ಮಂಗಳೂರು : Mangaluru:

 • ಕದ್ರಿ ಗೋಪಾಲ್‌ನಾಥ್ ಅಂತ್ಯಕ್ರಿಯೆ : ಸಂಸದರಿಂದ ವ್ಯವಸ್ಥೆ ಪರಿಶೀಲನೆ

  ಮಂಗಳೂರು: ಅಗಲಿದ ಖ್ಯಾತ ಸ್ಯಾಕ್ಸೋಪೋನ್ ವಾದಕ, ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲ್‌ನಾಥ್‌ರವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಅ. 14ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲುರವರು ಅಧಿಕಾರಿಗಳೊಂದಿಗೆ…

 • ವಿಧಾನಸಭಾ ಕಲಾಪ ಪ್ರಸಾರಕ್ಕೆ ನಿರ್ಬಂಧ ಸರಿಯಲ್ಲ: ಸಂತೋಷ್ ಹೆಗ್ಡೆ

  ಮಂಗಳೂರು: ವಿಧಾನಸಭಾ ಕಲಾಪ ಪ್ರಸಾರಕ್ಕೆ ಮಾಧ್ಯಮಗಳಿಗೆ ರಾಜ್ಯ ಸರಕಾರ ವಿಧಿಸಿದ ನಿರ್ಬಂಧ ಸರಿಯಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮ ಸಂವಿಧಾನದ ನಾಲ್ಕನೇ ಸ್ತಂಭ. ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದೆ….

 • ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಮೌನ ಪ್ರತಿಭಟನೆ

  ಮಂಗಳೂರು: ನಂತೂರು ರಸ್ತೆ ದುರಸ್ತಿಗೆ ಆಗ್ರಹಿಸಿ ರೂಪನ್ ಫೆರ್ನಾಂಡೀಸ್ ಮತ್ತು ಅರ್ಜುನ್ ಮಸ್ಕರೇನಸ್ ಎಂಬುವರು ಶನಿವಾರದಂದು ನಂತೂರು ಸರ್ಕಲ್ ವೃತ್ತದಲ್ಲಿ ನಾಗರಿಕರ ಪರವಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ನಂತೂರು ವೃತ್ತದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿ, ಸಾಕಷ್ಟು ಸಾವು- ನೋವು…

 • ಮಂಗಳೂರು: ಮುಂದಿನ ಆದೇಶದ ತನಕ ಕಡ್ಡಾಯ ಪ್ರಾಪರ್ಟಿ ಕಾರ್ಡ್ ಗೆ ವಿನಾಯಿತಿ

  ಮಂಗಳೂರು: ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪಿ.ಆರ್.ಕಾರ್ಡ್ ( ಪ್ರಾಪರ್ಟಿ ಕಾರ್ಡ್) ಕಡ್ಡಾಯಗೊಳಿಸುವುದನ್ನು ಮುಂದಿನ ಆದೇಶದವರೆಗೆ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ. ಮಂಗಳೂರು ನಗರದಲ್ಲಿ ಯು.ಪಿ.ಓ.ಆರ್. ಯೋಜನೆಯಡಿಯಲ್ಲಿ ಆಸ್ತಿಗಳ…

 • ಅ.11ರಂದು ಮಂಗಳೂರು ಸೊಗಡಿನ `ಲುಂಗಿ’ ಕನ್ನಡ ಸಿನಿಮಾ ಬಿಡುಗಡೆ

  ಮಂಗಳೂರು: ತುಳುವಿನಲ್ಲಿ ಎರಡು ಯಶಸ್ವಿ ಸಿನಿಮಾನಗಳನ್ನು ನಿರ್ಮಿಸಿರುವ ಮುಖೇಶ್ ಹೆಗ್ಡೆ ಸಿನಿಮಾ ನಿರ್ಮಾಣದ, ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶನದ ಮಂಗಳೂರು ಸೊಗಡಿನ ಕನ್ನಡ ಸಿನಿಮಾ `ಲುಂಗಿ’ ಅ.11ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಖಾರ ಎಂಟರ್‌ಟೈನ್‌ನ್ಮೆಂಟ್ ಬ್ಯಾನರ್‌ನಲ್ಲಿ…

 • ಮಂಗಳೂರು ಬಂದರು ಖಾಸಗೀಕರಣಕ್ಕೆ ವಿರೋಧ: ಯು.ಟಿ.ಖಾದರ್

  ಮಂಗಳೂರು: ಕೇಂದ್ರ ಸರಕಾರವು ಮಂಗಳೂರು ಬಂದರನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸುವಾಗಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎನ್‌ಎಂಪಿಟಿಯಲ್ಲಿ ಈಗಾಗಲೇ ಸುಮಾರು 40 ರಷ್ಟು ಶಿಪ್ಪಿಂಗ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು,…

 • ಮರವಂತೆ ಸೇರಿ ಕೋಸ್ಟಲ್ ಸರ್ಕ್ಯೂಟ್ ಯೋಜನೆ ತಯಾರಿ: ಸಿ.ಟಿ.ರವಿ

  ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕಾಸರಗೋಡಿನಿಂದ ಮರವಂತೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋಸ್ಟಲ್ ಸರ್ಕ್ಯೂಟ್ ಯೋಜನೆಯನ್ನು ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಅವರು ಸೋಮವಾರದಂದು ನಗರಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ…

 • ನಂದಿನಿ ಹಾಲಿನ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್‍ಗಳ ಮರುಸಂಸ್ಕರಣೆಗೆ ಕ್ರಮ

  ಮಂಗಳೂರು: ಸ್ಚಚ್ಛ ಭಾರತ ಕಾರ್ಯಕ್ರಮದಡಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ಲಾಸ್ಟಿಕ್ ತ್ಯಾಜ್ಯ ಜಾಗೃತಿ ಮತ್ತು ನಿರ್ವಹಣೆ ವಿಷಯದೊಂದಿಗೆ ಸ್ಚಚ್ಚತಾ ಹೀ ಸೇವಾ 2019 ಎಂಬ ಯೋಜನೆಯನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಹಾಗೂ ವಿತರಿಕರಿಗೆ ಜಾಗೃತಿ ಮೂಡಿಸಿ ನಂದಿನಿ ಹಾಲಿನ…

 • ಕೃಷ್ಣ ಮೃಗದ ಚರ್ಮ ಮಾರಾಟ ಯತ್ನ: ನಾಲ್ವರ ಬಂಧನ

  ಮಂಗಳೂರು: ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕೃಷ್ಣ ಮೃಗದ ಚರ್ಮ ಮತ್ತು ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡ ಕಾರ್ಯಚರಣೆ ನಡೆಸಿ ಸೋಮವಾರ ಬಂಧಿಸಿದ್ದಾರೆ. ಆರೋಪಿಗಳನ್ನು…

 • ನೆರೆ ಪರಿಹಾರ- ರಾಜ್ಯದ ಜೊತೆ ಕೇಂದ್ರ ಸರಕಾರ ಸದಾ ಇದೆ- ಡಿ.ವಿ.ಎಸ್.

  ಮಂಗಳೂರು: ನೆರೆಪೀಡಿತ ಎಲ್ಲಾ ರಾಜ್ಯಗಳಿಗೂ ಪರಿಹಾರ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಈ ಬಗ್ಗೆ ಗೊಂದಲ ಬೇಡ. ರಾಜ್ಯ ಸರಕಾರದಲ್ಲಿ ನೆರೆಪೀಡಿತರ ಜತೆ ಕೇಂದ್ರ ಸರಕಾರ ಸದಾ ಇದೆ. ಸಂಕಷ್ಟದಲ್ಲಿದ್ದವರನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಇದೆ….

 • ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಮಾರಾಟ ಯತ್ನ- ಆರೋಪಿಗಳ ಬಂಧನ

  ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಮಾರಾಟ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಆರೋಪಿಗಳನ್ನು ವಿಶೇಷ ಅಪರಾಧ ಪತ್ತೆ ದಳ ಮತ್ತು ಸುರತ್ಕಲ್ ಪೊಲೀಸರ ಜಂಟಿ ಕಾರ್ಯಚರಣೆ ಮೂಲಕ ಬಂಧಿಸಿದ್ದಾರೆ. ಸುರತ್ಕಲ್ ನ ಕೃಷ್ಣಾಪುರದ .ಮಹಮ್ಮದ್ ಮುಜಾಮಿಲ್ (40) ಹಾಗೂ…

 • ಇಸ್ರೋ ಹ್ಯಾಕಥಾನ್ ಮತ್ತು ಏರೋಫಿಲಿಯಾ ಕಾರ್ಯಕ್ರಮಕ್ಕೆ ಚಾಲನೆ

  ಮಂಗಳೂರು: ಸಹ್ಯಾದ್ರಿ ಕಾಲೇಜಿನಲ್ಲಿ ಟೀಂ ಚಾಲೆಂಜರ್ಸ್ ವತಿಯಿಂದ ಎರಡು ದಿನಗಳ 4 ನೇ ಆವೃತ್ತಿಯ ಇಸ್ರೋ ಹ್ಯಾಕಥಾನ್ ಮತ್ತು ಏರೋಫಿಲಿಯಾ ಕಾರ್ಯಕ್ರಮಕ್ಕೆ ಶುಕ್ರವಾರ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ `ಭಾರತೀಯ ನೌಕಾದಳದ ಮಾಜಿ ಕಮಾಂಡರ್ ಟಿ.ಆರ್.ಎ….

 • ಚಾರ್ಮಾಡಿ ಘಾಟ್ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ

  ಮಂಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರವನ್ನು ಭಾನುವಾರದಿಂದ ಕೆಲವು ನಿಬಂಧನೆಗಳೊಂದಿಗೆ ಮುಂದಿನ ಆದೇಶದವರೆಗೆ ಮುಕ್ತಗೊಳಿಸಲು ದ.ಕ.ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುತ್ತಾರೆ. ಕಾರು, ಜೀಪು, ಟೆಂಪೋ, ವ್ಯಾನ್, ಲಘು ಸರಕು ಸಾಗಾಟ ವಾಹನ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು…

 • ಉದಯವಾಣಿ ಮಲೈಕಾ ವಿಶ್ವಕಪ್ ಧಮಾಕಾ 2019 ಬಹುಮಾನ ವಿತರಣೆ

  ಮಂಗಳೂರು: ಉದಯವಾಣಿ- ಮಲೈಕಾ ವಿಶ್ವಕಪ್ ಧಮಾಕ-2019 ಅದೃಷ್ಟಶಾಲಿ ವಿಜೇತರ ಬಹುಮಾನ ವಿತರಣೆ ಸಮಾರಂಭವು ನಗರದ ಕೊಡಿಯಾಲ್ ಬೈಲ್ ನ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಐಡಿಯಲ್ ಐಸ್‌ಕ್ರೀಂ ಮಾಲಕರಾದ ಮುಕುಂದ್ ಕಾಮತ್ ಮಾತನಾಡುತ್ತಾ…

 • ಗಿರಿಗಿಟ್ ವಿವಾದ: ಚಿತ್ರದ ಆಕ್ಷೇಪಾರ್ಹ ದೃಶ್ಯ ತೆಗೆಯಲು ಚಿತ್ರ ತಂಡ ಒಪ್ಪಿಗೆ

  ಮಂಗಳೂರು: ಗಿರಿಗಿಟ್ ಚಿತ್ರದ ವಿವಾದ ಕೊನೆಗೂ ನಿರ್ಣಾಯಕ ಹಂತ ತಲುಪಿದೆ. ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂಬ ಅಂಶ ಇರುವ ಭಾಗಗಳನ್ನು ಬೇಷರತ್ತಾಗಿ ತೆಗೆದು ಹಾಕಲು ಗಿರಿಗಿಟ್ ಚಿತ್ರ ತಂಡ ಒಪ್ಪಿಕೊಂಡಿದೆ….

 • ಮಂಗಳೂರು: ರೈಲ್ವೇ ಅಧಿಕಾರಿಗಳ ಸಭೆ

  ಮಂಗಳೂರು: ರೈಲ್ವೇ ಅಧಿಕಾರಿಗಳ ಸಭೆಯು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರಂದು ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮೈಸೂರು ಪಾಲಕ್ಕಾಡ್ ಹಾಗೂ ಕೊಂಕಣ್ ರೈಲ್ವೇ ವಿಭಾಗದ…

 • ಗಿರಿಗಿಟ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ: ವಕೀಲರ ಸಂಘದಿಂದ ಸುದ್ದಿಗೋಷ್ಠಿ

  ಮಂಗಳೂರು: ಗಿರಿಗಿಟ್ ಚಿತ್ರದಲ್ಲಿ ನ್ಯಾಯಾಂಗ ನಿಂದನೆ, ವಕೀಲರ ಅವಹೇಳನ, ವಕೀಲರ ಸಂಘದ ಅಕ್ರೋಶ, ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ, ಕಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರ ಆದೇಶದ ಕುರಿತು ಮಂಗಳೂರು ವಕೀಲರ ಸಂಘದ ವತಿಯಿಂದ ಸುದ್ದಿಗೋಷ್ಠಿಯು ಸಂಘದ ಕಾರ್ಯಾಲಯದಲ್ಲಿ ನಡೆಯಿತು. ಗಿರಿಗಿಟ್…

 • ಪಚ್ಚನಾಡಿ,‌ಮಂದಾರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

  ಮಂಗಳೂರು: ಇತ್ತೀಚಿಗೆ ತ್ಯಾಜ್ಯ ನೆಲಭರ್ತಿ ಪ್ರದೇಶದಲ್ಲಿ ಕುಸಿತ ಉಂಟಾದ ಪಚ್ಚನಾಡಿ ಮತ್ತು ಮಂದಾರ ಪ್ರದೇಶಗಳಿಗೆ ಬುಧವಾರ ಜಿಲ್ಲಾಧಿಕಾರಿ ಸಿಂಧೂ‌ ರೂಪೇಶ್ ಭೇಟಿ ನೀಡಿದರು. ಮೊದಲು ಪಚ್ಚನಾಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಳಿಕ ಮಂದಾರಕ್ಕೆ ಭೇಟಿ ನೀಡಿದರು. ನಂತರ ಮಂದಾರ…

 • ಸಸಿಕಾಂತ್ ವಿರುದ್ಧ ಭ್ರಷ್ಟಚಾರ ಆರೋಪ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಗೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ಧ ಇದೀಗ ಗಂಭೀರ ಆರೋಪ ಒಂದು ಕೇಳಿಬಂದಿದೆ. ಸೆಂಥಿಲ್ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಮರಳುಗಾರಿಕೆ ಪರವಾನಗಿ ನೀಡುವಿಕೆಯಲ್ಲಿ ಮತ್ತು ಇದಕ್ಕಾಗಿ…

 • ಮಂಗಳೂರು: ಪ್ಲಾಸ್ಟಿಕ್ ಬಳಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ

  ಮಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಎಚ್ಚೆತ್ತು ಕೊಳ್ಳದ ಅಂಗಡಿ-ಮುಂಗಟ್ಟುಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಗಳ ತಂಡದ ದಾಳಿಯು ಶುಕ್ರವಾರವೂ ಮುಂದುವರೆಯಿತು. ನಗರದ ಬೆಂದೂರ್ ವೆಲ್ ಪ್ರದೇಶದಲ್ಲಿ 14 ಅಂಗಡಿಗಳಿಗೆ ದಾಳಿ…

ಹೊಸ ಸೇರ್ಪಡೆ