ರಾಯಚೂರು: Raichur:

 • ವಿದ್ಯಾರ್ಥಿನಿಯರಿಗೆ ಓದಲು ಸ್ಥಳಾಭಾವ

  „ಸಿದ್ಧಯ್ಯ ಸ್ವಾಮಿ ಕುಕನೂರು ರಾಯಚೂರು: ಸಹಸ್ರಾರು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವ ರಾಯಚೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳಾಭಾವದ್ದೆ ಸಮಸ್ಯೆ. ಗ್ರಂಥಾಲಯಕ್ಕೆ ನಿತ್ಯ ಬರುವ ಸಾಕಷ್ಟು ವಿದ್ಯಾರ್ಥಿನಿಯರಿಗೆ ಸ್ಥಳ ಸಿಗದೆ ನೆಲದ ಮೇಲೆ, ಉದ್ಯಾನವನದಲ್ಲಿ ಕುಳಿತು ಓದುವಂತ ಪರಿಸ್ಥಿತಿ ಇದೆ….

 • ಮಾದರಿ ಕೆರೆ ನಿರ್ಮಿಸಲು ಸೂಚನೆ

  ರಾಯಚೂರು: ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಬೃಹತ್‌ ಕೆರೆಯೊಂದನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಸಣ್ಣ ನೀರಾವರಿ…

 • ಉಳ್ಳವರ ಜೇಬಲ್ಲಿ ಬಡವರ ಪಡಿತರ ಚೀಟಿ!

  ರಾಯಚೂರು: ಪಡಿತರ ಚೀಟಿ ದುರ್ಬಳಕೆ ತಡೆಗೆ ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಾಕಷ್ಟು ಸವಾಲುಗಳು ಎದುರಾಗಿದ್ದು, ಗ್ರಾಹಕರಿಂದ ಅಸಹಕಾರ ಹೆಚ್ಚಾಗಿದೆ. ಈವರೆಗೆ ಜಿಲ್ಲೆಯಲ್ಲಿ 6 ಸಾವಿರ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದು, ಸಾಕಷ್ಟು ಜನ ಸ್ವ…

 • ಬಡ್ತಿಗೆ ಸಹಾಯಕ ಕೃಷಿ ಅಧಿಕಾರಿಗಳ ಆಗ್ರಹ

  ರಾಯಚೂರು: ನನೆಗುದ್ದಿಗೆ ಬಿದ್ದ ವೃಂದ ಹಾಗೂ ನೇಮಕಾತಿ ರಚಿಸಿ ಸಹಾಯಕ ಕೃಷಿ ಅಧಿಕಾರಿ ಹುದ್ದೆಯಿಂದ ಕೃಷಿ ಅಧಿಕಾರಿ ಹುದ್ದೆಗೆ ಬಡ್ತಿ ನೀಡುವಂತೆ ಆಗ್ರಹಿಸಿ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಸದಸ್ಯರು ಧರಣಿ ನಡೆಸಿದರು. ಕೃಷಿ ಇಲಾಖೆ ಆವರಣದಲ್ಲಿ ಧರಣಿ…

 • ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ಸಂಗ್ರಹಿಸಿ

  ರಾಯಚೂರು: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಅಗತ್ಯವಿರುವ ಪ್ರಮಾಣಿತ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ವಿತರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2019-20ನೇ…

 • ಕಳಪೆ ಹೆಲ್ಮೆಟ್‌ ಕೊಟ್ಟ ಪೊಲೀಸರು?

  ರಾಯಚೂರು: ಬೈಕ್‌ ಸವಾರರು ಅಧಿಕೃತ ಕಂಪನಿಗಳ ಗುಣಮಟ್ಟದ ಹೆಲ್ಮೆಟ್‌ ಬಳಸಬೇಕು ಎಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಬೈಕ್‌ ಸವಾರರಿಗೆ ಸಾವಿರ ರೂ. ದಂಡ ಹಾಕಿ, ಬದಲಿಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ವಿತರಿಸಿರುವುದು ಸವಾರರ ಆಕ್ರೋಶಕ್ಕೆ ಕಾರಣವಾಗಿದೆ….

 • ನವಶಕ್ತಿ ವೈಭವಕ್ಕೆ ವಿಧ್ಯುಕ್ತ ಚಾಲನೆ

  ರಾಯಚೂರು: ದಸರಾ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ನವಶಕ್ತಿ ವೈಭವ ಎಂದಿಗಿಂತ ಕಳೆಗಟ್ಟಿದ್ದು, ದೇವಿ ಆರಾಧನೆಗೆ ರವಿವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ವಿವಿಧ ಸಮಾಜಗಳಿಂದ ದೇವಿ ಆರಾಧನೆಗೆ ವಿಜೃಂಭಣೆಯ ಚಾಲನೆ ನೀಡಲಾಯಿತು. ನಗರದ ಶ್ರೀ…

 • ಗುರುತಿನ ಚೀಟಿ ನ್ಯೂನತೆ ಸರಿಪಡಿಸಿಕೊಳ್ಳಿ

  ರಾಯಚೂರು: ಜಿಲ್ಲೆಯ ಮತದಾರರ ಗುರುತಿನ ಚೀಟಿಯಲ್ಲಿ ಕಂಡು ಬರುವ ನ್ಯೂನತೆಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಹಾಗೂ ಮತದಾರರ…

 • ವಿಶಾಖಪಟ್ಟಣವೋ; ಹುಬ್ಬಳ್ಳಿ ವಲಯವೋ?

  ಸಿದ್ಧಯ್ಯಸ್ವಾಮಿ ಕುಕನೂರು ರಾಯಚೂರು: ಆಡಳಿತಾತ್ಮಕ ಸಮಸ್ಯೆ ಎದುರಿಸುವ ಸ್ಪಷ್ಟ ಸೂಚನೆ ಇದ್ದಾಗ್ಯೂ ಕೇಂದ್ರ ಸರ್ಕಾರ ಗುಂತಕಲ್‌ ವಿಭಾಗವನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲು ಹೊರಟಿರುವ ಸೌಥ್‌ ಕೋಸ್ಟಲ್‌ ರೈಲ್ವೆ ವಿಭಾಗಕ್ಕೆ ಸೇರಿಸಲು ಯೋಜನೆ ರೂಪಿಸಿದ್ದಕ್ಕೆ ಜಿಲ್ಲೆಯಲ್ಲಿ ತೀವ್ರ ಪತಿರೋಧ ವ್ಯಕ್ತವಾಗುತ್ತಿದೆ. ಈ…

 • ಮಸ್ಕಿ ಹೆಸರಿಗಷ್ಟೇ ಹೊಸ ತಾಲೂಕು!

  ಉಮೇಶ್ವರಯ್ಯ ಬಿದನೂರಮಠ ರಾಯಚೂರು (ಮಸ್ಕಿ): ಕಳೆದೆರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸರ್ಕಾರ ನೂತನ ಮಸ್ಕಿ ತಾಲೂಕು ಘೋಷಿಸಿತ್ತು. ಆದರೆ ಸರ್ಕಾರ ನೂತನ ತಾಲೂಕಿಗೆ ಅಗತ್ಯ ಅನುದಾನ ನೀಡದ್ದರಿಂದ ನಾನಾ ಸಂಕಷ್ಟಗಳ ಮಧ್ಯೆ ಅಲ್ಲಿ ಆಡಳಿತ ನಡೆಯುತ್ತಿದೆ. 2017ರ ಜುಲೈನಲ್ಲಿ…

 • ಎಸ್ಸೆಸ್ಸೆಲಿ ಫಲಿತಾಂಶ ಸುಧಾರಣೆ ಮುಖ್ಯ ಶಿಕ್ಷಕರ ಹೊಣೆ

  ರಾಯಚೂರು: ಜಿಲ್ಲೆಯಲ್ಲಿ ಎಸ್ಸೆಸ್ಸಲ್ಸಿ ಫಲಿತಾಂಶ ಸುಧಾರಣೆಗೆ ಹಲವು ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಪಂ ಸಿಇಒ ಲಕ್ಷ್ಮೀ ಕಾಂತ ರೆಡ್ಡಿ ಹೇಳಿದರು. ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗೆ ನಗರದ ಜಿಪಂ…

 • ಆರೋಗ್ಯ ಸಂರಕ್ಷಣೆ ಜಾಗೃತಿ ಮೂಡಿಸಿ

  ರಾಯಚೂರು: ಪ್ರೌಢಶಾಲೆ ವಿದ್ಯಾರ್ಥಿನಿಯರು ಋತುಮತಿ ದಿನಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಆರೋಗ್ಯ  ರಕ್ಷಣೆ ಕ್ರಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸುವ ಹೊಣೆ ನಿಮ್ಮ ಮೇಲಿದೆ ಎಂದು ಡಿಡಿಪಿಐ ಬಿ.ಕೆ ನಂದನೂರು ಹೇಳಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

 • ಮೈಸೂರು ದಸರಾದಲ್ಲಿ ಮಿಂಚಲಿದೆ ಗೂಗಲ್‌ ಬ್ಯಾರೇಜ್‌

  ರಾಯಚೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಜಿಲ್ಲೆಯ ಗೂಗಲ್‌ ಬ್ರಿಡ್ಜ್ ಕಂ ಬ್ಯಾರೇಜ್‌ನ ಸ್ಥಬ್ಧಚಿತ್ರ ಮಿಂಚಲಿದ್ದು, ಅದರೊಟ್ಟಿಗೆ ಪ್ರಧಾನಮಂತ್ರಿ ಕೃಷಿ ಸಿಂಚನ ಮತ್ತು ಮಹಾತ್ಮ ಗಾಂಧಿ  ಉದ್ಯೋಗ ಖಾತ್ರಿ ಯೋಜನೆಗಳ ಮಾಹಿತಿಯೂ ಇರಲಿದೆ. ಈ ವರ್ಷವೂ ಜಿಪಂನಿಂದ…

 • ರಸ್ತೆ ಗುಂಡಿ ಮುಚ್ಚಲು 2 ತಿಂಗಳ ಗಡುವು

  ರಾಯಚೂರು: ಜಿಲ್ಲೆಯಲ್ಲಿ ಹಾದು ಹೋಗಿರುವ ಎಲ್ಲ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನವೆಂಬರ್‌ ಒಳಗಾಗಿ ಮುಚ್ಚದಿದ್ದಲ್ಲಿ ಅಧಿಕಾರಿಗಳ ಕೈಗೆ ಅಮಾನತು ಆದೇಶ ನೀಡುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು….

 • ಪರಿಸರ ಮಾಲಿನ್ಯದಿಂದ ಜೀವಸಂಕುಲಕ್ಕೆ ಅಪಾಯ

  ರಾಯಚೂರು: ಮನುಷ್ಯ ಮತ್ತು ಭೂಮಿ ಮೇಲಿನ ಜೀವಸಂಕುಲಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ವಿಶ್ವದ ಮುಖ್ಯ ಗುರಿಯಾಗಬೇಕು ಎಂದು ಸಾಹಿತಿ ಆಂಜಿನಯ್ಯ ಜಾಲಿಬೆಂಚಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅಯ್ಯನಗೌಡ ನಂದಿಹಳ್ಳಿ ಅವರ…

 • ರಾಯಚೂರು : ಎಸ್ ಪಿ ನೇತೃತ್ವದಲ್ಲಿ ಪುರಾತನ ಬಾವಿ ಸ್ವಚ್ಛತೆ

  ರಾಯಚೂರು: ಪ್ಲಾಸ್ಟಿಕ್ ಕಸ ಕಡ್ಡಿಯಿಂದ ಹಾಳಾಗಿ ಹೋಗಿದ್ದ ಇಲ್ಲಿನ ವಾಸವಿ ನಗರದ ಪುರಾತನ ಬಾವಿಯನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ರವಿವಾರ ಸ್ವಚ್ಛಗೊಳಿಸಲಾಯಿತು. ಬೆಳ್ಳಂಬೆಳಗ್ಗೆ ಕೈಗೆ ಗ್ಲೌಸ್ ಗಳನ್ನು ಹಾಕಿಕೊಂಡು ಖುದ್ದು ಎಸ್ಪಿಯೇ ಬಾವಿಗಿಳಿದ ಕಾರಣ ಇದರಿಂದ ಪ್ರೇರಿತರಾಗಿ…

 • ಸೌಲಭ್ಯ ಕಲ್ಪಿಸದಿದ್ದರೆ ಕ್ರಮ ಕೈಗೊಳ್ಳಿ

  ರಾಯಚೂರು: ಯಾವುದೇ ಕಾರ್ಖಾನೆ ಗಳು, ಉದ್ಯಮಗಳು ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ತಿಳಿಸಿದರು. ನಗರದ ಪ್ರವಾಸಿ…

 • ಕೊಳಂಕಿಗೆ ಸದ್ಭಾವನಾ ಪಾದಯಾತ್ರೆ

  ರಾಯಚೂರು: ಜೀವೈಕ್ಯ ಕೊಳಂಕಿ ಗುರುಪಾದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ 968ನೇ ವರ್ಷದ ಜಯಂತಿಯ ಪರ್ವು ಸಮಾರಾಧನೆ ಅಂಗವಾಗಿ ನಗರದ ಕಿಲ್ಲೇ ಬೃಹನ್ಮಠದಿಂದ ಕೊಳಂಕಿಯವರೆಗೆ ಹಮ್ಮಿಕೊಂಡ13ನೇ ವರ್ಷದ ಸದ್ಭಾವನಾ ಪಾದಯಾತ್ರೆಗೆ ಉತ್ತರಾಖಂಡ ರಾಜ್ಯದ ಊಖೀ ಮಠದ ಜಗದ್ಗುರು ಕೇದಾರನಾಥ ರಾವಲ್…

 • ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

  ರಾಯಚೂರು: ದೇಶವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ ದ್ದಾಗಿದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ…

 • ಕೃಷ್ಣೆ ಹರಿವು ಹೆಚ್ಚಳ ಜನರಲ್ಲಿ ಕಳವಳ

  ರಾಯಚೂರು: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ನಾಲ್ಕು ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದು, ದಿನೇದಿನೆ ಪ್ರವಾಹ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಕೂಡ ರಕ್ಷಣಾ ಕಾರ್ಯ ಮುಂದುವರಿಸಿದ್ದು, ನಡುಗಡ್ಡೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ….

ಹೊಸ ಸೇರ್ಪಡೆ

 • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

 • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

 • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

 • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

 • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...