CONNECT WITH US  

ಕಠಿಣ ಪರಿಶ್ರಮವು ಯಶಸ್ಸನ್ನು ಖಾತ್ರಿಪಡಿಸುವುದಿಲ್ಲ. ಆದರೆ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ದಯಾಪರರಾಗಿ. ದಯೆಯಷ್ಟು ದೊಡ್ಡ ಗುಣ ಜೀವನದಲ್ಲಿ ಮತ್ತೂಂದಿಲ್ಲ.

ನೀವು ತಯಾರಿ ನಡೆಸಲು ವಿಫ‌ಲರಾದರೆ, ವಿಫ‌ಲರಾಗಲು ತಯಾರಿ ನಡೆಸುತ್ತಿದ್ದೀರಿ ಎಂದರ್ಥ.

ಗುರಿಯನ್ನು ಬೆನ್ನತ್ತುವವನು ಸೋಲು ಗೆಲುವಿನ ವಿಚಾರ ಮಾಡಲೇಬಾರದು. 

ನಮ್ಮ ಆಲೋಚನೆಗಳು ಉತ್ತಮವಾಗಿರಬೇಕು. ದೃಷ್ಟಿಗಿಂತಲೂ ದೃಷ್ಟಿಕೋನ ಸ್ಪಷ್ಟವಾಗಿರುವುದು ಮುಖ್ಯ.

ಜೀವನದಲ್ಲಿ ನೀವು ಏನು ಪಡೆಯುತ್ತೀರಿ ಎನ್ನುವುದಕ್ಕಿಂತ, ಏನಾಗುತ್ತೀರಿ ಎನ್ನುವುದು ಮುಖ್ಯ.

ನಗುನಗುತ್ತಾ ಬದುಕಲು ಕಾರಣಗಳನ್ನು ಹುಡುಕುತ್ತಲೇ ಇರಿ. ನಗು ನಿಮ್ಮ ಜೀವನಕ್ಕೆ ಜೀವ ತುಂಬುತ್ತದೆ.

ನಿಮ್ಮ ಸಂತೋಷದ ಕೀಲಿಕೈಯನ್ನು ಎಂದಿಗೂ ಇನ್ನೊಬ್ಬರ ಕಿಸೆಯಲ್ಲಿ ಹಾಕಬೇಡಿ!

ನಿಮಗೆ ಸಾಧ್ಯವಾದದ್ದನ್ನು ಮಾಡಿ. ಇರುವುದನ್ನೇ ಬಳಸಿಕೊಳ್ಳಿ.ಇದ್ದಲ್ಲಿಂದಲೇ ಆರಂಭಿಸಿ!

ಒಂದು ಪುಸ್ತಕಕ್ಕೆ, ಒಬ್ಬ ಶಿಕ್ಷಕನಿಗೆ ಇಡೀ ಜಗತ್ತನ್ನೇ ಬದಲಿಸುವ ಶಕ್ತಿಯಿರುತ್ತದೆ ಎನ್ನುವುದನ್ನು ಮರೆಯುವುದು ಬೇಡ.

ನೀವು ನೀವಾಗಿರಲು ನಿರ್ಧರಿಸಿದ ದಿನವೇ ನಿಮ್ಮ ಬದುಕು ಬದಲಾಗಲಾರಂಭಿಸುತ್ತದೆ. 

ನಿಮಗೆ ನೀವು ಸತ್ಯಹೇಳಿಕೊಳ್ಳುವುದನ್ನು ಕಲಿಯಿರಿ.ಸುಳ್ಳಿನಿಂದ ಬೆಳವಣಿಗೆ ಸಾಧ್ಯವಿಲ್ಲ. 

ಮಾತುಗಳು ಎಷ್ಟೇ ದೊಡ್ಡವಾಗಿದ್ದರೂ ಕೊನೆಗೆ ವ್ಯಕ್ತಿಯೊಬ್ಬನನ್ನು ಸಮಾಜ ಅಳೆಯುವುದು ಅವನ ಕೃತಿಯಿಂದ.

ಇಂದು ನೀವು ಅನುಭವಿಸುತ್ತಿರುವ ನೋವು ನಾಳೆ ನಿಮ್ಮ ಶಕ್ತಿಯಾಗಿ ಬದಲಾಗುತ್ತದೆ.

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು ಎನ್ನುವುದು ಸ್ಪಷ್ಟವಿದ್ದಾಗ ಮಾತ್ರ ಬೃಹತ್‌ ಒತ್ತಡದಿಂದ ಮುಕ್ತರಾಗುತ್ತೇವೆ.

ನೀವು ಸೃಜನಶೀಲರಾಗಿರಬಹುದು, ಆದರೆ ಶ್ರದ್ಧೆಯಿಲ್ಲದೇ ಅದರಿಂದ ಏನೂ ಉಪಯೋಗವಿಲ್ಲ. 

ನಿಮ್ಮ ಇಷ್ಟು ದಿನಗಳ ಪ್ರಯತ್ನ, ಶ್ರಮ,ವೈಫ‌ಲ್ಯಗಳ ಪ್ರತಿಫ‌ಲನವೇ ಇಂದಿನ ನಿಮ್ಮ ಜೀವನ.

ಪರಿಪೂರ್ಣತೆಯನ್ನು ನಾವೆಂದಿಗೂ ತಲುಪಲಾರೆವು. ಆದರೆ ಅದನ್ನು ಬೆನ್ನತ್ತಿದರೆ ಶ್ರೇಷ್ಠತೆಯಾದರೂ ದಕ್ಕುತ್ತದೆ.

ಪ್ರತಿ ಸಂದರ್ಭದಲ್ಲೂ ಹಣೆಬರಹ ಬದಲಾಗುತ್ತಿರುತ್ತದೆ.ನಮ್ಮ ಆಲೋಚನೆ ಮತ್ತು ಚಿಂತನೆಯಂತೆ.

ಸತ್ಯ ಸೂರ್ಯನಂತೆ. ಸ್ವಲ್ಪ ಕಾಲ ಮರೆಮಾಚಬಹುದು.ಆದರೆ ಅದರ ಪ್ರಖರತೆ ತಡೆಯಲು ಸಾಧ್ಯವಿಲ್ಲ.

Back to Top