಾರ ದುಸ್ತರ

  ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಬೀರಾವರ ಗೇಟ್‌ ಬಳಿ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಸರ್ವಿಸ್‌ ರಸ್ತೆ ಗುಂಡಿ ಬಿದ್ದು ತಿಂಗಳುಗಳೇ ಕಳೆದಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕನಿಷ್ಠ ಪಕ್ಷ…

 • ಅಡಿಕೆ ಮರ ರಕ್ಷಣೆಗೆ ಸುಣ್ಣ ಲೇಪನ!

  ಭರಮಸಾಗರ: ಅಡಿಕೆ ಮರಗಳ ಉತ್ತಮ ಪೋಷಣೆಗಾಗಿ ಕಾಂಡದ ನಾಲ್ಕಾರು ಅಡಿ ಎತ್ತರದವರೆಗೆ ನಾನಾ ವಸ್ತುಗಳ ಮಿಶ್ರಣದೊಂದಿಗೆ ಸುಣ್ಣವನ್ನು ಲೇಪಿಸಲಾಗುತ್ತಿದೆ. ಈ ಮೂಲಕ ಬೆಳೆಗಾರರು ಮರಗಳ ರಕ್ಷಣೆಗೆ ತಮ್ಮದೇ ಐಡಿಯಾ ಮಾಡುತ್ತಿರುವುದು ಕಂಡುಬರುತ್ತಿದೆ. ಕಳೆದ ನಾಲ್ಕಾರು ವರ್ಷಗಳಿಂದ ಮಳೆ ಕೈಕೊಟ್ಟ…

 • ಗಿಡ-ಮರಗಳ ಗೋಳು ಕೇಳ್ಳೋರ್ಯಾರು?

  ಭರಮಸಾಗರ: ಇಲ್ಲಿನ ಅಕ್ಕಮಹಾದೇವಿ ಪ್ರೌಢಶಾಲೆಯಿಂದ ಬಿಳಿಚೋಡು ಕಡೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿನ ಬೇವು, ಹುಣಸೆ ಇತರೆ ಸಾಲು ಮರಗಳಡಿ ಅಡಕೆ ಸಿಪ್ಪೆ, ಇತರೆ ಕಸದ ತ್ಯಾಜ್ಯವನ್ನು ಮರಗಳಡಿ ಸುರಿಯಲಾಗುತ್ತಿದೆ. ಅಲ್ಲದೆ ಮರಗಳ ಬುಡದಲ್ಲಿ ಬೆಂಕಿ ಹಾಕುವ ಮೂಲಕ ಹಸಿರು…

 • ಜನಮನ ಸೆಳೆದ ಏರೋ ಸ್ಪೋರ್ಟ್ಸ್

  ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಸೀಬಾರ ಸಮೀಪ ಶನಿವಾರದಿಂದ ಎರಡು ದಿನಗಳ ಚಳಿಗಾಲದ ಏರೋ ಸ್ಪೋರ್ಟ್ಸ್ ಚಟುವಟಿಕೆ ಆರಂಭಗೊಂಡಿತು. ಬೆಂಗಳೂರಿನ ಅಂಕಾ ಹೆರೋ ಮತ್ತು ಅಡ್ವೆಂಚರ್‌ ಸ್ಪೋರ್ಟ್ಸ್ ಕ್ಲಬ್‌, ಚಿತ್ರದುರ್ಗ ಮುರುಘಾ ಮಠದ ಬಸವ ಕೇಂದ್ರ, ಎಸ್‌ಜೆಎಂ ಹಾಬಿ…

 • ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ

  ಭರಮಸಾಗರ: ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ ವಿಪರೀತವಾಗಿರುವ ಹಿನ್ನೆಲೆಯಲ್ಲಿ ರೈತರು ಫಸಲಿನ ರೋಗ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಗಿದೆ. ಕಳೆದ 3-4 ವರ್ಷಗಳಿಂದ ರೋಗ ಭಾದೆಯೇ ಇಲ್ಲದ ಮೆಕ್ಕೆಜೋಳಕ್ಕೆ ಮುಂಗಾರು, ಹಿಂಗಾರು ಎರಡು…

 • ಸಂತೆ ಮೈದಾನ ಪ್ರವೇಶಕ್ಕೆ ಗುಂಡಿ ಅಡ್ಡಿ!

  ಭರಮಸಾಗರ: ಇಲ್ಲಿನ ಸಂತೆ ಮೈದಾನದ ಪ್ರವೇಶ ದ್ವಾರದಲ್ಲಿ ಚರಂಡಿ ಸಮಸ್ಯೆ ನಿವಾರಿಸಲು ಕಳೆದ ಕೆಲವು ತಿಂಗಳುಗಳ ಹಿಂದೆ ಜೆಸಿಬಿ ಬಳಸಿ ದೊಡ್ಡ ಗುಂಡಿ ತೆಗೆಯಲಾಗಿತ್ತು. ಜನರು ಸಂತೆ ಮೈದಾನ ಪ್ರವೇಶಿಸಲು ಈ ಗುಂಡಿಯೇ ಅಡ್ಡಿಯಾಗಿದೆ! ಸಂತೆ ಮೈದಾನದ ಪ್ರವೇಶ…

 • ಕೋಳಿ ಗೊಬ್ಬರಕ್ಕೆ ಫುಲ್‌ ಡಿಮ್ಯಾಂಡ್‌

  ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಪ್ರಸಕ್ತ ವರ್ಷ ರಾಜ್ಯದಲ್ಲಿ ದಾಖಲೆ ಮಳೆ ಆಗಿದೆ. ಈ ಹಿನ್ನೆಲೆಯಲ್ಲಿ ಅಡಕೆ, ತೆಂಗು, ಬಾಳೆ ಸೇರಿದಂತೆ ಪ್ರಮುಖ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಪೋಷಕಾಂಶ ಒದಗಿಸುವ ಹಾಗೂ ಅಧಿಕ ಇಳುವರಿ ನೀಡುವ ಕೋಳಿ ಗೊಬ್ಬರಕ್ಕೆ…

 • ನೆಲಕ್ಕುರುಳಿದ “ಚೌಡಮ್ಮ ನ ಬೇವಿನ ಮರ’

  ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಕೊಳಹಾಳು ಚೌಡಮ್ಮ ದೇಗುಲವನ್ನು ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ನೆಲಸಮಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸುಮಾರು 120 ವರ್ಷಗಳಷ್ಟು ಹಳೆಯದಾದ ಹಾಗೂ ದೇಗುಲಕ್ಕೆ ಹೊಂದಿಕೊಂಡಿದ್ದ “ಚೌಡಮ್ಮನ ಮರ’ ಎಂದೇ ಪ್ರಸಿದ್ಧಿ ಪಡೆದಿದ್ದ ಬೇವಿನ ಮರವನ್ನು ಶನಿವಾರ…

 • ಸುಸಜ್ಜಿತ ಕಟ್ಟಡವಿದ್ದರೂ ಕಾಂಪೌಂಡ್‌ ಮರೀಚಿಕೆ!

  ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಬರೋಬ್ಬರಿ 2.70 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ವಿದ್ಯಾನಗರದಲ್ಲಿ 2013-14ನೇ ಸಾಲಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಕಾಲೇಜಿಗೆ ಕಾಂಪೌಂಡ್‌ ಮರೀಚಿಕೆಯಾಗಿರುವುದರಿಂದ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ…

 • 5-6 ರಂದು ಮಾರಮ್ಮ ದೇವಿ ದೇಗುಲ ಲೋಕಾರ್ಪಣೆ

  ಭರಮಸಾಗರ: ಚಿತ್ರದುರ್ಗ ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಗ್ರಾಮದಲ್ಲಿ ಡಿ. 5 ಮತ್ತು 6 ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾರಮ್ಮ ದೇವಿಯ ದೇಗುಲ ಲೋಕಾರ್ಪಣೆ ಮತ್ತು ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಡಿ. 5 ರಂದು ಬೆಳಿಗ್ಗೆ…

 • ನೇರ ಮಾರುಕಟ್ಟೆಯತ್ತ ರೈತರ ಒಲವು!

  ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಮೆಕ್ಕೆಜೋಳಕ್ಕೆ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಮೂಲಕ ಜೋಳ ಖರಿದೀಸುವ ಗೋಜಿಗೆ ಹೋಗದಿರುವ ಕಾರಣ ರೈತರು ಇದೀಗ ನೇರ ಮಾರುಕಟ್ಟೆಯ ದರಕ್ಕೆ ಜೋಳ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ….

 • ಅಳಗವಾಡಿ-ಓಬಳಾಪುರ ಮಾರ್ಗಕ್ಕೆ ಸಿಸಿ ರಸ್ತೆ ಭಾಗ್ಯ

  ಭರಮಸಾಗರ: ನನೆಗುದಿಗೆ ಬಿದ್ದಿದ್ದ ಸಮೀಪದ ಅಳಗವಾಡಿ ಮತ್ತು ಓಬಳಾಪುರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ನಡುವಿನ 400 ಮೀಟರ್‌ ಉದ್ದದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. 30 ಲಕ್ಷ ರೂ. ವೆಚ್ಚದಲ್ಲಿ 400 ಮೀಟರ್‌…

 • ಅಡಿಕೆಗೆ ಶಾಪವಾದ ಕೊಳೆ ರೋಗ

  ಭರಮಸಾಗರ: ನಾಲ್ಕಾರು ವರ್ಷಗಳಿಂದ ಉತ್ತಮ ಮಳೆಯಿಲ್ಲದೆ ಅಡಿಕೆ ತೋಟಗಳು ಒಣಗುವ ಹಂತ ತಲುಪಿದ್ದವು. ಲಕ್ಷಾಂತರ ರೂ. ಖರ್ಚು ಮಾಡಿ ಉಳಿಸಿಕೊಂಡ ತೋಟಗಳಿಗೆ ಕೊಳೆ ರೋಗ ಹಾಗೂ ಪೋಷಕಾಂಶಗಳ ಕೊರತೆಯಿಂದ ಒಂದೊಂದೇ ಮರಗಳು ಒಣಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ….

 • ಕಾರ್ಮಿಕರ ಕೊರತೆ ನೀಗಿಸಿದ ಕಟಾವು ಯಂತ್ರ

  „ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ರಾಗಿ ಕೊಯ್ಲು ಮಾಡುವಲ್ಲಿ ಕೂಲಿಕಾರರ ಸಮಸ್ಯೆಯಿಂದ ಪರಿತಪಿಸುತ್ತಿದ್ದ ಬೆಳೆಗಾರರಿಗೆ ತಮಿಳುನಾಡು ಹಾಗೂ ಬಳ್ಳಾರಿಯ ಕಂಪ್ಲಿ ಮೂಲದಿಂದ ಆಗಮಿಸಿರುವ ಮೂರು ರಾಗಿ ಕಟಾವು ಯಂತ್ರಗಳು ಇದೀಗ ರೈತರ ಪಾಲಿಗೆ ವರದಾನವಾಗಿವೆ. ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳ…

 • ಮಾಗಿ ಉಳುಮೆಯತ್ತ ರೈತನ ಚಿತ್ತ

  „ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಪ್ರಸಕ್ತ ವರ್ಷ ಬಿತ್ತನೆ ಮಾಡಿದ್ದ ಎರಡು ಬೆಳೆಗಳು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಕೊಟ್ಟಿವೆ. ಹಾಗಾಗಿ ಇಲ್ಲೊಬ್ಬ ರೈತ ಜಮೀನಿನ ಮಾಗಿ ಉಳುಮೆ ಮಾಡುವ ಮೂಲಕ ಮುಂಬರುವ ವರ್ಷಕ್ಕೆ ಹೊಲವನ್ನು ಸಿದ್ಧಗೊಳಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ….

 • ರಾಗಿ ಬೆಳೆ ಖರ್ಚಿಗಿಂತ ಕೊಯ್ಲು ವೆಚ್ಚ ಜಾಸ್ತಿ !

  „ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಕಳೆದ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದ ತೆನೆಗಟ್ಟಿದ ರಾಗಿ ಫಸಲಿಗೆ ಕಂಟಕ ಎದುರಾಗಿತ್ತು. ಇದೀಗ ಕಟಾವಿಗೆ ಬಂದಿರುವ ರಾಗಿ ಕೊಯ್ಲಿಗೆ ರೈತರಿಗೆ ದುಬಾರಿ ಕೂಲಿ ದರದ ಸಮಸ್ಯೆ ಎದುರಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ರಾಗಿ…

 • ಪಿನ್‌ಕೋಡ್‌ ಇಲ್ಲದಿದ್ರೆ ಪತ್ರ ವಿಲೇವಾರಿಗೆ ಪ್ರಾಬ್ಲಂ

  „ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಚಿತ್ರದುರ್ಗ ಜಿಲ್ಲೆಯ ಐದು ತಾಲೂಕುಗಳಲ್ಲಿ “ಓಬಳಾಪುರ’ ಎಂಬ ಒಂದೇ ಹೆಸರಿನ ಊರುಗಳಿದ್ದು, ಪಿನ್‌ಕೋಡ್‌ ನಮೂದಿಸದೇ ಬರೀ ಊರ ಹೆಸರು ನಮೂದಿಸುವುದರಿಂದ ಪತ್ರ ವಿಲೇವಾರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಅಂಚೆ ಇಲಾಖೆ ಮೂಲಕ ನಾನಾ ಇಲಾಖೆಗಳಿಗೆ…

 • ಹತ್ತಿಗೆ ಕಂಟಕಪ್ರಾಯವಾದ ಮಳೆ

  ಭರಮಸಾಗರ: ಮಳೆ ನಿಂತಿದೆ, ಆದರೆ ಮಳೆಯ ಅನಾಹುತದಿಂದ ಹತ್ತಿ ಗಿಡಗಳಲ್ಲಿನ ಕಾಯಿ ಕೊಳೆಯುತ್ತಿದೆ. ಮತ್ತೂಂದೆಡೆ ಅರಳಿದ ಹತ್ತಿ ತೊಯ್ದು ತನ್ನ ಗುಣಮಟ್ಟ ಕಳೆದುಕೊಂಡಿರುವುದರಿಂದ ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಪ್ರಮುಖ ಬೆಳೆಗಳ ಸಾಲಿಗೆ ಹತ್ತಿ ಬೆಳೆ ಸೇರುತ್ತದೆ….

ಹೊಸ ಸೇರ್ಪಡೆ