Udayavani - ಉದಯವಾಣಿ - ಜಯದೇವ ಪ್ರಸಾದ ಮೊಳೆಯಾರ https://www.udayavani.com/kannada-news-authors/%E0%B2%9C%E0%B2%AF%E0%B2%A6%E0%B3%87%E0%B2%B5-%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6-%E0%B2%AE%E0%B3%8A%E0%B2%B3%E0%B3%86%E0%B2%AF%E0%B2%BE%E0%B2%B0 en ಎನ್‌.ಪಿ.ಎಸ್‌.ನಲ್ಲಿ ಆಗಲಿರುವ ಜಾಮೂನ್‌ ಬದಲಾವಣೆಗಳು https://www.udayavani.com/kannada/news/investments-savings/346120/jamun-changes-to-begin-at-nps

ಇದು ಅತ್ಯಂತ ತಾಜಾ ಖಬರ್‌! ಇದಿನ್ನೂ ಕಾನೂನು ಆಗಿಲ್ಲ. ಆದರೆ ಅಗುವುದು ಖಚಿತ. ಹೆಚ್ಚಾಗಿ ಯಾವುದೇ ಮಾಹಿತಿ ಕಾನೂನಾಗಿ ನೋಟಿಫೈ ಆಗುವವರೆಗೆ ಅದರ ಬಗ್ಗೆ ಕಾಕುವಿನಲ್ಲಿ ಬರೆಯುವ ಪರಿಪಾಠ ನನಗೆ ಇಲ್ಲ. ಅದಕ್ಕೆ ಕಾರಣವೇನೆಂದರೆ ಕಾಕುವಿನಲ್ಲಿ ಒಂದು ಸಂಭಾವ್ಯ ವಿಚಾರವನ್ನು ಹಾಕಿದರು ಕೂಡಾ ಅದೇ ಅಂತಿಮ ವಾಸ್ತವ ಎಂಬ ಭಾವನೆ ಜನರಿಗೆ ಬರುತ್ತದೆ. ಅದರಿಂದ ಹಲವಾರು ಗೊಂದಲಗಳು ಉಂಟಾಗುವುದನ್ನು ತಪ್ಪಿಸಲು ಖಚಿತವಾಗಿ ಕಾನೂನು ಹೊರ ಬರುವವರೆಗೆ ಯಾವುದೇ ಮಾಹಿತಿಯನ್ನು ಕಾಕುವಿನಲ್ಲಿ ಬರೆಯುವ ಪದ್ಧತಿಯನ್ನು ನಾನು ಇಟ್ಟುಕೊಂಡಿಲ್ಲ. ಆದರೂ ಇದೊಂದು ಬಾಂಬ್‌ ನ್ಯೂಸ್‌! ಹಾಗಾಗಿ ಈ ಬಗ್ಗೆ ಒಂದಿಷ್ಟು ಕೊರೆಯಲೇ ಬೇಕು ಎನ್ನುವ ಆಸೆ ಎನ್ನ ಮನದಾಳದಲಿ ಅಂಕುರವಾಗಿದೆ.

ಇತ್ತೀಚೆಗೆ, ಅಂದರೆ ಡಿ. 6, 2018ರಂದು ಒಂದು ಕ್ಯಾಬಿನೆಟ್‌ ನಿರ್ಧಾರ ಹೊರ ಬಂದಿದೆ. ಆ ಪ್ರಕಾರ ನ್ಯಾಶನಲ್‌ ಪೆನ್ಶನ್‌ ಸ್ಕೀಂನಲ್ಲಿ ಕೇಂದ್ರ ನೌಕರರಿಗೆ ಹಲವಾರು ಬದಲಾವಣೆಗಳನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲವೂ ಸುಗಮವಾಗಿ ಸಾಗಿದಲ್ಲಿ ಕಾನೂನು ತಿದ್ದುಪಡಿಯೊಂದಿಗೆ ಎಪ್ರಿಲ್‌ 1, 2019ರಿಂದ ಮೊದಲ್ಗೊಂಡು ಆಪ್ಯಾಯಮಾನವಾದ ಕೆಲವು ಬದಲಾವಣೆಗಳು ಎನ್‌.ಪಿ.ಎಸ್‌. ಯೋಜನೆಯಲ್ಲಿ ಬರಲಿದೆ. ಸದ್ಯಕ್ಕೆ ಇದಿನ್ನೂ ಕಾನೂನಾ ಗಿಲ್ಲ ಎನ್ನುವುದನ್ನು ಇನ್ನೊಮ್ಮೆ ಒತ್ತಿ ಹೇಳುತ್ತಿದ್ದೇನೆ. ಜಾಮೂನು ಕೈಗೆ ಬಾರದಿದ್ದರೂ ಬರುವ ಕ್ಷಣಗಳನ್ನು ಎದುರು ನೋಡುತ್ತಾ ಬಾಯಲ್ಲಿ ನೀರೂರಿಸುತ್ತಾ ಕಾಯಲು ಅಡ್ಡಿಯಿಲ್ಲ.

ಮುಂಬರುವ ಬದಲಾವಣೆಗಳು:
1. ಸಂಪೂರ್ಣ ಕರಮುಕ್ತ ಹಿಂಪಡೆತ
ಎನ್‌.ಪಿ.ಎಸ್‌. ಕಾನೂನು ಪ್ರಕಾರ 60 ಕಳೆದು ನಿವೃತ್ತಿಯ ಸಂದರ್ಭದಲ್ಲಿ ಶೇ.60 ಮೊತ್ತವನ್ನು ಹಿಂಪಡೆಯಬಹುದಾಗಿದೆ ಉಳಿದ ಶೇ.40 ಕಡ್ಡಾಯವಾಗಿ ಆನ್ಯೂಟಿ (ಮಾಸಿಕ ಪೆನ್ಶನ್‌) ಆಗಿ ಪರಿವರ್ತಿಸಬೇಕು. ಇದೀಗ ಹಿಂಪಡೆಯುವ ಶೇ.60 ಮೊತ್ತವನ್ನು ಸಂಪೂರ್ಣವಾಗಿ ಕರಮುಕ್ತಗೊಳಿಸುವ ನಿರ್ಣಯವನ್ನು ಕ್ಯಾಬಿನೆಟ್‌ ಕೈಗೊಂಡಿದೆ. ಈ ಪ್ರಸ್ತಾಪ ಹೊಸ ಬಜೆಟ್‌ ಮೂಲಕ ಅನುಷ್ಠಾನಕ್ಕೆ ಬರಲಿದೆ. ಸದ್ಯಕ್ಕೆ ಎನ್‌.ಪಿ.ಎಸ್‌. ನಿಂದ ಹಿಂಪಡೆಯುವ ಶೇ.60 ಮೊತ್ತದಲ್ಲಿ ಕೇವಲ ಶೇ.40 ಮಾತ್ರವೇ ಕರ ಮುಕ್ತವಾಗಿದ್ದು ಉಳಿದ ಶೇ.20 ಮೊತ್ತವು ಕರಾರ್ಹವಾಗಿದೆ. ಹಿಂಪಡೆಯದೆ ಉಳಿಸಿಕೊಂಡ, ಆನ್ಯೂಟಿ ಅಥವಾ ಪೆನ್ಶನ್‌ ಆಗುವ ಉಳಿದ ಶೇ.40 ಮೊತ್ತದ ಮೇಲೆ ಲಾಗಾಯ್ತಿನಿಂದಲೂ ಕರ ಇರುವುದಿಲ್ಲ. (ಆದರೆ ಆ ಬಳಿಕ ಬರುವ ಮಾಸಿಕ ಪೆನ್ಶನ್‌ ಮೇಲೆ ಆದಾಯ ಕರ ಇರುತ್ತದೆ. ಅದು ಬೇರೆ ವಿಚಾರ) ಸಂಪೂರ್ಣ ಕರಮುಕ್ತ ಹಿಂಪಡೆತವು ಬಹುಕಾಲದ ಬೇಡಿಕೆಯಾಗಿದ್ದು ಇದು ಕಾರ್ಯಗತವಾದರೆ ಎನ್‌.ಪಿ.ಎಸ್‌. ಸ್ಕೀಂನಲ್ಲಿದ್ದ ಪ್ರಾಮುಖ್ಯ ನ್ಯೂನತೆಯೊಂದು ಇಲ್ಲವಾಗುತ್ತದೆ ಹಾಗೂ ಅದು ಪ್ರಾವಿಡೆಂಟ್‌ ಫ‌ಂಡ್‌ ತುಲನೆಯಲ್ಲಿ ಸರಿಸಮಾನವೆನಿಸುತ್ತದೆ. ಈ ಕರ ಮುಕ್ತ ಹಿಂಪಡೆತ ಸರಕಾರಿ, ಖಾಸಗಿ - ಈ ರೀತಿ ಯಾವುದೇ
ಎನ್‌.ಪಿ.ಎಸ್‌. ಸದಸ್ಯರಿಗೆ ಅನ್ವಯವಾಗುತ್ತದಂತೆ.

2. ಹೆಚ್ಚುವರಿ ದೇಣಿಗೆ ಶೇ.14
ಸದ್ಯಕ್ಕೆ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಅನ್ವಯವಾಗುವಂತೆ ಅವರ ಎನ್‌.ಪಿ.ಎಸ್‌. ದೇಣಿಗೆ ಸರಕಾರದಿಂದ ಸಂಬಳದ ಶೇ.10 ಹಾಗೂ ನೌಕರರಿಂದ ಶೇ.10 ಜಮೆಯಾಗುತ್ತದೆ. ಆದರೆ ಈಗಿನ ಕ್ಯಾಬಿನೆಟ್‌ ನಿರ್ಧಾರದ ಅನುಸಾರ ಕೇಂದ್ರ ಸರಕಾರ ಭವಿಷ್ಯದಲ್ಲಿ ಶೇ.14 ದೇಣಿಗೆ ನೀಡಲಿದೆ. ನೌಕರರ ದೇಣಿಗೆ ಹಾಗೆಯೇ ಶೇ.10ದಲ್ಲಿಯೇ ಮುಂದುವರಿಯಲಿದೆ. ಸದ್ಯದ ಈ ಕ್ಯಾಬಿನೆಟ್‌ ನಿರ್ಧಾರವು ಕೇವಲ ಕೇಂದ್ರ ಸರಕಾರದ ನೌಕರರಿಗೆ ಮಾತ್ರ ಅನ್ವಯಿಸುವಂತೆ ಇದೆ ಎನ್ನುವುದನ್ನೂ ಕೂಡಾ ಗಮನಿಸಿರಿ.

3. ಹೂಡಿಕೆಯಲ್ಲಿ ಸ್ವಾತಂತ್ರ್ಯ
ಸದ್ಯಕ್ಕೆ ಸರಕಾರಿ ನೌಕರರ ಎನ್‌.ಪಿ,ಎಸ್‌. ಯೋಜನೆಯಲ್ಲಿ ಫ‌ಂಡ್‌ ಮ್ಯಾನೇಜರ್‌ ಮತ್ತು ಹೂಡಿಕಾ ಕ್ಷೇತ್ರದ (ಈಕ್ವಿಟಿ/ಡೆಟ್‌) ಬಗ್ಗೆ ನೌಕರರಿಗೆ ವಿಶೇಷ ಆಯ್ಕೆ ಇರಲಿಲ್ಲ. ಅವೆÇÉಾ ಸರಕಾರಿ ನಿಯಮಗಳ ಅನ್ವಯ ನಡೆಯುತ್ತಾ ಬಂದಿವೆ. ಖಾಸಗಿ ವಲಯದ ಎನ್‌.ಪಿ.ಎಸ್‌.ನಲ್ಲಿ ಮಾತ್ರವೇ ಸದಸ್ಯರಿಗೆ ಅಂತಹ ಆಯ್ಕೆಗಳು ಇದ್ದವು. ಆದರೆ ಇನ್ನು ಮುಂದೆ ಸರಕಾರಿ ನೌಕರರಿಗೂ ಅಂತಹ ವಿಶೇಷ ಆಯ್ಕೆಗಳು ಸಿಗಲಿವೆ. ಇದು ಕೂಡಾ ಒಂದು ಉತ್ತಮ ಬೆಳ ವಣಿಗೆಯೇ. ಪ್ರತಿಯೊಬ್ಬರು ಕೂಡಾ ಅವರವರ ಭಾವಕ್ಕೆ ಮತ್ತು ಅವರವರ ಭಕುತಿಗೆ ಅನುಸಾರವಾಗಿ ಹೂಡಿಕೆ ಮಾಡಬಹುದು.

4. ಟಯರ್‌-2 ಖಾತೆಗೆ ಕರ ವಿನಾಯಿತಿ
ಈವರೆಗೆ ಎನ್‌.ಪಿ.ಎಸ್‌. ಖಾತೆಯಲ್ಲಿನ ಟಯರ್‌-1 ಉಪಖಾತೆಗೆ ಮಾತ್ರ ಕರ ವಿನಾಯಿತಿ ಸಿಗುತ್ತಲಿತ್ತು. ಟಯರ್‌-2 ಉಪಖಾತೆಗೆ ಯಾವುದೇ ವಿನಾಯಿತಿ ಇರುತ್ತಿರಲಿಲ್ಲ. ಅದು ಕೇವಲ ಒಂದು ಬ್ಯಾಂಕಿನ ಸೇವಿಂಗ್ಸ್‌ ಖಾತೆಯಂತೆ ನಡೆಯುತ್ತಿತ್ತು. ಇನ್ನು ಮುಂದೆ, ಅಂದರೆ ಈ ಪ್ರಸ್ತಾವಗಳು ಕಾನೂನಾಗಿ ಬಂದ ಬಳಿಕ ಸರಕಾರಿ ನೌಕರರ ಟಯರ್‌-2 ಉಪಖಾತೆಗೂ ಕರವಿನಾ ಯಿತಿ ಲಭಿಸಲಿದೆ. ಕರವಿನಾಯಿತಿಯು ಸೆಕ್ಷನ್‌ 80ಸಿ ಅಡಿಯಲ್ಲಿ ಉಳಿದ ಹೂಡಿಕೆಗಳೊಂದಿಗೆ (ಪಿ.ಎಫ್, ವಿಮೆ, ಸ್ಕೂಲ್‌ ಫೀಸ್‌, ಎನ್‌.ಎಸ್‌.ಸಿ. ಇತ್ಯಾದಿಗಳು) ಒಟ್ಟಾರೆ ರೂ. 1.5 ಲಕ್ಷದವರೆಗೆ ಲಭಿಸಲಿದೆ. ಆದರೆ ಅಂತಹ ಹೂಡಿಕೆಗೆ 3 ವರ್ಷದ ಲಾಕ್‌ಇನ್‌ ಬರಲಿದೆ. ಇದರೊಂದಿಗೆ ಎನ್‌.ಪಿ.ಎಸ್‌.ನ ಟಯರ್‌-2 ಖಾತೆಯು ಮ್ಯೂಚುವಲ್‌ ಫ‌ಂಡಿನ ಇ.ಎಲ್‌ಎಸ್‌.ಎಸ್‌. (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌) ಯೋಜನೆಗೆ ತತ್ಸಮಾನವಾಗಲಿದೆ.

ಇವಿಷ್ಟು ಈ ಬಾರಿ ಪ್ರಕಟವಾದ ಎನ್‌.ಪಿ.ಎಸ್‌. ಯೋಜನೆಯ ಸುಧಾರಣಾ ಕ್ರಮಗಳು. ಮೊದಲೇ ಒಂದು ಉತ್ತಮ ಯೋಜನೆಯಾಗಿದ್ದ ಈ ರಾಷ್ಟ್ರೀಯ ಪಿಂಚಣಿ ಯೋಜನೆ ಈ ಬದಲಾವಣೆಗಳೊಂದಿಗೆ ಪಿ.ಎಫ್. ಹಾಗೂ ಇ.ಎಲ….ಎಸ್‌.ಎಸ್‌. ಯೋಜನೆಗಳ ತುಲನೆಯಲ್ಲಿ ಇನ್ನಷ್ಟೂ ಉತ್ತಮವಾಗಲಿದೆ.

ಇನ್ನು ಎನ್‌.ಪಿ.ಎಸ್‌. ಯೋಜನೆಯ ಇನ್ನಿತರ ಪ್ರಾಮುಖ್ಯ ಅಂಶಗಳ ಮೆಲೆ ಗಮನ ಹರಿಸೋಣ:

ಕರಗೊಂದಲಗಳು
ನ್ಯೂ ಪೆನ್ಶನ್‌ ಸ್ಕಿಂ ಅಥವಾ ನ್ಯಾಶನಲ್‌ ಪೆನ್ಶನ್‌ ಸ್ಕೀಂ ಬಗ್ಗೆ ಸಾಕಷ್ಟು ಜನ ಜಾಗೃತಿ ಈಗಾಗಲೇ ಏರ್ಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರ ಮೇಲೆ ನೀಡಿರುವ ಕರ ವಿನಾಯಿತಿಯೇ ಆಗಿದೆ. ಈ ಯೋಜನೆಯ ಮೇಲೆ ಸಿಗುವ ಹಾಗೂ ಬೇರಾವ ಯೋಜನೆಗೂ ಸಿಗದ ಹೆಚ್ಚುವರಿಯಾದ ರೂ. 50,000ದ ಕರ ವಿನಾಯಿತಿ ಇದರ ಹೆಗ್ಗಳಿಕೆ ಹಾಗೂ ಆ ಕಾರಣಕ್ಕಾಗಿಯೇ ಅನೇಕ ಜನರು, ಮುಖ್ಯ ವಾಗಿ ಉದ್ಯೋಗಿ ವರ್ಗದವರು ಇದರ ಬಗ್ಗೆ ಆಸಕ್ತಿವಹಿಸುತ್ತಿದ್ದಾರೆ.

ಈ ಸ್ಕೀಮಿನಲ್ಲಿ ವಾರ್ಷಿಕ ರೂ.1.5 ಲಕ್ಷದವರೆಗೆ 80ಸಿ ಕರಲಾಭ ಸಿಗುತ್ತದೆ. (ಈ ಸೆಕ್ಷನ್‌ ಅಡಿಯಲ್ಲಿ ಎನ್‌ಪಿಎಸ್‌ ಅಲ್ಲದೆ ಪಿಪಿಎಫ್, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, 5-ವಾರ್ಷಿಕ ಎಫ್ಡಿ, ಟ್ಯೂಷನ್‌ ಫೀಸ್‌ ಇತ್ಯಾದಿ ಹಲವಾರು ಯೋಜನೆಗಳೂ ಸೇರಿವೆ). ಅದಲ್ಲದೆ 2015ರಿಂದ ಆರಂಭಗೊಂಡಂತೆ ಇದೇ ಸ್ಕೀಮಿಗೆ ಹೊಸ ಸೆಕ್ಷನ್‌ 80ಸಿಸಿಡಿ(1ಬಿ) ಅನುಸಾರ ಇನ್ನೊಂದು ರೂ. 50,000 ಮೊತ್ತದ ಪ್ರತ್ಯೇಕ ಕರವಿನಾಯಿತಿ ಲಭಿಸುತ್ತದೆ. ಈ 50,000 ಕರ ವಿನಾಯಿತಿ ಇದೊಂದೇ ಸ್ಕೀಮಿಗೆ ಸಿಗುತ್ತದಲ್ಲದೆ ಬೇರಾವ ಸ್ಕೀಮಿನಲ್ಲೂ ಲಭ್ಯವಿಲ್ಲ. ಈ ಕಾರಣಕ್ಕೆ ಎನ್‌ಪಿಎಸ್‌ ಸ್ಕೀಮಿನ ಘನತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಿದೆ. ಇವೆರಡೂ ಅಲ್ಲದೆ ಉದ್ಯೋಗದಾತರು ನಿಮ್ಮ, ತಮ್ಮ ದೇಣಿಗೆಯನ್ನು ನಿಮ್ಮ ಖಾತೆಗೆ ನೀಡಿದರೆ ಆ ಮೊತ್ತವೂ ಕೂಡಾ ಇನ್ನೊಂದು ಪ್ರತ್ಯೇಕ ಸೆಕ್ಷನ್‌ 80 ಸಿಸಿಡಿ(2) ಪ್ರಕಾರ ಕರ ವಿನಾಯಿತಿಗೆ ಒಳಪಡುತ್ತದೆ. ಹಾಗಾಗಿ 3 ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಕರಲಾಭ ಇರುವ ಈ ಯೋಜನೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಓದುಗರು ಈ ಮೂರೂ ಸೆಕ್ಷನ್‌ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅಥೆìçಸಿಕೊಂಡು ವ್ಯವಹರಿಸಬೇಕು. ಇವುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸುಳಿದಾಡುತ್ತಿವೆ. ಉದ್ಯೋಗದಾತರು ನೀಡುವ 80ಸಿಸಿಡಿ(2) ದೇಣಿಗೆಯನ್ನೇ ತಮ್ಮ 80ಸಿಸಿಡಿ(1ಬಿ) ಎಂದು ನಂಬಿ ತಣ್ಣನೆ ಕೂತು ವರ್ಷಾಂತ್ಯದಲ್ಲಿ ಕರಲಾಭ ವಂಚಿತರಾದವರು ಹಲವರಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಎನ್‌ಪಿಎಸ್‌ಗೆ ಹೂಡಿಕೆಯ ಆಧಾರದಲ್ಲಿ ಮೇಲೆ ತಿಳಿಸಿದಂತಹ ಕರವಿನಾಯಿತಿ ಇದೆ. ವಾರ್ಷಿಕ ಪ್ರತಿಫ‌ಲದ ಮೇಲೂ ಪ್ರತಿವರ್ಷವೆಂಬಂತೆ ಕರಕಟ್ಟಬೇಕಾಗಿಲ್ಲ. ಆದರೆ 60ರ ವಯಸ್ಸಿನಲ್ಲಿ ಖಾತೆಯಲ್ಲಿ ಶೇಖರವಾದ ಒಟ್ಟು ಮೊತ್ತದ ಶೇ.60 ಹಿಂಪಡೆಯಬಹುದು. ಮೊದಲೇ ಹೇಳಿದಂತೆ ಸದ್ಯಕ್ಕೆ ಒಟ್ಟು ಮೊತ್ತದ ಶೇ.40 ಮಾತ್ರ ಕರಮುಕ್ತ ಆದಾಯವಾಗಿದೆ. ಹಾಗಾಗಿ ಶೇ.40 ಮಾತ್ರ ಹಿಂಪಡೆದು ಉಳಿದ ಶೇ.60 ಅನ್ನು ಆನ್ಯೂಟಿ ಆಗಿ ಪರಿವರ್ತಿಸಬಹುದು. ಹಿಂಪಡೆಯದೆ ಆನ್ಯೂಟಿಯಾಗಿ ಪರಿವರ್ತಿಸಿಕೊಂಡ ಮೊತ್ತದ ಮೇಲೆ ನಿಯಮಿತವಾಗಿ ಬರುವ ಆನ್ಯೂಟಿ ಪೆನ್ಶನ್‌ ಮೇಲೆ ಆದಾಯ ಕರ ಇರುತ್ತದೆ.

ಇಲ್ಲಿ ಹಿಂಪಡೆಯುವ ಮೊತ್ತ ಗರಿಷ್ಠ ಶೇ.60, ಅಂದರೆ ಅದರಿಂದ ಕೆಳಗಿನ ಯಾವ ಮೊತ್ತವನ್ನಾದರೂ ಹಿಂಪಡೆಯಬಹುದು , ಶೇ. 0 ಕೂಡಾ. ಅಂದರೆ ನೂರಕ್ಕೆ ನೂರು ಶತಮಾನ ಆನ್ಯೂಟಿ ಕೂಡಾ ಪಡೆಯಬಹುದು. ಅಲ್ಲದೆ ಈ ಹಿಂಪಡೆತಕ್ಕೆ ಸಮಯಾವಕಾಶವೂ ಇದೆ. ಆನ್ಯೂಟಿ ಆರಂಭವಾದ 60 ವರ್ಷದ ಬಳಿಕ 3 ವರ್ಷಗಳೊಳಗೆ ಯಾವಾಗ ಬೇಕಾದರೂ ಆರಂಭಿಸಬಹುದು ಹಾಗೂ ಹಿಂಪಡೆಯುವ ಮೊತ್ತ 60 ಕಳೆದು 10 ವರ್ಷಗಳ ಒಳಗೆ ಯಾವಾಗ ಬೇಕಾದರೂ ಆರಂಭಿಸಬಹುದು. ಈ ಅವಕಾಶವನ್ನು ಕರ ಉಳಿತಾಯದ ದೃಷ್ಟಿಯಿಂದ ಬಳಸಿಕೊಳ್ಳಬಹುದು.

60ರ ಮುನ್ನ
60 ವರ್ಷ ಆಗುವ ಮುನ್ನ ಕೆಲಸ ಕಳೆದುಕೊಂಡೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಎನ್‌ಪಿಎಸ್‌ ಕಂತುಗಳನ್ನು ಮುಂದುವರಿಸಲಾರದೆ ಖಾತೆಯನ್ನು ಕೈಬಿಡಬೇಕಾದವರು ಏನುಮಾಡಬೇಕು? ಅಂಥವರು ಕನಿಷ್ಠ ಶೇ.80 ಮೊತ್ತವನ್ನು ಆನ್ಯೂಟಿಗೆ ಪರಿವರ್ತಿಸಿಕೊಂಡು ಉಳಿದ ಗರಿಷ್ಟ ಶೇ.20 ವನ್ನು ಹಿಂಪಡೆಯಬಹುದು. ಈಗ ಈ ಶೇ.20 ಮೊತ್ತ ಕರಮುಕ್ತವಾಗಿದೆ.

ಭಾಗಶಃ ಹಿಂಪಡೆತ
ಎನ್‌ಪಿಎಸ್‌ನಲ್ಲಿ ತೊಡಗಿಸಿದ ಮೊತ್ತವನ್ನು 60 ತುಂಬುವ ಮೊದಲೂ ಕೂಡಾ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಖಾತೆಗೆ ಕನಿಷ್ಠ 10 ವರ್ಷ ತುಂಬಿರಬೇಕು. ಹಿಂಪಡೆತದ ಪ್ರಮಾಣವು ಸ್ವಂತ ದೇಣಿಗೆಯ ಮೊತ್ತದ ಶೇ.25ಕ್ಕೆ ಸೀಮಿತವಾಗಿದೆ ಹಾಗೂ 2017ರ ಬಜೆಟ್ಟಿನಲ್ಲಿ ಈ ಮೊತ್ತಕ್ಕೆ ಕರ ವಿನಾಯಿತಿ ನೀಡಲಾಗಿದೆ. ಭಾಗಶಃ ಹಿಂಪಡೆತದ ಸೌಲಭ್ಯವನ್ನು ಈ ಕೆಳಗಿನ ಕಾರಣಗಳಿಗೆ ಮಾತ್ರ ನೀಡಲಾಗಿದೆ.

1.ಮಕ್ಕಳ ವಿದ್ಯಾಭ್ಯಾಸಕ್ಕೆ
2. ಮಕ್ಕಳ ಮದುವೆಗಾಗಿ
3.ಮೊದಲನೆಯ ಮನೆಯ ನಿರ್ಮಾಣ/ಫ್ಲಾಟ್‌ ಖರೀದಿಗೆ
4. ಕೆಲ ನಿಗದಿತ ರೋಗಗಳ ಚಿಕಿತ್ಸೆಗಾಗಿ - ಸ್ವಂತ, ಗಂಡ/ಹೆಂಡತಿ/ಮಕ್ಕಳು/ಅವಲಂಬಿತ ಹೆತ್ತವರು
ಈ ರೀತಿಯ ಭಾಗಶಃ ಹಿಂಪಡೆತಗಳನ್ನು ಗರಿಷ್ಟ 3 ಬಾರಿ ಮಾತ್ರ ಮಾಡಲು ಸಾಧ್ಯ ಹಾಗೂ ಒಂದು ಹಿಂಪಡೆತ ಮತ್ತು ಇನ್ನೊಂದರ ನಡುವೆ ಕನಿಷ್ಠ 5 ವರ್ಷಗಳ ಅವಧಿ ಇರಬೇಕು. (ಅನಾರೋಗ್ಯದ ಸಂದರ್ಭಕ್ಕೆ ಈ ಕಾನೂನು ಅನ್ವಯಿಸುವುದಿಲ್ಲ)
ಮೃತ್ಯು 60ರ ಮೊದಲು ಖಾತೆದಾರರ ಮೃತ್ಯು ಸಂಭವಿಸಿದಲ್ಲಿ ಒಟ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ನಾಮಿನಿಯು ಏಕಗಂಟಿನಲ್ಲಿ ದುಡ್ಡನ್ನು ಪಡಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಆನ್ಯೂಟಿಯಾಗಿಯೂ ಪಡಕೊಳ್ಳಬಹುದು. ಸರಕಾರಿ ಎನ್‌.ಪಿ.ಎಸ್‌. ಸ್ಕೀಮಿನಲ್ಲಿ ಶೇ.80 ಆನ್ಯೂಟಿ ಕಡ್ಡಾಯ. ಹಿಂಪಡೆದ ಮೊತ್ತ ಸಂಪೂರ್ಣ ಕರ ಮುಕ್ತವಾಗಿದೆ.

ಖಾತೆ ತೆರೆಯುವುದು ಹೇಗೆ
ಎನ್‌ಪಿಎಸ್‌ ಅನ್ನು ಪಿಓಪಿ ಕೇಂದ್ರಗಳಲ್ಲಿ ತೆರೆಯಬಹುದು. ಪಾಯಿಂಟ್‌ ಆಫ್ ಪ್ರಸೆನ್ಸ್‌ ಅಥವಾ ಪಿಓಪಿ ಎಂದು ಕರೆಯಲ್ಪಡುವ ಈ ಸೇವಾ ಕೇಂದ್ರಗಳು ದೇಶದ ಬಹುತೇಕ ಎಲ್ಲಾ ಸರಕಾರಿ/ಖಾಸಗಿ ಬ್ಯಾಂಕುಗಳಲ್ಲಿ, ಪೋಸ್ಟಾಫೀಸಿನಲ್ಲಿ, ಕಾರ್ವಿ/ಕ್ಯಾಮಸ್‌ನಂತಹ ಸೇವಾ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಗಳು ತಮ್ಮ ಎಲ್ಲಾ ಬ್ರಾಂಚುಗಳಲ್ಲೂ ಸೇವಾ ಕೇಂದ್ರಗಳನ್ನು ತೆರೆದಿರದಿದ್ದರೂ ಮುಖ್ಯ ಪಟ್ಟಣಗಳ ಮುಖ್ಯ ಬ್ರಾಂಚುಗಳಲ್ಲಿ ಎನ್‌ಪಿಎಎಸ್‌ ಖಾತೆಯನ್ನು ತೆರೆಯುವ ಸೌಲಭ್ಯವನ್ನು ನೀಡುತ್ತವೆ. ಈ ಬಗ್ಗೆ ವಿಚಾರಿಸಿ ನಿಮಗೆ ಅನುಕೂಲವಾದೆಡೆ ಎನ್‌ಪಿಎಸ್‌ ಖಾತೆಗೆ ಅರ್ಜಿ ಗುಜರಾಯಿಸಬಹುದು.

ಫಾರ್ಮ್/ದಾಖಲೆಗಳು
ಎನ್‌ಪಿಎಸ್‌ ಖಾತೆಗೆ ಅಗತ್ಯವಾದ ಎಲ್ಲಾ ಫಾರ್ಮುಗಳು ಬ್ಯಾಂಕುಗಳ ವೆಬ್‌ಸೈಟ್‌ ಅಥವಾ ಎನ್‌ಪಿಎಸ್‌ಸಿಆರ್‌ಎ ವೆಬ್‌ಸೈಟಿನಲ್ಲಿ ಪಡೆಯಬಹುದು. ಖಾತೆ ತೆರೆಯಲು ಸಿಎಸ್‌ಆರ್‌-1 ಫಾರ್ಮ್ ಅನ್ನೂ ಹೂಡಿಕೆಗೆ ಎನ್‌ಸಿಐಎಸ್‌ ಫಾರ್ಮನ್ನೂ ಬಳಸಬೇಕು. ಖಾತೆ ತೆರೆಯಲು ಈ ಕೆಳಗಿನ ದಾಖಲೆಗಳು ಅಗತ್ಯ:
1. ಸೂಕ್ತವಾಗಿ ತುಂಬಿದ ಆರ್ಜಿ ನಮೂನೆ, ಫೋಟೊ ಸಹಿತ
2.ವಿಳಾಸ ಪುರಾವೆ
3.ಪ್ಯಾನ್‌ ಕಾರ್ಡ್‌ ಪ್ರತಿ
4.ಬ್ಯಾಂಕ್‌ ಪುರಾವೆ

Tags:

ನ್ಯಾಶನಲ್‌ ಪೆನ್ಶನ್‌ ಸ್ಕೀಂ

ಎನ್‌.ಪಿ.ಎಸ್‌. ಯೋಜನೆ

NPS Plan

national pension scheme

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 17 Dec 2018 00:30:00 +0000 shriram.g 346120 at https://www.udayavani.com https://www.udayavani.com/kannada/news/investments-savings/346120/jamun-changes-to-begin-at-nps#comments ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ - ಈ ವರ್ಷದ ಪರಿಷ್ಕೃತ ಮಾಹಿತಿ https://www.udayavani.com/kannada/news/investments-savings/344433/capital-gains-tax---revised-information-this-year

ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್‌ ಇತ್ಯಾದಿಗಳು ಆದಾಯ ಕರದ ಭಾಷೆಯಲ್ಲಿ "ಇತರ ಆದಾಯ' ಆಗುತ್ತದೆ. ಬಾಡಿಗೆ ಆದಾಯದಿಂದ ಅನ್ವಯ ರಿಯಾಯಿತಿಗಳನ್ನು ಕಳೆದು ಸಾಮಾನ್ಯ ರೀತಿಯಲ್ಲಿ ಸಂಬಳ, ಬಿಸಿನೆಸ್‌ ಇತ್ಯಾದಿ ಆದಾಯಗಳೊಂದಿಗೆ ಜೊತೆಗೂಡಿಸಿ ತೆರಿಗೆ ಕಟ್ಟಬೇಕು.

ಶೇರು, ಮ್ಯೂಚುವಲ್‌ ಫ‌ಂಡುಗಳ ಡಿವಿಡೆಂಡ್‌ ಆದಾಯ ಪಡೆದವರ ಕೈಯಲ್ಲಿ ಕರಮುಕ್ತ; ಆದರೆ ಅದಕ್ಕೆ ಕಂಪೆನಿ ಅಥವಾ ಮ್ಯೂಚುವಲ್‌ ಫ‌ಂಡುಗಳೇ ಮೂಲದಲ್ಲಿ ಡಿವಿಡೆಂಟ್‌ ಡಿಸ್ಟ್ರಿಬ್ಯೂಶನ್‌ ಟ್ಯಾಕ್‌ (ಡಿಡಿಟಿ) ಕಟ್ಟಿರುತ್ತಾರೆ. ಇಕ್ವಿಟಿ ಮೇಲೆ ಮತ್ತು ಕನಿಷ್ಠ ಶೇ.65 ಈಕ್ವಿಟಿ ಇರುವ ಈಕ್ವಿಟಿ ಪ್ರಾಧಾನ್ಯ ಫ‌ಂಡುಗಳ(Equity Oriented Funds or EOF)  ಮೇಲೆ ಶೇ. 10 ಡಿಡಿಟಿ ಮತ್ತು ಶೇ.12 ಸರ್ಚಾರ್ಜ್‌ ಮತ್ತು ಶೇ.4 ಎಜುಕೇಶನ್‌ ಸೆಸ್‌ (ಒಟ್ಟು ಶೇ.11.648 ಇರುತ್ತದೆ). ಡೆಟ್‌ ಮತ್ತು ಇತರ ಶೇ.65ಕ್ಕಿಂತ ಕಡಿಮೆ ಈಕ್ವಿಟಿಯ ಫ‌ಂಡುಗಳ ಮೇಲೆ ಶೇ. 25 ಡಿಡಿಟಿ, ಶೇ.12 ಸರ್ಚಾರ್ಜ್‌ ಮತ್ತು ಶೇ. 4 ಎಜುಕೇಶನ್‌ ಸೆಸ್‌ (ಒಟ್ಟು ಶೇ. 29.12 ಇರುತ್ತದೆ). ಈ ರೀತಿ ಕ್ಯಾಪಿಟಲ್‌ ಆಸ್ತಿ ಮೇಲೆ ಬರುವ ಆದಾಯದ ಮೇಲೆ ಕರ ಕಾನೂನು ಅನ್ವಯವಾಗುತ್ತದೆ.

ಇವಿಷ್ಟು ಕ್ಯಾಪಿಟಲ್‌ ಆಸ್ತಿಗಳ ಮೇಲಿನಿಂದ ವರ್ಷ ವರ್ಷ ಬರುವ ಆದಾಯದ ಮಾತಾಯ್ತು. ಆದರೆ ಅದೇ ಭೂಮಿ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌ ಇತ್ಯಾದಿ ಕ್ಯಾಪಿಟಲ್‌ ಆಸ್ತಿಯನ್ನು ಕೊನೆಗೊಮ್ಮೆ ಮಾರಿಬಿಟ್ಟಾಗ ಬರುವ ಮೂಲ ವೆಚ್ಚ ಹಾಗೂ ಅಭಿವೃದ್ಧಿ ವೆಚ್ಚವನ್ನು ಕಳೆದು ಬರುವ ಲಾಭವನ್ನು ಕ್ಯಾಪಿಟಲ್‌ ಗೈನ್ಸ್‌ (ಕ್ಯಾಪಿಟಲ್‌ ಗಳಿಕೆ) ಅನ್ನುತ್ತಾರೆ. ಕರ ಲೆಕ್ಕಾಚಾರದ ದೃಷ್ಟಿಯಿಂದ ಈ ಕ್ಯಾಪಿಟಲ್‌ ಗಳಿಕೆಯನ್ನು ಬೇರೆ ಆದಾಯಗಳ ರೀತಿಯಲ್ಲಿ ಲೆಕ್ಕ ಹಾಕುವುದಿಲ್ಲ. ಅದಕ್ಕೆ ಅದರದ್ದೇ ಪ್ರತ್ಯೇಕವಾದ ವಿಶೇಷ ಲೆಕ್ಕಾಚಾರವಿದೆ.

ಕ್ಯಾಪಿಟಲ್‌ ಗಳಿಕೆಯನ್ನು ದೀರ್ಘ‌ಕಾಲಿಕ (Long term Capital Gains)  ಹಾಗೂ ಅಲ್ಪ ಕಾಲಿಕ (Short Term Capital gains)  ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ನಮೂನೆಯ ಕ್ಯಾಪಿಟಲ್‌ ಎನ್ನುವುದರ ಮೇಲೆ ಭೌತಿಕ ಮತ್ತು ವಿತ್ತೀಯ ಎಂಬ ಇನ್ನೆರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿತ್ತೀಯದ ಒಳಗೂ ಈಕ್ವಿಟಿ ಮತ್ತು ಈಕ್ವಿಟಿಯೇತರ ಹಾಗೂ ಇಕ್ವಿಟಿಯ ಒಳಗೆ ಎಸ್‌.ಟಿ.ಟಿ. ಕರ (Securities Transaction Tax) ತೆತ್ತ ಹಾಗೂ ತೆರದ - ಹೀಗೆ ಇನ್ನೆರಡು ಕೆಟಗರಿಯನುಸಾರ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಬೇರೆ ಬೇರೆ ದರಗಳಲ್ಲಿ ವಿಧಿಸಲ್ಪಡುತ್ತದೆ. (ಟೇಬಲ್‌ ನೋಡಿ)

ಕ್ಯಾಪಿಟಲ್‌ ಗೈನ್ಸ್‌ ಲೆಕ್ಕ ಹೇಗೆ?
ಮೂಲಧನದಲ್ಲಿ ವೃದ್ಧಿ ಅಂದ ಮೇಲೆ ಕ್ಯಾಪಿಟಲ್‌ ಗೈನ್ಸ್‌ ಆದಾಯಕ್ಕೆ ಮಾರಾಟದ ಬೆಲೆ ಕಳೆ ಮೂಲ ಹೂಡಿಕೆ ಎಂಬ ಸರಳ ಸಮೀಕರಣ ಬಳಸಬಹುದು.
ಕ್ಯಾಪಿಟಲ್‌ ಗೈನ್ಸ್‌= ಮಾರಾಟ ಬೆಲೆ - (ಮೂಲ ವೆಚ್ಚ+ಅಭಿವೃದ್ಧಿ ವೆಚ್ಚ)
ಅಲ್ಪಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಲೆಕ್ಕಾಚಾರ ಈ ರೀತಿಯೇ ಹಾಕಲಾಗುತ್ತದೆ.

ಆದರೆ ಕ್ಯಾಪಿಟಲ್‌ ಗೈನ್ಸ್‌ ಕೇವಲ ಹಣದುಬ್ಬರದಿಂದಲೂ ಉಂಟಾಗಬಹುದಲ್ಲವೇ? ಅದರ ಮೇಲೂ ಕರ ವಿಧಿಸುವುದು ಸಾಧುವೇ ಎಂಬ ಪ್ರಶ್ನೆ ಬರುತ್ತದೆ.

ಹಾಗಾಗಿ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಲೆಕ್ಕ ಹಾಕುವಲ್ಲಿ ಸರಕಾರ ಹಣದುಬ್ಬರದ ಪಾಲಿಸಿ ವೃದ್ಧಿಯನ್ನು ಹೊರತಾಗಿಸಿ ಉಳಿದ ನೈಜವಾದ ಧನವೃದ್ಧಿಯ ಮೇಲೆ ಮಾತ್ರ ಕರ ಬೀಳುವಂತೆ ಅನುಕೂಲ ಮಾಡಿಕೊಟ್ಟಿದೆ. ಹಣದುಬ್ಬರದ ಭಾಗವನ್ನು ಹೊರತಾಗಿಸಲು ಹಣದುಬ್ಬರ ಆಧಾರಿತ ಇಂಡೆಕ್ಸೇಶನ್‌ ಬಳಸಬೇಕು.

ಇಂಡೆಕ್ಸೇಶನ್‌
ಟೇಬಲ್‌ನಲ್ಲಿ ಕಾಣಿಸಿದಂತೆ ಕೆಲವೆಡೆ ಕರ ಲೆಕ್ಕ ಹಾಕುವಾಗ ಇಂಡೆಕ್ಸೇಶನ್‌ ಸೌಲಭ್ಯ ಇದೆ. ಈ ಇಂಡೆಕ್ಸೇಶನ್‌ ಪದ್ಧತಿಯಲ್ಲಿ ಪ್ರತಿ ವರ್ಷವೂ ಬೆಲೆಯೇರಿಕೆ ಸೂಚ್ಯಂಕಾಧಾರಿತ ಇಂಡೆಕ್ಸ್‌ ಸಂಖ್ಯೆಯನ್ನು (CII= Cost Inflation Index)) ಸರಕಾರ ಘೋಷಿಸುತ್ತದೆ. ಆ ಸಂಖ್ಯೆಯಿಂದ ಆ ಆಸ್ತಿಯ ಖರೀದಿ ಮತ್ತು ಅಭಿವೃದ್ಧಿ ವೆಚ್ಚವನ್ನು ಗುಣಾಕಾರ ಮೂಲಕ ಹೆಚ್ಚಿಸಿಕೊಂಡ ಮೇಲೆಯೇ ಮಾರಾಟ ಬೆಲೆಯಿಂದ ಕಳೆದು ಕ್ಯಾಪಿಟಲ್‌ ಗಳಿಕೆಯನ್ನು ಲೆಕ್ಕ ಹಾಕಬೇಕು. ಈ ರೀತಿ ಬೆಲೆಯೇರಿಕೆಯ ಅಂಶವನ್ನು ತೆಗೆದುಹಾಕಿ ಶುದ್ಧ ಲಾಭಕ್ಕೆ ಮಾತ್ರ ಕರ ನೀಡಿದಂತಾಗುತ್ತದೆ.

ಉದಾ: 1990ರಲ್ಲಿ (ವರ್ಷದ ಇಂಡೆಕ್ಸ್‌ 172) ರೂ. 100 ಕೊಟ್ಟು ಖರೀದಿಸಿ ಅಭಿವೃದ್ಧಿ ಪಡಿಸಿದ ಆಸ್ತಿಯನ್ನು 2010ರಲ್ಲಿ (ವರ್ಷದ ಇಂಡೆಕ್ಸ್‌ 632) ರೂ. 400ಕ್ಕೆ ಮಾರಿದರೆ ಸರಳವಾಗಿ ರೂ. 300 (ಅಂದರೆ 400-100) ಕ್ಯಾಪಿಟಲ್‌ ಗೈನ್ಸ್‌. ಆದರೆ ಇಂಡೆಕ್ಸೇಶನ್‌ ಪ್ರಕಾರ 400- (100x632/172) = ರೂ. 33 ಮಾತ್ರ ಕ್ಯಾಪಿಟಲ್‌ ಗೈನ್ಸ್‌.

Set-off ಮತ್ತು ನಷ್ಟದ Carry Forward
ಅಲ್ಪಕಾಲಿಕ ಕ್ಯಾಪಿಟಲ್‌ ನಷ್ಟವನ್ನು ಅಲ್ಪ ಅಥವಾ ದೀರ್ಘ‌ಕಾಲಿಕ ಕ್ಯಾಪಿಟಲ್‌ ಲಾಭದೊಡನೆ ಸೆಟ್‌-ಆಫ್ ಅಥವಾ ವಿಲೀನಗೊಳಿಸಬಹುದಾಗಿದೆ. ಆದರೆ ದೀರ್ಘ‌ಕಾಲಿಕ ನಷ್ಟವನ್ನು ಮಾತ್ರ ಇನ್ನೊಂದು ದೀರ್ಘ‌ಕಾಲಿಕ ಲಾಭದೊಡನೆ ಮಾತ್ರ ಸೆಟ್‌-ಆಫ್ ಮಾಡಬಹುದಾಗಿದೆ. ಅಲ್ಲದೆ ಯಾವುದೇ ಕ್ಯಾಪಿಟಲ್‌ ಗೈನ್‌ ನಷ್ಟವನ್ನು ಇತರ ಯಾವುದೇ ಆದಾಯದ ಕೆಟಗರಿಯೊಂದಿಗೆ ಸೆಟ್‌ಆಫ್ ಮಾಡಲು ಬರುವುದಿಲ್ಲ. ಒಂದು ವರ್ಷದಲ್ಲಿ ಸೆಟ್‌-ಆಫ್ ಆಗದ ನಷ್ಟವನ್ನು 8 ವರ್ಷಗಳವರೆಗೆ ಪೇರಿಸಿಗೊಂಡು ಹೋಗಿ (Carry forward)) ಮುಂದಿನ ವರ್ಷಗಳಲ್ಲಿ ಬರುವ ಕ್ಯಾಪಿಟಲ್‌ ಲಾಭದೊಂದಿಗೆ ಮೇಲೆ ಹೇಳಿದಂತೆ ಸೆಟ್‌ ಆಫ್ ಮಾಡಬಹುದಾಗಿದೆ.

ಕಾಪಿಟಲ್‌ ಗೈನ್ಸ್‌ ತೆರಿಗೆ ವಿನಾಯಿತಿ
1. ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗಳಿಕೆ (3 ವರ್ಷ ಮೀರಿ) ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆಗೆ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕ್ಯಾಪಿಟಲ್‌ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚುಮಾಡಿದರೆ ಅಷ್ಟೇ ಭಾಗದ (Pro rata) ವಿನಾಯತಿ ಸಿಗುತ್ತದೆ. ಖರೀದಿ ಮಾಡುವವರೆಗೆ ದುಡ್ಡನ್ನು "ಕ್ಯಾಪಿಟಲ್‌ ಗೈನ್ಸ್‌ ಎಕೌಂಟ್‌ ಸ್ಕೀಂ' (CGAS) ನಲ್ಲಿ ಇಡಬೇಕು.
2. ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು ಮನೆಯೇತರ ಬೇರೆ ಯಾವುದಾದರೂ ಕ್ಯಾಪಿಟಲ್‌ ಆಸ್ತಿಯನ್ನು ಮಾರಾಟ ಮಾಡಿ ಕ್ಯಾಪಿಟಲ್‌ ಗೈನ್ಸ್‌ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್‌ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು. ಅಲ್ಲದೆ, ಇಲ್ಲೂ CGAS Clause ಇದೆ.
3. ಭೂಮಿ ಯಾ ಕಟ್ಟಡ ರೂಪದ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕಾಪಿಟಲ್‌ ಗಳಿಕೆಯನ್ನು ರೂರಲ್‌ ಇಲೆಕ್ಟ್ರಿಫಿಕೇಶನ್‌ ಕಾರ್ಪೋರೇಶನ್‌ (REC)) ಅಥವಾ ನ್ಯಾಶನಲ್‌ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಕನಿಷ್ಟ 5 ವರ್ಷಕ್ಕೆ ಹೂಡಿದರೆ (ವಾರ್ಷಿಕ ಮಿತಿ 50 ಲಕ್ಷ) ಅಂತಹ ಕ್ಯಾಪಿಟಲ್‌ ಗಳಿಕೆ ಸಂಪೂರ್ಣವಾಗಿ ಕರಮುಕ್ತ. ಶೇರು, ಮ್ಯೂಚುವಲ್‌ ಫ‌ಂಡ್‌, ಚಿನ್ನದ ಮಾರಾಟದಲ್ಲಿನ ಕ್ಯಾಪಿಟಲ್‌ ಗೈನ್ಸ್‌ ಮೇಲೆ ಈ ತೆರನಾದ ಯಾವುದೇ ರಿಯಾಯಿತಿ ಈ ವಿತ್ತ ವರ್ಷದಿಂದ ಇರುವುದಿಲ್ಲ.

ಕರ ಪಾವತಿ
ಮೇಲೆ ಹೇಳಿದ ರೀತಿಯಲ್ಲಿ ಲೆಕ್ಕ ಹಾಕಿದ ನಂತರ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಗಳಿಕೆಯ ಮೇಲೆ 80ಸಿ ಇತ್ಯಾದಿ ಸೆಕ್ಷನ್‌ ಅಡಿಯಲ್ಲಿ ಪುನಃ ಕರ ವಿನಾಯಿತಿ ಸಿಗುವುದಿಲ್ಲ. ಹಾಗಾಗಿ ನಿಮ್ಮ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗಳಿಕೆಯ ಮೇಲೆ ಕೋಷ್ಟಕದ ಪ್ರಕಾರ ತೆರಿಗೆ ಪಾವತಿ ಮಾಡತಕ್ಕದ್ದು.

ನಿವಾಸಿ ಭಾರತೀಯರು ಬೇಸಿಕ್‌ ಕರ ವಿನಾಯಿತಿಯ ಮಿತಿಯಾದ ರೂ. 2.5 ಲಕ್ಷ (ಹಿರಿಯ ನಾಗರಿಕರಿಗೆ 3 ಲಕ್ಷ ಹಾಗೂ ಅತಿ ಹಿರಿಯ ನಾಗರಿಕರಿಗೆ 5 ಲಕ್ಷ) ವಾರ್ಷಿಕದ ಲಾಭವನ್ನು ಪಡೆಯಬಹುದು. ಆ ಮಿತಿ ಮೀರಿದ ಮೊತ್ತಕ್ಕೆ ಮಾತ್ರ ಕೋಷ್ಟಕದ ಪ್ರಕಾರ ಕರ ಕಟ್ಟಿದರೆ ಸಾಕು. ಆದರೆ ಈ ಸೌಲಭ್ಯ ಎನ್ನಾರೈಗಳಿಗೆ ಇಲ್ಲ. ಅವರು ಪೂರ್ತಿ ಧನವೃದ್ದಿಯ ಮೇಲೆ ಕರಕಟ್ಟಬೇಕು.

Tags:

ಆದಾಯ ತೆರಿಗೆ

ಕ್ಯಾಪಿಟಲ್‌

ಶೇರು

ಮ್ಯೂಚುವಲ್‌ ಫ‌ಂಡು

Income tax

capital

stock

Mutual Fund

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 10 Dec 2018 00:30:00 +0000 shriram.g 344433 at https://www.udayavani.com https://www.udayavani.com/kannada/news/investments-savings/344433/capital-gains-tax---revised-information-this-year#comments ಹಿಂದು ಅವಿಭಕ್ತ ಕುಟುಂಬ ಎಂಬ "ಕರಪ್ರಸಾದ'   https://www.udayavani.com/kannada/news/investments-savings/342682/the-hindu-joint-family-called-karur

ಗುರುಗುಂಟಿರಾಯರ ಕುಟುಂಬದಲ್ಲಿ ನಿವೃತ್ತರಾದ ಅವರನ್ನು ಬಿಟ್ಟರೆ ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರೇ. ಮಗರಾಯ ಒಂದು ಖಾಸಗಿ ಕಂಪೆನಿಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಸುಮಾರು ರೂ. 5 ಲಕ್ಷದಷ್ಟು ಸಂಪಾದನೆ ಇಟ್ಟುಕೊಂಡವನಾಗಿದ್ದಾನೆ. ಸೊಸೆಯಾದ ಬಹೂರಾನಿ ಒಂದು ಖಾಸಗಿ ಹೈ-ಫೈ ಬ್ಯಾಂಕಿನಲ್ಲಿ ಕಸ್ಟಮರ್‌ ರಿಲೇಶನ್‌ ಮ್ಯಾನೇಜರ್‌ ಅಂತೇನೋ ಆಗಿದ್ದು ಗಂಡನಿಂದಲೂ 1 ಲಕ್ಷ ಜಾಸ್ತಿಯೇ ಸಂಪಾದಿಸುತ್ತಾಳೆ. ರಾಯರಿಗೆ ಮಾಮೂಲಿನಂತೆ ತಿಂಗಳಿಗೆ ಇಪ್ಪತ್ತೈದು ಸಾವ್ರ ಪಿಂಚಣಿ ಬರುತ್ತದೆ. ಅದಲ್ಲದೆ ಪ್ರತಿಯೊಬ್ಬರಿಗೂ ಬಡ್ಡಿ ಆದಾಯ, ಕೃಷಿ ಆದಾಯ, ಅಂಗಡಿ ಬಾಡಿಗೆ, ಭೂಮಿ ಮಾರಾಟದಿಂದ ಆದಾಯ ಇತ್ಯಾದಿ ಇತರ ಆದಾಯಗಳು ಅಗಾಗ್ಗೆ ಬರುತ್ತಾ ಇರುತ್ತದೆ.

ಹೀಗಿರುವಾಗ ಈ ಮೂವರೂ ತಮ್ಮ ಆದಾಯ ಕರವನ್ನು ಪ್ರತ್ಯೇಕವಾಗಿ ಕಟ್ಟುತ್ತಾರೆ. ಕುಟುಂಬ ಒಂದೇ ಆದರೂ ಅವರ ಮೂವರ ಆದಾಯಗಳನ್ನು ತೆರಿಗೆ ಕಟ್ಟುವ ಸಲುವಾಗಿ ಒಟ್ಟುಗೂಡಿಸಲಾಗುವುದಿಲ್ಲ. ವೈಯಕ್ತಿಕ ನೆಲೆಯಲ್ಲಿಯೇ ಪ್ರತ್ಯೇಕ ಖಾತೆ/ಪ್ಯಾನ್‌ ನಂಬರ್‌ಗಳ ಮೂಲಕ ತೆರಿಗೆ ಕಟ್ಟುತ್ತಾರೆ.

ಅಂತದ್ದರಲ್ಲಿ ಒಂದು ದಿನ ಬಹೂರಾನಿಗೆ ಒಂದು ಘನಂದಾರಿ ಐಡಿಯಾ ಬಂತು. ಅದೆಲ್ಲಿ ಆಫೀಸಿನ ಚರ್ಚೆಗಳಲ್ಲಿ ಮುಳುಗಿದ್ದಾಗ ತುಳುಕಿದ್ದನ್ನು ಹೆಕ್ಕಿಕೊಂಡಿದ್ದಾಳ್ಳೋ ಗೊತ್ತಿಲ್ಲ. ಆದರೆ ಕಾಕು ಅಂಗಳದಲ್ಲಿ ಕರಸಂಬಂಧಿ ಹೊಸ ಹೊಸ ಐಡಿಯಾಗಳನ್ನು ತಂದು ಬಡಿಸುವುದು ನಮ್ಮ ಬಹೂರಾನಿಯೇ ಎಂಬುದು ನಿಮಗೆಲ್ಲಾ ಚೆನ್ನಾಗಿ ಗೊತ್ತು.  ಬಹೂರಾನಿಯ ಪ್ರಕಾರ ಅವಳೂ ಅವಳ ಗಂಡನೂ ಸೇರಿ ಒಂದು "ಹಿಂದು ಅವಿಭಕ್ತ ಕುಟುಂಬ' ಎಂದು ಮಾಡಿಕೊಂಡು ಆ ಹೆಸರಿನಲ್ಲಿ ಕೆಲವು ಇತರ ಆದಾಯಗಳನ್ನು ತೂರಿಸಿದಲ್ಲಿ ಅದರಲ್ಲೇ ಒಂದು ಪ್ರತ್ಯೇಕ ಕರ ಖಾತೆ ಆರಂಭಿಸಬಹುದು. ಅದರಿಂದ ಸಾಕಷ್ಟು ತೆರಿಗೆ ವಿನಾಯಿತಿಯೂ ಸಿಕ್ಕೀತು.

ಈ ವಿಚಾರ ಕಿವಿಗೆ ಹಾಕಿಸಿಕೊಂಡ ಗುರುಗುಂಟಿರಾಯರಿಗೆ ಎಂದಿನಂತೆ ಈ ಮಾತು ಪಚನವಾಗಲಿಲ್ಲ. ಸೊಸೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ ಅಗಾಗ್ಗೆ ಎಲ್ಲೋ  ಕೇಳಿಸಿಕೊಂಡು ಬಂದು ಇಲ್ಲಿ ಎಳೆದುಹಾಕುವ ಇಂತಹ ಗಂಡಾಂತರದ ಐಡಿಯಗಳು ಅವರಿಗೆ ಇಷ್ಟವಾಗುವುದಿಲ್ಲ. ಇದೆಂತದ್ದು ಇವಳು ತನ್ನ ಗಂಡನನ್ನು ಕಟ್ಟಿಕೊಂಡು ಅವಿಭಕ್ತ ಕುಟುಂಬ ಮಾಡುವುದು? ಇರುವುದು ಒಂದು ಮಗು; ಇನ್ನೊಂದಾದರೂ ಇರಲಿ ಅಂತ ತಾನು ನಾಲ್ಕಾರು ಬಾರಿ ಹಿಂಟ್‌ ಕೊಟ್ಟಿದ್ದರೂ ಏನೂ ಆಗುವುದು ಕಾಣುವುದಿಲ್ಲ. ಮಗರಾಯನ ಹೇಳಿಕೆ ಪ್ರಕಾರ ಅವಳಿಗೆ ಕೆರೀರು ಮುಖ್ಯವಂತೆ. ಅದು ಬಿಡಿ, ಎಲ್ಲಾ ಕಡೆ ಇದ್ದದ್ದೇ ಅನ್ನಿ, ಆದ್ರೆ ಇದೀಗ ಅವಿಭಕ್ತ ಕುಟುಂಬಕ್ಕೆ ಅದು ಹೇಗೆ ಹೊರಟು ನಿಂತಿದ್ದಾಳೆ? ಅದಕ್ಕೆಲ್ಲಾ ಹಳೇ ಕಾಲದಲ್ಲಿ ಇದ್ದ ಹಾಗೆ ಒಬ್ಬ ಹಿರಿಯಜ್ಜ ಮತ್ತು ಆತನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹೀಗೆಲ್ಲಾ ಬೇಕು. ಅದು ಬಿಟ್ಟು ಒಬ್ಬ ಅಯೋಗ್ಯ ಗಂಡ ಮತ್ತು ಎರಡು ಫೀಟ್‌ ಸೈಜಿನ ಒಂದು ಮಗುವನ್ನು ಕಟ್ಟಿಕೊಂಡು ಅದೆಂತ ಅವಿಭಕ್ತ ಕುಟುಂಬಕ್ಕೆ ಹೊರಟಿದ್ದಾಳೆ ಇವಳು. . . ಅಂತ ಗೊಣಗಾಡತೊಡಗಿದರು.

ಎಲ್ಲೆಡೆ ಕೂಡುಕುಟುಂಬಗಳು ನಶಿಸಿ ಹೋಗುತ್ತಿರೆ, ಎಲ್ಲೆಡೆ "ನಾವು ಮತ್ತು ನಮಗಿಬ್ಬರು' ಕುಟುಂಬಗಳು ಜನಪ್ರಿಯವಾಗುತ್ತಿರೆ, ಭಾರತೀಯ ಆದಾಯ ಕರದ ಕಡತಗಳಲ್ಲಿ ಹಿಂದು ಅವಿಭಕ್ತ ಕುಟುಂಬದ ಪರಿಕಲ್ಪನೆ ಇನ್ನೂ ಜೀವಂತವಾಗಿದೆಯಷ್ಟೇ ಅಲ್ಲದೆ, ಅದನ್ನು ನಂಬಿ ಬಾಳುವಂತಹ ಭಕ್ತಾದಿಗಳಿಗೆ ಒಂದು ವರಪ್ರಸಾದವಾಗಿಯೇ ಒದಗಿ ಬರುತ್ತಿದೆ.

ಆದಾಯಕರ ಕಾಯಿದೆಯ ಪ್ರಕಾರ ಒಬ್ಬ ಮೇಜರ್‌ ವ್ಯಕ್ತಿಗೆ ಒಂದು ಫೈಲು ಅಥವಾ ಒಂದು ಖಾತೆ ಅಥವಾ ಒಂದು ಪ್ಯಾನ್‌ ನಂಬರ್‌ ಮೀಸಲಿಡಲಾಗುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಸ್ವಂತ ಆದಾಯವುಳ್ಳ ವಯಸ್ಕರಿದ್ದಲ್ಲಿ (ಉದಾ: ಪತಿ, ಪತ್ನಿ) ಅವರಿಗೆ ಎರಡು ಫೈಲು ಅಥವ ಖಾತೆ ಅಥವ ಪ್ಯಾನ್‌ ನಂಬರ್‌ ಲಭ್ಯವಾಗುತ್ತದೆ ಮತ್ತು ಅವರವರ ಆದಾಯ ತೆರಿಗೆ ಪ್ರತ್ಯೇಕವಾಗಿ ಲೆಕ್ಕ ಹಾಕಲ್ಪಡುತ್ತದೆ. ಅಂದರೆ ಪ್ರತಿಯೊಬ್ಬರಿಗೂ ಅವರ ಆದಾಯ ಹೊಂದಿಕೊಂಡು ರೂ. 2.5 ಲಕ್ಷದ ಬೇಸಿಕ್‌ ವಿನಾಯಿತಿ ಹಾಗೂ ಸೆಕ್ಷನ್‌ 80ಸಿ ಯ ರೂ. 1.5 ಲಕ್ಷ ಮತ್ತಿತರ ಸೆಕ್ಷನ್ನುಗಳ ವಿನಾಯಿತಿಗಳು ಲಭ್ಯವಾಗುತ್ತದೆ. ಈ ರೀತಿ ವ್ಯಕ್ತಿಗತ ಆದಾಯದ ಮೇಲೆ ತೆರಿಗೆ ಅನ್ವಯವಾಗುತ್ತದೆ.

ವ್ಯಕ್ತಿಗತ ಆದಾಯವಲ್ಲದೆ ಬೇರೆ ಕೌಟುಂಬಿಕ ಆದಾಯವಿದ್ದಲ್ಲಿ ಬಹುತೇಕ ಅದನ್ನು ಪತಿ ಅಥವ ಪತ್ನಿಯ ಖಾತೆಗೆ, ಯಾರ ಹೆಸರಲ್ಲಿ ಆದಾಯ ಬರುತ್ತದೋ ಅವರ ಖಾತೆಗೆ ಸೇರಿಸಲ್ಪಡುತ್ತದೆ. ಉದಾಹರಣೆಗಾಗಿ ಕೌಟುಂಬಿಕ ಕಟ್ಟಡಗಳ ಮೇಲೆ ಬರುವ ಆದಾಯ, ಕೌಟುಂಬಿಕ ಬಿಸಿನೆಸ್‌ ಆದಾಯ, ಪಿತ್ರಾರ್ಜಿತವಾಗಿ ಬಂದ ತೋಟದ ಮೇಲಿನ ಆದಾಯ, ಕುಟುಂಬಕ್ಕೆ ಬಂದ ಗಿಫ್ಟ್ ಆದಾಯ, ಮನೆ/ಆಸ್ತಿ ಮಾರಿ ಬಂದ ಕ್ಯಾಪಿಟಲ್‌ ಗೈನ್ಸ್‌ ಆದಾಯ ಇತ್ಯಾದಿ. ಈ ರೀತಿ ಬಂದ ಆದಾಯವನ್ನು ವೈಯಕ್ತಿಕ ಆದಾಯಕ್ಕೆ ಸೇರಿಸಿ ಆದಾಯ ಕರ ಕಟ್ಟುತ್ತಾರೆ. ಇದಕ್ಕೆ ಅವರವರ ಸ್ಲಾಬಾನುಸಾರ ಕರ ತಗಲುತ್ತದೆ. ಶೇ.30 ಆದಾಯ ತೆರಿಗೆಯ ಸ್ಲಾಬ್‌ನಲ್ಲಿ ಇರುವವರು ಈ ಹೆಚ್ಚುವರಿ ಕೌಟುಂಬಿಕ ಆದಾಯದ ಮೇಲೂ ಶೇ. 30 ದರದಲ್ಲಿಯೇ ತೆರಿಗೆ ಕಟ್ಟಬೇಕಾಗುತ್ತದೆ.

ವೈಯಕ್ತಿಕ ನೆಲೆಯಲ್ಲಿ ಖಾತೆ ಹೊಂದುವುದಲ್ಲದೆ ಒಂದು ಕೌಟುಂಬಿಕ ನೆಲೆಯಲ್ಲಿಯೂ ಒಂದು ಪ್ರತ್ಯೇಕ ಖಾತೆ ಹೊಂದಲು ಸಾಧ್ಯ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಿಂದು ಅನ್‌ಡಿವೈಡೆಡ್‌ ಫ್ಯಾಮಿಲಿ ಅಥವಾ ಎಚ್‌ಯುಎಫ್ ಅಥವಾ ಹಿಂದು ಅವಿಭಕ್ತ ಕುಟುಂಬ ಎಂಬ ಪರಿಕಲ್ಪನೆಯ ಅಡಿಯಲ್ಲಿ ಇಂತಹ ಇನ್ನೊಂದು ಪ್ರತ್ಯೇಕ ಖಾತೆ ತೆರೆಯಲು ಸಾಧ್ಯ.

ಸಂಬಳದಂಥಹ ವೈಯಕ್ತಿಕ ಆದಾಯವನ್ನು ವೈಯಕ್ತಿಕ ಕರಖಾತೆಯಲ್ಲೂ ಕೌಟುಂಬಿಕವಾದ ಆದಾಯವನ್ನು ಎಚ್‌ಯುಎಫ್ ಖಾತೆಯಲ್ಲೂ ಪ್ರತ್ಯೇಕವಾಗಿ ಕಾಣಿಸಬಹುದು. ಈ ರೀತಿ ಒಂದು ಎಚ್‌ಯುಎಫ್ ಖಾತೆ ಹೊಂದಿದಲ್ಲಿ ಆ ಖಾತೆಗೆ ಬರುವ ಕೌಟುಂಬಿಕ ಆದಾಯಗಳ ಮೇಲೆ ಪ್ರತ್ಯೇಕವಾದ ರೂ. 2.5 ಲಕ್ಷದ ಬೇಸಿಕ್‌ ರಿಯಾಯತಿ ಹಾಗೂ ರೂ.1.5 ಲಕ್ಷದ ಸೆಕ್ಷನ್‌ 80ಸಿ ರಿಯಾಯಿತಿ, ಅದಲ್ಲದೆ ಸದಸ್ಯರ ಮೇಲಿನ ಮೆಡಿಕಲ…, ಹೌಸಿಂಗ್‌, ಎಜುಕೇಶನ್‌ ಲೋನ್‌ ಮತ್ತಿತರ ವಿನಾಯತಿಗಳು ಲಭ್ಯವಾಗುತ್ತದೆ. ಈ ರೀತಿ ಒಂದೇ ಕುಟುಂಬದೊಳಗೆ ಪತಿ ಪತ್ನಿಗೆ 2 ಖಾತೆಗಳಲ್ಲದೆ ಎಚ್‌ಯುಎಫ್ ಹೆಸರಿನಲ್ಲಿ ಇನ್ನೊಂದು ಮೂರನೆಯ ಪ್ರತ್ಯೇಕ ಖಾತೆ ಹೊಂದಿ ಅದರ ಕರವಿನಾಯತಿಯ ಸೌಲಭ್ಯ ಪಡೆಯಲು ಸಾಧ್ಯ! ಇದೇ ಎಚ್‌ಯುಎಫ್ ಖಾತೆಯ ಹಿರಿಮೆ.

ಹೆಸರೇ ತಿಳಿಸುವಂತೆ ಇದು ಹಿಂದು (ಸಿಖ್‌/ಜೈನ್‌ ಸಹಿತ) ಧರ್ಮದವರಿಗೆ ಮಾತ್ರ ಲಭ್ಯ. ಅಲ್ಲದೆ ಇದನ್ನು ಹುಟ್ಟು ಹಾಕಲು ನಮ್ಮ ಗುರುಗುಂಟಿರಾಯರು ತಿಳಿದುಕೊಂಡ ಹಾಗೆ ಅಜ್ಜ, ಆಜ್ಜಿ, ಮಗಂದಿರು, ಸೊಸೆಯಂದಿರು, ಹತ್ತು ಡಜನ್‌ ಮೊಮ್ಮಕ್ಕಳನ್ನು ಹೊಂದಿದ ನಾಲ್ಕು ಕ್ರಿಕೆಟ್‌ ಟೀಮ್‌ ಸೈಜಿನ ಒಂದು ಕುಟುಂಬದ ಅಗತ್ಯ ಇಲ್ಲ. ಕೇವಲ ಇಬ್ಬರೇ ಇಬ್ಬರು ಸಾಕು ಈ ಸಂಸ್ಥೆ ತೆರೆಯಲು. ಒಬ್ಬ ಪತಿ ಹಾಗೂ ಆತನ ಒಬ್ಬಳು ಪತ್ನಿ ಸಾಕು. ವಾಸ್ತವದಲ್ಲಿ ಒಬ್ಟಾತ ಮದುವೆಯಾದ ಕ್ಷಣದಿಂದಲೇ ಆತನ ಹೆಸರಿನಲ್ಲಿ ಒಂದು ಎಚ್‌ಯುಎಫ್ ಆರಂಭವಾಗುತ್ತದೆ. ಪ್ರತಿಯೊಂದು ಮಗು ಹುಟ್ಟಿದಾಕ್ಷಣ ಅದು ಆ ಎಚ್‌ಯುಎಫ್ಗೆ ಸೇರಿಕೊಳ್ಳುತ್ತದೆ. ಓರ್ವ ಕರ್ತ ಮತ್ತು ಇತರರು ಪಾಲುದಾರರಾಗಿ/ಸದಸ್ಯರಾಗಿ ಈ ಸಂಸ್ಥೆಯನ್ನು ರಿಜಿಸ್ಟರ್‌ ಮಾಡಿಸಿಕೊಂಡು ಅದಕ್ಕೆ ಒಂದು ಪೇಪರ್‌ ರೂಪ ನೀಡಬಹುದು. ಒಂದು ಪ್ರತ್ಯೇಕ ಬ್ಯಾಂಕ್‌ ಖಾತೆ ಮತ್ತು ಪ್ರತ್ಯೇಕ ಪ್ಯಾನ್‌ಕಾರ್ಡ್‌ ಪಡೆದುಕೊಳ್ಳಬೇಕು.

ಓಹೋ ಹಾಗೋ ಸಮಾಚಾರ, ಇದೊಳ್ಳೆ ಅವಕಾಶ ಮಾರಾಯೆ, ನಾಳೇನೇ ಬೆಳಿಗ್ಗೆ ಒಬ್ಬ ಸಿಎಯನ್ನು ಕಂಡು ಒಂದು ಎಚ್‌ಯುಎಫ್ ತೆರೆದು ಈ "ಕರಪ್ರಸಾದದ ಫ‌ಲಾನುಭವಿಗಳಾಗೋಣ' ಎಂದು ಹೊರಡದಿರಿ. ಕೇವಲ ಕರ ವಿನಾಯತಿ ಪಡೆಯಲೋಸ್ಕರೇ ಅಂತಹ ಒಂದು ಖಾತೆಯನ್ನು ತೆರೆದು ಒಂದಿಷ್ಟು ಆದಾಯವನ್ನು ಅದರಲ್ಲಿ ತುರುಕಿ ಕರ ವಿನಾಯತಿ ಪಡೆಯಲು ಪ್ರಯತ್ನಿಸುವುದು ತರವಲ್ಲ. ಭಾರತ ದೇಶದಲ್ಲಿ ಅಗ್ರಿಕಲ್ಚರ್‌ ಆದಾಯದಂತೆಯೇ ಅತ್ಯಂತ ದುರುಪಯೋಗ ಪಡಿಸಿಕೊಂಡಂತಹ ಇನ್ನೊಂದು ವಿಚಾರ ಈ "ಹಿಂದು ಅವಿಭಕ್ತ ಕುಟುಂಬ'ವೇ ಆಗಿದೆ. ಯಾರಿಗೆ ನೈಜವಾಗಿಯೂ ಅಂತಹ ಕೌಟುಂಬಿಕ ಆದಾಯ ಇದೆಯೋ ಅಂತವರು ಮಾತ್ರ ಒಂದು ಪ್ರತ್ಯೇಕ ಎಚ್‌ಯುಎಫ್ ಖಾತೆ ತೆರೆದರೆ ಸಾಧು. ಈ ಪರಿಕಲ್ಪನೆಯನ್ನು ಅತ್ಯಂತ ಜಾಗರೂಕರಾಗಿ ಕಾನೂನುಬದ್ಧವಾಗಿ ಉಪಯೋಗಿಸಬೇಕಾಗಿ ವಿನಂತಿ.

ಒಂದು ಎಚ್‌ಯುಎಫ್ ಅನ್ನು ನಿಮ್ಮಿಂದ ಪ್ರತ್ಯೇಕವಾದ ಒಂದು ವ್ಯಕ್ತಿತ್ವವಾಗಿ ಗುರುತಿಸಲ್ಪಡುತ್ತದೆ. ಒಂದು ಪ್ರತ್ಯೇಕ ಕಂಪೆನಿಯಂತೆ. ಈ ಖಾತೆಗೆ ಬರುವ ಹಣ ಮತ್ತು ಅದರಿಂದ ಹೊರ ಹೋಗುವ ಹಣದ ಬಗ್ಗೆ ಕಾನೂನುಗಳಿವೆ. ಈ ಬಗ್ಗೆ ಕೂಡಾ ಎಚ್ಚರ ಅಗತ್ಯ.

ನಿಮ್ಮ ಪರಿಸ್ಥಿತಿಗನುಗುಣವಾಗಿ ಇದನ್ನು ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದನ್ನು ಓರ್ವ ನುರಿತ ಚಾರ್ಟರ್ಡ್‌ ಅಕೌಂಟಂಟ್‌ ಬಳಿ ಚರ್ಚಿಸಿಯೇ ತಿಳಿದುಕೊಳ್ಳಬೇಕು. ಕಾನೂನುಗಳ ಒಂದು ಸಂಕೀರ್ಣ ಹೆಣಿಗೆಯಾದ ಆದಾಯ ತೆರಿಗೆ ಕಾನೂನನ್ನು ನಿಮ್ಮ ಸಂದರ್ಭಕ್ಕೆ ಅಳವಡಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಓರ್ವ ತಜ್ಞ ಸಿಎಯಿಂದ ಮಾತ್ರ ಸಾಧ್ಯ.

ಕಾಕು ಅಂಕಣ ಎಷ್ಟೇ ಜನಪ್ರಿಯವಾದರೂ ಇಲ್ಲಿ ಎಲ್ಲರಿಗೂ ಸಲ್ಲುವಂತಹ ಸಮಗ್ರ ಮಾಹಿತಿ ಕೊಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಕೊಟ್ಟ ವಿವರಗಳಾಚೆಗೂ ಹಲವು ಸೂಕ್ಷ್ಮ ವಿಚಾರಗಳಿರಬಹುದು. ಕರ ಸಂಬಂಧಿ ಆಸಕ್ತಿದಾಯಕ ವಿಚಾರಗಳನ್ನು ಎತ್ತಿ ಅದರ ಬಗ್ಗೆ ನಿಮ್ಮಲ್ಲಿ ಪ್ರಾಥಮಿಕ ಅರಿವು ಮೂಡಿಸುವುದು ಮಾತ್ರ ನಮ್ಮಿಂದ ಸಾಧ್ಯ. ಆ ಬಳಿಕ ನಿಮ್ಮ ಸಂದರ್ಭಕ್ಕೆ ಸೂಕ್ತವಾದ ವಿಚಾರಗಳನ್ನು ಆಳವಾದ ಅಧ್ಯಯನ ಮತ್ತು ತಜ್ಞ ಸಿಎಗಳ ನೆರವಿನಿಂದ ಮಂಥನ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಕೇವಲ ಒಂದು ಲೇಖನ ಓದಿ ಸ್ವಯಂ ವೈದ್ಯಕೀಯ ಯಾವತ್ತೂ ಮಾಡಬಾರದು.

Tags:

taxes

Income tax

ಆದಾಯ ಕರ

ಆದಾಯ ತೆರಿಗೆ

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 03 Dec 2018 00:30:00 +0000 shriram.g 342682 at https://www.udayavani.com https://www.udayavani.com/kannada/news/investments-savings/342682/the-hindu-joint-family-called-karur#comments ಕರ ವಿನಾಯಿತಿ ಪಡೆಯಲು ನಾನಾ ಮಾರ್ಗಗಳು  https://www.udayavani.com/kannada/news/investments-savings/339170/there-are-several-ways-to-get-exemption-from-the-car

ಕಳೆದ ವಾರ ತಿಳಿಸಿದಂತೆ ಈ ವಿತ್ತ ವರ್ಷ 2018-19ರ ಕರ ಕಾನೂನು 2018ರ ಬಜೆಟ್‌ ಮೇರೆಗೆ ಇರುತ್ತದೆ. ಈ ಕೆಳಗಿನ ಪಟ್ಟಿ ಬಜೆಟ್‌-2018 ಅನ್ನು ಅನುಸರಿಸಿ ತಯಾರಿಸಲಾಗಿದೆ. ಹಾಗಾಗಿ ಈ ವರ್ಷದ ಕರ ಉಳಿತಾಯಕ್ಕೆ ಮೊತ್ತ ಮೊದಲನೆಯದಾಗಿ ನೀವು ಈ ಕೆಳಗಿನ ವಿಚಾರಗಳಲ್ಲಿ ಮಾಡಿದ ಖರ್ಚು/ಹೂಡಿಕೆ ಏನಾದರೂ ಇವೆಯೇ ಎನ್ನುವುದನ್ನು ಹಂತ ಹಂತವಾಗಿ ಪರಿಶೀಲಿಸಿ ಪಟ್ಟಿ ಮಾಡಿಕೊಳ್ಳಿ.

1. ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನ್ಶನ್‌ ಮೊತ್ತದಿಂದ ರೂ. 40,000 ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ.

2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್‌ 24/ಸೆಕ್ಷನ್‌ 80EE)
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ಒಟ್ಟು ರೂ. 2 ಲಕ್ಷದವರೆಗೆ ಸ್ವಂತ ಅಥವಾ ಬಾಡಿಗೆ ನೀಡಿರುವ ಮನೆಯ ಮೇಲೆ ಮಾಡಿದ ಗೃಹಸಾಲದ ಬಡ್ಡಿಯನ್ನು Income from House property  ಎಂಬ ಹೆಸರಿನಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್‌ ಟ್ಯಾಕ್ಸ್‌ ಹಾಗೂ ಮತ್ತು ಬಾಡಿಗೆಯ ಶೇ.30 ವಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು.

ಇದಲ್ಲದೆ, ಸೆಕ್ಷನ್‌ 80EE ಅನುಸಾರ ತಮ್ಮ ಪ್ರಪ್ರಥಮ ಮನೆಗಾಗಿ ಹಿಂದೊಮ್ಮೆ 2016-17 ಅವಧಿಯಲ್ಲಿ ಸಾಲ ಮಾಡಿದ್ದಲ್ಲಿ ಅದರ ಬಡ್ಡಿಯ ಮರುಪಾವತಿಗಾಗಿ ವಾರ್ಷಿಕ ರೂ. 50,000ವರೆಗೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಮನೆಯ ಒಟ್ಟು ವೆಚ್ಚ ರೂ. 50 ಲಕ್ಷ ಮಿತಿಯೊಳಗೆ ಹಾಗೂ ಸಾಲದ ಒಟ್ಟು ಮೊತ್ತ ರೂ. 35 ಲಕ್ಷದ ಮಿತಿಯೊಳಗೆ ಇದ್ದಿರಬೇಕು. ಈ ಸೌಲಭ್ಯ ಎಪ್ರಿಲ್‌ 1, 2017 ಬಳಿಕ ಮಾಡಿದ ಗೃಹ ಸಾಲಕ್ಕೆ ಲಭ್ಯವಿಲ್ಲ.

3. ಎನ್‌.ಪಿ.ಎಸ್‌/ಅಟಲ್‌ ಪೆನ್ಶನ್‌ (ಸೆಕ್ಷನ್‌ 80CCD(1b)
ಎನ್‌.ಪಿ.ಎಸ್‌ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್‌.ಪಿ.ಎಸ್‌ ದೇಣಿಗೆ ಸೆಕ್ಷನ್‌ 80ಇಅಡಿಯಲ್ಲಿ PPF, NSC, ELSS, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಒಟ್ಟಿಗೆ ಬರುತ್ತದೆ. ಅದನ್ನು ಆಮೇಲೆ ನೋಡೋಣ. ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್‌ 80 CCD(1b) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರ ವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್‌.ಪಿ.ಎಸ್‌ ಹೂಡಿಕೆಯನ್ನು 80 CCD(1b) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಇ ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್‌.ಪಿ.ಎಸ್‌ ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80CCD(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ)

4. ಮೆಡಿಕಲ್‌ ಇನ್ಶೂರೆನ್ಸ್‌ (ಸೆಕ್ಷನ್‌ 80D)
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್‌ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000 ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 50,000 ಆಗಿದೆ. 80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.

5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್‌ 80 DD)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್‌ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರ ವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ.

6. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80DDB)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 1,00,000.

7. ಶೈಕ್ಷಣಿಕ ಸಾಲದ ಬಡ್ಡಿ (ಸೆಕ್ಷನ್‌ 80 E)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ಇಲ್ಲಿ ಅಸಲಿನ ಮರುಪಾವತಿಗೆ ವಿನಾಯಿತಿ ಇಲ್ಲ.

8. ಡೊನೇಶನ್‌ (ಸೆಕ್ಷನ್‌ 80 G)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 - ಸರಕಾರ ನಿಗದಿಪಡಿಸಿದಂತೆ ಸಂಬಳದ ಶೇ.10 ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

9. ಬಾಡಿಗೆ ರಿಯಾಯಿತಿ (ಸೆಕ್ಷನ್‌ 80 GG)
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.

10.ಸ್ವಂತ ಅಂಗವೈಕಲ್ಯ (ಸೆಕ್ಷನ್‌ 80 U)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ. 1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ.

ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಅದಾದ ಮೇಲೆ ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್‌80ಸಿ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ. 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು

11.ಸೆಕ್ಷನ್‌ 80 C/CCC/CCD
ಈ 3 ಸೆಕ್ಷನ್‌ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ)
- ಎಂಪ್ಲಾಯೀಸ್‌ ಫ್ರಾವಿಡೆಂಟ್‌ ಫ‌ಂಡ್‌ (ಇಪಿಎಸ್‌) - ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ ವಾಲಂಟರಿಯಾಗಿ ಪಿಎಫ್ಗೆ ನೀಡಿದ್ದು ಸಹಿತ (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ, ಅದು ಪ್ರತ್ಯೇಕ)
- ಸ್ವಂತ, ಬಾಳಸಂಗಾತಿ, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ -ವಿಮಾ ಮೊತ್ತದ ಶೇ.10 ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಸರಿ ಸುಮಾರು ಜೀವ ವಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ.
- ಗರಿಷ್ಟ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್‌ ಫೀ. (ಬೇರೆ ಯಾವುದೇ ಫೀಸ್‌ ಆಗಲ್ಲ, ಟ್ಯೂಶನ್‌ ಫೀ ಹೆಸರಿನಲ್ಲಿರುವ ಫೀ ಮಾತ್ರ)
- ಗೃಹಸಾಲದ ಮರುಪಾವತಿಯಲ್ಲಿ (ಇಎಮ…ಐ) ಅಸಲು ಭಾಗ (ಬಡ್ಡಿ ಬಿಟ್ಟು)
- ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್‌, ಸ್ಟಾಂಪ್‌ಡ್ನೂಟಿ ವೆಚ್ಚಗಳು.
- ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ ದೇಣಿಗೆ
- ಅಂಚೆ ಕಚೇರಿಯ ಎನ್‌ಎಸ್‌ಸಿ ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
- ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌ (ELSS) ನಾಮಾಂಕಿತ ಮ್ಯೂಚುವಲ್‌ ಫ‌ಂಡ್‌. ಇಲ್ಲಿ ಯಾವುದೇ ಈಕ್ವಿಟಿ ಫ‌ಂಡುಗಳು ಬರುವುದಿಲ್ಲ. ಇವುಗಳು ಇಎಲ…ಎಸ್‌ಎಸ್‌ ಅಥವಾ ಟ್ಯಾಕ್ಸ್‌ ಸೇವರ್‌ ಎಂಬ ನಿರ್ದಿಷ್ಟ ಲೇಬಲ್‌ಗ‌ಳೊಂದಿಗೆ ಬಿಡುಗಡೆಯಾಗುತ್ತವೆ.
- ಮ್ಯೂಚುವಲ್‌ ಫ‌ಂಡ್‌ಗಳ ಯುನಿಟ್‌ ಲಿಂಕ್ಡ್ ಪೆನ್ಶನ್‌ ಪ್ಲಾನ್‌ಗಳು (UTI & RBP, Franklin Templeton & TIPP and Reliance Retirement Fund)
- ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರ ನೋಂದಾಯಿತ ಎಫ್ಡಿ: ಇಲ್ಲೂ ಕೂಡಾ 80ಇ ಸೆಕ್ಷನ್‌ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್‌ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್‌-ಇನ್‌ ಇರುತ್ತದೆ.
- ಅಂಚೆ ಕಚೇರಿಯ 5 ವರ್ಷದ ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ (SCSS)ನಲ್ಲಿ ಮಾಡಿದ ಹೂಡಿಕೆ.
- ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ.
- ಎಲ್ಲೆçಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್‌ ಪ್ಲಾನುಗಳು (ಸೆಕ್ಷನ್‌ 80CCC)
- ನ್ಯಾಶನಲ್‌ ಪೆನ್ಶನ್‌ ಸ್ಕೀಂ (NPS)/ಅಟಲ್‌ ಪೆನ್ಶನ್‌ (ಸೆಕ್ಷನ್‌ 80CCD): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ -80CCD(1) ಮತ್ತು 80CCD(1b). ಮೊದಲೇ ಹೇಳಿದಂತೆ, ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80ಇಇಈ(1b) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ. 80CCD(1) ಸೆಕ್ಷನ್‌ ಉಳಿದ 80E ಸೆಕ್ಷನ್‌ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80CCD(1b) ಮಿತಿ ಮೀರಿದರೆ ಉಳಿದ ಮೊತ್ತವನ್ನು ಇಲ್ಲಿ 80CCD(1) ಅಡಿಯಲ್ಲಿ ತೆಗೆದುಕೊಳ್ಳಬಹುದು.

12. ಎಸ್‌ಬಿ/ಎಫ್ಡಿ/ಆರ್‌ಡಿ ಬಡ್ಡಿಗೆ ಕರ ವಿನಾಯಿತಿ (ಸೆಕ್ಷನ್‌ 80 TTA/TTB): ಸೆಕ್ಷನ್‌ 80TTA ಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಸೆಕ್ಷನ್‌ 80TTA ಅನುಸಾರ ಕರ ವಿನಾಯಿತಿ ಇದೆ.

ಅಲ್ಲದೆ, ಕೇವಲ ಹಿರಿಯನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80TTB ಅನುಸಾರ ರೂ. 50,000ದ ವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಖಖಅ ಅನ್ವಯವಾಗುವುದಿಲ್ಲ). ಈ ರೂ. 50,000 ದಲ್ಲಿ ಎಸ್‌ಬಿ ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್‌ಡಿಗಳ ಬಡ್ಡಿಯನ್ನೂ ಈಗ ಸೇರಿಸಬಹುದಾಗಿದೆ.

- ಪ್ರತಿ ಸ್ಲಾಬಿನವರೂ ಅದರ ಹಿಂದಿನ ಸ್ಲಾಬಿನ ಕರ ಸಹಿತ ಒಟ್ಟು ಕರ ಕಟ್ಟಬೇಕು.
- ರೂ. 3.5 ಲಕ್ಷದ ಕೆಳಗಿನ ಆದಾಯ ಇರುವವರಿಗೆ ಸೆಕ್ಷನ್‌ 87ಅ ಅನುಸಾರ ಕಟ್ಟುವ ಕರದಲ್ಲಿ ರೂ. 2,500ರಷ್ಟು ಕರ ವಿನಾಯಿತಿ ಇದೆ.
- ಆದಾಯ ರೂ. 50 ಲಕ್ಷ ಮೀರಿದರೆ ಶೇ. 10 ಸರ್ಚಾರ್ಜ್‌ ಹಾಗೂ ರೂ. 1 ಕೋಟಿ ಮೀರಿದರೆ ಶೇ.15 ಸರ್ಚಾರ್ಜ್‌
- ಕರ ಮತ್ತು ಸರ್ಚಾರ್ಜ್‌ ಮೇಲೆ ಶೇ.4 ಎಜುಕೇಶನ್‌ ಸೆಸ್‌.

Tags:

ಕರ ವಿನಾಯಿತಿ

ಸ್ಟಾಂಡರ್ಡ್‌ ಡಿಡಕ್ಷನ್‌

ಮೆಡಿಕಲ್‌ ಇನ್ಶೂರೆನ್ಸ್‌Standard Deduction

Medical Insurance

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 19 Nov 2018 00:30:00 +0000 shriram.g 339170 at https://www.udayavani.com https://www.udayavani.com/kannada/news/investments-savings/339170/there-are-several-ways-to-get-exemption-from-the-car#comments ಹಾಲಿ ವಿತ್ತ ವರ್ಷದ ಕೆಲವು ಉಳಿತಾಯ ಲೆಕ್ಕಾಚಾರಗಳು  https://www.udayavani.com/kannada/news/investments-savings/337400/some-savings-calculations-for-the-current-fiscal-year

ಸಾಂದರ್ಭಿಕ ಚಿತ್ರ

ಈ ವಿತ್ತ ವರ್ಷದ ಕರ ಉಳಿತಾಯಕ್ಕೆ ಹೂಡಿಕೆಯ ವಿವರ ಈ ಕೂಡಲೇ ಕೊಡಿ ಅಂತ ನಿಮ್ಮ ಅಕೌಂಟ್ಸ್‌ ಸೆಕ್ಷನ್ನಿನಿಂದ ಒಂದು ಸಕ್ಯುìಲರ್‌ ಬಂದಿರುತ್ತದೆ. ಇದೆಂತದಪ್ಪಾ ಪೀಡೆ ಅಂತ ಅದನ್ನು ಕಡೆಗಣಿಸುವಂತಿಲ್ಲ. ಅಕೌಂಟ್ಸ್‌ ಸೆಕ್ಷನ್ನಿನ ಮೇಡಮ್ಮುಗಳು ಎಷ್ಟೇ ಸ್ವೀಟಾಗಿ ಮಾತನಾಡಿದರೂ ಟಿಡಿಎಸ್‌ ವಿಷಯ ಬರುವಾಗ ಅಷ್ಟೇ ನಿರ್ದಾಕ್ಷಿಣ್ಯವಾಗಿ ಕತ್ತರಿ ಹಾಕುವುದು ನಮಗೆಲ್ಲರಿಗೂ ಅನುಭವ ಕಲಿಸಿದ ಪಾಠ.

ಕಳೆದ ವಿತ್ತ ವರ್ಷದ ಲೆಕ್ಕಾಚಾರ ಮುಗಿಸಿ ಸುಸ್ತಾಗಿ ಉಸ್ಸಪ್ಪ ಅಂತ ಕುಳಿತರೆ ಈ ವಿತ್ತ ವರ್ಷದ ಕರ ಉಳಿತಾಯಕ್ಕೆ ಹೂಡಿಕೆಯ ವಿವರ ಈ ಕೂಡಲೇ ಕೊಡಿ ಅಂತ ನಿಮ್ಮ ಅಕೌಂಟ್ಸ್‌ ಸೆಕ್ಷನ್ನಿನಿಂದ ಒಂದು ಸಕ್ಯುìಲರ್‌ ಬಂದಿರುತ್ತದೆ. ಇದೆಂತದಪ್ಪಾ ಪೀಡೆ ಅಂತ ಅದನ್ನು ಕಡೆಗಣಿಸುವಂತಿಲ್ಲ. ಅಕೌಂಟ್ಸ್‌ ಸೆಕ್ಷನ್ನಿನ ಮೇಡಮ್ಮುಗಳು ಎಷ್ಟೇ ಸ್ವೀಟಾಗಿ ಮಾತನಾಡಿದರೂ ಟಿಡಿಎಸ್‌ ವಿಷಯ ಬರುವಾಗ ಅಷ್ಟೇ ನಿರ್ದಾಕ್ಷಿಣ್ಯವಾಗಿ ಕತ್ತರಿ ಹಾಕುವುದು ನಮಗೆಲ್ಲರಿಗೂ ಅನುಭವ ಕಲಿಸಿದ ಪಾಠ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ನೀವು ಒತ್ತಾಯಪೂರ್ವಕ ಕರಾಸಕ್ತರಾಗಿ ಈ ವರ್ಷ ಏನಪ್ಪಾ ಉಳಿತಾಯ ಮಾಡುವುದು ಎಂದು ತಲೆ ಕೆರೆಯುತ್ತೀರಿ.
ಮೊತ್ತ ಮೊದಲಾಗಿ ಈ ವರ್ಷಕ್ಕೆ ಅನ್ವಯವಾಗುವ ಬಜೆಟ್‌ 2018ರ ಕರ ಕಾನೂನು ಯಾವುದು ಎನ್ನುವುದನ್ನು ಮನನ ಮಾಡೋಣ. ಆಮೇಲೆ ಮುಂದುವರಿಯುತ್ತಾ ಅವನ್ನು ಯಾವ ರೀತಿಯಲ್ಲಿ ನಮ್ಮ ಲಾಭಕ್ಕೋಸ್ಕರ ಈ ವಿತ್ತ ವರ್ಷ 2018-19ರಲ್ಲಿ ಬಳಸಿಕೊಳ್ಳುವುದು ಎಂಬುದನ್ನು ನೋಡೋಣ:

1.ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳಿಗೆ ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನ್ಶನ್‌ ಮೊತ್ತದಿಂದ ನೇರವಾಗಿ ರೂ. 40,000ವನ್ನು ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ. ಆದರೆ  ಈ ಬದಲಾವಣೆಯು ಮೇಲ್ನೋಟಕ್ಕೆ ಕಂಡಷ್ಟು ಆಕರ್ಷಕವಲ್ಲ.ಏಕೆಂದರೆ ಇದರೊಂದಿಗೆ ಈ ಮೊದಲು ಉದ್ಯೋಗಿಗಳಿಗೆ ಪ್ರಯಾಣ ವೆಚ್ಚದ ಮೇಲೆ ಸಿಗುತ್ತಿದ್ದ ವಾರ್ಷಿಕ ರೂ. 19200 ಹಾಗೂ ಬಿಲ್‌ ತೋರಿಸಿ ವೈದ್ಯಕೀಯ ವೆಚ್ಚಕ್ಕೆ ಸಿಗುತ್ತಿದ್ದ ವಾರ್ಷಿಕ ರೂ. 15000 (ಒಟ್ಟು 34,200ರ ವಿನಾಯಿತಿ) ಇನ್ನು ಮುಂದೆ ಇಲ್ಲವಾಗುತ್ತದೆ. ಅಂದರೆ ಈ ಮೊದಲು ರೂ. 34,200ರ ರಿಯಾಯಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದವರಿಗೆ ಈಗಿನ ಒಟ್ಟಾರೆ ವಿನಾಯಿತಿ ರೂ. 5,800ಮಾತ್ರ! (40000-34200). ಅಂತಿಮ ಲಾಭವು ಈ ಮೊತ್ತದ ಮೇಲೆ ಅವರು ಸ್ಲಾಬ್‌ ಅನುಸಾರ ಕಟ್ಟಬೇಕಾದ ತೆರಿಗೆಯ ಮೊತ್ತದಷ್ಟು ಮಾತ್ರ ಅಂದರೆ ರೂ. 5,800ರ ಶೇ.5, ಶೇ.20 ಯಾ ಶೇ. 30 ಮಾತ್ರ.

ಆದರೆ ಹಲವಾರು ಸಂಸ್ಥೆಗಳಲ್ಲಿ ಪ್ರಯಾಣ ಭತ್ತೆ ಮತ್ತು ವೈದ್ಯಕೀಯ ಭತ್ತೆ ನೀಡುತ್ತಿರಲಿಲ್ಲ. ಅಲ್ಲದೆ ಹಲವಾರು ಜನರಿಗೆ ವೈದ್ಯಕೀಯದ ಖರ್ಚು ಬರುತ್ತಲೇ ಇರಲಿಲ್ಲ ಅಥವಾ ಭಾಗಶಃ ಬರುತ್ತಿತ್ತು. ಇನ್ನು ಮುಂದೆ ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ
ಉದ್ಯೋಗಿಗಳಿಗೂ ಪರ್ಯಾಯವಾಗಿ ಈ ರೂ. 40,000ದ ಲಾಭ ಸಿಕ್ಕಿಯೇ ಸಿಗುತ್ತದೆ. ಅಂಥವರಿಗೆ ಇದು ಸಂತಸದ ವಿಷಯವೇ ಸರಿ. ಪೆನ್ಶನ್‌ ಪಡೆಯುವವರಿಗೂ ಇದು ಲಾಭಕರ.

2.ಸೆಸ್‌ ಏರಿಕೆ
ಈ ಬಾರಿ ಆದಾಯ ತೆರಿಗೆಯ ಸ್ಲಾಬ್‌ ಮತ್ತು ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡದಿದ್ದರೂ ಎಲ್ಲರಿಗೂ ಅನ್ವಯ ಆಗುವಂತೆ ಶೈಕ್ಷಣಿಕ ಸೆಸ್‌ನಲ್ಲಿ ಶೇ.1ಹೆಚ್ಚಳ ಮಾಡಿದ್ದಾರೆ. ಈವರೆಗೆ ಶೇ.3 ಇದ್ದ ಎಜುಕೇಶನ್‌ ಸೆಸ್‌ ಇನ್ನು ಮುಂದೆ ಶೇ.4 ಆಗಲಿದೆ. ಸೆಸ್‌ ಅಂದರೆ ತೆರಿಗೆಯ ಮೇಲೆ ಕಟ್ಟುವ ತೆರಿಗೆ. ತೆರಿಗೆ ಮೊತ್ತದ  ಮೇಲೆ ಹೆಚ್ಚುವರಿ ಶೇ.4 ಸೆಸ್‌ ಸೇರಿಸಿ ಒಟ್ಟು ತೆರಿಗೆ ಕಟ್ಟಬೇಕು. (ತೆರಿಗೆ ರೂ. 100 ಇದ್ದರೆ ಸೆಸ್‌ ಸೇರಿಸಿ ರೂ. 104 ಕಟ್ಟಬೇಕು. ಶೂನ್ಯ ತೆರಿಗೆಯವರಿಗೆ ಸೆಸ್‌ ಬರುವುದಿಲ್ಲ) ಆದಾಯ ಜಾಸ್ತಿ ಆದಂತೆಲ್ಲಾ ಈ ಸೆಸ್‌ ಮೊತ್ತ ಮೇಲೆ ಹೇಳಿದ ಸ್ಟಾಂಡರ್ಡ್‌ ಡಿಡಕ್ಷನ್‌ ಲಾಭವನ್ನು ಕಮ್ಮಿ ಮಾಡುತ್ತಾ ಹೋಗುತ್ತದೆ.

3.ಶೇರುಗಳ ಮೇಲಿನ ಶೇ.10 ತೆರಿಗೆ
ಶೇರು ಮತ್ತು ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳು (ಕನಿಷ್ಠ ಶೇ.65 ಶೇರುಗಳಲ್ಲಿ ಹೂಡಿಕೆಯುಳ್ಳವು) STT (Securities Transaction Tax) ತೆತ್ತು ಮಾರಾಟವಾದಲ್ಲಿ ಅಲ್ಪಕಾಲಾವಧಿಗೆ ಲಾಭಾಂಶದ ಮೇಲೆ ಶೇ.15ಹಾಗೂ ದೀರ್ಘ‌ ಕಾಲಾವಧಿಗೆ ಶೂನ್ಯ ತೆರಿಗೆ ಈ ವರೆಗೆ ಇತ್ತು. ಹೂಡಿಕೆ ಮಾಡಿದ ದಿನದಿಂದ ಮಾರಾಟದ ದಿನದವರೆಗೆ 1 ವರ್ಷ ಅವಧಿಯು ಅಲ್ಪ ಹಾಗೂ 1 ವರ್ಷ ಮೀರಿದ ಅವಧಿಯು ದೀರ್ಘ‌ ಕಾಲಾವಧಿ ಎಂದು ಪರಿಗಣಿಸಲಾಗುತ್ತದೆ. ಈ ಬಜೆಟ್ಟಿನಲ್ಲಿ 1 ವರ್ಷ ಮೀರಿದ ದೀರ್ಘ‌ ಕಾಲಾವಧಿಯ ಹೂಡಿಕೆಯಲ್ಲಿ ಉಂಟಾದ ಲಾಭಾಂಶದ ಮೇಲೆ ವಾರ್ಷಿಕ ರೂ. 1ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಅದನ್ನು ಮೀರಿದ ಲಾಭಾಂಶದ ಮೇಲೆ ಶೇ.10 ತೆರಿಗೆ ಇದೆ. ಈ ಶೇ.10 ತೆರಿಗೆಯ ಲೆಕ್ಕಾಚಾರದಲ್ಲಿ ಯಾವುದೇ indexation benefit  ನೀಡಲಾಗುವುದಿಲ್ಲ ಹಾಗೂ STT ಸಹಿತ ಇನ್ನಾವುದೇ ವ್ಯಾವಹಾರಿಕಾ ವೆಚ್ಚ ಅಥವಾ ಅಭಿವೃದ್ಧಿ ವೆಚ್ಚಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಅಷ್ಟೇ ಅಲ್ಲದೆ, ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳು ನೀಡುವ ಡಿವಿಡೆಂಡುಗಳ ಮೇಲೆ ಯಾವುದೇ DDT (Dividend Distribution Tax) ) ಇರಲಿಲ್ಲ. ಈ ಮುಂದೆ ಶೇ.10% DDT ಮೂಲದಲ್ಲಿಯೇ ಕಡಿತವಾಗಿ ಉಳಿದ ಡಿವಿಡೆಂಡ್‌ ಮಾತ್ರ ನಿಮ್ಮ ಕೈಸೇರಲಿದೆ. ಶೇರುಗಲಿಗಳು ಇದನ್ನು ಮನದಲ್ಲಿ ಇಟ್ಟುಕೊಳ್ಳಬೇಕು.

ಈ ಹೊಸ ಶೇ.10 ತೆರಿಗೆ ಏಪ್ರಿಲ್‌ 1, 2018ರ ನಂತರ ಮಾರಾಟವಾದ ಶೇರು/ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳಿಗೆ ಮಾತ್ರ ಅನ್ವಯ. ಎರಡನೆಯದಾಗಿ, ಲಾಭಾಂಶ ನಿರ್ಣಯಕ್ಕೆ ಜನವರಿ 31, 2018ರ ಮಾರುಕಟ್ಟೆ ಬೆಲೆ ಅಥವಾ ಮೂಲ ಹೂಡಿಕಾ ಬೆಲೆ-ಎರಡರಲ್ಲಿ ಯಾವುದು ಜಾಸ್ತಿಯೋ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುವುದು. ಈ ಜನವರಿ 31ರ ಪ್ರಮೇಯ ಲಾಭಾಂಶ ನಿರ್ಣಯಕ್ಕೆ ಮಾತ್ರ. ಒಂದು ವರ್ಷದ ಹೂಡಿಕಾ ಅವಧಿಯ ನಿರ್ಣಯಕ್ಕೆ ನಿಜವಾದ ಹೂಡಿಕೆ ಮತ್ತು ಮಾರಾಟದ ತಾರೀಕುಗಳನ್ನೇ ತೆಗೆದುಕೊಳ್ಳಬೇಕು.

4.    ಕರಮುಕ್ತ NPS  ಹಿಂಪಡೆತ
ಈವರೆಗೆ ಎನ್‌.ಪಿ.ಎಸ್‌. ಖಾತೆಯಿಂದ ಅಂತಿಮವಾಗಿ ಹಿಂಪಡೆಯುವ ಶೇ.40 ಮೊತ್ತದ ಮೇಲೆ ನೀಡಲಾಗಿದ್ದ ಕರ ವಿನಾಯಿತಿಯು ಕೇವಲ ನೌಕರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಮುಂದೆ ಈ ಕರ ವಿನಾಯಿತಿಯು ಎಲ್ಲಾ ಸಾರ್ವಜನಿಕರಿಗೂ ಅನ್ವಯವಾಗುತ್ತದೆ. ಇದೊಂದು ಉತ್ತಮ ಹೆಜ್ಜೆ.

5.54EC ಬಾಂಡುಗಳ ಅವಧಿ ಮತ್ತು ಲಕ್ಷ್ಯ
ಒಂದು ಕ್ಯಾಪಿಟಲ್‌ ಅಸೆಟ್‌ ಅನ್ನು ಮಾರಿದಾಗ ಬರುವ ಕ್ಯಾಪಿಟಲ್‌ ಗೈನ್ಸ್‌ ಲಾಭಾಂಶವನ್ನು ಮಾರಿದ ದಿನಾಂಕದಿಂದ 6 ತಿಂಗಳ ಒಳಗಾಗಿ NHAI ಅಥವಾ REC ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಹೂಡಿದರೆ ಅಂತಹ ಲಾಭದ ಮೇಲೆ ಕ್ಯಾಪಿಟಲ್‌ ಗೈನ್ಸ್‌ ಕರ ವಿನಾಯಿತಿ ಸಿಗುವುದು ಎಲ್ಲರಿಗೂ ಗೊತ್ತಿರುವ ಅಂಶ. ಆದರೆ ಈಗ ಅಂದರೆ 1 ಏಪ್ರಿಲ್‌ 2018ರ ನಂತರ ಆ ಬಾಂಡುಗಳ ಹೂಡಿಕಾ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ ಹಾಗೂ ಈ ಸೌಲಭ್ಯವನ್ನು ಭೂಮಿ ಮತ್ತು ಕಟ್ಟಡದ ಮಾರಾಟಕ್ಕೆ ಮಾತ್ರವೇ ಸೀಮಿತಪಡಿಸಲಾಗಿದೆ. ಚಿನ್ನ ಶೇರು ಇತ್ಯಾದಿ ಕಾಪಿಟಲ್‌ ಆಸ್ತಿಗಳಿಗೆ ಇರುವುದಿಲ್ಲ.

6. ಹಿರಿಯ ನಾಗರಿಕರಿಗೆ
ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ನಾಲ್ಕು ಪ್ರಮುಖ ನಿಗಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯೂ ಒಂದು.

ಮೆಡಿಕಲ್‌ ಇನ್ಶೂರೆನ್ಸ್‌ (ಸೆಕ್ಷನ್‌ 80D)
ಇದು ಆರೋಗ್ಯ ವಿಮೆಗೆ ನೀಡುವ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ ರೂ. 30,000 ಆಗಿದೆ. ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ.

(80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಈ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು). ಈ ಬಜೆಟ್ಟಿನಲ್ಲಿ ಹಿರಿಯ ನಾಗರಿಕರ ಮಿತಿಯನ್ನು ವಾರ್ಷಿಕ ರೂ. 30,000 ದಿಂದ ರೂ. 50,000ಕ್ಕೆ ಏರಿಸಲಾಗಿದೆ. ಕಟ್ಟಿದ ಪ್ರೀಮಿಯಂ ಒಂದಕ್ಕಿಂತ ಜಾಸ್ತಿ ವರ್ಷಗಳಿಗೆ ಅನ್ವಯಿಸುವುದಿದ್ದಲ್ಲಿ ಪ್ರತಿ ವರ್ಷಕ್ಕೆ ಪ್ರೊರೇಟಾ ಪ್ರಕಾರ ಮಾತ್ರವೇ ಈ ಸೌಲಭ್ಯ ದೊರಕುತ್ತದೆ.

ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80DDB)
ಸ್ವಂತ ಹಾಗೂ ಅವಲಂಭಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸ ಬಹುದು. 60 ದಾಟದ ಜನರಿಗೆ ಇದರ ಮೇಲಿನ ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 60,000 ಹಾಗೂ 80 ದಾಟಿದ ಅತಿ ವರಿಷ್ಠರಿಗೆ ಇದು ರೂ. 80,000. ಸದ್ರಿ ಬಜೆಟ್ಟಿನಲ್ಲಿ 60 ದಾಟಿದ ಎಲ್ಲಾ ನಾಗರಿಕರಿಗೆ ಈ ಮಿತಿಯನ್ನು ರೂ. 1,00,000 ಲಕ್ಷಕ್ಕೆ ಏರಿಸಲಾಗಿದೆ.

ಎಫ್ಡಿ/ಆರ್‌ಡಿ ಬಡ್ಡಿಗೆ ಕರವಿನಾಯಿತಿ
ಹಲವು ವರ್ಷಗಳಿಂದ ನಿವೃತ್ತ ಹಿರಿಯ ನಾಗರಿಕರ ಬೇಡಿಕೆ ಇದಾಗಿತ್ತು. ಇಳಿ ವಯಸ್ಸಿನಲ್ಲಿ ಹೆಚ್ಚಿನವರು ಹೂಡಿಕೆಗೆ ಎಫ್ಡಿಗಳನ್ನು ಮಾತ್ರವೇ ನಂಬಿರುತ್ತಾರೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲಿಕ್ಕೆ ಹೋಗುವುದಿಲ್ಲ. ಆದರೆ ಎಫ್ಡಿ ಮೇಲಿನ ಬಡ್ಡಿಯ ಪ್ರತಿ ಪೈಸೆಯೂ ಕರಾರ್ಹವಾಗಿತ್ತು - ಯಾವುದೇ ರಿಯಾಯಿತಿ ಇಲ್ಲದೆ. ಸೆಕ್ಷನ್‌ 80ಖಖಅಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಕರ ವಿನಾಯಿತಿ ಇದೆ. ಆದರೆ ಈ ಬಜೆಟ್ಟಿನಲಿ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80ಖಖಆ ಅನುಸಾರ ರೂ. 50,000ದವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಇನ್ನು ಮುಂದೆ 80ಖಖಅಅನ್ವಯವಾಗುವುದಿಲ್ಲ. ಈ ರೂ.50,000ದಲ್ಲಿ ಎಸ್‌ಬಿ ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್‌ಡಿ ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. ಅಲ್ಲದೆ ಈ ತರಗತಿಯ ಬಡ್ಡಿ ಆದಾಯದ ಮೇಲೆ ರೂ.50,000ವರೆಗೆ ಟಿಡಿಎಸ್‌ ಕಡಿತವೂ ಇರುವುದಿಲ್ಲ. ಇದರೊಂದಿಗೆ ಹಿರಿಯ ನಾಗರಿಕರ ಬಹುದಿನದ ಹಂಬಲ ಕೊಂಚ ಮಟ್ಟಿಗಾದರೂ ನಿವಾರಣೆಯಾಯಿತು ಅಂದುಕೊಳ್ಳಬಹುದು.

ಪ್ರಧಾನಮಂತ್ರಿ ವಯ ವಂದನ ಯೋಜನಾ (PMVVY)
ಹಿರಿಯ ನಾಗರಿಕರಿಗಾಗಿ ಹಿಂದೊಮ್ಮೆ ವರಿಷ್ಠಾ ಪೆನ್ಶನ್‌ ಯೋಜನಾ ಎಂಬ ಹೆಸರಿನಲ್ಲಿ ಜನ್ಮವೆತ್ತಿದ ಈ ಯೋಜನೆಗೆ ಕಳೆದ ವರ್ಷ "ಪ್ರಧಾನಮಂತ್ರಿ ವಯ ವಂದನ ಯೋಜನಾ' ಎಂಬ ಹೊಸ ಹೆಸರಿನಲ್ಲಿ ಪುನರ್ಜನ್ಮ ನೀಡಿದ ಸರಕಾರ ಇದೀಗ ಆ ಯೋಜನೆಯನ್ನು 2020 ಇಸವಿಯವರೆಗೆ ಜಾರಿಯಲ್ಲಿಡುತ್ತಿದೆ. ಶೇ.8 ಬಡ್ಡಿ ನೀಡುವ ಈ ಯೋಜನೆಯು ಎಲ್ಲೆ„ಸಿಯ ಮೂಲಕ ಬಿಕರಿಯಾಗುತ್ತಿದೆ. ಈವರೆಗೆ ಇದ್ದ ತಲಾ ರೂ. 7.5 ಲಕ್ಷದ ಹೂಡಿಕಾ ಮಿತಿಯನ್ನು ತಲಾ ರೂ. 15 ಲಕ್ಷಕ್ಕೆ ಏರಿಸಲಾಗಿದೆ. 60 ದಾಟಿದ ಎಲ್ಲಾ ಹಿರಿಯ ನಾಗರಿಕರು ಈ ಯೋಜನೆಯ ಫಾಯಿದಾ ತೆಗೆದುಕೊಳ್ಳಬಹುದು.

Tags:

ಅಕೌಂಟ್ಸ್‌ ಸೆಕ್ಷನ್ನಿ

ಕರ ಉಳಿತಾಯ

saving

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 12 Nov 2018 00:30:00 +0000 shriram.g 337400 at https://www.udayavani.com https://www.udayavani.com/kannada/news/investments-savings/337400/some-savings-calculations-for-the-current-fiscal-year#comments ನಿವೃತ್ತಿ ಪಾವತಿಗಳು ಮತ್ತು ಕರ ಕಾನೂನು  https://www.udayavani.com/kannada/news/investments-savings/335946/retirement-payments-and-contract-law

ವರ್ಷಗಟ್ಲೆ ದುಡಿದು ನಿವೃತ್ತಿಯಾದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್‌ ಚಹಾ, ಎರಡು ಬಿಸ್ಕೇಟ್‌ ಜತೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ಆಗ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳು, ಅವುಗಳ ಮೇಲಿನ ಕರಗಳ‌ ಬಗ್ಗೆ ಇಲ್ಲಿದೆ ಮಾಹಿತಿ.

ಕಾಸು ಕುಡಿಕೆ ಕಾಲಂನಲ್ಲಿ ಇ-ಮೈಲ್‌ ಐಡಿ ಹಾಕಿದ ನಂತರ ಹಲವಾರು ಓದುಗರ ಪತ್ರಗಳು ಬರುತ್ತಲೇ ಇರುತ್ತವೆ. ಲೇಖನಗಳನ್ನು ಓದಿ ಮೆಚ್ಚಿ ಬರೆವ ಪತ್ರಗಳು ಕೆಲವಾದರೆ ಹಲವಾರು ಪತ್ರಗಳು ಒಂದಲ್ಲ ಒಂದು ಗೊಂದಲಗಳ ನಿವಾರಣೆಗಾಗಿ ಬರುವಂತದ್ದು. ವೈಯಕ್ತಿಕವಾಗಿ ಹೂಡಿಕಾ ವಿಚಾರವಾಗಿ ಅಥವಾ ಕರ ವಿಚಾರವಾಗಿ ವಿವರಣೆಗಳನ್ನು ಕೋರುತ್ತಾ ಬರುವ ಇ-ಮೈಲ್‌ಗ‌ಳೇ ಅಧಿಕ. ಕಾಕು ಕಾಲಂ ಆರಂಭ ಮಾಡಿದ್ದೇ ಜನ ಹಿತಕ್ಕಾಗಿ ಆದಕಾರಣ ಬರುವ ಬಹಳಷ್ಟು ಪತ್ರಗಳಿಗೆ ಆ ಕೂಡಲೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ. ಆದರೂ ಎಲ್ಲಾ ಪತ್ರಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕೆಲ ಪತ್ರಗಳಲ್ಲಿ ಅಗತ್ಯವಾದ ಮಾಹಿತಿಗಳ ಕೊರತೆ ಇರುತ್ತದೆ; ಇನ್ನು ಕೆಲವು ಗೊಂದಲಗಳು ಯಾವುದೋ ವಿಚಾರವಾಗಿ ಒಂದು ನಿಲುವನ್ನು ಕೋರುವಂತದ್ದಾಗಿದ್ದು ಅದನ್ನು ಒಂದು ಕೋರ್ಟ್‌ ಮಾತ್ರವೇ ಪರಿಹರಿಸಲು ಸಾಧ್ಯ. ಇನ್ನು ಕೆಲವು ಪತ್ರಗಳು ಒಂದು ಸುದೀರ್ಘ‌ ಲೇಖನವನ್ನೇ ಬಯಸುತ್ತವೆ. ಆದಾಗ್ಯೂ ಸಾಧ್ಯವಾದಷ್ಟು ಮಟ್ಟಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಕೆಲವರಿಗೆ ನನ್ನಿಂದ ಉತ್ತರ ಬಾರದಿದ್ದಲ್ಲಿ ದಯವಿಟ್ಟು ಕ್ಷಮೆ ಇರಲಿ. ಸಮಯದ ಅಭಾವವೂ ಬಹಳಷ್ಟು ಬಾರಿ ಕಾಡಿದ್ದಿದೆ.

ಹಲವಾರು ಬಾರಿ ಬರುವ ಪ್ರಶ್ನೆಗಳೇ ಮುಂದಿನ ಕಾಕುವಿನ ವಸ್ತುವಾಗುವುದಿದೆ. ಅಂತಹ ವಸ್ತುಗಳನ್ನೇ ಆಯ್ದು ಅವನ್ನೇ ಮುಂದಿನ ಕಾಕುವಾಗಿ ಹೊಸೆದದ್ದಿದೆ. ಇತ್ತೀಚೆಗಿನ ದಿನಗಳಲ್ಲಿ ಬಹಳವಾಗಿ ಕೇಳಲ್ಪಡುವ ಒಂದು ಪ್ರಶ್ನೆ ನಿವೃತ್ತಿ ಸಮಯದ ಪಾವತಿ ಮತ್ತದರ ಮೇಲಿನ ಕರ ವಿನಾಯಿತಿಗೆ ಸಂಬಂಧಪಟ್ಟಂಥದ್ದು. ಈ ಬಾರಿ ಸ್ವಲ್ಪ ಅದೇ ಶೈಲಿಯಲ್ಲಿ ನಿವೃತ್ತಿಯ ಪಾವತಿಗಳು ಮತ್ತವುಗಳ ಮೇಲಿನ ಕರಭಾರದ ಬಗ್ಗೆ ಒಂದಿಷ್ಟು ಹೊಸೆದಿದ್ದೇನೆ. ಒಪ್ಪಿಸಿಕೊಳ್ಳಿ.

ಹೌದು, ವರ್ಷಗಟ್ಲೆ ದುಡಿದು ಕೊನೆಗೊಮ್ಮೆ ನಿವೃತ್ತಿಯ ಹಂತ ತಲುಪಿದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್‌ ಚಹಾ ಮತ್ತೆರಡು ಬಿಸ್ಕೇಟ್‌ಗಳಲ್ಲದೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳ ಬಗ್ಗೆ ಮತ್ತು ಅವುಗಳ ಮೇಲಿರುವ ಕರ ಕಾನೂನಿನ ಬಗ್ಗೆ ಈ ವಾರ ಚರ್ಚೆ ಮಾಡೋಣ:
ನಿವೃತ್ತಿ ಪಾವತಿಗಳು
1.    ಪ್ರಾವಿಡೆಂಟ್‌ ಫ‌ಂಡ್‌
2.    ಪೆನ್ಶನ್‌ ಮೊತ್ತ
3.    ಗ್ರಾಚೂÂಟಿ ಮೊತ್ತ
4.    ರಜೆಯ ನಗದು ಮೊತ್ತ

ಪ್ರಾವಿಡೆಂಟ್‌ ಫ‌ಂಡ್‌
ಉದ್ಯೋಗದ ಅವಧಿಯಲ್ಲಿ ಮಾಸಿಕ ಸಂಬಳದಿಂದ ಶೇ.12 ದರದಲ್ಲಿ ಕಡಿತಗೊಂಡ ಪ್ರಾವಿಡೆಂಟ್‌ ಫ‌ಂಡ್‌ ನಿಮ್ಮ ಹೆಸರಿನಲ್ಲಿಯೇ ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿರುತ್ತದೆ. ಈ ಮೊತ್ತ ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ನಿಮ್ಮ ಕೈಸೇರುತ್ತದೆ. ನಿವೃತ್ತಿಯ ಸಂದರ್ಭದಲ್ಲಿ ಕೈಸೇರಿದ ಪ್ರಾವಿಡೆಂಟ್‌ ಫ‌ಂಡ್‌ ಮೊತ್ತ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಯಾವುದೇ ಮಿತಿಯಿಲ್ಲದೆ ಇದು ಕರಮುಕ್ತವಾಗಿರುವುದು ಉದ್ಯೋಗಿಗಳಿಗೆ ಒಂದು ವರದಾನವೇ ಸರಿ. ಏಕಗಂಟಿನಲ್ಲಿ ಸಿಗುವ ಈ ಮೊತ್ತವನ್ನು ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ ಅಥವಾ ಅನ್ಯೂಟಿ, ಮಂಥಿ ಇನ್‌ಕಮ್‌ ಸ್ಕೀಂ, ಡೆಟ್‌ ಫ‌ಂಡ್‌. ಫಿಕ್ಸ್‌$x ಡೆಪಾಸಿಟ್‌ ಇನ್ನಿತರ ಯೋಜನೆಯಲ್ಲಿ ತೊಡಗಿಸಿಕೊಂಡರೆ ನಿವೃತ್ತಿ ಜೀವನಕ್ಕೆ ಆಧಾರವಾದೀತು. ಈ ಪ್ರತಿಯೊಂದು ಹೂಡಿಕೆಗೂ ತನ್ನದೇ ಆದ ಪ್ರತಿಫ‌ಲ ಹಾಗೂ ಆದಾಯ ಕರ ಇರುವ ಕಾರಣ ಕೂಲಂಕಷ ಅಧ್ಯಯನ ಅಗತ್ಯ.

2. ಪೆನ್ಶನ್‌ ಮೊತ್ತ
ಇಪಿಎಸ್‌ ರೀತಿಯ ಪೆನ್ಶನ್‌ ಇರಲಿ ಅಥವಾ ಸರಕಾರಿ ಪೆನ್ಶನ್‌ ಇರಲಿ, ನಿವೃತ್ತಿಯ ಸಮಯದಲ್ಲಿ ನಿಮ್ಮ ಪೆನ್ಶನ್‌ ಖಾತೆಯಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಒಂದು ಪೆನ್ಶನ್‌ ಮೊತ್ತ ಸಂಚಯವಾಗಿರುತ್ತದೆ. ಈ ಮೊತ್ತವನ್ನು ಎರಡು ರೀತಿಯಲ್ಲಿ ಪಡಕೊಳ್ಳಬಹುದು.

ನಿವೃತ್ತಿಯ ಸಮಯದಲ್ಲಿ ಪೆನ್ಶನ್‌ ಫ‌ಂಡಿನ ಒಂದು ಭಾಗವನ್ನು ಏಕಗಂಟಿನಲ್ಲಿ ಕಮ್ಯೂಟೆಡ್‌ ಪೆನ್ಶನ್‌ ರೂಪದಲ್ಲಿ ಆಯ್ದುಕೊಂಡು ಉಳಿದ ಭಾಗವನ್ನು ಮಾಸಿಕ ಪೆನ್ಶನ್‌ ಪಾವತಿಯಾಗಿ ಪಡಕೊಳ್ಳುವ ಪದ್ಧತಿ ಬಹುತೇಕ ಚಾಲ್ತಿಯಲ್ಲಿದೆ. ಮಾಸಿಕವಾಗಿ ಕೈಸೇರುವ ಪೆನ್ಶನ್‌ ಸಂಬಳದ ಆದಾಯದಂತೆಯೇ ಕರಾರ್ಹವಾಗಿರುತ್ತದೆ. ಇದು ಸರಕಾರಿ ಹಾಗೂ ಖಾಸಗಿ ನೌಕರರಿಗೆ ಸಮಾನವಾಗಿ ಅನ್ವಯವಾಗುವ ಕಾನೂನು. ಆದರೆ ಉದ್ಯೋಗಿಯ ಮೃತ್ಯುವಿನ ಬಳಿಕ ಬರುವ ಫ್ಯಾಮಿಲಿ ಪೆನ್ಶನ್‌ಗೆ ವಾರ್ಷಿಕ ರೂ. 15,000 ಅಥವಾ 1/3ನೇ ಭಾಗಕ್ಕೆ (ಯಾವುದು ಕಡಿಮೆಯೋ ಅದು) ಕರ ವಿನಾಯಿತಿ ಇದೆ.

ಕಮ್ಯೂಟೆಡ್‌ ಭಾಗವು ನೌಕರರಿಗಾದರೆ ಅದು ಸಂಪೂರ್ಣವಾಗಿ ಕರ ವಿನಾಯಿತಿಯನ್ನು ಹೊಂದಿರುತ್ತದೆ. ಇಲ್ಲಿ ಸರಕಾರಿ ಅಂದರೆ ಕೇಂದ್ರ/ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು, ಸರಕಾರಿ ಕಾರ್ಪೋರೇಶನ್‌ ಹಾಗೂ ಪಿಎಸ್‌ಯುಗಳು. ಆದರೆ ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಎರಡು ರೀತಿಯ ಕಾನೂನು ಇದೆ. ಗ್ರಾಚೂÂಟಿ ಪಡೆಯುವ ನೌಕರರಿಗೆ ಒಟ್ಟು ಮೊತ್ತದ 1/3 ಕಮ್ಯೂಟೆಡ್‌ ಭಾಗ ಮಾತ್ರ ಕರ ವಿನಾಯಿತಿಗೆ ಅರ್ಹವಾಗಿರುತ್ತದೆ. ಗ್ರಾಚೂÂಟಿ ಪಡೆಯದ ನೌಕರರಿಗೆ 1/2 ಭಾಗದಷ್ಟು ಕರ ವಿನಾಯಿತಿಯೊಂದಿಗೆ ಕಮ್ಯೂಟ್‌ ಮಾಡಲು ಅವಕಾಶವಿದೆ.

3. ಗ್ರಾಚೂÂಟಿ ಮೊತ್ತ
5 ವರ್ಷ ಮೀರಿ ಕೆಲಸ ಮಾಡಿದ ಉದ್ಯೋಗಿಗಳಿಗೆ ನಿವೃತ್ತಿ/ವಿಆರ್‌ಎ ಸ್‌/ರಾಜೀನಾಮೆಯ ಸಂದರ್ಭಗಳಲ್ಲಿ ಅಥವಾ ಅವರು ಮೃತ್ಯು ಹೊಂದಿದರೆ ಕುಟುಂಬದವರ ಕೈಗೆ ಸಿಗುವ ಗ್ರಾಚೂÂಟಿ ಮೊತ್ತ ಒಟ್ಟು ಸರ್ವಿಸ್‌ ಅವಧಿಯನ್ನು ಅನುಸರಿಸಿ ನೀಡಲಾಗುತ್ತದೆ. ಇಂತಹ ಗ್ರಾಚೂÂಟಿ ಸರಕಾರಿ ನೌಕರರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ.

ಆದರೆ ಖಾಸಗಿ ವಲಯದಲ್ಲಿ ಕರವಿನಾಯಿತಿಗೆ ಮಿತಿ ಇದೆ. ಪೇಯೆ¾ಂಟ್‌ ಆಫ್ ಗ್ರಾಚೂÂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ.

1.ಪ್ರತಿ ವರ್ಷದ ಸೇವೆಗೆ 15 ದಿನಗಳ ಲೆಕ್ಕದಲ್ಲಿ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ 26 ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ 6 ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್‌ ಮತ್ತು ಡಿಎ ಎಂದು ತಿಳಿಯಬೇಕು)
2. ನಿಜವಾಗಿಯೂ ಪಾವತಿಗೊಂಡ ಗ್ರಾಚೂÂಟಿ ಮೊತ್ತ
3. ರೂ. 20 ಲಕ್ಷ
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರ ಮುಕ್ತವಾಗಿರುತ್ತದೆ. ಅದಕ್ಕೂ ಮೀರಿ ಗ್ರಾಚೂÂಟಿ ಸಿಕ್ಕಿದರೆ ಅದರ ಮೇಲೆ ಆ ವರ್ಷದ ಸ್ಲಾಬ್‌ ಅನುಸರಿಸಿ ಕರ ಕಟ್ಟಬೇಕು. ಕೆಲ ಖಾಸಗಿ ಕಂಪೆನಿಗಳು ರೂ. 20 ಲಕ್ಷಕ್ಕೂ ಮೀರಿ ಗ್ರಾಚೂÂಟಿ ಕೊಡುವುದುಂಟು. ಅಂತಹ ಸಂದರ್ಭದಲ್ಲಿ ಆ ಹೆಚ್ಚುವರಿ ಮೊತ್ತದ ಮೇಲೆ ಕರ ನೀಡಬೇಕಾಗುತ್ತದೆ.
4. ರಜೆಯ ನಗದು ಮೊತ್ತ
ಲೀವ್‌ ಎನ್‌ಕ್ಯಾಶ್‌ಮೆಂಟ್‌ ಎಂದು ಕರೆಯಲ್ಪಡುವ ಈ ಪಾವತಿ "ಅರ್ನ್ಡ್‌ ಲೀವ್‌'ಗೆ ಮಾತ್ರ ಅನ್ವಯಿಸುತ್ತದೆ. ಒಬ್ಟಾತ ತನ್ನ ಕ್ಯಾಶುವಲ್‌ ಲೀವ್‌, ಸಿಕ್‌ ಲೀವ್‌ ಇತ್ಯಾದಿಗಳನ್ನು ನಗದೀಕರಿಸುವಂತಿಲ್ಲ. ಸಂಸ್ಥೆಗಳಲ್ಲಿ ಎಷ್ಟು ರಜೆಯನ್ನು ಯಾವ ರೀತಿಯಲ್ಲಿ ನಗದೀಕರಿಸಬಹುದು ಎನ್ನುವ ಬಗ್ಗೆ ಪ್ರತ್ಯೇಕ ನಿಯಮಾವಳಿಗಳು ಇರುತ್ತವೆ. ಬಹುತೇಕ ಖಾಸಗಿ ನೌಕರರಿಗೆ ಒಂದು ವರ್ಷಕ್ಕೆ 1 ತಿಂಗಳಿಂದ ಮಿಗಿಲಾಗಿ ಅರ್ನ್ಡ್‌ ಲೀವ್‌ ಇರುವುದಿಲ್ಲ.

ಸೇವೆಯ ಅವಧಿಯಲ್ಲಿ ರಜೆಯನ್ನು ನಗದೀಕರಿಸಿದರೆ ಅದರ ಮೇಲೆ ಪೂರ್ತಿ ಆದಾಯ ಕರ ಬೀಳುತ್ತದೆ. ಆದರೆ ನಿವೃತ್ತಿ/
ವಿಆರ್‌ಎಸ್‌/ರಾಜೀನಾಮೆಯ ಸಂದರ್ಭದಲ್ಲಿ ನಗದೀಕರಿಸಿದರೆ ಅದರ ಮೇಲೆ ಕರ ವಿನಾಯಿತಿ ಇದೆ.

ಸರಕಾರಿ ನೌಕರರಿಗೆ (ಕೇಂದ್ರ ಹಾಗೂ ರಾಜ್ಯ ಸರಕಾರ) ನಿವೃತ್ತಿ ಸಂದರ್ಭದಲ್ಲಿ ಅರ್ನ್ಡ್‌ ಲೀವ್‌ ಅನ್ನು ನಗದೀಕರಿಸಲು ಯಾವುದೇ ಮಿತಿ ಇಲ್ಲದೆ ಕರ ವಿನಾಯಿತಿ ಸಿಗುತ್ತದೆ. ಖಾಸಗಿ ನೌಕರಿಯಲ್ಲಿ ನಿವೃತ್ತಿ ಪಡೆದಾಗ ಅರ್ನ್ಡ್‌ ಲೀವ್‌ ನಗದೀಕರಿಸುವಲ್ಲಿ ಈ ಕೆಳಗಿನ ರೀತ್ಯಾ ಆದಾಯ ಕರ ವಿನಾಯಿತಿ ಸಿಗುತ್ತದೆ.

1. ಕಳೆದ 10 ತಿಂಗಳುಗಳ ಸರಾಸರಿ ಸಂಬಳ ಲೆಕ್ಕದಲ್ಲಿ ಗರಿಷ್ಟ 10 ತಿಂಗಳ ಸಂಬಳ (ಇಲ್ಲಿ ಬೇಸಿಕ್‌,ಡಿಎ, ಡಿಯರೆ°ಸ್‌ ಪೇ, ಶೇಕಡಾವಾರು ಕಮಿಶನ್‌) ಮೊತ್ತವನ್ನು ಸಂಬಳವೆಂದು ಪರಿಗಣಿಸಬೇಕು)
2. ನೈಜವಾಗಿ ಅರ್ನ್ಡ್‌ ಲೀವ್‌ ನಗದೀಕರಣದ ಮೊತ್ತ
3. ವರ್ಷಕ್ಕೆ 30 ದಿನಗಳಂತೆ ಪ್ರತಿ ಸೇವಾ ವರ್ಷಕ್ಕೆ ಲೆಕ್ಕ ಹಾಕಿದ ಬಾಕಿ ರಜೆಯ ಒಟ್ಟು ಮೊತ್ತ
4. ರೂ. 3 ಲಕ್ಷ
ಇವುಗಳಲ್ಲಿ ಯಾವುದು ಕನಿಷ್ಠವೋ ಅದು ಕರ ವಿನಾಯಿತಿಯನ್ನು ಹೊಂದುತ್ತದೆ. ಆದರೆ ಮೃತ್ಯು ಸಂಭವಿಸಿದಲ್ಲಿ ನೌಕರನ ಮನೆಯವರಿಗೆ ನೀಡುವ ರಜೆಯ ಮೊತ್ತಕ್ಕೆ ಸಂಪೂರ್ಣ ಕರ ವಿನಾಯಿತಿ ಇರುವುದು.
ವಿ.ಸೂ: ತೆರಿಗೆ ವಿಚಾರಗಳನ್ನು ಆದಷ್ಟು ಸರಳ ರೂಪದಲ್ಲಿ ಜನಸಾಮಾನ್ಯರ ಮಾಹಿತಿಗಾಗಿ ತಿಳಿಸುವುದು ಮಾತ್ರ ಇಲ್ಲಿನ ಉದ್ಧೇಶ. ಆದಾಯ ತೆರಿಗೆ ಒಂದು ಕ್ಲಿಷ್ಟ ಮತ್ತು ಗೋಜಲಿನ ವಿಚಾರವಾಗಿದ್ದು ಎಷ್ಟೋ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಎಷ್ಟೋ ವಿಚಾರಗಳಲ್ಲಿ ಗೊಂದಲಗಳು ಮೂಲ ಕಾನೂನಿನಲ್ಲಿಯೇ ಇರುತ್ತವೆ. ಅದೆಷ್ಟೋ ವಿಚಾರಗಳು ಟ್ರಿಬ್ಯೂನಲ…/ಕೋರ್ಟ್‌ ನಿರ್ಧಾರಗಳನ್ನು ಅನುಸರಿಸಿ ಅಥೆìçಸಲಾಗುತ್ತದೆ. ಇನ್ನೆಷ್ಟೋ ವಿಚಾರಗಳು ಕರ ಇಲಾಖೆಯ ಒಂದೊಂದು ಕಚೇರಿಯಲ್ಲಿ ಚಾರಿತ್ರಿಕ ಹಿನ್ನೆಲೆಯ ಪ್ರಕಾರ ಅಥೆìçಸಲಾಗುತ್ತದೆ. ಇನ್ನು ಕೆಲವು ವಿಚಾರಗಳು ಅನುಷ್ಠಾನದಲ್ಲಿ ಇರುವುದೇ ಇಲ್ಲ. ಪ್ರತಿಯೊಬ್ಬರೂ ಅವರವರ ಸಂದರ್ಭಾನುಸಾರ ನುರಿತ ಸಿಎ/ಕರ ಸಲಹೆಗಾರರ ಜೊತೆ ಚರ್ಚಿಸಿಯೇ ಕರ ವಿಚಾರದಲ್ಲಿ ಮುಂದುವರಿಯಬೇಕಾಗಿ ವಿನಂತಿ.

Tags:

ಪ್ರಾವಿಡೆಂಟ್‌ ಫ‌ಂಡ್‌

ಪೆನ್ಶನ್‌ ಮೊತ್ತ

Provident Fund

Pension sum

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 05 Nov 2018 00:30:00 +0000 shriram.g 335946 at https://www.udayavani.com https://www.udayavani.com/kannada/news/investments-savings/335946/retirement-payments-and-contract-law#comments ಗುರುಗುಂಟಿರಾಯರ ಬೋನಸ್‌ ಅಧ್ಯಯನ  https://www.udayavani.com/kannada/news/investments-savings/334355/gurukundarayas-bonus-study

ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆಯ ಮೇಲೆ ನಿರ್ಧಾರವಾಗುವುದಿಲ್ಲ.

ಬಹೂರಾಣಿಗೆ ಒಮ್ಮೊಮ್ಮೆ ಈ ಜಗಮೊಂಡ ರಾಯರ ವರ್ತನೆಯ ಮೇಲೆ ಜೋರಾಗಿ ಸಿಟ್ಟು ಬರುವುದುಂಟು. ಆದರೆ ತನ್ನ ಗಂಡನ ಹತ್ತಿರ ಜಗಳ ಕುಟ್ಟಿದಂತೆ ಮಾವಯ್ಯನವರ ಹತ್ತಿರ ಕಾದಾಡಲು ಸಾಧ್ಯವೇ? ಗಂಡ ಎಂಬ ಪ್ರಾಣಿ ಆಗಿದ್ದರೆ ಜೋರಾಗಿ ಕೂಗಾಡಿ ಕಣ್ಣೀರು ಹರಿಸಿ (ಯಾರ?) ಇಲ್ಲದ ರಾದ್ಧಾಂತ ಮಾಡಿ ಅಪ್ಪಟ ಗಾಂಧಿ ಮಾರ್ಗದಲ್ಲಿಯೇ ಅಸಹಕಾರ ಚಳವಳಿಗೆ ಇಳಿಯಬಹುದಿತ್ತು. ಆದರೆ ಈ ಪ್ರಾಣಿ ಗಂಡ ಅಲ್ವಲ್ಲ? ಗುರುಗುಂಟಿರಾಯರಲ್ವೇ? ಹೆಸರು ಕೇಳಿದರೇನೇ ಮೂರು ಲೋಕ ನಡುಗುವ ರಾಯರ ಬಳಿ ಜಗಳ ಮಾಡುವುದು ಅಂದ್ರೆ ಅದೇನು ತಮಾಷೆಯಾ? ಇಂತಹ ಸಂದರ್ಭಗಳಲ್ಲಿ ನಮ್ಮ ಕುಶಾಗ್ರಮತಿ ಬಹೂರಾಣಿಯು ರಾಯರ ತಲೆ ಮೇಲೆ ಯಾವುದಾದರೊಂದು ಕ್ಲಿಷ್ಟ ಸಮಸ್ಯೆಯನ್ನು ಎಳೆದು ಹಾಕಿ ಅವರು ಅದರೊಡನೆ ಗುದ್ದಾಡುವುದನ್ನು ನೋಡುತ್ತಾ ತಣ್ಣನೆ ಆನಂದಿಸುತ್ತಾಳೆ. ಅದರಲ್ಲೇ ಅವಳ ಜಗಳ, ಕೋಪ, ಸೇಡು ಎಲ್ಲಾ ತೀರುತ್ತದೆ. ಮತ್ತೆ ನೇರವಾಗಿ ಅವರನ್ನು ಎದುರು ಹಾಕಿಕೊಳ್ಳುವುದು ಮೂರ್ಖತನವೇ ಸರಿ.

ಇದೇ ಮೊನ್ನೆ ಬಹೂರಾಣಿಯ ಮೂಡಾಫ್ ಆಗಿರುವ ಸುಸಂದರ್ಭದಲ್ಲಿ ಗುರುಗುಂಟಿರಾಯರು ತಮ್ಮ ಮಾಮೂಲಿನ ಕಿರಿಕಿರಿ ಶುರುವಿಟ್ಟರು. ಚಾ ಕೊಟ್ಟದ್ದು ಸರಿಯಾಗಲಿಲ್ಲ, ಯಾವ ಪೆಟ್ಟಿಗೆಯಲ್ಲಿ ಯಾವ ಮಾತ್ರೆ ಇಟ್ಟದ್ದು? ಮೊಮ್ಮಗನಿಗೆ ಜೋರು ಮಾಡಿದ್ದು ಯಾಕೆ? ತಾಳ್ಮೆಯಿಂದ ವ್ಯವಹರಿಸಬಹುದಿತ್ತಲ್ವ? - ಇವೆಲ್ಲಾ ರಾಯರ ಮಾಮೂಲಿನ ಕಿರಿಕಿರಿಯ ಸಿಲೆಬಸ್‌! ಹೀಗೇ ಯಾವುದೋ ಒಂದು ಚಾಪ್ಟರ್‌ ಹಿಡ್ಕೊಂಡು ಮೆತ್ತಗೆ ಆಲಾಪನೆ ಆರಂಭಿಸಿದ್ದರಷ್ಟೆ ರಾಯರು. ಆಫೀಸಿನಲ್ಲೂ ದಣಿದು ಮನೆಗೆ ಬಂದು ಡಬ್ಬಲ್‌ ಡ್ನೂಟಿ ಮಾಡಬೇಕಾದ ಕರ್ಮಕ್ಕೆ ಹಳಿಯುತ್ತಾ ತಲೆನೋವು ಬೇರೆ ಕಾಡುತ್ತಿದ್ದ ಬಹೂರಾಣಿಗೆ ಇವತ್ತಿನ ವರಾತ ತಡೆಯಲಾಗಲಿಲ್ಲ. ಆದರೂ ನೇರವಾಗಿ ಏನೂ ಹೇಳುವಂತಿಲ್ಲವಲ್ಲ? ಒಳಗೊಳಗೆ ಬುಸುಗುಟ್ಟುತ್ತಿದ್ದರೂ ಕೋಪ ಸಂದಾಯನಾರ್ಥಾಯ ಹೊರಗಿನಿಂದ ಸಿಹಿಜೇನಿನಂತೆ ಮಾತು ಉದುರಿಸಿದಳು. ನಮ್‌ ಕಂಪೆನಿಯವ್ರು ನಂಗೆ ದೀಪಾವಳಿ ಬೋನಸ್ಸೇ ಕೊಡ್ತಿಲ್ಲ ಮಾವಯ್ನಾ. ಬೇರೆ ಎಲ್ರಿಗೂ ಕೊಡ್ತಿದಾರೆ. ಕೇಳಿದ್ರೆ ನಿಮ್ಗೆ ಎಲಿಜಿಬಿಲಿಟಿ ಇಲ್ಲ ಅಂತ ದಬಾಯ್ಸಿ ಬಿಟ್ರಾ ಮಾವಾ. ನೀವು ಒಂದ್ಸಲ್ಪ ನೋಡಿ ಹೇಳ್ತೀರಾ ರೂಲ್ಸ… ಏನು ಅಂತ? ಹಬ್ಬ ಅಂದಮೇಲೆ ಒಂದಿಷ್ಟು ಬೋನಸ್‌ ಬೇಡ್ವಾ? ಸೊಸೆಯ ದುಃಖಭರಿತ ಮಧುರವಾಣಿಯನ್ನೂ, ಬೇಸರದ ಕಾರ್ಮೋಡ ಮುಸುಕಿದ ವದನಾರವಿಂದವನ್ನೂ ಕಂಡ ರಾಯರ ಮನಸ್ಸು ಆಷಾಡದ ಮೋಡದಂತೆ ಕರಗಿ ನೀರಾಯ್ತು. ಒಂದು ಪಿಲೋ ಸೈಜಿನ ಬೋನಸ್‌ ಆ್ಯಕ್ಟ್ 1965 ಎಂಬ ಕೈಪಿಡಿ ಯನ್ನು ರಾಯರ ಕೈಯಲ್ಲಿ ಪಿಡಿಸಿ ತಾನು ಸೀದಾ ಬೆಡ್ರೂಮಿಗೆ ಹೋಗಿ ಎರಡು ಮಾತ್ರೆ ನುಂಗಿ ಉಸ್ಸಪ್ಪ ಅಂತ ನಿರಾಳಾಗಿ ಬಿದ್ದುಕೊಂಡಳು ಬಹೂರಾಣಿ. ಈ ಅಯೋಗ್ಯ ಮಗ ಒಬ್ಬ ಸರಿ ಇದ್ದಿದ್ರೆ ಇದೆಲ್ಲಾ ಅವ°ತ್ರ ಮಾಡಿಸºಹುದಿತ್ತು. ಏನ್‌ ಮಾಡೊದು? ಎಲ್ಲಾ ನಾನೇ ಮಾಡ್ಬೇಕು ಕರ್ಮ ಅನ್ನುತ್ತಾ ರಾಯರು ಸೊಸೆ ಕೊಟ್ಟ ತಲೆದಿಂಬು ಓಪನ್‌ ಮಾಡಿ ಬೋನಸ್‌ ಆ್ಯಕ್ಟ್ಬಗ್ಗೆ ಸೀರಿಯಸ್‌ ಅಧ್ಯಯನ ಆರಂಭಿಸಿದರು.

ಯಾವುದೇ ವಿಚಾರ ತೆಗೆದುಕೊಳ್ಳಿ, ಅದು ಎರಡನೆಯ ಮಹಾಯುದ್ಧದ ಸಮಯದಲ್ಲಿ ಆರಂಭವಾದದ್ದು ಅನ್ನುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಆರಂಭವಾದದ್ದು ಯುದ್ಧ ಮಾತ್ರವೇ? ನಮ್ಮ ಜನರು ಯುದ್ಧ ಬಿಟ್ಟು ಬೇರೇನೂ ಮಾಡಲೇ ಇಲ್ಲವೇ? ಊಟಾನಾದ್ರೂ ಮಾಡಿದಾರೋ ಇಲ್ವೋ? ಎಂಬ ಸಂಶಯ ಕಾಡುತ್ತದೆ. ಪ್ರಾಯಶಃ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಆರಂಭಗೊಂಡ ಏಕೈಕ ಉತ್ತಮ ವಿಚಾರ ಎಂದರೆ ನೌಕರರಿಗೆ ಕೊಡುವ ಬೋನಸ್‌ ಮಾತ್ರ ಅಂತ ಕಾಣುತ್ತದೆ!!! 1917ರಲ್ಲಿ ಗುಜರಾತಿನ ಬಟ್ಟೆಯ ಉದ್ಯಮದಲ್ಲಿ ನೌಕರರಿಗೆ ಕಂಪೆನಿಯ ಲಾಭಾಂಶದ ಪಾಲು ಎಂದು ಶೇ.10 ಬೋನಸನ್ನು ಮೊತ್ತ ಮೊದಲ ಬಾರಿಗೆ ನೀಡಲಾಯಿತಂತೆ. ಆ ಬಳಿಕ ಸ್ವತಂತ್ರ ಭಾರತದಲ್ಲಿ ಪೇಯೆ¾ಂಟ್‌ ಆಫ್ ಬೋನಸ್‌ ಆ್ಯಕ್ಟ್ ಎಂಬ ಕಾನೂನು 1965ರಲ್ಲಿ ಅಸ್ತಿತ್ವಕ್ಕೆ ಬಂತು. ಆ ಕಾನೂನೇ ಈ ತನಕ ಹಲವಾರು ಪರಿಷ್ಕರಣೆಯೊಂದಿಗೆ ಊರ್ಜಿತದಲ್ಲಿದೆ.

ಉದ್ದೇಶ
ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ/ಉತ್ಪಾದಕತೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆ/ಕಾರ್ಯಕ್ಷಮತೆಯ ಮೇಲೆ ನಿರ್ಧಾರವಾಗುವುದಿಲ್ಲ. ಬೋನಸ್‌ ಎಂಬುದು ಸಮಷ್ಠಿಯಲ್ಲಿ ಶೇಕಡಾವಾರು ಲೆಕ್ಕದಲ್ಲಿ ಎಲ್ಲರಿಗೂ ಸಮಾನವಾಗಿ ಸಲ್ಲುವ ಬಾಬ್ತು.

ಯಾರಿಗೆ ಅನ್ವಯ?
ಯಾವುದೇ ಕಾರ್ಖಾನೆ ಮತ್ತು ವರ್ಷದ ಯಾವುದೇ ಒಂದು ದಿನವಾದರೂ 20 ಜನರಿಂದ ಹೆಚ್ಚು ಉದ್ಯೋಗಿಗಳಿರುವ ಯಾವುದೇ ಸಂಸ್ಥೆಗೆ ಇದು ಅನ್ವಯ. ಅದಲ್ಲದೆ 10 ಜನರಿಂದ ಜಾಸ್ತಿ ಉದ್ಯೋಗಿಗಳಿರುವ ಯಾವುದೇ ಸಂಸ್ಥೆಯನ್ನು ಇದರಡಿಯಲ್ಲಿ ತರಲು ಸರಕಾರಕ್ಕೆ ಹಕ್ಕು ಇರುತ್ತದೆ. ಯಾವುದೇ ಸಂಸ್ಥೆಗೆ ನಿರ್ದಿಷ್ಟ ವಿನಾಯತಿ ನೀಡುವ ಹಕ್ಕೂ ಸರಕಾರಕ್ಕೆ ಇರುತ್ತದೆ. ಒಂದು ಬಾರಿ ಬೋನಸ್‌ ಕಾಯ್ದೆಯಡಿಯಲ್ಲಿ ಬಂದರೆ ಆಮೇಲೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾದರೂ ಬೋನಸ್‌ ಕಾಯ್ದೆಯಿಂದ ಸಂಸ್ಥೆ ಹೊರಬರಲಾಗುವುದಿಲ್ಲ. ಅಲ್ಲದೆ, ಇಲ್ಲಿ ಸಂಸ್ಥೆ ಅಂದರೆ ಒಂದು ಸಂಸ್ಥೆ, ಅದರ ಸ್ವಾಯತ್ತೆಯ ಸಂಸ್ಥೆ, ಬ್ರಾಂಚುಗಳು, ಡಿಪಾರ್ಟ್‌ಮೆಂಟುಗಳು ಇತ್ಯಾದಿ ಎಲ್ಲದರ ಸಮಷ್ಠಿ.

ಇಂತಹ ಸಂಸ್ಥೆಗಳಲ್ಲಿ ಮಾಸಿಕ ರೂ. 21,000 (1.4.2014 ರಿಂದ ಪರಿಷ್ಕರಿಸಲ್ಪಟ್ಟ ಮಿತಿ) ಕ್ಕಿಂತ ಕಡಿಮೆ ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ. (ಈ ಮಿತಿ ಆ ಮೊದಲು ರೂ. 10,000 ಆಗಿತ್ತು) ಅಲ್ಲದೆ ಅವರು ಒಂದು ವರ್ಷದಲ್ಲಿ ಕನಿಷ್ಠ 30 ದಿನವಾದರೂ ಕೆಲಸ ಮಾಡಿರಬೇಕು. ಉಳಿದ ಉದ್ಯೋಗಿಗಳಿಗೆ ಬೋನಸ್‌ ನೀಡುವುದು ಕಡ್ಡಾಯವಲ್ಲ. ಇಲ್ಲಿ ಸಂಬಳ ಅಂದರೆ, ಬೇಸಿಕ್‌+ಡಿಎ ಮಾತ್ರ ತೆಗೆದುಕೊಳ್ಳಬೇಕು. ಇತರ ಸಂಬಳ/ಭತ್ತೆಗಳು ಇಲ್ಲಿ ಲೆಕ್ಕಕ್ಕಿಲ್ಲ.

ಬೋನಸ್‌ ಕಾನೂನಿನಲ್ಲಿ ಒಬ್ಬ ಉದ್ಯೋಗಿಯ ದರ್ಜೆ ಮುಖ್ಯವಾಗುವುದಿಲ್ಲ. ಆತ ಕೂಲಿಯವ, ಕಾರ್ಮಿಕ, ಗುಮಾಸ್ತ, ಸೂಪರ್‌ವೈಸರ್‌, ಮ್ಯಾನೇಜರ್‌ ಇತ್ಯಾದಿ ತಾರತಮ್ಯದೊಂದಿಗೆ ಬೋನಸ್‌ ಅರ್ಹತೆ ಬದಲಾಗುವುದಿಲ್ಲ. ಸಂಬಳದ ಮಿತಿಯೊಳಗೆ ಬರುವ ಪ್ರತಿಯೊಬ್ಬ ಉದ್ಯೋಗಿಯೂ ಕಡ್ಡಾಯವಾಗಿ ಬೋನಸ್‌ಗೆ ಅರ್ಹನಾಗುತ್ತಾನೆ, ಸೀಸನಲ್‌ ಉದ್ಯೋಗಿಗಳೂ ಸಹಿತ. ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ದಿಮೆಗಳು, ಶೈಕ್ಷಣಿಕ ಸಂಸ್ಥೆಗಳು, ಎಲ್ಲೆ„ಸಿ, ಸಾಮಾನ್ಯ ವಿಮೆ, ಕೆಲವು ನಿರ್ದಿಷ್ಟ ವಿತ್ತೀಯ ಸಂಸ್ಥೆಗಳು ಇತ್ಯಾದಿ ಕೆಲವು ಸಂಸ್ಥೆಗಳು ಈ ಕಾನೂನಿನಡಿಯಲ್ಲಿ ಬರುವುದಿಲ್ಲ. (ಇದರ ಪಟ್ಟಿ ಆ್ಯಕ್ಟ್‌ನಲ್ಲಿ ನೀಡಲಾಗಿದೆ). ಯಾವುದೇ ಹೊಸ ಸಂಸ್ಥೆಗೆ ಕಾರ್ಯಾರಂಭ ಮಾಡಿದ ವರ್ಷದ ನಂತರದ 5 ವರ್ಷಗಳ ಕಾಲ ಬೋನಸ್‌ ನೀಡುವಿಕೆಯಿಂದ ವಿನಾಯತಿ ಇರುತ್ತದೆ. ಮೋಸ, ಕಂಪೆನಿಯ ಒಳಗೆ ಗಲಭೆ, ಹಿಂಸೆ, ಕಂಪೆನಿಯ ದುಡ್ಡನ್ನು ಅಥವಾ ಸೊತ್ತನ್ನು ಕಳ್ಳತನ, ನಾಶ ಇತ್ಯಾದಿ ಮಾಡಿದವರಿಗೆ ಬೋನಸ್‌ ಅನ್ನು ನಿರಾಕರಿಸಬಹುದಾಗಿದೆ.

ಬೋನಸ್‌ ಎಷ್ಟು?
ಬೋನಸ್‌ ನೀಡುವಲ್ಲಿ ಕನಿಷ್ಠ ಗರಿಷ್ಟ ಮಿತಿಗಳಿವೆ. ಸಂಬಳದ ಶೇ.8.33 ಕನಿಷ್ಠ ಬೋನಸ್‌ ಮೊತ್ತವಾದರೆ ಶೇ.20 ಗರಿಷ್ಟ ಮೊತ್ತ. ಇಲ್ಲಿ ಬೋನಸ್‌ ಅರ್ಹತೆ ಬೇರೆ; ಬೋನಸ್‌ ಮೊತ್ತ ಬೇರೆ. ಮಾಸಿಕ ಸಂಬಳದ ಮಿತಿ ರೂ. 21,000 ಆದರೂ ಬೋನಸ್‌ ಮಿತಿ ರೂ. 7,000ದ ಮೇಲೆ ಮಾತ್ರವೇ ಲೆಕ್ಕ ಹಾಕಲಾಗುತ್ತದೆ. ಅಂದರೆ, ರೂ.7,000 ಕ್ಕಿಂತ ಜಾಸ್ತಿ ಸಂಬಳ ಪಡೆದವರ ಬೋನಸ್‌ ಕೂಡಾ ರೂ. 7,000 ಗರಿಷ್ಠ ಮಿತಿಯ ಮೇಲೆಯೇ ಲೆಕ್ಕ ಹಾಕಲಾಗುತ್ತದೆ.

ಕನಿಷ್ಠ ಸಂಬಳದ ಶೇ.8.33 ಅಥವಾ ರೂ. 100. ಕಂಪೆನಿಯ ಬಳಿ ಹಂಚಲು ಲಾಭಾಂಶ ಇರಲಿ, ಇಲ್ಲದೆ ಇರಲಿ, ಕನಿಷ್ಠ ಇಷ್ಟಾದರೂ ನೀಡಲೇ ಬೇಕು. ಇನ್ನು ಲಾಭಾಂಶವನ್ನು ನೋಡಿಕೊಂಡು, ಲಭ್ಯ ಮಿಗತೆಯನ್ನು ನೋಡಿಕೊಂಡು ಕಾನೂನಾನುಸಾರ ಕಂಪೆನಿಗಳು ಗರಿಷ್ಠ ಸಂಬಳದ ಶೇ. 20 ವರೆಗೆ ಹೋಗಬಹುದು. ಶೇ.20 ಮೀರಿ ಬೋನಸ್‌ ಕೊಡುವುದು ಕಂಪೆನಿಯ ಇಚ್ಚೆ, ಅದಕ್ಕೆ ನಿರ್ಬಂಧವಿಲ್ಲ.

ಉದಾ: ಒಬ್ಟಾತನ ಒಟ್ಟು ಸಂಬಳ ಮಾಸಿಕ ರೂ. 14,000. ಆತನ ಬೇಸಿಕ್‌ ಮತ್ತು ಡಿಎ ರೂ. 6,000 ಆಗಿದ್ದಲ್ಲಿ ಆತನ ಬೇಸಿಕ್‌ ಮತ್ತು ಡಿಎ ರೂ. 21,000ಕ್ಕಿಂತ ಒಳಗೆ ಇರುವ ಕಾರಣ ಆತನಿಗೆ ಬೋನಸ್‌ ಸಿಗುತ್ತದೆ. ಆದರೆ ಬೋನಸ್‌ ಮಿತಿ ಗರಿಷ್ಟ ರೂ. 7,000ರ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ. ಆ ಸಂಸ್ಥೆ ಶೇ. 20 ಬೋನಸ್‌ ಘೋಷಣೆ ಮಾಡಿದ್ದಲ್ಲಿ ಆತನಿಗೆ ರೂ. 7000x12x20% = ರೂ. 16,800 ಆ ವರ್ಷಕ್ಕೆ. ಬೋನಸ್‌ ಮೊತ್ತವನ್ನು ಲೆಕ್ಕವರ್ಷ ಮುಗಿದು 8 ತಿಂಗಳ ಅವಧಿಯ ಒಳಗಾಗಿ ಪಾವತಿ ಮಾಡತಕ್ಕದ್ದು.

ಆದಾಯ ಕರ
ಬೋನಸ್‌ ಪಾವತಿಯು ಸಂಪೂರ್ಣವಾಗಿ ಕರಾರ್ಹ ಸಂಪಾದನೆಯಾಗುತ್ತದೆ. ಬೋನಸ್‌ ಮೊತ್ತವನ್ನು ನಿಮ್ಮ ಸಂಬಳದ ಆದಾಯದ ಅಡಿಯಲ್ಲಿ ಲೆಕ್ಕ ಹಾಕಿ ಅದರ ಮೇಲೆ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ಕರ ಕಟ್ಟತಕ್ಕದ್ದು.

ಲಾಭದ ಲೆಕ್ಕ ಹೇಗೆ?
ಬೋನಸ್‌ ಲೆಕ್ಕಾಚಾರಕ್ಕಾಗಿ ಕಂಪೆನಿಯ ಲಾಭಾಂಶವನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬೇಕು, ಯಾವ ರೀತಿ ಬೋನಸ್‌ ಹಂಚಿಕೆಗಾಗಿ ಲಭ್ಯ ಮಿಗತೆಯನ್ನು ಲೆಕ್ಕ ಹಾಕಬೇಕು ಮತ್ತು ಯಾವ ರೀತಿ ಇವುಗಳನ್ನು ವರ್ಷದಿಂದ ವರ್ಷಕ್ಕೆ ಹೊಂದಿಸಿಕೊಂಡು ಹೋಗಬಹುದು ಎನ್ನುವ ವಿವರಗಳನ್ನೂ ಬೋನಸ್‌ ಕಾಯಿದೆ 1965ರಲ್ಲಿ ವಿವರವಾಗಿ ಕೊಟ್ಟಿದೆ. ಆ ಪ್ರಕಾರ ಕಾನೂನಿನ ಅಡಿಯಲ್ಲಿ ಬೋನಸ್‌ ಶೇಕಡಾ ನಿಗದಿಯಾಗುತ್ತದೆ. ಕಂಪೆನಿಗಳು ಮನಬಂದಂತೆ ಲಾಭ ಲೆಕ್ಕ ಹಾಕಿ ಬೋನಸ್‌ ಕಳ್ಳತನ ಮಾಡುವುದನ್ನು ಈ ಮೂಲಕ ನಿವಾರಿಸಲಾಗಿದೆ.

ಈ ವಿವರಗಳನ್ನು ನಾನು ಇಂದಿನ ಕಾಕುವಿನಲ್ಲಿ ಕೊಡುವುದಿಲ್ಲ. ಮಿತಿ ಮೀರಿ ತುಂಬಿಸಿದರೆ ಮೆದುಳಿಗೆ ಅಜೀರ್ಣವಾದೀತು. ಒಬ್ಬ ಉದ್ಯೋಗಿಯ ದೃಷ್ಟಿಯಿಂದ ಅಗತ್ಯವಿರುವ ಕನಿಷ್ಟ ಮಾಹಿತಿಗಳನ್ನು ಇಲ್ಲಿ ಕಲೆಹಾಕಿದ್ದೇನೆ. ಇದು ಬೋನಸ್‌ ಆ್ಯಕ್ಟ್ 1965ರ ಯಥಾ ನಕಲು ಅಲ್ಲ. ಒಂದು ರೀತಿಯ ಭಾವಾನುವಾದ! ಕಾಯಿದೆಯ ಸಂಪೂರ್ಣ ಮಾಹಿತಿಗಾಗಿ ಕಾನೂನನ್ನೇ ಓದಬೇಕಷ್ಟೆ.

Tags:

ಲಾಭಾಂಶ

Bouns

ಬೋನಸ್‌

Company

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 29 Oct 2018 00:30:00 +0000 mahesh 334355 at https://www.udayavani.com https://www.udayavani.com/kannada/news/investments-savings/334355/gurukundarayas-bonus-study#comments ಗ್ರಾಚ್ಯೂಟಿ ಸುತ್ತಮುತ್ತ ಒಂದಿಷ್ಟು ಲೆಕ್ಕಾಚಾರಗಳು https://www.udayavani.com/kannada/news/investments-savings/332884/some-calculations-around-the-gratuity

ದೀರ್ಘಾವಧಿ ಸೇವೆ ಸಲ್ಲಿಸಿದವರಿಗೆ ನೌಕರಿ ಬಿಡುವಾಗ ಸಂಸ್ಥೆಗಳು ಪಿಎಫ್, ಪೆನ್ಶನ್‌ ಜೊತೆಗೆ ಗ್ರಾಚ್ಯೂಟಿ ನೀಡುತ್ತವೆ. ಉದ್ಯೋಗಿಗಳು ಸಲ್ಲಿಸಿದ ಸೇವೆಗೆ ಗೌರವಾರ್ಥವಾಗಿ ಹಾಗೂ ಅವರ ನಿವೃತ್ತಿ ಜೀವನಕ್ಕೆ ಸಹಾಯವಾಗುವಂತೆ ಈ ಮೊತ್ತವನ್ನು ನೀಡಲಾಗುತ್ತದೆ. ಗ್ರಾಚ್ಯೂಟಿ ಎಂಬ ಈ ಪದ ಸರ್ವೇ ಸಾಮಾನ್ಯವಾಗಿ ಬಳಕೆಯಲ್ಲಿದ್ದರೂ ಇದರ ಬಗ್ಗೆ ಸರಿಯಾದ ಮಾಹಿತಿ ಹೆಚ್ಚಿನವರಿಗಿಲ್ಲ.

ಗ್ರಾಚ್ಯೂಟಿ ಯಾರಿಗೆ?: ಸರಕಾರಿ ಉದ್ಯೋಗಿಗಳಿಗೆ ಸಲ್ಲುವ ಗ್ರಾಚ್ಯೂಟಿ ಬಗ್ಗೆ ಸರಕಾರಕ್ಕೆ Central Civil Services (Pension) Rules, 1972 ಹೆಸರಿನಲ್ಲಿ ತನ್ನದೇ ಆದ ಲೆಕ್ಕಾಚಾರ ಹಾಗು ನಿಯಮಾವಳಿಗಳು ಇವೆ. ಆ ಲೆಕ್ಕಾಚಾರದ ಪ್ರಕಾರ ಸರಕಾರಿ ಉದ್ಯೋಗಿಗಳಿಗೆ ಸದ್ರಿ ಗರಿಷ್ಟ ರೂ. 20 ಲಕ್ಷದವರೆಗೆ ಸಂಪೂರ್ಣವಾಗಿ ಕರ ವಿನಾಯಿತಿಯುಳ್ಳ ಗ್ರಾಚ್ಯೂಟಿ ಲಭಿಸುವ ಅವಕಾಶ ಇದೆ.

ಈ ಮಿತಿ ಮೊದಲು ರೂ. 10 ಲಕ್ಷ ಇದ್ದು, 7ನೇ ವೇತನಾ ಆಯೋಗದ ಅನುಷ್ಠಾನದೊಂದಿಗೆ ಜನವರಿ 1, 2016ರ ಬಳಿಕ ರೂ. 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಇನ್ನು ಸರಕಾರೇತರ ಖಾಸಗಿ ಉದ್ಯೋಗ ವಲಯದ ಬಗ್ಗೆ ಹೇಳುವುದಾದರೆ, ಆ ವಲಯವನ್ನು ಎರಡು ವಿಭಾಗಗಳಾಗಿ ನೋಡಬಹುದು:

1. ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ, ಹಾಗೂ
2. ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬಾರದವರಿಗೆ.
ಈ ಎರಡು ಸಂದರ್ಭಗಳಲ್ಲಿ ಗ್ರಾಚ್ಯೂಟಿ ಪಾವತಿಯ ಬಗ್ಗೆ ಕಾನೂನು ಈ ಕೆಳಗಿನಂತಿದೆ:

ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲೂ ಗ್ರಾಚ್ಯೂಟಿ ಪಾವತಿ ಕಡ್ಡಾಯ. ಕನಿಷ್ಠ ಹತ್ತು ಮಂದಿ ಉದ್ಯೋಗಿಗಳನ್ನು ಹೊಂದಿದ ಎಲ್ಲಾ ಸಂಸ್ಥೆಗಳಿಗೂ ಈ ಕಾನೂನು ಅನ್ವಯವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಒಂದು ದಿನವಾದರೂ ಕನಿಷ್ಠ ಹತ್ತು ಜನ ಕೆಲಸಕ್ಕಿದ್ದು ಉಳಿದ ದಿನಗಳಲ್ಲಿ ಹತ್ತಕ್ಕಿಂತ ಕಡಿಮೆ ಜನರಿದ್ದರೂ ಆ ವರ್ಷಕ್ಕೆ ಆ ಒಂದೇ ಒಂದು ದಿನದ ಮಹತ್ವದಿಂದಾಗಿ ಈ ಕಾನೂನು ಅನ್ವಯವಾಗುತ್ತದೆ ಎನ್ನುವುದು ನೆನಪಿರಲಿ.

ಅಂದರೆ, ಒಂದೂ ದಿನ ಬಿಡದೆ ವರ್ಷ ಪೂರ್ತಿ ಕೆಲಸಕ್ಕೆ ಹತ್ತಕ್ಕಿಂತ ಕಡಿಮೆ ಜನರಿದ್ದವರು ಈ ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವುದಿಲ್ಲ. ಅಂತವರಿಗೆ ಈ ಕಾನೂನಿನಿಂದ ಮುಕ್ತಿ ದೊರೆಯುತ್ತದೆ. ಆ ರೀತಿ ಕನಿಷ್ಠ ಹತ್ತು ಮಂದಿ ಉದ್ಯೋಗಿಗಳನ್ನು ಹೊಂದದ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗ್ರಾಚ್ಯೂಟಿ ನೀಡುವುದು ಕಡ್ಡಾಯವಲ್ಲ. ಆದರೂ ಗ್ರಾಚ್ಯೂಟಿ ನೀಡುವ ಸಂಸ್ಥೆಗಳು ಇಲ್ಲದಿಲ್ಲ. ಅದು ಅವರವರ ಇಷ್ಟ.

ಕನಿಷ್ಠ ಸೇವೆ: ದೀರ್ಘ‌ಕಾಲದ ಸೇವೆಯ ಬಳಿಕ ನಿವೃತ್ತಿಯಾಗುವ ಉದ್ಯೋಗಿಗಳಿಗೆ ಅವರು ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಿಗುವುದು ಎಲ್ಲರೂ ಬಲ್ಲ ವಿಚಾರ. ಆದರೆ ಗ್ರಾಚ್ಯೂಟಿ ಮೊತ್ತಕ್ಕೆ ಅಷ್ಟು ದೀರ್ಘ‌ಕಾಲ ಕಾಯಬೇಕಾಗಿಲ್ಲ. ಯಾವುದೇ ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದವರಿಗೆ ಆ ಸಂಸ್ಥೆಯ ವತಿಯಿಂದ ಸಂಸ್ಥೆ ಬಿಡುವ ಸಮಯದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಅಲ್ಲದೆ, ಈ ಐದು ವರ್ಷ ಸೇವೆ ಸಲ್ಲಿಸದೆಯೂ ಮೃತ್ಯು ಸಂಭವಿಸಿದರೆ ಅಂತವರ ಕುಟುಂಬಕ್ಕೆ ಗ್ರಾಚ್ಯೂಟಿ ಸಲ್ಲತಕ್ಕದ್ದು.

ಹಾಗೆಯೇ ಉದ್ಯೋಗಿಯು ಅನಾರೋಗ್ಯ/ಅಪಘಾತದ ನಿಮಿತ್ತ ಅಂಗವಿಕಲರಾದರೆ ಅಂತವರಿಗೂ ಸೇವೆ ಬಿಡುವ ಸಂದರ್ಭದಲ್ಲಿ ಗ್ರಾಚ್ಯೂಟಿ ಸಲ್ಲತಕ್ಕದ್ದು. ಅಲ್ಲದೆ, ಐದು ವರ್ಷ ಕನಿಷ್ಠ ಸೇವೆ ಎಂದು ಕಾನೂನು ಹೇಳಿದರೂ ಐದನೆಯ ವರ್ಷ 240 ದಿನಗಳ ಸೇವೆ ಸಲ್ಲಿಸಿದರೂ ಅದನ್ನು ಒಟ್ಟಾರೆ ಐದಾಗಿ ಪರಿಗಣಿಸಿ ಗ್ರಾಚ್ಯೂಟಿಗೆ ಅರ್ಹತೆ ಇದೆಯೆಂಬ ಮದ್ರಾಸ್‌ ಹೈಕೋರ್ಟ್‌ ತೀರ್ಪು ಒಂದಿದೆ ಎಂಬುದನ್ನು ಕೂಡಾ ಗಮನದಲ್ಲಿ ಇಟ್ಟಿರಿ.

ಇಲ್ಲಿ ನಿರಂತರ ಸೇವೆ ಎಂದರೆ ಯಾವುದೇ ಬ್ರೇಕ್‌ ಇಲ್ಲದೆ ನಡೆಸಿದ ಸೇವೆ. ಅಂದರೆ ಮಧ್ಯದಲ್ಲಿ ಕೆಲಸ ಬಿಟ್ಟು ಪುನಃ ಅದೇ ಸಂಸ್ಥೆಗೆ ಸೇರಿದರೂ ಅದು ನಿರಂತರ ಸೇವೆಯಾಗುವುದಿಲ್ಲ. ಎರಡು ಬೇರೆ ಬೇರೆ ಸಂಸ್ಥೆಗಳ ಸೇವೆಗಳನ್ನು ಕೂಡಲು ಬರುವುದಿಲ್ಲ. ಪಡಕೊಂಡ ಅಧಿಕೃತ ರಜಾಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಮಹಿಳಾ ಉದ್ಯೋಗಿಗಳು ಮಟರ್ನಿಟಿ ರಜೆಯಲ್ಲಿ ಹೋಗಿದ್ದರೆ ಅಂತಹ 26 ವಾರಗಳ ರಜೆಯನ್ನು ಕೂಡಾ ನಿರಂತರ ಸೇವೆಯ ಲೆಕ್ಕಕ್ಕೆ ಸೇರಿಸತಕ್ಕದ್ದು ಎನ್ನುವುದು ಕೂಡಾ ಗ್ರಾಚ್ಯೂಟಿ ಕಾಯ್ದೆಯ ಒಂದು ಮುಖ್ಯ ಭಾಗ.

ಎಷ್ಟು ಗ್ರಾಚ್ಯೂಟಿ?: ಸಂಸ್ಥೆಗಳು ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಪ್ರಕಾರ ಗ್ರಾಚ್ಯೂಟಿ ನೀಡಬೇಕು. ಆ ಪ್ರಕಾರ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಸಂಬಳದ ಪ್ರಕಾರ ಗ್ರಾಚ್ಯೂಟಿ ಮೊತ್ತ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ತಿಂಗಳಿಗೆ ಇಪ್ಪತ್ತಾರು ದಿನಗಳ ಲೆಕ್ಕ ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಅವಧಿಯನ್ನು ಒಂದು ಪೂರ್ತಿ ವರ್ಷವೆಂದು ಪರಿಗಣಿಸಬೇಕು. ಸಂಬಳ ಎಂದರೆ ಬೇಸಿಕ್‌ ಮತ್ತು ಡಿಎ ಮಾತ್ರವೇ ತೆಗೆದುಕೊಳ್ಳಬೇಕು. ಇತರ ಭತ್ತೆಗಳು ಗ್ರಾಚ್ಯೂಟಿ ಸಂದರ್ಭದಲ್ಲಿ ಲೆಕ್ಕಕ್ಕಿಲ್ಲ.

ಗ್ರಾಚ್ಯೂಟಿ = ಸೇವೆಯ ಅವಧಿ (ಪೂರ್ತಿವರ್ಷ) ಮಾಸಿಕ ಸಂಬಳ (15/26): ಈ ಫಾರ್ಮುಲಾ ಪ್ರಕಾರ ರೂ. 20 ಲಕ್ಷದ ಗರಿಷ್ಟ ಮಿತಿಯವರೆಗೆ ಗ್ರಾಚ್ಯೂಟಿ ಪಾವತಿ ಕಡ್ಡಾಯ. (ಅದಕ್ಕೂ ಮೀರಿದ ಪಾವತಿಯನ್ನುex-gratia ರೂಪದಲ್ಲಿ ಮಾಡಲು ಕಾನೂನಿನ ಅಡ್ಡಿಯಿಲ್ಲ) ಈ ಮಿತಿಯು ಮೊದಲು ರೂ. 10 ಲಕ್ಷ ಇದ್ದಿದ್ದು 29 ಮಾರ್ಚ್‌ 2018ರ ಬಳಿಕ ರೂ. 20 ಲಕ್ಷಕ್ಕೆ ಏರಿಸಲಾಗಿದೆ.

ಇನ್ನು, ಮೊದಲೇ ಹೇಳಿದಂತೆ ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬಾರದ ಅಂದರೆ ಕನಿಷ್ಠ ಹತ್ತು ಮಂದಿ ಉದ್ಯೋಗಿಗಳು ಇಲ್ಲದ ಸಂಸ್ಥೆಗಳಿಗೆ ಗ್ರಾಚ್ಯೂಟಿ ನೀಡುವುದು ಕಡ್ಡಾಯವಲ್ಲ. ಅಂತವರು ಅವರಿಗೆ ಇಷ್ಟ ಬಂದಂತೆ ಎಷ್ಟಾದರೂ ಗ್ರಾಚ್ಯೂಟಿ ನೀಡಬಹುದು ಅಥವಾ ಬಿಡಿಕಾಸೂ ನೀಡದೆ ಸುಮ್ಮನಿರಬಹುದು.

ಆದಾಯ ಕರ: ಗ್ರಾಚ್ಯೂಟಿ ಪಾವತಿಯ ವಿಚಾರ ಬೇರೆ; ಅದರ ಮೇಲಿನ ಆದಾಯ ಕರದ ವಿಚಾರ ಬೇರೆ. ಈಗ ಪಾವತಿಯ ವಿಚಾರ ಬಿಟ್ಟು ಅದರ ಮೇಲೆ ಅನ್ವಯವಾಗುವ ಕರ ಕಾನೂನಿನತ್ತ ಹೊರಳ್ಳೋಣ... ಗ್ರಾಚ್ಯೂಟಿ ಪಾವತಿಯ ಮೇಲೆ ಆದಾಯ ಕರ ಯಾವ ರೀತಿ ಅನ್ವಯವಾಗುತ್ತದೆ ಎನ್ನುವುದು ಕೂಡಾ ಉದ್ಯೋಗವು ಸರಕಾರಿಯೇ ಖಾಸಗಿಯೇ ಎನ್ನುವುದರ ಮೇಲೆ ನಿರ್ಧಾರಿತವಾಗುತ್ತದೆ.

(ಇಲ್ಲಿ ಸರಕಾರಿ ಅಂದರೆ ಸಂಪೂರ್ಣ ಸರಕಾರಿ, ಬ್ಯಾಂಕ್‌, ಎಲ್ಲೆ„ಸಿ, ಇನ್ನಿತರ ಅರೆ ಸರಕಾರಿಗಳು ಖಾಸಗಿಯವರ ಜೊತೆಗೆ ಸೇರುತ್ತಾರೆ). ಉದ್ಯೋಗವು ಸರಕಾರಿಯಾದರೆ ಅಂತಹ ಗ್ರಾಚ್ಯೂಟಿ ಪಾವತಿಯು ಸರಕಾರಿ ನೌಕರರ ಕೈಯಲ್ಲಿ ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಆ ಮಿತಿ ಈಗ ರೂ. 20 ಲಕ್ಷ. ಆದರೆ ಖಾಸಗಿ ಉದ್ಯೋಗ ವಲಯದಲ್ಲಿ ಗ್ರಾಚ್ಯೂಟಿ ಪಾವತಿಯ ಮೇಲೆ ಕರ ವಿನಾಯಿತಿಗೆ ಒಂದು ಮಿತಿ ಇದೆ. ಈ ಮಿತಿಯು ಕೂಡಾ ಮೇಲೆ ತಿಳಿಸಿದಂತೆ ಎರಡು ರೀತಿಯಲ್ಲಿ ಅನ್ವಯವಾಗುತ್ತದೆ.

1. ಪೇಮೆಂಟ್‌ ಆಫ್ ಗ್ರಾಚ್ಯೂಟಿ ಆ್ಯಕ್ಟ್ 1972 ಅಡಿಯಲ್ಲಿ ಬರುವವರಿಗೆ ಆ ಮಿತಿಯನ್ನು ಈ ಕೆಳಗಿನ ಮೂರು ಅಂಶಗಳಲ್ಲಿ ಕನಿಷ್ಠವಾದ ಮೊತ್ತವಾಗಿ ತೆಗೆದುಕೊಳ್ಳಲಾಗುತ್ತದೆ:

1. ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಸೇವೆಯ ಅಂತ್ಯದ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಇಪ್ಪತ್ತಾರು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಂಬಳ ಎಂದರೆ ಬೇಸಿಕ್‌ ಮತ್ತು ಡಿಎ ಎಂದು ತಿಳಿಯಬೇಕು)

2. ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ

3. ರೂ. ಇಪ್ಪತ್ತು ಲಕ್ಷ.

ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರಮುಕ್ತವಾಗಿರುತ್ತದೆ. ಇದು ಗ್ರಾಚ್ಯೂಟಿ ಪಾವತಿಯ ಕಾನೂನಿನ ನೊಣಪ್ರತಿ! ಅಂದರೆ ಈ ಕಾನೂನಿನಡಿಯಲ್ಲಿ ಪಾವತಿಸಿದ ಗ್ರಾಚ್ಯೂಟಿ ಸಂಪೂರ್ಣವಾಗಿ ಕರಮುಕ್ತ.

2. ಪೇಮೆಂಟ್‌ ಆಫ್ ಗ್ರಾಚ್ಯೂಟಿ ಅಡಿಯಲ್ಲಿ ಬಾರದ ಸಂದರ್ಭಗಳಲ್ಲಿ ಕರ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಇದೆ. ಇಲ್ಲಿ ಪಾವತಿಯ ಬಗ್ಗೆ ಯಾವುದೇ ಫಾರ್ಮುಲಾ ನೀಡದಿದ್ದರೂ ಕರ ವಿನಾಯಿತಿ ಮೇಲೆ ಸ್ಪಷ್ಟವಾದ ಕಾನೂನು ಇದೆ.

1. ಇಲ್ಲಿ ಪ್ರತಿ ಪೂರ್ಣಗೊಂಡ ವರ್ಷದ ಸೇವೆಗೆ ಹದಿನೈದು ದಿನಗಳ ಲೆಕ್ಕದಲ್ಲಿ ಕಳೆದ ಹತ್ತು ತಿಂಗಳ ಸೇವೆಯ ಸರಾಸರಿ ಸಂಬಳದ ಅನುಸಾರ ಲೆಕ್ಕ ಹಾಕಿದರೆ ಸಿಗುವ ಮೊತ್ತ (ಒಂದು ತಿಂಗಳಿಗೆ ಮೂವತ್ತು ದಿನಗಳೆಂದು ತೆಗೆದುಕೊಳ್ಳಬೇಕು ಹಾಗೂ ಇಲ್ಲಿ ಆರು ತಿಂಗಳು ದಾಟಿದ ಸೇವೆಯನ್ನು ಪೂರ್ತಿ ವರ್ಷದ ಲೆಕ್ಕಕ್ಕೆ ತೆಗೆದುಕೊಳ್ಳವ ಅಗತ್ಯವಿಲ್ಲ. ಸಂಬಳ ಎಂದರೆ ಬೇಸಿಕ್‌ ಮತ್ತು ಡಿಎ ಎಂದು ತಿಳಿಯಬೇಕು.

2. ನಿಜವಾಗಿಯೂ ಪಾವತಿಗೊಂಡ ಗ್ರಾಚ್ಯೂಟಿ ಮೊತ್ತ

3. ರೂ. ಇಪ್ಪತ್ತು ಲಕ್ಷ.

ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತ ಕರ ಮುಕ್ತವಾಗಿರುತ್ತದೆ.

ಮೇಲಿನ ಎರಡೂ ಸಂದರ್ಭಗಳಲ್ಲೂ, ಕರಮುಕ್ತ ಮಿತಿ ಮೀರಿದ ಗ್ರಾಚ್ಯೂಟಿ ಸಿಕ್ಕಿದರೆ (ex gratia)ಅದರ ಮೇಲೆ ಆ ವರ್ಷದ ಆದಾಯ ಸ್ಲಾಬ್‌ ಅನುಸರಿಸಿ ಕರ ಕಟ್ಟಬೇಕು.

ಮಿತಿಯಲ್ಲಿ ಹೆಚ್ಚಳ: ಗ್ರಾಚ್ಯೂಟಿ ಮಿತಿ ರೂ. 10 ಲಕ್ಷದಿಂದ ರೂ. 20 ಲಕ್ಷಕ್ಕೆ ಏರಿಕೆಯಾಗಿದೆಯಷ್ಟೆ. ಈ ಹೊಸ ತಿದ್ದುಪಡಿಯ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟತೆ ಬೇಕೇ ಬೇಕಾಗುತ್ತದೆ. ಎಷ್ಟೋ ಜನ ಅಮಾಯಕರು ತಮ್ಮ ಎಂದೋ ಸಿಗಲಿರುವ ಗ್ರಾಚ್ಯೂಟಿ ಮೊತ್ತ ಈಗಾಗಲೇ ಜಾಸ್ತಿಯಾಗಿದೆ ಎಂದು ಭ್ರಮೆಯಲ್ಲಿ ಈಗಾಗಲೇ ನಾಲ್ಕು ಕಿಲೋ ಧಾರವಾಡ ಪೇಡಾ ಹಂಚಿ ಕಿಸೆ ಖಾಲಿಮಾಡಿಕೊಂಡಿದ್ದಾರೆ.

ಇಲ್ಲಿ ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ ಗ್ರಾಚ್ಯೂಟಿಯ ಗರಿಷ್ಟ ಮಿತಿಯಲ್ಲಿ ಮಾತ್ರವೇ ಹೆಚ್ಚಳವಾಗಲಿದೆ. ಪಡೆಯಲಿರುವ ಗ್ರಾಚ್ಯೂಟಿ ಲೆಕ್ಕಾಚಾರದಲ್ಲಿ ಅಥವಾ ಫಾರ್ಮುಲಾದಲ್ಲಿ ಯಾವುದೇ ಬದಲಾವಣೆ ಇಲ್ಲ; ಅದು ಮೊದಲಿನಂತೆಯೇ ಇದೆ. ಅಂದರೆ, ಫಾರ್ಮುಲಾ ಪ್ರಕಾರ 10 ಲಕ್ಷ ಮೀರಿದ ಗ್ರಾಚ್ಯೂಟಿ ಬರುವವರಿಗೆ ಮಾತ್ರ ಈ ಮಿತಿ ಹೆಚ್ಚಳದಿಂದ ಲಾಭವಾಗುತ್ತದೆ. ಈಗಾಗಲೇ 10 ಲಕ್ಷ ಮೀರುವ ಕೆಲವರಿದ್ದಾರೆ;

ಇನ್ನು ಕೆಲವರಿಗೆ ಈ ಏಳನೆಯ ಪೇ ಕಮಿಶನ್‌ ಸಂಬಳದ ನಂತರದ ದಿನಗಳಲ್ಲಿ ಗ್ರಾಚ್ಯೂಟಿ ಮೊತ್ತ ಹತ್ತು ಲಕ್ಷ ಮೀರುವ ಸಂಭಾವ್ಯವಿದ್ದು ಅಂತವರಿಗೆ ಈ ಮಿತಿ ಹೆಚ್ಚಳ ಸಹಾಯವಾದೀತು. ಆದರೆ ಫಾರ್ಮುಲಾ ಪ್ರಕಾರ ಹತ್ತು ಲಕ್ಷವೂ ಗ್ರಾಚ್ಯೂಟಿ ಬಾರದ ದೇಶದ ಬಹುಪಾಲು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಈ ಹೊಸ ಕಾನೂನಿನಿಂದ ಯಾವುದೇ ಪ್ರಯೋಜನ ಆಗಲಿಕ್ಕಿಲ್ಲ. ಅಂತವರಿಗೆ ಪೇಡಾ ಹಂಚಿ ಕಿಸಿಖಾಲಿಯಾದದ್ದಷ್ಟೇ ಬಂತು!

Tags:

ಗ್ರಾಚ್ಯೂಟಿ

ಲೆಕ್ಕಾಚಾರಗಳು

Gratuity

calculations

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 22 Oct 2018 09:11:01 +0000 lakshmi 332884 at https://www.udayavani.com https://www.udayavani.com/kannada/news/investments-savings/332884/some-calculations-around-the-gratuity#comments ಹತ್ತು ವರ್ಷ 8% ನೀಡುವ "ವಯ ವಂದನ' ಯೋಜನೆ https://www.udayavani.com/kannada/news/investments-savings/331421/age-want-scheme-which-gives-ten-years-to-8

ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫ‌ಲವೂ ಕೊಡುವ ಯೋಜನೆ ಯಾವುದಾದರೂ ಇದೆಯೇ? ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಸರಕಾರ ಪ್ರಾಯೋಜಕತ್ವದಿಂದ ಮಾತ್ರವೇ ಸಾಧ್ಯ. ಕೆಲ ವಾರಗಳ ಹಿಂದೆ 8.7% ಪ್ರತಿಫ‌ಲದ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್ ಸ್ಕೀಂ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ. ಇದೀಗ ಎಲ್‌ಐಸಿಯ ವತಿಯಿಂದ ಅಂತಹದ್ದೇ ಇನ್ನೊಂದು 8% ಪ್ರತಿಫ‌ಲ ನೀಡುವ "ವಯ ವಂದನ' ಯೋಜನೆಯ ಬಗ್ಗೆ ಚರ್ಚಿಸೋಣ.

ನಿವೃತ್ತಿ ಹೊಂದಿ ಮನೆಯಲ್ಲೇ ಕುಳಿತಿರುವ ಹಿರಿಯ ನಾಗರಿಕರ ಪಾಡು ಸ್ವಲ್ಪ ಕಷ್ಟದ್ದೇ. ಅವರವರ ಆಟೋ ಮತ್ತು ಔಷಧದ ಖರ್ಚಿನಷ್ಟಾದರೂ ಅವರು ಆದಾಯ ತೋರಿಸದಿದ್ದರೆ ಮನೆಯೊಳಗೇ ಇರಿಸು-ಮುರಿಸಾಗುವ ಪರಿಸ್ಥಿತಿ. ಜೀವನವಿಡೀ "ಇಪಿಎಸ್‌' ಎಂಬ ಮಹಾ ಟೊಪ್ಪಿಯ ಸರಕಾರಿ ಸ್ಕೀಮಿಗೆ ದುಡ್ಡು ಕಟ್ಟಿದವರಿಗಂತೂ ಇವತ್ತು ತಮ್ಮ ಮೊಮ್ಮಕ್ಕಳಿಗೆ ಕಡ್ಲೆಕಾಯಿ ಕೊಡಿಸುವಷ್ಟು ದುಡ್ಡು ಕೂಡಾ ಸಿಗುತ್ತಿಲ್ಲ. ಸೂಟು ಬೂಟು ಧರಿಸಿದ ಟಿವಿ ನಿವಾಸಿ ಶೇರು ಜೋಯಿಷರು ದೈನಂದಿನ ಜೂಜಾಟಕ್ಕೆ ನಿಮ್ಮನ್ನು ಪ್ರೋತ್ಸಾಹಿಸುವ ಹೂಡಿಕೆಗಳಿಗೆ ಯಾವುದೇ ಭದ್ರತೆ ಇಲ್ಲ. ಭದ್ರತೆ ಇರುವ ಬ್ಯಾಂಕ್‌ ಎಫ್.ಡಿಗಳಲ್ಲಿ ಡೀಸೆಂಟಾದ ಪ್ರತಿಫ‌ಲ ಇಲ್ಲ. ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫ‌ಲವೂ ಇರುವ ಯೋಜನೆ ಯಾವುದಾದರೂ ಇದೆಯೇ ಎನ್ನುವುದು ಈವಾಗ ಎಲ್ಲರ ಪ್ರಶ್ನೆ.

ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಸರಕಾರ ಪ್ರಾಯೋಜಕತ್ವದಿಂದ ಮಾತ್ರವೇ ಸಾಧ್ಯ. ಕೆಲ ವಾರಗಳ ಹಿಂದೆ ಬ್ಯಾಂಕ್‌/ಪೋಸ್ಟಾಫೀಸುಗಳಲ್ಲಿ ದೊರೆಯುವ 8.7% ಪ್ರತಿಫ‌ಲದ ಸೀನಿಯರ್‌ ಸಿಟಿಜನ್‌ ಸೇವಿಂಲ್ಲೇ ಸ್ಕೀಂ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ. (ಹೌದು! ಇದು ಬ್ಯಾಂಕುಗಳಲ್ಲಿ ಖಂಡಿತವಾಗಿಯೂ ದೊರೆಯುತ್ತವೆ, ಸಂಶಯ ಬೇಡ) ಇದೀಗ ಎಲ್‌ಐಸಿಯ ವತಿಯಿಂದ ಅಂತಹದ್ದೇ ಇನ್ನೊಂದು 8% ಪ್ರತಿಫ‌ಲ ನೀಡುವ ಪ್ರಧಾನ ಮಂತ್ರಿ ವಯ ವಂದನ ಯೋಜನಾ. ಇದು ಹಿಂದೆ ಮಾರುಕಟ್ಟೆಯಲ್ಲಿ ಇದ್ದ ವರಿಷ್ಠಾ ಪೆನÒನ್‌ ಯೋಜನೆಯ ಹಳೆ ಮದ್ಯ-ಹೊಸ ಬಾಟಲ…!

ಯಾರಿಗೆ?: ಪ್ರಧಾನ ಮಂತ್ರಿ ವಯ ವಂದನ ಯೋಜನಾ ಎನ್ನುವ ಈ ಯೋಜನೆಯು 60 ದಾಟಿದ ಹಿರಿಯ ನಾಗರಿಕರಿಗಾಗಿ ಮಾತ್ರ ಅನ್ವಯವಾಗುವ ವಿಶೇಷ ಪಿಂಚಣಿ ಯೋಜನೆ. ನೀವು ಹೂಡಿಕೆ ಮಾಡುವ ದಿನಾಂಕದಂದು ನಿನಗೆ 60 ವರ್ಷ ಪೂರ್ಣಗೊಂಡಿರಬೇಕು. ಇಲ್ಲಿ ಹೂಡಿಕೆಗೆ ವಯಸ್ಸಿನ ಕನಿಷ್ಠ ಮಿತಿ 60; ಆದರೆ ಇಲ್ಲಿ ಗರಿಷ್ಟ ಮಿತಿ ಎಂಬುದು ಇಲ್ಲ.

ಯಾವಾಗ?: ಮೇ ನಾಲ್ಕನೇ ತಾರೀಕು, 2017ರಂದು ಬಿಡುಗಡೆಯಾದ ಈ ಪಿಂಚಣಿ ಯೋಜನೆ ಆ ದಿನಾಂಕದಿಂದ ಕೇವಲ ಒಂದು ವರ್ಷದ ಅವಧಿಯವರೆಗೆ ಮಾತ್ರವೇ ಲಭ್ಯವಿತ್ತು. ಅಂದರೆ, ಈ ಯೋಜನೆಯಲ್ಲಿ ದುಡ್ಡು ಹಾಕುವವರು ಮೇ 3, 2018ರ ಒಳಗಡೆ ಮಾಡಿಕೊಳ್ಳಬೇಕಿತ್ತು. ಆದರೆ 2018 ಬಜೆಟ್ಟಿನಲ್ಲಿ ಈ ಗಡುವನ್ನು ಮಾರ್ಚ್‌ 31, 2020ವರೆಗೆ ವಿಸ್ತರಿಸಿರುತ್ತಾರೆ.

ಅವಧಿ: ಇದೊಂದು 10 ವರ್ಷಗಳ ಯೋಜನೆ. ಹೂಡಿಕೆಯ ದಿನಾಂಕದಿಂದ ಹತ್ತು ವರ್ಷಗಳ ಕಾಲ ಈ ಹೂಡಿಕೆ ನಡೆಯುತ್ತದೆ. ಬಳಿಕ ಹೂಡಿಕಾ ಮೊತ್ತವನ್ನು ವಾಪಾಸು ನೀಡಲಾಗುತ್ತದೆ.

ಪಿಂಚಣಿ ಪ್ರತಿಫ‌ಲ: ಈ ಯೋಜನೆಯಡಿಯಲ್ಲಿ ಪೆನ್ಸ್ ನ್‌ ಪಡೆಯಲು 4 ಆಯ್ಕೆಗಳಿವೆ. ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ಪೆನ್ಸ್ ನ್‌ ಪಡೆಯಬಹುದು. ಸರಳ ಬಡ್ಡಿ ಲೆಕ್ಕದಲ್ಲಿ ನೋಡಿದರೆ ಪ್ರತಿಫ‌ಲವು ಈ ನಾಲ್ಕೂ ಆಯ್ಕೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ವಾರ್ಷಿಕ ಕಂತುಗಳಲ್ಲಿ ಪೆನÒನ್‌ ಪಡೆಯುವ ಆಯ್ಕೆ ಮಾಡಿದರೆ 8.3% ಪ್ರತಿಫ‌ಲ ದೊರೆಯುತ್ತದೆ. ಅರೆವಾರ್ಷಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8.13%, ತ್ತೈಮಾಸಿಕ ಕಂತುಗಳಲ್ಲಿ ಪೆನ್ಸ್ ನ್‌ ಪಡೆದರೆ 8.05% ಹಾಗೂ ಮಾಸಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8% ಪ್ರತಿಫ‌ಲ ಸಿಗುತ್ತದೆ. ವಾರ್ಷಿಕ ಕಂತುಗಳಲ್ಲಿ 8.3% ಪ್ರತಿಫ‌ಲ ನೀಡುವ ಈ ಆಯ್ಕೆ ಉತ್ತಮವೆಂದು ತೋರುತ್ತದೆ.

ಎಲ್ಲಿ ಸಿಗುತ್ತದೆ?: ಇದೊಂದು ಸರಕಾರಿ ಯೋಜನೆ ಹಾಗೂ ಇದು ಕೇವಲ ಎಲ್‌ಐಸಿಯ ಮೂಲಕ ಮಾತ್ರವೇ ಸಿಗುತ್ತದೆ. ಇದನ್ನು ಎಲ್‌ಐಸಿಯು ತನ್ನ ಒಂದು ಪಾಲಿಸಿಯ ರೂಪದಲ್ಲಿ (ಪ್ಲಾನ್‌ 842) ಮಾರಾಟ ಮಾಡುತ್ತದೆ. ಇದನ್ನು ಎಲ್‌ಐಸಿಯಿಂದ ಆನ್‌-ಲೈನ್‌ ಆಗಿಯೂ ಖರೀದಿ (www.licindia.com)  ಮಾಡಬಹುದು.

ಲಾಭ: ಈ ಯೋಜನೆಯಲ್ಲಿ ಅದರ ಹತ್ತು ವರ್ಷಗಳ ಅವಧಿ ಪೂರ್ತಿ ನಿಮ್ಮ ಆಯ್ಕೆಯ ಪೂರ್ವ ನಿಗದಿತ ಸಮಯಾನುಸಾರ (ಮಾಸಿಕ, ತ್ತೈಮಾಸಿಕ, ಅರೆವಾರ್ಷಿಕ ಹಾಗೂ ವಾರ್ಷಿಕ) ಪೆನ್ಸ್ ನ್‌ ಸಿಗುತ್ತಾ ಹೋಗುತ್ತದೆ. ಒಂದು ವೇಳೆ ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನ ಮೃತ್ಯು ಉಂಟಾದರೆ (ಸುಸೈಡ್‌ ಸಹಿತ) ಪಾಲಿಸಿ ಕೊನೆಗೊಂಡು ನಾಮಿನಿಗೆ ಹೂಡಿಕಾ ಮೊತ್ತವು ಸಲ್ಲುತ್ತದೆ. ಪಾಲಿಸಿಯು ಪೆನ್ಸ್ ನ್‌ ರೂಪದಲ್ಲಿ ಮುಂದುವರಿಯುವುದಿಲ್ಲ. ಅದಲ್ಲದೆ, ಇದು ಜೀವ ವಿಮಾ ನಿಗಮದಿಂದ ಬಿಡುಗಡೆಯಾದರೂ ಇದೊಂದು ವಿಮಾ ಯೋಜನೆಯಲ್ಲ. ಹಾಗಾಗಿ ಇಲ್ಲಿ ಬೇರಾವುದೇ ವಿಮಾ ಮೊತ್ತ ಪಾಲಿಸಿದಾರನಿಗೆ ಸಲ್ಲತಕ್ಕದ್ದಲ್ಲ. ಇದೊಂದು ಹೇಳಿಕೇಳಿ ಪೆನ್ಸ್ನ್‌ ಯೋಜನೆ. ಒಂದು ವೇಳೆ ಹೂಡಿಕೆದಾರ ಯೋಜನೆಯ ಪೂರ್ತಿ ಅವಧಿಯಾದ 10 ವರ್ಷಗಳನ್ನು ಪೂರ್ತಿಗೊಳಿಸಿದರೆ ಆತನ ಕೈಗೆ ಕೊನೆಯ ಕಂತಿನ ಪೆನ್ಸ್ನ್‌ ಜೊತೆಗೆ ಹೂಡಿಕಾ ಮೊತ್ತ ಬರುತ್ತದೆ, ಬೇರಾವ ಹೆಚ್ಚುವರಿ ಬೋನಸ್‌/ಗೀನಸ್‌ ಇರುವುದಿಲ್ಲ.

ಹೂಡಿಕೆ: ಪೆನ್ಸ್ನ್‌ ಮೊತ್ತ: ಹೂಡಿಕೆ ಹಾಗೂ ಪೆನ್ಸ್ ನ್‌ ಮೊತ್ತಗಳು ಕಂತುಗಳ ಅವಧಿಯನ್ನು ಹೊಂದಿಕೊಂಡಿದೆ. ಕೆಳಗಿನ ಟೇಬಲ್‌ನಲ್ಲಿ ಕೆಲವು ಅಂಕಿ ಅಂಶಗಳನ್ನು ನೀಡಲಾಗಿದೆ. ಉದಾಹರಣೆಗಾಗಿ, ಒಬ್ಟಾತ ಪಾಲಿಸಿದಾರನಿಗೆ ಮಾಸಿಕ ಪೆನ್ಸ್ನ್‌ ರೂ 10000 ಬೇಕೆಂದಾದರೆ ಆತನು ರೂ 1500000 ಹೂಡಿಕೆ ಮಾಡಬೇಕು ಅಥವಾ ಎಲ್‌ಐಸಿಯ ಭಾಷೆಯಲ್ಲಿ ಹೇಳುವುದಾರೆ ಅಷ್ಟು ಮೊತ್ತ ಕೊಟ್ಟು ಆ ಪಾಲಿಸಿಯನ್ನು ಖರೀದಿ ಮಾಡಬೇಕು. ಅಂತೆಯೇ ಅರೆವಾರ್ಷಿಕ ರೂ 6000 ಪೆನÒನ್‌ ಬೇಕಾದವರು ರೂ 147601 ನೀಡಿ ಅಂತಹ ಪಾಲಿಸಿಯನ್ನು ಖರೀದಿಸಬೆಕು. ಈ ಅಂಕಿ-ಅಂಶಗಳು ಜೀವವಿಮೆಯಂತೆ ವಯಸ್ಸು ಆಧರಿಸಿ ಬದಲಾಗುವುದಿಲ್ಲ. ಅರುವತ್ತು ದಾಟಿದ ಎಲ್ಲರಿಗೂ ಇದು ಸಮಾನವಾಗಿ ಅನ್ವಯಿಸುತ್ತದೆ..

ಕನಿಷ್ಠ-ಗರಿಷ್ಟ ಮಿತಿ: ಕನಿಷ್ಠ ಪೆನ್ಸ್ನ್‌ ಮೊತ್ತ ರೂ 1000 ಹಾಗೂ ಖರೀದಿ ಮೊತ್ತ ರೂ 150000. ಗರಿಷ್ಟ ಪೆನ್ಸ್ ನ್‌ ಮಾಸಿಕ ರೂ 10000 ಹಾಗೂ ಅದರ ಖರೀದಿ ಮೊತ್ತ ರೂ 1500000 ಆಗಿರುತ್ತದೆ. ಈ ಯೋಜನೆಯಲ್ಲಿ ರೂ 15 ಲಕ್ಷಕ್ಕಿಂತ ಜಾಸ್ತಿ ಹೂಡಲು ಬರುವುದಿಲ್ಲ. ಅಲ್ಲದೆ ಇಲ್ಲಿನ ಹೂಡಿಕೆ ಟೇಬಲ್‌ನಲ್ಲಿ ನೀಡಿದ ಉದಾಹರಣಾ ಅಂಕಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕನಿಷ್ಠ-ಗರಿಷ್ಟ ಮಿತಿಗಳೊಳಗೆ ಎಷ್ಟಾದರೂ ಹೂಡಿಕೆ ಮಾಡಿ ತತ್ಸಮಾನ(ಪ್ರೋ ರೇಟಾ) ಪೆನ್ಸ್ನ್‌ ಪಡೆಯಬಹುದು.

ಇಲ್ಲಿ ಹೂಡಿಕೆಯ ಅಥವಾ ಪೆನ್ಸ್ ನ್‌ನ ಗರಿಷ್ಟ ಮಿತಿಯ ಬಗ್ಗೆ ಮಾತನಾಡುವಾಗ ಈ ಮಿತಿಗಳು ಹೇಗೆ ಅನ್ವಯವಾಗುತ್ತವೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳುವುದು ಅಗತ್ಯ. ಈ ಮಿತಿ ಒಂದು ಕೌಟುಂಬಿಕ ನೆಲೆಯಲ್ಲಿ ಅನ್ವಯವಾಗುತ್ತದೆಯೇ ಹೊರತು ಒಂದು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅಂದರೆ, ಒಬ್ಬರು ಮತ್ತು ಅವರ ಪತ್ನಿ/ಪತಿ ಹಾಗೂ ಅವಲಂಬಿತರು ಒಟ್ಟಾಗಿ ಈ ಗರಿಷ್ಟ ಮಿತಿಯಂತೆ ಹೂಡಿಕೆ ಮಾಡಬಹುದಾಗಿದೆ. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ಈ ಮಿತಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಳಸುವಂತಿಲ್ಲ.

ಪೆನ್ಸ್ನ್‌ ಪಾವತಿ: ಪೆನ್ಸ್ನ್‌ ಮೊತ್ತವನ್ನು ಹೂಡಿಕೆಯ ದಿನಾಂಕದಿಂದ ಆರಂಭಗೊಂಡಂತೆ ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ನೀಡಲಾಗುತ್ತದೆ. ಪೆನ್ಸ್ನ್‌ ಪಾವತಿಯನ್ನು ನೆಫ್ಟ್ ಬ್ಯಾಕ್‌ ವರ್ಗಾವಣೆ ಅಥವಾ ಆಧಾರ್‌ ಆಧರಿತ ಪಾವತಿ ಪದ್ಧತಿಯ ಮೂಲಕ ನಡೆಸಲಾಗುತ್ತದೆ.

ಸರೆಂಡರ್‌ ಮೊತ್ತ: ಒಮ್ಮೆ ಖರೀದಿ ಮಾಡಿದ ಪಾಲಿಸಿಯನ್ನು ಅವಧಿ ಮುಗಿಯುವ ತನಕ ಹಿಂಪಡೆಯುವಂತಿಲ್ಲ. ಆದರೆ ಸ್ವಂತ ಅಥವಾ ಗಂಡ/ಹೆಂಡತಿಗೆ ಯಾವುದೇ ಮಾರಣಾಂತಿಕ ಕಾಯಿಲೆ ಉಂಟಾದ ಸಂದರ್ಭದಲ್ಲಿ ಮೂಲ ಹೂಡಿಕೆಯ 98% ಮೊತ್ತವನ್ನು ವಾಪಾಸು ಪಡೆದು ಪಾಲಿಸಿಯನ್ನು ಸರೆಂಡರ್‌ ಮಾಡಬಹುದಾಗಿದೆ.

ಸಾಲ: ಪಾಲಿಸಿಗೆ 3 ವರ್ಷ ಸಂದ ಬಳಿಕ ಮೂಲ ಹೂಡಿಕೆಯ 75% ಸಾಲವನ್ನು ಈ ಪಾಲಿಸಿಯಿಂದ ಪಡೆಯಬಹುದಾಗಿದೆ. ಈ ಸಾಲದ ಮೇಲಿನ ಬಡ್ಡಿದರ ಆಗಿಂದಾಗ್ಗೆ ಪರಿಷ್ಕರಣೆಗೊಳ್ಳಲಿದೆ. ಸದ್ಯದ ದರ 10% ಆಗಿದೆ. ಈ ಪಾಲಿಸಿಯಲ್ಲಿ ಬಡ್ಡಿ ದರವನ್ನು ಪಾವತಿಸಬೇಕಾದ ಪೆನ್ಸ್ನ್‌ ಮೊತ್ತದಿಂದ ಕಳೆಯಲಾಗುತ್ತದೆ. ಆದರೆ ಸಾಲದ ಮೊತ್ತವನ್ನು ಪಾಲಿಸಿ ಮುಗಿಯುವಾಗಿನ ಅಂತಿಮ ಮೊತ್ತದಿಂದ ಕಳೆಯಲಾಗುತ್ತದೆ.

ಆದಾಯ ಕರ: ಈ ಪಾಲಿಸಿಯಲ್ಲಿ ಸಿಗುವ 8% ಪೆನ್ಸ್ನ್‌ ಮೊತ್ತವು ಸಂಪೂರ್ಣವಾಗಿ ಆದಾಯ ಕರಕ್ಕೆ ಒಳಪಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆಯ ಮೇಲಾಗಲಿ, ಬರುವ ಪೆನ್ಸ್ನ್‌ ಮೊತ್ತದ ಮೇಲಾಗಲಿ, ಯಾವುದೇ ಆದಾಯ ಕರ ವಿನಾಯಿತಿ ಇರುವುದಿಲ್ಲ.

ಫ್ರೀ-ಲುಕ್‌ ಅವಧಿ: ಜೀವ ವಿಮಾ ಪಾಲಿಸಿಗಳಿಗೆ ಇರುವಂತೆಯೇ ಈ ಪೆನ್ಸ್ನ್‌ ಪಾಲಿಸಿಗೆ ಕೂಡಾ ಫ್ರೀ-ಲುಕ್‌ ಅವಧಿಯನ್ನು ಎಲ್‌ಐಸಿಯು ನೀಡಿದೆ. ಅಂದರೆ ಈ ಪಾಲಿಸಿ ಕೈಸೇರಿದ 15 ದಿನಗಳ ಒಳಗೆ ಅದು ಇಷ್ಟವಾಗದಿದ್ದಲ್ಲಿ ಅದನ್ನು ಹಿಂತಿರುಗಿಸಬಹುದು. ಆನ್‌-ಲೈನ್‌ ಖರೀದಿಯಾಗಿದ್ದಲ್ಲಿ ಈ ಅವಧಿ 30 ದಿನಗಳು. ಈ ರೀತಿ ಹಿಂತಿರುಗಿಸಿದ ಪಾಲಿಸಿಯ ಮೇಲೆ ಸ್ಟ್ಯಾಂಪ್‌ ಡ್ನೂಟಿ ವೆಚ್ಚ ಕಳೆದು ಉಳಿದ ಮೊತ್ತವನ್ನು ಮರುಪಾವತಿ ಮಾಡಲಾಗುವುದು.

ವಿಶ್ಲೇಷಣೆ: ಸದ್ಯದ ಬ್ಯಾಂಕ್‌ ಬಡ್ಡಿಯ ಪರಿಸ್ಥಿತಿಯಲ್ಲಿ ಇಂತಹ ಸರಕಾರಿ ಯೋಜನೆಗಳ ಅಗತ್ಯವಿದೆ. 1 ವರ್ಷದ ಎಫ್.ಡಿ.ಯ ಮೇಲೆ ಹಿರಿಯ ನಾಗರಿಕರಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ 7.2% ಬಡ್ಡಿ ನೀಡುತ್ತದೆ. 10 ವರ್ಷಕ್ಕಾದರೆ ಅದು ಕೇವಲ 7.35%. ಆದರೆ ಇಲ್ಲಿ ಎಲ್‌ಐಸಿಯು 10 ವರ್ಷಗಳ ಮಟ್ಟಿಗೆ 8.3% ಪ್ರತಿಫ‌ಲವನ್ನು ನೀಡುತ್ತದೆ. ಹಾಗಾಗಿ ಇದು ಒಂದು ಉತ್ತಮ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ. ಸರಕಾರಿ ಯೋಜನೆಯಾದ ಕಾರಣ ಅಲ್ಲದೆ ಎಲ್‌ಐಸಿಯೂ ಒಂದು ಅತ್ಯುತ್ತಮ ಸರಕಾರಿ ವಿತ್ತೀಯ ಸಂಸ್ಥೆಯಾದ ಕಾರಣ ಭದ್ರತೆಯ ಮಟ್ಟಿಗೆ ಯಾವುದೇ ಹೆದರಿಕೆ ಇಲ್ಲ.

ಇಲ್ಲಿಯ ಮುಖ್ಯ ಸಮಸ್ಯೆಇದರ ಹೂಡಿಕಾ ಮಿತಿ. ಇಲ್ಲಿ ರೂ15 ಲಕ್ಷ ಮೀರಿ ಹೂಡಿಕೆ ಮಾಡುವಂತಿಲ್ಲ; ಅದು ಕೂಡಾ ಒಂದು ಕುಟುಂಬದ ಲೆಕ್ಕದಲ್ಲಿ. ಹಾಗಾಗಿ ಒಂದು ಕುಟುಂಬದಲ್ಲಿನ ಹಿರಿಯನಾಗರಿಕರು ರೂ15ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಕೆಲ ವಾರಗಳ ಹಿಂದೆ ಇದೇ ಕಾಕು ಕಾಲಂನಲ್ಲಿ ಬ್ಯಾಂಕು ಮತ್ತು ಪೋಸ್ಟಾಫೀಸುಗಳಲ್ಲಿ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್ ಸ್ಕೀಂ (ಎಸ್‌ಸಿಎಸ್‌ಎಸ್‌) ದೊರೆಯುತ್ತದೆ ಎಂದು ಬರೆದಿದ್ದೆ. ಅದರಲ್ಲಿ ಪ್ರತಿಫ‌ಲ 8.7%, ಇಲ್ಲಿ ಪ್ರತಿಫ‌ಲ 8.3%. ಅಲ್ಲಿನ ಮಿತಿ ವೈಯಕ್ತಿಕ ನೆಲೆಯಲ್ಲಿ ರೂ 15 ಲಕ್ಷ ಹಾಗೂ ಇಲ್ಲಿನ ಮಿತಿ ಕೌಟುಂಬಿಕ ನೆಲೆಯಲ್ಲಿ ರೂ 15 ಲಕ್ಷ. ಅವರವರ ವಯಸ್ಸು ಮತ್ತು ಸಂದರ್ಭ ನೋಡಿಕೊಂಡು ಎರಡೂ ಎಡೆಗಳಲ್ಲಿ ಗರಿಷ್ಟ ಹೂಡಿಕೆ ಮಾಡಿಕೊಳ್ಳುವುದು ಒಳ್ಳೆಯದು. ಇವೆರಡರಲ್ಲೂ ಒಟ್ಟಿಗೆ ಹೂಡಿಕೆ ಮಾಡಬಹುದೇ? ಎಂಬುದಾಗಿ ಹಲವಾರು ಓದುಗರು ಇ-ಮೈಲ್‌ ಕಳುಹಿಸಿದ್ದುಂಟು. ಹೌದು. ಎರಡರಲ್ಲೂ ಹೂಡಬಹುದು. ಅದರ ಮೇಲೆ ಯಾವುದೇ ನಿರ್ಬಂಧವಿಲ್ಲ.

Tags:

ಸೇವಿಂಗ್ಸ್ ಸ್ಕೀಂ ಯೋಜನೆ

ಎಲ್‌ಐಸಿ

LIC

Saving schems

Intrest

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 15 Oct 2018 02:46:55 +0000 mahesh 331421 at https://www.udayavani.com https://www.udayavani.com/kannada/news/investments-savings/331421/age-want-scheme-which-gives-ten-years-to-8#comments ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುವ ಸರಕಾರ https://www.udayavani.com/kannada/news/investments-savings/324820/ugadi-celebrates-government-under-pf

ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ - ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ ಶೈಲಿಯಲ್ಲಿ ಬಜೆಟ್‌ ಮಂಡಿಸಲು ಆರಂಭಿಸಿದಳು. ಮಗರಾಯ ಲೆಕ್ಕದಲ್ಲಿ ಲೆಕ್ಕಕ್ಕೆ ಮಾತ್ರ ಎಂಬುದು ಮನೆಯವರಿಗೆ ಬಿಡಿ, ನಿಮಗೂ ಗೊತ್ತಿರುವ ವಿಚಾರ! ಇಂತಿಪ್ಪ ಆಸಕ್ತಿಹೀನ ಪತಿರಾಯ ಸ್ವಲ್ಪಕಾಲ ಪತ್ನಿಯ ಭಾಷಣವನ್ನು ಕೇಳುವ ನಾಟಕ ಮಾಡಿ ಒಂದೆರಡು ಬಾರಿ ಹೆಬ್ಟಾವಿನಂತೆ ದೊಡ್ಡದಾಗಿ ಬಾಯಿ ತೆರೆದು ಎಂಜಿಎಂ ಸಿನೆಮಾ ಕಂಪೆನಿಯ ಸಿಂಹದಂತೆ ಆಂ. . .' ಎಂದು ಸಶಬ್ದವಾಗಿ ಆಕಳಿಸಿ ರಿಮೋಟನ್ನು ಹುಡುಕಲು ಹೊರಟನು. ಮಗರಾಯ ರಿಮೋಟನ್ನು ಇನ್ನಾರಿಗೂ ಸಿಗದಂತೆ ಅಪ್ಪನ ನಾತ ಹೊಡೆಯುವ ಶೂವಿನೊಳಕ್ಕೆ ಅಡಗಿಸಿಟ್ಟು ಟಾಮ್‌ ಐಂಡ್‌ ಜೆರ್ರಿಯಲ್ಲಿ ಲೀನನಾಗಿದ್ದನು. ಅತ್ತ ಗುರುಗುಂಟಿರಾಯರು ಈಸಿಚೇರಿನಲ್ಲಿ ಕುಳಿತು ಸೊಸೆಯಾಡುವ ಮಾತಿನÇÉೇನಾದರು ತನ್ನ ಪೆನ್ಶನ್‌ ದುಡ್ಡಿಗೆ ಹೊಸಕತ್ತರಿಗಳಿವೆಯೋ ಎಂಬ ಆತಂಕ ಮಿಶ್ರಿತ ಕುತೂಹಲದಿಂದ ಓರೆಗಣ್ಣು ಪ್ಲಸ್‌ ಓರೆಕಿವಿಯಾಗಿ ಕೇಳುತ್ತಿದ್ದರು. ಸೊಸೆ ತಾನು ಸ್ಕೆಚ್‌ ಹಾಕುತ್ತಿರುವ ಎಕ್ಕೂರು ಗುಡ್ಡೆಯ ಹೊಸ ಸೈಟಿಗೆ ತನ್ನ ಪಿಎಫ್ ದುಡ್ಡು, ಅದು-ಇದು ಅಂತ ಹೊಂದಿಸ ಲಾಗುತ್ತದೆಯೇ ಎಂಬ ಲೆಕ್ಕಾಚಾರವನ್ನು ಅನಾವರಣಗೊಳಿಸುತ್ತಿ ದ್ದುದು ರಾಯರಿಗೆ ಅರ್ಥವಾಯಿತು. ಸದ್ಯ ಅವಳ ಎಕ್ಕೂರ್‌ ಗುಡ್ಡೆಯ ಸೈಟಿಗೆ ತನ್ನ ಪೆನ್ಶನ್‌ ದುಡ್ಡಿನ ದೇಣಿಗೆ ಇಲ್ಲವಲ್ಲ ಸಾಕು, ಉಳಿದಂತೆ ಅವಳು ಇನ್ನು ಏನಾದರೂ ಮಾಡಿಕೊಳ್ಳಲಿ ಅಂತ ಸಮಾಧಾನಪಟ್ಟುಕೊಂಡು ಒಂದು ದೀರ್ಘ‌ವಾದ ನಿಟ್ಟುಸಿರು ಬಿಟ್ಟು ನಿರಾಳರಾದರು.

Employees Provident Fund Act,1952 ಕಾನೂನಿನ ಪ್ರಕಾರ ಸರಕಾರ ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌ (EPF) ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರು - ಈರ್ವರಿಗೂ ಸಮಾನವಾಗಿ ಅನ್ವಯಿಸುವ ಸೌಲಭ್ಯ. ನೌಕರರು ಸಾಮಾನ್ಯವಾಗಿ ತಮ್ಮ ಪಿಎಫ್ ಎನ್ನುವುದು ಇದನ್ನೇ.

ಇದು ನೀವು ಕೆಲಸ ಮಾಡುವ ಸಂಸ್ಥೆಯೊಳಗೆ ಸಂಬಳದಿಂದ ಕಡಿತಗೊಂಡು ಜಮೆಯಾಗುವ ಫ‌ಂಡು. ಹೊರಗೆ ಸ್ಟೇಟ್‌ ಬ್ಯಾಂಕ್‌/ಪೋಸ್ಟಾಫೀಸಿನಲ್ಲಿ ಸಾರ್ವಜನಿಕರಿಗಾಗಿ ಮಾಡಿಕೊಳ್ಳುವ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (PPF)ಗಿಂತ ಭಿನ್ನ. EPF ಮತ್ತು PPFಬೇರೆ ಬೇರೆಯಾಗಿದ್ದು ಅವುಗಳಿಗೆ ಅನ್ವಯಿಸುವ ವಿವರಗಳು, ಕಾನೂನುಗಳು, ಬಡ್ಡಿ ದರಗಳು - ಎಲ್ಲವೂ ಬೇರೆ ಬೇರೆಯಾಗಿವೆ. ಇವೆರಡರ ನಡುವೆ ಕನೂ#$Âಸ್‌ ಮಾಡಿಕೊಂಡು ವಿತ್ತೀಯ ಆರೋಗ್ಯ ಹಾಳುಮಾಡಿಕೊಂಡು ಚಿಕಿತ್ಸೆಗಾಗಿ ನನಗೆ ಫೋನ್‌ ಮಾಡುವವರಿ¨ªಾರೆ.

ಯಾರಿಗೆ ಇಪಿಎಫ್?
20ಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಒಂದು ಸಂಸ್ಥೆಯಲ್ಲಿ ಈ ರೀತಿ ಇಪಿಎಫ್ ಕಡಿತ ಮಾಡುವುದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇಪಿಎಫ್ ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ ಮಾಸಿಕ ಸಂಬಳ ರೂ. 15,000 (ಬೇಸಿಕ್‌+ಡಿ.ಎ)ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡಾ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿ¨ªಾಗಿರುತ್ತದೆ.

ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎÇÉಾ ಉದ್ಯೋಗಿಗಳಿಗೂ (ಅಂದರೆ, ರೂ. 15000 ಮೀರಿದ ವರ್ಗಕ್ಕೂ ಸಹಿತ) ಪಿಎಫ್ ಕಡಿತವನ್ನು ಐಚ್ಚಿಕವಾಗಿಯಾದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಮಾಡುತ್ತಿವೆ. ಏಕೆಂದರೆ ಪ್ರಾವಿಡೆಂಟ್‌ ಫ‌ಂಡ್‌ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಇಪಿಎಫ್ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ.

ಸಂಘಟಿತ ಉದ್ಯಮಗಳಿಗೆ ಮಾತ್ರವಲ್ಲದೆ ಕಾಂಟ್ರಾಕ್ಟ್ ನೌಕರಿಗೂ ಕೂಡಾ ಈ ಕಾನೂನು ಅನ್ವಯವಾಗುತ್ತದೆಯಾದರೂ ಅಸಂಘಟಿತ ಕ್ಷೇತ್ರದ ಬಹುಪಾಲು ಕಾರ್ಮಿಕರಿಗೆ ಈ ಸೌಲಭ್ಯ ಇನ್ನೂ ದೊರಕುತ್ತಿಲ್ಲ ಎನ್ನುವುದು ದುಃಖದ ವಿಚಾರ. ಈ ಸೌಲಭ್ಯ ಎಲ್ಲರಿಗೂ ಸಮಾನವಾಗಿ ಲಭಿಸುವಂತಹ ಕಾನೂನು ತಳಮಟ್ಟದಲ್ಲಿ ಅನುಷ್ಠಾನವಾಗಬೇಕಿದೆ. ಆ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೂಡಾ ಆಗಬೇಕಿದೆ. ಹಿಂದೆÇÉಾ ಇಪಿಎಫ್ ಇನ್ನಿತರ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಕಂಟ್ರಾಕ್ಟ್ ಮೂಲಕ ಜನರನ್ನು ನೌಕರಿಗೆ ತೊಡಗಿಸುವ ಪದ್ಧತಿ ವ್ಯಾಪಕವಾಗಿತ್ತು. ಆದರೆ ಆ ಬಳಿಕ '"ಪ್ರಿನ್ಸಿಪಲ್‌ ಎಂಪ್ಲಾಯರ್‌' ಎಂಬ ಪರಿಕಲ್ಪನೆಯ ಮೂಲಕ ಕಾಂಟ್ರಾಕ್ಟರ್‌ ನಡುವಿನಲ್ಲಿ ಇದ್ದರೂ ಸಹ ಮೂಲ ಉದ್ಯೋಗದಾತರೇ ಇಪಿಎಫ್ ಕಡಿತ ಮತ್ತು ಜಮಾವಣೆಗೆ ಹೊಣೆಗಾರರೆಂಬ ಕಾನೂನು ಬಂದಿದೆ.

ದೇಣಿಗೆ
ವೇತನದ (ಬೇಸಿಕ್‌ ಮತ್ತು ಡಿಎ) ಶೇ. 12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ "ಎಕೌಂಟ್‌ ಎ' ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡಾ ಪ್ರತ್ಯೇಕವಾಗಿ ಇನ್ನೊಂದು ಶೇ.12 ಕಡಿತಗೊಳಿಸಿ "ಎಕೌಂಟ್‌ ಬಿ' ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24.

ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆ ಯಾಗುವುದಿಲ್ಲ. ಉದ್ಯೋಗದಾತರ ಶೇ.12ರಲ್ಲಿ ಎರಡು ಭಾಗಗಳಿವೆ. ಮೊದಲನೆಯದಾಗಿ ಸಂಬಳದ ಶೇ.8.33 (ಗರಿಷ್ಠ ಸಂಬಳ ಮಿತಿ ರೂ. 15000, ಅಂದರೆ ರೂ 1250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್‌ ಉಪಖಾತೆಗೆ ಹೋಗುತ್ತದೆ. "ಎಂಪ್ಲಾಯಿ ಪೆನ್ಶನ್‌ ಸ್ಕೀಮ್‌ ಅಥವಾ ಇಪಿಎಸ್‌' ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗಾಗಿ ಮೀಸಲಾಗಿದೆ. ಎಷ್ಟೋ ಉದ್ಯೋಗಿಗಳ ಪೆನ್ಶನ್‌ ಫ‌ಂಡಿಗೆ ಬರುವ ದೇಣಿಗೆ ಮಾಸಿಕ ರೂ. 1250 ಮಾತ್ರ. ಇದಲದೆ ಸರಕಾರದ ವತಿಯಿಂದ ಸಂಬಳದ ಶೇ.1.16 (ಗರಿಷ್ಠ ಸಂಬಳ ಮಿತಿ ರೂ. 15000 ಅಂದರೆ ರೂ. 174) ಸಬ್ಸಿಡಿ ರೂಪದಲ್ಲಿ ಜಮೆ ಯಾಗುತ್ತದೆ. ಹೀಗೆ ನಿಮ್ಮ ಪೆನÒನ್‌ ಫ‌ಂಡಿಗೆ ಜಮೆಯಾಗುವ ಒಟ್ಟು ದೇಣಿಗೆ ಸಂಬಳದ ಶೇ.9.49 (ಗರಿಷ್ಟ ರೂ. 1424). ಹಾಗಾಗಿ ಈ ಪೆನ್ಶನ್‌ ದೇಣಿಗೆಯಾದ ಶೇ. 8.33 ಕಳೆದು ಅಥವ ಗರಿಷ್ಠ ರೂ. 1250 ಕಳೆದು ಉಳಿದ ಮೊತ್ತ ಮಾತ್ರವೇ ಇಪಿಎಫ್ನಲ್ಲಿ ಜಮೆಯಾಗುತ್ತದೆ.

VPF ಎಂದರೇನು?
ಮೇಲೆ ಹೇಳಿದಂತೆ ಶೇ. 12 ನೌಕರನ ವತಿಯಿಂದ (ಎಕೌಂಟ್‌ ಎ) ಹಾಗೂ ಎಂಪ್ಲಾಯರ್‌ ವತಿಯಿಂದ ಶೇ. 12(ಎಕೌಂಟ್‌ ಬಿ) ಇಪಿಎಫ್ ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ-ಇಚ್ಚೆಯಿಂದ ತನ್ನ ಸಂಬಳದ (ಬೇಸಿಕ್‌+ಡಿ.ಎ) ಶೇ.100ರಷ್ಟನ್ನು ತನ್ನ ಪಿಎಫ್ ಖಾತೆಯ ಇನ್ನೊಂದು "ಎಕೌಂಟ್‌ ಸಿ' ಯಲ್ಲಿ ಐಚ್ಚಿಕ ಅಥವಾ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್‌ ಫ‌ಂಡಿನ ಈ ಭಾಗವನ್ನು Voluntary Provident Fund ಎಂದು ಕರೆಯುತ್ತಾರೆ. ಇದು ಒಬ್ಬನ ಪ್ರಾವಿಡೆಂಟ್‌ ಫ‌ಂಡ್‌ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ ಎ ಮತ್ತು ಬಿ ಎಕೌಂಟಿನಷ್ಟೇ ಬಡ್ಡಿದರ, ಕರವಿನಾಯತಿ ಇತ್ಯಾದಿಗಳು ಅನ್ವಯ ಆಗುತ್ತದೆ. ಆದರೆ, ವಾಲಂಟರಿ ಜಮೆಯ ಮೇಲೆ ಎಂಪ್ಲಾಯರುಗಳ ಸರಿಸಮ ಜಮೆ ಇರುವುದಿಲ್ಲ.

ನಿಮಗೆ ಈ ರೀತಿ ಸ್ವ-ಇಚ್ಚೆಯಿಂದ "ಎಕೌಂಟ್‌ ಸಿ' ಯಲ್ಲಿ ವಿಪಿಎಫ್ ಜಮೆ ಮಾಡುವುದು ಉತ್ತಮ. ಹಾಗೆ ಮಾಡ ಬೇಕೆಂದಿದ್ದರೆ ಪ್ರತಿ ವಿತ್ತ ವರ್ಷದ (ಎಪ್ರಿಲ…-ಮಾರ್ಚ್‌)ಆರಂಭದಲ್ಲಿ ನಿಮ್ಮ ಕಂಪೆನಿಗೆ ತಿಳಿಸತಕ್ಕದ್ದು. ನಿಮ್ಮ ನಿರ್ಧಾರವನ್ನು ವರ್ಷದ ನಡುವೆ ಬದಲಿಸುವಂತಿಲ್ಲ. ಹೊಸ ವರ್ಷಕ್ಕೆ ಪುನಃ ಬದಲಾಯಿಸಬಹುದು.

ಉಸ್ತುವಾರಿ ಹೇಗೆ?
ಈ ಇಪಿಎಫ್ನ ಉಸ್ತುವಾರಿ ಎರಡು ವಿಧದಲ್ಲಿ ನಡೆಯಬಹುದು:
1    ಸರಕಾರದ ಆಧೀನದ EPO ಸಂಸ್ಥೆಯಲ್ಲಿ ಪ್ರಾವಿಡೆಂಟ್‌ ಫ‌ಂಡ್‌ ಕಮಿಶನರರ ಉಸ್ತುವಾರಿಯಲ್ಲಿ ಜಮಾ ಮಾಡುವುದು. ಹೆಚ್ಚಿನ ಚಿಕ್ಕ ಪುಟ್ಟ ಕಂಪೆನಿಗಳು ಮತ್ತು ಸರಕಾರಿ ಸಂಸ್ಥೆಗಳು ಈ ರೀತಿ ಸರಕಾರದ ಕೈಯಲ್ಲಿ ತಮ್ಮ ಪಿಎಫ್ ದುಡ್ಡನ್ನು ಠೇವಣಿ ಇಡುತ್ತಾರೆ. ಅ ದುಡ್ಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಲಪತ್ರಗಳು, ಸರಕಾರಿ ಮತ್ತು ಖಾಸಗಿ ಕಂಪೆನಿಗಳ ಬಾಂಡು ಡಿಬೆಂಚರ್‌ಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಶೇರು ಮಾರುಕಟ್ಟೆಯಲ್ಲಿಯೂ ಹೂಡಲ್ಪಡುತ್ತವೆ.

2    ಕೆಲವೊಮ್ಮೆ ದೊಡ್ಡ ದೊಡ್ಡ ಲಾಭದಾಯಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್‌ ಫ‌ಂಡ್‌ ದುಡ್ಡನ್ನು ತಾವೇ ಒಂದು ಟ್ರಸ್ಟ್‌ ರಚಿಸಿ ಅದನ್ನು ಹೂಡುವ ಅನುಮತಿಯನ್ನು ಸರಕಾರದಿಂದ ಪಡೆದಿರುತ್ತಾರೆ. ಇದು EPO ದಂತೆಯೇ, ಅದರ ಮಾರ್ಗಸೂಚಿಯಂತೆ ನಡೆಯುತ್ತದೆ. ಫ‌ಂಡ್‌ ಮ್ಯಾನೇ ಜೆ¾ಂಟ್‌ ಒಂದು ಬಿಟ್ಟು ಉದ್ಯೋಗಿಗಳ ಮಟ್ಟಿಗೆ ಬೇರಾವುದೇ ವ್ಯತ್ಯಾಸವಿರುವುದಿಲ್ಲ. ಹೆಚ್ಚಿನ ಪ್ರತಿಷ್ಟಿತ ಕಂಪೆನಿಗಳು ಈ ರೀತಿ ತಮ್ಮದೇ ಆದ ಸ್ವಂತ ಟ್ರಸ್ಟ್‌ ಅಡಿ EPF ಚಲಾಯಿಸುತ್ತವೆ. ಅವುಗಳು ಹೆಚ್ಚಾಗಿ ಈ ದುಡ್ಡನ್ನು ತಮ್ಮದೇ ಉದ್ಯಮದಲ್ಲಿ ತೊಡಗಿಸುತ್ತವೆ. ಅವುಗಳೂ ಕೂಡಾ ಸರಕಾರ ಘೋಷಿಸಿದ ಬಡ್ಡಿದರ ಮತ್ತು ನಿಯಮಾವಳಿಗೆ ಬದ್ಧವಾಗಿರುತ್ತವೆ.

ಪ್ರತಿಫ‌ಲ

ಇಪಿಎಫ್ ಸ್ಕೀಮಿನಲ್ಲಿ ಎರಡು ವಿಭಾಗಗಳಿವೆ ಎಂದು ಈ ಮೊದಲೇ ಹೇಳಲಾಗಿದೆ. ಪ್ರಾವಿಡೆಂಟ್‌ ಫ‌ಂಡ್‌ ನೀಡುವ ಇಪಿಎಫ್ ಹಾಗೂ ಪೆನ್ಶನ್‌ ನೀಡುವ ಇಪಿಎಸ್‌.

1    ಇಪಿಎಫ್ ಬಗ್ಗೆ ಹೇಳುವುದಾದರೆ ಅದರಲ್ಲಿ ಬಹಳ ಉತ್ತಮ ಬಡ್ಡಿದರವನ್ನು ಸರಕಾರ ಯಾವತ್ತೂ ಕಾಯುತ್ತಿದೆ. ಇದೊಂದು ಉತ್ತಮ ಹೂಡಿಕೆ ಎನ್ನುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಇಪಿಎಫ್ ಬಡ್ಡಿ ದರ ಶೇ.8.55, ಸಾಲದ್ದಕ್ಕೆ ಅದು ಕರಮುಕ್ತವೂ ಹೌದು. ಹೊರಗಿನ ಸಾರ್ವಜನಿಕ ಪಿಪಿಎಫ್ ಸದ್ಯ ನೀಡುವುದು ಕೇವಲ ಶೇ.7.6. ಬ್ಯಾಂಕಿನಲ್ಲಿ ಗರಿಷ್ಠ ನಿಮಗೆ ಸಿಗುವುದು ಶೇ.7 ಮತ್ತದು ಕರಾರ್ಹ.

2 ಇಪಿಎಸ್‌ ಬಗ್ಗೆ ಹೇಳುವುದಾದರೆ - ಉದ್ಯೋಗದಾತರ ಶೇ.12 ದೇಣಿಗೆಯ ಶೇ. 8.33 ಭಾಗ, ಆದರೆ ಮಾಸಿಕ ಗರಿಷ್ಟ ರೂ. 1250 ಜಮೆಯಾಗುವ ಈ ಯೋಜನೆಯಲ್ಲಿ ಪ್ರತಿಫ‌ಲ ಚೆನ್ನಾಗಿಲ್ಲ. ಪ್ರತಿ ತಿಂಗಳು ರೂ. 1250 ಕಟ್ಟುವ ಉದ್ಯೋಗಿಗಳಿಗೆ ನಮ್ಮ ಸರಕಾರ ಮಕ್ಮಲ್‌ ಟೋಪಿ ಹೇಗೆ ಹೊಲಿಯುತ್ತಿದೆ ಎಂದು ಗೊತ್ತಾಗಬೇಕಾದರೆ ಅದೇ ರೂ. 1250 ಅನ್ನು ಅದೇ ಸರಕಾರ ಸ್ಟೇಟ್‌ ಬ್ಯಾಂಕು/ಪೋಸ್ಟಾಫೀಸುಗಳ ಮೂಲಕ ನಡೆಸುವ ಪಬ್ಲಿಕ್‌ ಪ್ರಾವಿಡೆಂಡ್‌ ಫ‌ಂಡಿನಲ್ಲಿ ಅಥವಾ ಆರ್ಡಿಯಲ್ಲಿ ಹಾಕಬೇಕು.

ಪ್ರತಿ ತಿಂಗಳು ರೂ. 1250 ಅನ್ನು 35 ವರ್ಷಗಳ ಕಾಲ ಒಂದು ಪಿಪಿಎಫ್/ಆರ್ಡಿಯಲ್ಲಿ ಹಾಕಿದರೆ ಮತ್ತು ಅದಕ್ಕೆ ವಾರ್ಷಿಕ ಸರಾಸರಿ ಶೇ. 8.5 ಬಡ್ಡಿ ಸಿಕ್ಕಿದರೆ ಅವಧಿಯ ಅಂತ್ಯಕ್ಕೆ ನಿಮ್ಮ ಕೈಯಲ್ಲಿ ರೂ. 30,31,501 ಇರುತ್ತದೆ. ಅದೇ ದುಡ್ಡನ್ನು ಒಂದು ಶೇ.7 ಬಡ್ಡಿ ಬರುವ ಎಫ್ಡಿಯಲ್ಲಿ ಇಟ್ಟರೆ ತಿಂಗಳೂ ರೂ. 17,683 ಬಡ್ಡಿ ಬರುತ್ತದೆ. ಅಸಲು ಸದಾ ನಿಮ್ಮದಾಗಿಯೇ ಇರುತ್ತದೆ.

ಅದರ ಬದಲು ಇಪಿಸ್‌ ಎಂಬ ಟೊಪ್ಪಿ ಸ್ಕೀಮಿಗೆ ದೇಣಿಗೆ ಕಟ್ಟುತ್ತಾ ಹೋದರೆ ಅಸಲು ಮೊತ್ತವನ್ನು ಸಂಪೂರ್ಣವಾಗಿ ನುಂಗಿಹಾಕುವುದಲ್ಲದೆ, ಪಿಂಚಣಿ ಎಂದು ಸಿಗುವ ಮಾಸಿಕ ಮೊತ್ತ ರೂ. 7500 ಮಾತ್ರ. ನಿಮ್ಮ ಅಸಲು ಮೊತ್ತ ಹಿಂತಿರುಗಿ ಬಾರದಲ್ಲಿಗೆ ಹೋದದ್ದಲ್ಲದೆ ನಿಮ್ಮ ಕಿಸೆಗೆ ಬರುವ ಪಿಂಚಣಿ ಜುಜುಬಿ! ಉಳಿದ ಮೊತ್ತ ಅದೆಲ್ಲಿಗೆ ಹೋಗುತ್ತದೋ ಆ ದೇವನೇ ಬಲ್ಲ. ಅಲ್ಲದೆ, ಪೆನ್ಶನ್‌ ಮೂಲಕ ಬರುವ ದುಡ್ಡು ಸಂಪೂರ್ಣವಾಗಿ ಕರಾರ್ಹ ಆದಾಯವಾಗಿರುತ್ತದೆ. ಹಾಗಾಗಿ ಇಪಿಎಫ್ ಸಿಹಿಯಾದರೆ ಇಪಿಎಸ್‌ ಕಹಿ. ಇಪಿಎಸ್‌ ಬೇವಾದರೆ ಇಪಿಎಫ್ ಬೆಲ್ಲ. ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುತ್ತಿದೆಯೇ ಸರಕಾರ?
(ಮುಂದುವರಿಯುವುದು)

- ಜಯದೇವ ಪ್ರಸಾದ ಮೊಳೆಯಾರ

Tags:

EPF

EPO

VPF

Provident Fund

udayavani web

Author/Source:

ಜಯದೇವ ಪ್ರಸಾದ ಮೊಳೆಯಾರ

Mon, 17 Sep 2018 03:18:15 +0000 sudhir 324820 at https://www.udayavani.com https://www.udayavani.com/kannada/news/investments-savings/324820/ugadi-celebrates-government-under-pf#comments