arrested

 • ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ ಎಂಜಿನಿಯರ್‌ ಸೆರೆ

  ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಂತು ಗೌರವ ಸೂಚಿಸಿದ ಎಂಜಿನಿಯರ್‌ನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ಗರುಡಾ ಮಾಲ್‌ನಲ್ಲಿ ಮಂಗಳವಾರ ನಡೆದಿದೆ. ಸಂಜಯ್‌ನಗರ ನಿವಾಸಿ ನಿತಿನ್‌ (29) ಬಂಧಿತ ಆರೋಪಿ….

 • ಬ್ಲಾಕ್‌ಮೇಲ್‌ ಆರೋಪಿ ಐದು ದಿನ ಸಿಸಿಬಿ ವಶಕ್ಕೆ

  ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲಾಕ್‌ಮೇಲ್‌ ಮಾಡಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಫೋಕಸ್‌ ಟಿವಿ ಎಂಬ ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಹೇಮಂತ್‌ ಕುಮಾರ್‌ನನ್ನು ಸೋಮವಾರ ಒಂದನೇ ಎಸಿಎಂಎಂ ನ್ಯಾಯಾಲಯ ಐದು ದಿನಗಳ…

 • ಆರೋಪಿಗಳು ಆರು ದಿನ ಎನ್‌ಸಿಬಿ ವಶಕ್ಕೆ

  ಬೆಂಗಳೂರು: ಮನೆಯಲ್ಲೇ ಮಾದಕ ವಸ್ತು ಕೆಟಾಮಿನ್‌ ತಯಾರಿಸಿ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶಿವರಾಜ್‌ ಅರಸ್‌ನನ್ನು ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ….

 • ಅನುತ್ತೀರ್ಣಳಾದ ವಿದ್ಯಾರ್ಥಿನಿಗೆ ಪ್ರೇಮ ಪಾಠ; ಶಿಕ್ಷಕ ಅರೆಸ್ಟ್‌

  ಮಂಡ್ಯ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅನುತೀರ್ಣಳಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ವೇಳೆ ಪ್ರೇಮ ನಿವೇದನೆ ಮಾಡಿದ ಶಿಕ್ಷಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಮಂಡ್ಯ ನಗರದ ಖಾಸಗಿ ಶಾಲೆಯ ಶಿಕ್ಷಕ ಮೇಘನಾಥ್‌ ಬಂಧಿತ ಆರೋಪಿ. ಮೊಬೈಲ್‌ನಲ್ಲಿ ಕರೆ ಮಾಡಿ…

 • ಪತ್ರಕರ್ತನ ದಸ್ತಗಿರಿ: ಯಾರ ಮೇಲೆ ಯಾರ ಗುರಿ?

  ಹಿರಿಯ ಪತ್ರಕರ್ತರೊಬ್ಬರು ಬಂಧನಕ್ಕೊಳಗಾದ ಪ್ರಸಂಗವನ್ನು ಕರ್ನಾಟಕದ ಮಾಧ್ಯಮ ರಂಗ ಒಂದು ತೆರನ ಆಲಸ್ಯದಿಂದೆಂಬಂತೆ ಕಣ್ಣು ಮುಚ್ಚಿ ಒಪ್ಪಿಕೊಂಡಿರುವುದು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂಥ ಸಂಗತಿಯಾಗಿದೆ. ಸೇವಾ ಹಿರಿತನವಿರುವ ವ್ಯಕ್ತಿಯಾಗಿರುವ ಹೇಮಂತ್‌ ಕುಮಾರ್‌ ಅವರು ಬೆಂಗಳೂರು ಪತ್ರಿಕಾ ಬಳಗದಲ್ಲಿ ಅತ್ಯಂತ ಸುಪರಿಚಿತ…

 • ಲಂಕಾ ದಾಳಿಯ ನಂಟು ;ಕೇರಳದಲ್ಲಿ ಶಂಕಿತ ಐಸಿಸ್‌ ಉಗ್ರ ಸೆರೆ

  ಹೊಸದಿಲ್ಲಿ: ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಇಸ್ಲಾಮಿಕ್‌ ಸ್ಟೇಟ್‌ ಉಗ್ರನೊಬ್ಬನನ್ನು ಕೇರಳದಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ದಳದ ಬಂಧಿಸಿದೆ. ಬಂಧಿತ ಪಾಲಕ್ಕಾಡ್‌ ಮೂಲದ ರಿಯಾಸ್‌ ಎನ್ನುವವನಾಗಿದ್ದು, ಶ್ರೀಲಂಕಾದಲ್ಲಿ ಭೀಕರ ದಾಳಿ ನಡೆಸಿದ ಮಾಸ್ಟರ್‌ ಮೈಂಡ್‌ ಝಹ್ರಮ್‌…

 • ಪತ್ರಕರ್ತ ಹೇಮಂತ್‌ ಕುಮಾರ್‌ ಬಂಧನ

  ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹಸಚಿವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಆರೋಪದಡಿ ಮತ್ತೋರ್ವ ಪತ್ರಕರ್ತ ಹೇಮಂತ್‌ ಕುಮಾರ್‌ರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಕಾಂಗ್ರೆಸ್‌…

 • ಯುವಕನ ಕೊಂದ ಆರು ಮಂದಿ ಬಂಧನ

  ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದ ಆರು ಮಂದಿ ಆರೋಪಿಗಳನ್ನು ಜೆ.ಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಖೇಶ್‌, ಡಿ.ಎಸ್‌.ಸಂತೋಷ್‌, ಸಂದೀಪ್‌, ಎಂ.ಸಿ.ಸೋಮಯ್ಯ, ಯೋಗೇಶ್‌, ಚೇತನ್‌ ಅಲಿಯಾಸ್‌ ಕೋಬ್ರಾ ಬಂಧಿತರು. ಮತ್ತೂಬ್ಬ ಆರೋಪಿ ರಮೇಶ್‌…

 • ಮೂವರು ಕೊಲೆ ಆರೋಪಿಗಳ ಬಂಧನ

  ಬೆಂಗಳೂರು: ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಮೂವರು ಅರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿಯ ಲೋಕೇಶ್‌ ಅಲಿಯಾಸ್‌ ಪುಟಾಣಿ (21), ದೊಡ್ಡಗುಂಟೆಯ ಸೆಲ್ವರಾಜ್‌ ಅಲಿಯಾಸ್‌ ಸೆಲ್ವ(19) ಮತ್ತು ಕಾಕ್ಸ್‌ಟೌನ್‌ನ ಸುನಿಲ್‌(20) ಬಂಧಿತರು. ಆರೋಪಿಗಳು…

 • ಅತ್ಯಾಚಾರ ಆರೋಪಿ, ರೌಡಿಶೀಟರ್‌ ಆಕಾಶಭವನ ಶರಣ್‌ ಬಂಧನ

  ಮಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿ ಕುಖ್ಯಾತ ಕ್ರಿಮಿನಲ್‌, ರೌಡಿಶೀಟರ್‌ ಆಕಾಶಭವನ ಶರಣ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹುಲಿ ವೇಷ ತರಬೇತಿ ಪಡೆಯಲು ಬಂದಿದ್ದ ಅಪ್ರಾಪ್ತ…

 • ಹಲವರಿಗೆ ವಂಚಿಸಿದ್ದ ವಾರಂಟ್‌ ಆರೋಪಿ ಬಂಧನ

  ಮಲ್ಪೆ: ವಾರಂಟ್‌ ಎದುರಿಸುತ್ತಿದ್ದ ಆರೋಪಿ ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಪ್ರಭಾಕರ ಪೂಜಾರಿ(40)ಯನ್ನು ಮಲ್ಪೆ ಪೊಲೀಸರು ಬುಧವಾರ ರಾತ್ರಿ ಸಂತೆಕಟ್ಟೆಯಲ್ಲಿ ಬಂಧಿಸಿದ್ದಾರೆ. ಆತ ನಿಗೆ ನ್ಯಾಯಾಂಗ ಬಂಧನ ವಿಧಿ ಸ ಲಾ ಗಿ ದೆ. ಈತ ಕಲ್ಯಾಣಪುರ ಹಾಗೂ ಸುತ್ತಮುತ್ತಲಿನ ಜನರನ್ನು ನಂಬಿಸಿ ಅವರ ಚಿನ್ನಾಭರಣಗಳನ್ನು ಸ್ಥಳೀಯ…

 • ಕೊಲೆ ಆರೋಪಿ ಪರಾರಿ: ಮತ್ತೆ ಬಂಧನ

  ಬೆಂಗಳೂರು: ಬ್ಯಾಂಕ್‌ ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣದಲ್ಲಿ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಂದ್ರ ಅಲಿಯಾಸ್‌ ಬೆಂಕಿ ರಾಜ ಅಲಿಯಾಸ್‌ ಸೈಕೋ (28) ಬುಧವಾರ ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಕೇವಲ ಎರಡು ಗಂಟೆಗಳಲ್ಲೇ ಆರೋಪಿಯನ್ನು…

 • ದರೋಡೆಗೆ ಹೊಂಚು: ನಾಲ್ವರು ಆರೋಪಿಗಳ ಬಂಧನ

  ಉಡುಪಿ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ಪೊಲೀಸರು ಮಂಗಳವಾರ ಉಡುಪಿ ನಗರದ ಕಿನ್ನಿಮೂಲ್ಕಿ ಜಂಕ್ಷನ್‌ ಬಳಿ ಬಂಧಿಸಿದ್ದಾರೆ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ 5 ಮಂದಿ ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದ…

 • ಒಳ ಉಡುಪಿನಲ್ಲಿ ಚಿನ್ನಸಾಗಾಟ: ಆರೋಪಿ ಸೆರೆ

  ಬೆಂಗಳೂರು: ಪ್ರಯಾಣಿಕರೊಬ್ಬರು ಒಳಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಸೀಮಾ ಸುಂಕ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಏ.1ರಂದು ಶಾರ್ಜಾದಿಂದ ಕೆಐಎಗೆ ಬಂದ ಏರ್‌ ಏರೇಬಿಯಾ ವಿಮಾನದ ಪ್ರಯಾಣಿಕರೊಬ್ಬರನ್ನು ಅನುಮಾನದ ಮೇಲೆ ತಪಾಸಣೆಗೆ ಒಳಪಡಿಸಿದಾಗ ಒಳ ಉಡುಪಿನಲ್ಲಿ 2 ಚಿನ್ನದ ಗಟ್ಟಿಗಳು…

 • ಅಪ್ರಾಪ್ತೆ ಅತ್ಯಾಚಾರ: ಮೂವರ ಬಂಧನ

  ಬೆಂಗಳೂರು: ಅಪ್ರಾಪ್ತೆ ಮೆಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿಗಳಾದ ಹರೀಶ್‌ಕುಮಾರ್‌ (22) ವೆಂಕಟಾಚಲಪತಿ (19) ಬಿಪಿನ್‌ ಅಸಾದುಲ್ಲಾ ಖಾನ್‌ (22) ಬಂಧಿತರು. ಸಂತ್ರಸ್ತೆ ಭಾನುವಾರ ರಾತ್ರಿ 8.30ರ ಸುಮಾರಿಗೆ ಅಂಗಡಿಗೆ…

 • ಕಾಶ್ಮೀರದಲ್ಲಿ ಮೂವರು ಜೈಶ್‌ ಉಗ್ರರ ಬಂಧನ

  ನವದೆಹಲಿ: ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೈಶ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ನರಬಾಲ್‌ ಚೆಕ್‌ ಪಾಯಿಂಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ….

 • ಚಾಕು ತೋರಿಸಿದ ಅಪ್ರಾಪ್ತ ಸೆರೆ

  ಬೆಂಗಳೂರು: ತಾನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿಗೆ ತನ್ನ ಪ್ರೀತಿ ವಿಚಾರ ತಿಳಿಸಿ, ತನ್ನನ್ನೇ ಮದುವೆಯಾಗುವಂತೆ ಒಪ್ಪಿಸಲು ಮತ್ತೂಬ್ಬ ವಿದ್ಯಾರ್ಥಿನಿಗೆ ಅಪ್ರಾಪ್ತನೊಬ್ಬ ಚಾಕು ತೋರಿಸಿ ಹೆದರಿಸಿ, ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮಧ್ಯ ಪ್ರವೇಶದಿಂದ…

 • ಪ್ರಖ್ಯಾತ ವೈದ್ಯರ ಸುಲಿಗೆ: ಟಿವಿ ವರದಿಗಾರ ವಶಕ್ಕೆ

  ಬೆಂಗಳೂರು: ನಗರದ ಪ್ರಖ್ಯಾತ ವೈದ್ಯರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಪ್ರಕರಣದಲ್ಲಿ ಖಾಸಗಿ ಸುದ್ದಿ ವಾಹಿನಿ ಒಂದರ ವರದಿಗಾರನನ್ನು ಸದಾಶಿವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೂಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. “ನಿಮಗೆ ಸಂಬಂಧಿಸಿದ ಖಾಸಗಿ ವಿಡಿಯೋ ನಮಗೆ ಸಿಕ್ಕಿದ್ದು,…

 • ಭಿಂದ್ರನ್‌ವಾಲೆ ಸಹವರ್ತಿ, ಖಾಲಿಸ್ಥಾನ್‌ ಉಗ್ರ ದಿಲ್ಲಿಯಲ್ಲಿ ಅರೆಸ್ಟ್‌

  ಹೊಸದಿಲ್ಲಿ : 1984ರಲ್ಲಿ ಭಾರತೀಯ ಸೇನೆ ಪಂಜಾಬ್‌ ನ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆಸಿದ್ದ ಆಪರೇಶನ್‌ ಬ್ಲೂ ಸ್ಟಾರ್‌ ನಲ್ಲಿ ಹತನಾಗಿದ್ದ ಉಗ್ರ ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆಯ ಸಹವರ್ತಿ ಮತ್ತು ನಿಷೇಧಿತ ಖಾಲಿಸ್ಥಾನ್‌ ಉಗ್ರ ಸಂಘಟನೆಯ ಓರ್ವ ಸದಸ್ಯ, ಗುರುಸೇವಕ್‌…

 • ಬಸ್‌ನಲ್ಲಿ ಚಿನ್ನ ಕದಿಯುತ್ತಿದ್ದವಳು ಅರೆಸ್ಟ್

  ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರಿಗೆ ಮಂಪರು ಬರುವಂತಹ ಪಾನೀಯ ಕುಡಿಸಿ, ನಂತರ ಚಿನ್ನಾಭರಣ ಮತ್ತು ಹಣ ದೋಚುತ್ತಿದ್ದ ಮಹಿಳೆಯನ್ನು ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ಸಿಬ್ಬಂದಿ ಪತ್ತೆಹಚ್ಚಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಈಚೆಗೆ ನಡೆದಿದೆ.  ಇತರೆ ಪ್ರಯಾಣಿಕರಂತೆ…

ಹೊಸ ಸೇರ್ಪಡೆ