ACB attack

 • ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಕಚೇರಿ ಮೇಲೆ ಎಸಿಬಿ ದಾಳಿ ಇಬ್ಬರು ಬಲೆಗೆ

  ಚಿಕ್ಕಬಳ್ಳಾಪುರ: ಭೂ ವರ್ತನೆಗೊಂಡ ನಿವೇಶಗಳನ್ನು ಬಿಡುಗಡೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಸದಸ್ಯರು ಬರೋಬರಿ 3 ಲಕ್ಷ ರೂ. ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಂಧಿತರ ಪೈಕಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಸಿವಿಲ್…

 • ಲಂಚಕ್ಕೆ ಬೇಡಿಕೆ: ವೀರಾಜಪೇಟೆ ತಹಶೀಲ್ದಾರ್‌, ಸಹಾಯಕ ಎಸಿಬಿ ಬಲೆಗೆ

  ಮಡಿಕೇರಿ: ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೀರಾಜಪೇಟೆ ತಾಲೂಕು ತಹಶೀಲ್ದಾರ್‌ ಪುರಂದರ ಮತ್ತು ದ್ವಿತೀಯ ದರ್ಜೆ ಕಚೇರಿ ಸಹಾಯಕ ಜಾಗೃತ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ. ತಾಲೂಕಿನ ತೂಚಮಕೇರಿ ನಿವಾಸಿ ಎಂ.ಎನ್‌. ನರೇಂದ್ರ ತಮ್ಮ…

 • ಕುಂದಾಪುರ: ನಿರ್ಗಮಿತ ಎಸಿ ಡಾ| ಮಧುಕೇಶ್ವರ್‌ ಸರಕಾರಿ ನಿವಾಸಕ್ಕೆ ಎಸಿಬಿ ದಾಳಿ

  ಕುಂದಾಪುರ : ವರ್ಗಾವಣೆಯಾಗಿದ್ದರೂ ಕಡತ ವಿಲೇವಾರಿ ನಡೆಸಿ, ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪ ವಿಭಾಗದ ನಿರ್ಗಮಿತ ಸಹಾಯಕ ಆಯುಕ್ತ, ಕೆಎಎಸ್‌ ಶ್ರೇಣಿಯ ಹಿರಿಯ ಅಧಿಕಾರಿ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಅವರು ವಾಸ್ತವ್ಯವಿದ್ದ ಸರಕಾರಿ ನಿವಾಸದ ಮೇಲೆ…

 • ಎಸಿಬಿ ದಾಳಿ: ಕೋಟ್ಯಂತರ ರೂ.ಮೌಲ್ಯದ ಆಸ್ತಿ ಪತ್ತೆ

  ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಆರೋಪಿತ ಅಧಿಕಾರಿಗಳ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ಶಾಂತಿನಗರ ಟಿ.ಟಿ.ಎಂ.ಸಿಯ ವಿಭಾಗೀಯ ಸರಕು…

 • ಅಪಾರ ಪ್ರಮಾಣದ ಆಸ್ತಿ ಪತ್ತೆ

  ಮಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳದದ.ಕ. ಪೊಲೀಸರು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನಇಲಾಖೆಯ ಎಂಜಿನಿಯರ್‌ ಎಸ್‌. ಮಹದೇವಪ್ಪ ಅವರ ಮನೆ ಮತ್ತು ಕಚೇರಿಗಳಿಗೆ ದಾಳಿ ಮಾಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳದ ಬಾಡಿಗೆ ಮನೆ,…

 • ಮಧ್ಯವರ್ತಿ ಮನೆ ಮೇಲೆ ಎಸಿಬಿ ದಾಳಿ

  ಬೆಂಗಳೂರು: ಟಿಡಿಆರ್‌ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ “ಭ್ರಷ್ಟರ ಬೇಟೆ’ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು, ಶುಕ್ರವಾರ ಹಗರಣದ ಏಜೆಂಟ್‌ಗಳು ಮತ್ತು ಬ್ಯಾಂಕ್‌ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಕಾಟನ್‌ಪೇಟೆ ನಿವಾಸಿ ರಾಜೇಶ್‌…

 • ವಾಲ್‌ಮಾರ್ಕ್‌ ಕಂಪನಿ ಮೇಲೆ ಮತ್ತೊಮ್ಮೆ ಎಸಿಬಿ ದಾಳಿ

  ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಾಲ್‌ಮಾರ್ಕ್‌ ಕಂಪನಿ ನಿರ್ದೇಶಕ ರತನ್‌ ಬಾಬುಲಾಲ್‌ ಲಾಥ್‌ ಅವರ ಸಂಸ್ಥೆ ಮತ್ತು ನಿವಾಸಗಳ ಮೇಲೆ ಬುಧವಾರ ಮತ್ತೊಮ್ಮೆ…

 • ರಾಜಾಜಿನಗರ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

  ಬೆಂಗಳೂರು: ರಾಜಾಜಿನಗರದ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, 8.72 ಲಕ್ಷ ರೂ. ನಗದು ಸೇರಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ….

 • ಭ್ರಷ್ಟರಿಗೆ ಎಸಿಬಿ ಶಾಕ್‌

  ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯದ ಐವರು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳು ಸೇರಿ ಒಟ್ಟು 17 ಕಡೆ ಏಕ ಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ…

 • ಭ್ರಷ್ಟ ಬಕಾಸುರರು ಬೆಳೆದುದು ಹೇಗೆ?

  ಸರಕಾರಿ ಅಧಿಕಾರಿ, ನೌಕರರೆಲ್ಲರಿಗೂ ಲಂಚ ಸ್ವೀಕರಿಸುವ ಅವಕಾಶವಿರುವುದಿಲ್ಲ. ಕೆಲವೇ ಇಲಾಖೆಯ ಹಾಗೂ ಆ ಇಲಾಖೆಗಳ ಕೆಲವೇ ಹುದ್ದೆಗಳಿಗೆ ಮಾತ್ರ ತಮ್ಮ ಸ್ಥಾನಕ್ಕೆ ದತ್ತವಾದ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅನಧಿಕೃತ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅರ್ಥಾತ್‌ ವಿಶಾಲ ನೌಕರಶಾಹಿಯೊಳಗೆ ಕೇವಲ ಶೇಕಡಾ…

 • ಟಿ.ಆರ್‌. ಸ್ವಾಮಿ ಅಮಾನತು? 

  ಬೆಂಗಳೂರು: ಎಸಿಬಿ ದಾಳಿಗೊಳಗಾದ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.  ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಅವರು ಟಿ.ಆರ್‌.ಸ್ವಾಮಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು…

 • ಎಂಜಿನಿಯರ್‌ ಬಳಿ ಇತ್ತು 1.1 ಕೆಜಿ ಚಿನ್ನ !

  ಕುಂದಾಪುರ: ಎಸಿಬಿ ದಾಳಿಗೊಳಗಾದ ಇಲ್ಲಿನ ತಾಲೂಕು ಪಂಚಾಯತ್‌ ಸಹಾಯಕ ಎಂಜಿನಿಯರ್‌ ರವಿಶಂಕರ್‌ ಅವರ ಲಾಕರ್‌ನಲ್ಲಿ ಇದ್ದುದು ಬರೋಬ್ಬರಿ 1.1 ಕೆಜಿ ಚಿನ್ನ ಮತ್ತು 18 ಲಕ್ಷ ರೂ. ನಗದು! ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ ಆಪಾದನೆಯಲ್ಲಿ ಭ್ರಷ್ಟಾಚಾರ ನಿಗ್ರಹ…

 • ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

  ಧಾರವಾಡ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಧಾರವಾಡ ವಲಯದ ಎಸಿಎಫ್‌ ಪಿ.ಎಸ್‌. ವರೂರ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ಮಂಗಳವಾರ ಬೆಳಗ್ಗೆ ಎಸಿಬಿ ದಾಳಿ ನಡೆಸಿದೆ. ಇಲ್ಲಿಯ ವಿನಾಯಕ…

 • ಕುಂದಾಪುರ ತಾ.ಪಂ.ಕಿರಿಯ ಎಂಜಿನಿಯರ್‌ ಮನೆ, ಕಚೇರಿಗೆ ಎಸಿಬಿ ದಾಳಿ

  ಕುಂದಾಪುರ: ಆದಾಯ ಮೀರಿ ಆಸ್ತಿ, ಹಣ ಸಂಪಾದಿಸಿದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕುಂದಾಪುರ ತಾ.ಪಂ.ಕಿರಿಯ ಎಂಜಿನಿಯರ್‌ (ಎಡಬ್ಲೂಇ) ರವಿಶಂಕರ್‌ ಅವರ ಕುಂದಾಪುರದ ನಾನಾ ಸಾಹೇಬ್‌ ರಸ್ತೆಯಲ್ಲಿರುವ ಮನೆ, ತಾ.ಪಂ.ನಲ್ಲಿರುವ ಅವರ ಕಚೇರಿ ಹಾಗೂ ಹೊನ್ನಾವರದ ಮಾವನ ಮನೆಗೆ…

 • 9 ಸರಕಾರಿ ಅಧಿಕಾರಿಗಳಿಗೆ ಎಸಿಬಿ ಬಲೆ

  ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ರಾಜ್ಯದ ವಿವಿಧ ಜಿಲ್ಲೆಯ 9 ಮಂದಿ ಸರಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ ಶಾಕ್‌ ನೀಡಿದೆ. ಆರೋಪಿಗಳಿಗೆ ಸೇರಿದ 36 ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ…

 • ಕೃಷಿ ನಿರ್ದೇಶಕರ ಕಚೇರಿ, ನಿವಾಸಕ್ಕೆ ಎಸಿಬಿ ದಾಳಿ:ಅಕ್ರಮ ಆಸ್ತಿ ಪತ್ತೆ

  ಮಂಗಳೂರು/ ಬಂಟ್ವಾಳ/ ಕಿನ್ನಿಗೋಳಿ: ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಫ್ರಾನ್ಸಿಸ್‌ ಪೌಲ್‌ ಮಿರಾಂದ (59) ಅವರ ಕಚೇರಿಗೆ ಮತ್ತು ಕಿನ್ನಿಗೋಳಿಯಲ್ಲಿರುವ ನಿವಾಸಕ್ಕೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಅಕ್ರಮ…

 • ಎಸಿಬಿ ದಾಳಿ: ಲಂಚ ಸ್ವೀಕರಿಸುತ್ತಿದ್ದ ಇಬ್ಬರ ಬಂಧನ

  ಪುತ್ತೂರು : ಹೊಸದಾಗಿ ಸಹಕಾರ ಸಂಘ ನೋಂದಣಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಂದಿಗೆ ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮತ್ತು ಚಾಲಕನನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಪುತ್ತೂರು…

ಹೊಸ ಸೇರ್ಪಡೆ