Indian Army

 • ಕಾಶ್ಮೀರದಲ್ಲಿ ತಲೆನೋವಾದ ಬೆಡ್‌ರೂಂ ಉಗ್ರರು!

  ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡು ತ್ತಿರುವ ಉಗ್ರರನ್ನು ಭದ್ರತಾ ಪಡೆಗಳು ಹುಡುಕಿ ಹುಡುಕಿ ಹೊಸಕಿ ಹಾಕುತ್ತಿರುವಂತೆಯೇ, ಇದೀಗ ಬೆಡ್‌ರೂಂನಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ!  ಬೆಡ್‌ರೂಂ ಉಗ್ರರು ಅರ್ಥಾತ್‌, ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಮೂಲಕ  ಕಾಶ್ಮೀರದ ಯುವಕರನ್ನು…

 • ಕದನ ವಿರಾಮ ಉಲ್ಲಂಘನೆ; ಭಾರತೀಯ ಸೇನಾಪಡೆ ದಾಳಿಗೆ 5 ಪಾಕ್ ಸೈನಿಕರು ಬಲಿ

  ಶ್ರೀನಗರ್:ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಹಾಗೂ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನಿ ಪಡೆಯ ವಿರುದ್ಧ ಗುರುವಾರ ಭಾರತೀಯ ಸೇನಾ ಪಡೆ ನಡೆಸಿದ್ದ ಪ್ರತಿ ದಾಳಿಗೆ 5 ಪಾಕ್…

 • ಕಲ್ಲು ಹೊಡೆದರೆ ಸುಮ್ಮನಿರಬೇಕಾ?: ಜ| ಬಿಪಿನ್‌ ರಾವತ್‌ ಪ್ರಶ್ನೆ

  ಹೊಸದಿಲ್ಲಿ: ‘ಜನ ಕಲ್ಲು ತೂರುತ್ತಾರೆ, ಜನ ನಮ್ಮ ಕಡೆ ಪೆಟ್ರೋಲ್‌ ಬಾಂಬ್‌ ಎಸೆಯುತ್ತಾರೆ. ಒಂದು ವೇಳೆ ನಮ್ಮವರು ಏನು ಮಾಡುವುದು ಎಂದು ಕೇಳಿದರೆ, ನಾನು ಅವರಿಗೆ ಸುಮ್ಮನೆ ನಿಂತು ಕೊಂಡು ಹಾಗೆಯೇ ಸತ್ತುಬಿಡಿ ಎಂದು ಹೇಳಲೇ? ನೀವು ಸತ್ತ…

 • ಸೇನೆಯ ಭಾರೀ ಕಾರ್ಯಾಚರಣೆ: ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

  ಶ್ರೀನಗರ: ಸೇನಾ ಪಡೆ ರಾಮ್‌ ಪುರ್‌ ಸೆಕ್ಟರ್‌ನಲ್ಲಿ  ಶನಿವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ  ಗಡಿ ನುಸುಳುತ್ತಿದ್ದ ಕನಿಷ್ಠ ನಾಲ್ವರು ಉಗ್ರರನ್ನು ಹತ್ಯೆಗೈದಿವೆ. ಇನ್ನೂ ಕೆಲ ಉಗ್ರರು ಇರುವ ಹಿನ್ನಲೆಯಲ್ಲಿ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ.  ಇದೇ ವೇಳೆ ಜಮ್ಮುವಿನ ಸೈಮು…

 • ಭಾರತೀಯ ಸೈನಿಕರ ಶಿರಚ್ಛೇದಕ್ಕೆ ಸೇಡು ತೀರಿಸಿಕೊಂಡ ಸೇನೆ

  ಕಾಶ್ಮೀರ: ನಿಯಂತ್ರಣ ರೇಖೆಯಲ್ಲಿ ಕಳೆದ ತಿಂಗಳು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ್ದ ಪಾಕಿಸ್ತಾನದ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌)ನ ಒಳನುಸುಳುವಿಕೆ ಸಂಚನ್ನು ಸೇನೆ ವಿಫ‌ಲಗೊಳಿಸಿದ್ದು, ಇಬ್ಬರು ಉಗ್ರರನ್ನು ಗುಂಡಿಟ್ಟು ಹತ್ಯೆಗೈದಿದೆ. ಈ ಮೂಲಕ ಭಾರತೀಯ ಸೈನಿಕರ ದಾರುಣ ಹತ್ಯೆಗೆ…

 • ಪಾಕ್ ಪಡೆಯ ದಾಳಿ ಯತ್ನ ವಿಫಲ; ಭಾರತೀಯ ಸೇನೆಯಿಂದ ಇಬ್ಬರ ಹತ್ಯೆ

  ಜಮ್ಮು- ಕಾಶ್ಮೀರ:ಇತ್ತೀಚೆಗಷ್ಟೇ ಗಡಿಭಾಗದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನಾ ಪಡೆ ಶುಕ್ರವಾರ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದೆ. ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನ ಗಡಿಯಲ್ಲಿ ಪಾಕಿಸ್ತಾನ್ ಗಡಿ ಕಾವಲು ಪಡೆ ಬೆಂಬಲಿತ ಇಬ್ಬರು ಉಗ್ರರನ್ನು ಭಾರತದ ಸೇನಾ ಪಡೆ…

 • ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ

  ಹೊಸದಿಲ್ಲಿ: ಗಡಿಯಲ್ಲಿ ಉಗ್ರರ ನುಸುಳುವಿಕೆಗೆ ನಿರಂತರ ಬೆಂಬಲ ನೀಡುತ್ತಿರುವ ಪಾಕ್‌ ಸೇನೆಗೆ ಪಾಠವೆಂಬಂತೆ ಭಾರತೀಯ ಭೂಸೇನೆ ದಂಡನಾತ್ಮಕ ದಾಳಿ ನಡೆಸಿದೆ. ಉಗ್ರರಿಗೆ ಬೆಂಗಾವಲಾಗಿರುವ ಪಾಕ್‌ ಸೇನಾ ಬಂಕರ್‌ಗಳನ್ನು ಇತ್ತೀಚೆಗೆ ಧ್ವಂಸಗೊಳಿಸಿ ರುವುದಾಗಿ ಸೇನೆ ಹೇಳಿದೆ. ಈ ಕುರಿತ ವಿಡಿಯೋವನ್ನು ಸೇನೆ ಬಹಿರಂಗಗೊಳಿಸು…

 • ಧ್ವಂಸ ಮಾಡಿದ್ದೇವೆ ಅಂತ ಬಡಾಯಿ ಕೊಚ್ಚಿಕೊಳ್ಬೇಡಿ; ಭಾರತಕ್ಕೆ ಪಾಕ್!

  ಇಸ್ಲಾಮಾಬಾದ್:ಗಡಿಭಾಗದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಭಾರತೀಯ ಸೇನಾ ಪಡೆ ಧ್ವಂಸಗೊಳಿಸಿರುವುದಾಗಿ ತಿಳಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಭಾರತೀಯ ಸೇನೆ ನಮ್ಮ ನೆಲೆ ಮೇಲೆ ದಾಳಿ ನಡೆಸಿಲ್ಲ. ಹಾಗಾಗಿ ಈ ವಿಚಾರದಲ್ಲಿ ಸುಮ್ಮನೆ ಜಂಬ ಕೊಚ್ಚಿಕೊಳ್ಳುವುದು ಬೇಡ ಎಂದು…

 • ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತ್ಯೆ

  ಶ್ರೀನಗರ: ಗಡಿಯೊಳಗೆ ಉಗ್ರರನ್ನು ಬಗ್ಗು ಬಡಿವಲ್ಲಿ ಭದ್ರತಾ ಪಡೆಗಳು ನಿರತವಾಗಿದ್ದರೆ, ಅತ್ತ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್‌ ಅಪ್ರಚೋದಿತ ಶೆಲ್‌ ದಾಳಿ ಮುಂದುವರೆದಿದೆ. ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದಿವೆ. ಇದೇ ವೇಳೆ ರಜೌರಿಯ…

 • ಭಾರತದ ತಿರುಗೇಟು; 60 ಸೆಕೆಂಡ್ಸ್ ನಲ್ಲಿ ಪಾಕ್ ಬಂಕರ್ ಉಡೀಸ್! watch

  ನವದೆಹಲಿ: ಕಳೆದ ವಾರ ಭಾರತದ ಇಬ್ಬರು ಸೈನಿಕರನ್ನು ಹತ್ಯೆಗೈದು ದೇಹವನ್ನು ವಿರೂಪಗೊಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಎಂಬಂತೆ  ಪಾಕಿಸ್ತಾನದ ಗಡಿಭಾಗದಲ್ಲಿದ್ದ 2 ಬಂಕರ್ ಗಳನ್ನು ಮಿಸೈಲ್ ದಾಳಿ ನಡೆಸಿ ಭಾರತೀಯ ಮಿಲಿಟರಿ ಪಡೆ ಚಿಂದಿ ಉಡಾಯಿಸಿರುವ ಘಟನೆ ಸೋಮವಾರ…

 • ಗಡಿ ನುಸುಳಿ ಇಬ್ಬರು ಯೋಧರ ಶಿರಚ್ಛೇದನ; ಪಾಕ್‌ ಪಾಶವೀ ಕೃತ್ಯ

  ಜಮ್ಮು/ಶ್ರೀನಗರ: ಗಡಿಯಲ್ಲಿ ಒಳ ನುಸುಳಿ ಅತ್ಯಂತ ಪೈಶಾಚಿಕ ಕೃತ್ಯವೆಸಗಿರುವ ಪಾಕಿಸ್ಥಾನವು ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ಅವರ ಶಿರಚ್ಛೇದಿಸಿ ಅಂಗಾಂಗಗಳನ್ನು ಛಿದ್ರಗೊಳಿಸಿದ ಆಘಾತಕಾರಿ ಘಟನೆ ಸೋಮವಾರ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ…

 • ಕುಪ್ವಾರದಲ್ಲಿ ಉರಿ ಮಾದರಿ ದಾಳಿ ಮೂವರು ಹುತಾತ್ಮ, ವ್ಯಕ್ತಿ ಸಾವು

  ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿ 85 ಮಂದಿ ಅಸುನೀಗಿದ್ದರು. ಅದೇ ಮಾದರಿಯ ದಾಳಿಯನ್ನು ಕಣಿವೆ ರಾಜ್ಯದ ಕುಪ್ವಾರದಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದಾರೆ. ಈ…

 • ಕಾಶ್ಮೀರದ ಮಾನಸಿಕ ಸಮರ

  ಕಾಶ್ಮೀರದ ಸ್ವಾಯತ್ತೆಯನ್ನು ಬೆಂಬಲಿಸುವುದಾಗಿ ಹೇಳುತ್ತ ಪಾಕಿಸ್ಥಾನ ನಡೆಸುತ್ತಿರುವುದು ಶುದ್ಧ ನಯವಂಚನೆ. ಅದರ ಹೆದರಿಕೆಯೆಂದರೆ, ಚೀನ ಮತ್ತು ಕಾಶ್ಮೀರದಲ್ಲಿ ಹುಟ್ಟಿ ಪಾಕಿ ಸ್ಥಾನದಲ್ಲಿ ಹರಿಯುವ ಸಿಂಧೂ, ಬೀಸ್‌, ಝೀಲಂ, ರಾವಿ ಮತ್ತು ಚಿನಾಬ್‌ ನದಿಗಳು. ಪಾಕಿಸ್ಥಾನದ ಅರ್ಥವ್ಯವಸ್ಥೆ ಬದುಕಿರುವುದೇ ಈ…

 • ಸೇನಾ ನೇಮಕಾತಿ: ಕರಾವಳಿಯಲ್ಲಿ ಉತ್ತಮ ಸ್ಪಂದನೆ 

  ಮಂಗಳೂರು/ಉಡುಪಿ: ಭಾರತೀಯ ಸೇನೆ ಸೇರಲು ದ.ಕ., ಉಡುಪಿ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಈ ವರ್ಷ ಇದುವರೆಗೆ ಕ್ರಮವಾಗಿ 275 ಮತ್ತು 110 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರತೀ ವರ್ಷ ರಾಜ್ಯದ ವಿವಿಧೆಡೆ…

 • ಜೀಪ್‌ಗೆ ಕಟ್ಟಿ ಶಿಕ್ಷೆ ನೀಡಿದ ಭದ್ರತಾ ಪಡೆ; ಕಾಶ್ಮೀರದ Viral Video

  ಶ್ರೀನಗರ: ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಹಿಂಸಾಚಾರ ವರದಿಯಾಗಿದ್ದು, ಈ ವೇಳೆ ಭದ್ರತಾ ಸಿಬಂದಿಗಳು ವ್ಯಕ್ತಿಯೊಬ್ಬನನ್ನು ಜೀಪ್‌ನ ಬಾನೆಟ್‌ಗೆ ಕಟ್ಟಿ ಶಿಕ್ಷಿಸಿರುವ ವಿಡಿಯೋ ವೊಂದು ವೈರಲ್‌ ಆಗಿದ್ದು , ಸೇನೆಯ ಈ ಕ್ರಮದ ಕುರಿತಾಗಿ ವ್ಯಾಪಕ ಟೀಕೆಗಳು…

 • 10 ಸಾವಿರ ಸಹಾಯಕ ಹುದ್ದೆ ಕಡಿತಕ್ಕೆ ನಿರ್ಧಾರ

  ಹೊಸದಿಲ್ಲಿ: “ಸಹಾಯಕ್‌’ ಹುದ್ದೆಗೆ ಭರ್ಜರಿ ಕತ್ತರಿ ಹಾಕಲು ಭಾರತೀಯ ಸೇನೆ ನಿರ್ಧರಿಸಿದೆ. ಪ್ರಸ್ತುತ ಸೇನೆಯಲ್ಲಿ 40 ಸಾವಿರ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪ್ರಮಾಣವನ್ನು ಶೇ.25ರಷ್ಟು ಅಂದರೆ 10 ಸಾವಿರ ಹುದ್ದೆಗಳನ್ನು  ಕಡಿತಗೊಳಿಸಲು ರಕ್ಷಣಾ ಇಲಾಖೆಯ ನಿರ್ದೇಶನ ಬಂದಿದೆ….

 • ‘ಆರ್ಡರ್ಲಿ’ ಧ್ವನಿಯೆತ್ತಿದ್ದ ಯೋಧ ಶವವಾಗಿ ಪತ್ತೆ

  ಮುಂಬಯಿ: ಸೇನಾಪಡೆಯ ಸಹಾಯಕ್‌ (ಆರ್ಡರ್ಲಿ) ವಿರುದ್ಧ ಧ್ವನಿಯೆತ್ತಿದ್ದ 33 ವರ್ಷದ ಯೋಧ ರಾಯ್‌ ಮ್ಯಾಥ್ಯೂ ಅವರ ಮೃತದೇಹ ಇಲ್ಲಿನ ಡಿಯೋಲಾಲಿ ಸೇನಾ ಶಿಬಿರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದುಬಂದಿಲ್ಲ. ನ್ಯೂಸ್‌ ವೆಬ್‌ಸೈಟ್‌ ಒಂದರ…

 • ಹಿ.ಪ್ರದೇಶದಲ್ಲಿ ಹಿಮಕುಸಿತ: ರಾಜ್ಯದ ಸೇನಾಧಿಕಾರಿ ಸಾವು

  ಬಸವನಬಾಗೇವಾಡಿ: ಹಿಮಕುಸಿತದ ಪರಿಣಾಮ ಹಿಮಾಚಲ ಪ್ರದೇಶದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಕರ್ನಾಟಕದ ಸೇನಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ವಿಠ್ಠಲ ಬೋರಗಿ (52) ಮೃತರಾದವರು. ವಿಠ್ಠಲ ಬೋರಗಿ ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದು, ಎರಡು…

 • ಸೇನೆ ಸೇರಲು ಕನ್ನಡಿಗರಿಗೆ ತರಬೇತಿ

  ಬೆಂಗಳೂರು: ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಅಗತ್ಯ ತರಬೇತಿ ನೀಡುವ ಯೋಜನೆಯೊಂದು ಸಿದ್ಧಗೊಂಡಿದೆ. ಬೆಳಗಾವಿ ಮತ್ತು ಮಡಿಕೇರಿ ಸೈನಿಕ ತರಬೇತಿ ಸಂಸ್ಥೆ ಎರಡು ತಿಂಗಳ ಕಾಲ ಊಟ ಮತ್ತು ವಸತಿ…

ಹೊಸ ಸೇರ್ಪಡೆ