Udayavani - ಉದಯವಾಣಿ - ವಿಷ್ಣುದಾಸ್ ಪಾಟೀಲ್ https://www.udayavani.com/kannada-news-authors/%E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81%E0%B2%A6%E0%B2%BE%E0%B2%B8%E0%B3%8D-%E0%B2%AA%E0%B2%BE%E0%B2%9F%E0%B3%80%E0%B2%B2%E0%B3%8D en  1990ರಲ್ಲೇ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ ಮರುಳ ಸಿದ್ದಯ್ಯ ಇನ್ನಿಲ್ಲ https://www.udayavani.com/kannada/news/web-focus/334291/h-m-marulasiddaiah-expired

ಕನ್ನಡ ನಾಡು ಕಂಡ ಮೇರು ಸಾಹಿತಿ ,ಸಾರಸ್ವತ ಲೋಕದ ಕೊಂಡಿ,  ಹಿರಿಯ ಚಿಂತಕ , ನಾಡಿನ ಏಳಿಗೆಗಾಗಿ ಪೂರ್ವಾಲೋಚನೆ ಹೊಂದಿದ್ದ , ಸ್ವಚ್ಛತೆಗಾಗಿ ಶ್ರಮಿಸಿದ್ದ ಮಹಾನ್‌ ಚೇತನವೊಂದನ್ನು ಕಳೆದುಕೊಂಡಿದೆ. ಸಮಾಜದ ಏಳಿಗೆಗಾಗಿ ಶ್ರಮಿಸಿ ವಿದೇಶಿ ವಿದ್ಯಾರ್ಥಿಗಳ ಗಮನ ಸೆಳೆದಿದ್ದ  ಡಾ. ಎಚ್‌.ಎಂ. ಮರುಳು ಸಿದ್ದಯ್ಯ ಅವರು 87 ರ ಹರೆಯದಲ್ಲಿ  ನಮ್ಮನ್ನಗಲಿದ್ದಾರೆ.

ವಾರ್ಧಕ್ಯದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ 1990 ರಲ್ಲೇ ಈಗಿನ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ್ದ ಅವರು 'ನಿರ್ಮಲ ಕರ್ನಾಟಕ' ಯೋಜನೆಯನ್ನು ಪರಿಚಯಿಸಿದ್ದರು. ವ್ಯಾಪಕವಾಗಿ ಬಯಲು ಶೌಚವಿದ್ದ ಕಾಲದಲ್ಲಿ  ಬಯಲು ಶೌಚ ಮುಕ್ತ ಕರ್ನಾಟಕ ನಿರ್ಮಾಣದ ಮಹದಾಸೆ ಹೊಂದಿದ್ದ ಮರುಳ ಸಿದ್ದಯ್ಯ ಅವರು ನಿರ್ಮಲ ಕರ್ನಾಟಕ ಯೋಜನೆಯ ರೂವಾರಿಯಾಗಿದ್ದರು. ಹಲವು ಪ್ರದೇಶಗಳಲ್ಲಿ ಗುಂಪು ಶೌಚಾಲಯಗಳ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದರು. ನಿರ್ಮಲ ಕರ್ನಾಟಕ ಮಾತ್ರವಲ್ಲದೆ ಪಂಚಮುಖೀ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆಯಗಳನ್ನು ಪರಿಚಯಿಸಿದ್ದರು.

ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳ ಕುಂಟೆಯಲ್ಲಿ 1931 ರಲ್ಲಿ ಜನಿಸಿದ್ದ  ಮರುಳ ಸಿದ್ದಯ್ಯ  ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. ಬಳಿಕ ದೆಹಲಿ ವಿವಿಯಲ್ಲೂ ಸಮಾಜ ಕಾರ್ಯದಲ್ಲಿ ಎಂ.ಎ ಪದವಿ ಪಡೆದಿದ್ದರು. ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದರು.

ಕರ್ನಾಟಕ ವಿವಿಯಲ್ಲಿ  ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಸಮಾಜ ಕಾರ್ಯ ವಿಭಾಗ ಆರಂಭಿಸಿದ್ದರು.

ಅನುಭವದ ಆಗರ ವಾಗಿದ್ದ  ಮರುಳ ಸಿದ್ದಯ್ಯ ಅವರ ಬಳಿ ಜ್ಞಾನಾರ್ಜನೆಗಾಗಿ ವಿದೇಶದಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಅಮೆರಿಕಾ, ಇಸ್ರೇಲ್‌,ಇಂಗ್ಲೆಂಡ್‌, ಸ್ವೀಡನ್‌ ಮೊದಲಾದ ದೇಶಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿ ಮಾರ್ಗದರ್ಶನವನ್ನು ಪಡೆದಿದ್ದರು.

ಹೃದಯ ಶ್ರೀಮಂತ
ಮರುಳ ಸಿದ್ದಯ್ಯ ಅವರ ಆದರ್ಶಪ್ರಾಯ ಜೀವನವನ್ನು ನಡೆಸಿದವರು. ಹಿರೇಕುಂಬಳ ಕುಂಟೆಯಲ್ಲಿದ್ದ ತನ್ನ ಮನೆಯನ್ನು ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿ, ಅಲ್ಲಿ ಪುಸ್ತಕ ಮನೆಯನ್ನು ಸ್ಥಾಪಿಸಿದ್ದಾರೆ.

60 ಕ್ಕೂ ಹೆಚ್ಚು ಕೃತಿಗಳು
ಮರುಳ ಸಿದ್ದಯ್ಯ ಅವರು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ 60 ಕ್ಕೂ ಹೆಚ್ಚು  ಅರ್ಥಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ತಜ್ಞ ಸಮುದಾಯದಲ್ಲಿ, ವಿದ್ಯಾರ್ಥಿ ಸಮುದಾಯದಲ್ಲಿ  ಅಪಾರ ಜನಪ್ರಿಯತೆ ಪಡೆದಿವೆ. ಉಳಿದಂತೆ ಭಕ್ತಿ ಪಂಥದಲ್ಲಿ ಸಮಾಜ ಕಾರ್ಯದ ಬೇರುಗಳು, ಗಾಂಧೀಜಿ ಅರ್ಥ ಶಾಸ್ತ್ರ , ಹುಲ್ಲು ಬೇರುಗಳ ನಡುವೆ, ಅರಿವು ಆಚರಣೆ, ಗ್ರಾಮೋನ್ನತಿ, ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ದಿ  ಮೊದಲಾದ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಯಾಗಿ ನೀಡಿದ್ದಾರೆ.

ಸಮಾಜಕ್ಕೆ ತನ್ನ ಚಿಂತನೆಗಳು, ಯೋಜನೆಗಳು ಮತ್ತು  ಕೃತಿಗಳ ಮೂಲಕ ಮಾರ್ಗದರ್ಶನ ನೀಡಿದ ಮರುಳ ಸಿದ್ದಯ್ಯ ಅವರು ಕನ್ನಡ ನಾಡಿನಲ್ಲಿ  ಮತ್ತೆ ಹುಟ್ಟಿ ಬರಲಿ.

Tags:

H.M. Marulasiddaiah

expired

Social

Society

Author/Source:

ವಿಷ್ಣುದಾಸ್ ಪಾಟೀಲ್

Sun, 28 Oct 2018 07:17:27 +0000 vishnudas 334291 at https://www.udayavani.com https://www.udayavani.com/kannada/news/web-focus/334291/h-m-marulasiddaiah-expired#comments ಕನ್ನಡದ ಧ್ವನಿಯಾಗಿದ್ದ ಕಾವಿ, ಔದಾರ್ಯದ ನಿಧಿಯಾಗಿದ್ದ ಮಹಾಸ್ವಾಮೀಜಿ  https://www.udayavani.com/kannada/news/web-focus/332709/tontadarya-seer-siddhalinga-mahaswamiji

''ತಮ್ಮ ಮೂಗಿನ ನೇರಕ್ಕೆ, ಅನುಕೂಲವಾದಿ ರಾಜಕಾರಣಕ್ಕೆ ಬಸವ ತತ್ವವನ್ನು ಬಳಸಿ ಇತ್ತೀಚೆಗೆ ನೀಡಲಾಗುತ್ತಿರುವ ಹೇಳಿಕೆಗಳನ್ನು ಸಮಾಜ ಉಪೇಕ್ಷಿಸಬೇಕು. ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿಲ್ಲದು'' ಇದು ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರು  ಲಿಂಗೈಕ್ಯರಾಗುವ 2 ದಿನ ಮುನ್ನ ನೀಡಿದ ಹೇಳಿಕೆ.

ಸಮಾನತೆ,ಶಾಂತಿ, ಸಹಬಾಳ್ವೆ ಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದ  ಶ್ರೀಗಳು ಬಸವಣ್ಣ  ಹೇಳಿತ ತತ್ವ ಸಿದ್ಧಾಂತಗಳಲ್ಲಿ  ಯಾವುದೇ ರಾಜಿ ಮಾಡಿಕೊಂಡವರಲ್ಲ.

ನಿರಂತರವಾಗಿ ಕಾಯಕ ದಾಸೋಹದಲ್ಲಿ ತೊಡಗಿದ್ದ ಅವರು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದರು.ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ  ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಜಾತಿ, ಮತಗಳ ಬೇಧವಿಲ್ಲದೆ ಶಿಕ್ಷಣವನ್ನು ನೀಡಿದ್ದರು.

ನೇರ ಮಾತುಗಳಿಂದ ಹಲವರ ವಿರೋಧ ಕಟ್ಟಿಕೊಂಡಿದ್ದ ಜಾತ್ಯಾತೀತ ಸಂತ ಹಠಾತ್‌ ಲಿಂಗೈಕ್ಯರಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಲಕ್ಷಾಂತರ ಭಕ್ತರಿಗೆ ಬರ ಸಿಡಿಲು ಬಂದೆರಗಿಂತೆ ಸ್ವಾಮೀ ಜಿ ಶನಿವಾರ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾದರು.

ಶಿವೈಕ್ಯರಾಗುವ ಮುನ್ನಾದಿನ ರಾತ್ರಿ 11 ಗಂಟೆಯವರೆಗೆ ಭಕ್ತರಿಗೆ ಆಶೀರ್ವದಿಸಿದ್ದ ಅವರು ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದರು.

ಜಾತಿ ಮತಗಳ ನಡುವಿನ ವೈಷಮ್ಯದ ಕುರಿತಾಗಿ ಪರಮ ವಿರೋಧ ಹೊಂದಿದ್ದ ಅವರು ಜಾತಿ ರಾಜಕಾರಣದ ಕುರಿತಾಗಿಯೂ  ಮನದಲ್ಲಿ ಅಪಾರ ವಿರೋಧ ಹೊಂದಿದ್ದರು ಮತ್ತು ಬಹಿರಂಗವಾಗಿ ವಿರೋಧಿಸಿದ್ದರು. ಹಲವು ಬಾರಿ ನೇರ ಹೇಳಿಕೆಗಳನ್ನು ನೀಡಿ ರಾಜಕಾರಣಿಗಳ ವೈರವನ್ನು ಕಟ್ಟಿಕೊಂಡಿರುವ ಬಗ್ಗೆ ಸ್ವಾಮೀಜಿಗಳ ಬಗ್ಗೆ ಬಲ್ಲವರು ಅವರನ್ನು ನೆನೆಯುತ್ತಾ ಹೇಳಿಕೊಂಡಿದ್ದಾರೆ.

ಏನು ಮುಸ್ಲಿಮರ ರಕ್ತ ಹಸಿರು, ಬ್ರಾಹ್ಮಣರ ರಕ್ತ ಬಿಳಿ, ಬೇರೆಯವರ ರಕ್ತ ಕೆಂಪು ಬಣ್ಣದ್ದೇ, ಸೂಜಿಯನ್ನು ಚುಚ್ಚಿದರೆ ಬರುವ ರಕ್ತ ಕೆಂಪು, ಆಗುವ ಬೇನೆ ಎಲ್ಲರಿಗೂ ಒಂದೇ ಅಲ್ಲವೇ ಎಂದು ಹಲವು ವೇದಿಕೆಗಳಲ್ಲಿ  ಸಂದೇಶ ಸಾರುತ್ತಿದ್ದರು.

ಸಾಮಾನ್ಯ ಸ್ವಾಮೀಜಿಯಾಗಿರದೆ ಮಹಾ ಶಕ್ತಿಯಾಗಿದ್ದ ಶ್ರೀಗಳು ಅಪಾರ ಭಕ್ತರ ಆರಾಧ್ಯ ದೈವವಾಗಿದ್ದರು. ನೊಂದವರ ಪಾಲಿಗೆ ಸಾಂತ್ವನ ಹೇಳುವ ಆಪತ್ಬಾಂಧವರಾಗಿದ್ದರು.

ಡಾ.ರಾಜ್‌ ಹೋರಾಟಕ್ಕೆ ಪ್ರೇರಣೆ
ಕನ್ನಡ ನಾಡು ಕಂಡ ದೊಡ್ಡ ಚಳುವಳಿಯಾದ ಗೋಕಾಕ್‌ ಚಳುವಳಿಗೆ ವರ ನಟ ಡಾ.ರಾಜ್‌ಕುಮಾರ್‌ ಅವರು ಧುಮುಕಲು ಶ್ರೀಗಳು ಪ್ರೇರಣೆಯಾಗಿದ್ದರು. ನಿರಂತರವಾಗಿ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದ ಶ್ರೀಗಳು ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿ ಕನ್ನಡ ಪರ ದೊಡ್ಡ ಧ್ವನಿಯಾಗಿ ಗೋಚರಿಸಿದ್ದರು.

ಜಗದ್ಗುರು ಎನಿಸಿಕೊಂಡ ಸಿದ್ದಲಿಂಗ ಶ್ರೀಗಳಿಗೆ ಕನ್ನಡ ಪರ ಕಾಳಜಿಗೆ , ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿ ನೀಡಿವೆ.

"ಕನ್ನಡದಜಗದ್ಗುರು' ಎಂದೇ ಶ್ರೀಗಳನ್ನು ಕರೆಯುವುದು ಅವರು ಕನ್ನಡ ನಾಡಿಗೆ ಕೊಟ್ಟ ಕೊಡುಗೆಯನ್ನು ಸಾರಿ ಹೇಳುತ್ತದೆ.

ಮೌಢ್ಯಗಳ ವಿರೋಧಿ
ಜಾತ್ಯಾತೀತ ತತ್ವವನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಂಡಿದ್ದ ಶ್ರೀಗಳು ಎಂದೂ ಮೌಢ್ಯಗಳಿಗೆ ಬೆಲೆ ನೀಡುತ್ತಿರಲಿಲ್ಲ. ಅಡ್ಡಪಲ್ಲಕ್ಕಿ  ಉತ್ಸವನ್ನು ವಿರೋಧಿಸಿದ್ದ ಶ್ರೀಗಳು ಪಲ್ಲಕ್ಕಿಯಲ್ಲಿ ಬಸವಣ್ಣನ ವಚನಗಳ ಪುಸ್ತಕಗಳನ್ನಿಟ್ಟು  ಮಾದರಿಯಾಗಿದ್ದರು.

ಸಿದ್ದಲಿಂಗ ಶ್ರೀಗಳ ಆದರ್ಶಗಳನ್ನು , ಹೋರಾಟದ ಜೀವನವನ್ನು ಮುಂದುವರಿಸುವ ಮಹತ್ವದ ಜವಾಬ್ಧಾರಿ ಮಠದ ಮುಂದಿನ ಉತ್ತರಾಧಿಕಾರಿಯ ಮುಂದಿದೆ.

Tags:

Tontadarya seer

Siddhalinga Mahaswamiji

Author/Source:

ವಿಷ್ಣುದಾಸ್ ಪಾಟೀಲ್

Sun, 21 Oct 2018 12:21:27 +0000 vishnudas 332709 at https://www.udayavani.com https://www.udayavani.com/kannada/news/web-focus/332709/tontadarya-seer-siddhalinga-mahaswamiji#comments ಯಕ್ಷಲೋಕದ ನಿಜಾರ್ಥದ ನಾಯಕ ಹಾರಾಡಿ ರಾಮಗಾಣಿಗರು https://www.udayavani.com/kannada/news/web-focus/329793/haradi-rama-ganiga

ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ, ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು ಕಲಾವಿದರಲ್ಲಿ ಸದಾ ನೆನಪಾಗುವ ಹೆಸರು ಹಾರಾಡಿ ರಾಮಗಾಣಿಗರದ್ದು.

ಯಕ್ಷರಂಗದ ಮೇರು ಶಿಖರವಾಗಿದ್ದ ಹಾರಾಡಿ ರಾಮಗಾಣಿಗರು ನಮ್ಮನ್ನಗಲಿ (1968)50 ವರ್ಷಗಳು ಸಂದರೂ ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.

ತನ್ನ ಗತ್ತು ಗೈರತ್ತು , ಹಿತಮಿತವಾದ ಅದ್ಭುತ ಮಾತುಗಾರಿಗೆ , ಸುಂದರವಾದ ಆಳಂಗ, ಆಳ್ತನದಿಂದ  ಸ್ವಾತಂತ್ರ್ಯ ಪೂರ್ವದಲ್ಲಿ ಕರಾವಳಿಯ ರೀಯಲ್‌ ಹೀರೋ ಎನಿಸಿಕೊಂಡಿದ್ದವರು ರಾಮಗಾಣಿಗರು. ಇಂದಿಗೂ ಅವರ ಪಾತ್ರ ವೈಭವವನ್ನು 70 ವರ್ಷ ದಾಟಿದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ನಡುತಿಟ್ಟನ್ನು ಬೆಳಗಿದ ಹಾರಾಡಿ ರಾಮಗಾಣಿಗರು ಕರ್ಣ,ಋತುಪರ್ಣ,ತಾಮ್ರಧ್ವಜ, ಅರ್ಜುನ , ಕೌಂಡ್ಲಿಕ, ಮಾರ್ತಾಂಡತೇಜ, ಭೀಮ ಹಿರಣ್ಯ ಕಶ್ಯಪು,ಜಾಂಬವ,ಭೀಷ್ಮ, ಅಂಗಾರವರ್ಮ, ಚಿತ್ರಸೇನ ಮೊದಲಾದ  ಪಾತ್ರಗಳಿಂದ ಪ್ರಖ್ಯಾತರಾಗಿದ್ದರು. ಅವರು ಮಾಡಿದ ಪಾತ್ರಗಳನ್ನು ಬೇರೆಯವರು ಸರಿಗಟ್ಟುವುದು ಅಸಾಧ್ಯ ಎನ್ನುವುದು ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ.

ಬ್ರಹ್ಮಾವರದ ಬಳಿಯ ಹಾರಾಡಿಯಲ್ಲಿ 1902 ಮೇ 27 ರಂದು ಸುಬ್ಬಣ್ಣ ಗಾಣಿಗ ಮತ್ತು ಕೊಲ್ಲು ದಂಪತಿಗಳ 2 ನೇ ಪುತ್ರನಾಗಿ ಜನಿಸಿದ ರಾಮ ಗಾಣಿಗರು ಬೈಕಾಡಿಯ ಐಗಳ ಮಠದಲ್ಲಿ 2 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು.

ಯಕ್ಷಗಾನ ರಂಗಕ್ಕೆ 14 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ಅವರು ಮೊದಲು ಗೆಜ್ಜೆ ಕಟ್ಟಿದ್ದು ಮಾರಣಕಟ್ಟೆ ಮೇಳದಲ್ಲಿ ಬಾಲಗೋಪಾಲನಾಗಿ. ಒಂದು ವರ್ಷದ ತಿರುಗಾಟದ ಬಳಿಕ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದ ಅವರು ಮತ್ತೆ ಹಿಂತಿರುಗಿ ನೋಡಿದವರಲ್ಲ. ಪ್ರಖ್ಯಾತಿಯ ಉತ್ತುಂಗಕ್ಕೇರಿದ ಅವರು ಕಲಾಮಾತೆಯ ಮೇಳವೊಂದರಲ್ಲಿ 45 ವರ್ಷಗಳ ಕಾಲ ತಿರುಗಾಟ ನಡೆಸಿದ್ದು ದಾಖಲೆಯಾಗಿದೆ. ಮಂದಾರ್ತಿ ಮೇಳ ಮಾತ್ರವಲ್ಲದೆ ಅಮೃತೇಶ್ವರಿ ಮೇಳ ಕೋಟ, ಅಂದಿನ ಕಾಲದ ವರಂಗ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮೇಳದಲ್ಲೂ ಕೆಲ ಕಾಲ ತಿರುಗಾಟ ಮಾಡಿದ್ದರು ಎನ್ನುವುದು ದಾಖಲೆಗಳಿಂದ ಲಭ್ಯವಾಗಿದೆ.

ರಂಗದಲ್ಲೇ ಹಂತ ಹಂತವಾಗಿ ಕಲಿತ ರಾಮಗಾಣಿಗರು ತೆಕ್ಕಟ್ಟೆ ಬಾಬಣ್ಣ ಶ್ಯಾನುಭೋಗರು ಮಾತುಕತೆಯನ್ನು ಕಲಿಸಿದರೆ, ಪಾಂಡೇಶ್ವರ ಪುಟ್ಟಯ್ಯ, ಸಕ್ಕಟ್ಟು ಸುಬ್ಬಣ್ಣಯ್ಯ ಅವರು ಕುಣಿತವನ್ನು ಕಲಿಸಿದ್ದರು. ವೇದಮೂರ್ತಿ ಬಿರ್ತಿ ರಾಮಚಂದ್ರ ಶಾಸ್ತ್ರೀಗಳೂ ರಂಗದ ಕುರಿತಾಗಿ ಮಾರ್ಗದರ್ಶನ ನೀಡಿದ್ದರು.

ರಂಗದಲ್ಲೂ ಕೆಲ ಕಲಾವಿದರನ್ನು ನೆಚ್ಚಿಕೊಂಡಿದ್ದ ರಾಮಗಾಣಿಗರು ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್‌, ಗೋರ್ಪಾಡಿ ವಿಟ್ಠಲ ಪಾಟೀಲ್‌ , ಗುಂಡ್ಮಿ ರಾಮಚಂದ್ರ ನಾವಡರಂತಹ ಭಾಗವತರನ್ನು ನೆಚ್ಚಿಕೊಂಡಿದ್ದರು.  ಸಹ ಪಾತ್ರಗಳಲ್ಲಿ ನೀಲಾವರ ಸುಬ್ಬಣ್ಣ ಶೆಟ್ಟಿ, ಕೊಳ್ಕೆಬೈಲು ಶೀನ, ಶಿರಿಯಾರ ಮಂಜು ನಾಯ್ಕ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ನಾರಾಯಣ, ಉಡುಪಿ ಬಸವ , ಮಾರ್ವಿ ಹೆಬ್ಬಾರ್‌ ಮೊದಲಾದವರನ್ನು ನೆಚ್ಚಿಕೊಂಡಿದ್ದರು.

ಪಾತ್ರವೈಭವದ ಮೂಲಕ ಬಯಲಾಟ ರಂಗವನ್ನು ಶ್ರೀಮಂತಗೊಳಿಸಿದ್ದ ರಾಮಗಾಣಿಗರಿಗೆ 1961 ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 1962 ರಲ್ಲಿ ರಾಜ್ಯ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್‌.ನಿಜಲಿಂಗಪ್ಪನವರು ಪ್ರದಾನ ಮಾಡಿದ್ದರು.

ಕರಾವಳಿಯ ಮೇರು ಕಲೆಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದಿತ್ತ ರಾಮಗಾಣಿಗರು 1964 ರಲ್ಲಿ ಸರ್ವಪಲ್ಲಿ  ಡಾ.ರಾಧಾಕೃಷ್ಣನ್‌ ಅವರು ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.

ಆ ಕಾಲದಲ್ಲಿ ಕರಾವಳಿಯಲ್ಲಿ  ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಮಗಾಣಿಗ ಅವರು ರಂಗದಲ್ಲೂ ನಿಜ ಜೀವನದಲ್ಲೂ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ.

ಮಿತಭಾಷಿಯಾಗಿದ್ದ ಅವರು ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ ಹೊರತಾಗಿಯೂ ನಿರಾಡಂಬರ ಜೀವನನ್ನು ನಡೆಸಿದವರು ಎನ್ನುತ್ತಾರೆ ಅವರ ಒಡನಾಡಿ, 99 ರ ಹರೆಯದ ಹಿರಿಯ ಮದ್ದಲೆ ವಾದಕರಾದ ಹಿರಿಯಡಕ ಗೋಪಾಲ ರಾಯರು.

ಅಂದಿನ ಕಾಲದಲ್ಲಿ ಮೇಳದ ಪೆಟ್ಟಿಗೆಗಳು ಹೊತ್ತುಕೊಂಡು ಹೋಗುವ ಕಾಲವಿತ್ತು.ಒಮ್ಮೆ ಆಟ ಮುಗಿಸಿ ಬರುವಾಗ ದಾರಿಯಲ್ಲಿ ಪೆಟ್ಟಿಗೆ ಹೊತ್ತ ಆಳಿನ ಕಾಲಿಗೆ ದೊಡ್ಡ ಮುಳ್ಳು ಚುಚ್ಚಿ ರಕ್ತ ಬರಲಾರಂಭಿಸಿತಂತೆ. ಪಕ್ಷದಲ್ಲಿದ್ದ ರಾಮಗಾಣಿಗರು ತಕ್ಷಣ ಆತನ ತಲೆಮೇಲಿದ್ದ ಪೆಟ್ಟಿಗೆಯನ್ನು  ತಾನು ಹೊತ್ತಿದ್ದರಂತೆ. ಈ ವಿಚಾರವನ್ನು ಹಿರಿಯಡಕ ಗೋಪಾಲ ರಾಯರೇ ನಮ್ಮ ಬಳಿ ಹಂಚಿಕೊಂಡು ರಾಮಗಾಣಿಗರನ್ನು ನೆನೆಸಿಕೊಂಡರು. ಅವರ ಬಗ್ಗೆ ಹೇಳ ಹೊರಟರೆ ಒಂದು ದಿನವಲ್ಲ , ವರ್ಷ ಕಳೆದರೂ ಹೇಳುವಷ್ಟಿದೆ ಎನ್ನುವುದು ರಾಯರ ಅಭಿಪ್ರಾಯ.

1966ರಲ್ಲಿ ಪಾರ್ಶ್ವವಾಯು ಪೀಡಿತರಾದ ರಾಮಗಾಣಿಗರು 1968  ಡಿಸೆಂಬರ್‌ 11 ರಂದು ಇಹಲೋಕದ ಯಾತ್ರೆ ಮುಗಿಸಿದರು.

ಅವರ ಕಾಲಾನಂತರ ಶ್ರೀ ಕ್ಷೇತ್ರ ಮಂದಾರ್ತಿ ವತಿಯಿಂದ ಅವರ ಕಲಾ ಜೀವನದ ಕುರಿತಾಗಿ ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮಗಾಣಿಗರು ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ.

ಜನ್ಮ ಶಾತಾಬ್ಧಿ ವೇಳೆ ಯಕ್ಷಲೋಕದ ಕೋಲ್ಮಿಂಚು ಎಂಬ ವಿಶೇಷ ಸಂಕಲನವನ್ನೂ ಪ್ರಕಟಿಸಿ ಯುವ ಪೀಳಿಗೆ ರಾಮಗಾಣಿಗರ ಕುರಿತಾಗಿನ ಪರಿಚಯ ಮಾಡುವ ಕಾರ್ಯವನ್ನು ಯಕ್ಷ ದೇಗುಲ ಸಂಸ್ಥೆ ಮಾಡಿದೆ.

ಇಂದಿಗೂ ಹಿರಿಯ ಅಭಿಮಾನಿಗಳ ಮನದಲ್ಲಿ ರಾಮಗಾಣಿಗರು ನಿರ್ವಹಿಸಿದ ಪಾತ್ರಗಳು ರಾರಾಜಿಸುತ್ತಿವೆ. ರಾಮಗಾಣಿಗರ ಆದರ್ಶಗಳು ಇಂದಿನ ಯುವ ಕಲಾವಿದರಿಗೆ ಆದರ್ಶವಾಗಲಿ ಎನ್ನುವುದು ಆಶಯ.

Tags:

Haradi Rama Ganiga

yakshagana

Artist

King

Bright Star

Author/Source:

ವಿಷ್ಣುದಾಸ್ ಪಾಟೀಲ್

Sun, 07 Oct 2018 08:52:18 +0000 vishnudas 329793 at https://www.udayavani.com https://www.udayavani.com/kannada/news/web-focus/329793/haradi-rama-ganiga#comments ಕಳೆದುಕೊಂಡ ಹಲವು,ಸೇರ್ಪಡೆಯಾದ ಹಲವು; ಬೆಳಗುತ್ತಿದೆ ಯಕ್ಷ ಲೋಕ  https://www.udayavani.com/kannada/news/web-focus/328110/yakshagana-before-and-know

ಸಾಂಧರ್ಭಿಕವಾಗಿ ಬಡಗುತಿಟ್ಟಿನ ಪರಂಪರೆಯ ಒಡ್ಡೋಲಗದ ಚಿತ್ರ

(ಕಳೆದ ಸಂಚಿಕೆಯಿಂದ ) ಯಕ್ಷಗಾನವೆನ್ನುವುದು ಈಗ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಮಟ್ಟಿಗೆ ಬೆಳೆದಿದೆ ಆದರೆ ಅದರ ಮೂಲ ಆರಾಧನಾ ಕಲೆ. ಯಕ್ಷಗಾನದ ಮೂಲಕ ಅನಕ್ಷರಸ್ಥರಿಗೂ ಪೌರಾಣಿಕ ಪ್ರಜ್ಞೆ  ಮೂಡಿಸುವ ಉದ್ದೇಶವೂ ಕಲೆಯ ಹುಟ್ಟಿನ ಹಿಂದೆ ಅಡಗಿದೆ ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ ಮತ್ತು ಹಲವು ವಿದ್ವಾಂಸರ ಅಭಿಪ್ರಾಯವೂ ಆಗಿದೆ.

ಪುಣ್ಯ ಕ್ಷೇತ್ರಗಳು, ದೇವಾಲಯಗಳಿಂದ ಹೊರಡುವ ಬಯಲಾಟದ ಮೇಳಗಳಿಗೆ ಹರಕೆಗಳ ಆಟಗಳೇ ಜೀವಾಳ. ಸಾಮಾನ್ಯವಾಗಿ ತೆಂಕು ಬಡಗಿನಲ್ಲಿ ಹಲವು ಹರಕೆ ಮೇಳಗಳಿವೆ.ಪ್ರಮುಖವಾಗಿ ಕಟೀಲು ಕ್ಷೇತ್ರದ ತೆಂಕು ತಿಟ್ಟಿನ 6 ಮೇಳಗಳು ಪ್ರಮುಖವಾದದ್ದು, ಈ ಎಲ್ಲಾ ಮೇಳಗಳಿಗೂ 6 ತಿಂಗಳ ಕಾಲ ಸಂಪೂರ್ಣವಾಗಿ ಹರಕೆ ಆಟಗಳಿವೆ. ಇನ್ನು ಬಡಗಿನಲ್ಲಿ  ಶ್ರೀಕ್ಷೇತ್ರ ಮಂದಾರ್ತಿಯ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 5 ಮೇಳಗಳಿಗೂ 6 ತಿಂಗಳುಗಳ ಕಾಲ ಹರಕೆ ಬಯಲಾಟಗಳಿವೆ. ಸುದೀರ್ಘ‌ ಬುಕ್ಕಿಂಗ್‌ ಆಗಿರುವ ಹಿನ್ನಲೆಯಲ್ಲಿ ಈಗ ಮಳೆಗಾಲದಲ್ಲೂ ದೇವಾಲಯದ ಸಭಾಂಗಣದಲ್ಲಿ ದಿನಕ್ಕೆರಡು ಮಂದಿಯ ಹರಕೆಯ ಆಟಗಳನ್ನು  ಕಾಲಮಿತಿಯ ರೂಪದಲ್ಲಿ  ದೇವಿಗೆ ಸಲ್ಲಿಸಲಾಗುತ್ತಿದೆ.

ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಮೇಳ ತೆಂಕು ತಿಟ್ಟಿನ ಡೇರೆ ಮೇಳ ಆಗಿದ್ದರೆ ಈಗ ಸಂಪೂರ್ಣ ಹರಕೆ ಮೇಳವಾಗಿ ಬದಲಾಗಿದೆ. ನಾಡಿನ ವಿವಿಧೆಡೆ ಕಾಲಮಿತಿ ಪ್ರದರ್ಶನಗಳನ್ನು ನೀಡುತ್ತಿದೆ.

40 ಕ್ಕೂ ಹೆಚ್ಚು ವೃತ್ತಿ  ಮೇಳಗಳಲ್ಲಿ 500 ಕ್ಕೂ ಹೆಚ್ಚು ಕಲಾವಿದರು ಯಕ್ಷಗಾನದ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆಲ್ಲಾ ಯಕ್ಷಗಾನ ರಂಗದ ಕಲಾವಿದರು ತ್ಯಾಗಿಗಳಾಗುವುದು ಅನಿವಾರ್ಯವಾಗಿತ್ತು. ಕಾರಣ ಸಂಪರ್ಕ ಸಾಧನಗಳ ಕೊರತೆ, ವ್ಯವಸ್ಥೆಗಳ ಕೊರತೆ ,ಹಣದ ಕೊರತೆ ಇತ್ಯಾದಿಗಳು ಕಲಾವಿದರನ್ನು ಕಿತ್ತು ತಿನ್ನುತ್ತಿದ್ದವು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಕೆಲ ಕಲಾವಿದರು ಸ್ವಂತ ಕಾರಿನಲ್ಲಿ ದಿನಕ್ಕೆ 4 ಕಾರ್ಯಕ್ರಮದಲ್ಲಿ ಭಾಗಿಯಾಗಿ ಉತ್ತಮ ಸಂಭಾವನೆಯನ್ನು ಪಡೆಯುವ ಮಟ್ಟಿಗೆ ಬಂದು ನಿಂತಿದೆ.

ಈ ಮಟ್ಟಕ್ಕೆ ಯಕ್ಷರಂಗ ಬೆಳೆದ ನಡುವೆಯೂ  ಕಳೆದುಕೊಂಡದ್ದು ಹಲವು ಇದೆ. ಕೆಲವು ಯಕ್ಷಗಾನೀಯ ಶೈಲಿಗಳು, ವೇಷಭೂಷಣಗಳು,ಅರ್ಥಗಾರಿಕೆ, ಹೊಸತರ ನಡುವೆ ಮರೆಯಾಗಿದೆ.

ಪ್ರಸಕ್ತ ಹಿರಿಯ ಅಭಿಮಾನಿಗಳ ಪ್ರಕಾರ ಹಿಂದಿನ ಆಟಗಳೇ  ಚಂದ ಮರಾಯ್ರೇ..ಆ ವಾತಾವರಣ ಈಗ ಇಲ್ಲ  ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಪ್ರೇಕ್ಷಕರ ವ್ಯವಧಾನದ ಕೊರತೆಯೋ , ಅಥವಾ ಕಲಾವಿದರ ನಿರಾಸಕ್ತಿಯೋ ತಿಳಿಯದು ಈಗ ಯಕ್ಷಗಾನಕ್ಕೆ ಅಡಿಪಾಯವಾಗಬೇಕಾದ ಪೂರ್ವ ರಂಗ ಪ್ರಸ್ತುತಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ , ಕೊಡಂಗಿ ಇತ್ಯಾದಿಗಳು ಸೊಬಗು ಕಳೆದುಕೊಳ್ಳುತ್ತಿದೆ. ಡೇರೆ ಮೇಳಗಳಲ್ಲಿ  ಪ್ರೇಕ್ಷಕರು ಹಣ ಕೊಟ್ಟು  ಪ್ರಸಂಗ ನೋಡಲೆಂದೆ ಬರುವ ಕಾರಣ ಇದನ್ನೆಲ್ಲಾ ಮಾಡುವ ಅಗತ್ಯ ವಿಲ್ಲ ಎನ್ನುತ್ತಾರೆ ಕೆಲ ಕಲಾವಿದರು.

ಬಾಲಪಾಠ ಓರ್ವ ಕಲಾವಿದನಿಗೆ ಅಗತ್ಯ ಎನ್ನುತ್ತಾರೆ 99 ರ ಹರೆಯದ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲ ರಾಯರು. ಅಂದರೆ ಭಾಗವತನಾಗುವವನು ಮೊದಲು ಲಯ, ತಾಳ,ರಾಗಜ್ಞಾನ , ಸಾಹಿತ್ಯ ಜ್ಞಾನ ರಂಗ ತಂತ್ರಗಳನ್ನು ಕಲಿತು ಹಂತ ಹಂತವಾಗಿ ಮೇಲೆ ಬರಬೇಕಾಗುತ್ತದೆ. ಸಮರ್ಥ ಗುರುವೊಬ್ಬನ ಮಾರ್ಗದರ್ಶನವಿಲ್ಲದೆ ಯಶಸ್ವಿ ಭಾಗವತನಾಗುವುದು, ಕಲಾವಿದನಾಗುವುದು  ಯಕ್ಷರಂಗದಲ್ಲಿ ಅಸಾಧ್ಯ, ಹೀಗೆ ಪರಂಪರೆಯಿಂದ ಯಕ್ಷರಂಗವನ್ನು ಬೆಳಗಿದವರು ಹಲವು ಗುರುಗಳು ಮತ್ತು ಶಿಷ್ಯರು...

ಮುಂದುವರಿಯುವುದು...

Tags:

yakshagana

before

Know

art

Tredition

Author/Source:

ವಿಷ್ಣುದಾಸ್ ಪಾಟೀಲ್

Sun, 30 Sep 2018 10:55:08 +0000 vishnudas 328110 at https://www.udayavani.com https://www.udayavani.com/kannada/news/web-focus/328110/yakshagana-before-and-know#comments ಶ್ರೀಮಂತವಾದರೂ ಯಕ್ಷಗಾನ ಲೋಕ ಬಡವಾಗುತ್ತಿದೆಯೇ ?  https://www.udayavani.com/kannada/news/web-focus/326388/fantastic-art-in-the-world-is-yakshagana

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ ಮಾತು ಯಕ್ಷಗಾನಾಭಿಮಾನಿಗಳೆಲ್ಲರೂ ಒಪ್ಪುವಂತಹದ್ದು.

ಯಕ್ಷಗಾನದ ಶಕ್ತಿಗೆ ಸಾಕ್ಷಿ ಎಂಬಂತೆ ಅಮೆರಿಕಾ , ಜರ್ಮನ್‌ನಿಂದ ಮಹಿಳೆಯರು ಆಗಮಿಸಿ ಅದನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದಾರೆ. ಕರಾವಳಿಗೆ ಮತ್ತು ಕರಾವಳಿಗರಿಗೆ ಮಾತ್ರ ಸೀಮಿತ ಎನಿಸಿಕೊಂಡ ಕಲೆ  30 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನಗೊಂಡಿದ್ದು, ಅಂತರಾಷ್ಟ್ರೀಯ ಜಾನಪದ ಕಲೆಗಳ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದು ಕಲೆಯ ಶ್ರೇಷ್ಠತೆಗೆ ಸಾಕ್ಷಿ .

ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿರುವ ಕಲೆ ಈಗ ಕೆಲ ಉಳಿಸಿಕೊಳ್ಳಬೇಕಾದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಹಿರಿಯ ಕಲಾವಿದರ, ಕಲಾಭಿಮಾನಿಗಳ ಕೂಗು.

ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣ, ನಾಟ್ಯಗಾರಿಕೆ ತಿಟ್ಟುಗಳಿಗನುಗುಣವಾಗಿ ಭಿನ್ನವಾಗಿದೆ. ಸಾಮಾನ್ಯವಾಗಿ ನಡುತಿಟ್ಟಿನ ಕಲಾ ಪ್ರಕಾರದಲ್ಲಿ ಕರ್ಣಾರ್ಜುನ ಕಾಳಗದ ಕರ್ಣ ಪಾತ್ರವನ್ನು ಹಿಂದಿನಿಂದಲು ವಿಭಿನ್ನವಾಗಿ ಕಾಣಿಸಿಕೊಂಡು ಬರಲಾಗಿದೆ. ತೆಂಕಿನಲ್ಲಿ ಕರ್ಣ ಕೀರಿಟ ವೇಷಧಾರಿಯಾದರೆ, ಬಡಾಬಡಗಿನಲ್ಲಿ ಸಾಮನ್ಯ ಮುಂಡಾಸಿನ ವೇಷವಾಗಿ ಕಾಣಿಸಲಾಗುತ್ತದೆ.

ಕೃಷ್ಣನ ವೇಷವೂ ಬಡಗುತಿಟ್ಟಿನಲ್ಲಿ ವಿಶಿಷ್ಟವಾಗಿ ನಿರಿಯುಟ್ಟು ಕಾಣಿಸಲಾಗುತ್ತದೆ. ಸೀರೆಯನ್ನುಟ್ಟು ವಿಶಿಷ್ಟವಾಗಿ ವಿಷ್ಣು ಮತ್ತು ಕೃಷ್ಣನನ್ನು ಕಾಣಿಸಿದರೆ, ರಾಮನ ಪಾತ್ರದಲ್ಲಿ ಪ್ರಸಂಗಗಳಿಗನುಗುಣವಾಗಿ ಭಿನ್ನ ವೇಷಗಾರಿಕೆ ಕಾಣಬಹುದು.

ಸೀತಾ ಕಲ್ಯಾಣದವರೆಗಿನ ರಾಮನನ್ನು ಯುವರಾಜನಂತೆ ಕಾಣಿಸಿದರೆ.ಕುಶ ಲವ ಕಾಳಗದ ರಾಮನನ್ನು ಮೀಸೆಯೊಂದಿಗೆ  ಕೀರಿಟ ವೇಷದಲ್ಲಿ ಕಾಣಿಸಲಾಗುತ್ತಿದೆ.

ಯಕ್ಷರಂಗದಲ್ಲಿ ಈಗಾಗಲೇ ರಾಮ ಮತ್ತು ಕೃಷ್ಣನ ಪಾತ್ರದ ವೇಷಭೂಷಣದ ಕುರಿತಾಗಿ ಹಲವು ಚರ್ಚೆಗಳು ನಡೆದಿವೆ. ರಾಮನಿಗೆ ಮೀಸೆ ಇಡುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಕೇಳಲಾಗುತ್ತದೆ. ಆದರೆ ಬಡಗಿನಲ್ಲಿ ಕಿರೀಟ ವೇಷವನ್ನು ಮೀಸೆ ಇಲ್ಲದೆ ಕಾಣಿಸಲಾಗುತ್ತದೆಯೇ?

ವಾನರ ಸ್ವರೂಪಿ ಪಾತ್ರಗಳಾದ ಹನುಮಂತ, ವಾಲಿ, ಸುಗ್ರೀವ , ಮೈಂದ, ದ್ವಿವಿದ , ಮತ್ಸ್ಯ ಹನುಮ ಮೊದಲಾದ ಪಾತ್ರಗಳಲ್ಲಿ ಮುಖವರ್ಣಿಕೆಯಲ್ಲಿ ಸಾಮೀಪ್ಯವಿದ್ದರೆ  ವೇಷಭೂಷಣಗಳಲ್ಲಿ ಭಿನ್ನತೆ ಇದೆ.

ಯಕ್ಷಗಾನದಲ್ಲಿ ಹನುಮಂತನ ವೇಷವನ್ನು ಈಗ ಕ್ಯಾಲೆಂಡರ್‌ ಹನುಮನಂತೆ ಕಾಣಸಲಾಗುತ್ತಿದೆ. ಯಕ್ಷಗಾನ ವೇಷಭೂಷಣದಲ್ಲಿ ಹಿಂದೆ ಹನುಮಂತನ ಪಾತ್ರ ನಿರ್ವಹಿಸಲಾಗುತ್ತಿತ್ತು. ಯಕ್ಷಗಾನದಲ್ಲಿ ಹನುಮಂತನಿಗೆ ಹಿಂದೆ ಬಾಲ ಕಟ್ಟದೆ ಹೆಗಲು ವಸ್ತ್ರವನ್ನು ಬಾಲದ ಸಾಂಕೇತಿಕವಾಗಿ ತೋರಿಸಲಾಗುತ್ತಿತ್ತು ಎನ್ನುವುದು ಹಿರಿಯ ಕಲಾವಿದರ ಅಭಿಪ್ರಾಯ.

ವಾಲಿ, ಸುಗ್ರೀವ ಪಾತ್ರಗಳನ್ನು ಬಣ್ಣದ ತಟ್ಟಿ ಕಟ್ಟಿ ಮಾಡುವ ಪರಂಪರೆ ಹಿಂದೆ ಇತ್ತು ಎನ್ನುವುದು ಹಿರಿಯ ಕಲಾವಿದರ ನೆನಪಾದರೆ, ಈಗ ಬಡಗು ಮತ್ತು ತೆಂಕಿನಲ್ಲಿ ಕಿರೀಟ ವೇಷಗಳನ್ನಾಗಿ ಕಾಣಿಸಿಕೊಳ್ಳಲಾಗುತ್ತಿದೆ.

ಕಲಾವಿದರು ಮುಖವರ್ಣಿಕೆಯಲ್ಲಿ ಪ್ರತೀಪಾತ್ರಕ್ಕೂ ತಮ್ಮದೇ ಆದ ಬದಲಾವಣೆಯನ್ನು ಮಾಡುತ್ತಾ ಸಾಗಿದ್ದಾರೆ. ನಡುತಿಟ್ಟಿನ ಮುಖವರ್ಣಿಕೆ ವಿಭಿನ್ನವಾಗಿದ್ದರೆ. ತೆಂಕಿನ ಮುಖವರ್ಣಿಕೆಯಲ್ಲಿ ಹೆಚ್ಚಿನ ಕಸುಬನ್ನು ಕಾಣಬಹುದು.

ಬಡಗಿನ ಬಣ್ಣದ ವೇಷದ ಸೊಬಗು ಕಳೆದುಹೋಗುವ ಕಾಲದಲ್ಲಿ ಚುಟ್ಟಿ ಇಟ್ಟು (ಅಕ್ಕಿ ಹಿಟ್ಟಿಗೆ ಸುಣ್ಣ ಬೆರೆಸಿ ಸಿದ್ದಪಡಿಸುವ ಮೇಕಪ್‌ ) ಬಣ್ಣದ ವೇಷ ಮಾಡುವ ಕಲಾವಿದರು ಬೆರಳೆಣಿಕೆಯವರಾಗಿದ್ದಾರೆ. ಆದರೆ ತೆಂಕಿನಲ್ಲಿ  ಬಣ್ಣದ ವೇಷಧಾರಿಗಳು ಸಂಖ್ಯೆ ಸಾಕಷ್ಟಿದ್ದು ಅಲ್ಲಿ  ರಾಕ್ಷಸ ಪಾತ್ರಗಳು ಶ್ರೀಮಂತವಾಗಿ ರಂಗದ ಮೇಲೆ ಆರ್ಭಟಿಸುತ್ತಿವೆ.

ದಗಲೆ(ಸಾಮಾನ್ಯ ಭಾಷೆಯಲ್ಲಿ ಅಂಗಿ) ಪ್ರತೀ ಪಾತ್ರಕ್ಕೂ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬಡಗುತಿಟ್ಟಿನಲ್ಲಿ ಕೆಂಪು, ಹಸಿರು, ಕಪ್ಪು  ಬಣ್ಣದ ದಗಲೆಯನ್ನು ಬಳಸಲಾಗುತ್ತದೆ. ಹಿಂದೆ ನೇರಳೆ ಬಣ್ಣದ ದಗಲೆಯನ್ನು ಬಳಸಲಾಗುತ್ತಿತ್ತು,ಈಗ ಮರೆಯಾಗಿದೆ.

ಕಿರೀಟ ವೇಷಗಳಾರೆ ಸಾಮಾನ್ಯ ವಾಗಿ ಕೆಂಪು, ಹಸಿರು ದಗಲೆಯನ್ನು ಸಾತ್ವಿಕ ಪಾತ್ರಗಳಿಗೆ ಬಳಸುತ್ತಾರೆ. ಖಳ ಪಾತ್ರಗಳಿಗೆ ಕಪ್ಪು ದಗಲೆಯನ್ನು ಬಳಸಲಾಗುತ್ತದೆ. ಈಗ ಬಡಗುತಿಟ್ಟಿನಲ್ಲಿ ಭೀಮನ ಪಾತ್ರಕ್ಕೂ ಕೆಲ ಕಲಾವಿದರು ಕಪ್ಪು ದಗಲೆ ಬಳಕೆ ಮಾಡುತ್ತಾರೆ. ತಾಮ್ರಧ್ವಜ,ವೀರಮಣಿ ,ಶಲ್ಯ ಮೊದಲಾದ ಮುಂಡಾಸು ವೇಷಗಳಿಗೆ ಕಪ್ಪು ದಗಲೆ ಬಳಸಲಾಗುತ್ತಿದೆ.

ಕಳೆದುಕೊಂಡ ಹಲವು,ಸೇರ್ಪಡೆಯಾದ ಹಲವು..(ಮುಂದುವರಿಯುವುದು)

Tags:

art

world

yakshagana

changes

Author/Source:

ವಿಷ್ಣುದಾಸ್ ಪಾಟೀಲ್

Sun, 23 Sep 2018 08:56:31 +0000 vishnudas 326388 at https://www.udayavani.com https://www.udayavani.com/kannada/news/web-focus/326388/fantastic-art-in-the-world-is-yakshagana#comments ಅಂದು v/s ಇಂದು; ಯಕ್ಷ ಲೋಕದಲ್ಲಿ ಮತ್ತೆ ಹಳೆಯ ಕಾಲ ಬರುವುದೇ ?  https://www.udayavani.com/kannada/news/web-focus/324759/yakshagana-then-and-know

1965 ರ ಸುಮಾರಿನ ಮಂದಾರ್ತಿ ಮೇಳದ ಯಕ್ಷಗಾನದ ದೃಶ್ಯ

ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಮರೆಯಾದ ದಿಗ್ಗಜರು ನೂರಾರು ಮಂದಿ. ತಲೆಮಾರುಗಳಿಂದ ವಿವಿಧ ಪರಂಪರೆ ವಿಶಿಷ್ಟತೆಗಳನ್ನು ತನ್ನೊಳಗೆ ಸೇರಿಸಿಕೊಂಡಿರುವ ಶ್ರೀಮಂತ ಕಲೆ ಯಕ್ಷಗಾನ. ಕಲೆಗಾಗಿ ತಮ್ಮ ಸಂತೋಷವನ್ನೆಲ್ಲಾ ಬದಿಗೊತ್ತಿ ಬದುಕನ್ನೇ ನಿಸ್ವಾರ್ಥ ಭಾವದಿಂದ ಮುಡಿಪಾಗಿಟ್ಟವರು ಹಲವಾರು ಮಂದಿ ದಿಗ್ಗಜರು. ಅವರೆಲ್ಲಾ ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಹೋದರು ತಮ್ಮ ಅದ್ಭುತ ಕೊಡುಗೆಳಿಂದಾಗಿ ಇಂದಿಗೂ ಕೆಲವರು ಕಲಾಲೋಕದಲ್ಲಿ ನಿತ್ಯ , ಇನ್ನು ಕೆಲವರು ಆಗಾಗ ನೆನಪಾಗುತ್ತಾರೆ. ಇತಿಹಾಸದ ಪುಟಗಳಲ್ಲಿ ಸೇರಿರುವ ಅವರೆಲ್ಲಾ ಕಲೆ ಇರುವವರೆಗೆ ಸದಾ ನೆನಪಿನಲ್ಲಿ ಉಳಿಯುತ್ತಾರೆ.

ಯಕ್ಷಗಾನವೊಂದರ ಪ್ರದರ್ಶನ ಬಳಿಕ ಅಭಿಮಾನಿಯೊಬ್ಬರು ಯುವ ಕಲಾವಿದನೊಬ್ಬನ ಪಾತ್ರವನ್ನು ನೋಡಿ ತಟ್ಟನೆ ಹಿರಿಯ ಕಲಾವಿದರ ಹೆಸರು ಹೇಳಿ .....ಅವರ ಹಾಗೆ ಆಗದಿದ್ದರೂ ಅಡ್ಡಿಲ್ಲ..ಮಾಡಿದ್ದಾನೆ... ಎನ್ನುವುದು ರೂಢಿ.

ತೆಂಕಿನ ಕಂಸವಧೆ ಪ್ರಸಂಗವೊಂದರ ಪ್ರದರ್ಶನಕ್ಕೆ ತೆರಳಿದ್ದ ವೇಳೆ ಅಪರೂಪಕ್ಕೆ ಬಂದ ಹಿರಿಯ ಅಭಿಮಾನಿಯೊಬ್ಬರು ಹೇಳಿದ ಮಾತು ಪುತ್ತೂರು ನಾರಾಯಣ ಹೆಗ್ಡೆಯವರ ಕಂಸ ನೋಡಿದ್ದೆ, ಆ ರೀತಿಯ ಕಂಸ ಮತ್ತೆ ಬರುವುದು ಅಸಾಧ್ಯ ಎಂದರು. ಅಂದರೆ ಆ ಪಾತ್ರದಲ್ಲಿ ಅವರನ್ನು ಸರಿಗಟ್ಟುವ ಇನ್ನೋರ್ವ ಕಲಾವಿದ ಇಲ್ಲ ಎನ್ನಬಹುದು.

ಪ್ರಸಿದ್ಧ ಕಲಾವಿದರಿಗೆ ತನ್ನದೆ ಆದ ಕೆಲ ಪಾತ್ರಗಳು ಅಪಾರ ಖ್ಯಾತಿ ತಂದುಕೊಟ್ಟಿದ್ದು ಇಂದಿನ ಕಲಾವಿದರು ಆ ಛಾಪನ್ನು ಅನುಸರಿಸುತ್ತಿದ್ದಾರೆ, ಅನುಕರಿಸುತ್ತಲೂ ಇದ್ದಾರೆ.

ದುಷ್ಟಬುದ್ದಿ ಪಾತ್ರ ದಿವಂಗತ ಮಹಾಬಲ ಹೆಗಡೆಯವರಿಗೆ ಅಪಾರ ಖ್ಯಾತಿ ತಂದುಕೊಟ್ಟಿದ್ದ ಪಾತ್ರ. ಬಳಿಕ ಆ ಪಾತ್ರಕ್ಕೆ ಪದ್ಮಶ್ರಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತನ್ನದೇ ಆದ ನ್ಯಾಯ ಒದಗಿಸಿಕೊಟ್ಟು ಅದನ್ನು ಸಮೀಪಿಸಲು ಬೇರೆಯವರಿಗೆ ಅಸಾಧ್ಯ ಎನ್ನುವ ಮಟ್ಟಿಗೆ ಅಭಿನಯಿಸಿ ಹಲವು ಯುವ ಕಲಾವಿದರಿಗೆ ದಾರಿ ತೋರಿಸಿ ಕೊಟ್ಟಿದ್ದಾರೆ.

ನಳದಮಯಂತಿ ಪ್ರಸಂಗದಲ್ಲಿ  ತೆಂಕು ತಿಟ್ಟಿನಲ್ಲಿ ಸವಾಲಿನ ಪಾತ್ರವಾದ ಬಾಹುಕ ಪಾತ್ರಕ್ಕೆ ಪೆರುವೋಡಿ ನಾರಾಯಣ ಭಟ್ಟರು ತನ್ನದೇ ಆದ ನ್ಯಾಯ ಒದಗಿಸಿ ಅಭಿಮಾನಿಗಳಲ್ಲಿ ತನ್ನದೇ ಆದ ಹೆಸರು ಉಳಿಸಿಕೊಂಡಿದ್ದಾರೆ. ಬಡಗಿನ ಹಿರಿಯ ಪ್ರೇಕ್ಷಕರು ಬಾಹುಕನ ಪಾತ್ರದಲ್ಲಿ ಹಾಸ್ಯಗಾರ ಕೋರ್ಗು ಅವರನ್ನು ನೆನಪಿಸಿಕೊಳ್ಳುತ್ತಾರೆ.

ಬಡಗುತಿಟ್ಟಿನಲ್ಲಿ  ಇಂದು ಬಡವಾಗುತ್ತಿರುವ ಬಣ್ಣದ ವೇಷದ ವಿಚಾರಕ್ಕೆ ಬಂದರೆ ಎಲ್ಲರೂ ಸಕ್ಕಟ್ಟು ಲಕ್ಷ್ಮಿ ನಾರಾಯಣಯ್ಯ ಅವರನ್ನು ನೆನಪಿಸಿ ಕೊಳ್ಳುತ್ತಾರೆ. ಅವರ ಆಳ್ತನ, ಸ್ವರ ತ್ರಾಣ, ವೇಷಗಾರಿಕೆಯ ವೈಭವ, ದೈತ್ಯಾಕಾರ ಪ್ರೇಕ್ಷಕರಲ್ಲಿ ನಿಜವಾಗಿಯೂ ಭೀತಿ ಹುಟ್ಟಿಸುವಂತಾಗಿತ್ತು. ಇಂದು ಅಂತಹ ವೇಷಗಳು ಕಾಣ ಸಿಗುವುದಿಲ್ಲ ಎನ್ನುವುದು ಹಿರಿಯ ಕಲಾವಿದರದ್ದು, ಪ್ರೇಕ್ಷಕರ ಕೊರಗು..

ಯಕ್ಷಗಾನದಲ್ಲಿ 'ನಡೆ' ಅಂದರೆ ಪಾತ್ರಕ್ಕೆ ಇರುವ ದಾರಿ . ಹೀಗೆ ಸಾಗಬೇಕು ಎನ್ನುವ ಕ್ರಮ ಇದೆ. ಅಂದರೆ ಮಾತುಗಾರಿಕೆಯಲ್ಲೂ , ಅಭಿನಯದಲ್ಲೂ , ವೇಷಗಾರಿಕೆಯಲ್ಲೂ  ಕೆಲ ವಿಶಿಷ್ಟತೆಗಳಿವೆ. ಇಲ್ಲಿ ಒಬ್ಬ ಮಾಡಿದಂತೆ ಇನ್ನೊಬ್ಬ ಮಾಡಬೇಕೆಂದೆನಿಲ್ಲ ಆದರೆ ಪಾತ್ರದ ಔಚಿತ್ಯ ಪ್ರಧಾನವಾಗುತ್ತದೆ. ಹೀಗಾಗಿ ಪದ್ಯಕ್ಕೆ ಕುಣಿಯುವಾಗಲೂ , ಅರ್ಥ ಹೇಳುವಾಗಲೂ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯುವುದು ಅನಿವಾರ್ಯವಾಗುತ್ತದೆ. ಇಂದಿನ ದಿನಗಳಲ್ಲಿ  ಯುವ ಕಲಾವಿದರಲ್ಲಿ ಕಲಿಯುವ ಮತ್ತು ಹಿರಿಯರಲ್ಲಿ ಕೇಳುವ ಆಸಕ್ತಿ ಕಡಿಮೆಯಾಗುತ್ತಿರುವುದು, ತನ್ನದೇ ಆದ ಹೊಸ ಶೈಲಿ (ಯಕ್ಷಗಾನ ರಂಗಭೂಮಿಗೆ ಸರಿಹೊಂದದ) ಹುಟ್ಟು ಹಾಕಲು ಯತ್ನಿಸುತ್ತಿರುವುದು ಕಲೆ ಬೆಳೆದು ಬಂದ ಹಾದಿಯನ್ನು ಬಿಟ್ಟು ಅಡ್ಡ ದಾರಿ ಹಿಡಿದುದನ್ನು ಸೂಚಿಸುತ್ತಿದೆ ಎನ್ನಬಹುದು.

ಮುಂದುವರಿಯುವುದು...

Tags:

yakshagana

artists

tradition

Famous

Author/Source:

ವಿಷ್ಣುದಾಸ್ ಪಾಟೀಲ್

Sun, 16 Sep 2018 10:30:08 +0000 vishnudas 324759 at https://www.udayavani.com https://www.udayavani.com/kannada/news/web-focus/324759/yakshagana-then-and-know#comments ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾದರೆ 26ರ ರ‍್ಯಾಪ್‌ ಗಾಯಕ  https://www.udayavani.com/kannada/news/web-focus/323237/rapper-mac-miller-died-at-the-age-of-26

ಆತನಿಗಿನ್ನೂ ವಯಸ್ಸು 26, ತನ್ನ  ಹಾಡುಗಳ ಮೂಲಕ ಯುವ ಹೃದಯಗಳಲ್ಲಿ ಹುಚ್ಚೆಬ್ಬಿಸಲು ಆರಂಭಿಸಿದ್ದ . ಪ್ರಖ್ಯಾತಿಯ ಉತ್ತುಂಗಕ್ಕೇರಬೇಕಾದ ಹುಡುಗ ಚಿಗುರುವಾಗಲೇ ಮರೆಯಾಗಿ ಹೋಗಿದ್ದಾನೆ.

ಹೌದು ಅಮೆರಿಕದ ಯುವ ರ‍್ಯಾಪ್‌ ಹಾಡುಗಾರ ಮೆಕ್‌ ಮಿಲ್ಲರ್‌ ಕ್ಯಾಲಿಫೋರ್ನಿಯಾದ ತನ್ನ ನಿವಾಸದಲ್ಲಿ  ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡ್ರಗ್ಸ್‌ ಓವರ್‌ಡೋಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.

ಮೆಕಲೊಮ್‌ ಜೆಮ್ಸ್‌ ಮೆಕ್‌ ಕೊರ್ಮಿಕ್‌ ಎಂಬ ಮೂಲ ಹೆಸರಿನ ಗಾಯಕ 2011 ರಲ್ಲಿ ಮೊದಲ ಅಲ್ಬಂ ಹೊರತಂದು ಹಲವು ರ‍್ಯಾಪ್‌ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಪಿಟ್ಸ್‌ಬರ್ಗ್‌ನಲ್ಲಿ ಜನಿಸಿದ್ದ ಮೆಕ್‌ ಮಿಲ್ಲರ್‌ ಶಾಲೆಯಲ್ಲಿರುವಾಗಲೆ ಗಾಯಕನಾಗಿ ಹೊರ ಹೊಮ್ಮಿದ್ದರು. 15 ರ ಹರೆಯದಲ್ಲಿ  ಎಝ್ ಮ್ಯಾಕ್‌ ಎಂಬ ಹೆಸರಿನಲ್ಲಿ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದ್ದರು. 2013 ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದಿದ್ದರು.

ಪ್ರಖ್ಯಾತ ಗಾಯಕರಾಗಿದ್ದ ಕೆಂಡ್ರಿಕ್‌ ಲಾಮರ್‌ ಮತ್ತು ಫಾರ್ರೆಲ್‌ ವಿಲಿಯಮ್ಸ್‌ ಅವರೊಂದಿಗೆ ಜುಗಲ್‌ಬಂದಿ ಮಾಡಿಯೂ ಗಮನ ಸೆಳೆದಿದ್ದರು.

ಬೀಟ್ಸ್‌ಗಳ ಜೊತೆಗೆ ಹಾಡುತ್ತಿದ್ದುದು ಮೆಕ್‌ ಮಿಲ್ಲರ್‌ ಹೆಚ್ಚುಗಾರಿಕೆಯಾಗಿತ್ತು, ಹೆಚ್ಚಿನ ರ‍್ಯಾಪರ್‌ಗಳಿಗೆ ಬೀಟ್ಸ್‌ಗಳ ಜೊತೆಗೆ ಹಾಡುವುದು ಕಷ್ಟಕರವಾಗಿತ್ತು. ಪಿಯಾನೋವನ್ನು 6 ವರ್ಷದ ಬಾಲಕನಿರುವಾಗಲೇ ಅಭ್ಯಸಿಸಲು ಆರಂಭಿಸಿದ್ದರು. ಡ್ರಮ್ಸ್‌ಗಳನ್ನೂ ಆಕರ್ಷಕವಾಗಿ ಬಾರಿಸುತ್ತಿದ್ದ ಅವರು ಪಾಶ್ಚಾತ್ಯ ಸಂಗೀತ ಲೋಕದ ದೈತ್ಯ ಪ್ರತಿಭೆಯಾಗುವ ಎಲ್ಲಾ ಲಕ್ಷಣಗಳಿದ್ದವು.

ಪ್ರೇಯಸಿಯಿಂದ ದೂರವಾಗಿದ್ದ ಮೆಕ್‌
ಪ್ರೇಯಸಿ , ಗಾಯಕಿ ಅರಿಯಾನಾ ಗ್ರ್ಯಾಂಡೆ ಅವರಿಂದ ದೂರಾದ ಬಳಿಕ ಮೆಕ್‌ ಅಮೆರಿಕದಲ್ಲಿ ಭಾರಿ ಸುದ್ದಿಯಾಗಿದ್ದರು.
ಅರಿಯಾನಾ  ಮೆಕ್‌ ಜೋಡಿ 2017 ರಲ್ಲಿ ಜೊತೆಯಾಗಿ ಹಲವು ಕಾರ್ಯಕ್ರಮಗಳನ್ನು ನೀಡಿ ಯುವ ಜನತೆಯನ್ನು ಹುಚ್ಚೆಬ್ಬಿಸಿದ್ದರು.

ಪ್ರೇಯಸಿ ದೂರಾದ ಬಳಿಕವೂ ಕಾರ್ಯಕ್ರಮಗಳನ್ನು ಮುಂದುವರಿಸಿದ್ದ ಮೆಕ್‌ ಮಿಲ್ಲರ್‌ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಯಾವ ಟೀಕೆಗೂ ತಲೆ ಕೆಡಿಸಿಕೊಂಡಿರಲಿಲ್ಲ.

ಮಿಲ್ಲರ್‌ ನಿಧನಕ್ಕೆ ವಿಶ್ವದ ಹಲವಾರು ರ‍್ಯಾಪ್‌ ಗಾಯಕರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಕಂಬನಿ ಸುರಿಸಿದ್ದಾರೆ.

Tags:

Rapper Mac Miller

Died

26

Apparent Overdose

Author/Source:

ವಿಷ್ಣುದಾಸ್ ಪಾಟೀಲ್

Sun, 09 Sep 2018 06:25:59 +0000 vishnudas 323237 at https://www.udayavani.com https://www.udayavani.com/kannada/news/web-focus/323237/rapper-mac-miller-died-at-the-age-of-26#comments ಹಿಂಸೆ ವಿರುದ್ಧ ನಿರಂತರ ಆಕ್ರೋಶ ; ಕಟು ಪ್ರವಚನಗಳ ಸಂತ ಜಿನೈಕ್ಯ  https://www.udayavani.com/kannada/news/web-focus/321530/jain-monk-tarun-sagar-passes-away

ಅಹಿಂಸೆಯೆ  ಪರಮಧರ್ಮ ಎನ್ನುವ ಜೈನ ಮುನಿಗಳಲ್ಲಿ  ತರುಣ್‌ ಸಾಗರ್‌ ಜಿ ಮಹಾರಾಜ್‌ ಅವರದ್ದು ಬಲು ದೊಡ್ಡ ಹೆಸರು. ಅವರ ಖ್ಯಾತಿಗೆ ಕಾರಣವಾದುದ್ದು ಏರು ಧ್ವನಿಯ ಪ್ರವಚನಗಳು. ಭ್ರಷ್ಟಾಚಾರ, ಮದ್ಯಪಾನ , ಪ್ರಾಣಿಹತ್ಯೆಯ ವಿರುದ್ಧ ಪ್ರತೀ ಪ್ರವಚನದಲ್ಲೂ  ಆಕ್ರೋಶ ಹೊರ ಹಾಕಿದ ಮುನಿ ಅತ್ಯಂತ ಕಠಿಣ ಸಲ್ಲೇಖನ ವೃತ ನಡೆಸಿ ಇಹಲೋಕ ತ್ಯಜಿಸಿ ಜಿನೈಕ್ಯರಾಗಿದ್ದಾರೆ.

ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಗುಹಾಂಚಿ ಎಂಬ ಹಳ್ಳಿಯಲ್ಲಿ 1967 ರಲ್ಲಿ ಪ್ರತಾಪ್‌ ಚಂದ್ರ ಜೈನ್‌ ಮತ್ತು ಶಾಂತಿ ಬಾಯಿ ಜೈನ್‌ ಅವರ ಸುಪುತ್ರನಾಗಿ ಜನಿಸಿದ ತರುಣ್‌ ಸಾಗರ್‌ ಅವರ ಬಾಲ್ಯದ ಹೆಸರು ಪವನ್‌ ಕುಮಾರ್‌.

ನೀನೂ ದೇವರಾಗುತ್ತಿ !
13 ವರ್ಷದ ಬಾಲಕ ಪವನ್‌ ಕುಮಾರ್‌ ಅವರು ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ವೇಳೆ ನೀನೂ ದೇವರಾಗುತ್ತಿ ಎನ್ನುವ ಮಾತನ್ನು ಕೇಳಿ ಸನ್ಯಾಸದತ್ತ ಹೊರಳಿದರು. 20 ನೇ ವಯಸ್ಸಿನಲ್ಲಿ  ದಿಗಂಬರ್‌ ಪುಷ್ಪದಂತ್‌ ಸಾಗರ್‌ ಜಿ ಅವರ ಶಿಷ್ಯರಾಗಿ ದಿಗಂಬರರಾದರು.

ಅಂದಿನಿಂದ ಕೊನೆಯುಸಿರಿರುವ ವರೆಗೆ ಜೈನ ದಿಗಂಬರ ಸನ್ಯಾಸ ಧರ್ಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ದೇಹವನ್ನು ದಂಡಿಸಿಕೊಂಡಿದ್ದ ತರುಣ್‌ ಸಾಗರ್‌ ಜಿ ಅವರು ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದರು.

ಎಲ್ಲೇ ಪ್ರವಚನ ಮಾಡಿದರೂ ಧನದಾಸೆಗೆ ಬೀಳಬೇಡಿ, ಮಾಂಸ, ಮದ್ಯ ವರ್ಜಿಸಿ, ಭ್ರಷ್ಟಾಚಾರ ವಿರೋಧಿಸಿ, ಪರಿಸರ ಉಳಿಸಿ ಎನ್ನುವ ಸಂದೇಶವನ್ನು ಕಿಡಿ ಕಿಡಿಯಾಗಿ  ನೀಡುತ್ತಿದ್ದರು.

ಆರ್‌ಎಸ್‌ಎಸ್‌ ಬೆಲ್ಟ್ ಬದಲಿಸಿ ಬಿಟ್ಟರು!
2009 ರಲ್ಲಿ ಆರ್‌ಎಸ್‌ಎಸ್‌ ಕಚೇರಿ ನಾಗಪುರದಲ್ಲಿ ವಿಜಯದಶಮಿ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ್ದ ತರುಣ್‌ ಸಾಗರ್‌ ಜಿ ತನ್ನ ಸಂದೇಶದ ವೇಳೆ ಆರ್‌ಎಸ್‌ಎಸ್‌ನಗಣವೇಷಧಾರಿಗಳು ಧರಿಸುವ  ಚರ್ಮದ ಬೆಲ್ಟ್ ಬಗ್ಗೆ ಉಲ್ಲೇಖ ಮಾಡಿ ಬದಲಿಸುವಂತೆ ಸಲಹೆ ನೀಡಿದ್ದರು. ಲೆದರ್‌ ಬೆಲ್ಟ್ ಪ್ರಾಣಿ ಹಿಂಸೆಯ ಉತ್ಪನ್ನ ಎನ್ನುವುದು ಅವರ ವಾದವಾಗಿತ್ತು. ಅವರ ಸಲಹೆಯಂತೆ ಬೆಲ್ಟ್ ಬದಲಾವಣೆ ಮಾಡಲಾಗಿತ್ತು.

ಅಹಿಂಸಾ ಮಹಾ ಕುಂಭ
ಮಾಂಸ ಮತ್ತು ಚರ್ಮದ ಉತ್ಪನ್ನಗಳನ್ನು ವಿದೇಶಕ್ಕೆ  ರಫ್ತು ಮಾಡುವುದನ್ನು ನಿಲ್ಲಿಸಬೇಕು ಎಂದು ಅಹಿಂಸಾ ಮಹಾ ಕುಂಭ ಆಂದೋಲನವನ್ನು ನಡೆಸಿದ್ದರು.

ಲವ್‌ ಜಿಹಾದ್‌ ವಿರುದ್ಧ ಕಿಡಿ
ಲವ್‌ ಜಿಹಾದ್‌ ವಿಚಾರದಲ್ಲಿ  ಆಕ್ರೋಶ ಹೊರ ಹಾಕಿದ್ದ ತರುಣ್‌ ಸಾಗರ್‌ ಜಿ ಹಿಂದೂ ಧರ್ಮೀಯರನ್ನು ಮತಾಂತರ ಮಾಡಲು ಕೆಲ ಇಸ್ಲಾಂ ಧರ್ಮೀಯರು ಮಾಡಿರುವ ಪಿತೂರಿ ಎಂದಿದ್ದರು. ತ್ರಿವಳಿ ತಲಾಖ್‌ ಪದ್ಧತಿಯೂ ರದ್ಧಾಗಬೇಕು ಎಂದು ಅವರು ಆಗ್ರಹಿಸಿದ್ದರು.

ಹೊಟ್ಟೆ ಕಿಚ್ಚು ಮನುಷ್ಯನನ್ನು ಸುಡುತ್ತದೆ
ತನ್ನ ಊಟಕ್ಕಾಗಿ ಮನುಷ್ಯ ಅಹಿಂಸಾ ಮಾರ್ಗದ ಮೂಲದ ದಾರಿ ಕಂಡು ಕೊಳ್ಳಬೇಕು. ಇನ್ನೊಬ್ಬ ಹೆಚ್ಚು ಉಣ್ಣುತ್ತಿದ್ದಾನೆ ಎನ್ನುವುದನ್ನು ನೋಡಿ ಹೊಟ್ಟೆಕಿಚ್ಚು ಪಡಬಾರದು ಎನ್ನುವುದು ಅವರ ಸಂದೇಶವಾಗಿತ್ತು.

ಹಲವು ಪತ್ರಿಕೆಗಳಿಗೆ ಲೇಖನಗಳ ಮೂಲಕ ಸಂದೇಶ ನೀಡಿದ್ದ ತರುಣ್‌ ಸಾಗರ್‌ ಜಿ ಅವರು ತನ್ನ ರಾಜಿ ಇಲ್ಲದ ಸಿದ್ದಾಂತಗಳನ್ನು ನೇರವಾಗಿ ಲೋಕಮುಖಕ್ಕೆ ಪ್ರಕಟಪಡಿಸಿದ್ದರು.

ಟೀಕೆಯಲ್ಲಿ ರಾಜಿ ಇಲ್ಲ
ತರುಣ್‌ ಸಾಗರ್‌ ಜಿ ಅವರು ತನ್ನ ವಿಚಾರಧಾರೆಗಳ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಕಠಿಣ ವಾಗಿ ವಿರೋಧಿಸುತ್ತಿದ್ದರು. ಭ್ರಷ್ಟಾಚಾರ , ಹಿಂಸೆ , ಅಶಾಂತಿಗೆ ಕಾರಣವಾದ ಅವರು ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಬಹಿರಂಗವಾಗಿ ಟೀಕಿಸಲು ಅಂಜುತ್ತಿರಲಿಲ್ಲ. ಪಕ್ಷಾತೀತ , ಧರ್ಮಾತೀತವಾಗಿ ಅವರು ತಪ್ಪನ್ನು ತಿದ್ದುವ ವಿಚಾರ ಧಾರೆಗಳನ್ನು ಹೊರ ಹಾಕುತ್ತಿದ್ದರು.

ಅಪಾರ ಅನುಯಾಯಿಗಳು !
ದಿಗಂಬರರಾಗಿದ್ದ  ತರುಣ್‌ ಸಾಗರ್‌ ಜಿ ಅವರಿಗೆ ಲಕ್ಷಾಂತರ ಅನುಯಾಯಿಗಳಾಗಿದ್ದರು. ಜೈನ ಧರ್ಮೀಯರು ಮಾತ್ರವಲ್ಲದೆ ಹಿಂದೂ ಧರ್ಮೀಯರು, ವಿದೇಶಿ ವ್ಯಕ್ತಿಗಳು ಅವರ ಸಂದೇಶಕ್ಕೆ ಮಾರು ಹೋಗಿ ಜೀವನದಲ್ಲಿ , ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು.

ಸಲ್ಲೇಖನ ತೀರ್ಪಿನ ವಿರುದ್ಧ ಹೋರಾಟ
ಸಾವಿಗೆ ಶರಣಾಗುವವ ವರೆಗೆ ಕಠಿಣ ಉಪವಾಸ ಕೈಗೊಳ್ಳುವ ಸಲ್ಲೇಖನ ವೃತವನ್ನು ಕೈಗೊಳ್ಳುವುದು ಜೈನ ಧರ್ಮೀಯರ ನಂಬಿಕೆಗಳಲ್ಲಿ ಒಂದು. ರಾಜಸ್ಥಾದ ಹೈ ಕೋರ್ಟ್‌ ಸಲ್ಲೇಖನ ವೃತದ ವಿರುದ್ಧ ತೀರ್ಪು ನೀಡಿದಾಗ ಆಕ್ರೋಶವನ್ನೂ ಹೊರ ಹಾಕಿದ್ದರು.

51 ರಲ್ಲೇ  ಜಿನೈಕ್ಯ
ಜೀವನದಲ್ಲಿ ಯಾವ ಆಸೆಗಳನ್ನು ಇಟ್ಟುಕೊಂಡಿರದ ತರುಣ್‌ ಸಾಗರ್‌ ಜಿ ಅವರು ಕೊನೆಯ ದಿನಗಳಲ್ಲಿ  ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದರು. ಸಲ್ಲೇಖನ ವೃತ ಕೈಗೊಂಡಿದ್ದ ಅವರ ದಿವ್ಯ ಶರೀರ ದಿಲ್ಲಿಯ ರಾಧಾಪುರಿ ಜೈನ ದೇಗುಲದಲ್ಲಿ ನೂರಾರು ಮುನಿಗಳು, ಭಕ್ತರ ನಡುವೆ ಬೆಳಗಿನ ಜಾವ ಜಿನೈಕ್ಯವಾಯಿತು.ತರುಣ್‌ ಸಾಗರ್‌ ಜಿ ಅವರು ತನ್ನ ಪ್ರವಚನಗಳು , ವಿಚಾರಧಾರೆಗಳ ಮೂಲಕ ಅಪಾರ ಭಕ್ತರ ಮನಗಳಲ್ಲಿ ಉಳಿದಿದ್ದಾರೆ.

Tags:

Jain monk

Tarun Sagar

passes away

Author/Source:

ವಿಷ್ಣುದಾಸ್ ಪಾಟೀಲ್

Sun, 02 Sep 2018 10:43:51 +0000 vishnudas 321530 at https://www.udayavani.com https://www.udayavani.com/kannada/news/web-focus/321530/jain-monk-tarun-sagar-passes-away#comments ಬಡಗಿನ ಶ್ರೇಷ್ಠ ಭಾಗವತ ಹೆರಂಜಾಲು ಗೋಪಾಲ ಗಾಣಿಗರು  https://www.udayavani.com/kannada/news/web-focus/319746/heranjalu-gopal-ganiga-yakshagana-bhagavata

ಹೆರಂಜಾಲು... ಯಕ್ಷಗಾನ ಲೋಕದಲ್ಲಿ ಈ ಪುಟ್ಟ ಊರಿನ ಹೆಸರು ಕಳೆದ ಒಂದು ಶತಮಾನದಿಂದ ಪ್ರಸಿದ್ಧಿಯಲ್ಲಿದೆ. ಇದಕ್ಕೆ ಕಾರಣ ಯಕ್ಷರಂಗಕ್ಕೆಅಮೋಘ ಕೊಡುಗೆ ಸಲ್ಲಿಸಿರುವ ಹೆರಂಜಾಲು ಗಣಪಯ್ಯ ಗಾಣಿಗ, ಅವರ ಪುತ್ರ ಗುರು ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಅವರ ಪುತ್ರ ಪ್ರಸಿದ್ದ ಭಾಗವತ ಹೆರಂಜಾಲು ಗೋಪಾಲ ಗಾಣಿಗರು.

ಬಡಗುತಿಟ್ಟಿನ ಯಕ್ಷಗಾನ ಲೋಕದ ಸಮರ್ಥ ಗುರುಗಳಲ್ಲಿ ಒಬ್ಬರಾದ ಹೆರಂಜಾಲು ವೆಂಕಟರಮಣ ಗಾಣಿಗರ ಸುಪುತ್ರನಾಗಿ ಜನಿಸಿದ ಗೋಪಾಲ ಗಾಣಿಗರು ಬಾಲ್ಯದಲ್ಲೇ ಕಲಾವಿದನಾಗುವ ಮಹಾದಾಸೆ ಹೊಂದಿ  ಸಾಧನೆ ಮತ್ತು ಶ್ರಮದಿಂದ ಯಶಸ್ಸು ಪಡೆದು ಅಪಾರ ಸಾಂಪ್ರದಾಯಿಕ ಯಕ್ಷಗಾನ ಅಭಿಮಾನಿಗಳ ಪ್ರೀತಿಗೆ ಪಾತ್ರವಾದವರು.

1978-79 ರಲ್ಲಿ ಡಾ.ಶಿವರಾಮ ಕಾರಂತರ ನೇತ್ರತ್ವದ ಉಡುಪಿಯ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡ ಗೋಪಾಲ ಗಾಣಿಗರು ಗುರುತ್ರಯರಾಗಿದ್ದ ಭಾಗವತ ನೀಲಾವರರಾಮಕೃಷ್ಣಯ್ಯ ,ವೆಂಕಟರಮಣ ಗಾಣಿಗ ಮತ್ತು ಕೋಟ ಮಹಾಬಲ ಕಾರಂತರಿಂದ 5 ವರ್ಷಗಳ ಕಾಲ  ಹಿಮ್ಮೇಳ ಮತ್ತು ಮುಮ್ಮೇಳದ ಎಲ್ಲಾ ಪ್ರಕಾರಗಳಶಿಕ್ಷಣ ಪಡದು 1983 ರಲ್ಲಿ ಮಾರಣಕಟ್ಟೆ ಮೇಳದಲ್ಲಿ  ಸಹ ಭಾಗವತನಾಗಿ ಸೇರಿ ಯಕ್ಷಪಯಣವನ್ನು ಆರಂಭಿಸಿದರು. ಸತತ ಮೂರು ವರ್ಷದ ಸೇವೆಯ ಬಳಿಕ ಕಮಲಶಿಲೆ,ಮಂದಾರ್ತಿ ,ಸಾಲಿಗ್ರಾಮ ಮತ್ತು ಶಿರಸಿ ಮೇಳಗಳಲ್ಲಿ ಭಾಗವತಿಕೆ ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.

ಯಾವುದೇ ಭಾಗವತರ ಅನುಕರಣೆ ಇಲ್ಲದೆ ಸತತ 32 ವರ್ಷಗಳಿಂದ ಯಕ್ಷ ಲೋಕದ ಗಾನ ಗಂಧರ್ವನಾಗಿ ಮೆರೆಯುತ್ತಿರುವ ಗೋಪಾಲ ಗಾಣಿಗರು ಪ್ರಸ್ತುತ ಬಯಲಾಟಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಉಳ್ಳ  ಬೆರಳೆಣಿಕೆಯ ಕಲಾವಿದರಲ್ಲಿ ಒಬ್ಬರು.

ಸಾಂಪ್ರಾದಾಯಿಕ ಕುಂಜಾಲು ಶೈಲಿಯ ಪ್ರಸಿದ್ದ ಭಾಗವತರುಗಳ ಕೊಂಡಿಯಾಗಿರುವ ಗೋಪಾಲ ಗಾಣಿಗರು ಭಾಗವತಿಕೆ ಮಾತ್ರವಲ್ಲದೆ ಹೆಜ್ಜೆಗಾರಿಕೆಯನ್ನೂ ಕರಗತ ಮಾಡಿಕೊಂಡಿದ್ದಾರೆ.

ಸಾಲಿಗ್ರಾಮ ಮೇಳದಲ್ಲಿ 10 ವರ್ಷಗಳಕಾಲ ನಡೆಸಿದ ತಿರುಗಾಟ ಗೋಪಾಲ ಗಾಣಿಗರನ್ನು ಪ್ರಸಿದ್ದಿಯ ಉತ್ತುಂಗಕ್ಕೇರಿಸಿತ್ತು. ಪೌರಾಣಿಕ ಪ್ರಸಂಗ ಯಾವುದೇ ಇದ್ದರೂ ಅಲ್ಲಿನ ವೀರ ರಸ, ಶೃಂಗಾರ ,ಕರುಣಾ ರಸ ಯಾವುದೇ ಇರಲಿ ಆ ಪದ್ಯಗಳಿಗೆ ತನ್ನ ಕಂಠ ಸಿರಿಯಿಂದ ನ್ಯಾಯ ಒದಗಿಸುವ ಸಮರ್ಥ ಭಾಗವತ ರಲ್ಲಿ ಒಬ್ಬರಾದ ಇವರಿಗೆ ಸಾಮಾಜಿಕ ಕಥಾನಕಗಳಾದ ಈಶ್ವರಿ ಪರಮೇಶ್ವರಿ ,ರಂಗ ನಾಯಕಿಯಂಥಹ ಸೂಪರ್‌ ಹಿಟ್‌ ಪ್ರಸಂಗಳ ಪದ್ಯಗಳು ಅಪಾರ ಜನಮನ್ನಣೆ ಗಳಿಸಿಕೊಟ್ಟವು.

ಇವರ ಶೈಲಿಯ ಹಾಡುಗಳನ್ನು ಶಿಷ್ಯರಾದ ಹಿಲ್ಲೂರು ರಾಮಕೃಷ್ಣ ಹೆಗಡೆ, ಬಹ್ಮೂರು ಶಂಕರ್‌ ಭಟ್‌ ,ಸುಬ್ರಹ್ಮಣ್ಯ ನಾವುಡರ ಪದ್ಯಗಳಲ್ಲಿ ಕೇಳಬಹುದಾಗಿದೆ.

ಹೊಸತಕ್ಕೂ ಸೈ, ಹಳೆಯ ಕಠಿಣ ಪದ್ಯಗಳುಳ್ಳ ಪ್ರಸಂಗಗಳ ಭಾಗವತಿಕೆಗೂ ಸೈ ಎನಿಸಬಲ್ಲ, ವಿಮರ್ಶಕರ ನೆಚ್ಚಿನ ಭಾಗವತ ಗೋಪಾಲ ಗಾಣಿಗರು. ಪೌರಾಣಿಕ ಪ್ರಸಂಗಗಳಾದ ಭೀಷ್ಮ ವಿಜಯ, ದಕ್ಷ ಯಜ್ಞ, ತಾಮ್ರಧ್ವಜ ಕಾಳಗ, ಕರ್ಣಾರ್ಜುನ ಕಾಳಗ, ಸುಧನ್ವಾರ್ಜುನ, ಶಶಿಪ್ರಭಾ ಪರಿಣಯ, ವಾಲಿ ವಧೆ, ಪಂಚವಟಿ ಯಂತಹ ಪ್ರಸಂಗಗಳ ಪದ್ಯಗಳನ್ನು  ಸ್ಪಷ್ಟ ಸಾಹಿತ್ಯದೊಂದಿಗೆ ಹಾಡಿ ಹಿರಿಯ ಭಾಗವತರ, ಸಹಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಲಾವಿದರು ತಮ್ಮಮಕ್ಕಳನ್ನು ವೃತ್ತಿ ಮೇಳಕ್ಕೆ ಕಲಾವಿದನಾಗಿ ಪ್ರವೇಶಮಾಡಿಸಲು ಹಿಂಜರಿಯುವ ಪ್ರಸಕ್ತ ಕಾಲ ಘಟ್ಟದಲ್ಲಿ ಮಧುರ ಕಂಠಸಿರಿ ಹೊಂದಿರುವ  ಸುಪುತ್ರ  ಪಲ್ಲವನನ್ನು ವೃತ್ತಿ ಮೇಳಕ್ಕೆ ತಿರುಗಾಟಕ್ಕಿಳಿಸಿ ಭಾಗವತನನ್ನಾಗಿ ತಯಾರು ಮಾಡುತ್ತಿರುವ  ಗೋಪಾಲ ಗಾಣಿಗರ ಪ್ರಯತ್ನ ಅಭಿನಂದಾನಾರ್ಹ.

ಗೋಪಾಲ ಗಾಣಿಗರ ಮುತುವರ್ಜಿಯಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರ ಕನಸಿನ ಆಶಾ ಸೌಧ ಯಕ್ಷಗಾನ ಕೇಂದ್ರ  ನಾಗೂರಿನಲ್ಲಿ 2008ರಲ್ಲಿ ಶಿಲಾನ್ಯಾಸಗೊಂಡು  ಕಲಾ ಪ್ರೇಮಿಗಳ ಸಹಕಾರದೊಂದಿಗೆ 2015ರಲ್ಲಿ ಉದ್ಘಾಟನೆಗೊಂಡಿತು.

1963 ರಿಂದ ತೊಡಗಿದ ಹೆರಂಜಾಲು ಯಕ್ಷ ಪ್ರತಿಷ್ಠಾನದ ಮೂಲಕ ಕಲಾ ಚಟುವಟಿಗೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಕೇಂದ್ರದಲ್ಲಿ ನಿರಂತರವಾಗಿ ಯಕ್ಷಗಾನ ಕಲಿಕಾಸಕ್ತರಿಗೆ ಎಲ್ಲಾ ವಿಧದ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಗೋಪಾಲ ಗಾಣಿಗರು ಸದ್ಯ ಬಯಲಾಟದ ಪ್ರಸಿದ್ಧ ಮೇಳ ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಪುತ್ರ ಪಲ್ಲವ ಗಾಣಿಗ ಅವರು ಕಲಾಧರ ಬಳಗ ಜಲವಳ್ಳಿ ಡೇರೆ ಮೇಳದಲ್ಲಿ  ತಿರುಗಾಟ ನಡೆಸುತ್ತಿದ್ದಾರೆ.

ಇನ್ನಷ್ಟು ಶಿಷ್ಯರನ್ನು ಹೆರಂಜಾಲು ಗೋಪಾಲ ಗಾಣಿಗರು ಕಲಾ ಪ್ರಪಂಚಕ್ಕೆನೀಡಲಿ, ಮಾತ್ರವಲ್ಲದೆ ಹಲವು ಕಾಲ ಅಭಿಮಾನಿಗಳ ಕರ್ಣಗಳಿಗೆ ಗಾನ ರಸದೌತಣ ಉಣ ಬಡಿಸಲಿ ಎನ್ನುವುದು ನಮ್ಮ ಹಾರೈಕೆ.

Tags:

Heranjalu Gopal Ganiga

Yakshagana Bhagavata

Author/Source:

ವಿಷ್ಣುದಾಸ್ ಪಾಟೀಲ್

Sun, 26 Aug 2018 12:30:32 +0000 vishnudas 319746 at https://www.udayavani.com https://www.udayavani.com/kannada/news/web-focus/319746/heranjalu-gopal-ganiga-yakshagana-bhagavata#comments ಕಲಾವಿದನಾಗಲು ಬೆಂಬಲವಿರಲಿಲ್ಲ !.99 ರ ಗೋಪಾಲ ರಾಯರ ಮಾತು 2 https://www.udayavani.com/kannada/news/web-focus/316446/yakshagana-is-a-legacy-that-has-grown-from-heritage-hiriyadka-gopal-rao

ಯಕ್ಷಗಾನವೆನ್ನುವುದು ಪರಂಪರೆಯಿಂದ ಬೆಳೆದು ಬಂದ ಕಲೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕೈ ಕೈ ಸೇರಿ ಚಪ್ಪಾಳೆ ಎಂಬಂತೆ ಹಲವು ವಿದ್ವಾಂಸರ ಕೊಡುಗೆ , ಕಲಾವಿದರ ಕೊಡುಗೆ ಕಲೆಯ ಏಳಿಗೆಗೆ ಕಾರಣವಾಗಿದೆ. ಯಕ್ಷಗಾನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿದೆ. ಇಂದು ಬದಲಾವಣೆಯ ಹಾದಿ ಹಿಡಿದಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಾನು ಯಕ್ಷರಂಗವನ್ನು ಪ್ರವೇಶಿಸಿದವನು . ಅಂದೆಲ್ಲಾ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರೆ ದಾರಿ ತಪ್ಪುತ್ತಾನೆ ಎನ್ನುವ ಭಾವನೆ ಇತ್ತು. ಯಕ್ಷಗಾನದ ಕುರಿತಾಗಿಯೂ ಕೆಲ ವರ್ಗದ ಜನರಲ್ಲಿ  ತಾತ್ಸಾರವಿತ್ತಾದರೂ ಅಂದು ಆರಾಧನಾ ಕಲೆಯಾಗಿ ಯಕ್ಷಗಾನ ಇದ್ದ ಕಾರಣ ಜನರು ಅದನ್ನು ಒಪ್ಪಿಕೊಂಡಿದ್ದರು. ಇಂದು ಆರಾಧನೆಯೊಂದಿಗೆ ವಾಣಿಜ್ಯ ಉದ್ದೇಶಕ್ಕೆ ಕಲೆ ಬಳಕೆಯಾಗುತ್ತಿರುವುದು ವಿಪರೀತ ಎನಿಸುವಂತಹ ಬದಲಾವಣೆಗೆ ತಿರುಗಿದೆ. ಇದರಿಂದ ಕಲೆಯ ಮೂಲ ಆಶಯಕ್ಕೆ ಧಕ್ಕೆ ಅಲ್ಲವೇ ಎಂದರು.

ಅಂದಿನ ಯಕ್ಷಗಾನ ಕಲಾವಿದರ ಬದುಕೇ ವಿಭಿನ್ನವಾಗಿತ್ತು, ಕಲಾ ಜೀವನಕ್ಕೆ ಕಾಲಿಡುವವನು ಅಷ್ಟು ಸುಲಭದಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದು ಅಸಾಧ್ಯವಾಗಿತ್ತು. ಹಂತ ಹಂತವಾಗಿ ಸಾಧನೆಗಳನ್ನು ಮಾಡಿ ಕಲಾವಿದನೊಬ್ಬ ರೂಪುಗೊಳ್ಳಬೇಕಾಗಿತ್ತು. ದಿನ ಬೆಳಗಾಗುವುದರೊಳಗೆ ಸ್ಟಾರ್‌ ಪಟ್ಟ ಸಿಗುತ್ತಿರಲಿಲ್ಲ. ಪರಂಪರೆಗಳನ್ನು ಒಪ್ಪಿಕೊಂಡು ಚೌಕಟ್ಟಿನೊಳಗೆ ವ್ಯವಹರಿಸಬೇಕಿತ್ತು ಎಂದರು.

ಕಲಾವಿದನಾದವ ತಿರುಗಾಟದಲ್ಲಿ ಮನೆಯಿಂದ ದೂರ ಉಳಿಯುವುದು ಅನಿವಾರ್ಯವಾಗಿತ್ತು.  6 ತಿಂಗಳ ಕಾಲ ಮನೆಯಲ್ಲಿ  ಏಳೋ, ಎಂಟು ದಿನಗಳ ಕಾಲ ಮಾತ್ರ ಮನೆಗೆ ಬರುವ ಸಾಧ್ಯತೆಗಳಿದ್ದವು. ಮನೆಯ ಹತ್ತಿರ ಆಟ ಇದ್ದಲ್ಲಿ ಮನೆಯವರ ಮುಖ ದರ್ಶನ. ದೂರ ವಾಣಿ ಸಂಪರ್ಕವೂ ಇರಲ್ಲಿಲ್ಲ. ಬಹುಷಃ ಇದೇ ಕಾರಣಕ್ಕಾಗಿ ಬಾಲಕರನ್ನು ಯಕ್ಷಗಾನ ಕ್ಷೇತ್ರಕ್ಕೆ ತೆರಳಲು ಪೋಷಕರು ಮನಸ್ಸು ಮಾಡುತ್ತಿರಲಿಲ್ಲ ಎಂದರು.

ಮಂದಾರ್ತಿ ಮೇಳದಲ್ಲಿದ್ದ ನಮಗೆ ಮಂದಾರ್ತಿ ಜಾತ್ರೆಯ ವೇಳೆ ಮೂರು ದಿನ ರಜೆ ಸಿಗುತ್ತಿತ್ತು. ಬಳಿಕ ಶಿವರಾತ್ರಿಗೊಂದು ರಜೆ ಸಿಗುತ್ತಿತ್ತು ಆಗಲೆ ಮನೆಗೆ ಬಂದು ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದರು.

ತಿರುಗಾಟದುದ್ದಕ್ಕೂ ಕಲಾವಿದರು ನಡಿಗೆಯಲ್ಲೇ ತೆರಳುತ್ತಿದ್ದರು. ದಿನಕ್ಕೆ 5 ರಿಂದ 10 ಕಿ.ಮೀ ನಡಿಗೆ ಅನಿವಾರ್ಯವಾಗಿತ್ತು. ದಿನವಿಡೀ ದಣಿದು ರಾತ್ರಿ ಅಪಾರ ನಿರೀಕ್ಷೆ ಇರಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಪ್ರದರ್ಶನದಲ್ಲಿ ಕೊರತೆ ಕಂಡು ಬಂದರೆ ಪ್ರಶ್ನಿಸುವ ವ್ಯಕ್ತಿಗಳಿದ್ದರು. ಅದು ಹಾಗಾಗ ಬಾರದಿತ್ತು, ನಿಮ್ಮ ಪಾತ್ರ ಚಿತ್ರಣ ಸರಿಯಾಗಲಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು. ಕಲಾವಿದರು ವಿಮರ್ಶಕರನ್ನು ಒಪ್ಪಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಕಲಾವಿದರಿಗೆ ಪ್ರೇಕ್ಷಕರ ಭಯ ಇತ್ತು. ಕಲೆಯ ಮೌಲ್ಯ ತಿಳಿದಿತ್ತು. ಆದರೆ ಈಗ ದೇವರು ಬಂದು ಹೇಳಿದರೂ ನನ್ನ ದಾರಿ ನನಗೆ ಎನ್ನುವ ಪರಿಸ್ಥಿತಿ ಯಕ್ಷಗಾನದಲ್ಲಿ ಬಂದಿದೆ ಎಂದು ಹೇಳಿ ಭಾವುಕರಾದರು.

ಪ್ರೇಕ್ಷಕರು ಪ್ರದರ್ಶನ ಮತ್ತು ಕಲಾವಿದನ ಏಳಿಗೆಗೆ ಕಾರಣವಾಗುತ್ತಾರೆ. ಕಲಾವಿದನಾದನಿಗೆ ಕಲೆಯ ಮೇಲೆ ಮತ್ತು ಪ್ರೇಕ್ಷಕರ ಕುರಿತು ಗೌರವ ಇರಲೇ ಬೇಕು, ಅದಿಲ್ಲವಾದಲ್ಲಿ ಕಲಾವಿದನಲ್ಲಿರುವ ಕಲೆಯ ಬೆಲೆ  ಶೂನ್ಯ ಎಂದರು.

ಮುಂದುವರಿಯುವುದು..

Tags:

Hiriyadka Gopal Rao

yakshagana

Maddale

Author/Source:

ವಿಷ್ಣುದಾಸ್ ಪಾಟೀಲ್

Sun, 12 Aug 2018 11:23:02 +0000 vishnudas 316446 at https://www.udayavani.com https://www.udayavani.com/kannada/news/web-focus/316446/yakshagana-is-a-legacy-that-has-grown-from-heritage-hiriyadka-gopal-rao#comments