parents

 • ಪೋಷಕರು ಕಾನ್ವೆಂಟ್‌ ಮೋಹ ತ್ಯಜಿಸಿ

  ಮೈಸೂರು: ಪೋಷಕರು ಯಾವುದೇ ಸೌಲಭ್ಯ ಸಿಗದ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮೈಸೂರು ತಾಲೂಕು ಡಿ.ಸಾಲುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ…

 • ಪೋಷಕರೇ, ಮಕ್ಕಳು ಕೆರೆಕಟ್ಟೆಯತ್ತ ತೆರಳದಂತೆ ನಿಗಾವಹಿಸಿ

  ಎಚ್‌.ಡಿ.ಕೋಟೆ: ಶಿವರಾತ್ರಿ ಪ್ರಯುಕ್ತ ಶುಕ್ರವಾರ ರಜೆ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ದುರ್ಮರಣ ಹೊಂದಿದ ನಾಲ್ವರು ಬಾಲಕರ ಅಂತ್ಯಕ್ರಿಯೆ ಶನಿವಾರ ಪೋಷಕರ ಮುಗಿಲು ಮುಟ್ಟುವ ಆಕ್ರಂದನಗಳ ನಡುವೆ ನೆರವೇರಿತು. ಈ ಪೈಕಿ ಓರ್ವ ಬಾಲಕ ಹುಟ್ಟುಹಬ್ಬ ದಿನದಂದೇ…

 • ಪರೀಕ್ಷೆ ಟಿಪ್ಸ್‌ ಮಕ್ಕಳಿಗಲ್ಲ, ಹೆತ್ತವರಿಗೆ….

  ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ ಓದುತ್ತಿದ್ದಾರೋ, ಇಲ್ಲವೋ ಅಂತ ಹೆತ್ತವರು ಹತ್ತುಪಟ್ಟು ಜಾಸ್ತಿ ಚಿಂತಿಸುತ್ತಾರೆ. ಆದರೆ, ಮಕ್ಕಳಿಗೆ ನಿಶ್ಚಿಂತೆಯಾಗಿ ಓದುವ…

 • ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ

  ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು ಎನ್ನುವ ಸ್ಪಷ್ಟತೆ ತಂದೆ ತಾಯಂದಿರಿಗಿರಬೇಕು. ಬದುಕೆಂದರೆ ದೊಡ್ಡ ಮನೆ, ದೊಡ್ಡ ಕಾರು, ಸಂಪತ್ತು ಎನ್ನುವ…

 • ಮದುವೆಯಾದ ಮಗ ಬದಲಾಗಿದ್ದೇಕೆ?

  ವಿವಾಹ ವಾರ್ಷಿಕೋತ್ಸವದ ದಿನ ಹೋಟೆಲ್‌ನ ಊಟಕ್ಕೆ ಅತ್ತೆ-ಮಾವ ಬರುವುದು ಅವಳಿಗೆ ಇಷ್ಟವಿರಲಿಲ್ಲ. ಅಮ್ಮನಿಗೆ ಈ ವಿಚಾರ ತಿಳಿದರೆ, ನೋವಾಗುತ್ತದೆಂದು, ಅಪ್ಪನ ಬಳಿ ಮಗ ತನ್ನ ಸಂದಿಗ್ಧವನ್ನು ತಿಳಿಸಿದ್ದಾನೆ. “ಮನೆ ಕೆಲಸದ ಸಹಾಯಕ್ಕೆ ಬೇಕು, ಸಂಭ್ರಮಕ್ಕೆ ಬೇಡವಾದೆವಾ?’ ಎಂದು, ವಿಶ್ವನವರು…

 • ಮತ್ತೆ ಹಾಜರಾದ ಮಲಯಾಳ ಅಧ್ಯಾಪಕ

  ಕಾಸರಗೋಡು: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಲು ಕನ್ನಡ ಭಾಷೆ ಅರಿಯದ ಅಧ್ಯಾಪಕ ದೀಪು ಮತ್ತೆ ಶಾಲೆಗೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಹಾಗು ಕನ್ನಡಾಭಿಮಾನಿಗಳು ಹೊಸದುರ್ಗ ಸರಕಾರಿ ಹೈಯರ್‌ ಸೆಕಂಡರಿ ಶಾಲೆಯಲ್ಲಿ ಶುಕ್ರವಾರ ಪ್ರತಿಭಟನೆ…

 • ಪುಸ್ತಕ ಖರೀದಿಯಲ್ಲಿ ಪಾಲಕರು ಸ್ವತಂತ್ರರು

  ಬೆಂಗಳೂರು: ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತು ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ನಿರ್ದಿಷ್ಟ ಮಾರಾಟಗಾರರ ಮೂಲಕ ಪುಸ್ತಕ, ಸಮವಸ್ತ್ರ ಮತ್ತು ಇತರ ಲೇಖನ ಸಾಮಗ್ರಿಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕ, ಪೋಷಕರಿಗೆ…

 • ಖಾಸಗಿಗೆ ಸರಕಾರಿ ಮಕ್ಕಳ ಗುಳೆ

  ಬೆಂಗಳೂರು: ಸರಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಕೂಗಿನ ನಡುವೆಯೇ ಈ ಶಾಲೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಕಳೆದೊಂದು ವರ್ಷದಲ್ಲಿ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ 1.20 ಲಕ್ಷದಷ್ಟು ಕಡಿಮೆಯಾಗಿದೆ….

 • ಮಣಿಕ್ಕರ ಸ.ಹಿ.ಪ್ರಾ. ಶಾಲೆಯಲ್ಲಿ ನಳನಳಿಸುತ್ತಿದೆ ಕೈತೋಟ

  ಸವಣೂರು: ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೇವಲ ಪಾಠ ಮಾಡುವುದಷ್ಟೇ ನಮ್ಮ ಕೆಲಸವಲ್ಲ, ಅದರಾಚೆಗೂ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಉಪಯುಕ್ತವಾಗುತ್ತದೆ ಎಂಬುವುದನ್ನು ಕೃಷಿ ಮಾಡುವ ಮೂಲಕ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಣಿಕ್ಕರ ಶಾಲಾಭಿವೃದ್ಧಿ ಸಮಿತಿ, ಪೋಷಕರು ಮತ್ತು ಶಿಕ್ಷಕರು…

 • ಮುಳಿಹುಲ್ಲಿನ ಕಟ್ಟಡದಲ್ಲಿ ಆರಂಭವಾದ ಶಾಲೆಗೀಗ 104 ವರ್ಷ

  19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ನೂಜಿಬಾಳ್ತಿಲ ಶಾಲೆ: ವಿವಿಧ ಬಗೆಯ ತರಕಾರಿ ತೋಟ

  ಕಲ್ಲುಗುಡ್ಡೆ: ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಸಮೃದ್ಧ ತರಕಾರಿ ಕೃಷಿಯ ಕೈ ತೋಟ ನಿರ್ಮಿಸಿ, ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಮಾದರಿಯಾಗಿದ್ದಾರೆ ಈ ಶಾಲೆಯವರು. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಉನ್ನತ ಹಿರಿಯ…

 • ಹೆಚ್ಚುತ್ತಿದೆ, ದತ್ತು ಪಡೆದ ಮಕ್ಕಳನ್ನು ಹಿಂದಿರುಗಿಸುವ ಪ್ರಮಾಣ!

  ಇತ್ತೀಚೆಗೆ ದತ್ತು ಮಕ್ಕಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ದತ್ತು ಮಕ್ಕಳನ್ನು ಪಡೆಯಲು ನೆರವಾಗುತ್ತಿರುವ ಕೇಂದ್ರ ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ (ಕಾರಾ) ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ. ಭಾರತದಲ್ಲಿ ಮಕ್ಕಳ ದತ್ತು ಸ್ವೀಕಾರ ಕಾರಾ…

 • ಮದುವೆ ಅನಂತರವೂ ಹೆತ್ತವರಿಗೆ ಸಹಾಯಹಸ್ತ…

  ಒಂದು ಸಣ್ಣ ಕುಟಂಬ. ಅಪ್ಪ, ಅಮ್ಮ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿರುವ ಸುಂದರ ಕುಟುಂಬ. ಅಕ್ಕನಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸ. ತಂಗಿ ಪದವಿ ವಿದ್ಯಾರ್ಥಿನಿ. ಅಕ್ಕನಿಗೆ ಮದುವೆ ವಯಸ್ಸು. ಸಹಜವಾಗಿಯೇ ಹೆತ್ತವರು ಸೂಕ್ತ ಗಂಡಿಗಾಗಿ ವರಾನ್ವೇಷಣೆಯಲ್ಲಿ ತೊಡಗುತ್ತಾರೆ….

 • ಮಕ್ಕಳೇ, ಪೋಷಕರಿಗೆ ಸೈಕಲ್‌ ಕೊಡಬೇಡಿ

  ಕೆ.ಆರ್‌.ನಗರ: ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸರ್ಕಾರ ಉಚಿತ ಸೈಕಲ್‌ ವಿತರಿಸುತ್ತಿದ್ದು, ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಸಲಹೆ ನೀಡಿದರು ಪಟ್ಟಣದ ಬನ್ನಿಮಂಟಪ ಬಡಾವಣೆಯ‌ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಿ…

 • Money ಪಾಠ

  ಈಗಿನ ಮಕ್ಕಳಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ಕಣ್ಣಿಗೆ ಕಂಡಿದ್ದೆಲ್ಲವೂ ಬೇಕು ಅಂತಾರೆ… ಅಂತ ಹೇಳುತ್ತಲೇ ಮಕ್ಕಳಿಗೆ ಧಾರಾಳವಾಗಿ ಪಾಕೆಟ್‌ ಮನಿ ಕೊಡುವ ಅಪ್ಪ-ಅಮ್ಮಂದಿರಿದ್ದಾರೆ. ಬಯಸಿದ್ದೆಲ್ಲವೂ ತಕ್ಷಣವೇ ಕೈಗೆ ಸಿಕ್ಕುಬಿಟ್ಟರೆ, ಮಕ್ಕಳಿಗೆ ದುಡ್ಡಿನ ಮಹತ್ವ, ದುಡ್ಡಿನ ಬೆಲೆ ಅರ್ಥವಾಗುವುದಾದರೂ ಹೇಗೆ?…

 • ಗೂಗಲ್‌ ಫ್ಯಾಮಿಲಿ ಲಿಂಕ್‌ ಆ್ಯಪ್‌

  ಮಣಿಪಾಲ: ಇಂಟರ್‌ನೆಟ್‌ನಲ್ಲಿ ಮಕ್ಕಳು ಏನೇನೋ ನೋಡುತ್ತಾರೆ ಎನ್ನುವ ಆರೋಪಗಳು ಇದ್ದಿದ್ದೇ. ಹೆತ್ತವರಿಗೆ ಇರುವ ಈ ಆತಂಕ ನಿವಾರಿಸಲು ಗೂಗಲ್‌ “ಫ್ಯಾಮಿಲಿ ಲಿಂಕ್‌’ ಪರಿಚಯಿಸಿದೆ. ಇದೀಗ ಈ ಲಿಂಕ್‌ ಮತ್ತಷ್ಟು ಹೊಸ ಫೀಚರ್‌ಗಳೊಂದಿಗೆ ಲಭ್ಯವಿದೆ. ಏನಿದು ಹೊಸ ಫೀಚರ್‌ ಇಲ್ಲಿದೆ…

 • ಈ ದಿನ ಶಾಲೆಗೆ ರಜೆ…

  ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ ಕಷ್ಟ ಅರ್ಥ ಆಗುತ್ತಾ… ಎಂದು ನಕ್ಕಳು. ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು…

 • ನೀವು ಹೀಗೆ ಮಾಡ್ತೀರ?

  ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ ಕರುಣೇ ಇರಲ್ವೇ? ಈಗಿನ ಯುವಜನ ಹೀಗೇಕೆ ವರ್ತಿಸುತ್ತದೆ? ಬರೀ ಸಿಟ್ಟು ಸಿಡುಕಿನ ರೂಪದಲ್ಲೇ…

 • ಅನಕ್ಷರಸ್ಥ ಪೋಷಕರ ಮಕ್ಕಳ ಕೈಗೆಟುಕದ ಖಾಸಗಿ ಶಿಕ್ಷಣ !- ಒಂದು ಚಿಂತನೆ

  ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಶಿಕ್ಷಣವೂ ಹೊರತಾಗಿಲ್ಲ. ಗಾಂಧೀಜಿಯವರು ಹೇಳುವಂತೆ “ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ”. ಆದರೆ ಇಂದಿನ ಶಿಕ್ಷಣ ಪದ್ಧತಿಯ ಕುರಿತಂತೆ ಬಹುಜನರಿಗೆ ಬೇಸರವಿದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗದ…

 • ಪೋಷಕರನ್ನು ನೋಡಲು ಹೋಗಲಾಗುತ್ತಿಲ್ಲ ….

  ಉತ್ತರ ಕರ್ನಾಟಕ ಭೀಕರ ಪ್ರವಾಹದ ಸುಳಿಗೆ ಅಲ್ಲಿನ ಬಹುತೇಕ ಎಲ್ಲಾ ಜನ ಸಾಮಾನ್ಯರ ಬದುಕು ಹೈರಾಣಾಗಿದೆ. ಪ್ರವಾಹದ ಹೊಡೆತಕ್ಕೆ ಬಡವ-ಬಲ್ಲಿದ, ಜನ ನಾಯಕರು, ಸ್ಟಾರ್‌ಗಳು, ಜನಸಾಮಾನ್ಯರು ಎಂಬ ಯಾವ ಬೇಧ-ಭಾವವೂ ಇಲ್ಲದೆ ಎಲ್ಲರೂ ನಲುಗಿ ಹೋಗಿದ್ದಾರೆ. ಇದಕ್ಕೆ ದಕ್ಷಿಣ…

ಹೊಸ ಸೇರ್ಪಡೆ