death

 • ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

  ಕಲಬುರಗಿ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದು ಕಾರಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಜೀವನಗಿ ಗ್ರಾಮದ ಬಳಿ ನಡೆದಿದೆ. ‌ ಬೀದರ್ ನಿಂದ…

 • ವಿಷ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರ ಸಾವು

  ರಾಯಬಾಗ: ಕಾಳುಗಳಿಗೆ ಲೇಪನ ಮಾಡಿದ ರಾಸಾಯನಿಕದ ಗಾಳಿ ಸೇವಿಸಿ ಯೋಧನ ಮಕ್ಕಳಿಬ್ಬರು ಮೃತಪಟ್ಟಿದ್ದು, ಪತ್ನಿ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಯೋಧ ಹನಮಂತ ಕುಂಬಾರ ಮತ್ತು ಕವಿತಾ ದಂಪತಿಯ ಮಕ್ಕಳಾದ ಜಯಶ್ರೀ…

 • ಬೈಕ್ – ಕ್ಯಾಂಟರ್ ನಡುವೆ ಭೀಕರ ಅಪಘಾತ ಇಬ್ಬರು ಸಾವು

  ಶಿವಮೊಗ್ಗ : ಬೈಕು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಹಾರನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ. ಮೃತರನ್ನು ಹಾರನಹಳ್ಳಿಯ ಕೇಶವ್(20) ಹಾಗೂ ಗೀರಿಶ್…

 • ಹಿಂಗಾರು ಮಳೆ ಆರ್ಭಟ: ಮತ್ತೊಂದು ಬಲಿ

  ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿಯಲ್ಲಿ ಹಿಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ರಾಜ್ಯದಲ್ಲಿಯೇ ಅಧಿಕ…

 • ಚಿಕ್ಕಮಗಳೂರು : ವೇದಾವತಿ ನದಿ ಆರ್ಭಟಕ್ಕೆ ಕೊಚ್ಚಿ ಹೋದ ವೃದ್ದೆ

  ಚಿಕ್ಕಮಗಳೂರು ; ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಜಿಲ್ಲೆಯ ವೇದಾವತಿ ನದಿಯಲ್ಲಿ ವೃದ್ಧೆಯೊಬ್ಬರು ಕೊಚ್ಚಿ ಹೋದ ಘಟನೆ ಕಡೂರು ತಾಲೂಕಿನ ಮಲ್ಲಿದೇವಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಕಡೂರು ತಾಲೂಕಿನ ಮಲ್ಲಿದೇವಿಹಳ್ಳಿಯ ನಿವಾಸಿಯಾದ ಕರಿಯಮ್ಮ 70 ಮೃತ ವೃದ್ದೆ….

 • ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು

  ವಿಜಯಪುರ: ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆಯಲ್ಲಿ ಮಲಗಿದ್ದ ಮಗುವೊಂದು ಹೆಗ್ಗಣ ಕಚ್ಚಿ ಮೃತ ಪಟ್ಟಿದೆ. ಗೀತಾ-ಗೋಲಪ್ಪ ದಂಪತಿಯ 6 ತಿಂಗಳ ಮಗು ಸಾವನ್ನಪ್ಪಿರುವುದು. ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳಾಗಿದ್ದ ಈ ದಂಪತಿ, ಹಬ್ಬಕ್ಕೆಂದು ಗೀತಾ ಅವರ ತವರು…

 • ಕೊರವಡಿ : ಚಿಕಿತ್ಸೆ ಫಲಕಾರಿಯಾಗದೆ ಕುಮಾರಿ ಶ್ರಾವ್ಯ ನಿಧನ

  ತೆಕ್ಕಟ್ಟೆ : ಕಳೆದ ಒಂದುವರೆ ವರುಷಗಳಿಂದ ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ನಿವಾಸಿ ಉದಯ ಅವರ ಪುತ್ರಿ ಶ್ರಾವ್ಯ(10) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದೆ ಎನ್ನುವ ಈ ಕುರಿತು…

 • ಹೃದಯಾಘಾತ: ಅಂಗಡಿಯಲ್ಲೇ ಕುಸಿದು ಸಾವು

  ವೇಣೂರು: ಗೂಡಂಗಡಿ ಮಾಲಿಕ ಹೃದಯಾಘಾತದಿಂದ ಅಂಗಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಗುರುವಾರ ಸಂಭವಿಸಿದೆ. ನಾರಾವಿ ಸಮೀಪದ ನಿವಾಸಿ ಯಲ್ಲಪ್ಪ ಪೂಜಾರಿ ಮೃತಪಟ್ಟವರು. ನಾರಾವಿ ಪೇಟೆಯಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದ ಇವರು ಹೃದಯ ಸಂಬಂಧಿ…

 • ನಾಗೂರು : ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನಿರುಪಾಲು

  ಬೈಂದೂರು: ಈಜಲು ತೆರಳಿದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ನಾಗೂರು ಹಳಿಗೇರಿ ನದಿಯಲ್ಲಿ ಗುರುವಾರ ಮದ್ಯಾಹ್ನ ಸಂಭವಿಸಿದೆ. ಮೃತರನ್ನು ನಾಗೂರಿನ ಸಂದೀಪನ್ ಶಾಲೆಯ ವಿದ್ಯಾರ್ಥಿಗಳಾದ ವಂಶಿತ್ ಶೆಟ್ಟಿ (12) ಹಾಗೂ ರಿತೇಶ್ ಶೆಟ್ಟಿ (12)…

 • ಚಿಕ್ಕಮಗಳೂರು : ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

  ಚಿಕ್ಕಮಗಳೂರು : ಕೆರೆಗೆ ಈಜಲು ತೆರಳಿದ ಬಾಲಕ ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಗೌಜ ಗ್ರಾಮದ ಸುಂಕದಕಟ್ಟೆಯಲ್ಲಿ ಸೋಮವಾರ ಸಂಭವಿಸಿದೆ. ಸಾದರಹಳ್ಳಿ ಗ್ರಾಮದ ವರುಣ್ (15) ಮೃತ ಬಾಲಕ, ಈತ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಸಂದರ್ಭ ನೀರಿನಲ್ಲಿ…

 • ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು

  ಶಿವಮೊಗ್ಗ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ರವಿವಾರ ಸಂಭವಿಸಿದೆ. ಗೌತಮ್(21) ನೀರಿಗೆ ಬಿದ್ದು ಮೃತಪಟ್ಟ ಯುವಕ. ಗೌತಮಪುರ ಗ್ರಾ.ಪಂ ಅಧ್ಯಕ್ಷೆ ಗೀತಾ- ರೇವಪ್ಪ ದಂಪತಿಗಳ…

 • ತುಮಕೂರು: ವಿದ್ಯುತ್ ತಂತಿ ಸ್ಪರ್ಶಿಸಿ ಪೌರಕಾರ್ಮಿಕ ಸ್ಥಳದಲ್ಲೆ ಸಾವು

  ತುಮಕೂರು:  ವಿದ್ಯುತ್ ತಂತಿ ಸ್ಪರ್ಶಿಸಿ  ಪೌರಕಾರ್ಮಿಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದಿದೆ. ಮೃತ ಪೌರಕಾರ್ಮಿಕನನ್ನು ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಪಾಲಿಕೆ ಸೂಚನೆ ನೀಡಿತ್ತು. ಈ…

 • ಪ್ರತ್ಯೇಕ ಪ್ರಕರಣ: ಕೆರೆಯಲ್ಲಿ ಮುಳುಗಿ ಆರು ಮಂದಿ ಸಾವು

  ಚಿಕ್ಕಮಗಳೂರು/ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಈಜಲು ಹೋಗಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಳೇಕಲ್‌ ಗ್ರಾಮದಲ್ಲಿ ಸೋಮವಾರ ಆಯುಧ ಪೂಜೆ ಮುಗಿಸಿಕೊಂಡು ಕೆಂದಿನಕಟ್ಟೆ ಕೆರೆಯಲ್ಲಿ ಈಜಲು ಹೋಗಿದ್ದ ನಗರದ ಹೌಸಿಂಗ್‌ ಬೋರ್ಡ್‌ ನಿವಾಸಿಗಳಾದ ಜೀವಿತ್‌(14), ಮುರುಳಿ ಕಾರ್ತಿಕ್‌(15) ಮತ್ತು…

 • ತಿನಿಸಿನ ಜತೆ ಬಲೂನ್‌ ನುಂಗಿ ಐದು ವರ್ಷದ ಮಗು ಸಾವು

  ಮರಿಯಮ್ಮನಹಳ್ಳಿ: ಮಕ್ಕಳ ತಿನಿಸುಗಳ ಜತೆ ಉಚಿತವಾಗಿ ಕೊಡುವ ಬಲೂನ್‌ ನುಂಗಿ ಐದು ವರ್ಷದ ಮಗು ಮೃತಪಟ್ಟ ಘಟನೆ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಯ್ಯನಹಳ್ಳಿ ಗ್ರಾಮದ ಹರಿಜನ ಚಂದ್ರಪ್ಪ ಮತ್ತು ಕವಿತಾ ದಂಪತಿಯ ಮಗು…

 • ಸಾವಿನಲ್ಲೂ ಒಂದಾದ ಬಳ್ಳಾರಿ ರೈತ ದಂಪತಿ

  ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ರೈತಾಪಿ ಕುಟುಂಬದ ದಂಪತಿ ಮಂಗಳ ವಾರ ಸಾವಿನಲ್ಲೂ ಒಂದಾಗಿದ್ದಾರೆ. ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಅವರು ಹಬ್ಬದ ದಿನವಾದ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪತಿ ಸಾವಿನ ಶೋಕದಲ್ಲಿ ಪತ್ನಿ ಈರಮ್ಮ…

 • ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

  ಚಿಕ್ಕಮಗಳೂರು : ಕರೆಯಲ್ಲಿ ಈಜಲು ಹೋದ ಮೂವರು ಬಾಲಕರು ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ ಸಮೀಪದ ಕೆಂಚಿನಕಟ್ಟೆ ಕೆರೆಯಲ್ಲಿ ನಡೆದಿದೆ. ಮೃತರನ್ನು ಜೀವಿತ್ (14), ಮುರುಳಿ ಕಾರ್ತಿಕ್ (15), ಚಿರಾಗ್ (16) ಎಂದು ಗುರುತಿಸಲಾಗಿದ್ದು,ನಿನ್ನೆ ಸಂಜೆಯ…

 • ಸಿಡಿಲಿಗೆ ರೈತ ಬಲಿ

  ಬೆಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿಯ ಕೆಲವೆಡೆ ಮಳೆಯಾಗಿದ್ದು, ಸಿರವಾರ ತಾಲೂಕಿನಲ್ಲಿ ಸಿಡಿಲಿಗೆ ರೈತನೊಬ್ಬ ಬಲಿಯಾಗಿದ್ದಾನೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ತುಪ್ಪದೂರು ಗ್ರಾಮದ ರೈತ ಶರಬಣ್ಣ…

 • ಅಪಘಾತ; ಭೀಮಾ ತೀರದ ಹಂತಕ ಭಾಗಪ್ಪ ಪತ್ನಿ ಸಾವು

  ವಿಜಯಪುರ: ಇಂಡಿ ತಾಲೂಕಿನ ಕಪ ನಿಂಬರಗಿ ಬಳಿ ಸಂಭವಿಸಿದ ಭೀಕರ ಅಪಘಾತ ದಲ್ಲಿ ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಪತ್ನಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ನ್ಯಾಯಾಲಯದ ಎಪಿಪಿ ಶೋಭಾ ಭಜಂತ್ರಿ (45) ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 13ರಲ್ಲಿ…

 • ಸ್ಮ್ಯೂಲ್‌ ಸಿಂಗಿಂಗ್‌ ಗೀಳಿಗೆ ಗೃಹಿಣಿ ಬಲಿ

  ಚಿಕ್ಕಬಳ್ಳಾಪುರ: ಸ್ಮ್ಯೂಲ್‌ ಆ್ಯಪ್‌ನಲ್ಲಿ ಗೀಳು ಬೆಳೆಸಿಕೊಂಡಿದ್ದ ಗೃಹಿಣಿಯೊಬ್ಬಳು, ಸ್ಮ್ಯೂಲ್‌ಸಿಂಗಿಂಗ್‌ನಲ್ಲಿ ಪರಿಚಯವಾಗಿದ್ದ ಯುವಕ ತನ್ನೊಂದಿಗೆ ಹಾಡುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ನಗರದ ನಿವಾಸಿ ಶಿಲ್ಪ (35) ಆತ್ಮಹತ್ಯೆಗೆ ಶರಣಾದವಳು….

 • ವಿದ್ಯುತ್‌ ಪ್ರವಹಿಸಿ ವಿವಿಧೆಡೆ ಬಾಲಕರಿಬ್ಬರ ದುರ್ಮರಣ

  ಕವಿತಾಳ/ದಾವಣಗೆರೆ: ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾಜ್ಯದ ವಿವಿಧೆಡೆ ನಡೆದಿದೆ. ರಾಯಚೂರು ತಾಲೂಕಿನ ಬಸಾಪುರದಲ್ಲಿ ಶಾಲೆ ಮೇಲೆ ಹಾಯ್ದು ಹೋದ ವಿದ್ಯುತ್‌ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಅನಿಲ್‌ಕುಮಾರ ತಿಮ್ಮಪ್ಪ (11) ಮೃತಪಟ್ಟಿದ್ದಾನೆ. ಸರ್ಕಾರಿ ಹಿರಿಯ ಪ್ರಾಥಮಿಕ…

ಹೊಸ ಸೇರ್ಪಡೆ