ಸರ್ಕಾರಿ ಇಲಾಖೆಗಳಿಂದ 162 ಕೋಟಿ ನೀರಿನ ಬಿಲ್‌ ಬಾಕಿ!

Team Udayavani, Jul 16, 2023, 10:07 AM IST

TDY-1

ಬೆಂಗಳೂರು: ರಾಜ್ಯ ರಾಜಧಾನಿಗೆ ಕಾವೇರಿ ನೀರು ಪೂರೈಸುವ ಜಲಮಂಡಳಿಯು ಸಂಕಷ್ಟದ ಲ್ಲಿದ್ದು, ಮತ್ತೂಂದೆಡೆ ಬಿಬಿಎಂಪಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಅಧೀನದ ಸರ್ಕಾರಿ ಇಲಾಖೆಗಳು ಬರೋಬ್ಬರಿ 162 ಕೋಟಿ ರೂ. ನೀರಿನ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡಿ ರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ನೀರು ಸರಬರಾಜಿನಿಂದ ಬರುವ ಮೊತ್ತವೇ ಜಲಮಂಡಳಿಯ ಆದಾಯವಾಗಿದ್ದು, ಇದರಲ್ಲೇ ಸಂಸ್ಥೆ ನಿರ್ವಹಣೆ ಮಾಡಬೇಕಿದೆ. ಆದರೆ, ಸರ್ಕಾರಿ ಇಲಾಖೆಗಳಿಂದ ಬಾಕಿ ಉಳಿಸಿಕೊಂಡಿರುವ 162 ಕೋಟಿ ರೂ. ನೀರಿನ ಮೊತ್ತ ವಸೂಲಿ ಮಾಡುವುದೇ ದೊಡ್ಡ ತಲೆನೋವಾಗಿದೆ. ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ಹತ್ತಾರು ಬಾರಿ ನೋಟಿಸ್‌ ಕಳುಹಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಈ ಪೈಕಿ ಬಿಬಿಎಂಪಿ ಹಲವು ವರ್ಷ ಗಳಿಂದ ಬಾಕಿ ಉಳಿಸಿಕೊಂಡಿದ್ದ 7 ಕೋಟಿ ರೂ.ಗೆ ಬಡ್ಡಿ ಮೊತ್ತವೇ 14 ಕೋಟಿ ರೂ. ಆಗಿದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಮ್‌.

ರಾಜ್ಯದ ಇಲಾಖೆಗಳಿಂದ 111 ಕೋಟಿ ರೂ. ಬಾಕಿ: ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳು 111 ಕೋಟಿ ರೂ. ಬಾಕಿ ಉಳಿಸಿಕೊಂಡರೆ, ಕೇಂದ್ರದ ಅಧೀನದ ಇಲಾಖೆಗಳಿಂದ 50.94 ಕೋಟಿ ರೂ. ವಸೂಲು ಮಾಡಬೇಕಿದೆ. ಬಿಬಿಎಂಪಿ 21.45 ಕೋಟಿ ರೂ. ನೀರಿನ ಬಿಲ್‌ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಅಧೀನದಲ್ಲಿರುವ ಪೊಲೀಸ್‌ ಕ್ವಾಟ್ರಸ್‌, ವಿವಿಗಳು ಅತ್ಯಧಿಕ ನೀರಿನ ಬಿಲ್‌ ನೀಡಲು ಬಾಕಿಯಿದ್ದು, ಕಂದಾಯ, ಪಿಡಬ್ಲೂéಡಿ, ಆರೋಗ್ಯ ಇಲಾಖೆ ಸೇರಿದಂತೆ 51.29 ಕೋಟಿ ರೂ. ಉಳಿಸಿಕೊಂಡಿದ್ದು, ಬಡ್ಡಿ 29.9 ಕೋಟಿ ರೂ. ಸೇರಿ 80.38 ಕೋಟಿ ರೂ. ನೀಡಬೇಕಿದೆ.

ರಕ್ಷಣಾ ಇಲಾಖೆಯು 26.33 ಕೋಟಿ ಮೊತ್ತದ ನೀರು ಬಳಸಿಕೊಂಡಿದ್ದು, ಬಡ್ಡಿ 1.9 ಕೋಟಿ ರೂ. ಸೇರಿ 28.32 ಕೋಟಿ ರೂ. ಬರಬೇಕಿದೆ. ಕೇಂದ್ರ ಸರ್ಕಾರದ ಅಧೀನ ಇಲಾಖೆಗಳೂ 18.64 ಕೋಟಿ ರೂ. ನೀರಿನ ಬಿಲ್‌ ಕಟ್ಟಿಲ್ಲ. ಇದಕ್ಕೆ 3.97 ಕೋಟಿ ರೂ. ಬಡ್ಡಿಯಾಗಿದ್ದು, 22.62 ಕೋಟಿ ರೂ. ಪಾವತಿಸಬೇಕಿದೆ. ಇನ್ನು ಶಾಸನಬದ್ದ ಸಂಸ್ಥೆಗಳು 5 ಕೋಟಿ ರೂ. ನೀರಿನ ಬಿಲ್‌ಗೆ 3 ಕೋಟಿ ರೂ. ಬಡ್ಡಿ ಸೇರಿ ಒಟ್ಟು 9 ಕೋಟಿ ರೂ. ನೀರಿನ ಬಿಲ್‌ ಪಾವತಿಸಬೇಕು. 2013ರಲ್ಲಿ ಜಲ ಮಂಡಳಿ ಪಾವತಿಸುತ್ತಿದ್ದ 35 ಕೋಟಿ ರೂ. ವಿದ್ಯುತ್‌ ಶುಲ್ಕ ಸದ್ಯ 70 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಹಲವು ವರ್ಷಗಳಿಂದ ಜನರಿಗೆ ಹೊರೆಯಾಗುತ್ತಿದೆ ಎಂಬ ಕಾರಣಕ್ಕೆ ನೀರಿನ ಶುಲ್ಕ ಹೆಚ್ಚಿಸಿಲ್ಲ. ಹಾಗಾಗಿ, ಮಂಡಳಿಗೆ ಬರುವ ಆದಾಯದ ಮೊತ್ತಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದೆ.

ನೀರಿನ ಬಿಲ್‌ ಮನ್ನಾ ಮಾಡಲು ಮನವಿ: ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಸ್ವಾಮ್ಯದ ಪ್ರತಿ ಇಲಾಖೆ, ಸಂಸ್ಥೆಗಳಿಗೆ ಜಲಮಂಡಳಿಯಿಂದ ಹಲವು ಬಾರಿ ನೋಟಿಸ್‌ ಕಳುಹಿಸಿ ಬಾಕಿ ಮೊತ್ತ ಪಾವತಿಸುವಂತೆ ಎಚ್ಚರಿಸಲಾಗಿದೆ. ಆದರೂ, ಇದುವರೆಗೂ ಬಾಕಿ ನೀರಿನ ಮೊತ್ತ ಪಾವತಿಯಾಗಲಿಲ್ಲ. ಜಲಮಂಡಳಿ ಇಲಾಖೆಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಲು ಆಗುವುದಿಲ್ಲ. ಇದನ್ನು ಅರಿತ ಸರ್ಕಾರಿ ಇಲಾಖೆಗಳು ಜಲಮಂಡಳಿ ಬಿಲ್‌ ಪಾವತಿಸಲು ನಿರ್ಲಕ್ಷಿಸಿವೆ. ಕೆಲವು ಇಲಾಖೆಗಳು ಸಮಯಾವಕಾಶ ಕೇಳುತ್ತಿದೆ. ಮತ್ತೆ ಕೆಲವು ಬಿಲ್‌ ಮನ್ನಾಕ್ಕೆ ಮನವಿ ಮಾಡಿವೆ.

1,300 ಕೋಟಿ ರೂ. ಆದಾಯ: 10.50 ಲಕ್ಷ ಮನೆಗಳಿಗೆ ಕಾವೇರಿ ನೀರನ್ನು ಜಲಮಂಡಳಿ ಪೂರೈಕೆ ಮಾಡುತ್ತಿದೆ. ನೀರು ಪೂರೈಕೆ ಶುಲ್ಕದಿಂದ ಜಲಮಂಡಳಿಯು ತಿಂಗಳಿಗೆ ಸರಾಸರಿ 109 ಕೋಟಿ ರೂ. ಆದಾಯಗಳಿಸುತ್ತದೆ. ವಾರ್ಷಿಕ 1,300 ಕೋಟಿ ರೂ. ಮಂಡಳಿಗೆ ಆದಾಯ ಬರುತ್ತಿದೆ. ನೂತನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿದ ಬಳಿಕ 90 ಕೋಟಿ ರೂ. ವಿದ್ಯುತ್‌ ಶುಲ್ಕಕ್ಕೆ ಮೀಸಲಿಡಲಾಗುತ್ತಿದೆ.

ಜಲಮಂಡಳಿಗೆ ಬರಬೇಕಿರುವ ಬಾಕಿ ನೀರಿನ ಮೊತ್ತ ಸಂಗ್ರಹಿಸಲು ನಮ್ಮ ಸಿಬ್ಬಂದಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಬಿಲ್‌ ಬಾಕಿ ಉಳಿಸಿ ಕೊಂಡಿರುವ ಇಲಾಖೆಗಳ ಮುಖ್ಯಸ್ಥರೇ ಜಲಮಂಡಳಿ ಸ್ಥಿತಿ-ಗತಿ ಅರ್ಥ ಮಾಡಿಕೊಂಡು ಶುಲ್ಕ ಪಾವತಿಸಬೇಕು. -ಎನ್‌.ಜಯರಾಮ್‌, ಅಧ್ಯಕ್ಷ, ಜಲಮಂಡಳಿ

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.