CONNECT WITH US  

ಲಗ್ನ ಮಂಟಪದಲ್ಲಿ ಅಂದು
ಒಂದೂ ಮಾತನಾಡದೆ
ತಲೆ ತಗ್ಗಿಸಿ ನಿಂತಿದ್ದಳು ಬಾಲೆ,
ಮದುವೆ ಆದ ಮೇಲೆ
ತಿಳಿಯಿತು ಈಕೆ
ಬಾಲೆಯಲ್ಲ ಪಟಾಕಿ ಮಾಲೆ!

*ಎಚ್.ದುಂಡಿರಾಜ್...

ನಾವು ದಿನನಿತ್ಯ ಟಿ.ವಿ.ಗಳಲ್ಲಿ ನೋಡುವ ಜ್ಯೋತಿಷ್ಯ ಕಾರ್ಯಕ್ರಮವನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿರುವ ನಾಟಕ "ಪುಕ್ಕಟ ಸಲಹೆ'. ಶ್ರೀಶ್ರೀಶ್ರೀ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ಗಳು ನಾಡಿನ ವಿವಿಧ ಭಾಗಗಳಿಂದ...

ಬೆಂಗಳೂರು: ಜಗತ್ತಿನಲ್ಲಿರುವುದು ಯಾವುದೂ ನನ್ನದಲ್ಲ ಎಂಬ ಮನೋಭಾವ ಬೆಳೆಸಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಚುಟುಕು ಕವಿ ಡುಂಡಿರಾಜ್‌ ತಿಳಿಸಿದರು.

ಶಿವಮೊಗ್ಗ: ರಾಜಕೀಯ ಉದ್ದೇಶದಿಂದ ಬ್ರಾಹ್ಮಣ ಸಮಾಜವನ್ನು ಕೀಳು ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಸಮಾಜ ಬಾಂಧವರು ಇದಕ್ಕೆಲ್ಲ ಹೆದರುವ ಅವಶ್ಯಕತೆ ಇಲ್ಲ ಎಂದು ಅಸ್ಸಾಂ ಉತ್ಛನ್ಯಾಯಾಲಯದ ವಿಶ್ರಾಂತ...

ಈಶಾನ್ಯದ ತ್ರಿಪುರದಲ್ಲೂ
ಕಮಲದ ಕಮಾಲು
ಮರೆಯಾಯಿತು ಮಾಣಿಕ್ಯ
ಎಡದ ಭದ್ರಕೋಟೆ
ಕೆಡವಿದರು ಮೋದಿ,
ಅಮಿತ್‌ ಶಾ ಎಂಬ ಚಾಣಕ್ಯ !

*ಎಚ್.ದುಂಡಿರಾಜ್

ಹನಿಗವನ ಎಂದ ತಕ್ಷಣ ನೆನಪಾಗುವವರು ಡುಂಡಿರಾಜ್‌. ಅವರು ಸೃಷ್ಟಿಸುವ ಪನ್‌ಗೆ ಮರುಳಾಗದವರಿಲ್ಲ. ನಾಲ್ಕು ದಶಕಗಳಿಂದಲೂ ಕನ್ನಡಮ್ಮನಿಗೆ "ಹನಿ'ಸೇವೆ ಮಾಡುತ್ತಿರುವ ಅವರ ಚುಟುಕಗಳಲ್ಲಿ...

ನಡುಗುತ್ತಿದ್ದಾರೆ ಬಡವರು
ಚಳಿಗೆ ಗಡ ಗಡನೆ
ಇಲ್ಲ ಬೆಚ್ಚಗಿನ ಮನೆ.
ರಾಜಕಾರಣಿಗಳೂ
ನಡುಗುತ್ತಿದ್ದಾರೆ
ಕಾರಣ ಚುನಾವಣೆ!
 - ಎಚ್‌. ಡುಂಡಿರಾಜ್‌...

ಕಿರಣ ಪೆನ್ನು, ಬೆಳಕು ಇಂಕು
ಪ್ರತಿ ದಿನ ಹೊಸ ಕವನ
ರಚಿಸುತ್ತಾನೆ ಸೂರ್ಯ ,
ಚಂದ್ರನೂ ಇರುಳಲ್ಲಿ
ಕವಿತೆ ಬರೆಯುವನು
ಆದರೆ ಅದು ಕೃತಿ ಚೌರ್ಯ !
 - ಎಚ್‌....

ಹೋದವಳು ಹೋಗಲಿ
ಗೆಳೆಯ ಏಕೆ ಅಳುವೆ?
ಬಂದಿಹಳು ನೋಡಿಲ್ಲಿ
ಹದಿನೆಂಟರ ಚೆಲುವೆ
ನಗುನಗುತ್ತ ನಿಂದಿಹಳು
ಧರಿಸಿ ಹೊಸ ಅರಿವೆ!
     - ಎಚ್‌. ಡುಂಡಿರಾಜ್‌...

ಕಮಲ ಬಿರಿಯಿತು
ಹಸ್ತ ಮುರಿಯಿತು
ಎರಡೂ ರಾಜ್ಯಗಳಲ್ಲೂ,
ಆದರೂ ಸೋಲೋ
ಕಾಂಗ್ರೆಸ್‌ ಮಾತಾ ಕೀ ಜೈ
ಅಂದರಂತೆ ರಾಹುಲ್ಲು!
     - ಎಚ್‌. ಡುಂಡಿರಾಜ್‌

ಕೊಳ್ಳುವುದೂ ಬೇಡ
ಕೀಳುವುದೂ ಬೇಡ
ಉಚಿತವಾಗಿ ಬರುತ್ತದೆ
ಪ್ರತಿ ದಿನವೂ ಬೆಳಿಗ್ಗೆ
ತರತರದ ಗುಲಾಬಿ, ಮಲ್ಲಿಗೆ
ಡೇಲಿಯಾ , ಸೇವಂತಿಗೆ
ನನ್ನ ಮೊಬೈಲಿಗೆ !
...

ರಾತ್ರಿ ಹೊತ್ತು ನಾವೆಲ್ಲರೂ
ನಿದ್ರಿಸುತ್ತಿರುವಾಗ ದೇಶ ಬಿಟ್ಟು
ಹೋಗುತ್ತದೆ ಕಳ್ಳರ ಹಾಗೆ
ನೂರಾರು ಪ್ರತಿಭಾವಂತ
ಯುವಜನರನ್ನು ಹೊತ್ತ
ವಿಮಾನ ಅಮೆರಿಕದ ಕಡೆಗೆ !
...

ದಾಂಪತ್ಯವೆಂದರೆ
ಬಸ್ಸಲ್ಲ, ರೈಲಲ್ಲ
ಇಬ್ಬರೇ ಪಯಣಿಸುವ
ಬೈಸಿಕಲ್ಲು
ಪ್ರೀತಿಯ ಪತ್ನಿಯನ್ನು
ಹಿಂದೆ ಕೂರಿಸಿಕೊಂಡು
ಅವಳಿಂದ ಆಗಾಗ ಬೈಸಿಕೊಳ್ಳು !
     -...

ಪರ್ಸು ಖಾಲಿ ಇದ್ದರೂ
ಕಾರ್ಡಿನಲ್ಲಿ ಹಣ ಇದ್ದರೆ
ಮಾಡಬಹುದು
ವ್ಯವಹಾರ ಕ್ಯಾಶ್‌ ಲೆಸ್ಸು.
ಪರ್ಸು, ಖಾತೆ, ಕಾರ್ಡು
ಯಾವುದರಲ್ಲೂ ಇಲ್ಲದಿದ್ದರೆ
ಯೂಸ್‌ ಲೆಸ್ಸು!
...

ವಾರಾಂತ್ಯದಲ್ಲಿ ನಾವಿಬ್ಬರೆ
ಪ್ರವಾಸ ಹೋಗೋಣವೆಂದರೆ
ಬೇಡ, ಈಗ ಮಳೆಗಾಲ
ಅನ್ನುವನಲ್ಲ ಈ ನಲ್ಲ
ಅಯ್ಯೋ ದೇವರೇ
ಪ್ರೀತಿಯೂ ಸೀಸನಲ್ಲಾ ?
-ಎಚ್‌.ಡುಂಡಿರಾಜ್‌...

ನಾಯಕರ ತಪ್ಪಿಲ್ಲ
ದಿನದಿಂದ ದಿನಕ್ಕೆ
ಏರುತ್ತಲೇ ಇರುತ್ತದೆ ಆಸ್ತಿ
ವಿವರ ಸಲ್ಲಿಸಲು
ಕೊಡುವ ಅವಧಿಯನ್ನೂ
ಮಾಡುತ್ತಿರಬೇಕು ಜಾಸ್ತಿ!
- ಎಚ್‌. ಡುಂಡಿರಾಜ್‌...

ಮಡದಿ ಖುಷಿಯಾಗಿದ್ದರೆ
ನಗೆಯ ಬೆಳದಿಂಗಳು
ಸಂತಸದ ವಾತಾವರಣ.
ಮುನಿಸಿಕೊಂಡರೆ ಅವಳು
ಮುಸುಕೆಳೆದು ಮಲಗುವಳು
ಉಪವಾಸ , ಚಂದ್ರಗ್ರಹಣ !
 -ಎಚ್‌.ಡುಂಡಿರಾಜ್‌ 

ಮೋದಿ ಹೇಳಿದ್ದಾರೆ
ನನ್ನ ಯಶಸ್ಸಿನ ಗುಟ್ಟು
ಯೋಗ
ಅವರ ಭಕ್ತರ ಪ್ರಕಾರ
ಮೋದಿ ಪ್ರಧಾನಿ ಆದದ್ದು
ನಮ್ಮ ಸುಯೋಗ !
  - ಎಚ್‌. ಡುಂಡಿರಾಜ್‌

ಕಾಂಗ್ರೆಸ್‌ ಸಂಸದರು
ಕಾಗದ ಎಸೆದರು
ಸ್ಪೀಕರ್‌ ಸುಮಿತ್ರಾರ ಮೇಲೆ
ಅದರಿಂದ ಅವರಿಗೆ
ನೋವಾಯಿತಂತೆ
ಕುಸುಮ ಕೋಮಲೆ!
    - ಎಚ್‌. ಡುಂಡಿರಾಜ್‌

ತುಂಬಾ ಸ್ವಾರಸ್ಯಕರ
ಈ ಬಾರಿಯ
ಅಧ್ಯಕ್ಷ ಚುನಾವಣೆ
ಎನ್‌ ಡಿ ಎ ತಂಡದಿಂದ
ರಾಮನಾಥ ಕೋವಿಂದ
ರಾಮ ನಾಮ ಸಂಕೀರ್ತನೆ
ಯು ಪಿ ಎ ಗುಂಪಿನಿಂದ
ಮೀರಾ ಭಜನೆ !
...

Back to Top