CONNECT WITH US  

Hanigarike

ಅಪರೇಶನ್‌ ಕಮಲ
ಮತ್ತೂಮ್ಮೆ ವಿಫ‌ಲ
ಆಗುತ್ತಿದೆ ದೊಡ್ಡ ಜೋಕು
ಇನ್ನಾದರೂ ಹಳೆಯ
ಉಪಕರಣ ಬಿಸಾಕಿ
ತನ್ನಿ ಹೊಸ ಕತ್ತರಿ ಚಾಕು!
 ಎಚ್‌. ಡುಂಡಿರಾಜ್‌

ನೆರೆ ಸಂತ್ರಸ್ತರ ಪಟ್ಟಿಯಲ್ಲಿ
ನನ್ನ ಹೆಸರು ಬರೆದುಕೊಳ್ಳಿ
ಎಲ್ಲರಿಗಿಂತಲೂ ಮೊದಲು ,
ಕಾರಣವೇನು ಗೊತ್ತೇ?
ಮುವ್ವತ್ತನೆ ವಯಸ್ಸಿನಲ್ಲೇ 
ಬಂದಿತ್ತು ನನಗೆ ನೆರೆಗೂದಲು !
...

ಗಡಗಡ ನಡುಗುತ್ತ
ಚಂದ್ರ ಹೇಳುತ್ತಿದ್ದ
ತಾರೆಯ ಬಳಿ ,
ನಮ್ಮ ವೈರಿಗೂ ಬೇಡ
ಚಳಿಗಾಲದಲ್ಲಿ
ರಾತ್ರಿ ಪಾಳಿ ! 
ಎಚ್‌. ಡುಂಡಿರಾಜ್‌

ಯಾವ ನಟನ ಬಳಿ
ಎಷ್ಟು ಚಿನ್ನ ಬೆಳ್ಳಿ
ಸಿಕ್ಕಿದ್ದು ಎಷ್ಟು ಕೋಟಿ?
ಈ ವಿಷಯದಲ್ಲಿ ಈಗ
ಅಭಿಮಾನಿಗಳ ನಡುವೆ
ನಡೆದಿದೆ ಪೈಪೋಟಿ!
ಎಚ್‌.ಡುಂಡಿರಾಜ್‌

ಕಾಂಗ್ರೆಸ್‌ ಮತ್ತು ದಳ
ಒಳಜಗಳ ನಿಲ್ಲಿಸಿವೆ
ಶುರುವಾಗಿದೆ ಹೊರಜಗಳ,
ಕಾಯುತ್ತಿದೆ ಭಾಜಪ
ಉರಿವ ಮನೆಯಿಂದ
ಸೆಳೆದುಕೊಳ್ಳಲು ಗಳ!
ಎಚ್‌. ಡುಂಡಿರಾಜ್‌ 

ಪತ್ತೆ ಮಾಡಿದೆ ಐಟಿ ಇಲಾಖೆ
ನಟ, ನಿರ್ಮಾಪಕರ ಬಳಿ
ಕೋಟಿಗಟ್ಟಲೆ ಕಪ್ಪು ಹಣ,
ಕನ್ನಡ ಚಿತ್ರರಂಗಕ್ಕೆ ಇನ್ನು
ಸ್ಯಾಂಡಲ್‌ ವುಡ್‌ ಅಲ್ಲ
"ಸ್ಯಾಂಡಲ್‌ ದುಡ್‌' ಅನ್ನೋಣ!
 ಎಚ್...

ಕನ್ನಡ ಕೇಳಿ
ಕಿಲಕಿಲ ನಗುವನು
ತೊಟ್ಟಿಲ ಕಂದನು ಕೂಡ
ಕುಂದದ ಸವಿಯ
ಸುಂದರ ನುಡಿಯಿದು
ಧಾರವಾಡದ ಫೇಡ!
 ಎಚ್‌. ಡುಂಡಿರಾಜ್‌
 

ಚೆಲುವನ್ನು ಬಣ್ಣಿಸಲು
ಕವಿಗಳಿಗೆ ಬೇಕು
ಹೂವು, ಹಣ್ಣು, ಬಳ್ಳಿ
ಆದ್ದರಿಂದಲೆ ಈ ಬಾರಿ
ಸಾಹಿತ್ಯ ಸಮ್ಮೇಳನ
ಕೃಷಿವಿದ್ಯಾಲಯದಲ್ಲಿ!
 ಎಚ್‌. ಡುಂಡಿರಾಜ್‌
 

ಕೋಟಿಗಟ್ಟಲೆ ಹಣ
ಬಾಚುತ್ತಿದೆ ಕೆಜಿಎಫ್
ತುಂಬಿ ತುಳುಕುತ್ತಿದೆ ಥಿಯೇಟರ್‌
ಕೋಟಿ ಕೊಡುತ್ತೇನೆಂದರೂ
ಭಣ ಭಣ ಅನ್ನುತ್ತಿದೆ
ಬಿಎಸ್‌ವೈ ಅಪರೇಷನ್‌
ಥಿಯೇಟರ್‌!
ಎಚ್‌....

ಹೊಸದೆನ್ನುವಂತೆ ಸವಿಯೋಣ
ಜೀವನದ ಪ್ರತಿದಿನ, ಪ್ರತಿಕ್ಷಣ
ಒಂದೇ ದಿನದಲ್ಲಿ
ಮುಗಿಯದಿರಲಿ
ನೂತನ ವರ್ಷದ newತನ!
ಎಚ್‌. ಡುಂಡಿರಾಜ್‌

ಮುಗಿಯಿತು ಇಂದಿಗೆ
ಹದಿ-ನೆಂಟರ ನಂಟು
ಬರುತ್ತಿದೆ ಹತ್ತೂಂಬತ್ತು
ಬೆನ್ನಮೇಲಿದೆ ಗಂಟು
ಗೊತ್ತಿಲ್ಲ ಯಾರಿಗೂ
ಒಳಗೆ ಏನುಂಟು?
 ಎಚ್‌. ಡುಂಡಿರಾಜ್‌

ಏನೂ ಆಗುತ್ತಿಲ್ಲ
ಹೊತ್ತು ಹೋಗುತ್ತಿಲ್ಲ
ಅಂತ ಬೇಜಾರಾ ?
ನಿವೃತ್ತಿಯ ನಂತರ
ಬದುಕು ನಿಧಾನ
ಚೇತಶ್ವರ ಪೂಜಾರ !
ಎಚ್‌.ಡುಂಡಿರಾಜ್‌

ಸಿದ್ದು ಮೇಲೆ ಪರಂ
ಆಗಿದ್ದರು ಗರಂ
ರಾಹುಲ್‌ ಕರೆದು
ಚೆನ್ನಾಗಿ ಅರೆದು
ಮಾಡಿದ್ದಾರೆ ನರಂ!
 ಎಚ್‌. ಡುಂಡಿರಾಜ್‌

ತಾನಾಗಿಯೇ ಬೀಳುತ್ತದೆ
ಅಂದಿದ್ದರು ಬಿಎಸ್‌ವೈ
ಕೊನೆಗೂ ಬೀಳುತ್ತಿದೆ ಭಲೆ
ಬೇಕಿದ್ದರೆ ನೋಡಿ
ಆಗೋ  ಓ ಅಲ್ಲಿ
ಮರದಿಂದ ಒಣಗಿದ ಎಲೆ!
 ಎಚ್‌. ಡುಂಡಿರಾಜ್‌

ಹಳಬರನ್ನು ಹಿಂದಿಕ್ಕಿ
ಸಚಿವ ಸ್ಥಾನ ಗಳಿಸಿದ್ದಾರೆ
ಕರ ಪಕ್ಷದ ಕಿರಿಯರು,
ಮುನಿಸಿಕೊಂಡ ಹಿರಿಯರು
ಹೈಕಮಾಂಡ್‌ ಪಾಲಿಗೆ
ಆಗಿದ್ದಾರೆ ಕಿರಿಕಿರಿಯರು!
ಎಚ್‌. ಡುಂಡಿರಾಜ್‌

ಚೆನ್ನಾಗಿ ಅಗಿದು ತಿನ್ನಲು
ಕೊಟ್ಟಿದ್ದಾನೆ ದೇವರು
ಮುವ್ವತ್ತೆರಡು ಹಲ್ಲು
ಅಷ್ಟೆ ಸಂಖ್ಯೆಯ
ಸಚಿವರಿದ್ದಾರೆ
ಸಮ್ಮಿಶ್ರ ಸರ್ಕಾರದಲ್ಲೂ!
ಎಚ್‌.ಡುಂಡಿರಾಜ್‌

ಹೇಳಿದ್ದೇನೆ ನನ್ನವಳ ಬಳಿ
ಕಡಿಮೆಯಾಗದಿದ್ದರೆ ಚಳಿ
ಮಾಡೋಣ ಇಬ್ಬರೂ ಸೇರಿ
ಚಳಿಯ ವಿರುದ್ಧ ಹೋರಾಟ
ಅಪ್ಪಿಕೊ ಚಳುವಳಿ !
ಎಚ್‌.ಡುಂಡಿರಾಜ್‌

ಈ ಕಲಿಯುಗದಲ್ಲಿ
ಗೋವು ಹುಲಿಯಾಗುವುದು
ಸಿಂಹ ಇಲಿಯಾಗುವುದು
ಹೂವು ಮುಳ್ಳಾಗುವುದು
ಸತ್ಯ ಸುಳ್ಳಾಗುವುದು
ಎಲ್ಲವೂ ಸರ್ವೇಸಾಮಾನ್ಯ
ಪ್ರಸಾದ ವಿಷವಾಗುವುದು
ವಿಷಾದನೀಯ...

ವಸುಂಧರೆಗೂ ಸಹಾ
ಸಹಿಸಲಾಗುತ್ತಿಲ್ಲ
ಡಿಸೆಂಬರಿನ ಕೊರೆವ ಚಳಿ
ಹೊದ್ದುಕೊಂಡಿದ್ದಾಳೆ
ಅಚ್ಚ ಬಿಳಿ
ಮಂಜಿನ ಕಂಬಳಿ !
ಎಚ್‌.ಡುಂಡಿರಾಜ್‌
 

ಕವಿಗಳು ಬಣ್ಣಿಸಿದಂತೆ
ಮೂಡಣದಲ್ಲಿ ರವಿ
ಕಿತ್ತಳೆ ಹಣ್ಣಿನ ಹಾಗೆ
ಆದರೇನು ಫ‌ಲ ?
ಅಷ್ಟು ಮೇಲೆ ಹತ್ತಿ
ಕಿತ್ತು ತಿನ್ನುವುದು ಹೇಗೆ?
 ಎಚ್‌. ಡುಂಡಿರಾಜ್‌...

Back to Top