CONNECT WITH US  

ಜನರನ್ನು ಮೆಚ್ಚಿಸಲು ನಿರಂತರ ಪ್ರಯತ್ನಿಸುವವರಿಗೇ ದುಗುಡ, ಒತ್ತಡ, ಖನ್ನತೆ ಕಾಡುತ್ತದೆ.

ಜೀವನದಲ್ಲಿ ಗೆಲ್ಲಲು ಸುಲಭ ಹಾದಿಗಳು ಇಲ್ಲ. ಪರಿಶ್ರಮವೇ ಯಶಸ್ಸಿನ ಗುಟ್ಟು.

ಯಶಸ್ಸಿಗೆ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ ಆ ತ್ಯಾಗಗಳು ನಿಮ್ಮ ಕುಟುಂಬದವರಿಗೆ ಹಾನಿಮಾಡದಂತೆ ಇರಬೇಕು.

ಗೆಲ್ಲುವ ಛಲ ಅಧಿಕವಿದ್ದವನಿಗೆ ಸೋಲಿನ ನೋವು ಹೆಚ್ಚು ಬಾಧಿಸುವುದಿಲ್ಲ.

ಸಾಗರ ದಾಟಲು ಬಯಸುವವನು ದೋಣಿಯೇರಬೇಕು, ತೀರದಲ್ಲಿ ನಿಂತು ಕನಸು ಕಂಡರೆ ಆಗದು.

ನಿಮಗೆ ಅತಿ ಹೆಚ್ಚು ಸವಾಲುಗಳು ಎದುರಾಗುತ್ತಿವೆ ಎಂದರೆ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ.

ಇನ್ನೊಬ್ಬರಂತಾಗಲು ಪ್ರಯತ್ನಿಸದಿರಿ. ಅದೆಂದಿಗೂ ಸಾಧ್ಯವಿಲ್ಲ. ನಿನ್ನೆಗಿಂತ ಇಂದಿಗೆ ಉತ್ತಮರಾಗಲು ಬಯಸಿ.

ನಿಮ್ಮ ಪ್ರಯತ್ನ ಅತ್ಯುತ್ತಮವಾಗಿರಲಿ. ಇಂದು ಬಿತ್ತಿದ್ದನ್ನೇ ನಾಳೆ ಬೆಳೆಯುತ್ತೀರಿ.

ಒಬ್ಬನೇ ಬೆಳಕಿನಲ್ಲಿ ನಡೆಯುವುದಕ್ಕಿಂತ, ನಂಬಿದವರ ಜೊತೆ ಕತ್ತಲಲ್ಲಿ ಕೈಹಿಡಿದು ನಡೆಯುವುದು ಉತ್ತಮ.

ಪ್ರೀತಿಯೇ ಪರಮೋಚ್ಚ ಗುಣವಾಗಲಿ. ನಿಮ್ಮ ಸುತ್ತಲಿರುವವರಿಗೆ ಪ್ರೀತಿ ಹಂಚಿ.

ಮುಜುಗರವಾಗಬಹುದು ಎಂಬ ಹಿಂಜರಿಕೆಯೇ ಅನೇಕ ಸಂಭಾವ್ಯ ಸಾಧನೆಗಳಿಗೆ ಸಮಾಧಿ ಕಟ್ಟಿಬಿಡುತ್ತದೆ. 

ನಮ್ಮ ಬದುಕು ನಮ್ಮ ನಿತ್ಯ ಯೋಚನೆ ಮತ್ತು ವರ್ತನೆಗಳ ಒಟ್ಟಾರೆ ರೂಪವಷ್ಟೆ

ಪ್ರತಿ ಮುಂಜಾವೂ ನಿಮ್ಮ ಇಡೀ ದಿನದ ಕಾರ್ಯಚಟುವಟಿಕೆಗಳಿಗೆ ಸಿದ್ಧತೆಯ ಸಮಯವಾಗಲಿ.

ಬೆಳಕನ್ನು ಹರಡಲು ಇರುವುದು ಎರಡೇ ವಿಧಾನ: ಮೊಂಬತ್ತಿಯಾಗುವುದು ಅಥವಾ ಬೆಳಕನ್ನು ಪ್ರತಿಫ‌ಲಿಸುವ
ಕನ್ನಡಿಯಾಗುವುದು.

ಜೀವನದಲ್ಲಿ ಸುಖಕ್ಕಿಂತ ಕಷ್ಟವೇ ಹೆಚ್ಚಿರುತ್ತದೆ. ನೋವನುಭವಿಸಿದಾಗಲೇ ನಲಿವಿನ ಸುಖ ತಿಳಿಯುತ್ತದೆ.

ಎಲ್ಲರೂ ಕನಸು ಕಾಣುತ್ತಾರೆ, ಆದರೆ ಕನಸನ್ನು ನನಸು ಮಾಡಿಕೊಳ್ಳುವ ಪರಿಶ್ರಮ ಕೆಲವರಿಂದಲೇ ಸಾಧ್ಯ.

ಸತ್ಯ ಸೂರ್ಯನಂತೆ. ಸ್ವಲ್ಪ ಕಾಲ ಮರೆಮಾಚಬಹುದು.ಆದರೆ ಅದರ ಪ್ರಖರತೆ ತಡೆಯಲು ಸಾಧ್ಯವಿಲ್ಲ.

ನೀವು ಕೈಗೊಳ್ಳುವ ಕೆಲಸಗಳಲ್ಲಿ ಪೂರ್ಣ ಶ್ರಮ-ಶ್ರದ್ಧೆಯಿರಲಿ. ಇಂದು ಬಿತ್ತಿದ್ದನ್ನೇ ನಾಳೆ ಬೆಳೆಯುತ್ತೀರಿ.

ಹಲವು ಬಾರಿ ನಿಮಗೆ ಎದುರಾಗುವ ಕೆಟ್ಟ ಸಮಯವೇ ಸುಂದರ ಜೀವನಕ್ಕೆ ದಾರಿದೀಪವಾಗುತ್ತದೆ. 

ತಾಳ್ಮೆ ಕಹಿಯಾದರೂ ಅದರ ಫ‌ಲ ಮಾತ್ರ ಸಿಹಿಯಾಗಿಯೇ ಇರುತ್ತದೆ.

Back to Top