karkala

 • ಅತ್ತೂರು: ನವದಿನ ಪ್ರಾರ್ಥನಾ ವಿಧಿ ಆರಂಭ

  ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್‌ ಬಸಿಲಿಕಾ ಅಪಾರ ಸಂಖ್ಯೆಯ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ದುಃಖ ದುಮ್ಮಾನಗಳಿಗೆ ಪರಿಹಾರ ಕಲ್ಪಿಸುವ ತಾಣವಾಗಿದೆ. ಇಲ್ಲಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇನ್ನಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು…

 • ಜ. 27-31: ಅತ್ತೂರು ಜಾತ್ರೆ

  ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ)ವು ಜ. 27ರಿಂದ 31ರ ವರೆಗೆ ಜರಗಲಿದೆ. ಜ. 20ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್‌ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ…

 • ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳ: ವಿಜೇತರ ಪಟ್ಟಿ 

  ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ಕಂಬಳ ಎಂಬ ಹೆಗ್ಗಳಿಕೆ ಹೊಂದಿದ ಕಾರ್ಕಳ ಮಿಯ್ಯಾರು ಲವ-ಕುಶ ಜೋಡುಕರೆ ಕರೆ ಸೋಮವಾರ ಸಂಜೆ ಸಂಪನ್ನವಾಗಿದೆ. 15 ನೇ ವರ್ಷದ ಮಿಯ್ಯಾರು  ಜೋಡುಕರೆ ಕಂಬಳದಲ್ಲಿ ಈ ವರ್ಷದ ದಾಖಲೆ ಎಂಬಂತೆ…

 • 61 ವರ್ಷಗಳ ಹಿಂದಿನ ಪರಪ್ಪು ಸೇತುವೆಗೆ ಬೇಕಿದೆ ಮುಕ್ತಿ

  ಕಾರ್ಕಳ: ಕಾರ್ಕಳ ಮುಖ್ಯ ಪೇಟೆಯಿಂದ ಪಳ್ಳಿ-ರಂಗನಪಲ್ಕೆ ಭಾಗಕ್ಕೆ ಸಂಪರ್ಕಿಸುವ ಕಿರಿದಾಗಿರುವ ಪರಪ್ಪು ಸೇತುವೆಯಲ್ಲಿ ಪ್ರತಿನಿತ್ಯವೂ ಸಂಚಾರಕ್ಕೆ ತೊಂದರೆ ಉಂಟಾಗುತಿದೆ. ಸುಮಾರು 61 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸದ್ಯದ ಅಧಿಕ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಕಿರು ಸೇತುವೆ…

 • ಕಳಸ-ಕಾರ್ಕಳ ಹೆದ್ದಾರಿ ತಿರುವು ಸಿಲುಕಿದ ಐರಾವತ!

  ಕಾರ್ಕಳ: ಕಳಸ-ಕಾರ್ಕಳ ಹೆದ್ದಾರಿಯ ತಿರುವೊಂದರಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಐರಾವತ ಬಸ್ಸನ್ನು ತಿರುಗಿಸಲು ಸಾಧ್ಯ ವಾಗದೆ ಸಾಕಷ್ಟು ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಂಗಳೂರಿಗೆ ಬರುತ್ತಿದ್ದ ಬಸ್ಸನ್ನು ಹೆದ್ದಾರಿಯ ನೆಲ್ಲಿಬೀಡು ಎಂಬಲ್ಲಿ ತಿರುವಿನಲ್ಲಿ ಚಾಲಕನಿಗೆ ಸರಾಗವಾಗಿ ತಿರುಗಿಸಲು ಸಾಧ್ಯವಾಗಿಲ್ಲ. ಬಸ್‌…

 • ಒಂದೇ ಮನೆಯ ಇಬ್ಬರ ಆತ್ಮಹತ್ಯೆ

  ಕಾರ್ಕಳ: ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರು ಯುವಕರು ವಿಷಸೇವಿಸಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಯಾ ಸಮೀಪದ ಗರಡಿನಗರದ ನಿವಾಸದಲ್ಲಿ ಆ. 15ರ ರಾತ್ರಿ ಸಂಭವಿಸಿದೆ. ಗರಡಿಮನೆಯ ನಿವಾಸಿ ಪ್ರೀತೇಶ್‌ (24) ಹಾಗೂ ಆತನ ಆತ್ತೆಯ ಮಗ ನವೀನ್‌ ಪೂಜಾರಿ…

 • ಕಾರ್ಕಳದಲ್ಲಿ  ಗಾಳಿ-ಮಳೆ: ಮನೆ, ಕೃಷಿ, ಶಾಲೆಗೆ ಧಕ್ಕೆ

  ಕಾರ್ಕಳ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿವಿಧ ಭಾಗಗಳಲ್ಲಿ ಮನೆ, ಇತರ ಕಟ್ಟಡಗಳು ಹಾಗೂ ಕೃಷಿ ಭೂಮಿಗೆ ಹಾನಿಯಾಗಿದ್ದು, ನಷ್ಟ ಸಂಭವಿಸಿದೆ. ಬೇಳಿಂಜೆ ಗ್ರಾಮದ ಸದಾಶಿವ ಶೆಟ್ಟಿ ಅವರ ಮನೆಯ ಶೀಟ್‌ ಗಾಳಿಗೆ ಹಾರಿ…

 • ಕುಲಶೇಖರ-ಕಾರ್ಕಳ ಚತುಷ್ಪಥ: ಮರು ಭೂಸ್ವಾಧೀನಕ್ಕೆ ಸಿದ್ಧತೆ

  ಮಂಗಳೂರು: ಕುಲಶೇಖರ- ಮೂಡಬಿದಿರೆ-ಕಾರ್ಕಳ ನಡುವಿನ ಚತುಷ್ಪಥ ರಾ.ಹೆ. ನಿರ್ಮಾಣಕ್ಕೆ  ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪುತ್ತಿದ್ದು, ರಸ್ತೆಗಾಗಿ 45 ಮೀ. ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಸೆಪ್ಟೆಂಬರ್‌ನಲ್ಲಿ “3ಎ’ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಯುತ್ತಿದೆ.   30 ಮೀ. ಬದಲು…

 • ಪ್ರತಿ ಜೀವಿಗೂ ಪುಣ್ಯದ ಅಪೇಕ್ಷೆ: ಮುನಿಶ್ರೀ ವೀರಸಾಗರ್‌

  ಕಾರ್ಕಳ: ಮನುಷ್ಯರು ಸೇರಿದಂತೆ ಎಲ್ಲ ಜೀವಿಗಳಿಗೂ ಪುಣ್ಯ ಪ್ರಾಪ್ತಿಯಾಗಬೇಕೆಂಬ ಅಪೇಕ್ಷೆ ಇರು ತ್ತದೆ. ಪುಣ್ಯದ ಆಸೆ ಮತ್ತು ಇಚ್ಛೆ ಯಿಂದಲೇ ಎಲ್ಲರೂ ಕೆಲಸ ನಿರ್ವ ಹಿಸುತ್ತಾರೆ. ಪಾಪಿಗಳಾಗುವ ಇಚ್ಛೆ ಯಾರಿಗೂ ಇರುವುದಿಲ್ಲ ಎಂದು ಪರಮಪೂಜ್ಯ 108 ಮುನಿಶ್ರೀ ವೀರಸಾಗರ…

 • ಕುಕ್ಕುಂದೂರು: ಮನೆಗೆ ನುಗ್ಗಿ ಮಹಿಳೆಯ ಕೊಲೆ

   ಕಾರ್ಕಳ: ಕಾರ್ಕಳ ಕುಕ್ಕುಂದೂರು ಸಮೀಪದ ಅಯ್ಯಪ್ಪ ನಗರದ ಮನೆಯೊಂದರಲ್ಲಿ ಮಹಿಳೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ಪ್ಲೋರಿನ್‌ ಮಚಾದೋ (54)  ಕೊಲೆಯಾದ ಮಹಿಳೆ. ರವಿವಾರ ಮಧ್ಯಾಹ್ನದ ವೇಳೆಗೆ  ಕೊಲೆ ಕೃತ್ಯ ಬಹಿರಂಗವಾಗಿದೆ. ಮೃತದೇಹ ಬೆಡ್‌ಶೀಟ್‌ ಮುಚ್ಚಿದ ಸ್ಥಿತಿಯಲ್ಲಿತ್ತು. ಹೊಟ್ಟೆಯ…

 •  ಅಂಡಾರು: ಕುಸಿಯುತ್ತಿರುವ ಶಾಲಾ ಕಟ್ಟಡ

  ಅಜೆಕಾರು: ಸರಕಾರಿ ಹಿ.ಪ್ರಾ. ಶಾಲೆಯ ಕಟ್ಟಡವು ಕುಸಿಯುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಜು. 2ರಂದು ಸಚಿತ್ರ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಕಾರ್ಕಳ ಶಿಕ್ಷಣಾಧಿಕಾರಿಯವರು ಒಂದು ವಾರದ ಒಳಗೆ ಸಮಗ್ರ ವರದಿ ನೀಡುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ. 17 ವರ್ಷಗಳ…

 • ಕಾರ್ಕಳ: ಹೆದ್ದಾರಿ ಬದಿಯ ಗುಡ್ಡ  ಕುಸಿತ

  ಕಾರ್ಕಳ: ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪ ರಸ್ತೆ ಬದಿಯ ಗುಡ್ಡ  ಕುಸಿಯುವ ಹಂತದಲ್ಲಿದೆ. ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ರಸ್ತೆಯ ಒಂದು ಭಾಗಕ್ಕೆ ಮಣ್ಣು ಬಿದ್ದಿದೆ. ಭಾರೀ ಮಳೆಯಿಂದಾಗಿ ಸಮಸ್ಯೆ ಎದುರಾಗಿದ್ದು, ಇನ್ನಷ್ಟು ಮಣ್ಣು ಕುಸಿಯುವ ಅಪಾಯವಿದೆ.

 • ಕಾರ್ಕಳ ಮಾದರಿ ಕ್ಷೇತ್ರವಾಗಿ ನಿರ್ಮಾಣ: ಸುನಿಲ್‌ 

  ಅಜೆಕಾರು: ಅಭಿವೃದ್ಧಿ ಮತ್ತು ಹಿಂದುತ್ವವನ್ನು ಮೂಲಮಂತ್ರವಾಗಿಸಿಕೊಂಡು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು. ಅವರು ಹೊಸ್ಮಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ…

 • ನಿಧಾನಗತಿಯ ಕಾಮಗಾರಿ: ಜನಸಂಚಾರಕ್ಕೆ ಸಮಸ್ಯೆ

  ಕಾರ್ಕಳ: ತಾಲೂಕಿನ ಮುರತಂಗಡಿ- ಇರ್ವತ್ತೂರು ಸಂಪರ್ಕ ಕೊಂಡಿಯಾಗಿರುವ ಇರ್ವತ್ತೂರಿನ ಭಾಗದಲ್ಲಿ ನೂತನ ಸೇತುವೆ ನಿಮಾರ್ಣದ ಹಂತದಲ್ಲಿದ್ದು , ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರಮುಖ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಹಳೆಯ ಸೇತುವೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿಯ ವೇಳೆ…

 • ಗರಿಷ್ಠ ಅಂಕ ಸಾಧನೆಗೆ ಲಕ್ಷ ರೂ. ಬಹುಮಾನ

  ಕಾರ್ಕಳ: ಕಾರ್ಕಳ ಗಣಿತನಗರದ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ಸಂಕೇತ್‌ ಜಿ.ಬಿ. ಕೆಸಿಇಟಿ ಎಂಜಿನಿಯರಿಂಗ್‌ ವಿಭಾಗದಲ್ಲಿ 18ನೇ ರ್‍ಯಾಂಕ್‌ ಪಡೆದಿದ್ದು, ಇವರ ಸಾಧನೆಯನ್ನು ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌  ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅಭಿನಂದಿಸಿ 1 ಲಕ್ಷ ರೂ….

 • ಬಸ್‌-ತೂಫಾನ್‌ ಢಿಕ್ಕಿ: 8 ಮಂದಿಗೆ ಗಾಯ

  ಕಾರ್ಕಳ: ಬಸ್‌ ಹಾಗೂ ತೂಫಾನ್‌ ಟೆಂಪೋ ಮುಖಾಮುಖೀ ಢಿಕ್ಕಿ ಹೊಡೆದು 8 ಮಂದಿ ಗಾಯಗೊಂಡಿರುವ ಘಟನೆ ಕಾರ್ಕಳ ಬೈಲೂರು ಸಮೀಪದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತೂಫಾನ್‌ನಲ್ಲಿದ್ದ ಗಂಗಮ್ಮ (60), ನಿಂಗಮ್ಮ (60), ಹನುಮಂತ ಗೌಡ (34), ಮಂಜುನಾಥ(47), ಸಿದ್ದಪ್ಪ…

 • ಮುಂಡ್ಕೂರು: ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ

  ಬೆಳ್ಮಣ್‌:  ಕಾರ್ಕಳ ತಾಲೂಕಿನಲ್ಲಿ ಕಳೆದ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಮಾಡಿದ  ಅಭಿವೃದ್ಧಿಗಾಗಿ ಮುಂದೆಯೂ ತನ್ನ ಗೆಲುವಿಗೆ ಮತ ನೀಡಬೇಕು  ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮತಯಾಚನೆ ಸಂದರ್ಭ ತಿಳಿಸಿದರು. ಅವರು ಸೋಮವಾರ…

 • “ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್‌ ನೀಡಿ’

  ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮತ್ತೂಮ್ಮೆ ಅವಲೋಕನ ಮಾಡಬೇಕು. ಎರಡು ದಿನಗಳ ಒಳಗಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಉದಯ ಕುಮಾರ್‌ ಶೆಟ್ಟಿ ಅವರಿಗೆ ನೀಡುವ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾರ್ಯಕರ್ತರ ಮುಂದಿನ ನಡೆಗೆ…

 • ಮೊಯಿಲಿ ಹಠಾವೋ ಕಾಂಗ್ರೆಸ್‌ ಬಚಾವೋ ಘೋಷಣೆ

  ಕಾರ್ಕಳ: ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕದ ಹಿನ್ನೆಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅವರ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಕಾರ್ಕಳದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿಯ ಸಮೀಪದಲ್ಲಿರುವ ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಕಚೇರಿ…

 • ಎ. 23: ನಾಮಪತ್ರ ಸಲ್ಲಿಕೆ, 4ನೇ ಬಾರಿಗೆ ಸ್ಪರ್ಧೆ

  ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಹಾಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಹೆಸರು ಅಂತಿಮಗೊಂಡಿದೆ. ಎ. 8ರಂದು ಬಿಜೆಪಿ ಹೈಕಮಾಂಡ್‌ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯ 72 ಮಂದಿಯ ಪೈಕಿ ಸುನಿಲ್‌…

ಹೊಸ ಸೇರ್ಪಡೆ