yakshagana

 •  ಗೋಕುಲ ಕಲಾವೃಂದ ಕಲಾವಿದೆಯರಿಂದ ಯಕ್ಷಗಾನ ಮತ್ತು ತಾಳಮದ್ದಳೆ

  ಸಯಾನ್‌ ಗೋಕುಲದ ಗೋಕುಲ ಕಲಾವೃಂದದ  ಮಹಿಳಾ ವಿಭಾಗದವರಿಂದ ಗುರು ಶೇಣಿ ಶ್ಯಾಮ್‌ ಭಟ್‌ ಅವರ ಮಾರ್ಗದರ್ಶನ ಹಾಗೂ  ಗೀತಾ ಎಲ್‌. ಭಟ್‌ ಅವರ ನಿರ್ದೇಶನದಲ್ಲಿ ಊರಿನ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆಯು ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು….

 • ಯಕ್ಷಗಾನದಲ್ಲಿ ಸ್ತ್ರೀ ಪಾತ್ರಧಾರಿಯಾಗಿ 25 ವರ್ಷ!

  ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿದ ಪ್ರತಿಭಾನ್ವಿತ ಯಕ್ಷಗಾನ ಕಲಾವಿದ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರು ಗೆಜ್ಜೆ ಕಟ್ಟಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಲಾಧರ ಯಕ್ಷ ಬಳಗ ಜಲವಳ್ಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಕಲ್ಯಾಣಮಸ್ತು’ (ಕನಕಾಂಗಿ-ರತಿ) ಪ್ರಸಂಗ ಜರುಗಲಿದೆ….

 • ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷ ಸಂಕ್ರಾಂತಿ

  ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ “ರಾಮ ನಿರ್ಯಾಣ’, “ರಾಜಾ ವಿಕ್ರಮ’ ಮತ್ತು “ರಾಮಬಂಟ ಜಾಂಬವ’ ಪ್ರಸಂಗಗಳು ಯಕ್ಷ ಪ್ರೇಮಿಗಳನ್ನು ರಂಜಿಸಲು ಬರುತ್ತಿವೆ. ಸಾಮಾನ್ಯವಾಗಿ ಮೇ ತಿಂಗಳು ಕಳೆಯುತ್ತಿದ್ದಂತೆ ಯಕ್ಷಗಾನ ಕಲಾವಿದರು…

 • ಪರದೆ ಬಿಟ್ಟು ಎಲ್‌ಇಡಿ ಸ್ಕ್ರೀನ್‌ ಹಾದಿಯತ್ತ ಯಕ್ಷಗಾನ!

  ಜಗತ್ತು ಡಿಜಿಟಲೀಕರಣದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ, ಸಾಂಪ್ರದಾಯಿಕ ಜನಪದ ಕಲೆಗಳೂ ಬದಲಾವಣೆಗಳತ್ತ ಮುಖ ಮಾಡಿವೆ. ಯಕ್ಷಗಾನವೂ ಕೂಡ ಆಧುನಿಕ ಕಾಲಘಟ್ಟದಲ್ಲಿ ತನ್ನನ್ನು ತಾನು ಮರು ಅನ್ವೇಷಿಸಿಕೊಳ್ಳುತ್ತಾ ಸಾಗುತ್ತಿದೆ. ದೊಂದಿ ಬೆಳಕಿನಲ್ಲಿ, ಭಾರವಾದ ಅಟ್ಟೆಗಳನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಕರಕುಶಲ ವೇಷಭೂಷಣಗಳನ್ನು…

 • ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಶಿಕ್ಷಣ

  ಉಡುಪಿ: ಈ ಶೈಕ್ಷಣಿಕ ವರ್ಷದಿಂದ ಹಾವೇರಿಯ ಜನಪದ ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಬಯಲಾಟ ಶಿಕ್ಷಣ ಆರಂಭಿಸ‌ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅವರು ಮಾತನಾಡಿದರು….

 • ಹೊರಗಡೆ ಯಕ್ಷ ಭಾಷಣ ಮಾಡುವೆ, ಇಲ್ಲಲ್ಲ

  ಉಡುಪಿ: ಯಕ್ಷಗಾನದ ಕುರಿತು ದಿಲ್ಲಿ, ನೇಪಾಲ, ವಿಶ್ವಭಾರತಿ ವಿಶ್ವವಿದ್ಯಾನಿಲಯಗಳಲ್ಲಿ ಮಾತನಾಡುವೆ. ಆದರೆ ಇಲ್ಲಿ ನಾನು ಮಾತ ನಾಡುವುದಿಲ್ಲ. ಯಕ್ಷಗಾನವನ್ನು ನನಗಿಂತ ಹೆಚ್ಚು ತಿಳಿದ ಅನೇಕ ಮಂದಿ ಇಲ್ಲಿದ್ದಾರೆ… ಇದು ದಿಲ್ಲಿ ಜವಾಹರಲಾಲ್‌ ನೆಹರೂ ವಿ.ವಿ.ಯ ಕನ್ನಡ ಪೀಠದ ಪ್ರಾಧ್ಯಾಪಕ,…

 • ಶ್ಯಾಮ ಭಟ್‌ಗೆ ಗೋವಿಂದ ಕಲಾಧರ್ಮ ಗೌರವ 

  ಬೆಳ್ತಂಗಡಿ: ಗೋವಿಂದ ಭಟ್ಟರು ಸರ್ವಾಂಗ ಸುಂದರ ಕಲಾವಿದ. ಯಕ್ಷಗಾನದ ಎಲ್ಲ ಕ್ಷೇತ್ರಗಳ ಆಳ ಅರಿವು ಬಲ್ಲವರು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನುಡಿದರು. ಅವರು ರವಿವಾರ ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ…

 • ಯಕ್ಷ ಕಾವ್ಯ ಹಾಡಿತು…ಆಜೇರು ಹುಡುಗಿಯು ಅಜೇಯ ಭಾಗವತಿಕೆ

  ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. 400ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕಾವ್ಯಶ್ರೀ ಹಾಡುಗಾರಿಕೆ ಮಾಡಿದ್ದಾಳೆ… ಯಕ್ಷಗಾನದಲ್ಲಿ ಭಾಗವತಿಕೆ ಪ್ರಮುಖ ಭಾಗ. ಇಲ್ಲಿ ಸುಶ್ರಾವ್ಯವಾಗಿ ಹಾಡುವಿಕೆಯ ಮೇಲೆ ಯಕ್ಷಗಾನ, ಪ್ರಸಂಗದ ಯಶಸ್ಸು ನಿಂತಿರುತ್ತದೆ. ಈ ಕ್ಷೇತ್ರದಲ್ಲಿ…

 • ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ:ತವರೂರಿನಲ್ಲಿ ಯಕ್ಷಗಾನ 

  ಮುಂಬಯಿ: ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಕಲಾ ತಂಡದಿಂದ ತವರೂರಿನಲ್ಲಿ ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನಡೆಯಿತು. ಕುಂದಾಪುರದ ಇಡೊರಿಯಲ್ಲಿ ಜಯರಾಮ್‌ ಶೆಟ್ಟಿ ಅವರ ಆಯೋಜನೆಯಲ್ಲಿ ಈ ಕಾರ್ಯಕ್ರಮವು ನಡೆಯಿತು. ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಇದರ…

 • ಯಕ್ಷಗಾನದ ಬದುಕು;ಕಲೆಗೆ ಜಾತಿ ಇಲ್ಲ; ಧರ್ಮವಿಲ್ಲ…

  ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಯಕ್ಷಗಾನ ಪ್ರಸಿದ್ಧ ಕಲೆ. ಯಕ್ಷಗಾನವನ್ನು ಕಲಿಯಬೇಕು, ರಂಗಸ್ಥಳದಲ್ಲಿ ಮಿಂಚಬೇಕು ಎಂದು ಕನಸು ಕಾಣುವವರ ಸಂಖ್ಯೆ ಕಡಿಮೆ ಇಲ್ಲ. ಈಗ ಯಕ್ಷಗಾನದ ಹಿನ್ನೆಲೆ ಇಟ್ಟುಕೊಂಡು ಸಿನಿಮಾವೊಂದು ತಯಾರಾಗಿದೆ. ಅದು “ಬಣ್ಣ ಬಣ್ಣದ ಬದುಕು’. ಈಗ…

 • ಒಂದು ಕೊಂಬಿನ ಕಥೆ: ಯಕ್ಷ ಮಹಿಷನಿಗೆ ಕೊಂಬು ಬಂದ ಬಗೆ…!

  ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನದಲ್ಲಿ ಬಣ್ಣಬಣ್ಣದ ವೇಷಗಳೇ ಒಂದು ಆಕರ್ಷಣೆಯಾದರೆ ಇನ್ನು ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಬರುವ ಮಹಿಷಾಸುರ ಪಾತ್ರದ ಗತ್ತು ವೈಭವದ ತೂಕವೇ ಬೇರೆ. ಇಡೀ ಪ್ರಸಂಗದಲ್ಲಿ ಜನರ ಭಾವನೆಯಲ್ಲಿ ಉಳಿದೆಲ್ಲ ಪಾತ್ರಗಳಿಗಿಂತ ದೇವಿ ಹಾಗೂ ಮಹಿಷಾಸುರ…

 • ಪಟ್ಲ ಭಾಗವತಿಕೆ; ಮನರಂಜಿಸಿದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ

  ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಸಾರಥ್ಯದಲ್ಲಿ ಹಾಗೂ ಪದಾಧಿಕಾರಿಗಳ ಪ್ರೋತ್ಸಾಹ, ಕಾರ್ಯಕಾರಿ ಸಮಿತಿಯ ಸದಸ್ಯರ ಉತ್ಸುಕತೆಯಿಂದ ರವೀಂದ್ರನಾಥ್‌ ಭಂಡಾರಿ ಅವರ ನೇತೃತ್ವದಲ್ಲಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರ ಸಂಚಾಲಕತ್ವದಲ್ಲಿ ಇತ್ತೀಚೆಗೆ ಸಂಘದ ಸಭಾಗೃಹದಲ್ಲಿ…

 • ತಮಿಳು ಮೂಲದ ಯಕ್ಷ ಕಲಾವಿದನಿಗೆ “ಸೂರು ಯೋಜನೆ’

  ಉಡುಪಿ: ಹಾಸ್ಯರಂಗದಲ್ಲಿ ಉತ್ತುಂಗಕ್ಕೇರಿದವರ ಜೀವನ ನೋವಿನಿಂದ ಕೂಡಿತ್ತೆಂಬುದಕ್ಕೆ ಹಲವು ಉದಾಹರ‌ಣೆಗಳಿವೆ. ಯಕ್ಷಗಾನವೂ ಈ ಪರಿಸ್ಥಿತಿಗೆ ಹೊರತೇನಲ್ಲ. ಅನೇಕ ಯಕ್ಷ ಕಲಾವಿದರ ಬದುಕು ನಿಜಜೀವನದಲ್ಲಿ ಬಡತನದಿಂದ ಕೂಡಿರುತ್ತದೆಂಬುದು ಒಪ್ಪಿಕೊಳ್ಳಲೇಬೇಕಾದ ಕಟುಸತ್ಯ. ಅಂತಹವರಲ್ಲಿ  ತಮಿಳುನಾಡು ಮೂಲದ ಯಕ್ಷ ಕಲಾವಿದ ಅರುಣ್‌ ಕುಮಾರ್‌…

 • ಸಿಬಿಡಿ ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಂಘ: ಯಕ್ಷಗಾನ,ಸಮ್ಮಾನ

  ನವಿ ಮುಂಬಯಿ: ಸದ್ಗುರು ನಿತ್ಯಾನಂದರು ನಂಬಿದವರನ್ನು ಎಂದಿಗೂ ಕೈಬಿಟ್ಟವರಲ್ಲ. ಅವರ ಅನುಗ್ರಹದಿಂದ ನೂರಾರು ಮಂದಿ ಯಶಸ್ಸನ್ನು ಕಂಡ‌ವರಿದ್ದಾರೆ. ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ನಮ್ಮ ಮೂಲ ಪರಂಪರೆಯನ್ನು ಉಳಿಸಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ದೈವ-ದೇವರುಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಿದಾಗ ನಮ್ಮ…

 • “ಸಂಸ್ಕೃತಿಯ ಪ್ರಸರಣಕ್ಕೆ ಯಕ್ಷಗಾನದ ಕೊಡುಗೆ ಅಪಾರ’

  ಉಪ್ಪಿನಂಗಡಿ : ಭಾರತೀಯ ಸಂಸ್ಕೃತಿಯ ಪ್ರಸರಣಕ್ಕೆ ಮತ್ತು ಉಳಿವಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನದಲ್ಲಿ  ದುಡಿಯುವ ಕಲಾವಿದರ ಬದುಕು ಬೆಳೆಗಿಸುವಲ್ಲಿ ಸಮಾಜದ ಪಾತ್ರ ಮಹತ್ತರದ್ದಾಗಿದೆ ಎಂದು ಖ್ಯಾತ ಯಕ್ಷಗಾನ ಭಾಗವತರಾದ ಸತೀಶ್‌ ಪಟ್ಲ  ತಿಳಿಸಿದರು. ಅವರು ಉಪ್ಪಿನಂಗಡಿಯ…

 • “ಯಕ್ಷಗಾನ ಕಲೆ ಚೌಕಟ್ಟನ್ನು ಮೀರದಿರಲಿ’

  ಸುಳ್ಯ:  ನನ್ನ ಅಭಿನಯವನ್ನು ರಸಿಕರು ಮೆಚ್ಚುತ್ತಾರೆ. ಪ್ರೇಕ್ಷಕರಿಗಾಗಿ ನಾನಿದ್ದೇನೆ.  ತನಗೆ ಅಭಿಮಾನಿಗಳ ದೊಡ್ಡ ಬಳಗ ಇದೆ. ತಾನು ಮಾಡಿದ್ದೇ ಕಲೆ ಎನ್ನುವ ಅಹಂ ಕಲಾವಿದರಲ್ಲಿ ಉಂಟಾದರೆ ಕಲೆಗೆ ಅಪಾಯ ಕಟ್ಟಿಟ್ಟದ್ದು. ಕಲೆಗೆ ತನ್ನದೇ ಆದ ಚೌಕಟ್ಟು ಇದೆ. ಅದನ್ನು…

 • ತೆಂಕು ಮತ್ತು ಬಡಗುತಿಟ್ಟುಗಳ ವೈಭವಯುತ ಯಕ್ಷಗಾನ ಪ್ರದರ್ಶನ

  ಬೆಂಗಳೂರಿನ ಕರ್ನಾಟಕ ಕಲಾ ಸಂಪದ ಕಲಾತಂಡ, ಯಕ್ಷಗಾನ ಕಲಾವಿದ, ಕಲಾಪೋಷಕ, ದಿ.ಕರ್ನೂರು ಕೊರಗಪ್ಪ ರೈಯವರ ಸ್ಮರಣಾರ್ಥ, ತೆಂಕು ಮತ್ತು ಬಡಗುತಿಟ್ಟುಗಳ ಪ್ರಖ್ಯಾತ ಕಲಾವಿದರಿಂದ ಅದ್ದೂರಿಯ ಯಕ್ಷಗಾನ ಕೂಡಾಟವನ್ನು ಆಯೋಜಿಸಿದೆ.  ಕರ್ನೂರು ಸುಭಾಷ್‌ ರೈಯವರ ಸಂಯೋಜನೆಯಲ್ಲಿ ಉಭಯ ತಿಟ್ಟುಗಳ ಪ್ರಖ್ಯಾತ…

 • ರಂಗದಲ್ಲೇ ಚಿರನಿದ್ರೆಗೆ ಜಾರಿದ ಯಕ್ಷಕಲಾವಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

  ಬೆಳ್ತಂಗಡಿ: ಯಕ್ಷರಂಗದ ಮಹಿಷಾಖ್ಯನೆಂದೇ ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದ, ಮಹಿಷಾಸುರ ವೇಷಕ್ಕೆ ಒಂದು ನೆಗಳ್ತೆಯನ್ನು ತಂದಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಕಲಾಮಾತೆಯ ಮಡಿಲಲ್ಲಿ ಚಿರನಿದ್ರೆಗೆ ಜಾರಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಕ್ಷಾಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಕಟೀಲು ಸಮೀಪದ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ…

 • ರಂಗಸ್ಥಳದಲ್ಲೇ ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ

  ಮಂಗಳೂರು:  ಕಟೀಲು ಮೇಳದ ಮೇರು ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವ ವೇಳೆಯಲ್ಲೇ  ವೇದಿಕೆಯಲ್ಲೇ ಕುಸಿದು ಇಹಲೋಕ ತ್ಯಜಿಸಿದ್ದಾರೆ.  ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ  ಅರುಣಾಸುರ…

 • ಯಕ್ಷಗಾನದ ಮೇಲೆ “ಉತ್ತರಕಾಂಡ’ ಪ್ರಭಾವ ?

  ಉಡುಪಿ: ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ “ಉತ್ತರ ಕಾಂಡ’ ಕಾದಂಬರಿ ಮುಂದಿನ ದಿನಗಳಲ್ಲಿ ಯಕ್ಷಗಾನ ಅರ್ಥದಾರಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ಅಭಿ…

ಹೊಸ ಸೇರ್ಪಡೆ