ಶಹಾಪುರ: Shahapura:

 • ಅಂಬೇಡ್ಕರ್‌ ಆದರ್ಶ ಪಾಲಿಸಿ: ನೀಲಾ

  ಶಹಾಪುರ: ಹಿಂದೆ ವಿದ್ಯಾರ್ಥಿಗಳ ಜೀವನ ಎಂದರೆ ಬಂಗಾರದ ಜೀವನ ಎನ್ನಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಜೀವನ ಕೇವಲ ಮೊಬೈಲ್ ಜೀವನ ಆಗಿದೆ ಎಂದರೆ ತಪ್ಪಿಲ್ಲ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ. ನೀಲಾ ಹೇಳಿದರು….

 • ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

  ಶಹಾಪುರ: ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ತಮ್ಮ ಮನಬಂದಂತೆ ವಿದ್ಯಾರ್ಥಿಗಳ ಆಯ್ಕೆ ನಡೆಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ಎಸ್‌ಎಫ್‌ಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಕಂದಾಯ…

 • ಕುಡಿವ ನೀರು ಕಲ್ಪಿಸಲು ಆಗ್ರಹ

  ಶಹಾಪುರ: ನಗರದ ವಾರ್ಡ್‌ ಸಂಖ್ಯೆ 16ರಲ್ಲಿ ಕುಡಿಯಲು ನೀರು ದೊರೆಯದ ಕಾರಣ ಬಡಾವಣೆ ಜನರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು. ಕಳೆದ ಆರು ತಿಂಗಳಿಂದ ವಾರ್ಡ್‌ ಸಂಖ್ಯೆ 16ರ ನಿವಾಸಿಗಳು ಸಮಪರ್ಕ ಕುಡಿಯಲು ನೀರು…

 • ನೆರೆ ಪೀಡಿತ ಹ‌ಳ್ಳಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಪಾದಯಾತ್ರೆ

  ಶಹಾಪುರ: ನೆರೆ ಹಾವಳಿಗೆ ತುತ್ತಾದ ಕೃಷ್ಣಾ ಮತ್ತು ಭೀಮಾ ನದಿ ತೀರದ ಹಲವಾರು ಗ್ರಾಮಗಳನ್ನು ಸ್ಥಳಾಂತರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ಹತಿಗೂಡೂರ ಗ್ರಾಮದ ಡಾ| ಬಾಬಾ ಸಾಹೇಬ್‌…

 • ಸಂತ್ರಸ್ತರಿಗೆ ನೆರವಿನ ಅಭಯ ನೀಡಿ

  ಶಹಾಪುರ: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ನದಿ ತೀರದ ಜನರು ಸಂಕಷ್ಟದಲ್ಲಿ ಸಿಲುಕಿರುವಾಗ ನಾವೆಲ್ಲರೂ ಮಾನವೀಯ ಸ್ಪಂದನೆ ಮುಲಾಮು ನೀಡುವುದು ಅಗತ್ಯವಿದೆ. ಸಂಕಷ್ಟದಲ್ಲಿ ಇರುವ ಜನರಿಗೆ ನೆರವಿನ ಅಭಯ ನೀಡಬೇಕು. ಸಂತ್ರಸ್ತರ ಬದುಕು ಪುನರ್‌ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು…

 • ನಿಗದಿತ ಅವಧಿಗೆ ಕಾಮಗಾರಿ ಮುಗಿಸಿ

  ಶಹಾಪುರ: ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷ ಆಗದಂತೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕೂಡಿರಬೇಕು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ತಾಲೂಕಿನ…

 • ಸಂಪೂರ್ಣ ಹದಗೆಟ್ಟ ಕೊಳ್ಳೂರ ಸೇತುವೆ ರಸ್ತೆ

  ಶಹಾಪುರ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲೂಕಿನ ಕೊಳ್ಳೂರ (ಎಂ) ಸೇತುವೆ ಕಳೆದ ಹದಿನೈದು ದಿನದಿಂದ ಸಂಪೂರ್ಣ ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿತ್ತು. ಆದರೆ ಮೂರು ದಿನಗಳಿಂದ ಪ್ರವಾಹ ಇಳಿಕೆಯಾಗಿದ್ದು, ಪ್ರಸ್ತುತ ಸೇತುವೆ ಗೋಚರವಾಗುತ್ತಿದೆ. ಆದರೆ ಸೇತುವೆಯಿಂದ ಕೊಳ್ಳೂರ ಗ್ರಾಮಕ್ಕೆ ಬರುವ…

 • ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ನಾಯಕರ ಸ್ಮರಣೆ ಅಗತ್ಯ: ದರ್ಶನಾಪುರ

  ಶಹಾಪುರ: ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಮಹಾತ್ಮರ ನಾಯಕರ ನೇತೃತ್ವದಲ್ಲಿ ಹೋರಾಟ, ಅಹಿಂಸಾತ್ಮಕ ಚಳವಳಿ ನಡೆಸುವ ಮೂಲಕ ಬ್ರಿಟಿಷರ ಕಪಿ ಮುಷ್ಟಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಕ್ಕಾಗಿ ಹಲವಾರು ನಾಯಕರು ಬಲಿದಾನ ನೀಡಿದ್ದಾರೆ. ಅಂತವರ ಸ್ಮರಣೆ ಅಗತ್ಯವಿದೆ ಎಂದು…

 • ಸಂತ್ರಸ್ತರ ಸಮಸ್ಯೆ ಆಲಿಸಿದ ರಾಜುಗೌಡ

  ಸುರಪುರ: ನಗರದ ಎಪಿಎಂಸಿಯಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಸೋಮವಾರ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಬಟ್ಟೆ, ಬೆಡ್‌ಸೀಟ್ ಮತ್ತಿತರ ವಸ್ತುಗಳನ್ನು ವಿತರಿಸಿದರು. ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿ ನಂತರದ ಮಾತನಾಡಿದ ಅವರು, ನೆರೆ ರಾಜ್ಯ…

 • ಅನುದಾನ ದುರ್ಬಳಕೆ ಆರೋಪ

  ಶಹಾಪುರ: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು 14ನೇ ಹಣಕಾಸು ಯೋಜನೆ ಅನುದಾನ ಸದ್ಬಳಕೆ ಮಾಡಿಕೊಳ್ಳದೆ ಅಕ್ರಮವಾಗಿ ಬಳಸಿಕೊಂಡಿದ್ದು, ಕೂಡಲೇ ತನಿಖೆ ನಡಸಬೇಕೆಂದು ಆಗ್ರಹಿಸಿ ಇಲ್ಲಿನ ಕೆಆರ್‌ಡಿಎಸ್‌ಎಸ್‌ ಕಾರ್ಯಕರ್ತರು ತಾಪಂ ಕಚೇರಿ ಮುಂದೆ ಧರಣಿ ಕೈಗೊಂಡು ಸ್ಥಳಕ್ಕೆ…

 • ಯಕ್ಷಿಂತಿ ಗ್ರಾಮದ 200 ಮನೆ ಸ್ಥಳಾಂತರಿಸಲು ಮನವಿ

  ಶಹಾಪುರ: ತಾಲೂಕಿನ ಯಕ್ಷಿಂತಿ ಗ್ರಾಮದ ಸುಮಾರು ಎರಡು ನೂರು ಮನೆಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪ್ರವಾಹ ಬಂದಾಗೊಮ್ಮೆ ಕೃಷ್ಣಾ ನದಿ ನೀರಿನಿಂದ ಇಲ್ಲಿನ ಜನರ ಸ್ಥಿತಿ ಅಧೋಗತಿಗೆ ತಲುಪುತ್ತದೆ. ಗ್ರಾಮಸ್ಥರ ಬದುಕು ತಹಬಂದಿಗೆ ಬರಲು…

 • ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಭಾಗಿತ್ವ ಅಗತ್ಯ

  ಶಹಾಪುರ: ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡವರಿಗೆ ಕೈಗೆಟುಕದ ರೋಗಗಳ ತಪಾಸಣೆ ನಡೆಸಿ ಆಯಾ ರೋಗಕ್ಕೆ ಬೇಕಾದ ಸೂಕ್ತ ಶಸ್ತ್ರ ಚಿಕಿತ್ಸೆ ಕೊಡಿಸುವಂತ ಮಹತ್ವದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಇಲ್ಲಿನ ಸ್ವಕುಳ ಸಾಳಿ ಸಮಾಜ ಹಾಗೂ ಬೆಂಗಳೂರಿನ…

 • ಪುಸ್ತಕಗಳಿಂದ ಜ್ಞಾನ ಹೆಚ್ಚಳ

  ಶಹಾಪುರ: ವಿವಿಧ ಬಗೆಯ ಸಾಹಿತ್ಯ ಪ್ರಕಾರದ ಉತ್ತಮ ಪುಸ್ತಕಗಳನ್ನು ಓದುವುದರಿಂದ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಜೊತೆಗೆ ಮನುಷ್ಯನ ಜ್ಞಾನ ಭಂಡಾರ ಹೆಚ್ಚಾಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರ…

 • ಸೌಲಭ್ಯ ಕಲ್ಪಿಸಲು ಬದ್ಧ

  ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣ ಮುತ್ಯಾನ ನೂತನ ಮಂದಿರ ನಿರ್ಮಾಣ ಮತ್ತು ವಿಶೇಷ ಪೂಜೆ ಶ್ರದ್ಧೆ ಭಕ್ತಿಯಿಂದ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ ಇಲ್ಲಿನ ಜನರ ಇಷ್ಟಾರ್ಥಗಳ ಈಡೇರಿಸುವ ಜೊತೆಗೆ ಈ ಕ್ಷೇತ್ರದಲ್ಲಿ ಸಮೃದ್ಧ ಮಳೆ ಬೆಳೆಯಾಗಿ ರೈತರ ಕಷ್ಟ ನಿವಾರಿಸಲಿ…

 • ಬಿಜೆಪಿ ಯೋಜನೆ ಮನೆ ಮನೆಗೆ ತಿಳಿಸಿ

  ಶಹಾಪುರ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ದೇಶದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಿದೆ. ಅವರ ಜನಪ್ರಿಯ ಯೋಜನೆಗಳು ಮತ್ತು ದೇಶಕ್ಕಾಗಿ ಕೈಗೊಂಡ ಹಲವಾರು ಐತಿಹಾಸಿಕ ನಿರ್ಣಯಗಳು ಮನೆಮಾತಾಗಿದೆ ಎಂದು ಬಿಜೆಪಿ ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕ ಶರಣಗೌಡ…

 • ಮಳೆ ಅಬ್ಬರಕ್ಕೆ ತರಕಾರಿ ಸಂತೆ ಅಸ್ತವ್ಯಸ್ತ

  ಶಹಾಪುರ: ರವಿವಾರ ಮಧ್ಯಾಹ್ನ ಸುರಿದ ಮಳೆಗೆ ತರಕಾರಿ ನೆಲಕ್ಕುರುಳಿ ಅಪಾರ ನಷ್ಟವಾದ ಘಟನೆ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ. ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರಿಗಳು ಅಪಾರ ಪ್ರಮಾಣದ ತರಕಾರಿ ಮಾರಾಟಕ್ಕಾಗಿ ತಂದಿದ್ದರು. ಕೆಲ ಹೊತ್ತಿನಲ್ಲೆ ಮಳೆ ಸುರಿದ ಹಿನ್ನೆಲೆಯಲ್ಲಿ…

 • ಮಹಿಳೆಯರು ಧೈರ್ಯದಿಂದಿರಲಿ: ಕಾವ್ಯಾಶ್ರೀ

  ಶಹಾಪುರ: ಮನುಸ್ಮತಿ ಎಳೆಯನ್ನು ಹಿಡಿದುಕೊಂಡು ಹೊರಟ ಗಂಡು ಪ್ರಧಾನ ಸಮಾಜ ತನ್ನ ಮೂಗಿನ ನೇರಕ್ಕೆ ಆಲೋಚಿಸಿ ಸಮಾಜದಲ್ಲಿ ಕಟ್ಟುಪಾಡುಗಳನ್ನು ರೂಪಿಸಿಕೊಂಡು ಹೊರಟಿದೆ. ಇದರಿಂದ ಸಹಜವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಇಂದಿಗೂ ಇಲ್ಲ ಎಂದು ಕಾವ್ಯಶ್ರೀ ಮಹಾಗಾಂವಕರ್‌ ವಿಷಾದ…

 • ಗ್ರಾಪಂ ಅಧ್ಯಕ್ಷರ ಗ್ರಾಮದಲ್ಲೇ ಅನೈರ್ಮಲ್ಯ

  ಶಹಾಪುರ: ಸ್ವತಃ ಗಾಪಂ ಅಧ್ಯಕ್ಷ ಇದೇ ಗ್ರಾಮದ ನಿವಾಸಿ. ನಾಲ್ವರು ಗ್ರಾಪಂ ಸದಸ್ಯರಿದ್ದರೂ ಸೌಲಭ್ಯ ಮರೀಚಿಕೆ. ರಸ್ತೆ, ಚರಂಡಿ, ಶೌಚಾಲಯ ಮತ್ತು ಕುಡಿಯುವ ನೀರಿಗೂ ಬರ. ಇದು ತಾಲೂಕಿನ ಮಡ್ನಾಳ ಗ್ರಾಮದ ಪರಿಸ್ಥಿತಿ. ಗ್ರಾಮದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ….

 • ಬಾಡಿಗೆ ಕಟ್ಟಡದಲ್ಲಿ ಸಿಡಿಪಿಒ ಕಚೇರಿ

  ಶಹಾಪುರ: ನಗರದ ಗಂಜ್‌ ಏರಿಯಾದ ಖಾಸಗಿ ಕಟ್ಟಡವೊಂದರಲ್ಲಿ ಕಳೆದ 20 ವರ್ಷದಿಂದ ಬಾಡಿಗೆಗೆ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಕಟ್ಟಡ ಶಿಥಿಲಗೊಂಡಿದ್ದರೂ ಇನ್ನೂ ಅಧಿಕಾರಿಗಳು ತಮ್ಮ ಕಚೇರಿ ಬದಲಾವಣೆ ಮಾಡಲು ಮನಸ್ಸು ಮಾಡುತ್ತಿಲ್ಲ. ಕಚೇರಿ…

 • 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

  ಶಹಾಪುರ: ಮಹಿಳೆಯೋರ್ವಳ ಹೆರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಹತ್ತಿರ ಆರೋಗ್ಯ ಇಲಾಖೆಯ 108 ವಾಹನದಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ಈಚೆಗೆ ನಡೆದಿದೆ….

ಹೊಸ ಸೇರ್ಪಡೆ