ರಾಣಿಬೆನ್ನೂರು ಬೈಂದೂರು ಹೆದ್ದಾರಿ ಅಭಿವೃದ್ಧಿಗೆ 325 ಕೋಟಿ

Team Udayavani, Nov 26, 2020, 7:24 PM IST

ರಾಣಿಬೆನ್ನೂರು ಬೈಂದೂರು ಹೆದ್ದಾರಿ ಅಭಿವೃದ್ಧಿಗೆ 325 ಕೋಟಿ

ಹೊಸನಗರ: ರಾಣಿಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿ 3 ವರ್ಷದ ಹಿಂದೆ ಪರಿವರ್ತಿತಗೊಂಡಿದೆ. ಹೆದ್ದಾರಿಯ ಮೊದಲನೆ ಹಂತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ರೂ.325 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಟೆಂಡರ್‌ ಕೂಡ ಕರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ತಾಲೂಕಿನ ನಗರ ಶ್ರೀ ಪಂಚಮುಖೀ ಆಂಜನೇಯ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೈಂದೂರು, ಕೊಲ್ಲೂರು, ನಿಟ್ಟೂರು, ನಗರ, ಹೊಸನಗರ ಬಟ್ಟೆಮಲ್ಲಪ್ಪ ಸೇರಿದಂತೆ ಬಹುತೇಕ ಊರುಗಳ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಸಹಕಾರಿಯಾಗಲಿದೆ ಎಂದರು.

ಸೇತುವೆ ಹಣ ಮಂಜೂರು: ಸಿಗಂದೂರಿನ ಐತಿಹಾಸಿಕ ಸೇತುವೆ ಜೊತೆಗೆ ಬೆಕ್ಕೋಡಿ ಸೇತುವೆ ನಿರ್ಮಾಣಕ್ಕೂ ಕೂಡ 120 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಲ್ಲದೆ ಮಡೋಡಿ, ಚಿಕ್ಕಪೇಟೆ, ಮತ್ತಿಮನೆ, ಕಾರಣಗಿರಿ, ಅರೋಡಿ ಸೇರಿದಂತೆ 7 ಸೇತುವೆಗಳ ನಿರ್ಮಾಣಕ್ಕು ಕೂಡ ಆದ್ಯತೆ ನೀಡಲಾಗಿದೆ ಎಂದರು. ಪಿಎಂಜಿಎಸ್‌ವೈ ಯೋಜನೆಯಡಿ 14 ಕೋಟಿ ಹಣವನ್ನು ಕೇಂದ್ರದಿಂದ ಜಿಲ್ಲೆಗೆ ತರಲಾಗಿದೆ ಎಂದರು.

ಬಿದನೂರು ಕೋಟೆ ಅಭಿವೃದ್ಧಿಗೆ ಒಂದು ಕೋಟಿ: ಐತಿಹಾಸಿಕ ಬಿದನೂರು ಕೋಟೆ ಅಭಿವೃದ್ಧಿಗೆ ಒಂದು ವರ್ಷದ ಹಿಂದೆಯೇ ಒಂದು ಕೋಟಿ ಹಣವನ್ನು ಇಡಲಾಗಿದೆ.ಅಭಿವೃದ್ಧಿಯ ಬಗ್ಗೆ ಸ್ಥಳೀಯರ ಬೇಡಿಕೆ ಮತ್ತು ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಚೇನಹಳ್ಳಿ 100 ಎಕರೆ ಪ್ರದೇಶದಲ್ಲಿ

ಆಹಾರ ಮತ್ತು ಸಾಂಬಾರ ಬೆಳೆ ಪಾರ್ಕ್‌:  ಮೆಣಸು, ಅರಶಿಣ, ಶುಂಠಿ, ಏಲಕ್ಕಿ ಹೀಗೆ ರೈತರು ಉಪಬೆಳೆಗಳನ್ನು ಬೆಳೆಯುತ್ತಿದ್ದು ಅವುಗಳಿಗೆ ಬೆಲೆ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಾಚೇನಹಳ್ಳಿ ಮದ್ಯದ 100 ಎಕರೆ ಪ್ರದೇಶದಲ್ಲಿ ಆಹಾರ ಮತ್ತು ಸಾಂಬಾರ ಬೆಳೆ ಪಾರ್ಕ್‌ನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೇರಳಕ್ಕೆ ಹೋಗುತ್ತಿದ್ದ ಅನುದಾನವನ್ನು ರಾಜ್ಯಕ್ಕೆ ತಂದು ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇನ್ನು ಕೊಡಚಾದ್ರಿ ಕೊಲ್ಲೂರು ಕೇಬಲ್‌ ಯೋಜನೆ ಯಶಸ್ವಿಯಾಗಿ ಸಾಕಾರಗೊಂಡಲ್ಲಿ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚಿತ್ರಣವೇಬದಲಾಗುತ್ತದೆ. ಮಾತ್ರವಲ್ಲ ಊರಿನ ಅಭಿವೃದ್ಧಿ ಕೂಡ ಪರಿಣಾಮಕಾರಿ ಆಗಲಿದೆ ಎಂದರು. ಪಕ್ಷ ಮತ್ತು ಜನ ನನ್ನ ಯೋಗ್ಯತೆ ಮೀರಿ ಜವಾಬ್ದಾರಿ ನೀಡಿದ್ದಾರೆ. ಸಚಿವ ಸ್ಥಾನದ ಬಗ್ಗೆ ಸಂಘಟನೆ ಮತ್ತು ಹೈಕಮಾಂಡ್‌ ಏನುತೀರ್ಮಾನ ಕೈಗೊಳ್ಳುತ್ತದೆ ಅದೇ ಅಂತಿಮ ಎಂದರು.

ನಗರ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್‌. ವೈ. ಸುರೇಶ್‌, ಜಿಪಂ ಸದಸ್ಯ ಸುರೇಶ್‌ ಸ್ವಾಮಿರಾವ್‌, ಮ್ಯಾಮ್ಕೋಸ್‌ ಸದಸ್ಯ ಕೆ.ವಿ. ಕೃಷ್ಣಮೂರ್ತಿ, ತಾಪಂ ಸದಸ್ಯ ಕೆ.ವಿ. ಸುಬ್ರಹ್ಮಣ್ಯ, ಅಶ್ವಿ‌ನಿ ರಾಜೇಶ್‌, ಪ್ರಮುಖರಾದ ಎ.ವಿ. ಮಲ್ಲಿಕಾರ್ಜುನ್‌, ಬಂಕ್ರೀಬೀಡು ಮಂಜುನಾಥ್‌ ಇದ್ದರು.

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ ಆರೋಪಗಳಿಗೆ ಬಿಎಸ್‌ವೈ ಪ್ರತಿಕ್ರಿಯೆ ನೀಡಲೇ ಬೇಕು: ಈಶ್ವರಪ್ಪ

ನನ್ನ ಆರೋಪಗಳಿಗೆ ಬಿಎಸ್‌ವೈ ಪ್ರತಿಕ್ರಿಯೆ ನೀಡಲೇ ಬೇಕು: ಈಶ್ವರಪ್ಪ

1-wqewewq

Sagara: ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

Madhu Bangarappa, ಬೇಳೂರು ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮನ: ಹಕ್ರೆ

Madhu Bangarappa, ಬೇಳೂರು ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮನ: ಹಕ್ರೆ

Lok Sabha Election; ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ; ಈಶ್ವರಪ್ಪ ಪ್ರತಿಪಾದನೆ

Lok Sabha Election; ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ; ಈಶ್ವರಪ್ಪ ಪ್ರತಿಪಾದನೆ

Lok Sabha Polls; ಆಗುಂಬೆ ಹೋಬಳಿಯಲ್ಲಿ ಚುನಾವಣಾ ಬಹಿಷ್ಕಾರ ..!

Lok Sabha Polls; ಆಗುಂಬೆ ಹೋಬಳಿಯಲ್ಲಿ ಚುನಾವಣಾ ಬಹಿಷ್ಕಾರ ..!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.