Water Problem

 • ವಿದ್ಯಾರ್ಥಿಗಳು – ಶಿಕ್ಷಕರಿಗೆ ತಲೆನೋವಾಗುತ್ತಿರುವ ಶಾಲೆಗಳ ನೀರು ಸಮಸ್ಯೆ

  ಮಹಾನಗರ: ನಗರದ ಬಹು ತೇಕ ಶಾಲಾ – ಕಾಲೇಜುಗಳಲ್ಲಿ ನೀರಿನ ಅಭಾವದಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೈರಾಣಾಗಿದ್ದಾರೆ. ನೀರಿಲ್ಲದ ಕಾರಣ ನಗರದ ಖಾಸಗಿ ಶಿಕ್ಷಣ ಸಂಸ್ಥೆ ಯೊಂದು ಶುಕ್ರವಾರ ಮಧ್ಯಾಹ್ನದ ಬಳಿಕ ವಿದ್ಯಾರ್ಥಿ ಗಳಿಗೆ ರಜೆ ನೀಡಿತ್ತು. ನಗರದಲ್ಲಿ…

 • ಕೃಷ್ಣಾಗೆ ನೀರು; ಮಹಾರಾಷ್ಟ್ರ ಸಿಎಂ ಭೇಟಿಗೆ ಸಮಯ ಕೇಳಿದ ಎ‍ಚ್ಡಿಕೆ

  ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ನೀರಿನ ಸಮಸ್ಯೆಗೆ ಸ್ಪಂದಿಸಲು ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವ ಸಂಬಂಧ ಚರ್ಚಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಯ ಕೇಳಿದ್ದಾರೆ. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ವಿಧಾನ…

 • ಗ್ರಾಮಾಂತರ ಭಾಗದಲ್ಲಿ ಮಳೆ ಕೊರತೆ

  ಪುತ್ತೂರು: ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಿಂದ ಸುರಿಯುವ ಮುಂಗಾರು ಪೂರ್ವ ಮಳೆಯ ಕೊರತೆ ಪುತ್ತೂರು ತಾಲೂಕು ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕಾಡಿದೆ. ಮೇ 25ರ ತನಕ 36.1 ಮಿ.ಮೀ. ಸರಾಸರಿ ಮಳೆಯಷ್ಟೇ ಸುರಿದಿದೆ. ಜನವರಿಯಿಂದ ಮೇ ತನಕ…

 • ಹೆಚ್ಚಿದ ನೀರಿನ ಹಾಹಾಕಾರ

  ಬನಹಟ್ಟಿ: ಒಂದೂವರೆ ತಿಂಗಳಿಂದ ರಬಕವಿ- ಬನಹಟ್ಟಿ, ರಾಮಪುರ ಹಾಗೂ ಹೊಸೂರ ಜನತೆ ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ಕಳೆದ ಐದಾರು ದಿನಗಳಿಂದ ನೀರಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸ್ಥಳೀಯ ಗುಡ್ಡದ ಪ್ರದೇಶದಲ್ಲಿ ಜನರು ನೀರಿಗಾಗಿ ನಾಲ್ಕಾರು ದಿನಗಳ ಕಾಲ…

 • ನೀರಿಗಾಗಿ ನುಗ್ಗಾದ ನುಗ್ಗಾನಟ್ಟಿ ಜನ

  ಸವದತ್ತಿ: ಮಲಪ್ರಭಾ ದಡದಲ್ಲಿರುವ ಈ ಗ್ರಾಮದಲ್ಲಿ ಮಕ್ಕಳು ನೀರಿಗಾಗಿ ಶಾಲೆ ತೊರೆಯುವ ದುಸ್ಥಿತಿಯಲ್ಲಿದ್ದಾರೆ. ಇನ್ನು ಕೂಲಿ ಮತ್ತು ವ್ಯವಸಾಯವನ್ನೇ ಆಧರಿಸಿ ಜೀವನ ಸಾಗಿಸುವ ಜನತೆ ನೀರಿನ ಕಾಯುವಿಕೆಯಲ್ಲೇಇಡೀ ದಿನ ವ್ಯರ್ಥವಾಗಿ ಕಳೆಯುವಂತಾಗಿದೆ. ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ…

 • ಕುಚ್ಚೂರು ನಿವಾಸಿಗಳಿಗೆ ಟ್ಯಾಂಕರ್‌ ನೀರೇ ಗತಿ!

  ಹೆಬ್ರಿ: ಕುಚ್ಚೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು ಟ್ಯಾಂಕರ್‌ ನೀರಿನ ಮೂಲಕ ಪೂರೈಕೆ ಕಾರ್ಯ ನಡೆಯುತ್ತಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ 4,351 ಜನಸಂಖ್ಯೆಯಿದ್ದು, 16 ತೆರೆದ ಬಾವಿಗಳು, 20 ಬೋರ್‌ವೆಲ್ ಮತ್ತು 42 ನಳ್ಳಿ ನೀರಿನ…

 • ಸ್ವರ್ಣೆ ಹೂಳೆತ್ತುವ ಟೆಂಡರ್‌ಗೆ ಅನುಮೋದನೆ ವಾರದಲ್ಲಿ ಕಾಮಗಾರಿ ಪ್ರಾರಂಭ?

  ಉಡುಪಿ: ಬಜೆ ಅಣೆಕಟ್ಟಿನಿಂದ ಸ್ವರ್ಣಾ ನದಿ ಪಾತ್ರದಲ್ಲಿನ ಮಾಣಾç ಸೇತುವೆಯ ವರೆಗೆ ಹೂಳು ತೆಗೆಯಲು 2.90 ಕೋ.ರೂ. ಟೆಂಡರ್‌ಗೆ ಅನುಮೋದನೆ ಸಿಕ್ಕಿದೆ. ಮುಂದಿನ ಏಳು ದಿನಗಳೊಳಗೆ ಕಾಮಗಾರಿ ಆರಂಭಿಸುವ ಚಿಂತನೆಯಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆದಾರರು ನದಿಯಿಂದ…

 • ದಕ್ಷಿಣ ಕನ್ನಡ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ

  ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು, ಅದರಲ್ಲೂ ವಿಶೇಷವಾಗಿ ಧರ್ಮಸ್ಥಳ ಹಾಗೂ ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ಚರ್ಚಿಸಿದರು. ಧರ್ಮಸ್ಥಳದಲ್ಲಿ ಈ…

 • ನೀರಿಗೆ ನೀರು ಒಡಂಬಡಿಕೆ ಸವಾಲು

  ಹುಬ್ಬಳ್ಳಿ: ಮಹಾರಾಷ್ಟ್ರದ ಜತೆ ನೀರಿಗೆ ನೀರು ಒಡಂಬಡಿಕೆ ಮುಂದೆ ಹಲವು ಸಮಸ್ಯೆ-ಸವಾಲು ಎದುರಾಗಿದ್ದು, ಮಹಾರಾಷ್ಟ್ರದ ಹೊಸ ವರಸೆಯಿಂದ ಒಡಂಬಡಿಕೆ ಉತ್ಸಾಹ ಕುಗ್ಗಿದೆ. ಕೊಯ್ನಾದಿಂದ ನೀರು ಬಿಡುಗಡೆ ನಿರೀಕ್ಷೆಯಾಗಿಯೇ ಉಳಿಯುವಂತೆ ಮಾಡಿದೆ. ಕೃಷ್ಣಾ ನದಿ ಸಂಪೂರ್ಣ ಬತ್ತಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ…

 • ಬರಿದಾದ ಪಾಪನಾಶಿನಿ ಒಡಲು

  ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ ಜನ ಎರಡು ದಿನಕ್ಕೊಮ್ಮೆ ನೀರು ಪಡೆಯಲು ತೊಡಗಿ ತಿಂಗಳಾಯಿತು. ಇದರಲ್ಲಿ ನಗರಸಭೆ,…

 • ಮಲೆನಾಡಿಗೆ ಎತ್ತಿನಹೊಳೆ ಯೋಜನೆ ಮಾರಕ

  ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು ತಾಲೂಕಿನ ಜನತೆಯಿಂದ ಕೇಳಿ ಬರುತ್ತಿದೆ. ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರನ್ನು…

 • ಬರಿದಾಗುತ್ತಿದೆ ಮಲಪ್ರಭೆ ಒಡಲು

  ಬೆಳಗಾವಿ: ಸವದತ್ತಿ ತಾಲೂಕಿನ ನವಿಲುತೀರ್ಥದ ಬಳಿ 1972ರಲ್ಲಿ ನಿರ್ಮಾಣವಾಗಿರುವ ಮಲಪ್ರಭಾ ಜಲಾಶಯ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ನೀರಿನ ದಾಹ ತಣಿಸುವದಲ್ಲದೆ ನೀರಾವರಿ ಸೌಲಭ್ಯ ಒದಗಿಸಿದೆ. ಆದರೆ ಪ್ರತಿ ವರ್ಷ ಉಂಟಾಗುವ ಮಳೆಯ ಅಭಾವ…

 • ಹಲಕುರ್ಕಿಯಲ್ಲಿ ಕರೆಂಟ್ ಕಾಟ: ಕುಡಿಯುವ ನೀರಿಗೆ ಪರದಾಟ

  ಬಾದಾಮಿ: ಹಲಕುರ್ಕಿ ಗ್ರಾಮದಲ್ಲಿ ವಿದ್ಯುತ್‌ ಪರಿವರ್ತಕ (ಟಿಸಿ) ಮೇಲೆ ಮರ ಉರುಳಿ ಟಿಸಿ ಸುಟ್ಟ ಕಾರಣ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಗ್ರಾಮದಲ್ಲಿ ಒಂದೇ ಬೋರ್‌ ಇದ್ದು, ಜನರು ಕುಡಿಯಲು ಮತ್ತು…

 • ಕೊಡ ನೀರಿಗೂ ಪರದಾಟ

  ಯಲ್ಲಾಪುರ: ಬೇಸಿಗೆಯ ತೀವೃತೆ ಹೆಚ್ಚಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರು ಸೇರಿದಂತೆ ಅಡಕೆ, ಬಾಳೆ ತೋಟಗಳು ನೀರಿಲ್ಲದೇ ಒಣಗಿ ರೈತರಲ್ಲಿ ಆತಂಕ ಮೂಡಿಸಿದೆ. ತೆರೆದ ಬಾವಿ ಕೆರೆಗಳಲ್ಲಿ ನೀರು ಆರಿದ್ದು, ಒಂದು ಕೊಡ ನೀರು ಎತ್ತಲು ಪರದಾಡುವಂತಾಗಿದೆ….

 • ಅಬ್ಬಬ್ಟಾ ಎಂದರೆ 15 ದಿನಗಳಿಗಷ್ಟೆ ನೀರು

  ಬಂಟ್ವಾಳ: ತನ್ನ ವ್ಯಾಪ್ತಿಯ ಬಹುತೇಕ ಪ್ರದೇಶವನ್ನು ಜೀವನದಿ ನೇತ್ರಾವತಿಯ ಒಡಲಲ್ಲೇ ಇಟ್ಟುಕೊಂಡಿರುವ ಬಂಟ್ವಾಳ ಪುರಸಭೆಗೆ ಇದೇ ಮೊದಲ ಬಾರಿಗೆ ನೀರಿನ ಅಭಾವ ಎದುರಾಗಿದ್ದು, ಬಂಟ್ವಾಳದ ನೀರಿನ ಮೂಲವಾದ ನದಿ ಯಲ್ಲಿ ನೀರು ಬತ್ತಿ ಹೋಗಿದೆ. ಅಬ್ಬಬ್ಟಾ ಎಂದರೆ ಮುಂದೆ…

 • ಉಪ್ಪಿನಂಗಡಿ: ಅನಧಿಕೃತ ಪಂಪ್‌ಗ್ಳ ಮೂಲಕ ನದಿ ನೀರು ಬಳಕೆ ಪತ್ತೆ

  ಉಪ್ಪಿನಂಗಡಿ: ನದಿಗಳ ಅಕ್ಕಪಕ್ಕದ ರೈತರು ನದಿ ನೀರಿಗೆ ಪಂಪು ಅಳವಡಿಸಿ ನೀರು ಬಳಸುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇಲ್ಲಿ ನೇತ್ರಾವತಿ-ಕುಮಾರಧಾರಾ ನದಿಗಳು ಹರಿಯುತ್ತಿದ್ದು, ನದಿ ದಡದಲ್ಲಿರುವ ಅದೆಷ್ಟೋ ಗ್ರಾಮಸ್ಥರು ಅಧಿಕೃತದವರ ಜತೆಗೆ ಅನಧಿಕೃತವಾಗಿ ಪಂಪು ಅಳವಡಿಸಿ…

 • ಹಿಂಗಾರು ವಿಳಂಬ, ಬತ್ತುತ್ತಿರುವ ಕೆರೆಗಳು, ಹೆಚ್ಚುತ್ತಿರುವ ಬಿಸಿಲ ಧಗೆ

  ಸೋಮವಾರಪೇಟೆ: ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಬರದ ಕಾರ್ಮೋಡ ಕವಿದಿದ್ದು, ಕೃಷಿ ಫ‌ಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ಬಹತೇಕ ನೀರಾವರಿ ಕೆರೆಗಳು, ಹೊಳೆ, ತೊರೆಗಳು ಬತ್ತುತಿದ್ದು ಸಮಸ್ಯೆ ಎದುರಾಗಿದೆ. ಬೋರ್‌ವೆಲ್‌ಗ‌ಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜನರಲ್ಲಿ ಆತಂಕ…

 • ಮುದ್ರಾಡಿ ಪರಿಸರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ

  ಹೆಬ್ರಿ: ಇಲ್ಲಿಗೆ ಸಮೀಪದ ಮುದ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಬಾವಿ, ಕೆರೆ ತೋಡುಗಳು ಬತ್ತಿಹೋಗಿದ್ದು ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಇನ್ನಿಲ್ಲದಂತೆ ಇದೆ. ಹೆಚ್ಚಿನ…

 • ಮರ್ಣೆ ಪಂ. ವ್ಯಾಪ್ತಿಯಲ್ಲಿ ತೀವ್ರಗೊಂಡ ನೀರಿನ ಸಮಸ್ಯೆ

  ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೆಂಜ, ಕುರ್ಪಾಡಿ, ಬಂಡಸಾಲೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಅಸಮರ್ಪಕ ಟ್ಯಾಂಕರ್‌ ನೀರು ಪೂರೈಕೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬರುತ್ತಿಲ್ಲ ಪಂಚಾಯತ್‌ 2 ದಿನಗಳಿ ಗೊಮ್ಮೆ 200…

 • ಚಿತ್ತೂರು: ತಲಾ 40 ಲೀ. ನೀರು ಪೂರೈಕೆ

  ಕೊಲ್ಲೂರು: ಒಂದೆಡೆ ಬರಿದಾದ ಬಾವಿ ಇನ್ನೊಂದೆಡೆ ಬತ್ತಿ ಹೋದ ಜಲ ಮೂಲ. ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಗ್ರಾಮದಲ್ಲಿ ಚಿತ್ತೂರು ಗ್ರಾಮ ಪಂಚಾಯತ್‌ ವತಿಯಿಂದ ಒಬ್ಬ ವ್ಯಕ್ತಿಗೆ ತಲಾ 40 ಲೀ. ನೀರು ಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಖಾಸಗಿ…

ಹೊಸ ಸೇರ್ಪಡೆ