drought

 • ಜಿಲ್ಲೆಯಲ್ಲಿ ಬರ: ಕುಡಿಯುವ ನೀರಿನ ಆತಂಕ

  ಹಾಸನ: ಮುಂಗಾರಿನಲ್ಲಿ ಅತಿವೃಷ್ಟಿ, ಹಿಂಗಾರಿನಲ್ಲಿ ಅನಾವೃಷ್ಟಿಯಿಂದ ತತ್ತರಿಸಿದ ಹಾಸನ ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳೂ ಈಗ ಬರಪೀಡಿತ ಪ್ರದೇಶಗಳೆಂದು ಘೋಷಣೆ ಆಗಿವೆ. ಬರಪರಿಹಾರ ಕಾರ್ಯಕ್ರಮಗಳನ್ನೂ ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಆದರೂ ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಅಭಾವದ ಆತಂಕ ಕಾಡುತ್ತಿದೆ….

 • ಬರದಿಂದ 11,384.47 ಕೋಟಿ ರೂಪಾಯಿ ನಷ್ಟ

  ವಿಧಾನಪರಿಷತ್‌: 156 ತಾಲೂಕುಗಳಲ್ಲಿ ಬರದಿಂದಾಗಿ ಸುಮಾರು 11,384.47 ಕೋಟಿ ರೂ. ಮೊತ್ತದಷ್ಟು ಬೆಳೆನಷ್ಟವಾಗಿದ್ದು, ಕೇಂದ್ರಕ್ಕೆ 2,064 ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಟಿ.ಎ. ಶರವಣ…

 • ಬರ ತಾಲೂಕುಗಳಿಗೆ 152 ಕೋಟಿ

  ಬೆಂಗಳೂರು: ರಾಜ್ಯದ ಬರಪೀಡಿತ 156 ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳಿಗೆ ತಲಾ ಒಂದು ಕೋಟಿ ರೂ. ನಂತೆ 156 ಕೋಟಿ ರೂ. ಬಿಡುಗಡೆಯಾಗಿದೆ. 156 ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ವ್ಯವಸ್ಥೆ ಸೇರಿ ಬರ ಪರಿಹಾರ ಕಾಮಗಾರಿಗಳಿಗಾಗಿ…

 • ರಾಜ್ಯದ ಜಿಡಿಪಿ ಮೇಲೆ ‘ಬರ’ದ ಕಾರ್ಮೋಡ

  ಬೆಂಗಳೂರು: ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿರುವುದರಿಂದ ಈ ಬಾರಿಯ ಬರ ರಾಜ್ಯಕ್ಕೆ ತುಸು ತೀವ್ರ ವಾಗಿಯೇ ತಟ್ಟಿದೆ. ಇದರಿಂದ ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ)ದ…

 • ರೈತರಿಗೆ ಖುಷಿ ತಂದ ದಾಳಿಂಬೆ ಬೆಳೆ

  ಲಿಂಗಸುಗೂರು: ದಾಳಿಂಬೆ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ತಾಲೂಕಿನ ದಾಳಿಂಬೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಒಂದೆಡೆ ಬರಗಾಲದಿಂದ ಸಂಪ್ರದಾಯಿಕ ಬೆಳೆ ಬೆಳೆಯುವ ರೈತರು ಆತಂಕದಲ್ಲಿದ್ದರೆ, ದಾಳಿಂಬೆ ಬೆಳೆ ಉತ್ತಮ ಇಳುವರಿ ಮೂಲಕ ಹೆಚ್ಚಿನ ಬೆಳೆ ತಂದು ಕೊಟ್ಟಿದೆ….

 • ಬಾರದ ಮಳೆ: ಜಾನುವಾರಿಗಿಲ್ಲ ಮೇವು

  ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗೆ ತಕ್ಕಂತೆ ಮಳೆ ಆಗದೇ ಇರುವುದರಿಂದ ರೈತರು ಬೆಳೆದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಹಾನಿಯಾಗಿವೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೇ ಭೂಮಿಯಲ್ಲಿಯೇ ಕಮರಿಹೋಗಿವೆ. ಹೀಗಾಗಿ ಮೇವು ಮತ್ತು ನೀರಿಲ್ಲದ ಕಾರಣ ಹಿಂದುಳಿದ ಪ್ರದೇಶದ…

 • ಹಂಪಿ ಉತ್ಸವಕ್ಕೆ ಕೊನೆಗೂ ಡೇಟ್ ಫಿಕ್ಸ್‌!

  ಹೊಸಪೇಟೆ: ಬರಗಾಲದ ನೆಪವೊಡ್ಡಿ ಹಂಪಿ ಉತ್ಸವವನ್ನು ಮುಂದೂಡುತ್ತ ಬರುತ್ತಿದ್ದ ಮೈತ್ರಿ ಸರ್ಕಾರ, ಕೊನೆಗೂ ಮಾ.2 ಮತ್ತು 3ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ದಿನಾಂಕ ನಿಗದಿ ಮಾಡಿದೆ. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ.7ರಂದು ಜಿಲ್ಲಾಧಿಕಾರಿ ಡಾ|…

 • ಬರ ಅಧ್ಯಯನ ವರದಿ ನಾಡಿದ್ದು ಮುಖ್ಯಮಂತ್ರಿಗೆ ಸಲ್ಲಿಕೆ

  ಕಲಬುರಗಿ: ಬರ ಅಧ್ಯಯನ ಸಚಿವ ಉಪ ಸಂಪುಟ ಸಮಿತಿ ಕಳೆದೆರಡು ದಿನಗಳಿಂದ ಕಲಬುರಗಿ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದು, ಈ ಸಂಬಂಧ ಫೆ. 4ರಂದು ಸಿಎಂಗೆ ವರದಿ ಸಲ್ಲಿಸಲಿದೆ ಎಂದು ರಾಜ್ಯದ ಪ್ರವಾಹ ಪೀಡಿತ, ಬರಪೀಡಿತ ಪ್ರದೇಶಗಳ ಅಧ್ಯಯನ, ಪರಿಹಾರ,…

 • ಬರ ಪರಿಹಾರ ಕೈಗೊಳ್ಳುವಲ್ಲಿ ಸರ್ಕಾರ ವಿಫ‌ಲ

  ಸಂಡೂರು: ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ಸಮ್ಮಿಶ್ರ ಸರ್ಕಾರ ಈ ವರೆಗೂ ಯಾವುದೇ ಬರ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಸಾಲಮನ್ನಾ ಎಂದು ಹೇಳುತ್ತಾ ಸಾಗುತ್ತಿರುವ ಸರ್ಕಾರ ಇನ್ನು ಸಾಲಮನ್ನಾ ಮಾಡುತ್ತಿಲ್ಲ. ಗೋವುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ತೆರೆಯದೆ ಸಂಡೂರು…

 • ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಪರ್ವ ಶುರು

  ಕಲಬುರಗಿ: ಚುನಾವಣೆ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ನೀಡಲಾದ ಭರವಸೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ಬುಧವಾರ ಕಲಬುರಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಿ.ಕೆ. ಸಲಗರ, ಅಂಬಲಗಾ, ಅಪಚಂದ, ಜವಳಗಾ, ಮಡಕಿ,…

 • ಕುಡಿವ ನೀರು-ಮೇವು ಸಮಸ್ಯೆ ಬಗೆಹರಿಸಲು ಸದಸ್ಯರ ಒಕ್ಕೊರಲ ಆಗ್ರಹ

  ಇಂಡಿ: ಪಟ್ಟಣದ ತಾಪಂ ಸಭಾ ಭವನದಲ್ಲಿ ತಾಪಂ ಅಧ್ಯಕ್ಷ ಶೇಖರ ನಾಯಕ ಅಧ್ಯಕ್ಷತೆಯಲ್ಲಿ ಮಂಗಳವಾರ 11ನೇ ಸಾಮಾನ್ಯ ಸಭೆ ಜರುಗಿತು. ಸಭೆ ಆರಂಭವಾಗುತ್ತಿದ್ದಂತೆ ತಾಪಂ ಯೋಜನಾಧಿಕಾರಿ ವಿಠಲ ಹಳ್ಳಿಕರ ಹಿಂದಿನ ಸಭೆ ನಡಾವಳಿ ಓದಿದರು. ನಂತರ ಸಭೆಯಲ್ಲಿ ತಾಪಂ…

 • ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸಲಹೆ

  ಯಾದಗಿರಿ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ರೈತರು ತಮ್ಮ ಜಾನುವಾರುಗಳಿಗೆ ಸಂರಕ್ಷಣೆ ದೃಷ್ಟಿಯಿಂದ ತಪ್ಪದೇ ಕಾಲುಬಾಯಿ ರೋಗದ ವಿರುದ್ಧ ಲಸಿಕೆ ಹಾಕಿಸಿ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ಹೇಳಿದರು. ಸೋಮವಾರ ಪಶು ಆಸ್ಪತ್ರೆ ಆವರಣದಲ್ಲಿ ಇಲಾಖೆ ಹಮ್ಮಿಕೊಂಡಿದ್ದ…

 • ನೀರಿನ ಸಮಸ್ಯೆ ಎದುರಾಗದಿರಲಿ

  ಸುರಪುರ: ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿವ ನೀರಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಧರಣಿ, ರಸ್ತೆ…

 • ಮರಳು ಗುತ್ತಿಗೆ ರದ್ದತಿಗೆ ಆಗ್ರಹ

  ಚಿತ್ರದುರ್ಗ: ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಚಳ್ಳಕೆರೆ ತಾಲೂಕಿನ ವೇದಾವತಿ ನದಿ ದಡದ ತೊರೆಬೀರನಹಳ್ಳಿ, ಕಲಮರಹಳ್ಳಿ,…

 • ಕೃಷಿ ಯೋಗ್ಯ ಕಾಡು ಸಂಕುಲ

  ಮಲೇಶಿಯಾ, ಇಂಡೋನೇಶಿಯಾ, ದಕ್ಷಿಣ ಅಮೇರಿಕಾ ಮೂಲದ ಹಲವು ಸಸ್ಯಗಳು, ನರ್ಸರಿಗಳ ರಾಯಭಾರಿತ್ವದಲ್ಲಿ ಸಲೀಸಾಗಿ ತೋಟ ತಲುಪುತ್ತಿವೆ. ನಾವು ದುಪ್ಪಟ್ಟು ಹಣ ನೀಡಿ ಸಸ್ಯ ಖರೀದಿಸಿ ಕೃಷಿ, ಮಾರುಕಟ್ಟೆಯ ಅಂದಾಜಿಲ್ಲದೇ ಸೋಲುತ್ತೇವೆ. ನಮಗೆಲ್ಲ ನೆರೆಹೊರೆಯ ಅರಣ್ಯ ಸಸ್ಯಗಳ ಬಳಕೆ ಜ್ಞಾನ…

 • ಅಧಿವೇಶನದಲ್ಲಿ ‘ಬರ’ ಹೋರಾಟ

  ಚಿತ್ರದುರ್ಗ: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಫೆ.6 ರಿಂದ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ. ಜಿಲ್ಲೆಯ ವಿವಿಧೆಡೆ…

 • ಭದ್ರಾ ಯೋಜನೆ ಕಾಮಗಾರಿ ತ್ವರಿತಗೊಳ್ಳಲಿ

  ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ಜನತೆಗೆ ಕುಡಿಯುವ ನೀರು ಹಾಗೂ ರೈತರ ಹೊಲಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ…

 • ಜನತೆಗೆ ಬರ; ಅಧಿಕಾರಿಗಳಿಗೆ ಮಜಾ

  ಔರಾದ: ಬರ ಪೀಡಿತ ತಾಲೂಕಿನ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಇರಬೇಕು ಎನ್ನುವ ಸರ್ಕಾರದ ನಿಯಮ ಕೇವಲ ಸಭೆ ಸಮಾರಂಭಕ್ಕೆ ಹಾಗೂ ಕಚೇರಿ ಕಡತಗಳಿಗೆ ಸೀಮಿತವಾಗಿದೆ. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನ ರೈತರು ಹಾಗೂ…

 • ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಆಕ್ರೋಶ

  ಶಿವಮೊಗ್ಗ: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ನಾಯಕರ ವರ್ತನೆಯನ್ನು ಖಂಡಿಸಿ ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯವರು ಮಹಾವೀರ ಸರ್ಕಲ್‌ನಲ್ಲಿ ಮಾವನ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ…

 • ಉದ್ಯೋಗ ಖಾತ್ರಿಯಡಿ ಕೃಷಿ ಕಾರ್ಯ ಕೈಗೊಳ್ಳಿ

  ಕಲಬುರಗಿ: ಪ್ರಸಕ್ತವಾಗಿ ಬರಗಾಲ ಛಾಯೆ ವ್ಯಾಪಕವಾಗಿದ್ದರಿಂದ ಕಂಗಾಲಾಗಿರುವ ರೈತರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗ ಕಲ್ಪಿಸಿಕೊಡಲು ಕೃಷಿ ಇಲಾಖೆ, ಅರಣ್ಯ ಸೇರಿದಂತೆ ಇತರ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಕಾರ್ಯಾನುಷ್ಠಾನಕ್ಕೆ…

ಹೊಸ ಸೇರ್ಪಡೆ