T20 Cricket

 • ವೈಟ್‌ವಾಶ್‌ ತಪ್ಪಿಸಿಕೊಂಡೀತೇ ಟೀಮ್‌ ಇಂಡಿಯಾ?

  ಮೌಂಟ್‌ ಮೌಂಗನಿ: ಭಾರತ 14 ವರ್ಷಗಳ ಬಳಿಕ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಭೀತಿಗೆ ಸಿಲುಕಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಮಂಗಳವಾರ ಇಲ್ಲಿನ “ಬೇ ಓವಲ್‌’ನಲ್ಲಿ 3ನೇ ಹಾಗೂ ಅಂತಿಮ ಹಣಾಹಣಿ ನಡೆಯಲಿದ್ದು, ಟೀಮ್‌ ಇಂಡಿಯಾ ಇದನ್ನು ಉಳಿಸಿಕೊಳ್ಳುವುದರ ಜತೆಗೆ ಮರ್ಯಾದೆಯನ್ನೂ…

 • ವೆಲ್ಲಿಂಗ್ಟನ್ ಕದನಕ್ಕೆ ಸಜ್ಜಾದ ವಿರಾಟ್ ಪಡೆ: ವಿಲಿಯಮ್ಸನ್ ಇಲ್ಲದೆ ಆಡಲಿದೆ ಕಿವೀಸ್

  ವೆಲ್ಲಿಂಗ್ಟನ್: ಭಾರತ- ನ್ಯೂಜಿಲ್ಯಾಂಡ್ ಟಿ20 ಸರಣಿಯ ನಾಲ್ಕನೇ ಪಂದ್ಯ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಕಿವೀಸ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿದೆ. ಸರಣಿಯ ಆರಂಭದ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ವಿರಾಟ್ ಪಡೆ ಸರಣಿಯನ್ನು ಕ್ಲೀನ್…

 • ಹ್ಯಾಮಿಲ್ಟನ್ ನಲ್ಲೇ ಸರಣಿ ವಶಕ್ಕೆ ಕೊಹ್ಲಿ ಪಡೆಯ ಯೋಜನೆ; ಕಿವೀಸ್ ತಂಡದಲ್ಲಿ ಒಂದು ಬದಲಾವಣೆ

  ಹ್ಯಾಮಿಲ್ಟನ್: ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ವಿರಾಟ್ ಪಡೆ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಹ್ಯಾಮಿಲ್ಟನ್ ನ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡುವ ಸಿದ್ದತೆಯಲ್ಲಿದೆ ಟೀಂ ಇಂಡಿಯಾ. ಸೆಡಾನ್ ಪಾರ್ಕ್ ನಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು…

 • ಇದು ವಿಭಿನ್ನ ಟ್ರ್ಯಾಕ್‌ ಆಗಿತ್ತು: ರಾಹುಲ್‌

  ಆಕ್ಲೆಂಡ್‌: ಮೊದಲ ಹಾಗೂ ಎರಡನೇ ಟಿ20 ಪಂದ್ಯದಲ್ಲಿ ತಾನು ಒಂದೇ ರೀತಿಯಲ್ಲಿ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದರೂ ಇದು ವಿಭಿನ್ನ ಟ್ರ್ಯಾಕ್‌ ಆಗಿತ್ತು ಎಂದು ಪಂದ್ಯಶ್ರೇಷ್ಠ ರಾಹುಲ್‌ ಅಭಿಪ್ರಾಯಪಟ್ಟಿದ್ದಾರೆ. “ಇಂದು ಬೇರೆಯದೇ ಆದ ಪರಿಸ್ಥಿತಿ ಇತ್ತು. ಟಾರ್ಗೆಟ್‌ ಕೂಡ ಕಡಿಮೆ…

 • ಟಿ20 ಸರಣಿ ಸಮಬಲಕ್ಕೆ ಭಾರತ ಪ್ರಯತ್ನ: ಮತ್ತೆ ಸಿಡಿಯಲು ಹೆಟ್‌ಮೈರ್‌-ಹೋಪ್‌ ಕಾತರ

  ವಿಶಾಖಪಟ್ಟಣ: ಆತಿಥೇಯ ಭಾರತ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಂಡ ಆಘಾತದಲ್ಲಿರುವ ವೆಸ್ಟ್‌ಇಂಡೀಸ್‌ ಏಕದಿನ ಸರಣಿಯಲ್ಲಿ ಭರ್ಜರಿಯಾಗಿ ಆಡುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ವಿಂಡೀಸ್‌ ಏಕದಿನ ಸರಣಿಯನ್ನು ವಶಪಡಿಸುವ ಉತ್ಸಾಹದಲ್ಲಿದೆ. ಸರಣಿಯ ದ್ವಿತೀಯ ಪಂದ್ಯ…

 • ವಾಂಖೆಡೆಯಲ್ಲಿ ಭಾರತ-ವಿಂಡೀಸ್‌ ಪ್ರಶಸ್ತಿ ಕಾಳಗ

  ಮುಂಬಯಿ: ಈಗಾಗಲೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿರುವ ಭಾರತ ಮತ್ತು ವೆಸ್ಟ್‌ಇಂಡೀಸ್‌ ಟಿ20 ಸರಣಿಯ ಕಿರೀಟಕ್ಕಾಗಿ ಬುಧವಾರ ವಾಂಖೆಡೆ ಮೈದಾನದಲ್ಲಿ ಸೆಣೆಸಾಟ ನಡೆಸಲಿದೆ. ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಸುಸಜ್ಜಿತ…

 • ಕಳಪೆ ಫೀಲ್ಡಿಂಗ್‌: ಕ್ಯಾಪ್ಟನ್‌ ಕೊಹ್ಲಿಗೆ ಚಿಂತೆ

  ತಿರುವನಂತಪುರ: ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸೋಲಲು ಕಳಪೆ ಫೀಲ್ಡಿಂಗ್‌ ಮುಖ್ಯ ಕಾರಣ ಎಂಬುದಾಗಿ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಜತೆಗೆ ಸಾಕಷ್ಟು ರನ್‌ ಪೇರಿಸದೆ ಹಿನ್ನಡೆ ಕಾಣಬೇಕಾಯಿತು ಎಂದರು. ಆರಂಭಕಾರ ಲೆಂಡ್ಲ್ ಸಿಮನ್ಸ್‌ ಅವರ ಅಜೇಯ ಬ್ಯಾಟಿಂಗ್‌ ವೆಸ್ಟ್‌…

 • ಸರಣಿ ಸಮಬಲದತ್ತ ವಿಂಡೀಸ್‌ ಚಿತ್ತ

  ತಿರುವನಂತಪುರ: ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ಜಿದ್ದಾಜಿದ್ದಿನ ಹೋರಾಟದಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿದ ಭಾರತವು ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಯ ಎರಡನೇ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ರವಿವಾರ ತಿರುವನಂತಪುರದಲ್ಲಿ ನಡೆಯುವ ಈ ಪಂದ್ಯ ವಿಂಡೀಸ್‌ ಪಾಲಿಗೆ…

 • ಪಂಜಾಬ್‌ಗೆ ಸೋಲಿನ ಪಂಚ್‌ ಕೊಟ್ಟ ಕರ್ನಾಟಕ

  ಸೂರತ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಸೂಪರ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ ಹಾಲಿ ಚಾಂಪಿಯನ್‌ ಕರ್ನಾಟಕ ರವಿವಾರದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 7 ವಿಕೆಟ್‌ಗಳ ಸೋಲುಣಿಸಿದೆ. ಇದರಿಂದ ಸೆಮಿಫೈನಲ್‌ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿದೆ. ಮೊದಲು…

 • ಸೈಯದ್‌ ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ಗೆ ವೇದಿಕೆ ಸಜ್ಜು

  ಸೂರತ್‌: ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಲೀಗ್‌ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು ಗುರುವಾರದಿಂದ ಸೂಪರ್‌ ಲೀಗ್‌ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಮೊದಲ ಸೆಣಸಾಟದಲ್ಲಿ ಹಾಲಿ ಚಾಂಪಿ ಯನ್‌ ಕರ್ನಾಟಕ ತಂಡವು ತ.ನಾಡು ವಿರುದ್ಧ ಸೆಣಸಲಿದೆ. ನ….

 • ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಸರ್ವಿಸಸ್‌ಗೆ ಸೋಲುಣಿಸಿದ ಕರ್ನಾಟಕ

  ವಿಜಯನಗರ (ಆಂಧ್ರಪ್ರದೇಶ): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲಿ ಕರ್ನಾಟಕ 3ನೇ ಗೆಲುವು ಕಂಡಿದೆ. ಸರ್ವಿಸಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ರಾಜ್ಯ ತಂಡವು 80 ರನ್‌ಗಳ ಭಾರೀ ಅಂತರದ ಜಯ ಸಾಧಿಸಿತು. ನಾಯಕ ಮನೀಷ್‌ ಪಾಂಡೆ…

 • ಎರಡನೇ T20: ಟೀಂ ಇಂಡಿಯಾ ಗೆಲುವಿಗೆ 154 ರನ್ ಗುರಿ

  ರಾಜ್ ಕೋಟ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 154 ರನ್ ಗಳ ಗುರಿ ಲಭಿಸಿದೆ. ಟಾಸ್ ಗೆದ್ದ ಭಾರತ ಬಾಂಗ್ಲಾವನ್ನು ಬ್ಯಾಟಿಂಗ್ ಗೆ ಇಳಿಸಿತು. 20 ಓವರುಗಳ ಮುಕ್ತಾಯಕ್ಕೆ…

 • ಭಾರೀ ಮಳೆ: ಧರ್ಮಶಾಲಾ ಟಿ20 ರದ್ದು

  ಧರ್ಮಶಾಲಾ: ಭಾರೀ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಇಲ್ಲಿ ಭಾನುವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮಳೆ ನಿಂತೀತು ಎಂದು ಕಾಯುತ್ತಲೇ ಇದ್ದ ಭಾರೀ ಸಂಖ್ಯೆಯ ವೀಕ್ಷಕರು ತೀವ್ರ ನಿರಾಸೆ ಅನುಭವಿಸಿದರು. ಧರ್ಮಶಾಲಾ…

 • ವಿಶ್ವ ಟಿ20 ತಂಡ ರಚಿಸಿದ ಜೋನ್ಸ್‌

  ಮೆಲ್ಬರ್ನ್: ಟಿ20 ಕ್ರಿಕೆಟ್ ಎನ್ನುವುದು ಕಳೆದೊಂದು ದಶಕದಿಂದ ಕ್ರೇಜ್‌ ಹುಟ್ಟಿಸಿದ ಕ್ರಿಕೆಟ್. ಅಕಸ್ಮಾತ್‌ ಹಿಂದಿನ ಶತಮಾನದಲ್ಲೇ ಈ ಹೊಡಿಬಡಿ ಕ್ರಿಕೆಟ್ ಆರಂಭಗೊಂಡಿದ್ದರೆ ಇದರಲ್ಲಿ ಯಾರೆಲ್ಲ ಮಿಂಚುತ್ತಿದ್ದರು ಎಂಬ ಕುತೂಹಲ ಸಹಜ. ಇದಕ್ಕೆ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಡೀನ್‌ ಜೋನ್ಸ್‌…

 • ಟಿ20ಯಲ್ಲಿ 8 ಸಾವಿರ ರನ್‌, ರೈನಾ ಮೊದಲ ಭಾರತೀಯ

  ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸುರೇಶ್‌ ರೈನಾ 8 ಸಾವಿರ ರನ್‌ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಒಟ್ಟಾರೆ ವಿಶ್ವದ 6ನೇ ಆಟಗಾರ ಎನ್ನುವ ಸಾಧನೆಯನ್ನು ರೈನಾ ಮಾಡಿದ್ದಾರೆ. ಇವರು ತಮ್ಮ…

 • ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ರಾಜ್ಯ ತಂಡ ಪ್ರಕಟ

  ಬೆಂಗಳೂರು: ಕಟಕ್‌ನಲ್ಲಿ ಫೆ.21ರಿಂದ ಮಾ. 2ರ ತನಕ ನಡೆಯಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಮನೀಷ್‌ ಪಾಂಡೆ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ಮೊದಲ ಪಂದ್ಯದಲ್ಲಿ ಅಸ್ಸಾಂ ಸವಾಲನ್ನು ಎದುರಿಸಲಿದೆ. ಕರ್ನಾಟಕ…

 • ಭಾರತದ ಮೊಗದಲ್ಲಿ “ನಿದಹಾಸದ: ಮಂದಹಾಸ

  ಕೊಲಂಬೊ: ಟಿ20 ಪಂದ್ಯದ ಅಷ್ಟೂ ರೋಚಕತೆ, ಕೌತುಕ, ಕುತೂಹಲ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾದ ರವಿವಾರ ರಾತ್ರಿಯ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಸೂಪರ್‌ ಹೀರೋ ಆಗಿ ಕಂಗೊಳಿಸಿದ್ದಾರೆ. ಪಂದ್ಯದ ಕಟ್ಟಕಡೆಯ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ಅವರು ಭಾರತಕ್ಕೆ “ನಿದಹಾಸ್‌ ಟ್ರೋಫಿ’ಯನ್ನು…

 • ಲೆವಿಸ್‌ ಹೊಡೆತಕ್ಕೆ ಬೆಚ್ಚಿತು ಭಾರತ

  ಕಿಂಗ್‌ಸ್ಟನ್‌ (ಜಮೈಕಾ): ರವಿವಾರದ ಏಕೈಕ ಟಿ-20 ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸಿನ ಎಡಗೈ ಆರಂಭಕಾರ ಎವಿನ್‌ ಲೆವಿಸ್‌ ಅವರ ಬ್ಯಾಟಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಭಾರತ 9 ವಿಕೆಟ್‌ಗಳ ಭಾರೀ ಸೋಲಿಗೆ ತುತ್ತಾಗಿದೆ. ಏಕದಿನ ಸರಣಿ ಕಳೆದುಕೊಂಡ ಕೆರಿಬಿಯನ್ನರ…

 • ಟಿ-20: ಮತ್ತೆ ಶಾದಾಬ್‌ ಪರಾಕ್ರಮ 3 ರನ್ನಿನಿಂದ ಗೆದ್ದ  ಪಾಕಿಸ್ಥಾನ

  ಪೋರ್ಟ್‌ ಆಫ್ ಸ್ಪೇನ್‌: ಪಾಕಿಸ್ಥಾನದ ಯುವ ಲೆಗ್‌ಸ್ಪಿನ್ನರ್‌ ಶಾದಾಬ್‌ ಖಾನ್‌ ಬೌಲಿಂಗ್‌ ಆಕ್ರಮಣಕ್ಕೆ ವೆಸ್ಟ್‌ ಇಂಡೀಸ್‌ ಮತ್ತೂಮ್ಮೆ ದಿಕ್ಕು ತಪ್ಪಿದೆ. ದ್ವಿತೀಯ ಟಿ-20 ಪಂದ್ಯದಲ್ಲಿ 3 ರನ್‌ ಸೋಲಿಗೆ ತುತ್ತಾಗಿದೆ. ಗುರುವಾರ ಇಲ್ಲಿನ “ಕ್ವೀನ್ಸ್‌ ಪಾರ್ಕ್‌ ಓವಲ್‌’ನಲ್ಲಿ ನಡೆದ…

ಹೊಸ ಸೇರ್ಪಡೆ