smart city

 • ಇನ್ನು ನಗರದ ಸರಕಾರಿ ಕಚೇರಿಗಳಿಗೆ ಎಲ್‌ಇಡಿ ಬಲ್ಬ್ ಮೆರುಗು!

  ಮಹಾನಗರ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಗರದ ಸರಕಾರಿ ಕಚೇರಿಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ನಗರದ ರಸ್ತೆಗಳು, ಸರಕಾರಿ ಕಚೇರಿಗಳಿಗೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿ ವಿದ್ಯುತ್‌ ಉಳಿತಾಯ ಮಾಡುವ ಪರಿಕಲ್ಪನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಳವಡಿಸಲಾಗಿತ್ತು. ಅದರಂತೆ ಮೊದಲ…

 • ಮಳೆ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳಲಿ

  ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದರೆ, ಇನ್ನು ಕೆಲವು ಮಂದಗತಿಯಲ್ಲಿದೆ. ಅಲ್ಲದೇ ಮತ್ತೆ ಕೆಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿದೆ. ಈ ಬಗ್ಗೆ ಉದಯವಾಣಿ ಸುದಿನ ಆಗಾಗ ವರದಿ ಪ್ರಕಟಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು…

 • ಸಂಚಾರ ನಿರ್ವಹಣೆ: ವ್ಯೂಹಾತ್ಮಕ ಕಾರ್ಯಯೋಜನೆ ರಚನೆಯಾಗಲಿ

  ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಎಂಬುದು ನಿತ್ಯದ ಕಿರಿಕಿರಿ ಎಂಬಂತಾಗಿದೆ. ಇದಕ್ಕಾಗಿ ಸಾಕಷ್ಟು ಪರ್ಯಾಯ ಯೋಜನೆಗಳನ್ನು ಕೈಗೊಂಡಿದ್ದರೂ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಅಳವಡಿಸಿರುವ ಅಡಾಪ್ಟಿವ್‌ ಸಿಗ್ನಲ್ಗಳನ್ನು ಮಂಗಳೂರಿನಲ್ಲೂ ಅಳವಡಿಸಿದರೆ ಇಲ್ಲಿನ ಟ್ರಾಫಿಕ್‌…

 • ರಸ್ತೆ ಬದಿಗಳಲ್ಲಿ ಹಳೆ ವಾಹನ ನಿಲುಗಡೆ ನಿಷೇಧವಾಗಲಿ

  ನಗರದ ವಿವಿಧ ಭಾಗಗಳಲ್ಲಿ ಹಳೆಯ ಉಪಯೋಗಿಸದ ತುಕ್ಕು ಹಿಡಿದ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗಿದ್ದು, ಇದು ನಗರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಎಂಬಂತಿದೆ. ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಸೇರಿರುವ ಮಂಗಳೂರು ನಗರ, ಸ್ವಚ್ಛ ಸುಂದರ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ….

 • ಹೈಟೆಕ್‌ ಬಸ್‌ ನಿಲ್ದಾಣ ರೆಡಿ

  ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್‌ ಸಿಟಿಯಾಗಿ ಬದಲಾಗುತ್ತಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಬಸ್‌ ನಿಲ್ದಾಣಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ನಗರದಲ್ಲಿ ಒಟ್ಟು 3.58 ಕೋಟಿ ವೆಚ್ಚದಲ್ಲಿ…

 • ಪ್ರವಾಸಿಗರಿಗಾಗಿಯೇ ಬರಲಿ ವಿಶೇಷ ಸಾರಿಗೆ

  ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರ ಹಾಗೂ ಸುತ್ತ ಮುತ್ತಲಿನ ಭಾಗಗಳಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.ಹೀಗಾಗಿ ಸಾಕಷ್ಟು ದೇಶ,ವಿದೇಶಿ ಪ್ರವಾಸಿಗರು ನಿತ್ಯವೂ ಎಂಬಂತೆ ನಮ್ಮ ನಗರಕ್ಕೆ ಬರುತ್ತಿದ್ದಾರೆ.ಆದರೆ ಇಲ್ಲಿಯ ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುವುದು ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಬಸ್‌…

 • ಸ್ಮಾರ್ಟ್‌ ನಗರಿಯಲ್ಲಿ ತಾಂತ್ರಿಕ ಅಭಿವೃದ್ಧಿಯಾಗಲಿ

  ಆಧುನಿಕತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ತಾಂತ್ರಿಕತೆಯೂ ಬೆಳೆಯುತ್ತಿದೆ. ದೇಶದ ಪ್ರಧಾನಿಯೂ ನಾವು ಸ್ಮಾರ್ಟ್‌ ಆಗಿರಬೇಕು ಎನ್ನುವ ಕಾರಣಕ್ಕೆ ಕ್ಯಾಸ್‌ಲೆಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾದರು. ಆದರೆ ನಗರದ ಬಹುತೇಕ ಇಲಾಖೆಗಳಲ್ಲಿ ಆನ್‌ಲೈನ್‌ ವ್ಯವಸ್ಥೆಗಳು ಇನ್ನೂ ಜಾರಿಗೆ ಬಂದಿಲ್ಲ….

 • ಮಂಗಳೂರು ವಲಯ ರೈಲ್ವೇ ತ್ರಿಶಂಕು ಸ್ಥಿತಿಯಿಂದ ಮುಕ್ತವಾಗಲಿ

  ಅಭಿವೃದ್ಧಿ,ಸಂಪರ್ಕ ಸಾರಿಗೆ ವಿಚಾರದಲ್ಲಿ ಹಲವಾರು ರೀತಿಯ ತೊಡಕುಗಳು ಎದುರಾಗುತ್ತಿರುವುದರಿಂದ ಮೂರು ವಿಭಾಗಗ ಳನ್ನು ಹೊಂದಿರುವ ಮಂಗಳೂರು ವಲಯ ರೈಲ್ವೇಯನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಬೇಕು ಎಂಬ ಬೇಡಿಕೆ ಹಲ ವಾರು ವರ್ಷಗಳಿಂದ ಇದೆ.ಆದರೆ ಇದಕ್ಕೆ ಕೆಲವು ತೊಡಕುಗ ಳಿವೆ. ಇದನ್ನು ಸರಿಪಡಿಸುವತ್ತ ಅಥವಾ ಇದಕ್ಕೆ…

 • ಸ್ವಿಮ್ಮಿಂಗ್‌ ಹಾಟ್‌ಸ್ಪಾಟ್‌ ನಿರ್ಮಾಣವಾಗಲಿ

  ನಗರಗಳಲ್ಲಿ ನೀರಿನ ಸಮಸ್ಯೆ ತಲೆ ದೋರದಂತೆ ಅನೇಕ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಯಾಕೆಂದರೆ ನಗರದ ಆವಶ್ಯಕತೆಗಳು ಹೆಚ್ಚಾಗಿರುತ್ತವೆ. ಜತೆಗೆ ಅಭಿವೃದ್ಧಿಯ ನೆಲೆಯಲ್ಲಿ ಇದು ಮುಖ್ಯವಾಗಿರುತ್ತದೆ. ಆದರೆ ನೀರಿನ ಸಮಸ್ಯೆ ಎಂಬುದು ನಗರದ ಜನರು ಮಾತ್ರವಲ್ಲ ಆಡಳಿತವನ್ನೂ ಹೈರಾಣಾಗಿಸಿ ಬಿಡುತ್ತದೆ….

 • ಸ್ಥಳ ಎಲ್ಲೇ ಆಗಲಿ.. ಮಂಗಳೂರಿಗೆ ಕೇಂದ್ರ ಬಸ್‌ ನಿಲ್ದಾಣ ಬರಲಿ

  ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ ನಿಲ್ದಾಣ ಸುಮಾರು ಮೂರು ದಶಕಗಳ ಪ್ರಸ್ತಾವನೆ. ಬಹಳಷ್ಟು ಸಭೆಗಳು ನಡೆದಿವೆ, ಚರ್ಚೆಗಳು ಆಗಿವೆ. ಉದ್ದೇಶಿತ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಆನೇಕ ಪ್ರದೇಶಗಳನ್ನೂ ಗುರುತಿಸಲಾಗಿದೆ. ಕಡೆಗೆ ಪಂಪ್‌ವೆಲ್‌ ಬಳಿ ಸ್ಥಳವೂ ಆಯ್ಕೆಯಾಯಿತು. ವಿನ್ಯಾಸಗಳು ರಚನೆಯಾದವು….

 • ಪಾರಂಪರಿಕ ತಾಣ ಬಾದಾಮಿಗೆ ಮಿಡಿಯದ ‘ಹೃದಯ’

  ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ ‘ಹೃದಯ’ ಯೋಜನೆಗೆ ಆಯ್ಕೆಯಾಗಿದ್ದ ರಾಜ್ಯದ ಏಕೈಕ ಪಾರಂಪರಿಕ ತಾಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ ಬಾದಾಮಿಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಸಂಪೂರ್ಣ ನನೆಗುದಿಗೆ ಬಿದ್ದಿದ್ದು, ಈ ಮೂಲಕ ರಾಜ್ಯದ ‘ಸ್ಮಾರ್ಟ್‌ ಸಿಟಿ’ಗಳ ಸ್ಥಿತಿಯೇ…

 • ಸ್ಮಾರ್ಟ್‌ಸಿಟಿ ಅನುದಾನ ಬಳಸದ್ದಕ್ಕೆ ಬಿಜೆಪಿ ಆಕ್ಷೇಪ

  ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಸ್ಮಾರ್ಟ್‌ಸಿಟಿ’ ಯೋಜನೆಗೆ ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ಬುಧವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹಾಗೂ…

 • ಸ್ಮಾರ್ಟ್‌ ಸಿಟಿ ಸಮಗ್ರ ಮಾಹಿತಿಗೆ ವೆಬ್‌ಸೈಟ್‌

  ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾಮಾನ್ಯ ಜನರಿಗೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಿಗೆ ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಮಾಹಿತಿ…

 • ಕಸಾಯಿಖಾನೆಗೆ ಅನುದಾನ ಸಲಹೆ ಮಾತ್ರ: ಖಾದರ್‌

  ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ವಚ್ಛ ನಗರ ಆಶಯದಂತೆ ಮಂಗಳೂರಿನ ಕಸಾಯಿಖಾನೆ ಸ್ವಚ್ಛವಾಗಿಡಲು ಪೂರಕ ಅಭಿವೃದ್ಧಿ ಕುರಿತಂತೆ ಸಲಹೆ ಮಾತ್ರ ನೀಡಿದ್ದೇನೆ. ಇದಕ್ಕೆ ಅನುಮತಿ ಇನ್ನೂ ದೊರಕಿಲ್ಲ. ಇದು ಬೇಡವೆನ್ನುವುದಾದರೆ ಬಿಜೆಪಿ ಜನಪ್ರತಿನಿಧಿಗಳು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ಈ…

 • ಸ್ಮಾರ್ಟ್‌ ಸಿಟಿ: ಕನಸಿನ ಯೋಜನೆಗಳಿಗೆ ಕತ್ತರಿ

  ಬೆಂಗಳೂರು: ಅಧಿಕಾರ ಅವಧಿ ಮುಗಿಯುತ್ತಾ ಬಂದರೂ ಜಾರಿಯಾಗದ “ಸ್ಮಾರ್ಟ್‌ ಸಿಟಿ’ಯ ಕನಸಿನ ಯೋಜನೆಗಳನ್ನು ಕೈಬಿಟ್ಟು, ಅಲ್ಪಾವಧಿಯಲ್ಲಿ ಅನುಷ್ಠಾನಗೊಳಿಸಬಹುದಾದ ಕಾರ್ಯಕ್ರಮಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸೋಮವಾರದೊಳಗೆ ಪರಿಷ್ಕೃತ ಯೋಜನಾ ಪಟ್ಟಿ ಸಲ್ಲಿಸಲು ಕರ್ನಾಟಕ ಸೇರಿದಂತೆ…

 • ಸ್ಮಾರ್ಟ್‌ಸಿಟಿ ಅನುಷ್ಠಾನ ವಿಳಂಬ: ಅಸಹಕಾರ ಸರಿಯಲ್ಲ

  ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಸ್ಮಾರ್ಟ್‌ಸಿಟಿ. ದೇಶದ ನೂರು ನಗರಗಳನ್ನು ಮಾದರಿ ನಗರಗಳನ್ನಾಗಿ ರೂಪಿಸುವುದು ಈ ಯೋಜನೆ ಹಿಂದಿನ ಆಶಯ. ಸ್ಮಾರ್ಟ್‌ಸಿಟಿಗಳೆಂದರೆ ಹೆಸರೇ ಹೇಳುವಂತೆ ತಾಂತ್ರಿಕವಾಗಿ ಬಹಳ ಅಭಿವೃದ್ಧಿ ಹೊಂದಿದ ಸುಸ್ಥಿರ ನಗರಗಳು. ಶುದ್ಧ ಕುಡಿಯುವ ನೀರು, ಸ್ವತ್ಛತೆ,…

 • ವಿದ್ಯುತ್‌, ಪಡಿತರವಿಲ್ಲ; ಚಿಮಣಿಯಲ್ಲಿ  ಓದು

  ಮಂಗಳೂರು: ಬಿರುಸು ಮಳೆ, ಸೂರಿಗೊಂದು ಜೋಪಡಿ, ಅದರೊಳಗೆ ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು. ಇದು ಸ್ಮಾರ್ಟ್‌ ಸಿಟಿ ಮಂಗಳೂರಿನ ಹೃದಯ ಭಾಗದಲ್ಲೇ ಇದ್ದು ಯಾವುದೇ ಸೌಲಭ್ಯವಿಲ್ಲದೆ ವಂಚಿತರಾದ  2 ಕೊರಗ ಕುಟುಂಬಗಳ ವ್ಯಥೆ. ಹಲವಾರು ಸರಕಾರಗಳು ಬಂದು ಹೋದರೂ, ಸಮಾಜ…

 • ಕೃತಕ ನೆರೆ, ಚರಂಡಿ ಸಮಸ್ಯೆ ಎದುರಿಸಲು ಸಿದ್ಧತೆ 

  ಮಹಾನಗರ: ಮಳೆಗಾಲ ಶುರುವಾಯಿತು ಅಂದರೆ ಸ್ಮಾರ್ಟ್‌ ಸಿಟಿ ಎನಿಸಿಕೊಂಡಿರುವ ಮಂಗಳೂರಿನಂಥ ನಗರದಲ್ಲಿಯೂ ಕೃತಕ ನೆರೆ ಭೀತಿ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಪ್ರವೃತ್ತಗೊಂಡಿರುವ ಮಹಾನಗರ ಪಾಲಿಕೆಯು ಚರಂಡಿಗಳ ಹೂಳೆತ್ತುವ ಕಾರ್ಯ ನಡೆಸುತ್ತಿದೆ. ನಗರದಲ್ಲಿರುವ ದೊಡ್ಡ ತೋಡುಗಳಲ್ಲಿ ಜೆಸಿಬಿ ಬಳಸಿ…

 • ನಮ್ಮ ನಗರಗಳಿಗೆ ಗಡಿ ಗುರುತು ಮಾಡಿಕೊಳ್ಳೋಣ

  ನಾಲ್ಕು ಜತೆ ಎತ್ತುಗಳು ಒಂದು ನಗರದ ಗಡಿಯನ್ನು ನಿರ್ಧರಿಸಿದ್ದವೆಂದರೆ ಎಷ್ಟು ಸೋಜಿಗದ ಸಂಗತಿ. ಅವುಗಳಿಗೆ ಇದ್ದ ನಗರದ ಆರೋಗ್ಯದ ಬಗೆಗಿನ ಕಾಳಜಿ ಇಂದು ನಮಗಿಲ್ಲ. ನಮಗೆ ನಗರವೆಂದರೆ ಬೆಳೆಯುತ್ತಲೇ ಇರಬೇಕು! ನಮಗೆ ನಮ್ಮ ನಗರಗಳ ಎಲ್ಲೆಗಳನ್ನು ಗುರುತಿಸಲಿಕ್ಕೇ ಮನಸ್ಸಿಲ್ಲ. ಬೆಂಗಳೂರಿನ…

 • ಸ್ಮಾರ್ಟ್‌ಸಿಟಿ: 4 ಮಹತ್ವದ ಯೋಜನೆಗಳಿಗೆ ಟೆಂಡರ್‌

  ಮಂಗಳೂರು: “ಮಂಗಳೂರು ಸ್ಮಾರ್ಟ್‌ ಸಿಟಿ’ಯ 65 ಯೋಜನೆಗಳ ಪೈಕಿ 4 ಮಹತ್ವದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ತಿಳಿಸಿದ್ದಾರೆ. ಪಾಲಿಕೆಯಲ್ಲಿ ಬುಧವಾರ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ವಿವರ…

ಹೊಸ ಸೇರ್ಪಡೆ