Srirangapatna

 • ಶ್ರೀರಂಗಪಟ್ಟಣ ಬಳಿ ಲೀಥಿಯಂ ನಿಕ್ಷೇಪಕ್ಕೆ ಶೋಧ

  ಮಂಡ್ಯ/ಶ್ರೀರಂಗಪಟ್ಟಣ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಲೀಥಿಯಂ ನಿಕ್ಷೇಪದ ಶೋಧ ಕಾರ್ಯ ಸುಮಾರು 20 ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಅಟಾ ಮಿಕ್‌ ಮಿನರಲ್ಸ್ ಡೈರೆಕ್ಟರ್ಸ್‌ ವಿಜ್ಞಾನಿಗಳ ತಂಡ ಈ ಶೋಧ ಕಾರ್ಯದಲ್ಲಿ…

 • ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಿದ್ಧತೆ

  ಮಂಡ್ಯ: ಶತಮಾನಗಳ ಪರಂಪರೆ ಹೊಂದಿರುವ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಈ ಬಾರಿಯ ದಸರಾದಲ್ಲಿ ಗ್ರಾಮೀಣ, ರೈತ ಪರಂಪರೆ ಜತೆಗೆ ಪ್ರವಾಸಿತಾಣಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

 • ರೈಲ್ವೆ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ದಳದಿಂದ ಪರಿಶೀಲನೆ

  ಶ್ರೀರಂಗಪಟ್ಟಣ: ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಹಿನ್ನೆಲೆ ರೈಲು ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಬಾಂಬ್‌ ಪತ್ತೆ ತಂಡದ ಸಿಬ್ಬಂದಿ ಶ್ವಾನುನೊಂದಿಗೆ ಪರಿಶೀಲನೆ ಮಾಡಿದರು. ರೈಲ್ವೆ ನಿಲ್ದಾಣದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಜಾಗೃತಗೊಳಿಸಲು ಮಂಡ್ಯದ ಎಎಸ್‌ಸಿ…

 • ತ.ನಾಡಿಗೆ ನೀರು: ನದಿಗಿಳಿದು ಪ್ರತಿಭಟನೆ

  ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸುವ ಕ್ರಮ ಖಂಡಿಸಿ ನದಿಗಿಳಿದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಸ್ನಾನಘಟ್ಟದ ಬಳಿ ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ಜಮಾಯಿಸಿ ಕಾವೇರಿ ನದಿಗಿಳಿದು…

 • ನಿಷೇಧಾಜ್ಞೆ ಇದ್ದರೂ ಅಕ್ರಮ ಗಣಿಗಾರಿಕೆ

  ಶ್ರೀರಂಗಪಟ್ಟಣ: ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರಾತ್ರಿ ಹೊತ್ತಿನಲ್ಲಿ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ ಉದ್ಯಮ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳುತ್ತಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳು ಪರೋಕ್ಷವಾಗಿ ಅಕ್ರಮ…

 • ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ಪ್ರಶಸ್ತಿಯ ಗರಿ

  ಶ್ರೀರಂಗಪಟ್ಟಣ: ಸರ್ಕಾರಿ ಆಸ್ಪತ್ರೆಗಳೆಂದರೆ ಸ್ವಚ್ಛತೆ ಮಾಯವಾಗಿ, ಅವ್ಯವಸ್ಥೆ ತಾಂಡವವಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಜನರು ಅಲ್ಲಿಗೆ ಹೋಗುವುದಕ್ಕೆ ಮೂಗು ಮುರಿಯುತ್ತಾರೆ. ಆದರೆ, ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಕೇಂದ್ರ ಸರ್ಕಾರದ…

 • ಅಕ್ರಮ ಗಣಿಗಾರಿಕೆ ತಡೆಯಲು ರೈತ ಸಂಘ ಆಗ್ರಹ

  ಶ್ರೀರಂಗಪಟ್ಟಣ: ತಾಲೂಕಿನ ಚನ್ನನಕೆರೆ, ಮುಂಡಗದೊರೆ ಸೇರಿ ಇತರೆಡೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಲ್ಲು ಅಕ್ರಮ ಗಣಿಕಾರಿಕೆ ಮತ್ತು ಜಲ್ಲಿ ಕ್ರಷರ್‌ ಉದ್ಯಮ ನಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು ಎಂದು ರೈತ ಸಂಘದ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು. ತಾಲೂಕು ಕಚೇರಿಯಲ್ಲಿ ತಹಶಿಲ್ದಾರ್‌ ಡಿ.ನಾಗೇಶ್‌…

 • ನಾಲ್ವಡಿ, ಸರ್‌ಎಂವಿ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

  ಶ್ರೀರಂಗಪಟ್ಟಣ; ತಾಲೂಕಿನ ವಿಶ್ವವಿಖ್ಯಾತ ಕೆಆರ್‌ಎಸ್‌ ಬೃಂದಾವನದ ಮುಂಭಾಗ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಆರಾಧ್ಯ ದೈವ…

 • ಭವನ ಕಾಮಗಾರಿ ವಿಳಂಬ: ಆಕ್ರೋಶ

  ಶ್ರೀರಂಗಪಟ್ಟಣ: ಪಟ್ಟಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಾಬು ಜಗಜೀವನರಾಂ ಭವನ ಕಾಮಗಾರಿ ವಿಳಂಬಕ್ಕೆ ಆಕ್ರೋಷ ವ್ಯಕ್ತಪಡಿಸಿ ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಮಿನಿ ವಿಧಾನಸೌಧದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು,…

 • ಬೇಡಿಕೆಗಳ ಈಡೇರಿಕೆಗೆ ಆಗ್ರಹ

  ಶ್ರೀರಂಗಪಟ್ಟಣ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದರು. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌…

 • ವನ ಮಹೋತ್ಸವ; ಒಂದು ಗಿಡ ಬೆಳೆಸಿದರೆ 100 ರೂ.

  ಶ್ರೀರಂಗಪಟ್ಟಣ: ರೈತರು ತಮ್ಮ ಜಮೀನು ಬಳಿ ಒಂದು ಗಿಡ ನೆಟ್ಟು ಬೆಳೆಸಿ ಸರ್ಕಾರದಿಂದ 100 ರೂ.ಗಳನ್ನು ಪಡೆಯಿರಿ ಜೊತೆಗೆ ಪ್ರೋತ್ಸಾಹ ಧನವನ್ನಾಗಿ ಪ್ರತಿ ಗಿಡಕ್ಕೆ 5 ರೂ. ಪಡೆಯಬಹುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು ಹೇಳಿದರು. ಶ್ರೀರಂಗಪಟ್ಟಣ…

 • ಅರ್ಧಕ್ಕೆ ನಿಂತ ಪಶ್ಚಿಮವಾಹಿನಿ ಅಭಿವೃದ್ಧಿ

  ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆಯ ಪ್ರಸಿದ್ಧ ಸ್ಥಳ ಪಶ್ಚಿಮವಾಹಿನಿ ಅಭಿವೃದ್ಧಿ ಕಾಮಗಾರಿ ಕಳೆದ 2013-14 ಸಾಲಿನಲ್ಲಿ ಪ್ರಾರಂಭಿಸಿ ಇಲ್ಲಿವರೆಗೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಮೊಟಕು ಗೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2013-14 ಸಾಲಿನಲ್ಲಿ ಪಶ್ಚಿಮವಾಹಿನಿ ಅಭಿವೃದ್ಧಿಗೆ ಆಗಿನ ಜಿಲ್ಲಾಧಿಕಾರಿ ಕೃಷ್ಣಯ್ಯ…

 • 79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

  ಶ್ರೀರಂಗಪಟ್ಟಣ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗದೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಬರದ ನಡುವೆಯೇ ಕೆಆರ್‌ಎಸ್‌ ಜಲಾಶಯದ ನೀರು ಬಿಸಿಲಿನ ಝಳಕ್ಕೆ ಕಡಿಮೆಯಾಗುತ್ತಿದ್ದು ಪ್ರಸ್ತುತ…

 • ಬಾಲಕಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸಿಎಂ

  ಶ್ರೀರಂಗಪಟ್ಟಣ: ಹುಟ್ಟಿನಿಂದಲೇ ಅಂಗವೈಕಲ್ಯದಿಂದ ಬಳಲುತಿದ್ದ ಐದು ವರ್ಷದ ಕಂದಮ್ಮನಿಗೆ ಆಸರೆಯಾದ ನಾಡ ದೊರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದರೂ, ಚುನಾವಣೆ ಪ್ರಚಾರ ವೇಳೆ ಬಡ ದಂಪತಿಗಳಿಗೆ ಕೊಟ್ಟ ಮಾತಿನಂತೆ ಮಗುವಿನ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಿ…

 • ಪುರಸಭೆ: ಕಾಂಗ್ರೆಸ್‌ಗೇ ಹೆಚ್ಚು ಸ್ಥಾನ

  ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿಗಳಾಗಿದ್ದರೂ ಪಟ್ಟಣ ಪುರಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿದ್ದು, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು 11ನೇ ವಾರ್ಡ್‌ ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಲ್.ದಿನೇಶ್‌…

 • ಕುಮಾರಸ್ವಾಮಿಗೆ ಗಂಗೆ ಕೊಟ್ಟ ಭಗೀರಥ ಪ್ರಶಸ್ತಿ

  ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಹದೇವಪುರ ಗ್ರಾಮಕ್ಕೆ 28 ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದರಿಂದ ಅವರಿಗೆ ಗಂಗೆ ಕೊಟ್ಟ ಭಗೀರಥ ಎಂಬ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ ಎಂದು ತಾಲೂಕಿನ ಮಹದೇವಪುರ ಗ್ರಾಮಸ್ಥದ ಮುಖಂಡ ಕೆಂಪೇಗೌಡ…

 • ಸಂಗಮದಲ್ಲಿ ಅಂಬರೀಶ್‌ ಅಸ್ಥಿ ವಿಸರ್ಜನೆ

  ಶ್ರೀರಂಗಪಟ್ಟಣ: ಇಹಲೋಕ ತ್ಯಜಿಸಿದ ಅಂಬರೀಶ್‌ ಅವರ ಅಸ್ಥಿ ವಿಸರ್ಜನೆಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ಇಲ್ಲಿಗೆ ಸಮೀಪದ ಸಂಗಮ ಕ್ಷೇತ್ರದಲ್ಲಿ ನೆರವೇರಿಸಲಾಯಿತು. ಕಾವೇರಿ, ಲೋಕಪಾವನಿ ಹಾಗೂ ಪಶ್ಚಿಮವಾಹಿನಿ ನದಿಗಳು ಸಂಗಮಿಸುವ ಕ್ಷೇತ್ರ ಸಂಗಮಕ್ಕೆ ಮಧ್ಯಾಹ್ನ 2 ಗಂಟೆ ವೇಳೆಗೆ ಬೆಂಗಳೂರಿನಿಂದ…

 • ಶ್ರೀರಂಗಪಟ್ಟಣ:ಕಲ್ಲು ತುಂಬಿದ ಟ್ರ್ಯಾಕ್ಟರ್‌ ಪಲ್ಟಿ;ಮೂವರ ದುರ್ಮರಣ 

  ಶ್ರೀರಂಗಪಟ್ಟಣ: ತಾಲೂಕಿನ ನೇರಲಕೆರೆ ಬಳಿ ಕಲ್ಲು ತುಂಬಿದ ಟ್ರ್ಯಾಕ್ಟರ್‌ ರಸ್ತೆ ಬದಿಯ ಹಳ್ಳಕ್ಕೆ  ಪಲ್ಟಿ  ಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಅವಘಡ ಮಂಗಳವಾರ ಸಂಭವಿಸಿದೆ.  ನಿಖೀಲ್‌ ಪ್ರವೀಣ್‌ , ಪ್ರಮೋದ್‌ ಎನ್ನುವವರು ಟ್ರ್ಯಾಕ್ಟರ್‌ನಲ್ಲಿದ್ದ ಮೃತ ದುರ್ದೈವಿಗಳು ಎಂದು ತಿಳಿದು…

 • ಶ್ರೀರಂಗಪಟ್ಟಣದಲ್ಲಿ  ಭೀಕರ ಸರಣಿ ಅಪಘಾತ: 12 ಮಂದಿಗೆ ಗಂಭೀರ ಗಾಯ 

  ಶ್ರೀರಂಗಪಟ್ಟಣ: ಇಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭಾನುವಾರ ನಸುಕಿನ ವೇಳೆ ಲಾರಿ, ಕ್ಯಾಂಟರ್, ಮಿನಿ ಬಸ್, ಮತ್ತು ಬೈಕ್ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು…

 • ಶ್ರೀರಂಗಪಟ್ಟಣದಲ್ಲಿ 7 ಡೇಸ್‌ 6 ನೈಟ್ಸ್‌!

  ಹೊಸಬರ “7 ಡೇಸ್‌ 6 ನೈಟ್ಸ್‌’ ಚಿತ್ರದ ಹಾಡೊಂದನ್ನು ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ. ಯಶಸ್ವಿನಿ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ರಾಜೇಶ್‌ ಹೆಚ್‌.ಆರ್‌ ನಿರ್ಮಾಣ ಮಾಡಿದ್ದಾರೆ. “ಕಿಕ್‌ ಏರಿದರೆ ಇವತ್ತು, ಮತ್ತು ಏರಿದರೆ ಗಮ್ಮತ್ತು..’ ಎಂಬ ಹಾಡೊಂದನ್ನು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ….

ಹೊಸ ಸೇರ್ಪಡೆ