dhakshina kannada

 • ನಾಳೆ ಭಾರತ ಬಂದ್‌: ಲಘು ಪರಿಣಾಮ ಸಾಧ್ಯತೆ

  ಉಡುಪಿ/ ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50ಕ್ಕೂ ಹೆಚ್ಚು ಸ್ವತಂತ್ರ ನೌಕರ ಸಂಘಟನೆಗಳು ಜ. 8ರಂದು ಅಖೀಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಮಂಗಳೂರು ಮತ್ತು…

 • ವಿಟ್ಲ ಠಾಣೆಯಲ್ಲಿ ನಡೆಯಿತು ಅದ್ಧೂರಿ ಸೀಮಂತ..!

  ವಿಟ್ಲ :ತುಳುನಾಡ ಕಟ್ಟು ಕಟ್ಟಳೆಗಳಲ್ಲಿ ಸೀಮಂತ ಕೂಡಾ ಒಂದು. ಮದುವೆಯಾದ ಹೆಣ್ಮಗಳು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ. ಇಂತಹುದೇ ಒಂದು ಸೀಮಂತ ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ಧೂರಿಯಾಗಿಯೇ ನಡೆಯಿತು. ಅಂದ ಹಾಗೆ ಸೀಮಂತದ ನಾಯಕಿ ಬೇರಾರೂ…

 • ಎನ್‌ಎಂಪಿಟಿ: ಹಡಗು ನಿರ್ವಹಣೆಗೆ ತೊಡಕಾದ ಹೂಳು!

  ಮಂಗಳೂರು: ನವಮಂಗಳೂರು ಬಂದರಿನ ಬರ್ತ್‌ ನಲ್ಲಿ ಹೂಳು ತುಂಬಿ ಹಡಗುಗಳ ಆಗಮನ- ನಿರ್ಗಮನಕ್ಕೆ ಅಡಚಣೆಯಾಗುತ್ತಿದೆ. ಇದು ಬಂದರಿನ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಂಗಳೂರು ಆಸುಪಾಸಿನ ಹಲವಾರು ಕೈಗಾರಿಕೆಗಳ ಆಯಾತ- ನಿರ್ಯಾತಕ್ಕೆ ನವಮಂಗಳೂರು ಬಂದರು ಮಾಧ್ಯಮದಂತಿದೆ. ಸಾಮಾನ್ಯವಾಗಿ ಇಲ್ಲಿ…

 • ದ.ಕ.: 300 ಕೋ.ರೂ. ಮೀರಲಿದೆ ನಷ್ಟ

  ಮಂಗಳೂರು: ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ 300 ಕೋ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಇದು ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಅಧಿಕ ಎನ್ನಲಾಗಿದೆ. ಬೆಳ್ತಂಗಡಿ-ಬಂಟ್ವಾಳದಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಸದ್ಯ…

 • ನಾಳೆ ದ.ಕ,ಉಡುಪಿ ಹಾಗೂ ಉ.ಕ ಜಿಲ್ಲೆಗಳಿಗೆ ಮುಖ್ಯಮಂತ್ರಿ ಪ್ರವಾಸ

  ಮಂಗಳೂರು :ಪ್ರವಾಹದಿಂದ ನಲುಗಿದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸಿದ ಮಳೆಹಾನಿ ವೀಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಸ್ಟ್ 12 ಸೋಮವಾರದಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ….

 • ಮಂಗಳೂರು ಪೊಲೀಸ್ ಆಯುಕ್ತರಾಗಿ ಡಾ. ಪಿ.ಎಸ್. ಹರ್ಷ ನೇಮಕ

  ಮಂಗಳೂರು: ಮಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ಡಾ| ಪಿ.ಎಸ್‌. ಹರ್ಷ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಈ ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ (ಭದ್ರತೆ ಮತ್ತು ಗುಪ್ತಚರ ವಿಭಾಗ) ಸೇವೆಸಲ್ಲಿಸುತ್ತಿದ್ದರು. ಡಾ| ಪಿ.ಎಸ್‌….

 • ದಕ್ಷಿಣ ಕನ್ನಡ: ಡೆಂಗ್ಯೂ ಇಳಿಕೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣ ಇಳಿಕೆಯಾಗುತ್ತಿದ್ದು, ಸದ್ಯ ಯಾರೂ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಡೆಂಗ್ಯೂ ಸೊಳ್ಳೆ ಉತ್ಪತ್ತಿಗೆ ಪೂರಕವಾದ ತಾಣಗಳ ಪರಿಶೀಲನಾ ಕಾರ್ಯ ಮುಂದುವರಿದಿದ್ದು, ಬುಧವಾರ 20 ಸಾವಿರ…

 • ಗ್ರಾ.ಪಂ.ಗಳ ಇಚ್ಛಾನುಸಾರ ತೆರಿಗೆ ವಸೂಲಿಗೆ ಅಂಕುಶ

  ಮಂಗಳೂರು: ಕೆಲವು ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಗಳಿಂದ ನಿಗದಿತ ಮಾನದಂಡಕ್ಕಿಂತ ಹೆಚ್ಚು ಕಟ್ಟಡ ತೆರಿಗೆ ವಸೂಲು ಮಾಡು ತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕನಿಷ್ಠ ದರ ಶೇ.0.4ರಿಂದ…

 • ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆ

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಬುಧವಾರ ಉತ್ತಮ ಮಳೆಯಾದ ವರದಿಯಾಗಿದೆ. ಮಂಗಳೂರು ನಗರದಲ್ಲಿ ಕಳೆದ ಎರಡು ದಿನಕ್ಕೆ ಹೋಲಿಕೆ ಮಾಡಿದರೆ ಮಳೆ ಪ್ರಮಾಣ ತುಸು ತಗ್ಗಿದೆ. ಆದರೆ ಬೆಳಗ್ಗಿನಿಂದಲೇ ಬಿಟ್ಟು ಬಿಟ್ಟು ಮಳೆಯಾಗುತ್ತಿತ್ತು. ಉಳಿದಂತೆ…

 • ಕರಾವಳಿಯಲ್ಲಿ ಮುಂಗಾರು ಚುರುಕು: ಇನ್ನೂ ಮೂರು ದಿನ ಮಳೆ

  ಮಂಗಳೂರು/ಉಡುಪಿ: ಕೆಲವು ದಿನಗಳಿಂದ ದುರ್ಬಲ ವಾಗಿದ್ದ ಮುಂಗಾರು ಇದೀಗ ಚುರುಕು ಗೊಂಡಿದೆ. ಕರಾವಳಿಯ ನಾನಾ ಕಡೆಗಳಲ್ಲಿ ಮಂಗಳವಾರ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ. ಮಂಗಳೂರು – ಉಡುಪಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯಿತು….

 • ಕರಾವಳಿಯ ಅಲ್ಲಲ್ಲಿ ಮಳೆ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಮಳೆಯಾದ ವರದಿಯಾಗಿದೆ. ಮಂಗಳೂರು ನಗರ, ಪುತ್ತೂರು, ಸುಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ. ಹೆಬ್ರಿ, ಆಗುಂಬೆ, ಕಾರ್ಕಳ, ಉಡುಪಿ, ಮಣಿಪಾಲ, ಬೆಳ್ಮಣ್ಣು,…

 • ಸ್ವಚ್ಛ ಮಂಗಳೂರು ಅಭಿಯಾನ ದೇಶಕ್ಕೇ ಮಾದರಿ: ಸ್ವಾಮಿ ವೇದನಿಷ್ಠಾನಂದಜಿ

  ಮಹಾನಗರ: ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 27ನೇ ವಾರದ ಶ್ರಮದಾನ ರವಿವಾರ ಜಪ್ಪಿನಮೊಗರು ಪ್ರದೇಶದಲ್ಲಿ ನಡೆಯಿತು. ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಲ್ಲಿರುವ ನೂತನವಾಗಿ ನಿರ್ಮಿಸಲಾದ ಬಸ್‌ ತಂಗುದಾಣದ ಮುಂಭಾಗದಲ್ಲಿ 27ನೇ ಶ್ರಮದಾನಕ್ಕೆ ರಾಮಕೃಷ್ಣ ಮಿಷನ್‌ನ…

 • ಚಂಡಮಾರುತ ಭೀತಿ: ಕರಾವಳಿ ತೀರದಲ್ಲಿ ಕಟ್ಟೆಚ್ಚರ

  ಮಂಗಳೂರು/ ಉಡುಪಿ /ಮಣಿಪಾಲ: ಮಾನ್ಸೂನ್‌ನ ನಿರೀಕ್ಷೆಯಲ್ಲಿರುವ ಜನರಿಗೆ ಜತೆ ಜತೆಗೆ ಚಂಡಮಾರುತದ ಭೀತಿಯೂ ಕಾಡಲಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ. ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ…

 • ನಿಫಾ: ದಕ್ಷಿಣ ಕನ್ನಡದಲ್ಲೂ ಮುಂಜಾಗ್ರತೆ

  ಮಂಗಳೂರು: ಶಂಕಿತ ನಿಫಾ ವೈರಸ್‌ ಲಕ್ಷಣ ಗಳು ಕಂಡುಬಂದರೆ ತತ್‌ಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂಬುದಾಗಿ ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಫಾ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗಡಿಯ…

 • ಕುವೈಟ್‌ನಲ್ಲಿ ಯುವಕರ ಸಂಕಷ್ಟ: ಇಂದು ಅಂತಿಮ ನಿರ್ಧಾರ ಸಾಧ್ಯತೆ

  ಮಂಗಳೂರು: ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಮಂದಿ ಸಹಿತ ಭಾರತದ ಒಟ್ಟು 75 ಮಂದಿ ನೌಕರರನ್ನು ಸ್ವದೇಶಕ್ಕೆ ಕಳುಹಿಸುವ ಬಗ್ಗೆ ಇದ್ದ ತಾಂತ್ರಿಕ ಸಮಸ್ಯೆಗಳು ಶೀಘ್ರ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿದ್ದು, ರವಿವಾರ ಶೋನ್‌…

 • ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದಿರಿ: ರಮಾನಾಥ ರೈ

  ಬಂಟ್ವಾಳ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರಿಗೆ ಬಂದಿರುವ ಹಲ್ಲೆ ಮತ್ತು ಹತ್ಯೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಕೃತ್ಯ ಖಂಡನೀಯ. ಅವರ ಪರವಾಗಿ ಚುನಾಯಿತ ಪ್ರತಿನಿಧಿಗಳಿಂದ ಒತ್ತಡ ಬಂದಿರುವುದಾಗಿ ಪೊಲೀಸ್‌ ಮೂಲಗಳಿಂದ…

 • ನೀರಿನ ಕೊರತೆ ನಡುವೆ ಇಂದು ಶಾಲಾರಂಭ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ರಂದು ಪ್ರಾರಂಭವಾಗಲಿವೆ. ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆಯಲ್ಲಿ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲು ಶಾಲೆಯಲ್ಲಿ ಪ್ರಾರಂಭೋತ್ಸವವನ್ನೂ ಬುಧವಾರ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಾಹ್ನದ…

 • ಮಂಗಳೂರು: ಸಿಸಿ ಕೆಮರಾ ಸಂಖ್ಯೆ 1,830ಕ್ಕೆ

  ಮಂಗಳೂರು: ನಗರ ಪೊಲೀಸರು ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ನಡೆಸುತ್ತಿರುವ ವಿಶೇಷ ಅಭಿಯಾನದಂತೆ ಕಳೆದ ವಾರ ನಗರದಲ್ಲಿ ವಾಣಿಜ್ಯ ಸಂಕೀರ್ಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಸಿಸಿ ಕೆಮರಾ ಅಳವಡಿಕೆಯಾಗಿವೆ. ಈ ಮೂಲಕ ನಗರದಲ್ಲಿ ಅಳವಡಿಕೆಯಾಗಿರುವ ಸಿಸಿ ಕೆಮರಾಗಳ…

 • ತುಂಬೆ ಡ್ಯಾಂ ಹೂಳೆತ್ತಲು ಸಿದ್ಧತೆ ಪೂರ್ಣ

  ಬಂಟ್ವಾಳ: ನೇತ್ರಾವತಿ ನದಿಯ ತುಂಬೆ ಡ್ಯಾಂ ಪರಿಸರದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ನದಿಯಲ್ಲಿ ಸೇರಿರುವ ಹೂಳೆತ್ತುವ ಕೆಲಸಕ್ಕೆ ಸಿದ್ಧತೆ ನಡೆಯುತ್ತಿದೆ. ದಿಲ್ಲಿಯ ನೆಲ್ಕೊ ಕಂಪೆನಿ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಮಂಗಳೂರಿನ ಆಸಿಫ್ ನೇತೃತ್ವ ತಂಡ ಕೆಲಸ ನಿರ್ವಹಿಸಲಿದೆ….

 • ಸಿಆರ್‌ಝಡ್‌: ಜೂನ್‌ ತಿಂಗಳಿನಿಂದ ಮರಳುಗಾರಿಕೆ ನಿಷೇಧ; ಮತ್ತೆ ಸಮಸ್ಯೆ?

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಜೂನ್‌ನಿಂದ ಎರಡು ತಿಂಗಳ ಕಾಲ ಮರಳುಗಾರಿಕೆ ನಿಷೇಧಗೊಳ್ಳಲಿದೆ. ಮರಳು ಸಮಸ್ಯೆ ಮತ್ತೆ ಎದುರಾಗುವ ಸಾಧ್ಯತೆಯಿದೆ. ಜೂನ್‌ನಿಂದ ಆಗಸ್ಟ್‌ ವರೆಗೆ ಮೀನು ಸಂತಾನೋತ್ಪತ್ತಿ ಅವಧಿ ಎಂಬ ಕಾರಣಕ್ಕೆ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆಗೆ ನಿಷೇಧ…

ಹೊಸ ಸೇರ್ಪಡೆ