ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

 • ಬಿಎಸ್‌ವೈ ಸಂಪುಟ: ಮುಗಿದಿಲ್ಲ ಖಾತೆ ಕ್ಯಾತೆ ;  ಖಾತೆ ಬದಲಾವಣೆಗೆ ಹೊಸ ಸಚಿವರ ಪಟ್ಟು

  ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ, ರಾತೋರಾತ್ರಿ ಬದಲಾವಣೆಯಾಗಿದ್ದರೂ ಇನ್ನೂ ಕೆಲವು ಸಚಿವರ ಅಸಮಾಧಾನ ಶಮನವಾಗಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ಮತ್ತೆ ಬದಲಾವಣೆಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಆರಂಭದಲ್ಲಿ ಆಹಾರ ಖಾತೆ…

 • ಬೀದರಿನ ನೆಲದಲ್ಲಿ ನಾಗರಿಕ ವಿಮಾನಯಾನದ ಹೊಸ ಅಧ್ಯಾಯ ಪ್ರಾರಂಭ

  ಬೀದರ್: ಬಿಸಿಲೂರಿನ ನೆಲದಲ್ಲಿ ನಾಗರಿಕ ವಿಮಾನವೊಂದು ಇಳಿಯುವುದರೊಂದಿಗೆ ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಈ ಭಾಗದ ಜನರ ಒಂದು ದಶಕದ ಕಾತರ ಶುಕ್ರವಾರಕ್ಕೆ ಸಾಕಾರಗೊಂಡಿದೆ. ಆ ಮೂಲಕ ಗಡಿ ಜಿಲ್ಲೆ ಅಭಿವೃದ್ಧಿ, ಬದಲಾವಣೆಗೆ ಹೊಸ ಅಧ್ಯಾಯ ಆರಂಭವಾಯಿತು. ಇನ್ನೂ ಜಿಲ್ಲೆಯಿಂದ…

 • ಈ ಬಾರಿಯ ಬಜೆಟ್ ನಲ್ಲಿ ಕೃಷಿ ಮತ್ತು ಪಶು ಸಂಗೋಪನೆಗೆ ಆದ್ಯತೆ: ಮುಖ್ಯಮಂತ್ರಿ ಭರವಸೆ

  ಬೀದರ್: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೃಷಿ ಮತ್ತು ಪಶು ಸಂಗೋಪನೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಪಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಬೀದರ್ ನ ಹೊರವಲಯದ ಪಶು…

 • ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಿತಿ 20 ಕ್ವಿಂಟಾಲ್ ಗೆ ಹೆಚ್ಚಳ: ಮುಖ್ಯಮಂತ್ರಿ ಘೋಷಣೆ

  ಬೀದರ್ : ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿ ಬೆಳೆಯ ಮಿತಿಯನ್ನು 10 ರಿಂದ 20 ಕ್ವಿಂಟಾಲ್ ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಘೋಷಿಸಿದ್ದಾರೆ. ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪಶು ಮೇಳ ಉದ್ಘಾಟಿಸಿ…

 • ಸೋಮವಾರ ಸಂಪುಟ ವಿಸ್ತರಣೆ? ಅಮಿತ್‌ ಶಾ, ನಡ್ಡಾ ಒಪ್ಪಿಗೆ ಪಡೆಯುವಲ್ಲಿ ಬಿಎಸ್‌ವೈ ಯಶಸ್ವಿ

  ಬೆಂಗಳೂರು: ಅಂತೂ ಇಂತೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ದಿಲ್ಲಿ ಭೇಟಿ ಫ‌ಲಪ್ರದವಾಗಿದೆ. ಉಪಚುನಾವಣೆ ಅನಂತರ ಪ್ರತಿದಿನವೂ ಸದ್ದು ಮಾಡುತ್ತಿದ್ದ “ಸಂಪುಟ ವಿಸ್ತರಣೆ’ಗಾಗಿ ದಿಲ್ಲಿ ವರಿಷ್ಠರಿಂದ ಒಪ್ಪಿಗೆ ಪಡೆದಿರುವ ಬಿಎಸ್‌ವೈ, ನಗುಮೊಗದಲ್ಲೇ ಇನ್ನು 3 ದಿನಗಳಲ್ಲಿ ಹೊಸ ಸಚಿವರ…

 • ದಾವೋಸ್‌: ರಾಜ್ಯ ನಿಯೋಗಕ್ಕೆ ಕಿರಿಮಂಜೇಶ್ವರ ಯುವತಿ ಸಾಥ್‌

  ಕುಂದಾಪುರ: ಸ್ವಿಟ್ಸರ್ಲಂಡ್‌ನ‌ ದಾವೋಸ್‌ನಲ್ಲಿ ಜರಗುತ್ತಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ತಂಡಕ್ಕೆ ಕಿರಿಮಂಜೇಶ್ವರ ರಥಬೀದಿಯ ಅಪರ್ಣಾ ಮಾರ್ಗ ದರ್ಶಕರಾಗಿ ಜತೆಯಾಗಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾದ ಸಮುದಾಯದ ತಜ್ಞರಾದ…

 • ರಾಮನಗರ ಜಿಲ್ಲೆ ಮರು ನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

  ಬೆಂಗಳೂರು: ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದ್ದಾರೆ. “ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ….

 • ರಾಜ್ಯದ ಜನರ ಬೇಡಿಕೆಗಳಿಗೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ : ಬಿ.ಎಸ್.ವೈ. ಸ್ಪಷ್ಟನೆ

  ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ, ಪತ್ರಿಕಾ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ….

 • ಪರ್ಯಾಯ ಪುರಪ್ರವೇಶದ ಆಮಂತ್ರಣ ಪತ್ರಿಕೆ: ಮುಖ್ಯಮಂತ್ರಿ ಬಿಎಸ್‌ವೈ ಬಿಡುಗಡೆ

  ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜೆಯನ್ನು ಕೈಗೊಳ್ಳಲಿರುವ ಶ್ರೀ ಅದಮಾರು ಮಠಾಧೀಶರು ಪರ್ಯಾಯ ಪೂರ್ವಭಾವಿ ಸಂಚಾರವನ್ನು ಮುಗಿಸಿ ಪುರಪ್ರವೇಶ ಮಾಡುವ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಶುಕ್ರವಾರ ಬೆಂಗಳೂರಿನ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರಾದ…

 • ಬಿಎಸ್ ವೈ – ಶಾ ಭೇಟಿ ಅನುಮಾನ: ಮುಂದಿನ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ?

  ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಸದ್ಯ ಅಮಿತ್ ಶಾ ಜಾರ್ಖಂಡ್ ಚುನಾವಣೆಯ…

 • ಸಂಪುಟ ವಿಸ್ತರಣೆ ಕಸರತ್ತು: ಸಚಿವ ಸ್ಥಾನ, ಪ್ರಭಾವಿ ಖಾತೆಗಳಿಗೆ ಲಾಬಿ ಶುರು

  ಬೆಂಗಳೂರು: ಉಪ ಚುನಾವಣೆಯಲ್ಲಿ ಭಾರೀ ಗೆಲುವಿನೊಂದಿಗೆ ಸರಕಾರವನ್ನು ಸುಭದ್ರ ಮಾಡಿಕೊಂಡಿರುವ ಬಿಜೆಪಿಯಲ್ಲಿ ಈಗ ಸಂಪುಟ ವಿಸ್ತರಣೆಯ ಕಸರತ್ತು ಶುರುವಾಗಿದೆ. ಸಚಿವ ಸ್ಥಾನ ಮತ್ತು ಪ್ರಭಾವಿ ಖಾತೆಗಳಿಗಾಗಿ ಮೂಲ ಮತ್ತು ವಲಸಿಗ ಶಾಸಕರಲ್ಲಿ ಪೈಪೋಟಿ ಆರಂಭವಾಗಿದೆ.  ಸದ್ಯದಲ್ಲೇ ದಿಲ್ಲಿಗೆ ತೆರಳಲಿರುವ…

 • ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಉಜಿರೆಗೆ

  ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಡಿ. 8ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಾಲೂಕಿಗೆ ಆಗಮಿಸಲಿದ್ದಾರೆ. ಉಜಿರೆ ರತ್ನವರ್ಮ ಹೆಗ್ಗಡೆ ಕ್ರಿಡಾಂಗಣದಲ್ಲಿ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ವಿವಿಧ ಇಲಾಖೆಯ 347 ಕೋ.ರೂ….

 • ನಾಯಕತ್ವದ ಅಗ್ನಿಪರೀಕ್ಷೆ

  ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಸರಕಾರ ಪತನಗೊಳಿಸುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ತಿಂಗಳ ಕಾಲ ಹೋರಾಟ ನಡೆಸಿ ಸ್ಪರ್ಧೆಗೆ ಅವಕಾಶ ಪಡೆದ ಅನರ್ಹರು ಎದುರಿಸುತ್ತಿರುವ ಉಪ ಚುನಾವಣೆ ಈಗ ಮೂರೂ ಪಕ್ಷಗಳ ನಾಯಕತ್ವದ…

 • ಕಾವೇರಿದ ಉಪಕಣ: ಕಾಂಗ್ರೆಸ್‌, ಬಿಜೆಪಿಯಿಂದ ತಲಾ 15 ಅಭ್ಯರ್ಥಿಗಳು ಕಣದಲ್ಲಿ

  ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸಲಿರುವ 15 ಕ್ಷೇತ್ರಗಳ ಉಪಚುನಾವಣೆಯ ಅಖಾಡ ಸಿದ್ಧವಾಗಿದ್ದು, ಅಂತಿಮವಾಗಿ 165 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 15 ಹಾಗೂ ಜೆಡಿಎಸ್‌ನ 12…

 • ಮಾಧುಸ್ವಾಮಿ ಪರ ನಾನು ಕ್ಷಮೆ ಕೇಳುತ್ತೇನೆ : ಸಿ.ಎಂ ಬಿ.ಎಸ್. ಯಡಿಯೂರಪ್ಪ

  ಬೆಂಗಳೂರು: ಹೊಸದುರ್ಗದ ಕಾಗಿನೆಲೆ ಶ್ರೀಗಳ ವಿಚಾರದಲ್ಲಿ ಕೊಟ್ಟ ಹೇಳಿಕೆಯಲ್ಲಿ ತಪ್ಪು ಗ್ರಹಿಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಸಚಿವ  ಮಾಧುಸ್ವಾಮಿ ಈಗಾಗಲೇ ಹೇಳಿದ್ದಾರೆ.  ಅವರ ಪರವಾಗಿ ನಾನು ಆ ಸಮಾಜದ ಬಂಧುಗಳಲ್ಲಿಕ್ಷಮೆ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ…

 • ತನ್ವೀರ್‌ ಸೇಠ್ ಹತ್ಯೆ ಯತ್ನ: ಹಾಲಿ- ಮಾಜಿ ಮುಖ್ಯಮಂತ್ರಿಗಳ ವಾಕ್ಸಮರ

  ಬೆಂಗಳೂರು: ಮಾಜಿ ಸಚಿವ ತನ್ವೀರ್‌ ಸೇಠ್ ಹತ್ಯೆ ಯತ್ನ ವಿಚಾರ ಈಗ ಹಾಲಿ ಹಾಗೂ ಮಾಜಿ ಮುಖ್ಯ ಮಂತ್ರಿಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ ಸಂಘಟನೆ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆದಿದ್ದರು. ಈಗ ತನ್ವೀರ್‌…

 • ಮಹಿಳಾ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ: ಯಡಿಯೂರಪ್ಪ

  ಬೆಂಗಳೂರು: ಹೊಸ ಕೈಗಾರಿಕಾ ನೀತಿಯಲ್ಲಿ ಸರಕಾರ ಮಹಿಳಾ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭರವಸೆ ನೀಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿ ಗಳ ದಿನಾಚರಣೆ…

 • 17ಕ್ಕೆ  17 ಸ್ಥಾನ ಗೆಲ್ಲಲು ಶ್ರಮಿಸಲಾಗುವುದು

  ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಕೋರ್ ಕಮಿಟಿ ಸಭೆ ಬಳಿಕ ಹೈಕಮಾಂಡ್ ಜತೆಗೂ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,  ಹೇಳಿದರು. ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ…

 • ಯಡಿಯೂರಪ್ಪ ಪದತ್ಯಾಗಕ್ಕೆ ಐವನ್‌ ಆಗ್ರಹ

  ಮಂಗಳೂರು: ಅನರ್ಹ ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿರುವ ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಆಗ್ರಹಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು…

 • ಸಂತ್ರಸ್ತರಿಗೆ ಮನೆ ಹಸ್ತಾಂತರ: ಸಚಿವ ಸೋಮಣ್ಣ ಭರವಸೆ

  ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಕ್ಟೋಬರ್‌ 25 ಅಥವಾ ನವೆಂಬರ್‌ 3ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಹಾನಿ ಸಂತ್ರಸ್ತರಿಗೆ ನೂತನ ಮನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ‌ ವಿ. ಸೋಮಣ್ಣ ತಿಳಿಸಿದ್ದಾರೆ. ಕೊಡಗಿನ ವಿವಿಧೆಡೆ ಸಂಭವಿಸಿದ…

ಹೊಸ ಸೇರ್ಪಡೆ