Udayavani - ಉದಯವಾಣಿ - ನಾಗೇಂದ್ರ ತ್ರಾಸಿ https://www.udayavani.com/kannada-news-authors/%E0%B2%A8%E0%B2%BE%E0%B2%97%E0%B3%87%E0%B2%82%E0%B2%A6%E0%B3%8D%E0%B2%B0-%E0%B2%A4%E0%B3%8D%E0%B2%B0%E0%B2%BE%E0%B2%B8%E0%B2%BF en 8 ರೂ.ಗೆ ಮಾರಾಟವಾಗಿದ್ದ ಮಗು ಕನ್ನಡಚಿತ್ರರಂಗದ ಖ್ಯಾತ ಹಾಸ್ಯನಟನಾದ ಕಥೆ https://www.udayavani.com/kannada/news/web-focus/338204/kannada-popular-actor-tn-balakrishna-balanna

ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದವರು ಬಾಲಣ್ಣ..ಹೌದು ಟಿಎನ್ ಬಾಲಕೃಷ್ಣ. ಕಿವಿ ಸರಿಯಾಗಿ ಕೇಳಿಸದಿದ್ದರೂ ಕೂಡಾ ಬರೇ ಬಾಯಿ ಚಲನೆಯ ಮೂಲಕವೇ ಶಬ್ದವನ್ನು ಗ್ರಹಿಸಿ ನಿರರ್ಗಳವಾಗಿ ಡೈಲಾಗ್ ಹೇಳುತ್ತಿದ್ದದ್ದು ಬಾಲಣ್ಣನವರ ಪ್ರತಿಭೆಗೆ ಸಾಕ್ಷಿಯಾಗಿದೆ. ಹೀರೋ, ವಿಲನ್, ಹಾಸ್ಯ ನಟನಾಗಿ, ಉತ್ತಮ ತಂದೆಯ ಪಾತ್ರ ಸೇರಿದಂತೆ ಬರೋಬ್ಬರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತಿ ಬಾಲಣ್ಣನವರದ್ದು.

ಭಿಕ್ಷೆ ಬೇಡಿ ಬದುಕುತ್ತಿದ್ದ ತಾಯಿ ಬಾಲಕೃಷ್ಣನನ್ನು ವ್ಯಾಪಾರಿಗೆ ಮಾರಿಬಿಟ್ಟಿದ್ದರು!

ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಬಾಲಕೃಷ್ಣ ಅವರು ಜನಿಸಿದ್ದರು. ಕಿತ್ತು ತಿನ್ನುವಂತಹ ಬಡತನ..ತಂದೆ, ತಾಯಿ ದಿನಗೂಲಿ ನೌಕರಿ ಮಾಡಿ ಬದುಕುತ್ತಿದ್ದರು. ಈ ದಂಪತಿಯ ಒಬ್ಬನೇ ಒಬ್ಬ ಮಗ ಬಾಲಕೃಷ್ಣ. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಎಂಬಂತೆ ಕಷ್ಟ ಇವರನ್ನು ನಕ್ಷತ್ರಿಕನಂತೆ ಕಾಡುತ್ತಲೇ ಇತ್ತು. ಏಕಾಏಕಿ ತಂದೆಯ ಖಾಯಿಲೆ ವಿಪರೀತ ಹಂತ ತಲುಪಿದಾಗ ಕೈಯಲ್ಲಿ ಹಣವಿಲ್ಲದೆ ತಾಯಿ ಕಂಡ, ಕಂಡಲ್ಲಿ ಭಿಕ್ಷೆ ಬೇಡಿ ಹಣ ಹೊಂದಿಸುತ್ತಿದ್ದರಂತೆ. ಕೊನೆಗೆ ದಿಕ್ಕು ತೋಚದ ತಾಯಿ ತನ್ನ ಕರುಳು ಕುಡಿ, ಒಬ್ಬನೇ ಒಬ್ಬ ಮಗ ಬಾಲಕೃಷ್ಣನನ್ನು ಅರಸೀಕೆರೆಯ ಮಂಡಿ ವ್ಯಾಪಾರಿಯ ಪತ್ನಿಗೆ ಕೇವಲ 8 ರೂಪಾಯಿಗೆ ಮಾರಿಬಿಟ್ಟಿದ್ದರು!

ಕೊನೆಗೆ ಆ ಸಾಕುತಾಯಿಯೇ ಬಾಲಕೃಷ್ಣನನ್ನು ಅರಸೀಕೆರೆ ಶಾಲೆಗೆ ಸೇರಿಸಿದ್ದರು. ಪಾಪಿ ಹೋದಲ್ಲೇ ಮೊಣಕಾಲುದ್ದ ನೀರು ಎಂಬಂತೆ 8ನೇ ವಯಸ್ಸಿಗೆ ಬಾಲಕೃಷ್ಣ ಅವರ ಶ್ರವಣಶಕ್ತಿ ಹೋಗಿತ್ತು. ಇದರಿಂದಾಗಿ ಕಲಿಕೆ ಕಷ್ಟವಾಯಿತು..ಬಳಿಕ ಈ ಬಾಲಕನ ಮನಸ್ಸು ಹೊರಳಿದ್ದು ನಾಟಕ ಕಂಪನಿಯತ್ತ…

ಸಾಕು ತಾಯಿಯೂ ಮನೆಯಿಂದ ಹೊರಹಾಕಿದ್ದಳು..ಜಗತ್ತೇ ಬಾಲಣ್ಣನ ಮನೆಯಾಯ್ತು!

ಸ್ನೇಹಿತರ ಜೊತೆಗೂಡಿ ಅಡ್ಡಾಡುತ್ತಿದ್ದ ಬಾಲಣ್ಣ ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ಹೊರಹಾಕಿಬಿಟ್ಟಿದ್ದರು. ಅಲ್ಲಿಗೆ ಸಾಕು ತಾಯಿಯ ಮನೆಯ ಋಣವೂ ಮುಗಿದು ಹೋಗಿತ್ತು. ಅಲ್ಲಿಂದ ನಾಟಕ ಕಂಪನಿಯೇ ಬಾಲಣ್ಣನಿಗೆ ಮನೆ, ಕಚೇರಿ, ಅಪ್ಪ, ಅಮ್ಮ, ಬಂಧು, ಬಳಗ ಎಲ್ಲವೂ ಆಗಿ ಬಿಟ್ಟಿತ್ತು. ಹೌದು ಆರಂಭಿಕವಾಗಿ ಬಾಲಣ್ಣ ನಾಟಕ ಕಂಪನಿಯ ಪರದೆಯ ಪೇಯಿಂಟಿಂಗ್ ಮಾಡುವ ಕೆಲಸ ಮಾಡಿದ್ದರು. ಬಳಿಕ ದಿನಗೂಲಿಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಪೋಸ್ಟರ್ ಬಾಯ್ ಆಗಿ, ಹಾರ್ಮೋನಿಯಂ ನುಡಿಸುವವರಾಗಿ,ಪರದೆ ಎಳೆಯುವವರಾಗಿ ಹೀಗೆ ಶ್ರಮದ ಬದುಕಿನಲ್ಲೇ ಕಾಲಕಳೆಯುತ್ತಿದ್ದ ಬಾಲಣ್ಣ ರಂಗಭೂಮಿಗೆ ಕಾಲಿಟ್ಟುಬಿಟ್ಟಿದ್ದರು.

ರಂಗಭೂಮಿಯಲ್ಲಿ ಅಂದಿನ ದಿನಗಳಲ್ಲಿ ರಾಜ್ ಕುಮಾರ್, ಜಿವಿ ಅಯ್ಯರ್ ಮತ್ತು ನರಸಿಂಹ ರಾಜು ಒಟ್ಟಿಗೆ ಗುಬ್ಬಿ ಕಂಪನಿಯಲ್ಲಿ ಇದ್ದು, ಒಂದು ಹಂತದಲ್ಲಿ ಒಟ್ಟಿಗೆ ಚಿತ್ರರಂಗ ಪ್ರವೇಶ ಮಾಡಿದ್ದರು.

ರಂಗಭೂಮಿಯಿಂದ ಚಿತ್ರರಂಗದವರೆಗೆ ನಟಿಸಿ ಖ್ಯಾತರಾಗಿಬಿಟ್ಟರು!

ಕೃಷ್ಣಲೀಲಾ ಬಾಲಣ್ಣ ನಟಿಸಿದ್ದ ಮೊತ್ತ ಮೊದಲ ನಾಟಕ. ಲಕ್ಷ್ಮಾಸನಾ ನಾಟಕ ಮಂಡಳಿ, ಗೌರಿ ಶಂಕರ ನಾಟಕ ಮಂಡಳಿ ಬಳಿಕ ಅಂದಿನ ಜನಪ್ರಿಯ ಗುಬ್ಬಿ ವೀರಣ್ಣ ರಂಗಭೂಮಿಗೆ ಪದಾರ್ಪಣೆ ಮಾಡಿದ್ದರು. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲ ನೀಲಾಂಜನೆ, ಚಿತ್ರಾಂಗದೆ ಸೇರಿದಂತೆ ಸುಮಾರು 50 ನಾಟಕಗಳನ್ನು ಬರೆದಿದ್ದರು. ಹೀಗೆ ಒಮ್ಮೆ ಪ್ರಸಿದ್ಧ ನಿರ್ದೇಶಕರಾದ ಬಿಆರ್ ಪಂತುಲು ಅವರು ನಾಟಕ ಕಂಪನಿಗೆ ಬಂದಿದ್ದಾಗ ಬಾಲಣ್ಣನವರ ನಟನೆ ಕಂಡು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ಕೊಟ್ಟುಬಿಟ್ಟಿದ್ದರು.

1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ ಸಂತ ತುಕಾರಾಂ, ಸ್ಕೂಲ್ ಮಾಸ್ಟರ್, ಗಂಧದ ಗುಡಿ, ಸಾಕು ಮಗಳು, ಗುಣ ನೋಡಿ ಹೆಣ್ಣು ಕೊಡು, ಪರಾಜಿತೆ, ಬೆಂಗಳೂರು ಭೂತ, ಕಸ್ತೂರಿ ವಿಜಯ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ವಿವಿಧ ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಸಿಕರ ಮನದಾಳದಲ್ಲಿ ಬೇರೂರಿಬಿಟ್ಟಿದ್ದರು.

ಪರ ಭಾಷೆಯ ಸ್ಟುಡಿಯೋದವರು ಕನ್ನಡ ಚಿತ್ರಗಳ ಬಗ್ಗೆ ತೋರಿಸುತ್ತಿದ್ದ ನಿರ್ಲಕ್ಷ್ಯ ಮತ್ತು ಕನ್ನಡಿಗರಿಗೆ ಲಾಭವಾಗಲಿ ಎಂಬ ದೃಷ್ಟಿಕೋನದಿಂದ ತಾವೇ ಸ್ವಂತ ಮುಂದಾಳತ್ವ ವಹಿಸಿ ಸಾರ್ವಜನಿಕರಿಂದ 100 ರೂ. ವಂತಿಗೆ ಸಂಗ್ರಹಿಸಿ ಸ್ಟುಡಿಯೋ ಮಾಡಿ, ಅದಕ್ಕೆ ಅಭಿಮಾನ್ ಎಂದು ಹೆಸರಿಟ್ಟರು. ಆದರೆ ಆರಂಭಿಕವಾಗಿ ಅಭಿಮಾನ್ ಸ್ಟುಡಿಯೋ ತುಂಬಾ ತೊಂದರೆ ಅನುಭವಿಸಿತು. ಅವರ ಉತ್ಸಾಹಕ್ಕೆ ಸರ್ಕಾರ ಕೂಡಾ ಕೈಜೋಡಿಸಲಿಲ್ಲ, ಕನ್ನಡ ಚಿತ್ರರಂಗದವರು ತನ್ನ ಕೈಹಿಡಿಯುತ್ತಾರೆಂದು ಸಾಲ ಮಾಡಿದ್ದ ಬಾಲಣ್ಣಗೆ..ವ್ಯವಹಾರ ಜ್ಞಾನವೂ ಕೈಕೊಟ್ಟಿತ್ತು. ಅದರ ಪರಿಣಾಮ ಬಡ್ಡಿ ಸಾಲ ಕಟ್ಟುವುದರಲ್ಲಿಯೇ ಜೀವನ ಕಳೆಯುವಂತಾಗಿತ್ತು. ಸ್ಟುಡಿಯೋ ಯಶಸ್ಸಾಗದೇ ಬಾಲಣ್ಣ ನೋವಿನಲ್ಲೇ ಕೊನೆಯುಸಿರೆಳೆದಿದ್ದರು. ಇಂದು ಅಭಿಮಾನ್ ಸ್ಟುಡಿಯೋದಲ್ಲಿ ಟಿವಿ ಸೀರಿಯಲ್ ನಿರ್ಮಾಣವಾಗುತ್ತಿದೆ.

ಕಷ್ಟ ಕಾರ್ಪಣ್ಯದಲ್ಲೇ ಬದುಕನ್ನು ಕಳೆದು ಬೆಳ್ಳಿತೆರೆಯಲ್ಲಿ ಹೆಸರುಗಳಿಸಿದ್ದ ಬಾಲಣ್ಣ 1995ರ ಜುಲೈ 19ರಂದು ಕ್ಯಾನ್ಸರ್ ನಿಂದ ವಿಧಿವಶರಾಗಿದ್ದರು. ಇಂದಿಗೂ ಬಾಲಣ್ಣ ಕೋಟ್ಯಂತರ ಕನ್ನಡಿಗರ ಮನದಾಳದಲ್ಲಿ ಅಜರಾಮರರಾಗಿದ್ದಾರೆ.

Tags:

ಹಾಸ್ಯ ನಟ ಬಾಲಣ್ಣ

ನಟ ಬಾಲಕೃಷ್ಣ

ಕನ್ನಡ ಚಿತ್ರರಂಗ

Actor Balakrishna

Actor Balanna

Balanna

Author/Source:

ನಾಗೇಂದ್ರ ತ್ರಾಸಿ

Thu, 15 Nov 2018 07:02:16 +0000 ntrasi 338204 at https://www.udayavani.com https://www.udayavani.com/kannada/news/web-focus/338204/kannada-popular-actor-tn-balakrishna-balanna#comments ಬಿಟ್ಟುಬಿಡದೆ ಇಂದಿಗೂ ಕಾಡುತ್ತಿರುವ ಅದ್ಭುತ ನಟ ಶಂಕರ್ ನಾಗ್... https://www.udayavani.com/kannada/news/web-focus/336548/shankar-nag-hero-of-the-classes-and-masses

ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭಾವಂತ ನಟ, ನಿರ್ದೇಶಕ, ರಂಗಭೂಮಿ ಕಲಾವಿದ ಶಂಕರ್ ನಾಗರ್ ಕಟ್ಟೆ . ನವೆಂಬರ್ 9 ನಾಗ್ ಹುಟ್ಟು ಹಬ್ಬ, ಕರಾಟೆ ಕಿಂಗ್ ಎಂದು ಹೆಸರಾಗಿದ್ದ ಶಂಕರ್ ನಾಗ್ ಬದುಕಿದ್ದರೆ ಇಂದು ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮವಾಗಿರುತ್ತಿತ್ತು. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದ್ದ ಶಂಕರ್ ನಾಗ್ ನಟನೆ ಮತ್ತು ನಿರ್ದೇಶನದ ಉತ್ತುಂಗದ ಶಿಖರದಲ್ಲಿದ್ದಾಗಲೇ ಅಪಘಾತದಲ್ಲಿ ತೀರಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು.

ಶಿಕ್ಷಣ ಮುಗಿದ ಬಳಿಕ ಬದುಕನ್ನು ಅರಸಿ ಹೊರಟಿದ್ದು ಮಹಾನಗರಿ ಮುಂಬೈಗೆ. ಬ್ಯಾಂಕ್ ಕ್ಲರ್ಕ್ ಆಗಿದ್ದ ಶಂಕರ್ ನಾಗ್ ತದನಂತರ ಮರಾಠಿ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದ್ದರು. ರಂಗಭೂಮಿಯಲ್ಲೇ ಬಾಳಸಂಗಾತಿ ಆರುಂಧತಿಯ ಭೇಟಿಯಾಗಿ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಅಣ್ಣ ಅನಂತ್ ನಾಗ್ ಮರಾಠಿ ರಂಗಭೂಮಿ, ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ತನ್ನ ಸಹೋದರ ಶಂಕರ ಕೂಡಾ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಬೇಕೆಂಬುದು ಆಶಯವಾಗಿತ್ತು. ಅದರಂತೆ 1978ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ” ಸಿನಿಮಾದ ಮೂಲಕ ಶಂಕರ್ ನಾಗ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಒಂದಾನೊಂದು ಕಾಲದಲ್ಲಿ ಶಂಕರ್ ನಾಗ್ ಅದ್ಭುತ ಅಭಿನಯಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಇದು ಶಂಕರ್ ಅವರ ಮೊದಲ ಸಿನಿಮಾ ಎಂದು ಊಹಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪ್ರೇಕ್ಷಕರ ಮನಗೆದ್ದು ಬಿಟ್ಟಿದ್ದರು.

ಹೀಗೆ ಶಂಕರ್ ನಾಗರಕಟ್ಟೆ ಚಿತ್ರರಂಗದಲ್ಲಿ ಶಂಕರ್ ನಾಗ್ ಆಗಿ ಬೆಳೆದುಬಿಟ್ಟಿದ್ದರು. ಸದಾ ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಶಂಕರ್ ನಾಗ್ “ಒಂದು ಮುತ್ತಿನ ಕಥೆ”ಯಂತಹ ಸಿನಿಮಾ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. 1979ರಲ್ಲಿ ಮಿಂಚಿನ ಓಟ ಸಿನಿಮಾವನ್ನು ನಿರ್ದೇಶಿಸಿದ ನಂತರ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವರು ಹಿಂದಿರುಗಿ ಕಂಡಿದ್ದಿಲ್ಲ. ಮಿಂಚಿನ ಓಟ ಸಿನಿಮಾ ಒಟ್ಟು ಏಳು ರಾಜ್ಯ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಜನ್ಮಜನ್ಮದ ಅನುಬಂಧ, ಗೀತಾ, ಆ್ಯಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೇ ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಆಟೋ ರಾಜಾ ಚಿತ್ರದಲ್ಲಿ ನಟಿಸುವ ಮುಖೇನ ಕನ್ನಡ ಚಿತ್ರರಸಿಕರ ಪಾಲಿಗೆ ಶಂಕರಣ್ಣ ಎಂದೇ ಜನಪ್ರಿಯರಾಗಿದ್ದರು.

ಆ್ಯಕ್ಸಿಡೆಂಟ್ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಕನ್ನಡ ಸಿನಿಮಾಗಳು ತಾಂತ್ರಿಕವಾಗಿ ಪೈಪೋಟಿ ನೀಡಬೇಕೆಂಬ ಮಹದಾಸೆ ಹೊಂದಿದ್ದ ಶಂಕರ್ ನಾಗ್ ಅದಕ್ಕಾಗಿಯೇ ಅವರು ಸಂಕೇತ್ ಸ್ಟುಡಿಯೋವನ್ನು ಆರಂಭಿಸಿದ್ದರು. ಎಲ್ಲರಿಗಿಂತ ಭಿನ್ನವಾಗಿ ಆಲೋಚಿಸುತ್ತಿದ್ದ ಶಂಕರ್ ಸಿನಿಮಾವಾಗಲಿ, ಸಾಮಾಜಿಕ ಕಳಕಳಿಯಾಗಲಿ ಅದು ಭವಿಷ್ಯದ ಕೊಡುಗೆಯಾಗಬೇಕೆಂದು ಬಯಸುತ್ತಿದ್ದರಂತೆ.

ಮಾಲ್ಗುಡಿ ಡೇಸ್ ಮರೆಯಲು ಸಾಧ್ಯವೇ?

ಸದಾ ಲವಲವಿಕೆಯ ವ್ಯಕ್ತಿಯಾಗಿದ್ದ ಶಂಕರ್ ನಾಗ್ ನಿರ್ದೇಶಿಸಿ, ನಟಿಸಿದ್ದ ಕಾದಂಬರಿಕಾರ ಆರ್ ಕೆ ನಾರಾಯಣ್ ಅವರ ಸಣ್ಣ ಕಥೆ ಮಾಲ್ಗುಡಿ ಡೇಸ್ ಟಿವಿ ಸೀರಿಯಲ್ ಮರೆಯಲು ಸಾಧ್ಯವಿದೆಯೇ? ಶಂಕರ್ ನಾಗ್ ಅವರು ದಣಿವಿಲ್ಲದೇ ದುಡಿಯುವ ವ್ಯಕ್ತಿಯಾಗಿದ್ದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸ್ನೇಹಜೀವಿಯಾಗಿದ್ದರು. ಜಾಗತೀಕರಣ ಕಾಲಿಟ್ಟ ವೇಳೆಯಲ್ಲಿಯೇ ಶಂಕರ್ ನಾಗ್  ರಂಗಭೂಮಿ ಮತ್ತು ಟೆಲಿವಿಷನ್ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು.  ಅದಕ್ಕೊಂದು ಉತ್ತಮ ಉದಾಹರಣೆ ಮಾಲ್ಗುಡಿ ಡೇಸ್ ಧಾರಾವಾಹಿ!

ಅಂದು ಭಾರತದಲ್ಲಿ ಇದ್ದ ಏಕೈಕ ಟೆಲಿವಿಷನ್ ದೂರದರ್ಶನ ಮಾತ್ರ. ಅಂತೂ ದೂರದರ್ಶನ ಕೊಟ್ಟ ಆಫರ್ ಅನ್ನು ಸ್ವೀಕರಿಸಿದ್ದ ಶಂಕರ್ ನಾಗ್ ಮಾಲ್ಗುಡಿ ಡೇಸ್ ಎಂಬ ಅತ್ಯದ್ಭುತ ಟಿವಿ ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಈ ಸರಣಿಯಲ್ಲಿ ಡಾ.ವಿಷ್ಣುವರ್ಧನ್, ಅನಂತ್ ನಾಗ್ ಕೂಡಾ ನಟಿಸಿದ್ದರು. ಅಷ್ಟೇ ಅಲ್ಲ ಮಾಸ್ಟರ್ ಮಂಜುನಾಥ್ ಪಾತ್ರವಂತು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಮಾಲ್ಗುಡಿ ಡೇಸ್ ಚಿತ್ರೀಕರಣ ನಡೆದಿದ್ದು ಆಗುಂಬೆಯಲ್ಲಿ. ಈ ಧಾರಾವಾಹಿ ಭಾರತೀಯ ಟೆಲಿವಿಷನ್ ನಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದು ಶಂಕರ್ ನಾಗ್ ಅವರ ಪ್ರತಿಭೆಗೆ ಸಂದ ಗೌರವವಾಗಿದೆ.

ಶಂಕರ್ ನಾಗ್ ದೂರದೃಷ್ಟಿ ಯೋಜನೆಯ ನಟರಾಗಿದ್ದರು!

ಹೌದು ನಟ ಶಂಕರ್ ನಾಗ್ ಕೇವಲ ರಂಗಭೂಮಿ ನಟ, ನಿರ್ದೇಶಕ, ಟಿವಿ ಸೀರಿಯಲ್ ನಿರ್ದೇಶಕ ಮಾತ್ರ ಆಗಿರಲಿಲ್ಲ. ಬೆಂಗಳೂರಿನ ಪ್ರಸಿದ್ಧ ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕು, ಜನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಟ್ರಾಫಿಕ್ ಜಾಮ್ ಗೆ ಕಡಿವಾಣ ಹಾಕಲು ಮೆಟ್ರೋ ಬೇಕು ಎಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮನವರಿಕೆ ಮಾಡಿದ್ದರಂತೆ. ಐಟಿ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಲಂಡನ್ ರೀತಿ ಅಂಡರ್ ಗ್ರೌಂಡ್ ರೈಲ್ವೆ ವ್ಯವಸ್ಥೆಯ ಅಗತ್ಯತೆ ಇದೆ ಎಂದಿದ್ದರು.

ಥರ್ಮಲ್ ಪ್ರಾಜೆಕ್ಟ್ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸೋದು, ಹೆಲಿಕಾಪ್ಟರ್ ನಿಂದ ಎಮರ್ಜೆನ್ಸಿ ರೋಗಿಗಳನ್ನು ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆತರಲು ಮೆಡಿಕಲ್ ನೆಟ್ ವರ್ಕ್ ಹುಟ್ಟುಹಾಕಬೇಕು ಎಂಬುದು ಸೇರಿದಂತೆ ಹಲವಾರು ದೂರದೃಷ್ಟಿಯ ಪರಿಕಲ್ಪನೆಯನ್ನು ಶಂಕರ್ ಹೊಂದಿದ್ದರು. ಕನ್ನಡ ಚಿತ್ರರಂಗ ಸಿನಿಮಾ ರೆಕಾರ್ಡಿಂಗ್ ಮಾಡಲು ಮದ್ರಾಸ್ ನ್ನೇ ನೆಚ್ಚಿಕೊಂಡಿತ್ತು.  ಇದನ್ನು ಗಮನಿಸಿದ ಶಂಕರ್ ನಮ್ಮವರ ಶ್ರಮದ ಹಣ ನಮಗೇ ಸಿಗಲಿ ಎಂದು ಯೋಚಿಸಿದ್ದರು. ಅದಕ್ಕಾಗಿ ಶಂಕರ್ ನಿರ್ಮಿಸಿದ ಸಂಕೇತ್ ಎಲೆಕ್ಟ್ರಾನಿಕ್ಸ್..ಕರ್ನಾಟಕದ ಮೊದಲ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸ್ಟುಡಿಯೋ ಎಂಬ ಹೆಗ್ಗಳಿಕೆ ಪಡೆದಿತ್ತು.

ಒಮ್ಮೆ ರಾಮಕೃಷ್ಣ ಹೆಗಡೆಯವರು ಚುನಾವಣಾ ಪ್ರಚಾರಕ್ಕೆಂದು ಕೊಟ್ಟಿದ್ದ ಹಣದಲ್ಲಿ ಪೈಸೆ, ಪೈಸೆಗೂ ಲೆಕ್ಕ ಇಟ್ಟು ಕೊನೆಗೆ ಉಳಿದ ಹಣವನ್ನು ಹೆಗಡೆಯವರಿಗೆ ಶಂಕರ್ ನಾಗ್ ವಾಪಸ್ ಕೊಟ್ಟಿರುವುದಾಗಿ ಪತ್ನಿ ಆರುಂಧತಿ ನಾಗ್ ನೆನಪಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದು ಶಂಕರ್ ಅವರ ಸರಳ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇಂದಿಗೂ ಆಟೋಗಳ ಹಿಂದೆ ಶಂಕರ್ ನಾಗ್ ಅವರ ಫೋಟೋ ರಾರಾಜಿಸುತ್ತೆ. 1978ರಿಂದ 1990ರವರಗಿನ ಕಡಿಮೆ ಅವಧಿಯಲ್ಲಿಯೇ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಜನಾನುರಾಗಿಯಾಗಿದ್ದರು. 1990ರ ಸೆಪ್ಟೆಂಬರ್ 30ರಂದು ದಾವಣಗೆರೆ ಸಮೀಪದ ಆನಗೋಡು ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಶಂಕರ್ ನಾಗ್ ವಿಧಿವಶರಾಗಿದ್ದರು. ಆದರೆ ಇಂದಿಗೂ ಶಂಕರ್ ನಾಗ್ ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ.

Tags:

ಶಂಕರ್ ನಾಗ್

ಶಂಕರ್ ನಾಗ್ ಹುಟ್ಟುಹಬ್ಬ

ಮಾಲ್ಗುಡಿ ಡೇಸ್

shankarnag

malgudi days

Shankar nag

Author/Source:

ನಾಗೇಂದ್ರ ತ್ರಾಸಿ

Thu, 08 Nov 2018 11:24:18 +0000 ntrasi 336548 at https://www.udayavani.com https://www.udayavani.com/kannada/news/web-focus/336548/shankar-nag-hero-of-the-classes-and-masses#comments Bus ಕಂಡಕ್ಟರ್ ಜಾನಿ ವಾಕರ್ ವಿಸ್ಕಿ ಹೆಸರಲ್ಲೇ ಖ್ಯಾತ ಹಾಸ್ಯ ನಟರಾದರು! https://www.udayavani.com/kannada/news/web-focus/335220/actor-johnny-walker-interesting-facts

ಇಂದೋರ್ ನಲ್ಲಿದ್ದ ಈ ಕುಟುಂಬ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿತ್ತು. ತಂದೆ ಕೆಲಸ ಮಾಡುತ್ತಿದ್ದ ಮಿಲ್ ಬಾಗಿಲು ಮುಚ್ಚಿದ್ದರಿಂದ ಹೊಟ್ಟೆಪಾಡಿಗಾಗಿ ತಂದೆ,ತಾಯಿ ಮಕ್ಕಳನ್ನು ಕರೆದುಕೊಂಡು ಬಂದಿದ್ದು ಮಾಯಾನಗರಿ ಮುಂಬೈಗೆ. ಹತ್ತು ಮಕ್ಕಳನ್ನು ಸಾಕಿ, ಬೆಳೆಸುವ ಹೊಣೆಗಾರಿಕೆ ಕುಟುಂಬದ ಮೇಲಿತ್ತು. ಈ ಮಕ್ಕಳಲ್ಲಿ 2ನೇಯವರು ಬದ್ರುದ್ದೀನ್ ಜಮಾಲುದ್ದೀನ್ ಕಾಝಿ. ಬದುಕಿನ ಜಟಕಾ ಬಂಡಿ ಮುಂದೆ ಸಾಗಲು ಬದ್ರುದ್ದೀನ್ ಮುಂಬೈ ನಗರಿಯಲ್ಲಿ ಐಸ್ ಕ್ಯಾಂಡಿ, ಹಣ್ಣು, ತರಕಾರಿ ಮಾರಾಟ ಮಾಡುವ ಕೆಲಸ ಮಾಡಿದರು. ಕೊನೆಗೆ ಕೈ ಹಿಡಿದದ್ದು ಬೆಸ್ಟ್ (ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಫೋರ್ಟ್) ಕಂಡಕ್ಟರ್ ಕೆಲಸ. ಈ ವ್ಯಕ್ತಿ ಬೇರಾರು ಅಲ್ಲ ಹಿಂದಿ ಚಿತ್ರರಂಗವನ್ನು ಆಳಿದ್ದ ಖ್ಯಾತ ಹಾಸ್ಯ ನಟ ಜಾನಿವಾಕರ್!

ಬಸ್ ಕಂಡಕ್ಟರ್ ಆಗಿ ಪ್ರಯಾಣಿಕರನ್ನು ನಕ್ಕು ನಗಿಸುತ್ತಲೇ ಟಿಕೆಟ್ ಕೊಡುವ ಶೈಲಿ ಎಲ್ಲರನ್ನೂ ಮೋಡಿ ಮಾಡಿಬಿಟ್ಟಿತ್ತು. ಬಸ್ ಸ್ಟಾಪ್ ಗಳ ಹೆಸರನ್ನು ಹೇಳುತ್ತಿದ್ದ ರೀತಿಯೂ ಕೂಡಾ ವಿಭಿನ್ನ ಶೈಲಿಯದ್ದಾಗಿತ್ತು.  ಹೀಗೆ ಒಂದು ದಿನ ಬೆಸ್ಟ್ ಬಸ್ ನಲ್ಲಿ ಖ್ಯಾತ ನಟ, ಸಂಭಾಷಣೆಕಾರ ಬಲ್ ರಾಜ್ ಸಾಹ್ನಿ ಪ್ರಯಾಣಿಸುತ್ತಿದ್ದಾಗ  ಟಿಕೆಟ್ ಕೊಡುತ್ತಿದ್ದ ಬದ್ರುದ್ದೀನ್ ನಗಿಸುವ ಶೈಲಿ ಗಮನಸೆಳೆದಿತ್ತು. ಈ ಸಂದರ್ಭದಲ್ಲಿ ಸಾಹ್ನಿ ಬಾಜಿ ಸಿನಿಮಾದ ಸಂಭಾಷಣೆ ಬರೆಯುತ್ತಿದ್ದರು. ಅಲ್ಲಿಂದ ಬದ್ರುದ್ದೀನ್ ಬದುಕಿನ ದಿಕ್ಕೇ ಬದಲಾಯಿತು.

ಜಾನಿವಾಕರ್ ಆಗಿದ್ದು ಹೇಗೆ ಗೊತ್ತಾ?

ಬಸ್ ಕಂಡಕ್ಟರ್ ಬದ್ರುದ್ದೀನ್ ಎಂಬ ಯುವಕನನ್ನು ಸಾಹ್ನಿ ಅವರು ಕರೆದೊಯ್ದು ನಿಲ್ಲಿಸಿದ್ದು ಅಂದಿನ ಖ್ಯಾತ ನಿರ್ದೇಶಕ ಗುರುದತ್ ಮುಂದೆ! ತನ್ನ ಸಿನಿಮಾಕ್ಕೆ ಉತ್ತಮ ಹಾಸ್ಯ ನಟನೊಬ್ಬನ ಹುಡುಕಾಟದಲ್ಲಿದ್ದ ದತ್, ಬದ್ರುದ್ದೀನ್ ಅವರ ಆಡಿಷನ್ ನಡೆಸುತ್ತಾರೆ. ಆಗ ಕುಡುಕನ ಪಾತ್ರದಲ್ಲಿ ನಟಿಸಿ ತೋರಿಸುವಂತೆ ಹೇಳಿದ್ದರು. ಹಿಂದೆ, ಮುಂದೆ ನೋಡದೆ ಮದ್ಯ ಸೇವಿಸದೆಯೇ ಲೀಲಾಜಾಲವಾಗಿ ಬದ್ರುದ್ದೀನ್ ನಟಿಸಿ ತೋರಿಸಿದಾಗ ದತ್ ನಿಬ್ಬೆರಗಾಗಿ ಹೋಗಿದ್ದರಂತೆ! ಅಂತಿಮ ಹಂತದಲ್ಲಿದ್ದ ಬಾಜಿ ಸಿನಿಮಾದ ಕಥೆಗೆ ಈ ಪಾತ್ರವನ್ನು ಸೇರಿಸಿ, ದತ್ ಅವರ ಫೇವರಿಟ್ ಜಾನಿ ವಾಕರ್ ವಿಸ್ಕಿಯ ಹೆಸರನ್ನೇ ಬದ್ರುದ್ದೀನ್ ಗೆ ಇಟ್ಟುಬಿಟ್ಟಿದ್ದರು. 1951ರಲ್ಲಿ ದತ್ ನಿರ್ದೇಶನದ ಬಾಜಿ ಸಿನಿಮಾದಲ್ಲಿ ಜಾನಿವಾಕರ್ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಜಾನಿವಾಕರ್ ಹಿಂದಿ ಚಿತ್ರರಂಗದ ಮೇರು ಹಾಸ್ಯನಟನಾಗಿ ಮಿಂಚಿದ್ದರು.

ತುಂಬಾ ಕುತೂಹಲದ ವಿಷಯ ಏನೆಂದರೆ “ಜಾನಿ ವಾಕರ್” ಹೆಸರನ್ನಿಟ್ಟುಕೊಂಡು ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ ಅವರು ನಿಜಜೀನವದಲ್ಲಿ ಒಮ್ಮೆಯೂ ಮದ್ಯವನ್ನು ಸೇವಿಸಿದವರಲ್ಲ. ಆದರೆ ಅವರ ಕುಡುಕನ ಪಾತ್ರದ ನಟನೆ ನೋಡಿದರೆ ಈ ವ್ಯಕ್ತಿ ಕುಡುಕನೇ ಇರಬೇಕು ಎಂಬಷ್ಟರ ಮಟ್ಟಿಗೆ ಜಾನಿ ಪಾತ್ರ ಎಲ್ಲರನ್ನೂ ನಿಬ್ಬೆರಗಾಗಿಸಿದ್ದು ಸುಳ್ಳಲ್ಲ. 40 ವರ್ಷಗಳ ಮೊದಲೇ ಜಾನಿ ಅವರು ಶ್ರೀಮತಿ 420 ಸಿನಿಮಾದಲ್ಲಿ ನಟಿಸಿದ್ದರು. ತದನಂತರ 1997ರಲ್ಲಿ ಕಮಲ್ ಹಾಸನ್ ಅವರು ಕೊನೆಯದಾಗಿ ಅವಕಾಶ ಮಾಡಿಕೊಟ್ಟ ಸಿನಿಮಾ ಚಾಚಿ 420 ಸಿನಿಮಾದಲ್ಲೂ ಜಾನಿ ವಾಕರ್ ಅಭಿನಯಿಸಿದ್ದು ಕಾಕತಾಳಿಯವೇ ಇರಬೇಕು!

1950 ಮತ್ತು 1960ರ ದಶಕದಲ್ಲಿ ಜಾನಿ ವಾಕರ್ ಅತ್ಯಂತ ಜನಪ್ರಿಯ ಹಾಗೂ ಬಿಡುವಿಲ್ಲದ ಹಾಸ್ಯ ನಟರಾಗಿದ್ದರು. 1957ರಲ್ಲಿ ಅವರದ್ದೇ ಹೆಸರಿನಲ್ಲಿ(ಜಾನಿ ವಾಕರ್) ಸಿನಿಮಾ ತೆರೆಕಂಡಿತ್ತು. ಇದರಲ್ಲಿ ಜಾನಿ ವಾಕರ್ ಹಾಗೂ ಶ್ಯಾಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1956ರ ಛೂ ಮಂತರ್, 1958ರಲ್ಲಿ ತೆರೆಕಂಡಿದ್ದ ಮಿ.ಕಾರ್ಟೂನ್ ಎಂ.ಎ. ಸಿನಿಮಾದಲ್ಲಿ ಜಾನಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು.

ಮುಂಬೈನ ಬಾಂದ್ರಾದ ಪಾರೈ ಕ್ರಾಸ್ ರಸ್ತೆ ಸಮೀಪ ಜಾನಿ ಅವರ ಮನೆ(ನೂರ್ ವಿಲ್ಲಾ) ಇತ್ತು. ಇದು ಜಾನಿ ವಾಕರ್ ಬಸ್ ಸ್ಟಾಪ್ ಎಂದೇ ಫೇಮಸ್ ಆಗಿತ್ತಂತೆ! 1958ರಲ್ಲಿ ಬಿಡುಗಡೆಯಾಗಿದ್ದ ಬಿಮಲ್ ರಾಯ್ ಅವರ ಮಧುಮತಿ ಚಿತ್ರದಲ್ಲಿನ ನಟನೆಗಾಗಿ ಜಾನಿ ವಾಕರ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದರು. 1968ರಲ್ಲಿ ಶಿಕಾರ್ ಚಿತ್ರದಲ್ಲಿ ಬೆಸ್ಟ್ ಕಾಮಿಡಿಯನ್ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕೀರ್ತಿ ಜಾನಿ ಅವರದ್ದು.

ಹಾಸ್ಯ ನಟರಾಗಿ ಉತ್ತುಂಗದಲ್ಲಿದ್ದಾಗಲೇ ತಮ್ಮ ಮೇಲೆ ಅತಿಯಾಗಿ ಪ್ರಭಾವ ಬೀರಿದ್ದ ನಿರ್ದೇಶಕ ಗುರು ದತ್ ಅವರ ನಿಧನ ಬಳಿಕ ಜಾನಿ ವಾಕರ್ ಏಕಾಂಗಿಯಾಗಿದ್ದರು. 1980ರ ಹೊತ್ತಿಗೆ ಸಿನಿಮಾದಲ್ಲಿ ಅಶ್ಲೀಲ ಹೆಚ್ಚಾಯಿತೆಂದು ನಟನೆಯಿಂದ ದೂರವೇ ಉಳಿದು ಬಿಟ್ಟರು. ಸುದೀರ್ಘ 14 ವರ್ಷಗಳ ನಂತರ (ಚಾಚಿ 420 ಸಿನಿಮಾದಲ್ಲಿ) ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದರು. ತನ್ನ ಹೆಸರಿನಲ್ಲಿಯೇ ಸಿನಿಮಾವಾಗಿದ್ದ ಏಕೈಕ ಹಾಸ್ಯ ನಟ, ತನ್ನ ಜೊತೆ ಕಾರ್ಯದರ್ಶಿ ಇಟ್ಟುಕೊಂಡಿದ್ದ ಮೊದಲ ನಟರಾಗಿದ್ದರು. ಜಾನಿ ವಾಕರ್ ನೂರ್ ಜಹಾನ್ ಅವರನ್ನು ವಿವಾಹವಾಗಿದ್ದರು. ವಾಕರ್ ದಂಪತಿಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು. ಮಗ ನಾಸಿರ್ ಖಾನ್ ಹಿಂದಿ ಸೋಪ್ ಓಪೆರಾದ ಓರ್ವ ನಟರಾಗಿದ್ದಾರೆ.

2003ರ ಜುಲೈ 29ರಂದು ಜಾನಿ ವಾಕರ್ ಇಹಲೋಕ ತ್ಯಜಿಸಿದ್ದರು. “ಜಾನಿ ವಾಕರ್” ಎಂಬ ಹೆಸರಿನೊಂದಿಗೆ ಕುಡುಕನ ಪಾತ್ರದ ಮೂಲಕವೇ ಮಿಂಚಿದ್ದ ಜಾನಿ ಮದ್ಯಪರಿತ್ಯಾಗಿ(teetotaler) ಎಂದೇ ಹೆಸರಾಗಿದ್ದರು.

Tags:

ಜಾನಿ ವಾಕರ್

ಹಿಂದಿ ಚಿತ್ರರಂಗ

ಜಾನಿ ವಾಕರ್ ವಿಸ್ಕಿ

Actor Johnny Walker

Gurudutt

Bollywood

Author/Source:

ನಾಗೇಂದ್ರ ತ್ರಾಸಿ

Thu, 01 Nov 2018 11:28:05 +0000 ntrasi 335220 at https://www.udayavani.com https://www.udayavani.com/kannada/news/web-focus/335220/actor-johnny-walker-interesting-facts#comments ಈ ಸ್ಟಾರ್ ನಟಿನಾ CIA, CBI ಕೊಲ್ಲಲು ಸಂಚು ಹೂಡಿತ್ತಾ? ನಿಗೂಢ ಸಾವು https://www.udayavani.com/kannada/news/web-focus/333542/babi-s-heart-wrenching-love-story-died-under-mysterious-circumstances

ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ನಟ, ನಟಿಯರು ವಿವಿಧ ರೀತಿಯಲ್ಲಿ ಮಿಂಚಿ ಮರೆಯಾಗಿದ್ದಾರೆ. ಅದರಲ್ಲಿ ಕೆಲವರ ಜೀವನಗಾಥೆ ಅಂದಿನಿಂದ ಇಂದಿನವರೆಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹೌದು ಟೈಮ್ಸ್ ಮ್ಯಾಗಜೀನ್ ಕವರ್ ಪೇಜ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ನಟಿ 1970 ಹಾಗೂ 80ರ ದಶಕದಲ್ಲಿ ಅತ್ಯಂತ ಗ್ಲ್ಯಾಮರಸ್ ಮತ್ತು ಜನಪ್ರಿಯ ನಟಿಯಾಗಿದ್ದರು.

ರೂಪದರ್ಶಿಯಾಗಿದ್ದ ಪರ್ವಿನ್ 1972ರಲ್ಲಿ ಚರಿತ್ರಾ ಹಿಂದಿ ಸಿನಿಮಾದ ಮೂಲಕ ಸಿನಿ ಜೀವನ ಆರಂಭಿಸಿದ್ದರು. ದೀವಾರ್, ನಮಕ್ ಹಲಾಲ್, ಸುಹಾಗ್, ಶಾನ್ ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದ ಈಕೆ ಬಾಲಿವುಡ್ ನ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಬಾಬಿ ಕೂಡಾ ಒಬ್ಬರಾಗಿದ್ದರು.

ಹಿಂದಿ ಸಿನಿಮಾರಂಗದಲ್ಲಿ ನಾಯಕಿಯರ ಪಾತ್ರ ಅಪ್ಪಟ ಭಾರತೀಯ ಉಡುಗೆ ತೊಡುಗೆಯಲ್ಲಿಯೇ ಇದ್ದಿತ್ತು. ಆದರೆ ಪರ್ವಿನ್ ಬಾಬಿ ಎಂಬ ಮಾದಕ ನಟಿ ಕಾಲಿಟ್ಟ ಬಳಿಕ ಪಾತ್ರ ಹಾಗೂ ಡ್ರೆಸ್ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದ್ದಳು. ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ನಟಿಸುತ್ತಿದ್ದ ಬಾಬಿ ಗ್ಲ್ಯಾಮರಸ್ ಪಟ್ಟ ಗಿಟ್ಟಿಸಿಕೊಂಡಿದ್ದಳು. ಅಷ್ಟೇ ಅಲ್ಲ ಈಕೆ ಗಣ್ಯಾತೀಗಣ್ಯರ  ಪ್ರೇಮಪಾಶದಲ್ಲಿ ಬಿದ್ದು ಬಿಟ್ಟಿದ್ದಳು. ಒಂದು ವೇಳೆ ಈಗ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ, ಸಾಮಾಜಿಕ ಜಾಲತಾಣಗಳು ಪರ್ವಿನ್ ಬಾಬಿ ಕಾಲದಲ್ಲಿ ಇದ್ದಿದ್ದರೆ ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ನಟರ, ನಿರ್ದೇಶಕರ ಬಣ್ಣಗಳು ಅಂದೇ ಬಟಾಬಯಲಾಗುತ್ತಿತ್ತು!

ಪರ್ವಿನ್ ಬಾಬಿ ಮೊದಲ ಬಾರಿಗೆ ಬಾಲಿವುಡ್ ನ ಪ್ರಸಿದ್ಧ ಖಳನಟ ಡ್ಯಾನಿ ಡೆನ್ ಝೋಂಗಪಾ ಜೊತೆ ಅಫೇರ್ ಶುರುವಾಗುತ್ತದೆ. ಇಬ್ಬರು ಪ್ರೇಮಿಗಳು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಕೆಲ ವರ್ಷಗಳಲ್ಲಿ ಇಬ್ಬರ ಪ್ರೀತಿ ಮುರಿದು ಬಿದ್ದು ನಾನೊಂದು ತೀರ, ನೀನೊಂದು ತೀರ ಆಗಿಬಿಟ್ಟಿದ್ದರು. ಇದಾದ ಬಳಿಕ ಸ್ಫುರದ್ರೂಪಿ ಕಬೀರ್ ಬೇಡಿಯನ್ನು ಬಾಬಿ ಪ್ರೀತಿಸತೊಡಗುತ್ತಾಳೆ. ಆ ಹೊತ್ತಿಗೆ ಕಬೀರ್ ಪ್ರೊತಿಮಾ ಬೇಡಿಯನ್ನು ಮದುವೆಯಾಗಿದ್ದ.

ಈ ಕಾಲಘಟ್ಟದಲ್ಲಿ ಕಬೀರ್ ಬೇಡಿ ಕೂಡಾ ಹೆಚ್ಚು ಕ್ಲಿಕ್ ಆಗಿರಲಿಲ್ಲವಾಗಿತ್ತು. ಪರ್ವಿನ್ ಬಾಬಿ ಬಾಲಿವುಡ್ ನಲ್ಲಿ ಉತ್ತುಂಗಕ್ಕೆ ಏರತೊಡಗಿದ್ದಳು. ಕಬೀರ್ ಅದೃಷ್ಟವನ್ನರಸಿ ಇಟಲಿಗೆ ಹೊರಟು ಬಿಟ್ಟಿದ್ದರು. ಒಬ್ಬಂಟಿಯಾದ ಪರ್ವಿನ್ ಶೂಟಿಂಗ್ ಮುಗಿಸಿ ಇಟಲಿಗೆ ಹೋಗುತ್ತಿದ್ದಳು. ವಿಧಿ ವಿಪರ್ಯಾಸ ಎಂಬಂತೆ ಅಲ್ಲಿ ಕಬೀರ್ ಹೆಚ್ಚು ಜನಪ್ರಿಯನಾಗತೊಡಗಿದ್ದ, ಅಷ್ಟೇ ಅಲ್ಲ ಆರ್ಥಿಕವಾಗಿಯೂ ಹಿಡಿತ ಸಾಧಿಸಿದ್ದ. ಇದರಿಂದಾಗಿ ಕಬೀರ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಆತನ ಜೊತೆಗಿನ ಮದುವೆ ಕನಸನ್ನು ಕೈಬಿಟ್ಟು ಮತ್ತೆ ಮುಂಬೈಗೆ ವಾಪಸ್ಸಾಗಿದ್ದಳು.

ಟೈಮ್ ಮ್ಯಾಗಜೀನ್ ನಲ್ಲಿ ಪರ್ವಿನ್ ಬಾಬಿಯ ಫೋಟೋ ಪ್ರಕಟವಾದ ಮೇಲೆ ಆಕೆ ಸ್ಟಾರ್ ಗಿರಿ ಮೇಲಕ್ಕೇರತೊಡಗಿತ್ತು. 1977ರ ಹೊತ್ತಿಗೆ ಮಹೇಶ್ ಭಟ್ ಪರ್ವಿನ್ ಬಾಬಿಯ ಜೀವನದಲ್ಲಿ ಪ್ರವೇಶಿಸಿಬಿಟ್ಟಿದ್ದರು. ಅಂದ ಹಾಗೆ ಮಹೇಶ್ ಭಟ್ ಗೆ ಕೂಡಾ ಅದಾಗಲೇ ಮದುವೆಯಾಗಿತ್ತು. ಇವರಿಬ್ಬರ ಲವ್ ಸ್ಟೋರಿ ಬಾಲಿವುಡ್ ನಲ್ಲಿ ದಂತಕಥೆಯಾಗಿದೆ. ವಿಪರ್ಯಾಸ ಎಂದರೆ ಆಗ ಮಹೇಶ್ ಭಟ್ ಅಪರಿಚಿತ ವ್ಯಕ್ತಿಯಷ್ಟೇ! ಎಲ್ಲಕ್ಕಿಂತ ಹೆಚ್ಚಾಗಿ ಪರ್ವಿನ್ ಬಾಬಿಯ ಬಾಯ್ ಫ್ರೆಂಡ್ ಅಂತ ಗುರುತಿಸಲ್ಪಟ್ಟಿದ್ದರು!

ಅಮರ್ ಅಕ್ಬರ್ ಅಂತೋನಿ ಮತ್ತು ಕಾಲಾ ಪತ್ಥರ್ ಸಿನಿಮಾದಲ್ಲಿ ಪರ್ವಿನ್ ಬ್ಯೂಸಿಯಾಗಿದ್ದಳು. ಆಗ ಬಾಬಿ ಜೀವನದಲ್ಲಿ ಸೋಲು ಎಂಬುದಕ್ಕೆ ಸ್ಥಳವೇ ಇಲ್ಲವಾಗಿತ್ತು. ಅದಾಗಲೇ ಸ್ಟಾರ್ ಪಟ್ಟ ಏರಿದ್ದಳು. ಸಾದಾ ಸೀದಾ ಬದುಕು ಸಾಗಿಸುತ್ತಿದ್ದ ಪರ್ವಿನ್ ಮಹೇಶ್ ಭಟ್ ಅವರನ್ನು ಇನ್ನಿಲ್ಲದಂತೆ ಪ್ರೀತಿಸತೊಡಗಿದ್ದಳು. 1979ರ ಒಂದು ಸಂಜೆ ಮಹೇಶ್ ಭಟ್ ಗೆ ಆಕೆಯ ಜೀವನದ ಅತೀ ದೊಡ್ಡ ಸತ್ಯವೊಂದು ತಿಳಿದು ಬಿಟ್ಟಿತ್ತು.!

ಅಂದು ಪರ್ವಿನ್ ಮಾಡಿದ್ದೇನು?

ಮಹೇಶ್ ಭಟ್ ಮನೆಗೆ ಬಂದಾಗ ಮನೆಯ ಮೂಲೆಯಲ್ಲಿ ಪರ್ವಿನ್ ಸಿನಿಮಾ ಡ್ರೆಸ್ ಹಾಕಿಕೊಂಡು ಕುಳಿತುಕೊಂಡಿದ್ದಳು. ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಳು. ಮಹೇಶ್ ಭಟ್ ಅವರನ್ನು ನೋಡುತ್ತಿದ್ದಂತೆಯೇ ಆಕ್ರೋಶಿತಳಾದ ಪರ್ವಿನ್ ಬಾಬಿ, ಮಾತನಾಡಬೇಡ. ಕೋಣೆಯ ಬಾಗಿಲು ಮುಚ್ಚು..ಅವರೆಲ್ಲ ನನ್ನ ಕೊಲ್ಲಲು ಯತ್ನಿಸುತ್ತಿದ್ದಾರೆ..ಎಂಬಂತೆ ಬಡಬಡಿಸತೊಡಗಿದ್ದಳು. ಈ ಸ್ಥಿತಿಯಲ್ಲಿ ಪರ್ವಿನ್ ಬಾಬಿಯನ್ನು ಮಹೇಶ್ ಭಟ್ ಮೊದಲ ಬಾರಿ ಕಂಡಿದ್ದರು. ಹೌದು..ಪರ್ವಿನ್ ಬಾಬಿ ಮಾರಕ ಮಾನಸಿಕ(ಭ್ರಮೆ) ಖಾಯಿಲೆಗೆ ತುತ್ತಾಗಿದ್ದಳು.

ಸಂಶಯಗ್ರಸ್ತ ಮಾನಸಿಕ ಖಾಯಿಲೆಗೆ ಒಳಗಾದ ಪರ್ವಿನ್ ಬಾಬಿಯನ್ನು ಎಲೆಕ್ಟ್ರಿಕ್ ಶಾಕ್ ಟ್ರೀಟ್ ಮೆಂಟ್ ಕೊಡಿಸುವುದೇ ಸೂಕ್ತ ಎಂದು ನಿರ್ಮಾಪಕರು, ವೈದ್ಯರು ಸೂಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಹೇಶ್ ಭಟ್ ಗೆ ಮಾಜಿ ಪ್ರೇಮಿಗಳಾದ ಕಬೀರ್ ಬೇಡಿ, ಡ್ಯಾನಿ, ಅಮಿತಾಬ್ ಕೂಡಾ ನೆರವಿಗೆ ಧಾವಿಸಿದ್ದರು.

ಮಹೇಶ್ ಭಟ್ ಪರ್ವಿನ್ ಬಾಬಿಗೆ ಇಲೆಕ್ಟ್ರಿಕ್ ಶಾಕ್ ಟ್ರೀಟ್ ಮೆಂಟ್ ಕೊಡುವುದನ್ನು ವಿರೋಧಿಸುತ್ತಾರೆ. ಅಮೆರಿಕ, ಬೆಂಗಳೂರು ಮುಂತಾದ ಕಡೆ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಆ ಹೊತ್ತಿಗೆ ಆಕೆಯ ಮಾನಸಿಕ ಖಾಯಿಲೆ ಮಿತಿಮೀರಿರುತ್ತೆ. ಹೀಗೆ ಭಟ್ ನಿಧಾನಕ್ಕೆ ಆಕೆಯಿಂದ ದೂರ ಸರಿಯುವಂತೆ ಆಕೆಯ ಫಿಲೋಸಫರ್ ಯುಜಿ ಕೃಷ್ಣಮೂರ್ತಿ ಸಲಹೆ ನೀಡಿದ್ದರು!

ಸಿಐಎ, ಸಿಬಿಐ, ಕೆಜಿಬಿಯಿಂದ ಕೊಲ್ಲಲು ಯತ್ನ!

1983ರಲ್ಲಿ ಯಾರಿಗೂ ಯಾವ ಮಾಹಿತಿಯನ್ನು ನೀಡದೆ ಪರ್ವಿನ್ ಬೇಬಿ ನಿಗೂಢವಾಗಿ ನಾಪತ್ತೆಯಾಗಿದ್ದರಂತೆ. ವಿವಿಧ ವರದಿಗಳ ಪ್ರಕಾರ ಆಧ್ಯಾತ್ಮಿಕ ತಿರುಗಾಟದ ಹಿನ್ನೆಲೆಯಲ್ಲಿ ಅಮೆರಿಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಪರ್ವಿನ್ ಸಂಚರಿಸುತ್ತಿದ್ದರಂತೆ. 1984ರಲ್ಲಿ ಆಕೆಯನ್ನು ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ದಾಖಲೆ ತೋರಿಸುವಲ್ಲಿ ವಿಫಲವಾಗಿದ್ದರಿಂದ ಬಂಧಿಸಿಬಿಟ್ಟಿದ್ದರು. ಅನುಚಿತವಾಗಿ ವರ್ತಿಸಿದ್ದ ಬಾಬಿಯ ಕೈಗೆ ಕೋಳ ತೊಡಿಸಿ ಕರೆದೊಯ್ದು, ಬಳಿಕ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಭಾರತೀಯ ರಾಯಭಾರಿ ಮತ್ತು ಯುಜಿಕೆ ಆಸ್ಪತ್ರೆಗೆ ಭೇಟಿ ನೀಡಿದಾಗ ಸಹಜವಾಗಿ ನಕ್ಕು ಏನೂ ಆಗಲೇ ಇಲ್ಲ ಎಂಬಂತೆ ಆಕೆ ವರ್ತಿಸಿದ್ದಳಂತೆ!

ಭ್ರಮೆಯ ಖಾಯಿಲೆಯಿಂದ ಬಳಲುತ್ತಿದ್ದ ಆಕೆ ಬಿಲ್ ಕ್ಲಿಂಟನ್, ರೋಬರ್ಟ್ ರೆಡ್ ಫೋರ್ಡ್, ಪ್ರಿನ್ಸ್ ಚಾರ್ಲ್ಸ್, ಅಲ್ ಗೋರೆ, ರೋಮನ್ ಕ್ಯಾಥೋಲಿಕ್ ಚರ್ಚ್, ಸಿಐಎ, ಸಿಬಿಐ, ಕೆಜಿಬಿ, ಮೊಸ್ಸಾದ್ ತನ್ನ ಕೊಲ್ಲಲು ಯತ್ನಿಸುತ್ತಿರುವುದಾಗಿ ಪರ್ವಿನ್ ಆರೋಪಿಸಿದ್ದಳು. ಅಲ್ಲದೇ ಕೋರ್ಟ್ ಮೆಟ್ಟಿಲೇರಿದ್ದಳು. ಆದರೆ ಸಾಕ್ಷ್ಯಾಧಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. 1989ರಲ್ಲಿ ಸಿನಿಮಾ ಮ್ಯಾಗಜೀನ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಮಿತಾಬ್ ಬಚ್ಚ್ ಒಬ್ಬ ಅಂತಾರಾಷ್ಟ್ರೀಯ ಗ್ಯಾಂಗ್ ಸ್ಟರ್, ನನ್ನಿಂದ ದೂರವಾದ ಬಳಿಕ ಆತನ ಗೂಂಡಾಗಳು ನನ್ನ(ಬಾಬಿ) ಕಿಡ್ನಾಪ್ ಮಾಡಿ ದ್ವೀಪಪ್ರದೇಶವೊಂದರಲ್ಲಿ ಕೂಡಿ ಹಾಕಿ ಸರ್ಜರಿ ಮಾಡಿ ನನ್ನ ಕಿವಿಯ ಕೆಳಗೆ ಎಲೆಕ್ಟ್ರಾನಿಕ್ ಚಿಪ್ ವೊಂದನ್ನು ಇಟ್ಟಿದ್ದರು ಎಂದು ಆರೋಪಿಸಿದ್ದಳು.

ಹೀಗೆ ಹಲವಾರು ಏಳು ಬೀಳುಗಳನ್ನು ಕಂಡು ಭ್ರಮಾಲೋಕದ ಭೀತಿಯಲ್ಲಿಯೇ ಕಾಲ ಕಳೆದ ಪರ್ವಿನ್ ಬಾಬಿ 2005ರಲ್ಲಿ ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ನಿಜವಾದ ಕಾರಣ ಇಂದಿಗೂ ಬಹಿರಂಗವಾಗಿಲ್ಲ!

Tags:

ಪರ್ವಿನ್ ಬಾಬಿ

ಹಿಂದಿ ಸಿನಿಮಾರಂಗ

ನಿಗೂಢ ಸಾವು

Parveen Babi

Bollywood

mysterious death

Author/Source:

ನಾಗೇಂದ್ರ ತ್ರಾಸಿ

Thu, 25 Oct 2018 09:20:57 +0000 ntrasi 333542 at https://www.udayavani.com https://www.udayavani.com/kannada/news/web-focus/333542/babi-s-heart-wrenching-love-story-died-under-mysterious-circumstances#comments ನಟ ವಜ್ರಮುನಿಯ ಬೆಚ್ಚಿಬೀಳಿಸೋ “ವಿಲನ್” ಪಾತ್ರದ ಹಿಂದೆ ಅದೆಷ್ಟು ನೋವು! https://www.udayavani.com/kannada/news/web-focus/332115/vajramuni-is-best-villains-of-kannada-film-industry

ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯ, ಗಡಸು ಕಂಠದಿಂದಲೇ ಖಳನಟನ ಪಾತ್ರಕ್ಕೆ ಜೀವ ತುಂಬುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು ಈ ನಟ. ಸ್ಯಾಂಡಲ್ ವುಡ್ ನಲ್ಲಿ ಕೆಡಿ ನಾಗಪ್ಪ ಹಾಗೂ ರಂಗಾ ಅವರು ವಿಲನ್ ಪಾತ್ರದಲ್ಲಿ ಮಿಂಚಿದ್ದು, ಬಳಿಕ ಆ ಸ್ಥಾನವನ್ನು ಆಕ್ರಮಿಸಿಕೊಂಡವರು ಇವರೇ..ತಮ್ಮ ಖಳನಾಯಕನ ಪಾತ್ರದಿಂದಲೇ ನಟ ಭಯಂಕರ ಎಂದು ಖ್ಯಾತಿ ಪಡೆದಿದ್ದರು..ಹೌದು ಇವರು ಬೇರಾರು ಅಲ್ಲ..ವಜ್ರಮುನಿ!

ಕಾಲೇಜು ಶಿಕ್ಷಣದಿಂದ ಡ್ರಾಪ್ ಔಟ್ ಆಗಿದ್ದ ವಜ್ರಮುನಿಯವರು ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಪ್ರಚಂಡ ರಾವಣ, ಕುರುಕ್ಷೇತ್ರದಂತಹ ನಾಟಕಗಳಲ್ಲಿ ವಜ್ರಮುನಿ ಮಿಂಚುವ ಮೂಲಕ ಜನಪ್ರಿಯತೆ ಪಡೆದಿದ್ದರು. ತಮ್ಮ ಅಪರಿಚಿತ ಗೆಳೆಯನೊಂದಿಗೆ ಅದೃಷ್ಟ ಪರೀಕ್ಷೆಗಾಗಿ ಮಹಾನಗರಿ ಮುಂಬೈಯತ್ತ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಆಡಿಷನ್ ನೀಡಿದ್ದರೂ, ಅದರಲ್ಲಿ ಆಯ್ಕೆಯಾಗಿದ್ದು ಮಾತ್ರ ವಜ್ರಮುನಿ. ಯಾಕೆಂದರೆ ವಜ್ರಮುನಿ ನೀನಾಸಂ ಹಿನ್ನೆಲೆಯಿಂದ ಬಂದಿರುವುದು ಕಾರಣವಾಗಿತ್ತು. ಆದರೆ ಮುಂಬೈಗೆ ಗುಡ್ ಬೈ ಹೇಳಿ ಅವರು ವಾಪಸ್ ಆಗಿದ್ದರು.

ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರ ಪ್ರಚಂಡ ರಾವಣ ನಾಟಕದಲ್ಲಿ ವಜ್ರಮುನಿ ಅವರ ನಟನೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ತುಂಬಾ ಇಷ್ಟವಾಗಿತ್ತು..ಹೀಗೆ ತಮ್ಮ ಸಾವಿರ ಮೆಟ್ಟಿಲು ಸಿನಿಮಾದಲ್ಲಿ ವಜ್ರಮುನಿಗೆ ಅವಕಾಶ ಕೊಟ್ಟರು. ವಿಪರ್ಯಾಸ ಎಂಬಂತೆ ಆ ಸಿನಿಮಾ ತೆರೆಕಾಣಲಿಲ್ಲವಾಗಿತ್ತು. ತದನಂತರ ಪುಟ್ಟಣ್ಣ ಅವರು ಮಲ್ಲಮ್ಮನ ಪವಾಡ ಸಿನಿಮಾ ಆರಂಭಿಸಲು ನಿರ್ಧರಿಸಿದ್ದರಂತೆ. ಇದು ಕಾದಂಬರಿ ಆಧಾರಿತ ಸಿನಿಮಾವಾಗಿತ್ತು. ಇದಕ್ಕೂ ಮೊದಲು 1955ರಲ್ಲಿ ತೆಲುಗಿನಲ್ಲಿ ಅರ್ಧಾಂಗಿ ಸಿನಿಮಾ ಬಿಡುಗಡೆಯಾಗಿತ್ತು. ಮಲ್ಲಮ್ಮನ ಪವಾಡದ ರೀತಿಯೇ ಕಾದಂಬರಿ ಆಧರಿತ ಚಿತ್ರವಾಗಿತ್ತು. 1975ರಲ್ಲಿ ಅರ್ಧಾಂಗಿ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಪೆಣ್ಣಿನ್ ಪೆರುಮಾಯಿ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಮಲ್ಲಮ್ಮನ ಪವಾಡ ಸಿನಿಮಾದ ನಿರ್ಮಾಪಕರು ನಾಯಕ ನಟನಾಗಿ ಉದಯ್ ಕುಮಾರ್ ಅವರನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದು ಹೇಳಿದ್ದರಂತೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಮಾಡಿದ್ದ ಪಾತ್ರ ಕನ್ನಡದಲ್ಲಿ ಉದಯ್ ಕುಮಾರ್ ಮಾಡಲಿ ಎಂಬ ಆಶಯ ನಿರ್ಮಾಪಕರದ್ದಾಗಿತ್ತಂತೆ. ಇದಕ್ಕೆ ಪುಟ್ಟಣ್ಣ ಕಣಗಾಲ್ ಅವರು ಸಹಮತ ನೀಡದೆ ವಜ್ರಮುನಿಯನ್ನೇ ಆಯ್ಕೆ ಮಾಡಿದ್ದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ವಜ್ರಮುನಿ ಹಿಂದಿರುಗಿ ನೋಡಲೇ ಇಲ್ಲ.

ಅವೆಲ್ಲಕ್ಕಿಂತ ಹೆಚ್ಚಾಗಿ ವಜ್ರಮುನಿ ಅವರು ಖಳನಟನಾಗಬೇಕೆಂದು ಸಿನಿಮಾರಂಗಕ್ಕೆ ಬಂದಿರಲಿಲ್ಲವಾಗಿತ್ತು. ನಾಯಕನಟನಾಗಲು ಬಯಸಿದ್ದ ಅವರನ್ನು ಪ್ರೇಕ್ಷಕ ಇಷ್ಟಪಟ್ಟಿದ್ದು ಮಾತ್ರ ಖಳನಟನಾಗಿ..ಕೊನೆಗೆ ಖಳನಟನ ಪಾತ್ರದಿಂದಲೇ ಜನಾನುರಾಗಿಯಾದರು.  ವಜ್ರಮುನಿ ನಟನೆಯ ಬೆಂಕಿ ಉಂಡೆ ಉಗುಳುವ ಕೆಂಪು ಕಣ್ಣು..ಆಕ್ರೋಶ..ಜೊತೆ, ಜೊತೆಗೆ ಕಂಚಿನ ಕಂಠದ ನಗು ಯಾರು ತಾನೇ ಮರೆಯಲು ಸಾಧ್ಯ.

ಗೆಜ್ಜೆ ಪೂಜೆ, ಸಿಪಾಯಿ ರಾಮು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ಕುಳ್ಳ ಏಜೆಂಟ್ 000, ಭಲೇ ಹುಚ್ಚ, ಮೂರುವರೆ ವಜ್ರಗಳು, ಮಯೂರ, ಸಂಪತ್ತಿಗೆ ಸವಾಲ್, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಗಿರಿ ಕನ್ಯೆ, ಶಂಕರ್ ಗುರು ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿದ್ದರು ವಜ್ರಮುನಿ.

ಡೈನಾಮಿಕ್ ವಜ್ರಮುನಿ ಅವರ ಗಡಸು ಕಂಠ ಸಿನಿಮಾ ಥಿಯೇಟರ್ ನೊಳಗೆ ಎಂತಹ ಗುಂಡಿಗೆಯನ್ನೂ ಒಮ್ಮೆ ಬೆಚ್ಚಿ ಬೀಳಿಸಬೇಕು. ಅಂತಹ ಅದ್ಭುತ ನಟರಾಗಿದ್ದವರು ವಜ್ರಮುನಿ. ಸಾಲು, ಸಾಲು ಚಿತ್ರಗಳಲ್ಲಿ ಖಳನಟನಾಗಿ ನಟಿಸಿ ಕನ್ನಡ ಚಿತ್ರಪ್ರೇಮಿಗಳ ಮನಗೆದ್ದಿದ್ದರು. ವಜ್ರಮುನಿ ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು.

ತೆರೆಮೇಲೆ ಕ್ರೂರಿಯಾಗಿ ಕಾಣುವ, ರೇಪ್ ದೃಶ್ಯಗಳಲ್ಲಿ ಅಟ್ಟಹಾಸ ಮೆರೆಯುವ ವಜ್ರಮುನಿಯವರ ನಟನೆ ಎಂತಹವರಲ್ಲೂ ಕೋಪ ತರಿಸುತ್ತೆ. ಕಠೋರ ಪಾತ್ರಗಳಿಗೆ ಜೀವ ತುಂಬುತ್ತಿದ್ದ ವಜ್ರಮುನಿಯವರು ನಿಜಜೀವನದಲ್ಲಿ ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದರಂತೆ. ಅದಕ್ಕೊಂದು ಉದಾಹರಣೆ..ಚಿತ್ರೀಕರಣದ ವೇಳೆ ರೇಪ್ ದೃಶ್ಯಗಳಿದ್ದರೆ ವಜ್ರಮುನಿಯವರು ಮೊದಲು ಆ ಪಾತ್ರ ಮಾಡುವ ನಟಿಯ ಬಳಿ ಕ್ಷಮೆಯಾಚಿಸುತ್ತಿದ್ದರಂತೆ. ನೋಡಮ್ಮ ಇದು ನನ್ನ ವೃತ್ತಿ..ಕರ್ಮ ಏನ್ ಮಾಡೋದು. ದಯವಿಟ್ಟು ತಪ್ಪು ಭಾವಿಸಬೇಡ ಎಂದು ಹೇಳುತ್ತಿದ್ದರಂತೆ.

ತನಗೆ ಕೊಟ್ಟ ಪಾತ್ರವನ್ನು ತಾನೇ ಆವಾಹಿಸಿಕೊಂಡು ನಟಿಸುವುದು ವಜ್ರಮುನಿಯವರ ಗುಣವಾಗಿತ್ತು. ಅದಕ್ಕಾಗಿಯೇ ಮೃದು ಸ್ವಭಾವದ ವಜ್ರಮುನಿಯವರು ಖಳನಟನ ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಕಠಿಣ ಪರಿಶ್ರಮ ಪಡುತ್ತಿದ್ದರಂತೆ. ಹೀಗೆ ಪಾತ್ರಕ್ಕೆ ಜೀವತುಂಬುತ್ತಲೇ ತಮ್ಮ ಆರೋಗ್ಯ ನಿರ್ಲಕ್ಷಿಸಿಬಿಟ್ಟಿದ್ದರಂತೆ. ಅದರ ಪರಿಣಾಮ 1999ರ ಹೊತ್ತಿಗೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ದೈಹಿಕವಾಗಿ ನಿತ್ರಾಣಕ್ಕೊಳಗಾದ ವಜ್ರಮುನಿಯವರು 2000ನೇ ಇಸವಿ ಹೊತ್ತಿಗೆ ಹಲವು ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. 2006ರ ಜನವರಿ 5ರಂದು ನಟಭಯಂಕರ ಎನ್ನಿಸಿಕೊಂಡಿದ್ದ ವಜ್ರಮುನಿ ಇಹಲೋಕ ತ್ಯಜಿಸಿದ್ದರು. ಅದ್ಭುತ ನಟ ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ 2006ರಲ್ಲಿ ಜೀವಮಾನದ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಕಂಚಿನ ಕಂಠ, ನಗುವಿನ ಮೂಲಕ ಇಂದಿಗೂ ವಜ್ರಮುನಿ ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ಅಜರಾಮರಾಗಿದ್ದಾರೆ…

Tags:

ಪುಟ್ಟಣ್ಣ ಕಣಗಾಲ್

ವಿಲನ್

ವಜ್ರಮುನಿ

Author/Source:

ನಾಗೇಂದ್ರ ತ್ರಾಸಿ

Thu, 18 Oct 2018 08:27:05 +0000 ntrasi 332115 at https://www.udayavani.com https://www.udayavani.com/kannada/news/web-focus/332115/vajramuni-is-best-villains-of-kannada-film-industry#comments ಹಾಸ್ಯದ ಹೊನಲು…ನಟ ಮುಸುರಿಯ “ಆ ನಗುವಿನ” ಶೈಲಿ ಮರೆಯಲು ಸಾಧ್ಯವೇ? https://www.udayavani.com/kannada/news/web-focus/328956/kannada-actor-musuri-krishnamurthy

ಕನ್ನಡ ಚಿತ್ರರಂಗದ ಮರೆಯಲಾರದ ಹಾಸ್ಯ ನಟರಲ್ಲಿ “ಮುಸುರಿ ಕೃಷ್ಣಮೂರ್ತಿ” ಕೂಡಾ ಒಬ್ಬರು. ಮುಸುರಿಯ ನಗು, ಕುಹಕದ ಧ್ವನಿ, ನಟನೆಯನ್ನು ಇಷ್ಟಪಡದವರು ಯಾರು. ಇಂದಿಗೂ ಅವರ ಸಿನಿಮಾ ನೋಡಿದರೆ ಮುಸುರಿ, ಬಾಲಣ್ಣ, ದಿನೇಶ್, ನರಸಿಂಹರಾಜು, ಧೀರೇಂದ್ರ ಗೋಪಾಲ್,ಉಮೇಶ್ ನಟನೆ ಕಣ್ಣ ಮುಂದೆ ಹಾದು ಹೋಗುತ್ತದೆ. ಕೃಷ್ಣಮೂರ್ತಿ ಅವರು ಬಾಲಕನಾಗಿದ್ದಾಗಲೇ ಹಾಡು ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.

ಕೃಷ್ಣ ಮೂರ್ತಿ ಅವರು ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೇ ಇವರ ಅದ್ಭುತ ನಟನೆಯನ್ನು ಕಂಡ ಅಂದಿನ ಕನ್ನಡ ಚಿತ್ರರಂಗದ ಹೆಸರಾಂತ ಗೀತರಚನೆಕಾರರಾಗಿದ್ದ ಕಣಗಾಲ್ ಪ್ರಭಾಕರ್ ಶಾಸ್ತ್ರಿ (ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಹೋದರ) ಅವರು ತಮ್ಮ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ನಟನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರಂತೆ.

ಹೀಗೆ ಗುಬ್ಬಿ ವೀರಣ್ಣ ನಾಟಕ ಕಂಪನಿ, ನಂತರ ಮಾಸ್ಟರ್ ಹಿರಣ್ಣಯ್ಯ ತಂದೆ ಕೆ.ಹಿರಣ್ಣನ್ಯನವರ ನಾಟಕ ಮಂಡಳಿ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ನಟಿಸಿ ಬೇಷ್ ಎನ್ನಿಸಿಕೊಂಡಿದ್ದರು ಕೃಷ್ಣಮೂರ್ತಿ. 1943ರಲ್ಲಿ ಪಿಟೀಲು ಚೌಡಯ್ಯನವರು ನಿರ್ಮಿಸಿದ್ದ ವಾಣಿ ಸಿನಿಮಾದ ಮೂಲಕ ಕೃಷ್ಣಮೂರ್ತಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆಗ ಅವರು 13 ವರ್ಷದ ಹುಡುಗ! ವಾಣಿ ಸಿನಿಮಾದ ನಂತರ ಬರೋಬ್ಬರಿ ಹತ್ತು ವರ್ಷಗಳ ಕಾಲ ಕೃಷ್ಣಮೂರ್ತಿಯವರಿಗೆ ಯಾವ ಅವಕಾಶವೂ ಒದಗಿ ಬಂದಿಲ್ಲವಾಗಿತ್ತಂತೆ. ಈ ಸಂದರ್ಭದಲ್ಲಿ ಅವರು ತಮ್ಮದೇ “ಅಂಬಾ ಪ್ರಸಾದ ನಾಟಕ ಮಂಡಳಿ ಸಂಸ್ಥೆ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿ ಜೀವನ ಸಾಗಿಸಿದ್ದರಂತೆ. ಆದರೆ ಅಲ್ಲಿನ ಭಾರೀ ಖರ್ಚು, ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೇ 1966ರಲ್ಲಿ ನಾಟಕ ಕಂಪನಿಯನ್ನು ಮುಚ್ಚಿ ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿದ್ದರಂತೆ.

ಕೃಷ್ಣಮೂರ್ತಿ ಅವರು “ಮುಸುರಿ” ಆಗಿದ್ದೇಗೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ನಟನ ಹೆಸರಿನ ಹಿಂದೆ ಒಂದೊಂದು ಕಥೆ ಇರುತ್ತೆ. ಚಿತ್ರರಂಗಕ್ಕೆ ಬರುವ ಮೊದಲು ಇರುವ ಹೆಸರು ಚಿತ್ರರಂಗದಲ್ಲಿ ಖ್ಯಾತರಾಗುತ್ತಿದ್ದಂತೆಯೇ ಹೊಸ ಹೆಸರು ಅಂಟಿಕೊಳ್ಳುತ್ತದೆ. ಆದರೆ ಕೃಷ್ಣಮೂರ್ತಿ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲೇ ತಮ್ಮ ಪ್ರತಿಭೆಯಿಂದಲೇ “ಮುಸುರಿ” ಹೆಸರನ್ನು ಸಂಪಾದಿಸಿಕೊಂಡಿದ್ದರು. ಪ್ರಸಿದ್ಧ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಂದಿನ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮ್ಮುಖದಲ್ಲಿ ಕೃಷ್ಣಮೂರ್ತಿ ಅವರು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಈ ಹಾಡನ್ನ ಮಹಾರಾಜ ನಾಲ್ವಡಿ ಅವರು ತುಂಬಾ ಮೆಚ್ಚಿಕೊಂಡು ಮುಸುರಿ ಸುಬ್ರಹ್ಮಣ್ಯ ಅವರ ಜೊತೆ ಹೋಲಿಕೆ ಮಾಡಿ ಬಹುಪರಾಕ್ ಹೇಳಿದ್ದರಂತೆ. ಬಳಿಕ ಎಲ್ಲರೂ ಅವರನ್ನು ಮುಸುರಿ ಕೃಷ್ಣಮೂರ್ತಿ ಎಂದೇ ಕರೆಯತೊಡಗಿದ್ದರಂತೆ.!

ಹೀಗೆ ಹಾಡು, ನಾಟಕ, ಸಿನಿಮಾದಲ್ಲಿ ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿದ್ದ ಕೃಷ್ಣಮೂರ್ತಿ 1953ರಲ್ಲಿ ಮಂಗಳಾ ಗೌರಿ, ಕನ್ಯಾದಾನ ಸಿನಿಮಾಗಳಲ್ಲಿ ಪ್ರಮುಖ ನಟರಾಗಿ ನಟಿಸಿ ಜನಪ್ರಿಯರಾಗತೊಡಗಿದ್ದರು. ಆ ಕಾಲದ ಪ್ರಸಿದ್ಧ ನಿರ್ದೇಶಕರಾದ ಶಂಕರ್ ಸಿಂಗ್, ಬಿ.ವಿಠಲಾಚಾರ್ಯ, ಬಿಆರ್ ಪಂತುಲು ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲ ಖ್ಯಾತ ಗೀತರಚನೆಕಾರ, ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಪದ್ಯ ಬರೆಯುವುದನ್ನು ಕಲಿತಿದ್ದರು. ನಾಟಕ, ಸಿನಿಮಾ, ನಾಟಕ ಬಳಿಕ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದ ಮುಸುರಿ ಕೃಷ್ಣಮೂರ್ತಿ ಅವರು ಹಾಸ್ಯ ನಟನಾಗಿ, ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು.

1978ರಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪಡುವಾರಳ್ಳಿ ಪಾಂಡವರು ಸಿನಿಮಾದಲ್ಲಿನ ಕನೆಕ್ಷನ್ ಕಾಳಪ್ಪ ಪಾತ್ರ ಮುಸುರಿ ಕೃಷ್ಣಮೂರ್ತಿ ಅವರು ಹೆಚ್ಚು ಜನಪ್ರಿಯರಾಗಿದ್ದರು. ಅದೇ ರೀತಿ 1980ರಲ್ಲಿ ಬಿಡುಗಡೆ ಕಂಡಿದ್ದ ಧರ್ಮ ಸೆರೆಯಲ್ಲಿ ಮುಸುರಿ ಅವರ ಅಭಿನಯ ಈಗಲೂ ನಿಮ್ಮಲ್ಲಿ ನಗು, ಸಿಟ್ಟು ತರಿಸುತ್ತೆ. ಗುರುಶಿಷ್ಯರು, ಅಂತ, ನನ್ನ ದೇವರು, ಹಾಲು ಜೇನು, ಕವಿರತ್ನ ಕಾಳಿದಾಸ ಸೇರಿದಂತೆ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರ ಮನದಲ್ಲಿ ತಮ್ಮ ನಟನೆಯ ಛಾಪನ್ನು ಅಚ್ಚೊತ್ತಿಬಿಟ್ಟಿರುವುದು ಸುಳ್ಳಲ್ಲ.

1981ರಲ್ಲಿ ಯಶಸ್ವಿನಿ ಎಂಟರ್ ಪ್ರೈಸಸ್ ಎಂಬ ಸಿನಿಮಾ ನಿರ್ಮಾಣ ಕಂಪನಿಯನ್ನು ಕೃಷ್ಣಮೂರ್ತಿ ಅವರು ಆರಂಭಿಸಿದ್ದರು. ನಂಬರ್ 5 ಎಕ್ಕಾ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಶ್ರೀನಾಥ್, ಜಯಮಾಲಾ ಅಭಿನಯಿಸಿದ್ದರು. ಸಿನಿಮಾ ನಿರ್ಮಾಪಕರಾದ ನಂತರವೂ ಮುಸುರಿ ಅವರು ಸಿನಿಮಾಗಳಲ್ಲಿ ನಟಿಸಿದ್ದರು. 1985ರಲ್ಲಿನ ವೀರಾಧಿ ವೀರ ಮುಸುರಿ ಅವರ ಕೊನೆಯ ಚಿತ್ರ. 55ನೇ(1985) ವಯಸ್ಸಿನಲ್ಲಿಯೇ  ಮುಸುರಿ ಅವರು ಇಹಲೋಕ ತ್ಯಜಿಸಿದ್ದರು. ಮಕ್ಕಳಾದ ಗುರುದತ್ ಮುಸುರಿ, ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

Tags:

ಮುಸುರಿ ಕೃಷ್ಣಮೂರ್ತಿ

ಕನ್ನಡ ಚಿತ್ರರಂಗ

ಮುಸುರಿ

Musuri Krishnamurthy

Musuri

kannada sandalwood

Author/Source:

ನಾಗೇಂದ್ರ ತ್ರಾಸಿ

Thu, 04 Oct 2018 07:47:34 +0000 ntrasi 328956 at https://www.udayavani.com https://www.udayavani.com/kannada/news/web-focus/328956/kannada-actor-musuri-krishnamurthy#comments ರಾಜ್ ಗಿಂತ ಮೊದಲು ನರಸಿಂಹರಾಜು ಕಾಲ್ ಶೀಟ್ ಗೆ ಹೆಚ್ಚು ಬೇಡಿಕೆ! https://www.udayavani.com/kannada/news/web-focus/327303/verstail-kannada-actor-narasimharaju

ಜಾಗತಿಕ ಚಿತ್ರರಂಗದಲ್ಲಿ ಚಾರ್ಲಿ ಚಾಪ್ಲಿನ್ ಹೇಗೋ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾದವರು ನಟ ನರಸಿಂಹರಾಜು. ಕನ್ನಡ ಚಿತ್ರರಂಗದ ಜನಪ್ರಿಯ ನಟ. ಆ ಕಾಲದಲ್ಲಿಯೇ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿದ್ದ ಹಾಸ್ಯ ನಟರಾಗಿದ್ದವರು. 50ರ ದಶಕದಿಂದ 79ರವರೆಗೆ ಸುಮಾರು 250 ಸಿನಿಮಾಗಳಲ್ಲಿ ತಿಪಟೂರು ರಾಮಾರಾಜು ನರಸಿಂಹರಾಜು ಅವರು ನಟಿಸಿ ಕನ್ನಡಿಗರ ಜನಮಾನಸದಲ್ಲಿ ಇಂದಿಗೂ ಹಾಸುಹೊಕ್ಕಾಗಿದ್ದಾರೆ.

ಬಾಲ ನಟನಾಗಿ ಮಿಂಚಿದ್ದ ನರಸಿಂಹ ರಾಜು ಹಾಸ್ಯ ಚಕ್ರವರ್ತಿಯಾಗಿ ಮೆರೆದಿದ್ದರು!

ಕೇವಲ 4 ವರ್ಷದ ಬಾಲಕನಾಗಿದ್ದಾಗಲೇ ನರಸಿಂಹರಾಜು ಅವರು ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ್ದರು.  ರಂಗಭೂಮಿಯಲ್ಲಿನ ಪೌರಾಣಿಕ ಪಾತ್ರಗಳಾದ ರಾಮ, ವಿಶ್ವಾಮಿತ್ರ, ರಾವಣ, ಭರತ ಸೇರಿದಂತೆ ಬೇಡರ ಕಣ್ಣಪ್ಪ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನರಸಿಂಹ ರಾಜು ಜನಪ್ರಿಯತೆ ಪಡೆದಿದ್ದರು. ಹೀಗೆ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ಬಣ್ಣ ಹಚ್ಚುವ ಮೂಲಕ ಸುಮಾರು 27 ವರ್ಷಗಳಷ್ಟು ಕಾಲ ರಂಗಭೂಮಿಯಲ್ಲಿಯೇ ಕಳೆದಿದ್ದರು.

ನರಸಿಂಹರಾಜು ಅವರ ತಂದೆ ರಾಮರಾಜು ಅವರು ಪೊಲೀಸ್ ಇಲಾಖೆಯ ನೌಕರರಾಗಿದ್ದರು. ತಾಯಿ ವೆಂಕಟಲಕ್ಷ್ಮಮ್ಮ. ಒಂದು ಬಾರಿ ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರು ಬಾಲಕ ನರಸಿಂಹರಾಜು ಅವರನ್ನು ಚಂದ್ರಮೌಳೀಶ್ವರ ನಾಟಕ ಕಂಪನಿಯ ನಾಟಕಕ್ಕೆ ಕರೆದೊಯ್ದಿದ್ದರು. ಆಗ ನರಸಿಂಹ ರಾಜು ಅವರು ನಾಟಕ ನೋಡುವಲ್ಲಿ ತನ್ಮಯರಾಗಿರುವುದನ್ನು ಚಿಕ್ಕಪ್ಪ ಗಮನಿಸಿದ್ದರು. ತದನಂತರ ಚಿಕ್ಕಪ್ಪ ನರಸಿಂಹರಾಜು ಅವರನ್ನು ಮಲ್ಲಪ್ಪನವರ ನಾಟಕ ಕಂಪನಿಗೆ ಸೇರಿಸಿದ್ದರು. ಆದರೆ ಮಗನ ನಾಟಕದ ಹುಚ್ಚು ತಾಯಿಗೆ ಇಷ್ಟವಿರಲಿಲ್ಲವಾಗಿತ್ತು. ಅಂತೂ ಸಿನಿಮಾ ನಟರಾಗಿ ಖ್ಯಾತರಾದ ನಂತರವೂ ನರಸಿಂಹರಾಜು ಅವರು ರಂಗಭೂಮಿಯಲ್ಲಿ ನಟಿಸುವುದನ್ನು ಕಡೆಗಣಿಸಿರಲಿಲ್ಲವಾಗಿತ್ತು.

1954ರಲ್ಲಿ ರಾಜ್ ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನರಸಿಂಹರಾಜು ಅವರು ನಟಿಸುವ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. ಡಾ.ರಾಜ್ ಹಾಗೂ ನರಸಿಂಹ ರಾಜು ಇಬ್ಬರೂ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಆಪ್ತ ಸ್ನೇಹಿತರಾಗಿದ್ದರು. ನರಸಿಂಹರಾಜು ಅವರು ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಅವರ ಅಭಿನಯದಿಂದ ಪ್ರಭಾವಿತರಾಗಿದ್ದರು. ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹರಾಜು ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಅವರು ಏರಿದ ಎತ್ತರ ಇಂದು ನಮ್ಮ ಕಣ್ಣ ಮುಂದಿದೆ.

ಮಕ್ಕಳ ರಾಜ್ಯ ಸಿನಿಮಾದಲ್ಲಿ ಎರಡನೇ ನಾಯಕನಾಗಿ ನಟಿಸಿದ್ದ ನರಸಿಂಹರಾಜು ಅವರು, ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕನಾಗಿ ಮಾಡಿದ ಪಾತ್ರ ಇಂದಿಗೂ ಮರೆಯುಂತಿಲ್ಲ. ಹೀಗೆ ತಮ್ಮ ಉಬ್ಬು ಹಲ್ಲು, ಸಪೂರ ಶರೀರ, ಅದ್ಭುತ ಆಂಗಿಕ ಅಭಿನಯದ ಮೂಲಕವೇ ನೂರಾರು ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ರಂಜಿಸಿದ್ದರು.

ಶ್ರೀಕೃಷ್ಣದೇವರಾಯ ಚಿತ್ರದಲ್ಲಿನ ನರಸಿಂಹರಾಜು ಅವರ ತೆನಾಲಿ ರಾಮಕೃಷ್ಣ ಪಾತ್ರ, ವೀರಕೇಸರಿ, ನಕ್ಕರೆ ಅದೇ ಸ್ವರ್ಗ, ಪ್ರೀತಿ ಮಾಡು ತಮಾಷೆ ನೋಡು, ಸಾಕ್ಷಾತ್ಕಾರ, ಸಂಧ್ಯಾರಾಗ ಮುಂತಾದ ಸಿನಿಮಾಗಳು ಪ್ರಮುಖವಾದವುಗಳು.

ಡಾ.ರಾಜ್ ಗಿಂತ ಮೊದಲು ನರಸಿಂಹರಾಜು ಅವರಿಗೆ ಡಿಮ್ಯಾಂಡ್ ಹೆಚ್ಚಿತ್ತು!

ಹೌದು ಕನ್ನಡ ಚಿತ್ರರಂಗದಲ್ಲಿ ಪ್ರೊಫೆಸರ್ ಹುಚ್ಚೂರಾಯ ಸಿನಿಮಾದ ಮೂಲಕ ನಾಯಕ ನಟನಾಗಿ ನರಸಿಂಹರಾಜು ಅವರು ಅಭಿನಯಿಸಿದ್ದರು. ಅವೆಲ್ಲಕ್ಕಿಂತ ಹೆಚ್ಚಾಗಿ ಆ ಕಾಲಕ್ಕೆ ಡಾ.ರಾಜ್ ಕುಮಾರ್ ಗೆ ಚಿತ್ರವೊಂದಕ್ಕೆ ಮೂರು ಸಾವಿರ ರೂಪಾಯಿ ಸಂಭಾವನೆ ಸಿಕ್ಕುತ್ತಿದ್ದಂತೆ. ಆದರೆ ನರಸಿಂಹರಾಜು ಅವರ ಕಾಲ್ ಶೀಟ್ ಗೆ ಐದು ಸಾವಿರ ರೂಪಾಯಿ ಸಂಭಾವನೆ ಇತ್ತಂತೆ. ಎಲ್ಲ ನಟರಿಗಿಂತಲೂ ಮೊದಲು ನಿರ್ಮಾಪಕರು ನರಸಿಂಹರಾಜು ಅವರ ಮನೆ ಮುಂದೆ ಸಾಲುಗಟ್ಟಿ ನಿಂತು ಕಾಲ್ ಶೀಟ್ ತೆಗೆದುಕೊಳ್ಳುತ್ತಿದ್ದರಂತೆ. ಮೊದಲು ನಿರ್ಮಾಪಕ, ನಿರ್ದೇಶಕರು ನರಸಿಂಹ ರಾಜು ಅವರ ಕಾಲ್ ಶೀಟ್ ಅನ್ನು ತೆಗೆದುಕೊಂಡ ನಂತರವೇ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಹೇಳಿದ ಮಾತು ನರಸಿಂಹರಾಜು ಅವರ ವ್ಯಕ್ತಿತ್ವಕ್ಕೆ ಹಿಡಿತ ಕನ್ನಡಿಯಾಗಿದೆ.

ಕನ್ನಡ ಸಿನಿಮಾರಂಗದಲ್ಲಿ ಮದ್ರಾಸ್ ಹಾಗೂ ಬೆಂಗಳೂರಿನಲ್ಲಿ ಮೊತ್ತ ಮೊದಲ ಮನೆ ನಿರ್ಮಿಸಿದ್ದ ಮೊದಲ ನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು. ಕುಟುಂಬದವರೊಂದಿಗೆ ಅತ್ಯಂತ ನಿಕಟವಾಗಿ ಕಾಲ ಕಳೆಯುತ್ತಿದ್ದ ಸ್ನೇಹಿ ಜೀವಿ ಅವರಾಗಿದ್ದರು.

ಏತನ್ಮಧ್ಯೆ ಅವರ ಪ್ರೀತಿಯ ಪುತ್ರನ ಅಕಾಲಿಕ ನಿಧನದಿಂದ ನರಸಿಂಹರಾಜು ಅವರು ದೈಹಿಕವಾಗಿ ಕುಸಿದು ಹೋಗಿದ್ದರು. ಹೀಗೆ ಮಕ್ಕಳು, ಮೊಮ್ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ನರಸಿಂಹರಾಜು ಅವರು ತಮ್ಮ 56ನೇ(1979, ಜುಲೈ 20) ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

2 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನರಸಿಂಹರಾಜು ಬಾಲಿವುಡ್ ಆಹ್ವಾನ ತಿರಸ್ಕರಿಸಿದ್ದರು!

ನರಸಿಂಹರಾಜು ಅವರು ಹಿಂದಿಯ ಚೋರಿ ಚೋರಿ(1956) ಮತ್ತು ಮಿಸ್ ಮೇರಿ (1957) ಚಿತ್ರದಲ್ಲಿ ನಟಿಸಿದ್ದರು. ರಾಜ್ ಕಪೂರ್ ಮತ್ತು ನರ್ಗಿಸ್ ಜೋಡಿಯ ಸೂಪರ್ ಹಿಟ್ ಚೋರಿ, ಚೋರಿ ಹಿಂದಿ ಚಿತ್ರದ ಪುಟ್ಟ ಹಾಸ್ಯ ಪಾತ್ರದಲ್ಲಿ ನರಸಿಂಹರಾಜು ಕಾಣಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಜ್ ಕಪೂರ್ ಅವರು, ನೀವು ನಮ್ಮ ಜೊತೆ ಬನ್ನಿ. ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗುತ್ತೀರಿ ಎಂದು ಆಹ್ವಾನಿಸಿದ್ದರಂತೆ. ಆದರೆ ನರಸಿಂಹರಾಜು ಅವರು, ನಾನು ಕನ್ನಡ ಚಿತ್ರರಂಗದಲ್ಲಿ ಖಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ ಎಂದು ಹೇಳಿದ್ದರಂತೆ. ಈ ವಿಷಯವನ್ನು ನರಸಿಂಹರಾಜು ಅವರ ಪತ್ನಿ ಶಾರದಮ್ಮ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

1960 ಹಾಗೂ 70ರ ದಶಕದವರೆಗೆ ಜನಮನ ರಂಜಿಸಿ, ಹಾಸ್ಯ ಬ್ರಹ್ಮನಾಗಿ ಮಿಂಚಿದ್ದ ನರಸಿಂಹರಾಜು ಅವರಿಗೆ ರಾಜ್ಯ ಸರ್ಕಾರ ಒಮ್ಮೆಯೂ ಪ್ರಶಸ್ತಿ ಕೊಟ್ಟಿಲ್ಲ. ಆದರೆ ಇಂದಿಗೂ ಕೋಟ್ಯಂತರ ಕನ್ನಡಿಗರ ಮನದಾಳದಲ್ಲಿ ಅಜರಾಮರಾಗಿದ್ದಾರೆ. ಅದೇ ಅವರ ಶ್ರೇಷ್ಠ ನಟನೆಗೆ ಸಂದ ಗೌರವವಾಗಿದೆ.

Tags:

ಚಾರ್ಲಿ ಚಾಪ್ಲಿನ್

ನರಸಿಂಹರಾಜು

ಹಾಸ್ಯ ಚಕ್ರವರ್ತಿ

Actor Narasimharaju

comedy stalwart

Hasya Chakravarti

Author/Source:

ನಾಗೇಂದ್ರ ತ್ರಾಸಿ

Thu, 27 Sep 2018 10:48:12 +0000 ntrasi 327303 at https://www.udayavani.com https://www.udayavani.com/kannada/news/web-focus/327303/verstail-kannada-actor-narasimharaju#comments ಬಾಲಕ ಭಕ್ತ ಪ್ರಹ್ಲಾದನಾಗಿ ಮಿಂಚಿದ್ದ ನಟ ಲೋಕೇಶ್ ಇಂದಿಗೂ ಅಜರಾಮರ!  https://www.udayavani.com/kannada/news/web-focus/324163/kannada-actor-lokesh

ಕನ್ನಡ ಚಿತ್ರರಂಗದ ನಟ ಲೋಕೇಶ್ ಅವರ ಅಭಿನಯ ಸದಾ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ಕಾಡುತ್ತಲೇ ಇರುತ್ತದೆ. ನಾಯಕ ನಟರಾಗಿ ಮಾತ್ರವಲ್ಲ, ಅನೇಕ ಚಿತ್ರಗಳಲ್ಲಿ ಪೋಷಕ ನಟನಾಗಿಯೂ ಅಭಿನಯಿಸಿದ್ದರು. ಪ್ರಸಿದ್ಧ ರಂಗ ಕಲಾವಿದರಾಗಿದ್ದ ಲೋಕೇಶ್ ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕ ನಟ. ಅಷ್ಟೇ ಅಲ್ಲ ಭುಜಂಗಯ್ಯನ ದಶಾವತಾರ ದಿ.ಆಲನಹಳ್ಳಿ ಕೃಷ್ಣ ಅವರ ವಿಶಿಷ್ಟ ಕಾದಂಬರಿಯನ್ನು ಚಿತ್ರ ಮಾಡುವ ಮೂಲಕ ನಿರ್ದೇಶನಕ್ಕೂ ಕೈ ಹಾಕಿ ಯಶಸ್ಸು ಪಡೆದ ಹೆಗ್ಗಳಿಕೆ ಲೋಕೇಶ್ ಅವರದ್ದು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್ ಪ್ರಭಾಕರ್ ಇವರೆಲ್ಲ ತಮ್ಮದೇ ಆದ ನಟನೆ ಹಾಗೂ ಫೈಟ್, ಡ್ಯುಯೆಟ್ ಮೂಲಕ ಪ್ರಸಿದ್ಧರಾಗಿದ್ದರು. ಆದರೆ ಲೋಕೇಶ್ ಅವರು ತಮ್ಮ ಸಹಜವಾಗಿ ಶ್ರೇಷ್ಠ ಅಭಿನಯ ನೀಡಿದ ಮಹಾನ್ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ..

ಲೋಕೇಶ್ ಅವರ ಹಾದಿ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ!
ತಮಗೆ ದೊರೆತ ಪಾತ್ರಕ್ಕೆ ತಕ್ಕಂತೆ ನಟಿಸಿ ಅದಕ್ಕೆ ಜೀವ ತುಂಬಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು ಲೋಕೇಶ್. ಕಷ್ಟ, ಕಾರ್ಪಣ್ಯಗಳ ಮೂಲಕ ಹೋರಾಡಿ ಕನ್ನಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿಕೊಂಡಿದ್ದಾರೆ.
ಲೋಕೇಶ್ ಅವರು ತಮ್ಮ 10ನೆಯ ವಯಸ್ಸಿಗೆ ಭಕ್ತ ಪ್ರಹ್ಲಾದನ ಪಾತ್ರ( ಡಾ.ರಾಜ್ ಕುಮಾರ್ ಅಭಿನಯಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾಕ್ಕಿಂತ ಮೊದಲು 1958ರಲ್ಲಿ ಎಚ್ ಎಸ್ ಕೃಷ್ಣಸ್ವಾಮಿ ಹಾಗೂ ಸುಬ್ಬಯ್ಯ ನಾಯ್ಡು ಅವರು ನಿರ್ದೇಶಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿನ ಪಾತ್ರ. ಇದರಲ್ಲಿ ಉದಯ್ ಕುಮಾರ್, ಕೆಎಸ್ ಅಶ್ವತ್ಥ್, ಲೀಲಾವತಿ, ಬಾಲಕ ಲೋಕೇಶ್ ನಟಿಸಿದ್ದರು) ಮಾಡುವ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು.

ಹುಣಸೂರು ಕೃಷ್ಣಮೂರ್ತಿ ಅವರ ಅಡ್ಡದಾರಿ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಲೋಕೇಶ್ ನಂತರ ಕೆಲವು ಕಾಲ ಕೆಲಸವಿಲ್ಲದೆ ಕುಳಿತಿದ್ದರು. ತದನಂತರ ಗಿರೀಶ್ ಕಾರ್ನಾಡ್ ಅವರ ಕಾಡು ಚಿತ್ರದಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಿದ್ದರು. ಭೂತಯ್ಯನ ಮಗ ಅಯ್ಯು ಕನ್ನಡ ಚಿತ್ರರಂಗದ ಮೈಲಿಗಲ್ಲಾದ ಚಿತ್ರ..ಇದರಲ್ಲಿ ಲೋಕೇಶ್ ಅವರ ಅಭಿನಯ ಪ್ರೇಕ್ಷಕರ ಮನದಾಳದಲ್ಲಿ ಅಚ್ಚೊತ್ತಿ ಬಿಟ್ಟಿತ್ತು. ಇದು ಅವರ ಅದ್ಭುತ ನಟನೆಗೆ ಸಾಕ್ಷಿ. ಭೂತಯ್ಯನ ಮಗ ಅಯ್ಯು ಚಿತ್ರ ತಮಿಳು, ಹಿಂದಿ ಹಾಗೂ ತೆಲುಗಿಗೆ ರಿಮೇಕ್ ಆಗಿತ್ತು.
ರಂಗಭೂಮಿಯಲ್ಲಿ ತಮ್ಮ ನಟನೆಯ ತಾಕತ್ತು ತೋರಿಸಿದ್ದ ಲೋಕೇಶ್ ಅವರು ಚಿತ್ರರಂಗದಲ್ಲಿಯೂ ಅದನ್ನು ಸಾಬೀತುಪಡಿಸಿದ್ದರು. ತಂದೆ ಸುಬ್ಬಯ್ಯ ನಾಯ್ಡು ಅವರು ರಂಗಭೂಮಿಯ ದಿಗ್ಗಜ ಎನ್ನಿಸಿಕೊಂಡಿದ್ದರು. ತಂದೆಯ ನಿಧನದ ನಂತರ ಲೋಕೇಶ್ ಅವರು ನಟರಂಗ ನಾಟಕ ರಂಗ ಕಟ್ಟಿದ್ದರು. ತುಘಲಕ್, ಕಾಕನಕೋಟೆ, ಷಹಜಹಾನ್, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ಮುಂತಾದ ಪ್ರಮುಖ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಗಳಿಸಿದ್ದರು. ಕಾಕನಕೋಟೆ ಸಿನಿಮಾದ ಮೂಲಕ ಲೋಕೇಶ್ ಅವರು ಮತ್ತಷ್ಟು ಜನಪ್ರಿಯಗೊಂಡಿದ್ದರು.

ಡಾಕ್ಟರ್ ಆಗಬೇಕೆಂದು ಆಗಿದ್ದು ನಟ...
ಲೋಕೇಶ್ ಅವರು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಕಲಿಕೆ ಅವರಿಗೆ ಪ್ರಯಾಸದಾಯಕವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಇಂಜೆಕ್ಷನ್ ಅಂದರೆ ಲೋಕೇಶ್ ಗೆ ಎಲ್ಲಿಲ್ಲದ ಭಯವಿತ್ತಂತೆ. ಕೊನೆಗೆ ಇಂಜಿನಿಯರ್ ಆಗೋದು ಬೇಡ, ಡಾಕ್ಟರ್ ಆಗೋದು ಬೇಡ ಎಂದು ಕಾಲಿಟ್ಟಿದ್ದು ಮತ್ತದೇ ನಟನೆಗೆ! ಅಂತೂ 1958ರಲ್ಲಿ ತೆರೆ ಕಂಡ ಭಕ್ತ ಪ್ರಹ್ಲಾದಲ್ಲಿ ಬಾಲ ನಟನಾಗಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

ನಿನಗಾಗಿ ನಾನು, ದೇವರ ಕಣ್ಣು, ಪರಿವರ್ತನೆ, ಕಾಕನಕೋಟೆ, ವಂಶ ಜ್ಯೋತಿ, ಪರಸಂಗದ ಗೆಂಡೆತಿಮ್ಮ, ಸುಳಿ, ಅದಲು ಬದಲು, ಮುಯ್ಯಿ, ದಾಹ, ಚಂದನದ ಗೊಂಬೆ, ಭಕ್ತ ಸಿರಿಯಾಳ, ಹದ್ದಿನ ಕಣ್ಣು, ಎಲ್ಲಿಂದಲೋ ಬಂದವರು, ಯಾವು ಹೂವು, ಯಾರ ಮುಡಿಗೋ ಹೀಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್ ಅವರು ಪರಭಾಷೆ ಚಿತ್ರಗಳಲ್ಲಿ ನಟಿಸದೇ ಕನ್ನಡ ಚಿತ್ರರಂಗದಲ್ಲಿಯೇ ಭದ್ರವಾಗಿ ನೆಲೆಯೂರಿ ಪ್ರೇಕ್ಷಕರ ಮನಗೆದ್ದಿದ್ದರು.

ಲೋಕೇಶ್ ಅವರ ನಾಟಕದಲ್ಲಿನ ಅದ್ಭುತ ಪಾತ್ರಕ್ಕೆ ಮನಸೋತಿದ್ದ ಗಿರಿಜಾ ಅವರು ಗೆಳತಿಯರಲ್ಲಿ ಪಂಥಕಟ್ಟಿ ಲೋಕೇಶ್ ಅವರನ್ನು ಮಾತನಾಡಿಸಿದ್ದರಂತೆ. ಹೀಗೆ ಬೆಳೆದ ಸ್ನೇಹದಿಂದಾಗಿಯೇ ಕೊನೆಗೆ ಇಬ್ಬರು ಸತಿ, ಪತಿಗಳಾಗಿದ್ದರು. ಹಿರಿಯರ ಒಪ್ಪಗೆಯೊಂದಿಗೆ ಲೋಕೇಶ್ ಹಾಗೂ ಗಿರಿಜಾ ಅವರು ದೇವಸ್ಥಾನವೊಂದರಲ್ಲಿ ಸರಳವಾಗಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಅದೇ ದಿನ ಕಲಾಕ್ಷೇತ್ರದಲ್ಲಿ ಇಬ್ಬರೂ ನಾಟಕದಲ್ಲಿ ಪಾತ್ರ ಮಾಡಿದ್ದರಂತೆ. ಅಲ್ಲಿ ಲೋಕೇಶ್ ಅಪ್ಪ, ಗಿರಿಜಾ ಅವರದ್ದು ಮಗಳ ಪಾತ್ರವಂತೆ. ನಾಟಕದ ಕೊನೆಯ ದೃಶ್ಯದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಳ್ಳುವ ಮೂಲಕ ದಂಪತಿಗಳಾಗುತ್ತಿದ್ದಾರೆ ಎಂದು ಅನೌನ್ಸ್ ಮಾಡಿದ್ದರು!
ಶಿಸ್ತು, ಮುಂಗೋಪಿ, ಮೂಡಿಯಾಗಿದ್ದ ಲೋಕೇಶರ ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆ ತಿಮ್ಮ ಹಾಗೂ ಬ್ಯಾಂಕರ್ ಮಾರ್ಗಯ್ಯ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಸೃಜನ್ ಹಾಗೂ ಪೂಜಾ ಲೋಕೇಶ್, ಪತ್ನಿ ಗಿರಿಜಾ ಜೊತೆ ಸಂತೃಪ್ತ ಜೀವನ ನಡೆಸುತ್ತಿದ್ದ ಲೋಕೇಶ್ ಅವರು 2004ರ ಅಕ್ಟೋಬರ್ 14ರಂದು ಇಹಲೋಕ ತ್ಯಜಿಸಿದ್ದರು. ಆದರೂ ಲೋಕೇಶ್ ಅವರ ಪಾತ್ರ ಇಂದಿಗೂ ನಮ್ಮನ್ನು ಕಾಡುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ...

Tags:

ಪರಸಂಗದ ಗೆಂಡೆ ತಿಮ್ಮ

ನಟ ಲೋಕೇಶ್

Actor Lokesh

Kannada cinema

Bhakta Prahlada

Author/Source:

ನಾಗೇಂದ್ರ ತ್ರಾಸಿ

Thu, 13 Sep 2018 18:01:47 +0000 ntrasi 324163 at https://www.udayavani.com https://www.udayavani.com/kannada/news/web-focus/324163/kannada-actor-lokesh#comments ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮೆಗಾಸ್ಟಾರ್ ಆಗಿದ್ದು ಹೇಗೆ? https://www.udayavani.com/kannada/news/web-focus/322223/inspirational-story-of-amitabh-bachchan

ಈ ನಟನ ಬದುಕೇ ಎಲ್ಲರಿಗೂ ಒಂದು ದೊಡ್ಡ ಪಾಠವಾಗಬಲ್ಲದು. ಘಟಾನುಘಟಿ ಸ್ಟಾರ್ ಗಳಿದ್ದ ಕಾಲದಲ್ಲಿ “ಇಂಕಿಲಾಬ್”(ಮೊದಲ ಹೆಸರು) ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟು ಬಿಟ್ಟಿದ್ದರು. ಆರಂಭದಲ್ಲೇ ಕೆಲಸಕ್ಕಾಗಿ ಅಲೆದಾಟ, ಹೋದಲ್ಲೆಲ್ಲಾ ರಿಜೆಕ್ಟ್ ಆಗಿ, ಸ್ಟಾರ್ ಆಗಿ ಮತ್ತೆ ಸೋಲು ಅನುಭವಿಸಿ, ಸಾವಿನ ಮನೆಯ ಕದ ತಟ್ಟಿ, ದಿವಾಳಿ ಅಂಚಿಗೆ ತಲುಪಿ…ಕೊನೆಗೆ ಜೀರೋದಿಂದ ಹೀರೋ ಆದ ಈ ಅದ್ಭುತ ನಟ ಬೇರಾರು ಅಲ್ಲ ಬಾಲಿವುಡ್ ಷಹನ್ ಶಾಹ ಅಮಿತಾಬ್ ಬಚ್ಚನ್!

"ನಮ್ಮ ಜೀವನದ ಕೆಟ್ಟ ಸಮಯ ಒಂದೋ ನಿಮ್ಮನ್ನು ನಾಶ ಮಾಡಿಬಿಡುತ್ತೆ ಇಲ್ಲವೇ ನಿಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ನೀವು ನಿಜಕ್ಕೂ ಯಾರು ಎಂಬುದನ್ನು ತೋರ್ಪಡಿಸುತ್ತದೆ" ಇದು ಅಮಿತಾಬ್ ಬಚ್ಚನ್ ಹೇಳಿದ ಮಾತು.

ನಾನೊಬ್ಬ ಸಾಮಾನ್ಯ ಮೀಡಿಯೋಕರ್ ನಟ ನನ್ನನ್ನು ಬಿಬಿಸಿಯವರು ಶತಮಾನದ ನಟ ಅಂತ ಗುರುತಿಸಿದ್ದಾರೆ. ಮರ್ಲನ್ ಬ್ರ್ಯಾಂಡೋ ಮತ್ತು ಚಾರ್ಲಿ ಚಾಪ್ಲಿನ್ ನನಗಿಂತ ಬಹಳ ದೊಡ್ಡ ಪ್ರತಿಭಾವಂತ ನಟರು. ನಾನೇನಿದ್ದರೂ ಸಾಮಾನ್ಯ ಆ್ಯಕ್ಟರ್ ಅಷ್ಟೇ ಎಂದು ಹೇಳಿದವರು ಭಾರತದ ಚಿತ್ರರಂಗದ ಮೊಘಲ್ ಅಮಿತಾಬ್ ಬಚ್ಚನ್.  ಅಮಿತಾಬ್ ಅಂದರೆ "ನಿರಂತರ ಬೆಳಕು" ಅಂತ ಅರ್ಥ. ಅಷ್ಟು ಮಧುರವಾದ ಹೆಸರಿಟ್ಟವರು ಹಿಂದಿಯ ಪ್ರಖ್ಯಾತ ಕವಿ ಮತ್ತು ಅಮಿತಾಬ್ ತಂದೆ ಹರಿವಂಶರಾಯ್ ಬಚ್ಚನ್. ಅಮಿತಾಬ್ ತಂದೆ ದಿಲ್ಲಿಯ ತಮ್ಮ ಮನೆಗೆ ಸೋಪಾನ್ ಎಂದು ಹೆಸರಿಟ್ಟಿದ್ದರು. ಸೋಪಾನವೆಂದರೆ ಮೆಟ್ಟಿಲು, ಅವರ ಕವಿತೆಯ ಒಂದು ಶೀರ್ಷಿಕೆ ಪ್ರತೀಕ್ಷಾ..ಆ ಹೆಸರನ್ನು ಅಮಿತಾಬ್ ಮುಂಬಯಿಯ ಜುಹುವಿನಲ್ಲಿರುವ ತಮ್ಮ ಮನೆಗೆ ಇಟ್ಟಿದ್ದರು.

ಸತತ ಫೇಲ್..ರಿಜೆಕ್ಟ್..ರಿಜೆಕ್ಟ್!

ನಿಮಗೆ ಗೊತ್ತಿರಲಿ ಅಮಿತಾಬ್ ಒಬ್ಬ ಶಿಕ್ಷಕನಾಗಲಿ ಎಂಬುದು ತಂದೆಯ ಬಯಕೆಯಾಗಿತ್ತು. ಇಲ್ಲ ನಾನು ವಿಜ್ಞಾನಿ ಆಗೋದು ಅಂತ ತೀರ್ಮಾನಿಸಿ ಬಿಎಸ್ಸಿಗೆ ಸೇರಿಕೊಂಡ ಅಮಿತಾಬ್ ಬಿಎಸ್ಸಿಯಲ್ಲಿ ಫೇಲಾಗಿ ಕಡೆಗೆ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದರು.. ದಿಲ್ಲಿಯ ಡೆಲ್ಲಿಕಾಟನ್ ಮಿಲ್ಸ್ ನಲ್ಲಿ ನೌಕರಿ ಕೇಳಿ ಇಲ್ಲವೆನ್ನಿಸಿಕೊಂಡ ಅಮಿತಾಬ್  ಐಎಎಸ್ ಮತ್ತು ಐಎಫ್ ಎಸ್ ಪರೀಕ್ಷೆಗಾಗಿ ಬರೆದು ಫೇಲಾಗಿದ್ದರು. ನಂತರ ದಿಲ್ಲಿಯಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಧ್ವನಿ ಪರೀಕ್ಷೆಯಲ್ಲಿಯೂ ಪಾಸಾಗುವುದು ಸಾಧ್ಯವಾಗಿಲ್ಲ…ಹೀಗೆ ಸಾಲು, ಸಾಲು ರಿಜೆಕ್ಟ್ ನಿಂದ ಕಂಗೆಟ್ಟಿದ್ದ ಅಮಿತಾಬ್ ಮುಖ ಮಾಡಿದ್ದು ಮಹಾನಗರಿಯತ್ತ…

ಬಚ್ಚನ್ ಸೂಪರ್ ಸ್ಟಾರ್ ಆಗಿದ್ದರ ಹಿಂದೆ ಅದೆಷ್ಟು ನೋವು..ಅವಮಾನವಿದೆ ಗೊತ್ತಾ?

ರಾಜೇಶ್ ಖನ್ನಾ ಥರಾ ನಾನು ಚೆಂದಗೆ ಕಾಣಿಸಲ್ಲ, ಅವರ ಹಾಗೆ ನಂಗೆ ಡೈಲಾಗ್ ಹೇಳಲಿಕ್ಕೆ ಬರಲ್ಲ. ನನ್ನ ಮುಖವೇ ಸರಿಯಿಲ್ಲ ನಾನು ನಟನಾಗಲಿಕ್ಕೆ ಸಾಧ್ಯವಾ ಎಂಬ ಭಯ ಬಚ್ಚನ್ ಗೆ ಕಾಡುತ್ತಿತ್ತು. ಏತನ್ಮಧ್ಯೆ ಬಾಲಿವುಡ್ ಚಿತ್ರರಂಗ ಬೆಳೆಯುತ್ತಿತ್ತು ಏನೇ ಆಗಲಿ ಎಂದು ಗಟ್ಟಿ ಮನಸ್ಸು ಮಾಡಿದ್ದ ಅಮಿತಾಬ್ ಬಾಂಬೆಗೆ ಬಂದುಬಿಟ್ಟಿದ್ದರಂತೆ. ಖೈತಾನ್ ಕುಟುಂಬದವರೊಂದಿಗೆ ಬಚ್ಚನ್ ತಂದೆ ಮಾತಾಡಿದ್ದರಿಂದ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆರಂಭದಲ್ಲಿ ಒಂದೆರಡು ಕಂಪನಿಗಳಲ್ಲಿ ಸೇಲ್ಸ್ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿದರೂ  ಯಾವುದರಲ್ಲೂ ಮನಸ್ಸು ನಿಲ್ಲುತ್ತಿರಲಿಲ್ಲ. ಸಿನಿಮಾಕ್ಕೆ ಸೇರಲು ಆಡಿಷನ್ ಗೆ ಹೋದರೆ ಅಲ್ಲಿ 6 ಅಡಿ 3 ಇಂಚು ಎತ್ತರದ ನಿನಗೆ ಅವಕಾಶ ಕೊಡೋದು ಹೇಗೆ ಎಂದು ವಾಪಸ್ ಕಳುಹಿಸುತ್ತಿದ್ದರಂತೆ! ಅಂತೂ ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೆಹಮೂದ್ ಅವರ ನೆರಳಿಗೆ ಬಚ್ಚನ್ ಸೇರಿಕೊಂಡುಬಿಟ್ಟರು. ಎಲ್ಲೋ ಒಂದೆರಡು ರಾತ್ರಿ ಮರೀನ್ ಡ್ರೈವ್ ನ ರಸ್ತೆ ಬದಿಯ ಬೆಂಚಿನ ಮೇಲೂ ಬಚ್ಚನ್ ಮಲಗಿದ್ದೂ ಉಂಟಂತೆ!. ಈ ಎಲ್ಲಾ ಜಂಜಾಟಗಳ ನಡುವೆ 1969ರಲ್ಲಿ ಸಾಥ್ ಹಿಂದೂಸ್ತಾನಿ ಚಿತ್ರಕ್ಕೆ ಬಚ್ಚನ ಸಹಿ ಮಾಡಿದ್ದರು, ಆ ಚಿತ್ರ 70ರಲ್ಲಿ ಬಿಡುಗಡೆಯಾಯಿತು.  ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಆದರೆ ಬಚ್ಚನ್ ಅದೃಷ್ಟ ಹೇಗಿತ್ತು ನೋಡಿ, ಮತ್ತೊಂದು ಸಿನಿಮಾದಲ್ಲಿ ಅವಕಾಶ ಪಡೆಯಲಿಕ್ಕಾಗಿ ಬರೋಬ್ಬರಿ 2 ವರ್ಷ ಕಾಲ ಕಾಯಬೇಕಾಯಿತು. ಈ ಸಮಯದಲ್ಲಿ ಮೆಹಮೂನ್ ಭಾಯಿಯ ಮಗ ಅನ್ವರ್ ಅಲಿ ಬಚ್ಚನ್ ಅವರನ್ನು ಕರೆದೊಯ್ದು ಜಾಹೀರಾತು ಕಂಪನಿಯವರಿಗೆ ಪರಿಚಯಿಸಿದ. ಹಾರ್ಲಿಕ್ಸ್ ಮತ್ತು ನಿರ್ಲಾನ್ ಕಂಪನಿಗಳ ಜಾಹೀರಾತಿಗೆ ದನಿ ಕೊಟ್ಟಿದ್ದಕ್ಕೆ 50 ರೂಪಾಯಿ ಸಿಗುತ್ತಿತ್ತಂತೆ!.

ಸಾಥ್ ಹಿಂದೂಸ್ತಾನಿ ಸಿನಿಮಾ ತೆರೆಕಂಡ 2 ವರ್ಷದ ಬಳಿಕ ಅಮಿತಾಬ್ ಆನಂದ್, ಝಂಜೀರ್ ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆಯಲ್ಲಿ ಉತ್ತುಂಗಕ್ಕೆ ಏರತೊಡಗಿದ್ದರು. 60-70ರ ದಶಕದಲ್ಲಿ ಬಾಲಿವುಡ್ ನಲ್ಲಿ ದಿಲೀಪ್ ಕುಮಾರ್, ಅಶೋಕ್ ಕುಮಾರ್, ಗುರುದತ್, ಸಂಜೀವ್ ಕುಮಾರ್, ದೇವ್ ಆನಂದ್, ರಾಜೇಶ್ ಖನ್ನಾ, ವಿನೋದ್ ಖನ್ನಾ, ಜಿತೇಂದ್ರ, ಶತ್ರುಘ್ನಸಿನ್ನಾ, ರಾಜ್ ಕುಮಾರ್, ಶಶಿಕಪೂರ್, ಶಮ್ಮಿಕಪೂರ್  ಸೇರಿದಂತೆ ಘಟಾನುಘಟಿ ಸ್ಟಾರ್ ನಟರ ದಂಡೇ ಇತ್ತು. ಇಂತಹ ಸಮಯದಲ್ಲೇ ಹುಟ್ಟಿಕೊಂಡ ನಟ ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಬ್ ಬಚ್ಚನ್!

ಚುಪ್ಕೆ, ಚುಪ್ಕೆ, ಫರಾರ್, ಡಾನ್, ತ್ರಿಶೂಲ್, ಮುಖ್ದರ್ ಕಾ ಸಿಕಂದರ್, ಗಂಗಾ ಕಿ ಸೌಗಂಧ್, ಬೇಷರಮ್, ಸುಹಾಗ್, ಮಿ.ನಟವರ್ ಲಾಲ್, ಕಾಲಾ ಪತ್ಥರ್, ದ ಗ್ರೇಟ್ ಗ್ಯಾಂಬ್ಲರ್, ಝಂಜೀರ್, ದೀವಾರ್, ಶೋಲೆ, ಕನ್ವರ್ ಬಾಪ್ ಮತ್ತು ದೋಸ್ತ್, ರೋಟಿ, ಕಪಡಾ ಔರ್ ಮಕಾನ್, ಮಜ್ಬೂರ್..ಹೀಗೆ 1986ರವರೆಗೆ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದು ಇಂದಿಗೂ ಬೇಡಿಕೆಯ ನಟ ಎನ್ನಿಸಿಕೊಂಡವರು ಅಮಿತಾಬ್ ಬಚ್ಚನ್.

ಬೆಂಗಳೂರಿನಲ್ಲಿ ಕೂಲಿ ಸಿನಿಮಾ ಶೂಟಿಂಗ್ ವೇಳೆ ಬಚ್ಚನ್ ಮೃತ್ಯುವಿನ ಕದ ತಟ್ಟಿದ್ದರು!

ಬಾಲಿವುಡ್ ನ ಬಿಡುವಿಲ್ಲದ ಸ್ಟಾರ್ ನಟರಾಗಿದ್ದ ಬಚ್ಚನ್ "ಕೂಲಿ" ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. 1982ರ ಜುಲೈನಲ್ಲಿ ಬೆಂಗಳೂರು ಯೂನಿರ್ವಸಿಟಿ ಆವರಣದಲ್ಲಿ ಸಹ ನಟ ಪುನೀತ್ ಇಸ್ಸಾರ್ (ಮಹಾಭಾರತ ಧಾರವಾಹಿಯಲ್ಲಿ ದುರ್ಯೋಧನ ಪಾತ್ರ ಹಾಕಿದ್ದರು) ಜೊತೆಗೆ ಬಚ್ಚನ್ ಫೈಟ್ ಮಾಡಬೇಕಿತ್ತು. ಸಿನಿಮಾದಲ್ಲಿ ಬಚ್ಚನ್ ತಮ್ಮ ಸ್ಟಂಟ್ ಸೀನ್ ಅನ್ನು ಡ್ಯೂಪ್ ಹಾಕದೇ ತಾವೇ ಮಾಡುತ್ತಿದ್ದರು. ಕೂಲಿ ಸಿನಿಮಾದ ಒಂದು ದೃಶ್ಯದಲ್ಲಿ ಬಚ್ಚನ್ ಮೇಲಿಂದ ಟೇಬಲ್ ಮೇಲೆ ಹಾರಿ, ಬಳಿಕ ನೆಲದ ಮೇಲೆ ಬೀಳಬೇಕಿತ್ತು. ನಿರ್ದೇಶಕರು ಆ್ಯಕ್ಷನ್ ಎಂದಾಗ ಬಚ್ಚನ್ ಹಾರಿ ಬಿಟ್ಟಿದ್ದರು..ಆಗ ಟೇಬಲ್ ನ ತುದಿ ಹೊಟ್ಟೆಗೆ ಬಲವಾಗಿ ಬಡಿದು ಬಿಟ್ಟಿತ್ತು. ಬಾಯಿಂದ ರಕ್ತ ಹೊರಬಂದಿತ್ತು..ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು..ಹಲವು ತಿಂಗಳ ಕಾಲ ಆಸ್ಪತ್ರೆಯಲ್ಲಿ ಬಚ್ಚನ್ ಚಿಕಿತ್ಸೆ ಪಡೆದಿದ್ದರು..ಈ ವೇಳೆ ಅವರು ಸಾವಿನ ಮನೆಯ ಕದ ತಟ್ಟಿ ಗೆದ್ದು ಬಂದಿದ್ದರು! ಕೊನೆಗೆ ನಿರ್ದೇಶಕ ಮನಮೋಹನ್ ದೇಸಾಯಿ ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸಿದ್ದರು. ಮೊದಲು ಸಿದ್ದಪಡಿಸಿದ್ದ ಸ್ಕ್ರಿಪ್ಟ್ ಪ್ರಕಾರ ಚಿತ್ರದ ಕೊನೆಯಲ್ಲಿ ಅಮಿತಾಬ್ ಸಾವನ್ನಪ್ಪಬೇಕಾಗಿತ್ತು. ಬಳಿಕ ಚಿತ್ರಕಥೆ ಬದಲಿಸಿ ಬಚ್ಚನ್ ಜೀವಂತವಾಗಿರುವುದನ್ನು ಚಿತ್ರದಲ್ಲಿ ತೋರಿಸಿದ್ದರು. 1983ರಲ್ಲಿ ಕೂಲಿ ಸಿನಿಮಾ ಬಿಡುಗಡೆಯಾದ ಮೇಲೆ ಅದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು! ಆದರೆ ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾಗಿದ್ದ ಅಮಿತಾಬ್ ಸಿನಿಮಾರಂಗ ಬಿಟ್ಟು ರಾಜಕೀಯ ಪ್ರವೇಶಿಸಲು ನಿರ್ಧರಿಸಿಬಿಟ್ಟಿದ್ದರು.

ಬಚ್ಚನ್ ಕುಟುಂಬಕ್ಕೂ, ಗಾಂಧಿ ಕುಟುಂಬಕ್ಕೂ ನಂಟು ಹೇಗಾಯ್ತು?

ಅಲಹಾಬಾದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅಮಿತಾಬ್ ತಂದೆ ಹರಿವಂಶ್ ರಾಯ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹರಿವಂಶರಾಯ್ ಅವರನ್ನು ಇಂಗ್ಲೆಂಡ್ ಗೆ ಕಳುಹಿಸಿ ಯೇಟ್ಸ್ ಕವಿಯ ಮೇಲೆ ಪಿಎಚ್ ಡಿ ಮಾಡಿಸಿದ್ದರು. ಆದರೆ ಅಲಹಾಬಾದ್ ಗೆ ಹಿಂದಿರುಗಿದ ಮೇಲೆ ಹರಿವಂಶರಾಯ್ ಅವರಿಗೆ ಕಾಲೇಜಿನಲ್ಲಿ ಹೇಳಿಕೊಳ್ಳುವ ಮರ್ಯಾದೆ ಕೊಡಲಿಲ್ಲ. ಬಳಿಕ ಹರಿವಂಶರಾಯ್ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ವಿಷಯ ತಿಳಿದ ನೆಹರು ಅವರು ಹರಿವಂಶರಾಯ್ ಗೆ ಭಾರತದ ರಕ್ಷಣಾ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದರು. ಇಬ್ಬರ ಮನೆಗಳೂ ದೆಹಲಿಯಲ್ಲಿ ಹತ್ತಿರ, ಹತ್ತಿರವೇ ಇತ್ತು. ಇದರಿಂದಾಗಿ ಅಮಿತಾಬ್, ಅಜಿತಾಬ್(ಬಚ್ಚನ್ ಅಣ್ಣ)ಗೆ ತಮ್ಮದೇ ವಯಸ್ಸಿನ ರಾಜೀವ್ ಗಾಂಧಿ, ಸಂಜಯ್ ಗಾಂಧಿ ಜೊತೆ ಕಾಲ ಕಳೆಯುತ್ತಿದ್ದರು. ಹೀಗೆ ಬಚ್ಚನ್ ಮತ್ತು ಗಾಂಧಿ ಕುಟುಂಬಕ್ಕೆ ಮೈತ್ರಿ ಬೆಳೆದಿತ್ತು. ಇಂದಿರಾಗಾಂಧಿ ಕುಟುಂಬದ ಮೇಲಿನ ಗೌರವದಿಂದಾಗಿ ಹರಿವಂಶರಾಯ್ ರಾಜ್ಯಸಭಾ ಸದಸ್ಯರೂ ಆಗಿದ್ದರು.

ಈ ಸ್ನೇಹದ ಮುಂದುವರಿದ ಭಾಗ ಬಚ್ಚನ್ ರಾಜಕೀಯಕ್ಕೆ ಎಂಟ್ರಿ, ಬೋಫೋರ್ಸ್ ತಲೆನೋವು!

ತಮ್ಮ ದೀರ್ಘಕಾಲದ ಕುಟುಂಬದ ಗೆಳೆಯ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಆಹ್ವಾನದ ಮೇರೆಗೆ 1984ರಲ್ಲಿ ಮೆಗಾಸ್ಟಾರ್ ಆಗಿದ್ದ ಅಮಿತಾಬ್ ಬಚ್ಚನ್ ಉತ್ತರಪ್ರದೇಶದ ಅಲಹಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಆದರೆ ಅವರ ರಾಜಕೀಯ ಜೀವನ ಕೇವಲ 3ವರ್ಷಕ್ಕೆ ಕೊನೆಗೊಂಡಿತ್ತು. ಅದಕ್ಕೆ ಕಾರಣವಾಗಿದ್ದು ಬೋಪೋರ್ಸ್ ಹಗರಣ! ತಾನು ಮತ್ತು ಸಹೋದರ ಶಾಮೀಲಾಗಿರುವುದಾಗಿ ಆರೋಪಿಸಿ ವರದಿ ಪ್ರಕಟಿಸಿದ್ದ ಪತ್ರಿಕೆ ವಿರುದ್ಧ ಕಾನೂನು ಸಮರಕ್ಕಿಳಿದಿದ್ದರು. ಬಳಿಕ ಅಮಿತಾಬ್ ದೋಷಿ ಅಲ್ಲ ಎಂಬುದಾಗಿ ಸ್ವೀಡನ್ ಪೊಲೀಸರು ಕ್ಲೀನ್ ಚಿಟ್ ಕೊಟ್ಟಿದ್ದರು. ತಾನು ಕೊಟ್ಟ ಭರವಸೆ ಈಡೇರಿಸಲಾಗಿಲ್ಲ ಎಂದು ಅಲಹಾಬಾದ್ ಕ್ಷೇತ್ರದ ಜನರಲ್ಲಿ ಕ್ಷಮಾಪಣೆಯನ್ನೂ ಕೇಳಿದ್ದರು. ತುಂಬಾ ಭಾವನಾತ್ಮಕ ವಿಚಾರಧಾರೆಯಲ್ಲಿ ಬಚ್ಚನ್ ರಾಜಕೀಯ ಪ್ರವೇಶಿಸಿದ್ದರು, ಆದರೆ ಅಲ್ಲಿ ಹೋದ ಮೇಲೆ ತಿಳಿಯಿತು ರಾಜಕೀಯದಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬುದು! 1988ರಲ್ಲಿ ಮತ್ತೆ ಸಿನಿಮಾ ಲೋಕ ಪ್ರವೇಶಿಸಿದ್ದರು.

ಏಳು..ಬೀಳು..ಎಬಿಸಿಎಲ್ ನಿಂದಾಗಿ ದಿವಾಳಿ!

1988ರಲ್ಲಿ ಬಿಡುಗಡೆಯಾದ ಷಹೆನ್ ಶಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಬಂದ ಜಾದೂಗಾರ್, ತೂಫಾನ್, ಮೈ ಆಝಾದ್ ಹೂ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸೋತು ಹೋಗಿದ್ದವು. ಹೀಗೆ 1996ರಲ್ಲಿ ಅಮಿತಾಬ್ ಬಚ್ಚನ್ ಕಾರ್ಪೋರೇಶನ್ ಲಿಮಿಟೆಡ್(ಎಬಿಸಿಎಲ್) ಅನ್ನು ಹುಟ್ಟು ಹಾಕಿದ್ದರು. ಸಿನಿಮಾ ನಿರ್ಮಾಣ, ವಿತರಣೆ, ಆಡಿಯೋ ಕ್ಯಾಸೆಟ್, ವಿಡಿಯೋ ಡಿಸ್ಕ್, ಮಾರುಕಟ್ಟೆ ಹೀಗೆ ಎಲ್ಲವೂ ಎಬಿಸಿಎಲ್ ಕಾರ್ಯ ವ್ಯಾಪ್ತಿಯಾಗಿತ್ತು. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಸುಂದರಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದು ಎಬಿಸಿಎಲ್..ಆದರೆ ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಯಿತು. ಬ್ಯಾಂಕ್ ಸಾಲ ಏರತೊಡಗಿತ್ತು. ಮುಂಬೈನಲ್ಲಿದ್ದ ತಮ್ಮ ಪ್ರತೀಕ್ಷಾ ಬಂಗ್ಲೆಯನ್ನು ಮಾರಾಟ ಮಾಡಿದ್ದರು ಜೊತೆಗೆ ಇತರ ಎರಡು ಫ್ಲ್ಯಾಟ್ ಗಳನ್ನು ಮಾರಿದ್ದರು. ಆದರೂ ಸಾಲ ತೀರಲಿಲ್ಲವಾಗಿತ್ತು. ಈ ವೇಳೆ ಕೈಹಿಡಿದದ್ದು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಮರ್ ಸಿಂಗ್ ಮತ್ತು ಸ್ಯಾಂಡಲ್ ವುಡ್ ನ ಅಂಬರೀಶ್!

2000ನೇ ಇಸವಿಯಲ್ಲಿಯೂ ಅಮಿತಾಬ್ ನಟಿಸಿದ ಸಿನಿಮಾಗಳು ಬಹುತೇಕ ಸೋಲತೊಡಗಿದ್ದವು. ನಂತರ ಕೌನ್ ಬನೇಗಾ ಕರೋಡ್ ಪತಿಯಂತಹ ಜನಪ್ರಿಯ ಕಾರ್ಯಕ್ರಮ, ಸಾಲು, ಸಾಲು ಸಿನಿಮಾಗಳ ಗೆಲುವು ಅಮಿತಾಬ್ ಅವರ ಕೈ ಹಿಡಿದಿದ್ದವು. ಅಲ್ಲಿಂದ ಹಲವು ಗೆಲುವು, ಸೋಲು, ನೋವು ನಲಿವುಗಳ ನಡುವೆಯೇ ಬ್ಲ್ಯಾಕ್, ಪಾ, ಪೀಕೂ ಸೇರಿದಂತೆ ವಿಭಿನ್ನ ಪಾತ್ರಗಳ ಮೂಲಕ ಅಮಿತಾಬ್ ಬಚ್ಚನ್ ಇಂದಿಗೂ ಜನಮಾನಸಲ್ಲಿ ಮೆಗಾಸ್ಟಾರ್ ಆಗಿ ಉಳಿದಿದ್ದಾರೆ..

Tags:

ಅಮಿತಾಬ್ ಬಚ್ಚನ್

ಮೆಗಾಸ್ಟಾರ್

ಎಬಿಸಿಎಲ್

Amitabh Bachchan

ABCL

Bollywood story

Author/Source:

ನಾಗೇಂದ್ರ ತ್ರಾಸಿ

Thu, 06 Sep 2018 00:55:00 +0000 ntrasi 322223 at https://www.udayavani.com https://www.udayavani.com/kannada/news/web-focus/322223/inspirational-story-of-amitabh-bachchan#comments ಪತ್ರಕರ್ತನ ನಿಗೂಢ ಸಾವು v/s ಸ್ಟಾರ್ ವ್ಯಾಲ್ಯೂ ಕಳೆದುಕೊಂಡ ಹಾಸ್ಯ ನಟ! https://www.udayavani.com/kannada/news/web-focus/321077/rise-and-fall-of-ns-krishnan-tamil-cinema-s-legendry-comedian

ಹಾಸ್ಯ ಎಲ್ಲರಿಗೂ ಇಷ್ಟ..ಅದೇ ರೀತಿ ನಗಿಸುವುದು ಒಂದು ಅದ್ಭುತವಾದ ಕಲೆ. ಜಾಗತಿಕ ಚಿತ್ರರಂಗದಲ್ಲಿ ದೊಡ್ಡ ಹೆಸರು, ಯಶಸ್ಸು ಗಳಿಸಿದ ನಟ ಚಾರ್ಲಿ ಚಾಪ್ಲಿನ್. ಒಂದು ಕಾಲದ ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು, ಬಾಲಣ್ಣ, ಮುಸುರಿ ಕೃಷ್ಣಮೂರ್ತಿ, ದಿನೇಶ್, ದ್ವಾರಕೀಶ್, ಧೀರೇಂದ್ರ ಗೋಪಾಲ್, ಎಂಎಸ್ ಉಮೇಶ್, ಹೊನ್ನಾವಳ್ಳಿ ಕೃಷ್ಣ ಹೀಗೆ ದೊಡ್ಡ ಪಟ್ಟಿಯೇ ಇದೆ. ಅದೇ ರೀತಿ ತಮಿಳು ಸಿನಿಮಾ ರಂಗದಲ್ಲಿ ಎನ್ ಎಸ್ ಕೆ ಬಹುದೊಡ್ಡ ಹಾಸ್ಯ ನಟರಾಗಿ ಹೆಸರು ಮಾಡಿದ್ದರು. ಎನ್ ಎಸ್ ಕೃಷ್ಣನ್ ಅವರನ್ನು ಭಾರತದ ಚಾರ್ಲಿ ಚಾಪ್ಲಿನ್ ಎಂದೇ ಗುರುತಿಸಲಾಗಿತ್ತು.

ಚಿತ್ರರಂಗ, ರಾಜಕೀಯ, ಧಾರ್ಮಿಕ, ಕ್ರೀಡೆ ಹೀಗೆ ನಾನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಖ್ಯಾತಿ ಗಳಿಸಿದವರು ಸಾವಿರಾರು ಮಂದಿ ಇದ್ದಾರೆ. ಅದೇ ರೀತಿ ಸ್ಟಾರ್ ಪಟ್ಟ ಗಿಟ್ಟಿಸಿ ಖ್ಯಾತರಾದ ಮೇಲೆ ತಮ್ಮದೇ ಅಹಂನಿಂದಾಗಿ ಮೂಲೆ ಗುಂಪು ಆಗಿದ್ದಾರೆ. ಸಿನಿಮಾ ರಂಗ ಕೂಡಾ ಇದಕ್ಕೆ ಹೊರತಲ್ಲ. ಸ್ಟಾರ್ ನಟರ ವಿರುದ್ಧ ಯಾವುದೇ ಅವಹೇಳನ ಮಾಡುವಂತಿಲ್ಲವಾಗಿತ್ತು. ಒಂದೋ ಅಭಿಮಾನಿಗಳ ಕೆಂಗಣ್ಣಿಗೆ ಇಲ್ಲವೇ ವೈಯಕ್ತಿಕ ದ್ವೇಷಕ್ಕೆ ಗುರಿಯಾಗಬೇಕಾಗುತ್ತಿತ್ತು.

ಎನ್ ಎಸ್ ಕೃಷ್ಣನ್ ತಮಿಳಿನ ಜಾನಪದೀಯ ಕಥೆಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸುವ(ವಿಲ್ಲು ಪಾಟು) ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ತಮಿಳು ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅದೇ ರೀತಿ ಕೃಷ್ಣನ್ ಸಂಚಾರಿ ನಾಟಕ ಕಂಪನಿಯನ್ನೂ ಆರಂಭಿಸಿ ಜನಪ್ರಿಯರಾಗಿದ್ದರು.

40-50ರ ದಶಕದಲ್ಲಿ ಸ್ಟಾರ್ ಹಾಸ್ಯ ನಟ!

1935ರಲ್ಲಿ ಮೇನಕಾ ಎಂಬ ತಮಿಳು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಕೃಷ್ಣನ್ ಕಡೆಗಣಿಸಲಾಗದ ಅದ್ಭುತ ನಟ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು. ತಮ್ಮ ನಟನಾ ಪ್ರತಿಭೆಯಿಂದ ಪ್ರೇಕ್ಷಕರು ಸೇರಿದಂತೆ ನಾಯಕ ನಟರ ಮನವನ್ನೂ ಗೆದ್ದಿದ್ದರು ಕೃಷ್ಣನ್. ತಮ್ಮ ಪಂಚಿಂಗ್ ಡೈಲಾಗ್, ಆಂಗಿಕ ಅಭಿನಯದ ಮೂಲಕ ಜನಪ್ರಿಯ ಹಾಸ್ಯನಟರಾಗಿ ಹೊರಹೊಮ್ಮಿದ್ದರು. ಸಿನಿಮಾದಲ್ಲಿ ಕಾಮಿಡಿ ಟ್ರ್ಯಾಕ್ಸ್ ಅನ್ನು ತಾವೇ ಬರೆಯುತ್ತಿದ್ದರಂತೆ. ಕೃಷ್ಣನ್ ನಲ್ಲಾತಂಬಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾವನ್ನು ನಿರ್ದೇಶಿಸಿದ್ದು ಸಿಎನ್ ಅಣ್ಣಾದೊರೈ. ಬಳಿಕ ಅಣ್ಣಾದೊರೈ ತಮಿಳುನಾಡಿನ ಮುಖ್ಯಮಂತ್ರಿಗಾದಿ ಏರಿದ್ದರು. ಎಂ.ಕರುಣಾನಿಧಿ ಕೂಡಾ ಸಿಎಂ ಪಟ್ಟ ಅಲಂಕರಿಸುವ ಮುನ್ನ ಕೃಷ್ಣನ್ ಅಭಿನಯಿಸುತ್ತಿದ್ದ ಸಿನಿಮಾಗಳಿಗೆ ಡೈಲಾಗ್ ಬರೆಯುತ್ತಿದ್ದರಂತೆ.

ಸುಮಾರು 1940-50ರ ದಶಕದಲ್ಲಿ ನಾಯಕ ನಟರಿಗಿಂತ ಕೃಷ್ಣನ್ ಬಹುಬೇಡಿಕೆಯ ಹಾಗೂ ಅತ್ಯಧಿಕ ಸಂಭಾವನೆ ಪಡೆಯುವ ಸ್ಟಾರ್ ಹಾಸ್ಯನಟರಾಗಿದ್ದರು.

ಚಿತ್ರರಂಗದ ಘಟಾನುಘಟಿಗಳು “ಈ” ಪತ್ರಕರ್ತನಿಗೆ ಹೆದರುತ್ತಿದ್ದರು; ಕೊಲೆ ಕೇಸ್ ನಲ್ಲಿ ಬಂಧಿಯಾದ ಸ್ಟಾರ್ ನಟರು!

ಚಿತ್ರರಂಗದಲ್ಲಿ ಸ್ಟಾರ್ ನಟರ ಅಬ್ಬರ ಒಂದೆಡೆಯಾದರೆ, ಮತ್ತೊಂದೆಡೆ 1943ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಸಿನಿಮಾ ಪತ್ರಕರ್ತರಾಗಿ ಸಿಎನ್ ಲಕ್ಷ್ಮೀಕಾಂತನ್ ಖ್ಯಾತರಾಗಿದ್ದರು. ಸಿನಿಮಾ ತೂಥು ಎಂಬ ವಾರಪತ್ರಿಕೆಯ ಮೂಲಕ ಸಿಎನ್ ಅಂದಿನ ಸ್ಟಾರ್ ನಟ, ನಟಿಯರ ಖಾಸಗಿ ಬದುಕಿನ ಬಗ್ಗೆ ಬರೆಯುತ್ತಿದ್ದ ಅಂಕಣ ಜನಪ್ರಿಯವಾಗಿತ್ತು. ಸಿಎನ್ ಲೇಖನ ಪ್ರಕಟವಾಗದಂತೆ ಬಾಯಿಮುಚ್ಚಿಸಲು ಘಟಾನುಘಟಿ ಸ್ಟಾರ್ ನಟರು ಭಾರೀ ಹಣವನ್ನೂ ಸಂದಾಯ ಮಾಡುತ್ತಿದ್ದರಂತೆ. ಆದರೆ ಅದಕ್ಕೆ ಜಗ್ಗದ ಸಿಎನ್ ನಿರ್ಭಿಡೆಯಿಂದ ಲೇಖನ ಪ್ರಕಟಿಸುತ್ತಿದ್ದರಂತೆ!

ಏತನ್ಮಧ್ಯೆ ಗಾಸಿಫ್ ನಿಂದ ಕಂಗೆಟ್ಟಿದ್ದ ಅಂದಿನ ಖ್ಯಾತ ನಟರಾದ ಎಂಕೆ ತ್ಯಾಗರಾಜ ಭಾಗವತರ್, ಎನ್ ಎಸ್ ಕೃಷ್ಣನ್ ಹಾಗೂ ನಿರ್ದೇಶಕ ಶ್ರೀರಾಮುಲು ರೆಡ್ಡಿ ಮದ್ರಾಸ್ ಗವರ್ನರ್ ಅವರ ಬಳಿ ಹೋಗಿ, ಲಕ್ಷ್ಮೀಕಾಂತನ್ ಪತ್ರಿಕೆ ಪರವಾನಗಿಯನ್ನು ರದ್ದುಮಾಡುವಂತೆ ಮನವಿ ಕೊಟ್ಟುಬಿಟ್ಟಿದ್ದರು. ಇದರಿಂದಾಗಿ ಸಿನಿಮಾ ತೂಥು ಪತ್ರಿಕೆಯ ಲೈಸೆನ್ಸ್ ರದ್ದಾಗಿತ್ತು. ಪಟ್ಟು ಬಿಡದ ಲಕ್ಷ್ಮೀಕಾಂತನ್ ನಕಲಿ ದಾಖಲೆ ಸೃಷ್ಟಿಸಿ ಕೆಲವು ತಿಂಗಳು ಪತ್ರಿಕೆ ನಡೆಸಿದರೂ ಕೂಡಾ ಕೊನೆಗೆ ಬಲವಂತವಾಗಿ ಪತ್ರಿಕಾ ಕಚೇರಿಯನ್ನು ಮುಚ್ಚಿಸಿದ್ದರು. ತದನಂತರ ಲಕ್ಷ್ಮೀಕಾಂತನ್ “ಹಿಂದೂ ನೇಷನ್” ಹೆಸರಿನ ಪತ್ರಿಕೆ ಆರಂಭಿಸಿ ಮತ್ತೆ ಸಿನಿಮಾರಂಗದ ದಿಗ್ಗಜರಾದ ತ್ಯಾಗರಾಜ ಭಾಗವತರ್, ಕೃಷ್ಣನ್ ಸೇರಿದಂತೆ ಪ್ರಮುಖ ನಟ, ನಟಿಯರ ಸ್ಕ್ಯಾಂಡಲ್ ಬಗ್ಗೆ ಬರೆಯತೊಡಗಿದ್ದರು. ಈ ತಂತ್ರಗಾರಿಕೆಯಿಂದ ಅಪಾರ ಪ್ರಮಾಣದ ಹಣಕಾಸು, ಡಿವಿಡೆಂಡ್ಸ್ ಪಡೆದ ಲಕ್ಷ್ಮೀಕಾಂತನ್ ಸ್ವಂತ ಪ್ರಿಂಟಿಂಗ್ ಪ್ರೆಸ್ ಖರೀದಿಸಿಬಿಟ್ಟಿದ್ದ!

ಲಕ್ಷ್ಮೀಕಾಂತ್ ಮೇಲೆ ಹಲ್ಲೆ, ನಿಗೂಢ ಸಾವು…ಘಟಾನುಘಟಿ ಸ್ಟಾರ್ ನಟರ ಬಂಧನ!

ಏತನ್ಮಧ್ಯೆ 1944ರ ನವೆಂಬರ್ 8ರಂದು ಮದ್ರಾಸ್ ನ ಪುರುಸವಾಕಂ ಬಳಿ ಕೆಲವರು ಲಕ್ಷ್ಮೀಕಾಂತನ್ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದು ಬಿಟ್ಟಿದ್ದರು. ಕೂಡಲೇ ಅವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಲಕ್ಷ್ಮೀಕಾಂತನ್ ಗೆ ಹೇಳಿಕೊಳ್ಳುವಂತಹ ಗಂಭೀರ ಗಾಯವೇನೂ ಆಗಿರಲಿಲ್ಲವಾಗಿತ್ತು. ಪೊಲೀಸರ ತನಿಖೆ ವೇಳೆಯೂ ಯಾರ ಹೆಸರನ್ನೂ ಲಕ್ಷ್ಮೀಕಾಂತನ್ ಉಲ್ಲೇಖಿಸಿರಲಿಲ್ಲವಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ “ಮುಂದಿನ ಸಂಚಿಕೆಯಲ್ಲಿ ಬೋಟ್ ಮೇಲ್ ಮರ್ಡರ್” ಕೇಸ್ (ಇದು ಮದ್ರಾಸ್ ಮತ್ತು ಧನುಷ್ಕೋಡಿ ನಡುವೆ ಓಡಾಡುತ್ತಿದ್ದ ರೈಲಿನ ಹೆಸರು ಬೋಟ್ ಮೇಲ್) ನಲ್ಲಿ ಶಾಮೀಲಾದವರ ಬಣ್ಣ ಬಯಲು ಮಾಡುವುದಾಗಿ ಲೇಖನ ಬರೆದುಬಿಟ್ಟಿದ್ದರು.

ವಿಪರ್ಯಾಸ ಎಂಬಂತೆ ನವೆಂಬರ್ 9ರಂದು ಆಸ್ಪತ್ರೆಯಲ್ಲಿ ಲಕ್ಷ್ಮೀಕಾಂತನ್ ದಿಢೀರನೆ ನಿಗೂಢವಾಗಿ ಸಾವನ್ನಪ್ಪಿದ್ದರು. ಇದು ಕೊಲೆ ಎಂಬುದಾಗಿ ಲಕ್ಷ್ಮೀಕಾಂತನ್ ಬಾಡಿಗಾರ್ಡ್ ನೀಡಿದ್ದ ಹೇಳಿಕೆಯನ್ನು ಆಧರಿಸಿ ಪೊಲೀಸರು, ಭಾಗವತರ್, ಕೃಷ್ಣನ್, ರೆಡ್ಡಿ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ಸ್ಟಾರ್ ನಟರ ಬಂಧನದ ಸುದ್ದಿ ಕೇಳಿ ಅಭಿಮಾನಿಗಳು, ಸಿನಿಮಾರಂಗ ಆಘಾತಕ್ಕೊಳಗಾಗಿತ್ತು.

ಅಂದು ಈ ಘಟಾನುಘಟಿ ಆರೋಪಿ ನಟರ ಪರವಾಗಿ ಪ್ರತಿಷ್ಠಿತ ವಕೀಲರಾದ ವಿಟಿ ರಂಗಸ್ವಾಮಿ ಅಯ್ಯಂಗಾರ್, ರಾಜ್ ಗೋಪಾಲಾಚಾರಿ(ರಾಜಾಜಿ), ಬಿಟಿ ಸುಂದರಾಜನ್, ಗೋವಿಂದ್ ಸ್ವಾಮಿನಾಥನ್, ಶ್ರೀನಿವಾಸ್ ಗೋಪಾಲ್, ಕೆಎಂ ಮುನ್ಶಿ ವಾದಿಸಿದ್ದರು. ದೀರ್ಘ ವಿಚಾರಣೆಯ ನಂತರ ಮದ್ರಾಸ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಜ್ಯೂರಿ ಎಂಕೆ ಭಾಗವತರ್, ಕೃಷ್ಣನ್ ಹಾಗೂ ಉಳಿದ ನಾಲ್ವರು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು ಕೂಡಾ ಅಲ್ಲಿಯೂ ಅರ್ಜಿ ವಜಾಗೊಂಡಿತ್ತು. ಕೊನೆಗೆ ಅಂದಿನ ಲಂಡನ್ ನ ಪ್ರೈವೆ ಕೌನ್ಸಿಲ್ (1948ರವರೆಗೆ ಹೈಕೋರ್ಟ್ ನಂತರ ಮೇಲ್ಮನವಿ ಸಲ್ಲಿಸಲು ಲಂಡನ್ ನಲ್ಲಿದ್ದ ಬ್ರಿಟನ್ ರಾಣಿ ಅಧೀನದ ಖಾಸಗಿ ಕೌನ್ಸಿಲ್ ಮೊರೆ ಹೋಗಬೇಕಾಗಿತ್ತು) ಕದತಟ್ಟಿದ್ದರು. ಅಲ್ಲಿ ಬ್ರಿಟಿಷ್ ಬ್ಯಾರಿಸ್ಟರ್ ಡಿಎನ್ ಪ್ರಿಟ್ಟ್ ಕೃಷ್ಣನ್, ಭಾಗವತರ್ ಸೇರಿ ಉಳಿದವರ ಪರ ವಾದಿಸಿದ್ದರು. ತದನಂತರ ಪ್ರೈವೈ ಕೌನ್ಸಿಲ್ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಈ ವಿಚಾರಣೆಯಲ್ಲಿ ಎಂಕೆಟಿ, ಎನ್ ಎಸ್ ಕೆ ಖುಲಾಸೆಗೊಂಡಿದ್ದರು. ಆ ಹೊತ್ತಿಗೆ ಬರೋಬ್ಬರಿ 30 ತಿಂಗಳ ಕಾಲ ಜೈಲುವಾಸ ಅನುಭವಿಸಿಬಿಟ್ಟಿದ್ದರು. ಇಷ್ಟೆಲ್ಲಾ ಆದರೂ ಲಕ್ಷ್ಮೀಕಾಂತನ್ ಕೊಲೆ ರಹಸ್ಯ ಬಯಲಾಗಲೇ ಇಲ್ಲ. ರಾಜಕೀಯ ಮೇಲಾಟದಿಂದ ಈ ಸ್ಟಾರ್ ನಟರು ಜೈಲು ಸೇರುವಂತಾಗಿತ್ತು!

ಜೈಲಿನಿಂದ ಬಿಡುಗಡೆಯಾದ ಮೇಲೆ ಭಾಗವತರ್ ಮತ್ತೆ ಸ್ಟಾರ್ ವ್ಯಾಲ್ಯೂಗೆ ಮರಳಲು ಸಾಧ್ಯವಾಗಲೇ ಇಲ್ಲ. ಎನ್ ಎಸ್ ಕೃಷ್ಣನ್ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ ಮೊದಲಿನ ವರ್ಚಸ್ಸು ಕಳೆಗುಂದಿತ್ತು. ಜೈಲುವಾಸ, ಲಂಡನ್ ಕೋರ್ಟ್, ಘಟಾನುಘಟಿ ವಕೀಲರ ಖರ್ಚು, ವೆಚ್ಚಗಳಿಂದ ಸಂಪತ್ತು ನಷ್ಟವಾಗಿತ್ತು. ಈ ಎಲ್ಲಾ ಏಳು ಬೀಳುಗಳಲ್ಲಿಯೇ ಎನ್ ಎಸ್ ಕೆ 1957ರ ಆಗಸ್ಟ್ 30ರಂದು ಮದ್ರಾಸ್ ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.!

Tags:

ಸ್ಟಾರ್ ನಟ

ಎನ್ ಎಸ್ ಕೆ

ಎನ್ ಎಸ್ ಕೃಷ್ಣನ್

N S Krishnan

legendry comedian

Author/Source:

ನಾಗೇಂದ್ರ ತ್ರಾಸಿ

Fri, 31 Aug 2018 11:32:57 +0000 ntrasi 321077 at https://www.udayavani.com https://www.udayavani.com/kannada/news/web-focus/321077/rise-and-fall-of-ns-krishnan-tamil-cinema-s-legendry-comedian#comments