jodupala

 • ಡಿಸೆಂಬರ್‌ ಅಂತ್ಯಕ್ಕೆ ಪರಿಹಾರ ಕೇಂದ್ರ ತೆರವು 

  ಅರಂತೋಡು: ಆಗಸ್ಟ್‌ ತಿಂಗಳ ಮಹಾಮಳೆಯಿಂದ ನಿರಾಶ್ರಿತರಾದವರಿಗಾಗಿ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳನ್ನು ಈ ತಿಂಗಳ ಕೊನೆಗೆ ಮುಚ್ಚಲಾಗುವುದು ಎಂದು ಕೊಡಗು ಜಿಲ್ಲಾಡಳಿತ ಸಂತ್ರಸ್ತರಿಗೆ ಸೂಚನೆ ನೀಡಿದೆ. ಶಾಶ್ವತ ಪುನರ್ವಸತಿ ಇನ್ನೂ ಒದಗದೆ ನಿರಾಶ್ರಿತರು ಮತ್ತೆ ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ. ಕಲ್ಲುಗುಂಡಿ…

 • ಜೋಡುಪಾಲ ನಿರಾಶ್ರಿತರ ಬಸ್‌ ಪಾಸ್‌ ನವೀಕರಣ

  ಅರಂತೋಡು: ಜೋಡುಪಾಲ ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾಗಿ ಸಂಪಾಜೆ ಮತ್ತು ಕಲ್ಲುಗುಂಡಿ  ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ನೀಡಿದ್ದ ಕೆಎಸ್ಸಾರ್ಟಿಸಿ ಬಸ್‌ ಪಾಸನ್ನು 15 ದಿವಸಗಳ ಬಳಿಕ ನವೀಕರಿಸಲಾಗಿದೆ. ಎರಡು ತಿಂಗಳ ಹಿಂದೆ ಸಚಿವ ಯು.ಟಿ. ಖಾದರ್‌ ನಿರಾಶ್ರಿತರ ಶಿಬಿರಕ್ಕೆ…

 • ಬಸ್‌ ಪಾಸ್‌ ರದ್ದು , ಹಣವಿಲ್ಲ , ಕೆಲಸಕ್ಕೂ ಬರ

  ಅರಂತೋಡು: ಜೋಡುಪಾಲ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ತುಂಬುತ್ತಿದ್ದರೂ ನಿರಾಶ್ರಿತರ ಸಂಕಷ್ಟ ದೂರವಾಗಿಲ್ಲ. ಅವರ ಪುನರ್ವಸತಿ ಸಹಿತ ಮೂಲ ಸೌಕರ್ಯ ಗಳಿಗೆ ಸರಕಾರ ಅಧಿಕೃತವಾಗಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಪರಿಹಾರ ಕೇಂದ್ರಗಳಲ್ಲಿ ವಾಸವಿದ್ದ ಕೆಲವರು ಗುಳೆ ಹೊರಟಿದ್ದರೆ…

 • ಚದುರಿ ಹೋದ ಊರಲ್ಲಿ  ಹೊಸ ಬದುಕು ಅರಳುತ್ತಿದೆ! 

  ಸುಳ್ಯ: ಭರದಿಂದ ಸಾಗುತ್ತಿರುವ ಹೆದ್ದಾರಿ ದುರಸ್ತಿ ಕಾಮಗಾರಿ, ಎರಡು ತಿಂಗಳಿನಿಂದ ಮುಚ್ಚಿದ್ದ ಅಂಗಡಿ, ಹೊಟೇಲ್‌ಗ‌ಳಲ್ಲಿ ಮತ್ತೆ ವ್ಯಾಪಾರ ಆರಂಭ, ದುರಂತ ಸ್ಥಳದಲ್ಲಿ ಬಿರುಸುಗೊಂಡ ಜನ-ವಾಹನ ಓಡಾಟ.. ಇದು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ್ದ ಸಂಪಾಜೆ-ಮಡಿಕೇರಿ ಹೆದ್ದಾರಿಯ ಬದಿಯ ಪ್ರಸ್ತುತ…

 • “ಕಲ್ಲು’ಮಯ ಕೊಯ್ನಾಡು ಹೊಳೆ: ಹರಳಿಗಾಗಿ ನಡೆದಿದೆ ಹುಡುಕಾಟ!

  ಸುಳ್ಯ: ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯ ಸಂದರ್ಭ ಉಕ್ಕೇರಿದ್ದ ಜೋಡುಪಾಲ ಸನಿಹದ ಕೊಯ್ನಾಡು ಹೊಳೆಯಲ್ಲಿ ಈಗ ಬೆಲೆ ಬಾಳುವ ಹರಳಿಗಾಗಿ ಹುಡುಕಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹೊಳೆಯಲ್ಲಿ ತುಂಬಿರುವ ಸಣ್ಣ ಗಾತ್ರದ ಬಗೆಬಗೆಯ ಕಲ್ಲುಗಳ ರಾಶಿ….

 • ಜೋಡುಪಾಲ ಸಂತ್ರಸ್ತರಿಗೆ ಮಾದರಿ ಮನೆ: ಖಾದರ್‌

  ಅರಂತೋಡು: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಿರಾಶ್ರಿತರಾಗಿರುವ ಜೋಡುಪಾಲ, ಮೊಣ್ಣಂಗೇರಿಯ ಸಂತ್ರಸ್ತರಿಗೆ ಗೃಹ ಮಂಡಳಿಯಿಂದ ಮಾದರಿ ಮನೆ ನಿರ್ಮಾಣ ನಡೆಯುತ್ತಿದ್ದು. 10 ದಿನಗಳಲ್ಲಿ ಮಡಿಕೇರಿಯ ಎರಡು ಕಡೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು. ಕಲ್ಲುಗುಂಡಿ,…

 • ಜೋಡುಪಾಲದಲ್ಲಿ ಮಾನವ ಅಸ್ಥಿಪಂಜರ ಪತ್ತೆ

  ಮಡಿಕೇರಿ: ಭೂ ಕುಸಿತ ಮತ್ತು ಜಲ ಪ್ರಳಯಕ್ಕೆ ತುತ್ತಾಗಿದ್ದ ಜೋಡುಪಾಲದ ಬಳಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಆಗಸ್ಟ್‌ 16ರಂದು ಭೂ ಕುಸಿತ ಮತ್ತು ನದಿ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಮಂಜುಳಾ (15) ಅವರ ಕಳೇಬರ ಇದಾಗಿರಬಹುದೆಂದು ಶಂಕಿಸಲಾಗಿದೆ. ಆದರೆ…

 • ಸೌಲಭ್ಯ ದುರ್ಬಳಕೆಯಾಗದಂತೆ ನಿಗಾ

  ಸುಳ್ಯ: ಒಂದೇ ಕುಟುಂಬದವರು ಎರಡು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಕಾರಣ ಪ್ರಕೃತಿ ವಿಕೋಪ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಸವಲತ್ತುಗಳ ದುರ್ಬಳಕೆ ಆಗದಂತೆ ಕೇಂದ್ರದ ಉಸ್ತುವಾರಿಗಳು ಎಚ್ಚರಿಕೆ ವಹಿಸಿದ್ದಾರೆ. ದ.ಕ. ಮತ್ತು ಕೊಡಗು…

 • ಮಂಜುಳಾಗೆ ಹುಡುಕಾಡುತ್ತಿದೆ ಹೆತ್ತ ಕರುಳು

  ಸುಳ್ಯ: ಅಪ್ಪ-ಅಮ್ಮನ ಒಬ್ಬಳೇ ಮಗಳಾಕೆ, ಮೂವರು ಸಹೋದರರಿಗೆ ಮುದ್ದಿನ ತಂಗಿ. ಕೂಲಿ ಕೆಲಸ ಮಾಡಿ ಮಗಳಿಗೆ ಶಿಕ್ಷಣ ನೀಡಬೇಕೆಂಬ ಹಂಬಲವಿದ್ದ ಕುಟುಂಬ. ಈಗ ಅವಳೇ ಇಲ್ಲ. 12 ದಿನಗಳಿಂದ ಜೋಡುಪಾಲದ ಬೆಟ್ಟ, ನದಿ, ರಸ್ತೆಯಿಡೀ ಆಕೆಗಾಗಿ ಹುಡುಕಾಡುತ್ತಿದ್ದಾರೆ. ಇದು…

 • ಊರೊಂದು ಜೋಡುಪಾಲ; ಮನೆ ಮಂದಿ ಮೂರು ಪಾಲು!

  ಸುಳ್ಯ: ಪಾಕೃತಿಕ ಅವಘಡಕ್ಕೆ ಈಡಾಗಿರುವ ಜೋಡುಪಾಲದಲ್ಲಿ ಈಗ ಸೂಜಿ ಮೊನೆ ಬಿದ್ದರೂ ಕೇಳುವಷ್ಟು ನೀರವ. ಪ್ರಕೃತಿಯ ಮಡಿಲಿನಲ್ಲಿ ಮುಚ್ಚಟೆಯಾಗಿ ಮಲಗಿದ್ದ ಊರು ಅದೇ ಪ್ರಕೃತಿಯ ರೌದ್ರ ನರ್ತನಕ್ಕೆ ಸಿಲುಕಿ ಮೂರು ಪಾಲಾಗಿದೆ. ಮದೆ ಗ್ರಾಮದ ಊರು ಜೋಡುಪಾಲ. 200…

 • ಮಂಜುಳಾ ಪತ್ತೆಗೆ ಶೋಧ:ಗೌರಮ್ಮ ಅಂತ್ಯಕ್ರಿಯೆ

  ಸುಳ್ಯ: ಅರಂತೋಡು, ಕಲ್ಲುಗುಂಡಿ, ಸಂಪಾಜೆ ಪರಿಹಾರ ಕೇಂದ್ರದಲ್ಲಿನ 20ಕ್ಕೂ ಅಧಿಕ ಕುಟುಂಬಗಳು ಶನಿವಾರ ಮನೆಗೆ ಮರಳಿವೆ. ದುರಂತ ಸಂಭವಿಸಿದ ಜೋಡುಪಾಲ ಪ್ರದೇಶದ ಎರಡು ಕುಟುಂಬಗಳು ತೆರಳಿವೆ. ಈ ಮೂಲಕ 120ಕ್ಕೂ ಅಧಿಕ ಕುಟುಂಬಗಳು ಮನೆಗೆ ಮರಳಿದಂತಾಗಿದೆ. ಸಂತ್ರಸ್ತರ ಪರಿಹಾರ…

 • ಜೋಡುಪಾಲ ಸನಿಹದ 5 ಗ್ರಾಮಗಳಲ್ಲಿ ಬೆಳಕಿಲ್ಲ

  ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಗೆ ಸನಿಹದಲ್ಲಿರುವ ಕೊಡಗಿನ ಐದು ಗ್ರಾಮಗಳು ವಾರದಿಂದ ಕತ್ತಲಲ್ಲಿ ಮುಳುಗಿವೆ. ಇವು ಬೆಳಕು ಕಾಣುವ ಲಕ್ಷಣ ಸದ್ಯಕ್ಕಂತೂ ಇಲ್ಲ. ಇಲ್ಲಿನ ಬಹುತೇಕ ಕುಟುಂಬಗಳು ಪರಿಹಾರ ಕೇಂದ್ರ ಸೇರಿವೆ. ಜೋಡುಪಾಲದ ಶೇ.95ರಷ್ಟು ಮನೆಗಳಲ್ಲಿ ಜನವಾಸವಿಲ್ಲ. ಉಳಿದ…

 • ಜೋಡುಪಾಲ ದುರಂತ: ನಾಪತ್ತೆಯಾಗಿದ್ದ ಗೌರಮ್ಮ ಶವ ಪತ್ತೆ

  ಸುಳ್ಯ : ಜೋಡುಪಾಲ ದುರಂತದಲ್ಲಿ ಕಣ್ಮರೆಯಾಗಿದ್ದ ಇಬ್ಬರ ಪೈಕಿ ಬಸಪ್ಪ ಅವರ ಪತ್ನಿ ಗೌರಮ್ಮ (52) ಅವರ ಮೃತದೇಹ ಜೋಡುಪಾಲ ಬಳಿಯ ಜಲಪಾತವೊಂದರ ಕೆಳಭಾಗದಲ್ಲಿರುವ ಸೇತುವೆ ಬಳಿ ಶುಕ್ರವಾರ ಸಂಜೆ ಪತ್ತೆಯಾಗಿದೆ. ದುರಂತ ನಡೆದ ಒಂದು ಕಿ.ಮೀ. ದೂರದಲ್ಲಿರುವ ಸೇತುವೆ…

 • ಜೋಡುಪಾಲ : ಸಂತ್ರಸ್ತರ ರಕ್ಷಣೆ, ಶೋಧ ಮುಂದುವರಿಕೆ 

  ಅರಂತೋಡು: ಸಂಪಾಜೆ-ಮಡಿಕೇರಿ ರಾಜ್ಯ ಹೆದ್ದಾರಿ ಬಳಿಯ ಜೋಡುಪಾಲ ಪರಿಸರದಲ್ಲಿ ಮಳೆ ಹಾಗೂ ನೆರೆ ಇಳಿಮುಖವಾಗಿದ್ದರೂ ಗುಡ್ಡ ಕುಸಿತ ಇನ್ನೂ ಅವ್ಯಾಹತವಾಗಿದೆ. ಗುಡ್ಡ ಕುಸಿತದಿಂದ ಸಂತ್ರಸ್ತರಾದವರ ರಕ್ಷಣೆ ಹಾಗೂ ಸ್ಥಳಾಂತರ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನಾಪ ತ್ತೆಯಾಗಿರುವ ಗೌರಮ್ಮ ಹಾಗೂ ಮಂಜುಳಾ…

 • ಜೋಡುಪಾಲದಿಂದ ರಕ್ಷಣೆಗೆ ಇದ್ದ ಏಕೈಕ ಹಾದಿ ಜೋಡಿ ಪಾಲ!

  ಸುಳ್ಯ: ಜೋಡುಪಾಲದಲ್ಲಿ ರಕ್ಷಣೆಗೆ ಇದ್ದ ಏಕೈಕ ಮಾರ್ಗ ಜೋಡಿ ಪಾಲ (ಅಡಿಕೆ ಮರಗಳಿಂದ ಮಾಡಿದ ಕಾಲು ಸೇತುವೆ). ಅಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಹೊಯ್ದಾಟ. ಹಾಗಿದ್ದರೂ ಪ್ರಾಣದ ಹಂಗು ತೊರೆದು ಧಾವಿಸಿದ ಸಾವಿರಾರು ಮಂದಿ ಜಾತಿ, ಮತ, ಧರ್ಮ…

 • ಜೋಡುಪಾಲ: ರವಿವಾರವೂ ಮುಂದುವರಿದ ಕಾರ್ಯಾಚರಣೆ

  ಸುಳ್ಯ: ಜೋಡುಪಾಲ ದುರಂತ ಸ್ಥಳದಲ್ಲಿ ರವಿವಾರವೂ ಕಾರ್ಯಾಚರಣೆ ನಡೆದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ನಾಪತ್ತೆ ಆಗಿರುವ ಇಬ್ಬರ ಪತ್ತೆಗೆ ಎನ್‌ಡಿಆರ್‌ಎಫ್‌ ಶೋಧ ಮುಂದುವರಿಸಿದೆ. ರವಿವಾರ ಬೆಳಗ್ಗೆ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಗೃಹರಕ್ಷಕ ಪಡೆ ಹಾಗೂ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ಹಲವರನ್ನು…

 • ಜೋಡುಪಾಲ ಗುಡ್ಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯ

  ಜೋಡುಪಾಲ: ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಜನಜೀವನ ತತ್ತರಗೊಂಡಿದೆ. ಧಾರಾಕಾರವಾಗಿ ಹರಿದು ಬರುತ್ತಿರುವ ಕೆಸರು ನೀರಿನ ನಡುವೆ ರಕ್ಷಣಾ ಕಾರ್ಯ ಸಾಗಿದೆ. ಮಣ್ಣಿನಡಿ ಸಿಲುಕಿದ್ದ ಯುವತಿಯೊಬ್ಬರ ಶವ ಶನಿವಾರ ಪತ್ತೆಯಾಗಿದೆ. ಶನಿವಾರ ಹಲವು ಕುಟುಂಬಗಳನ್ನು ರಕ್ಷಿಸಲಾಗಿದ್ದು, ಇನ್ನೂ ಹಲವು ಕುಟುಂಬಗಳು ಗುಡ್ಡದಲ್ಲಿ…

 • ಕೊಡಗಿನ ಜೋಡುಪಾಲದಲ್ಲಿ ತೇಲಿ ಬಂದ ಶವ; ರಕ್ಷಣಾ ಪಡೆ ಯೋಧರಿಗೆ ಸಂಕಷ್ಟ

  ಮಡಿಕೇರಿ: ಕೊಡುಗ ಸಂಪೂರ್ಣ ಜಲದಿಗ್‌ಬಂಧನಕ್ಕೊಳಗಾಗಿದ್ದು, ಜನರ ಸಂಕಷ್ಟ ಹೇಳತೀರದಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಯೋಧರೇ ಸಂಕಷ್ಟೇ ಸಿಲುಕಿರುವ ಬಗ್ಗೆ ವರದಿಯಾಗಿದೆ.  ಮಡಿಕೇರಿಯ ಜೋಡುಪಾಲದಲ್ಲಿ ಶುಕ್ರವಾರ ಸಂಜೆ ನಾಲ್ವರು ನಾಪತ್ತೆಯಾಗಿದ್ದು ಆ ಪೈಕಿ ವ್ಯಕ್ತಿಯೋರ್ವರ ಶವ ತುಂಬಿ ಹರಿಯುತ್ತಿರುವ ನದಿಯಲ್ಲಿ…

ಹೊಸ ಸೇರ್ಪಡೆ