Kasargod

 • ಏತಡ್ಕ ಬಸ್‌ಗಳ ಸಂಚಾರ ಅರ್ಧದಲ್ಲೇ ಮೊಟಕು

  ಬದಿಯಡ್ಕ: ರಸ್ತೆಯಲ್ಲಿ ಬೃಹತ್‌ ಹೊಂಡಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಬದಿಯಡ್ಕದಿಂದ ಏತಡ್ಕಕ್ಕಿರುವ ಬಸ್‌ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸುತ್ತಿವೆ. ಕಿನ್ನಿಂಗಾರ್‌ನಿಂದ ಒಂದೂವರೆ ಕಿಲೋ ಮೀ. ದೂರವಿರುವ ನೇರಪ್ಪಾಡಿಯವರೆಗೆ ಮಾತ್ರವೇ ಸಂಚಾರ ನಡೆಸುತ್ತಿವೆ. ನೇರಪ್ಪಾಡಿ ಹಾಗೂ ಕಿನ್ನಿಂಗಾರ್‌ ಮಧ್ಯೆ ಬೃಹತ್‌ ಹೊಂಡಗಳು ಸೃಷ್ಟಿಯಾಗಿರುವುದರಿಂದ…

 • ಸುನೀತಾಳ ಕಥೆ.. ಅಮ್ಮ ಪಾರ್ವತಿಯ ವ್ಯಥೆ..

  ಕಾಸರಗೋಡು : ಊಟದಲ್ಲೂ ನಿದ್ದೆಯಲ್ಲೂ ಆ ತಾಯಿ ಪುತ್ರಿಗೆ ಕಾವಲಾಗಿ ನಿಂತದ್ದು ಸುಮಾರು ಐದು ದಶಕ….. ಆದರೀಗ ವೃದ್ಧ ಮಾತೆಗೆ ಮುಪ್ಪಾವರಿಸಿದೆ. ತನ್ನ ಕಾಲಾನಂತರ‌ ಹೆತ್ತ ಕುಡಿಯ ಗತಿಯೇನು ಎಂಬ ಚಿಂತೆಯಲ್ಲಿ ತಲೆಯ ಮೇಲಾಕಾಶ ಕೆಳಗೆ ಈ ಭೂಮಿ…

 • ಗಣೇಶ ಚತುರ್ಥಿ ತಿಂಡಿ ತಿನಿಸು ತಯಾರಿ ಸಂಭ್ರಮ

  ಕಾಸರಗೋಡು: ರಾಷ್ಟ್ರೀಯ ಹಬ್ಬವಾಗಿರುವ ಗಣೇಶೋತ್ಸವ ಬಂತೆಂದರೆ ಮನೆ ಮನೆಗಳಲ್ಲೂ ಸಂಭ್ರಮ, ಸಡಗರ. ಸಂಭ್ರಮದ ಜತೆಗೆ ತಿಂಡಿ ತಿನಿಸುಗಳೂ ಮಹತ್ತರವಾದ ಪಾತ್ರವಹಿಸುತ್ತದೆ. ಅದರಲ್ಲಂತೂ ಚಕ್ಕುಲಿಗೆ ವಿಶೇಷ ಮನ್ನಣೆ. ಗಣೇಶ ಚತುರ್ಥಿ ಹಬ್ಬ ಬಂದಾಗ ಮನೆಮನೆಗಳಲ್ಲೂ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸುವುದು…

 • ಇಕ್ಕೇರಿ ರಾಜರ ಕಾಸರಗೋಡು ಕೋಟೆ ಬರುಜು ಕುಸಿತ

  ಕಾಸರಗೋಡು : ಸುಮಾರು 600 ವರ್ಷಗಳ ಇತಿಹಾಸವುಳ್ಳ ಹಾಗು ಕನ್ನಡಿಗರ ಶೌರ್ಯ, ಸಾಹಸದ ಪ್ರತೀಕ ವಾಗಿರುವ, ಇಕ್ಕೇರಿ ರಾಜರು ನಿರ್ಮಿಸಿ ರುವ ಕಾಸರಗೋಡು ಕೋಟೆಯ ಬುರುಜು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಕಾಡು ಪೊದೆ ಬೆಳೆದು ಕೋಟೆಯ ಬುರುಜು…

 • ಇನ್ನೂ ದುರಸ್ತಿಯಾಗದ ಮುರಿದು ಬಿದ್ದ ಮೇಲ್ಸೇತುವೆ

  ಕಾಸರಗೋಡು: ನಗರದ ಕರಂದ ಕ್ಕಾಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಶೋಕ ನಗರಕ್ಕೆ ಹೋಗುವ ರಸ್ತೆ ಬಳಿ ಮೇಲ್ಸೇತುವೆ ಮುರಿದು ಬಿದ್ದು 23 ದಿನಗಳೇ ಕಳೆದರೂ ಇನ್ನೂ ದುರಸ್ತಿಯಾಗದಿರುವುದರಿಂದ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಜುಲೈ 28 ರಂದು ಮುಂಜಾನೆ…

 • ಅಡ್ಡಿ ಆತಂಕದ ಜತೆಯಲ್ಲಿ ಚಾಲಕರಿಗೆ ಸವಾಲು

  ಕಾಸರಗೋಡು: ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಯಿಂದ ಆರಂಭಿಸಿ ಕಾಸರಗೋಡಿನ ತನಕ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಗದ್ದೆಯಂತಾಗಿದೆ. ಹೊಂಡಗುಂಡಿ ಸೃಷ್ಟಿಯಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಪದೇ ಪದೇ ಅಡ್ಡಿ ಆತಂಕ…

 • ಹೃದಯ ಶ್ರೀಮಂತಿಕೆಯಿಂದ ಸಂತ್ರಸ್ತರಿಗೆ ಸಹಾಯ ಒದಗಿಸಿದ ಮರಿಯುಮ್ಮ

  ಬದಿಯಡ್ಕ: ಬಿರುಸಿನ ಗಾಳಿ ಮಳೆಯಿಂದ ಕಂಗೆಟ್ಟ ಸಂತ್ರಸ್ತರ ಪುನರ್ವಸತಿಗೆ ಕೈಜೋಡಿಸುವ ಮೂಲಕ 77 ರ ಹರೆಯದ ಮರಿಯುಮ್ಮ ಮಾನವೀಯ ಸ್ಪಂದನದೊಂದಿಗೆ ಅರ್ಥಪೂರ್ಣವಾಗಿ ಬಕ್ರೀದ್ ಹಬ್ಬ ಆಚರಿಸಿಕೊಂಡಿದ್ದಾರೆ. ಇತರರ ಸಂಕಷ್ಟದಿಂದ ನೊಂದು ಸಹಾಯ ಹಸ್ತ ಚಾಚುವುದಕ್ಕೆ ಆರ್ಥಿಕವಾಗಿ ಶ್ರೀಮಂತರೇ ಆಗಬೇಕಿಲ್ಲ….

 • ಅಗಲ್ಪಾಡಿ ಕ್ಷೇತ್ರ ಪರಿಸರದಲ್ಲಿ ಭೂ ಕುಸಿತ : ವಿಶೇಷ ಪ್ರಾರ್ಥನೆ

  ಬದಿಯಡ್ಕ: ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಸಮೀಪದಲ್ಲಿ ಅಪಾಯಕಾರಿ ಭೂ ಕುಸಿತ ಮತ್ತು ಬಿರುಕು ಕಂಡು ಬಂದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಬೃಹತ್‌ ಗುಡ್ಡೆಯ ಸ್ವಲ್ಪ ಭಾಗವು ಕಳೆದ ತಿಂಗಳು ಜರಿದು ಬಿದ್ದಿತ್ತು….

 • ಹಜ್‌ ತೀರ್ಥಾಟಕರಿಗೆ ನೆರವಾದ ಒಐಸಿಸಿ ಸ್ವಯಂಸೇವಕರು

  ಕಾಸರಗೋಡು : ಸಮಸ್ಯೆ ಅನುಭವಿಸುತ್ತಿರುವ ಹಜ್ಜ್ ತೀರ್ಥಾ ಟಕರಿಗೆ ಒಐಸಿಸಿ ಹಜ್‌ ಸ್ವಯಂ ಸೇವಕರ ಕಾರ್ಯಾಚರಣೆ ಜೆದ್ದಾ ಮಿನಾಯಿಯಲ್ಲಿ ಪ್ರಗತಿ ಹಂತದಲ್ಲಿದೆ. ದಾರಿ ತಪ್ಪಿದ ಹಲವಾರು ಹಜ್ಜಿಗಳಿಗೆ ಮಾರ್ಗದರ್ಶನ ನೀಡಿ, ವೃದ್ಧಾಪ್ಯ ಕಾರಣ, ಶಾರೀರಿಕ ಅಸ್ವಸ್ಥತೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ…

 • ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌

  ಕಾಸರಗೋಡು: ದುರ್ಬಲ ಗೊಂಡಿದ್ದ ಮಳೆ ಮತ್ತೆ ಧಾರಾಕಾರವಾಗಿ ಸುರಿಯತೊಡಗಿದೆ. ಕಾಸರಗೋಡು, ಕಣ್ಣೂರು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಸರಗೋಡು, ಪತ್ತನಂತಿಟ್ಟ, ತೃಶೂರು, ಪಾಲ್ಗಾಟ್, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಮಂಗಳವಾರ ಕೇಂದ್ರ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌…

 • ಕಿದೂರು ಪಕ್ಷಿ ಗ್ರಾಮಕ್ಕೆ 158ರ ಅತಿಥಿ

  ನಿಶಾಚಾರಿ ವರ್ಗಗಳಿಗೆ ಸೇರಿದ ಶ್ರೀಲಂಕ ಫ್ರಾಗ್ ಮೌತ್ ಬಹಳ ಅಪರೂಪವಾಗಿ ಕಣ್ಣಿಗೆ ಬೀಳುತ್ತವೆ.ಹಗಲಿನಲ್ಲಿ ಅವುಗಳು ಎಲ್ಲಿರುತ್ತವೆ,ಹೇಗಿರುತ್ತವೆ ಎಂಬುದು ಇಂದಿಗೂ ಕುತೂಹಲಕಾರಿಯಾಗಿ ಉಳಿದಿದೆ.ಈ ಹಕ್ಕಿಗಳ ಬಗ್ಗ ವೈಜ್ಞಾನಿಕವಾಗಿ ಅಧ್ಯಯನ ನಡೆದದ್ದು ಕಡಿಮೆ.ಇದೀಗ ಕಿದೂರಿನಲ್ಲಿ ಕಂಡು ಬಂದಿರುವುದು ಕಾಸರಗೋಡಿನ ಪಕ್ಷಿ ನಿರೀಕ್ಷಕರಲ್ಲಿ…

 • ಕರಿಂಬಿಲ ಗುಡ್ಡೆ ಕುಸಿತ; ವ್ಯಾಪಾರಿಗಳಿಂದ ಧರಣಿಗೆ ಸಿದ್ಧತೆ

  ಬದಿಯಡ್ಕ: ಬದಿಯಡ್ಕ- ಪೆರ್ಲ ರಸ್ತೆಯ ಕರಿಂಬಿಲದಲ್ಲಿ ಗುಡ್ಡೆ ಕುಸಿತದಿಂದ ಉಂಟಾದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಮಾಡುವ ಉದ್ದೇಶದಿಂದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಆಶ್ರಯದಲ್ಲಿ ಆಗೋಸ್ತು 15ರಂದು ಬೆಳಗ್ಗೆ 11.30ರಿಂದ 1ಗಂಟೆಯ ತನಕ ಧರಣಿ ನಡೆಸಲು ವ್ಯಾಪಾರಿ ಭವನದಲ್ಲಿ…

 • ಐತಿಹಾಸಿಕ ಬೇಕಲ ಕೋಟೆಯ ಹೊರಭಾಗದ ಗೋಡೆ ಕುಸಿತ

  ಕಾಸರಗೋಡು:ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಕಾಸರಗೋಡಿನ ಬೇಕಲ ಕೋಟೆಯ ವೀಕ್ಷಣಾ ಸ್ಥಳದ ಹೊರಭಾಗದ ಗೋಡೆ ಕುಸಿದು ಬಿದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ವರದಿ ತಿಳಿಸಿದೆ. ಐತಿಹಾಸಿಕ ಬೇಕಲ ಕೋಟೆಯ ಪೂರ್ವ ಭಾಗದಲ್ಲಿನ ವೀಕ್ಷಣಾ…

 • ಸಂತ್ರಸ್ತರಿಗೆ ಶೀಘ್ರ ಪರಿಹಾರ: ಆಗ್ರಹ

  ಕಾಸರಗೋಡು: ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ನಿರ್ಗತಿಕರಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಕಡಲ್ಕೊರೆತ ಒಳಗಾದ ಮೂಸೋಡಿ, ಮಣಿ ಮುಂಡ, ಹನುಮಾನ್‌ನಗರ ಮೊದಲಾದ ಪ್ರದೇಶವನ್ನು…

 • ಗುಡ್ಡ ಜರಿದು ಬದಿಯಡ್ಕ – ಪೆರ್ಲ ರಸ್ತೆ ಸಂಚಾರ ಬಂದ್

  ಬದಿಯಡ್ಕ :ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ರಸ್ತೆ ಬದಿಯಡ್ಕ ಪೆರ್ಲ ರಸ್ತೆಯ ಮಧ್ಯ ಭಾಗದಲ್ಲಿರುವ ಕರಿಂಬಿಲ ಎಂಬಲ್ಲಿ ಗುಡ್ಡ ಜರಿದು ರಸ್ತೆ ಸಂಚಾರ ಸ್ಥಗಿತವಾಗಿದೆ. ಲೋಕ ಉಪಯೋಗಿ ಇಲಾಖೆ ಆದೇಶದಂತೆ ಬದಿಯಡ್ಕ ಪೊಲೀಸರು ರಸ್ತೆಗೆ ತಡೆಯೋದಿದ್ದು ಇದರಿಂದ ಕೇರಳ ಕರ್ನಾಟಕ…

 • ಕಾಸರಗೋಡು: ಭಾರೀ ಗಾಳಿ, ಮಳೆ; ವ್ಯಾಪಕ ನಷ್ಟ

  ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗಾಳಿ, ಮಳೆ ಮತ್ತೆ ಬಿರುಸುಗೊಂಡಿದ್ದು ಭಾರೀ ನಷ್ಟ ಸಂಭವಿಸಿದೆಮೂಸೋಡಿಯಲ್ಲಿ ಇನ್ನೊಂದು ಮನೆ ಸಮುದ್ರಪಾಲಾಗಿದ್ದು, ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ಬಾಬು ಶಾಲಾ ಕಾಲೇಜುಗಳಿಗೆ ರಜೆ…

 • ವಿವಿಧೆಡೆ ಭಾರೀ ಗಾಳಿ, ಮಳೆ: ವ್ಯಾಪಕ ನಾಶ

  ಪೆರ್ಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ವ್ಯಾಪಕ ನಾಶ ನಷ್ಟ ಸಂಭವಿಸಿದೆ.ಮರ ಬಿದ್ದು ವಿದ್ಯುತ್‌ ಕಂಬಗಳ ಮುರಿತ,ತಂತಿ ಕಡಿತ,ರಸ್ತೆ ತಡೆ, ಕೃಷಿ ಪ್ರದೇಶಗಳಿಗೆ ಹಾನಿ,ಮನೆ ಕುಸಿತ ಮೊದಲಾದವುಗಳು ವರದಿಯಾಗಿವೆ.ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕಂಬ,ತಂತಿಗಳಿಗೆ…

 • ಕಡಲ್ಕೊರೆತ, ಅಪಾಯದಲ್ಲಿ ಮನೆಗಳು

  ಕಾಸರಗೋಡು: ಕೆಲವು ದಿನ ಗಳ ಬಿಡುವಿನ ಬಳಿಕ ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಉಪ್ಪಳದ ಹನುಮಾನ್‌ ನಗರ, ಮಣಿಮುಂಡ, ಕೀಯೂರು, ಚೇರಂಗೈ, ತೃಕ್ಕನ್ನಾಡ್‌ ಮೊದಲಾದೆಡೆ ಕಡಲ್ಕೊರೆತ ಉಂಟಾಗಿದ್ದು, ಹಲವು ಮನೆಗಳು ಅಪಾಯದಂಚಿನಲ್ಲಿವೆ. ಕಡಲ್ಕೊರೆತದಿಂದ ಹನುಮಾನ್‌…

 • ನಾಗರಪಂಚಮಿ: ಭಕ್ತಿ-ನಿಷ್ಠೆಯಿಂದ ಕ್ಷೀರಾಭಿಷೇಕ

  ಕಾಸರಗೋಡು: ನಾಡಿನೆಲ್ಲೆಡೆ ಸೋಮವಾರ ಭಕ್ತಿ-ನಿಷ್ಠೆ-ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ನಾಡಿನ ಪ್ರಮುಖ ದೇವಾಲಯಗಳಲ್ಲಿ, ಮಂದಿರಗಳಲ್ಲಿ, ನಾಗನ ಬನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ನಾಗನಿಗೆ ಎಳನೀರು ಮತ್ತು ಕ್ಷೀರಾಭಿಷೇಕ ನಡೆಸಿದರು. ವರ್ಷದ ಮೊದಲ ಹಬ್ಬದ ಸಡಗರ ಎಲ್ಲೆಡೆ ಕಂಡು ಬಂತು….

 • ತೃಕ್ಕನ್ನಾಡ್‌: ಅಗಲಿದ ಪಿತೃ ಆತ್ಮಗಳ ಮೋಕ್ಷಕ್ಕಾಗಿ ತರ್ಪಣ

  ಕಾಸರಗೋಡು: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಾಸರಗೋಡು ಜಿಲ್ಲೆಯ ಬೇಕಲದ ತೃಕ್ಕನ್ನಾಡ್‌ ಸಮುದ್ರ ಕಿನಾರೆಯಲ್ಲಿ ಆಟಿ ಅಮಾವಾಸ್ಯೆಯಾದ ಆ. 31ರಂದು ಪಿತೃ ತರ್ಪಣ ನಡೆಯಿತು. ಆಟಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ಕೇರಳ ರಾಜ್ಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಅಗಲಿದ ಆತ್ಮಗಳಿಗೆ…

ಹೊಸ ಸೇರ್ಪಡೆ