Lokh Sabha Election

 • ಪ್ರಜ್ವಲ್‌ ಸ್ಪರ್ಧೆ: ಗೌಡರ ಪರೀಕ್ಷೆ ತಂತ್ರ!

  ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬದ 3ನೇ ತಲೆಮಾರಿನ ರಾಜಕಾರಣಕ್ಕೆ ಹಸಿರು ನಿಶಾನೆ ತೋರುವ ಅಧಿಕೃತ ಘೋಷಣೆಯನ್ನಷ್ಟೆ ಗೌಡರು ಬಾಕಿ ಉಳಿಸಿಕೊಂಡಿದ್ದಾರೆ….

 • ಲೋಕ ಚುನಾವಣೆಗೂ 1/3 ಸೀಟು ಹಂಚಿಕೆ

  ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಮೂರನೇ ಒಂದು ಭಾಗ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದ್ದು, ಮುಂದಿನ ಲೋಕಸಭೆ ಚುನಾವಣೆಗೂ ಇದೇ ಸೂತ್ರ ಅನ್ವಯವಾಗಲಿ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಈ ಸೂತ್ರ ಅನ್ವಯವಾದಲ್ಲಿ ಜೆಡಿಎಸ್‌ಗೆ…

 • 2019ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

  ಹೊಸದಿಲ್ಲಿ: ಬೇರೆ ಬೇರೆಯದೇ ಕಾರಣಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣದ ಸ್ನೇಹಿತರ ಬಲ ಕಳೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನವಿದೆ. 2019ರ ಲೋಕಸಭಾ ಚುನಾವಣೆಯ ಸವಾಲು ಮೆಟ್ಟಿ ನಿಲ್ಲುವ ಲೆಕ್ಕಾಚಾರದಲ್ಲಿರುವಾಗಲೇ ಈಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಚುನಾವಣೆಯಲ್ಲಿ ಸ್ಪರ್ಧಿಸದೇ…

 • ಕಾಂಗ್ರೆಸ್‌ ಅಸ್ತ್ರ: “ಶಕ್ತಿ’, “ವಿದ್ಯಾ’

  ಹೊಸದಿಲ್ಲಿ: ಈಗಾಗಲೇ ಪಂಚರಾಜ್ಯಗಳಲ್ಲಿ ಜಾರಿಗೆ ಬಂದಿರುವ  ಶಕ್ತಿ ಹಾಗೂ ವಿದ್ಯೆ ಎಂಬ ಎರಡು ವಿಚಾರಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಚುನಾವಣಾ ಅಸ್ತ್ರಗಳಾಗಿರಲಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೂತ್‌…

 • ಮೈತ್ರಿಕೂಟ: 22ಕ್ಕೆ ದಿಲ್ಲಿಯಲ್ಲಿ ಸಭೆ

  ಅಮರಾವತಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧಗೊಳ್ಳುತ್ತಿರುವ ಪ್ರತಿಪಕ್ಷಗಳ ಒಕ್ಕೂಟ ಮುಂದಿನ ರಣತಂತ್ರ ಸಿದ್ಧಪಡಿಸಲು ನ.22ರಂದು ನಾಯಕರ ಸಭೆ ನವದೆಹಲಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸರ್ಕಾರವನ್ನು ಎದುರಿಸುವ ಬಗ್ಗೆ ಪ್ರಮುಖವಾಗಿ ಚರ್ಚೆ…

 • ತೃತೀಯ ರಂಗ ರಚನೆಗೆ ನಾಯ್ಡು ಪ್ರಯತ್ನ?

  ನವದೆಹಲಿ: ಪ್ರಸ್ತುತ ರಾಜಕೀಯ ಸಂಕೀರ್ಣತೆಯಿಂದಾಗಿ ಬಿಜೆಪಿಯೇತರ ಪಕ್ಷಗಳು 2019ರ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಹೋರಾಟ ನಡೆಸಲಿವೆ ಎಂದು ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಶನಿವಾರ ರಾಷ್ಟ್ರರಾಜಧಾನಿಯಲ್ಲಿ ಹಲವು ವಿರೋಧ ಪಕ್ಷದ ಮುಖಂಡರನ್ನು ಭೇಟಿ…

 • ಲೋಕಾ ಚುನಾವಣೆಗೆ ತಳಮಟ್ಟದಿಂದ ಸಿದ್ಧ 

  ಬೆಂಗಳೂರು: ಲೋಕಸಭಾ ಚುನಾವಣೆ-2019ಕ್ಕೆ ತಳಮಟ್ಟದಿಂದಲೇ ಸಕಲ ಸಿದ್ಧತೆ ಆರಂಭಿಸಿರುವ ಬಿಜೆಪಿ, ಪಕ್ಷ ಸಂಘಟನೆ ಹಾಗೂ ಬಲವೃದ್ಧಿಗಾಗಿ ನೀಡಿರುವ ಏಳು ಪ್ರಮುಖ ಟಾಸ್ಕ್ ಗಳನ್ನು ಅ.31 ರೊಳಗೆ ಮುಗಿಸು ವಂತೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಪ್ರಮುಖರಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ…

 • ದೇಶದ ದಿಕ್ಕನ್ನು ದೀರ್ಘ‌ಕಾಲ ನಿರ್ದೇಶಿಸಲಿದೆ ಲೋಕಸಭಾ ಚುನಾವಣೆ

  ಭಾರತೀಯ ಜನತಾ ಪಾರ್ಟಿ ಮುಂದಿನ ಸಲ ಸಂಯುಕ್ತವಾಗಿಯಾದರೂ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದನ್ನು ಕೆಲ ಸಮೀಕ್ಷೆಗಳು ಹೇಳಿವೆ. ಒಂದು ವೇಳೆ ಹೀಗೆಯೇ ಆದರೆ ಕಾಂಗ್ರೆಸ್‌ಗೆ ಗಂಡಾಂತರ. ಆಗ ಬಿಜೆಪಿಯು ಕಾಂಗ್ರೆಸ್‌ನಂತೆಯೇ ಭಾರತವನ್ನು ದೀರ್ಘ‌ಕಾಲ ಆಳಿಬಿಡಬಹುದು.  ಲೋಕಸಭಾ…

 • ರಾಜಸ್ಥಾನದಲ್ಲೂ ಕಾಂಗ್ರೆಸ್‌ ಜತೆ ಬಿಎಸ್‌ಪಿ ಮೈತ್ರಿ ಇಲ್ಲ?

  ಲಕ್ನೋ: ಮುಂದಿನ ಲೋಕಸಭೆ ಚುನಾವಣೆಗೆ ಮಹಾಮೈತ್ರಿ ಕೂಟದ ಮಾತಾಡಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ ಅದರಿಂದ ಹಿಂದೆ ಸರಿದಂತಿದೆ. ಬುಧವಾರ ನಡೆದಿದ್ದ ಬೆಳವಣಿಗೆಯಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಾಗಿ ಮಾಜಿ ಸಿಎಂ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ ಜತೆ…

 • ಕಾಂಗ್ರೆಸ್‌ ಪಕ್ಷದಲ್ಲಿ ಬ್ರಾಹ್ಮಣ ವಂಶವಾಹಿ

  ಹೊಸದಿಲ್ಲಿ: ಮಧ್ಯ ಪ್ರದೇಶ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಿಧಾನವಾಗಿ “ಹಿಂದೂ ಜಪ’ ಮಾಡಲು ಶುರು ಮಾಡಿದೆ. ಮಂಗಳವಾರವಷ್ಟೇ, ಕಾಂಗ್ರೆಸ್‌ ಮಧ್ಯಪ್ರದೇಶದಲ್ಲಿ ಗೆದ್ದರೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋ ಶಾಲೆ ಕಟ್ಟುವ ಭರವಸೆಯನ್ನು ಪಕ್ಷದ…

 • ಏಕಕಾಲದ ಚುನಾವಣೆಗೆ 4,550 ಕೋಟಿ ರೂ. ಬೇಕು!

  ಹೊಸದಿಲ್ಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ತತ್‌ಕ್ಷಣವೇ ಒಟ್ಟಿಗೆ ನಡೆಸುವುದಾದಲ್ಲಿ ಹೊಸ ಇವಿಎಂಗಳನ್ನು ಹಾಗೂ ವಿವಿಪ್ಯಾಟ್‌ಗಳನ್ನು ಖರೀದಿಸಲು 4,550 ಕೋಟಿ ರೂ. ಅಗತ್ಯವಿದೆ ಎಂದು ಕಾನೂನು ಆಯೋಗದ ವರದಿ ಹೇಳಿದೆ. 2019ರ ಲೋಕಸಭೆ ಚುನಾವಣೆಗೆ 10,60,000 ಮತಗಟ್ಟೆಗಳು ಬೇಕಾಗುತ್ತದೆ….

 • ಲೋಕಸಭೆ ಚುನಾವಣೆಗೆ ಎನ್‌ಆರ್‌ಸಿಯೇ ಅಸ್ತ್ರ: ಶಾ

  ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಪಶ್ಚಿಮ ಬಂಗಾಲದಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲೋಕಸಭೆ ಚುನಾವಣೆಯ ರಣಕಹಳೆ ಊದಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಬಾಂಗ್ಲಾದೇಶೀಯರ ಅಕ್ರಮ ಒಳ ನುಸುಳುವಿಕೆಯನ್ನೇ ಟಿಎಂಸಿ ವಿರುದ್ಧದ ಚುನಾ…

 • ಲೋಕಸಭೆ ಚುನಾವಣೆವರೆಗೂ ಜನಗಣತಿಗೆ ಮುಕ್ತಿ ಅಸಾಧ್ಯ?

  ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ “ಮತಬ್ಯಾಂಕ್‌’ ದೃಷ್ಟಿಯಲ್ಲಿಟ್ಟುಕೊಂಡು “ಅಸ್ತ್ರ’ವನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದ ಜಾತಿವಾರು ಜನಗಣತಿ ವರದಿಗೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಬಿಡುಗಡೆ ಭಾಗ್ಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆ ನಂತರ ಧ್ರುವೀಕರಣಗೊಂಡಿರುವ ಜಾತಿ ಸಮೀಕರಣ ಲೆಕ್ಕಾಚಾರ ಹಿನ್ನೆಲೆಯಲ್ಲಿ…

 • ಲೋಕಸಭೆ ಚುನಾವಣೆಯಲ್ಲಿ ಆಡ್ವಾಣಿ, ಜೋಶಿ ಕಣಕ್ಕೆ?

  ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಸ್ಪರ್ಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಆಡ್ವಾಣಿ ಅವರ ನಿವಾಸಕ್ಕೆ ತೆರಳಿದ್ದ…

ಹೊಸ ಸೇರ್ಪಡೆ