karkala

 • ಕಾರ್ಕಳ: ಸಂಭ್ರಮದ ಲಕ್ಷ ದೀಪೋತ್ಸವ ಸಂಪನ್ನ

  ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನ. 18ರಂದು ಸಂಭ್ರಮ ಸಡಗರದೊಂದಿಗೆ ಜರಗಿತು. ದೀಪೋತ್ಸವದಲ್ಲಿ ಊರ-ಪರವೂರ ಅಸಂಖ್ಯಾತ ಭಕ್ತರು ಭಾಗವಹಿಸಿ ಪುನೀತರಾದರು. ಶ್ರೀ ವೆಂಕಟರಮಣ ದೇವರ ಮೂರ್ತಿಯನ್ನು ಪಲ್ಲಕ್ಕಿ ಹಾಗೂ ಚಪ್ಪರ ಶ್ರೀನಿವಾಸ ದೇವರನ್ನು ಬಂಗಾರದ…

 • ಹೂಳು ತುಂಬಿದ ಮೈಪಾಲಕೆರೆಯ ಅಭಿವೃದ್ಧಿ ಆಗಬೇಕಿದೆ

  ಕಾರ್ಕಳ: ಹಳ್ಳಿ ಸೊಬಗನ್ನೇ ಹೊಂದಿರುವ 7ನೇ ವಾರ್ಡ್‌ ತೆಂಗು, ಕಂಗು, ಗದ್ದೆಗಳಿಂದ ನಳನಳಿಸುತ್ತಿರುವ ಊರು. ಅರಣ್ಯ ಸಂಪತ್ತನ್ನು ಮೈದಳೆದಿರುವ ಈ ವಾರ್ಡ್‌ ಪುರಸಭೆಯ ಅತಿ ದೊಡ್ಡ ವಾರ್ಡ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.ಎಸ್‌ವಿಟಿ ಸರ್ಕಲ್‌ನಿಂದ ಆರಂಭವಾಗುವ ಈ ವಾರ್ಡ್‌…

 • ಕಾರ್ಕಳ: 442 ಅನರ್ಹ ಪಡಿತರ ಚೀಟಿ ಪತ್ತೆ

  ಕಾರ್ಕಳ: ಸರಕಾರದ ಮಾನದಂಡಕ್ಕೆ ವಿರುದ್ಧವಾಗಿ ಈವರೆಗೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ 442 ಕುಟುಂಬಗಳು ಕಾರ್ಕಳದಲ್ಲಿ ಪತ್ತೆಯಾಗಿವೆ. ಆರ್‌ಟಿಒ ಮಾಹಿತಿ ಪ್ರಕಾರ 102, ಸ್ವಯಂ ಪ್ರೇರಿತರಾಗಿ 340 ಕುಟುಂಬಗಳು ಈಗಾಗಲೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಯಾಗಿದ್ದು, ಅನರ್ಹರು ಕೂಡಲೇ ಕಾರ್ಡ್‌…

 • ಮನೆಯ ಚಾವಡಿಯಲ್ಲಿ ಆರಂಭಗೊಂಡ ಶಾಲೆಗೀಗ 115ರ ಸಂಭ್ರಮ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ಶ್ರೀ ವೆಂಕಟರಮಣ ದೇವಸ್ಥಾನ: ವಿಶ್ವರೂಪ ದರ್ಶನ

  ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ. 3ರಂದು ವಿಶ್ವರೂಪ ದರ್ಶನವು ದೀಪಾಲಂಕಾರದ ಮೂಲಕ ವಿಜೃಂಭಣೆಯಿಂದ ನಡೆಯಿತು. ರವಿವಾರ ಮುಂಜಾನೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಹಣತೆ ದೀಪಗಳನ್ನು ಬೆಳಗಿಸಲಾಯಿತು. ನೂರಾರು ಸೇವಾರ್ಥಿಗಳು ಶ್ರೀ ದೇಗುಲದಲ್ಲಿ…

 • ಸಂಕಷ್ಟದಲ್ಲಿ ಕಾರ್ಕಳ ಕೈಗಾರಿಕಾ ತರಬೇತಿ ಸಂಸ್ಥೆ

  ಕಾರ್ಕಳ: ಬೋಧಕರ ಕೊರತೆಯಿಂದ ಕಾರ್ಕಳದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆ ಸಂಕಷ್ಟ ದಲ್ಲಿದ್ದು, ವಿದ್ಯಾರ್ಥಿಗಳನ್ನು, ಪೋಷಕ ರನ್ನು ಆತಂಕಕ್ಕೀಡು ಮಾಡಿದೆ. ನಗರದ ಹೃದಯ ಭಾಗ ಬೋರ್ಡ್‌ ಹೈಸ್ಕೂಲ್‌ನ ಪಕ್ಕದ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕಿನ ಏಕೈಕ ಸರಕಾರಿ ಐಟಿಐ ಒಂದೇ…

 • ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ ಮುದ್ರಾಡಿ ಗ್ರಾ. ಪಂ.

  ಹೆಬ್ರಿ : ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಮಳೆ ಕೊಯ್ಲು ಅಳವಡಿಸುವುದರ ಜತೆಗೆ ಪಂಚಾಯತ್‌ ನೇತೃತ್ವದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಕೊಯ್ಲು ಅಳವಡಿಸಿ ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ್ದು ಇತರರಿಗೆ ಮಾದರಿಯಾಗಿದೆ. ಮಳೆ…

 • ಕುಕ್ಕುಜೆ: ಅಭಿವೃದ್ಧಿಗೊಳ್ಳದ ಖಾರಕಟ್ಟೆ-ಪಡುಬೈಂತ್ಲ ರಸ್ತೆ

  ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಕ್ಕುಜೆ ಗ್ರಾಮದ ಕಾರಕಟ್ಟೆ ಪಡುಬೈಂತ್ಲ ರಸ್ತೆ ಅಭಿವೃದ್ಧಿಗೊಳ್ಳದೆ ಸ್ಥಳೀಯರಿಗೆ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಸುಮಾರು 35 ವರ್ಷಗಳ ಹಿಂದೆ ಪಂಚಾಯತ್‌ ರಸ್ತೆಯಾಗಿ ನಿರ್ಮಾಣ ಗೊಂಡ ಈ ರಸ್ತೆ ಅನಂತರದ ದಿನಗಳಲ್ಲಿ ಅಭಿವೃದ್ಧಿ…

 • ಬೆಳ್ಮಣ್: ಬಸ್ ಗೆ ಸ್ಕೂಟರ್ ಡಿಕ್ಕಿಯಾಗಿ ಓರ್ವ ದಾರುಣ ಸಾವು

  ಬೆಳ್ಮಣ್: ಬಸ್ ಗೆ ಸ್ಕೂಟರ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು  ಪಡುಬಿದ್ರಿ ಮೂಲದವರು ಎಂದು ಗುರುತಿಸಲಾಗಿದ್ದು, .ಮದುವೆಯಾಗಿ ಕೇವಲ ಒಂದು  ತಿಂಗಳಾಗಿತ್ತು ಎಂದು ಹೇಳಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.

 • ಕಾರ್ಕಳ: ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

  ಕಾರ್ಕಳ: ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ನಲ್ಲೂರು ಗ್ರಾಮದ ಹರೀಶ್‌ (20) ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶುಕ್ರವಾರ ಕಾಲೇಜಿಗೆ ತರಗತಿಗೆ ಹಾಜರಾಗದ ಹರೀಶ್‌ ಗೆಳೆಯನ ಜತೆ ಬೈಕ್‌ನಲ್ಲಿ ದೂಪದಕಟ್ಟೆಯತ್ತ ತೆರಳಿದ್ದನು….

 • ಉಪಯೋಗಕ್ಕಿಲ್ಲದ ನಕ್ರೆ ಆರೋಗ್ಯ ಉಪಕೇಂದ್ರ

  ಕಾರ್ಕಳ: ಕುಕ್ಕುಂದೂರು ಗ್ರಾಮದ ರೋಗಿಗಳಿಗೆ ಸ್ಪಂದಿಸ ಬೇಕಾದ ಆರೋಗ್ಯ ಉಪಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರಿಲ್ಲದೆ ಕಟ್ಟಡ ನಿರುಪಯುಕ್ತವಾಗಿದೆ. 13 ಸಾವಿರ ಜನಸಂಖ್ಯೆಯಿರುವ ಕುಕ್ಕುಂದೂರು ಗ್ರಾಮದಲ್ಲಿ 5 ಸಾವಿರ ಮಂದಿ ಇದರ ಪ್ರಯೋಜನ ಪಡೆಯಬೇಕಿತ್ತು. 2018ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

 • ಅಂಚಿಕಟ್ಟೆ: ಹಗಲಿನಲ್ಲೂ ಉರಿಯುತ್ತಿವೆೆ ಬೀದಿದೀಪ

  ಕಾರ್ಕಳ: ಪುರಸಭಾ ವ್ಯಾಪ್ತಿಯ ಮೂರನೇ ವಾರ್ಡ್‌ ಅಂಚಿಕಟ್ಟೆ 3ನೇ ಅಡ್ಡರಸ್ತೆಯಲ್ಲಿನ ಬೀದಿದೀಪ ಕಳೆದ 10 ದಿನಗಳಿಂದ ಹಗಲಿರುಳು ಉರಿಯುತ್ತಿದೆ. ಈ ಹಿಂದೆ ಇಲ್ಲಿನ ದೀಪ ಗಳನ್ನು ಸ್ಥಳೀಯರೇ ಅದರ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಇದರ ಸ್ವಿಚ್‌ ಮುಟ್ಟಿದಾಗ…

 • ಕಾರ್ಕಳ: ಆಧಾರ್‌ಗಾಗಿ ನಿಲ್ಲದ ಪರದಾಟ

  ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅತ್ಯಗತ್ಯ. ಪ್ರತಿಯೋರ್ವರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಸಾರ್ವಜನಿಕರು ಸಂಕಷ್ಟ ಪಡಬೇಕಾದ…

 • ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ

  ಕಾರ್ಕಳ: ಆರೋಗ್ಯ ಹದಗೆಟ್ಟಾಗ ಸರಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತಹ ಸಂದರ್ಭ ಸರಕಾರಿ ವೈದ್ಯರು ಸೂಚಿಸಿದ ಆಸ್ಪತ್ರೆಗೆ ಹೋದಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ…

 • ಕಾರ್ಕಳ : ಬೈಕ್ ಅಪಘಾತ ವ್ಯಕ್ತಿ ಸಾವು

  ಕಾರ್ಕಳ: ಹಿರ್ಗಾನ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಹಿರ್ಗಾನ ಗ್ರಾಮದ ಪ್ರಕಾಶ್ ಅಮೀನ್ (34) ಸಾವನ್ನಪ್ಪಿದ್ದಾರೆ. ಶನಿವಾರ ತಡ ರಾತ್ರಿ ಪ್ರಕಾಶ್ ಅವರು ತನ್ನ ಬೈಕ್ ನಲ್ಲಿ ಕಾರ್ಕಳದಿಂದ ಹಿರ್ಗಾನಕ್ಕೆ ಸಾಗುತ್ತಿದ್ದ ಸಂದರ್ಭ ಹಿರ್ಗಾನ ಬಳಿ ಬೈಕ್ ನಿಯಂತ್ರಣ…

 • ಮನೆ ನಿರ್ಮಿಸದಿದ್ದವರಿಂದ ನಿವೇಶನ ಹಿಂಪಡೆಯಲು ಸೂಚನೆ

  ಕಾರ್ಕಳ (ಅಜೆಕಾರು): ಸರಕಾರದಿಂದ ನಿವೇಶನ ಪಡೆದು ಹಲವು ವರ್ಷ ಗಳಾದರೂ ಮನೆ ನಿರ್ಮಿಸದೇ ಇರುವ ಪಲಾನುಭವಿಗಳ ನಿವೇಶನವನ್ನು ಹಿಂಪಡೆದು ನಿವೇಶನ ರಹಿತರಿಗೆ ನೀಡುವಂತೆ ಆಗ್ರಹ ಕಾರ್ಕಳ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂತು. ಸೆ. 9 ರಂದು ತಾ.ಪಂ. ಸಾಮರ್ಥ್ಯ…

 • ಬಜಗೋಳಿ ಪೇಟೆಗೆ ಬೇಕಿದೆ 108 ಆ್ಯಂಬುಲೆನ್ಸ್‌ ಸೌಲಭ್ಯ

  ಪಳ್ಳಿ (ಬಜಗೋಳಿ): ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಚೆನ್ನಾಗಿದ್ದರೂ ಸಿಬಂದಿ ಕೊರತೆಯಿಂದ ಬಳಲುತ್ತಿದೆ. ಬಜಗೋಳಿ, ನಲ್ಲೂರು, ಮುಡಾರು, ನೆಲ್ಲಿಕಾರು, ಮಿಯ್ಯರು, ಮಾಳ ಭಾಗದ ಕಡಾರಿ ಆಸುಪಾಸಿನ ಗ್ರಾಮಸ್ಥರು ಬಹುತೇಕವಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಎರಡು ಕೇಂದ್ರಗಳಲ್ಲಿ ಕರ್ತವ್ಯ…

 • ಕಾರ್ಕಳ ಠಾಣಾ ಕ್ರೈಂ ಎಸ್ಸೈ ಬಿ. ಲಕ್ಷ್ಮಣ್ ನಿಧನ

  ಕಾಪು : ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ಹಿಸಿ, ಪ್ರಸ್ತುತ ಕಾರ್ಕಳ ಠಾಣೆಯಲ್ಲಿ ಕ್ರೈಂ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ. ಲಕ್ಷ್ಮಣ್ (58) ಅವರು ಸೆ. 4ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು….

 • ಅಂದು ಕಾಂತಾವರದಲ್ಲಿ ರಾತ್ರಿ ಕಾವಲುಗಾರ; ಇಂದು ಇನ್ಫಿ ಟೆಕ್ಕಿ!

  ಕಾರ್ಕಳ: ಛಲವೊಂದಿದ್ದರೆ ಯಾವುದೂ ಸಾಧ್ಯವಿದೆ ಎಂಬುದಕ್ಕೆ ಈತನೇ ಉದಾಹರಣೆ. ರಾತ್ರಿಯಿಡೀ ವಿದ್ಯಾಸಂಸ್ಥೆಯಲ್ಲಿ ಕಾವಲು ಕೆಲಸ, ಹಗಲು ಎಂಜಿನಿಯರಿಂಗ್‌ ಓದು. ಹೀಗೆ ಛಲ ಬಿಡದೆ ಓದಿದ ಪರಿಣಾಮ ಆತ ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾನೆ. ಇಂತಹ ವಿಶಿಷ್ಟ ಸಾಧನೆ…

 • ಕರಾವಳಿಯ ಏಳು ಸ್ಥಳೀಯ ಸಂಸ್ಥೆ ಗೆದ್ದವರಿಗೆ ಇನ್ನೂ ಸಿಗದ ಗದ್ದುಗೆ!

  ಮಂಗಳೂರು: ಕರಾವಳಿಯ ಒಟ್ಟು ಏಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಆ.31ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಆದರೆ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಆಗದೆ ಜನಪ್ರತಿಧಿಗಳ ಆಡಳಿತ ಮರೀಚಿಕೆಯಾಗಿದೆ. ಉಳ್ಳಾಲ ನಗರ ಸಭೆ, ಬಂಟ್ವಾಳ ಪುರಸಭೆ, ಪುತ್ತೂರು ನಗರಸಭೆ, ಉಡುಪಿ…

ಹೊಸ ಸೇರ್ಪಡೆ