Udayavani - ಉದಯವಾಣಿ - ಲಕ್ಷ್ಮಿ ಗೋವಿಂದ್ ರಾಜ್ https://www.udayavani.com/kannada-news-authors/%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%BF-%E0%B2%97%E0%B3%8B%E0%B2%B5%E0%B2%BF%E0%B2%82%E0%B2%A6%E0%B3%8D-%E0%B2%B0%E0%B2%BE%E0%B2%9C%E0%B3%8D en ನ್ಯಾಚುರಲ್ ಸ್ಟಾರ್ ಪಲ್ಲವಿ ಮೊಗಕೆ ಮೊಡವೆಯೇ ಭೂಷಣ! https://www.udayavani.com/kannada/news/web-focus/323930/natural-star-pallavi-makes-it-beautiful

ಮಲಯಾಳಿ ಚಿತ್ರರಂಗ "ಮಲರ್‌' ಎಂದೇ ಖ್ಯಾತಿಯಾಗಿರುವ ಸಾಯಿ ಪಲ್ಲವಿಯ ಅಂದವನ್ನು ಅವರ ಅಭಿಮಾನಿಗಳು ಹಾಡಿಹೊಗಳುವ ಪರಿ ಇದು. ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನಾಯಕಿಯಲ್ಲಿ ಯಾವುದೋ ಒಂದು ಸೆಳೆತ ಇರುತ್ತದೆ. ಆ ಸೆಳೆತಕ್ಕೆ ಆತ ಫಿದಾ ಆಗಿರುತ್ತಾನೆ. ಅದು ನಾಯಕಿಯ ನಗು ಇರಬಹುದು. ಆಕೆಯ ಗುಳಿಕೆನ್ನೆ ಅಥವಾ ಕಣ್ಣು... ಹೀಗೆ ಒಂದಿಲ್ಲೊಂದು ಕಾರಣದಿಂದ ಅಚ್ಚುಮೆಚ್ಚು ಆಗುತ್ತಾರೆ.

ಅದೇ ರೀತಿ, ಸಾಯಿ ಪಲ್ಲವಿ ತಮ್ಮ ಕೆನ್ನೆಯ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಮೊಡವೆಗಳಿಂದ ಎಷ್ಟೋ ಹುಡುಗರಿಗೆ ಹುಚ್ಚುಹಿಡಿಸಿದ್ದಾರೆ. ವಿಚಿತ್ರವೆಂದರೆ ಬಹುತೇಕ ಹೆಣ್ಣುಮಕ್ಕಳ ಚಿಂತೆಗೆ ಕಾರಣವಾಗಿರುವುದು ಇದೇ ಮೊಡವೆಗಳು! ಈ ದೃಷ್ಟಿಯಿಂದ ಸಾಯಿ ಪಲ್ಲವಿ ತುಂಬಾ ವಿಭಿನ್ನ. ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡದ ಸೆಲೆಬ್ರಿಟಿಗಳ ನಡುವೆ ಕೆನ್ನೆಯ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಮೊಡವೆಗಳ ಮೂಲಕ ಅಂದವನ್ನು ಪ್ರದರ್ಶಿಸಿ, ಸೈ ಎನ್ನಿಸಿಕೊಂಡಿದ್ದಾರೆ.

ಅಲ್ಲದೆ, ಗಲ್ಲದ ಮೇಲೆ ಮೂಡಿದ ಗುಲಾಬಿ ರಂಗು, ಗುಂಗುರು ಕೂದಲು, ಕೆಂಪು ತುಟಿ, ಹಾಲುಬಿಳುಪು ಬಣ್ಣ ಇವೆಲ್ಲವೂ ಇವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಲ್ಲದೇ, ಮೊಡವೆ ಎಂಬುದು ದೊಡ್ಡ ಶಾಪ ಎನ್ನುತ್ತಿದ್ದ ಇಂದಿನ ಹೆಣ್ಣುಮಕ್ಕಳಿಗೆ "ಮೊಡವೆಯೇ ನನ್ನ ಸೌಂದರ್ಯವನ್ನು ಹೆಚ್ಚಿಸಿದ್ದು, ಅದೆಂದಿಗೂ ನನ್ನ ಸೌಂದರ್ಯಕ್ಕೆ ಅಡ್ಡಿಯಾಗಿಲ್ಲ' ಎಂಬುದು ಇವರನ್ನು ನೋಡಿದರೇ ಗೊತ್ತಾಗುತ್ತದೆ.

ಸೆಲೆಬ್ರಿಟಿ ನಟಿಯರಿಗೆ ದೇಹದ ಫಿಟ್ನೆಸ್‌ ಕಾಪಾಡೋದು, ಬ್ಯೂಟಿ ಮೆಂಟೇನ್‌ ಮಾಡುವಷ್ಟು ಕಷ್ಟದ ಕೆಲಸ ಬೇರೇನಿಲ್ಲ. ಯಾಕೆಂದರೆ, ಮುಖದಲ್ಲೊಂದು ಮೊಡವೆ ಮೂಡುವಂತಿಲ್ಲ, ಕತ್ತಿನ ಭಾಗದಲ್ಲೊಂದು ಕಪ್ಪು ಚುಕ್ಕೆ ಕಾಣುವಂತಿಲ್ಲ, ಕೈಯಲ್ಲೊಂದು ಸುಕ್ಕು ತೋರುವಂತಿಲ್ಲ.. ಒಂದೇ ಕ್ಷಣಕ್ಕೆ ಔಟ್‍ಡೇಟ್ ಆಗೋ ಅಪಾಯ. ಹಾಗಾಗಿ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯೋಗ, ಡಯಟ್, ವ್ಯಾಯಾಮ, ಹೀಗೆ ಹಲವಾರು ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತಾರೆ.

ಆದರೆ, ಸಾಯಿ ಪಲ್ಲವಿ ಅವರದೇ ಬೇರೆ ದಾರಿ. ಮುಖಕ್ಕೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳದೇ, ತುಟಿ ಮೇಲೆ ರಂಗಿನ ನೋಟವಿಲ್ಲದೇ, ಕೆನ್ನೆ ಮೇಲೆ ಡಿಂಪಲ್‌ ಹಾಗೂ ಗುಲಾಬಿ ಬಣ್ಣವಿಲ್ಲದೇ ತಾನು ಒಬ್ಬ ನಟಿ ಎಂದು ತೋರಿಸಿಕೊಟ್ಟಿದ್ದು ಮದ್ರಾಸಿ ಬೆಡಗಿ ಸಾಯಿ ಪಲ್ಲವಿ. ಚಿತ್ರರಂಗ ಮೊದಲೇ ಗ್ಲ್ಯಾಮರ್ ಜಗತ್ತು. ಇಲ್ಲಿ ಯಾವುದೇ ರೀತಿಯ ವಸ್ತ್ರವನ್ನಾದರೂ ತೊಡಲು ನಟಿಮಣಿಯರು ರೆಡಿ ಇರಬೇಕು ಎಂಬುದನ್ನು ಸುಳ್ಳು ಮಾಡಿದ್ದ ಖ್ಯಾತಿ ಈ ಹಿಂದೆ ಸಿತಾರಾ ಅವರಿಗಿದ್ದರೆ, ಬಹುಶಃ ಈಗ ಸಾಯಿಪಲ್ಲವಿಗೆ ಸೇರಬೇಕು ಎನ್ನಿಸುತ್ತದೆ.

ಅದಕ್ಕೆ ಮುಖ್ಯ ಕಾರಣ ದಕ್ಷಿಣ ಭಾರತದ ಉಡುಪುಗಳಾದ ಸೀರೆ, ಲಂಗ ದಾವಣಿ, ಚೂಡಿದಾರ್ ಗಳಲ್ಲಷ್ಟೇ ನಾವು ಇವರನ್ನು ಸಿನಿಮಾಗಳಲ್ಲಿ ನೋಡಲು ಸಾಧ್ಯ. ಅವಶ್ಯಕತೆ ಇದ್ದಾಗಷ್ಟೇ ಪಾಶ್ಚಾತ್ಯ ಬಟ್ಟೆಗಳನ್ನು ತೊಡುವ ಈ ಸುಂದರಿ ಅದರಲ್ಲೂ ಚ್ಯೂಸಿ ಎನ್ನಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ತೆಲುಗಿನ "ಫಿದಾ' ಚಿತ್ರದಲ್ಲಿ ಇವರು ತೊಟ್ಟ ದಿರಿಸುಗಳು. ಸಾಯಿಪಲ್ಲವಿ ಈಗಾಗಲೇ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದು, ಇಲ್ಲಿಯವರೆಗೆ ಶಿಕ್ಷಕಿಯಾಗಿ, ಪ್ರೇಯಸಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಮತ್ತು ಹಳ್ಳಿ ಹುಡುಗಿಯಾಗಿ ತಮ್ಮ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದ್ದಾರೆ.

ಅಲ್ಲದೇ ಇವರು ಆಧುನಿಕ ಯುವತಿಯರಿಗೆ ಮಾದರಿಯೂ ಕೂಡಾ. ಸಿನಿಪ್ರಿಯರ ಮನ ಗೆದ್ದ ಸಾಯಿಪಲ್ಲವಿ ಮಲೆಯಾಳಂನ ಬ್ಲಾಕ್‍ಬಸ್ಟರ್ ಸಿನಿಮಾ "ಪ್ರೇಮಂ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತಾನು ನಟಿಸಿದ ಮೊದಲ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. "ಪ್ರೇಮಂ'ನ "ಮಲರ್' ಪಾತ್ರಕ್ಕೆ ಜೀವ ತುಂಬಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.

ತೆಲುಗಿನ ನಟ ವರುಣ್‌ ತೇಜ್‌ ಜೊತೆ "ಫಿದಾ' ಚಿತ್ರದ "ವಚ್ಚಿಂದೆ ಮೆಲ್ಲ ಮೆಲ್ಲಗಾ ವಚ್ಚಿಂದೆ' ಹಾಗೂ "ಎಂಸಿಎ' ಚಿತ್ರದಲ್ಲಿ ನಟ ನಾನಿ ಜೊತೆಗೆ "ಯೆಮೊಂಡೈ ನಾನಿ ಗಾರು' ಹಾಡಿಗೆ ಸಾಯಿಪಲ್ಲವಿ ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಸೊಂಟ ಬಳುಕಿಸಿದ ರೀತಿಗೆ ಹುಡುಗರೇನು ಸ್ವತಃ ಹುಡುಗಿಯರೇ ಅಚ್ಚರಿಗೊಳಗಾದರು. ಅಲ್ಲದೇ ಈಕೆಯ "ವಚ್ಚಿಂದೆ' ಹಾಡು ಎಷ್ಟರ ಮಟ್ಟಿಗೆ ಹಿಟ್‌ ಆಗಿತ್ತು ಎಂದರೆ ತೆಲುಗು ಅರ್ಥವಾಗದವರು ಕೂಡ ಆ ಹಾಡಿಗೆ ಹುಚ್ಚೆದ್ದು ಹೆಜ್ಜೆ ಹಾಕಿದ್ದಾರೆ.

ಈ ಕೆಂಪುಕೆನ್ನೆಯ ಮೊಡವೆ ಸುಂದರಿ ಓದಿದ್ದು ಎಂಬಿಬಿಎಸ್‌. ತಾಯಿಯಂತೆ ದೊಡ್ಡ ಡಾನ್ಸರ್ ಆಗಬೇಕು ಎಂದುಕೊಂಡಿದ್ದ ಈಕೆ ನಟಿಯಾಗಿದ್ದು ಆಕಸ್ಮಿಕ. ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಇಮೇಜ್‌ ಹೊಂದಿರುವ ಈಕೆ ಸಿನಿಮಾ ಎನ್ನುವುದು ತಾತ್ಕಾಲಿಕ, ಇಲ್ಲಿ ಪ್ರತಿದಿನ ಹೊಸ ಹೊಸ ಮುಖಗಳು ಬಂದು ಹೋಗುತ್ತಿರುತ್ತವೆ. ಹೊಸತು ಬಂದಾಗ ಹಳೆಯದಕ್ಕೆ ಬೆಲೆ ಇಲ್ಲ. ಹಾಗಾಗಿ ನನ್ನ ಮೊದಲ ಆದ್ಯತೆ ಎಂದಿಗೂ ವೈದ್ಯ ವೃತ್ತಿ ಎಂದು ಹೇಳಿದ್ದಾರೆ.

ಇನ್ನು ಸಾಯಿ ಪಲ್ಲವಿಯನ್ನು ಹೊಸ ತಲೆಮಾರಿನ ಟ್ರೆಂಡ್‌ ಸೆಟ್ಟರ್ ಅಂತ ಹೇಳಬಹುದಾಗಿದ್ದು, ಇವರಿಗೆ ಪ್ರವಾಸ, ನೃತ್ಯ ಬಹು ನೆಚ್ಚಿನ ಹವ್ಯಾಸ. ಹಾಗೂ ಅವರ ತಾಯಿಯೊಂದಿಗೆ ಇಷ್ಟಪಡುವ ಜಾಗದಲೆಲ್ಲಾ ಸುತ್ತುವ ಅಭ್ಯಾಸ ಕೂಡಾ ಉಂಟು. ಒಟ್ಟಾರೆ ಸಿನಿಪ್ರಿಯರ ಮನ ಗೆದ್ದ ಸಾಯಿಪಲ್ಲವಿ ಕಸ್ತೂರಿ ಮಾನ್, ದಾಮ್‌ ದೂಮ್‌ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಇವರ ಮಾರಿ 2, ಎನ್‍ಜಿಕೆ, ಪಡಿ ಪಡಿ ಲೇಚೆ ಮನಸ್ಸು ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ.

* ಲಕ್ಷ್ಮಿಗೋವಿಂದರಾಜು ಎಸ್.

Tags:

ಸಾಯಿ ಪಲ್ಲವಿ

Sai Pallavi

ಮೊಡವೆ ಸುಂದರಿ

Acne Sundari

ಮಲರ್‌

Malar

ಪ್ರೇಮಂ

Premam

ದಕ್ಷಿಣ ಭಾರತದ ನಟಿ

South Indian actress

Author/Source:

ಲಕ್ಷ್ಮಿ ಗೋವಿಂದ್ ರಾಜ್

Wed, 12 Sep 2018 10:30:29 +0000 lakshmi 323930 at https://www.udayavani.com https://www.udayavani.com/kannada/news/web-focus/323930/natural-star-pallavi-makes-it-beautiful#comments ಯೂಟ್ಯೂಬ್‍ ಸ್ಟಾರ್ ಚಂದನ್: ಸ್ಯಾಂಡಲ್‍ವುಡ್‍ನಲ್ಲಿ "ರ‍್ಯಾಪ್' ರೋಪು! https://www.udayavani.com/kannada/news/web-focus/304485/youtube-star-chandan-rap-rope-in-sandalwood

ಹಾಲಿವುಡ್, ಬಾಲಿವುಡ್ ಮತ್ತು ಇತರೆ ಭಾಷೆಗಳಿಗೆ ಸೀಮಿತವಾಗಿದ್ದ "ರ‍್ಯಾಪ್' ಸಾಂಗ್‍ಗಳು ಇದೀಗ ಸ್ಯಾಂಡಲ್‍ವುಡ್‍ನಲ್ಲೂ ಸದ್ದು ಮಾಡಿ, ಟ್ರೆಂಡ್ ಸೃಷ್ಟಿಸುತ್ತಿವೆ. ಅಲ್ಲದೆ, ಈ "ರ‍್ಯಾಪ್' ಸಾಂಗ್‍ಗೆ ಫಿದಾ ಆದವರು ಮೈಚಳಿ ಬಿಟ್ಟು ವಯಸ್ಸಿನ ಅಂತರವಿಲ್ಲದೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ "ರ‍್ಯಾಪ್' ಪ್ರಯೋಗ ಮಾಡಿ ಯಶಸ್ಸು ಗಳಿಸಿದವರಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿರುವವರು "ಚಂದನ್‍ಶೆಟ್ಟಿ'.

ಹೌದು!  ಚಂದನ್‍ಶೆಟ್ಟಿ ಕನ್ನಡಕ್ಕೆ  "ರ‍್ಯಾಪ್'  ಶೈಲಿಯ ಹಾಡನ್ನು ಕುಡಿಸಿದ್ದೆ ತಡ ಪಡ್ಡೆ ಹೈಕ್ಳಿಂದ ಹಿಡಿದು ವಯೋವೃದ್ಧರವರೆಗೂ ಸಂಗೀತಕ್ಕೆ ದನಿಗೂಡಿಸಿದರು. ಅದರಲ್ಲಿ ಪ್ರಮುಖವಾಗಿ "ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರಗಿರಗಿರ ಅಂದಿದೆ' ಎಂಬ ರ‍್ಯಾಪ್ ಸಾಂಗ್ ಸ್ಯಾಂಡಲ್‍ವುಡ್‍ನಲ್ಲಿ ಒಂದು ಸಂಚಲವನ್ನೇ ಸೃಷ್ಟಿಸಿ, ಚಂದನ್‍ಶೆಟ್ಟಿಗೆ ಬಹುದೊಡ್ಡ ಹೆಸರನ್ನು ತಂದುಕೊಟ್ಟಿತ್ತು. "ಇವಳು ಪಕ್ಕಾ ಚಾಕಲೇಟ್ ಗರ್ಲ್' ಎನ್ನುವ ಮೂಲಕ ಹೆಣ್ಮಕ್ಳ ಹೃದಯನ್ನು ಕದಿಯುವ ಜೊತೆಗೆ "ರ‍್ಯಾಪ್' ಪ್ರಿಯರಿಗೆ "ಟಕೀಲ' ಕುಡಿಸಿದವರು.

ರ‍್ಯಾಪ್ ಸ್ಟಾರ್ ಮಿಂಚಿಂಗ್: ಚಂದನ್ ಶೆಟ್ಟಿ ಒಬ್ಬ ಪ್ರತಿಭಾವಂತ "ರ‍್ಯಾಪರ್'. ಯೂಟ್ಯೂಬ್‍ನಲ್ಲಿ ಅವರ ಎಲ್ಲ ಸಾಂಗ್‍ಗಳು ಮಿಲಿಯನ್‍ಗಟ್ಟಲೇ ವೀಕ್ಷಣೆಯಾಗಿದ್ದು, ಯೂಟ್ಯೂಬ್ "ರ‍್ಯಾಪ್' ಸ್ಟಾರ್ ಅಂದರೂ ತಪ್ಪಿಲ್ಲ. ಇನ್ನು ಚಂದನ್ ತನ್ನ ಹಾಡುಗಳ ಮೂಲಕ ಯುವ ಜನತೆಯ ಹಾಟ್ ಫೇವರೆಟ್ ಆಗಿ, ತಮ್ಮ ರ‍್ಯಾಪ್ ಹಾಡುಗಳಿಗೆ ಅವರೇ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ ಕನ್ನಡದ "ರ‍್ಯಾಪ್' ಸ್ಟಾರ್ ಅಲ್ಲದೇ ಕನ್ನಡದ "ಬಿಗ್‍ಬಾಸ್' ಸೀಸನ್ 5ರ ವಿನ್ನರ್ ಆಗಿದ್ದು, ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ "ಮಾಸ್ಟರ್ ಡ್ಯಾನ್ಸರ್’ ಶೋಗೆ ತೀರ್ಪುಗಾರರಾಗಿದ್ದಾರೆ. ಅಲ್ಲದೇ ಇದೀಗ ಕಲರ್ ಸೂಪರ್‌ ವಾಹಿನಿಯಲ್ಲಿ "ಕನ್ನಡದ ಕೋಗಿಲೆ' ಎಂಬ ಹೊಚ್ಚ ಹೊಸ ಸಂಗೀತ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.

3ಪೆಗ್‍ನಿಂದ ಟ್ರೆಂಡ್ ಸೃಷ್ಟಿಸಿದ "ಟಕಿಲ...': ಇನ್ನು ಚಂದನ್ ಮೂಲತಃ ಮಂಗಳೂರಿನವರಾದರೂ ಹುಟ್ಟಿಬೆಳೆದಿದ್ದು ಹಾಸನದಲ್ಲಿ. ಉದ್ಯಮಿ ಪರಮೇಶ್‌ ಹಾಗೂ ತಾಯಿ ಪ್ರೇಮಾ ದಂಪತಿಯ ಪುತ್ರನಾಗಿ ಸೆಪ್ಟೆಂಬರ್ 17, 1989ರಂದು ಹಾಸನದ ಶಾಂತಿಗ್ರಾಮದಲ್ಲಿ ಜನನ.  ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಕಲೇಶಪುರದ ರೋಟರಿ ಸ್ಕೂಲ್‌ನಲ್ಲಿ ಮುಗಿಸಿ, ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸೇಂಟ್‌ಫಿಲೋಮಿನಾ ಕಾಲೇಜಿನಲ್ಲಿ ಮುಗಿಸಿ, ಅನಂತರ ಬಿ.ಕಾಂ. ಪದವಿಯನ್ನು ಮೈಸೂರಿನ ವಿದ್ಯಾ ವಿಕಾಸ್‌ ಕಾಲೇಜಿನಲ್ಲಿ ಪಡೆದಿದ್ದರು.

ಸಂಗೀತದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ, ಚಂದನ್ ಶೆಟ್ಟಿ ಪ್ರಾರಂಭದ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ಬದುಕು ಅರಿಸಿ ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟ ಅನುಭವಿಸಿದರು. ಅಲ್ಲದೇ ಎಷ್ಟೇ ಕಷ್ಟ ಅನುಭವಿಸಬೇಕಾಗಿ ಬಂದರೂ ತಮ್ಮ ಗುರಿ ಬಿಡದೆ, ಗುರಿಯ ಬೆನ್ನತ್ತಿ ಇಂದು ಪ್ರಸಿದ್ಧ "ರ‍್ಯಾಪ್' ಸ್ಟಾರ್ ಆಗಿದ್ದಾರೆ. ಹಾಗೂ ಹಲವಾರು ಚಿತ್ರಗಳಿಗೆ ಸಾಹಿತ್ಯ ಬರೆದು, ಧ್ವನಿ ನೀಡಿರುವ ಚಂದನ್‍ಶೆಟ್ಟಿ ಇಂದು ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದು ತಮ್ಮ "3 ಪೆಗ್ಗು' ಆಲ್ಬಂ ಹಾಡಿನ ಮೂಲಕ. ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಬಿಡುಗಡೆಯಾದ "ಟಕೀಲ' ಹಾಡು ಕೂಡ ಸಾಕಷ್ಟು ಸದ್ದು ಮಾಡಿ ಟ್ರೆಂಡ್ ಹುಟ್ಟುಹಾಕಿದೆ.

ಅಲೆಮಾರಿಯಿಂದ ಆರಂಭ: ಮೊದಲಿಗೆ ಚಂದನ್‍ ತಮ್ಮ ಸಿನಿಮಾ ಜರ್ನಿಯನ್ನು "ಆಲೆಮಾರಿ' ಚಿತ್ರದಿಂದ ಆರಂಭಿಸಿ, ಮ್ಯಾಜಿಕಲ್ ಕಂಪೋಸರ್ ಎಂದೇ ಪ್ರಖ್ಯಾತರಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಸಾಹಿತ್ಯ ಬರೆಯುವುದರ ಜೊತೆಗೆ, ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಶುರು ಮಾಡಿದರು. ಆ ವೇಳೆಯಲ್ಲಿ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಪುನೀತ್ ರಾಜಕುಮಾರ್ ಚಿತ್ರದ "ಧಮ್ ಪವರೇ..’ ಸಾಂಗ್. ಈ ಹಾಡನ್ನು ಸ್ವತಃ ಚಂದನ್‍ಶೆಟ್ಟಿ ಬರೆದಿದ್ದಾರೆ.

ಅಲ್ಲದೇ ವರದನಾಯಕ, ಚಕ್ರವ್ಯೂಹ, ಭಜರಂಗಿಯಂತಹ ಭರ್ಜರಿ ಹಿಟ್ ಚಿತ್ರಗಳೂ ಸೇರಿದಂತೆ, 50ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಹಿನ್ನೆಲೆ ಗಾಯಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ "ಸೀಜರ್' ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದಾರೆ.

ಹಾಡು ಕಟ್ಟುವ ಕಲೆ ಕಲಿತದ್ದು ಅಪ್ಪನಿಂದ: ಹೌದು! ಚಂದನ್‍ಶೆಟ್ಟಿ "ಬಿಗ್‍ಬಾಸ್' ಗ್ರ್ಯಾಂಡ್ ಫಿನಾಲೆಯಲ್ಲಿ ನಾನು ಒಂದು ಮರದ ಪೆಟ್ಟಿಗೆ ಸಿಕ್ಕಿದರೆ ಸಾಕು, ಅದನ್ನು ಬಡಿಯುತ್ತಾ ಹಾಡುತ್ತಿದ್ದೆ, ಈ ಕಲೆಯನ್ನು ನಾನು ನನ್ನ ಅಪ್ಪನ ಬಳಿ ಕಲಿತದ್ದು. ನನ್ನ ತಂದೆಗೆ ಒಂದು ಜನರಲ್‌ ಸ್ಟೋರ್‌ ಅಂಗಡಿ ಇತ್ತು. ಆಗ ನಾನು ಪ್ರತಿದಿನ ಅಲ್ಲಿಗೆ ಹೋಗಿ ಗುಡಿಸುವುದು, ಒರೆಸುವುದು ಮಾಡುತ್ತಿದ್ದೆ, ಕೆಲಸದ ಬಿಡುವಿನ ವೇಳೆಯಲ್ಲಿ ನನ್ನ ಅಪ್ಪ ಹಾಡುತ್ತಿದ್ದರು ಅಲ್ಲದೇ ಆ ಸಮಯದಲ್ಲಿ ನನಗೆ ಯಾವುದಾದರೂ ಡಬ್ಬ ತಂದು ಬಾರಿಸು ಎಂದು ಹೇಳುತ್ತಿದ್ದರು. ಇಲ್ಲಿಂದಲೇ ಹಾಡನ್ನು ಸೃಷ್ಟಿಸಿ ಹಾಡುವ ಕಲೆಯನ್ನು ನಾನು ಕಲಿತೆ ಎನ್ನುತ್ತಾರೆ ಚಂದನ್‍ಶೆಟ್ಟಿ.

ಚಂದನ್‍ "ಹಾವಳಿ': ಚಂದನ್‍ಶೆಟ್ಟಿ ಬಿಗ್‍ಬಾಸ್‍ನಿಂದ ಹೊರ ಬಂದ ನಂತರ ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಅಭಿನಯದ "ಪಡ್ಡೆಹುಲಿ' ಚಿತ್ರದ ಪ್ರೋಮೋ ಸಾಂಗ್ ಹಾಡಿರುವುದು ವಿಶೇಷ. ಅಲ್ಲದೇ "ಹಾವಳಿ' ಎಂಬ ಸಂಗೀತ ಕಾರ್ಯಕ್ರಮವನ್ನು (ಕಾನ್ಸೆರ್ಟ್) ಕನ್ನಡದಲ್ಲಿ ರ‍್ಯಾಪ್‍ಪ್ರಿಯರಿಗಾಗಿ ಆಯೋಜಿಸಿ, ಅದರಲ್ಲಿಯೂ ಯಶಸ್ವಿ ಆಗಿದ್ದಾರೆ ಚಂದನ್‍ಶೆಟ್ಟಿ. ಈ ಕಾರ್ಯಕ್ರಮಕ್ಕೆ ಟಗರು ಶಿವರಾಜಕುಮಾರ್, ಡಾಲಿ ಧನಂಜಯ್, ಕಿರಿಕ್ ಕೀರ್ತಿ ಸೇರಿದಂತೆ ಹಲವು "ರ‍್ಯಾಪರ್'ಗಳು ಭಾಗವಹಿಸಿದ್ದರು.

ಯೂಟ್ಯೂಬ್‍ನಲ್ಲಿ ಚಂದನ್‍ಶೆಟ್ಟಿ ಹವಾ: ಶಬ್ಬಾಸ್!
ಹೌದು ಇಂದು ಚಂದನ್‍ಶೆಟ್ಟಿ ಕನ್ನಡ ರ‍್ಯಾಪರ್ ಜೊತೆಗೆ ಯೂಟ್ಯೂಬ್‍ನ ಸ್ಟಾರ್ ಕೂಡಾ. ಅವರ ರಚಿಸಿ ಬಿಡುಗಡೆ ಮಾಡಿರುವ ಎಲ್ಲ "ರ‍್ಯಾಪ್' ಸಾಂಗ್‍ಗಳೂ ಮಿಲಿಯನ್‍ಗಟ್ಟಲೇ ವೀಕ್ಷಣೆಗೊಳಗಾಗಿವೆ.
1. ಹಾಳಾಗೋದೇ ಸಾಂಗ್ 91ಲಕ್ಷಕ್ಕೂ ಹೆಚ್ಚು
2. 3ಪೆಗ್ ಸಾಂಗ್ 3.5ಕೋಟಿಗೂ ಹೆಚ್ಚು
3. ಚಾಕಲೇಟ್ ಗರ್ಲ್ ಸಾಂಗ್ 1.8ಕೋಟಿಗೂ ಹೆಚ್ಚು
4. ಟಕಿಲ ಸಾಂಗ್ 3.3ಕೋಟಿಗೂ ಹೆಚ್ಚು
5. ಟಾಪ್ ಟು ಬಾಟಮ್ ಗಾಂಚಾಲಿ 1.1ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

"3 ಪೆಗ್‌'ನ ವಿವಾದ: "ಮೂರೇ ಮೂರು ಪೆಗ್‌ಗೆ ತಲೆ ಗಿರಗಿರ ಗಿರಗಿರ ಅಂದಿದೆ...' "3 ಪೆಗ್‌' ಆಲ್ಬಂನ ಅತ್ಯಂತ ಜನಪ್ರಿಯವಾದ ಈ ರ‍್ಯಾಪ್ ಸಾಂಗ್‌ ಸೂಪರ್‌ಹಿಟ್‌ ಆಗೋಕೆ ಕಾರಣ ಚಂದನ್‌ಶೆಟ್ಟಿ ಒಬ್ಬರೇ ಕಾರಣವಲ್ಲ, ತಾವೂ ಕಾರಣ ಅಂತ ಯುವ ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ವಿವಾದ ಹುಟ್ಟು ಹಾಕಿದರು. ಅಲ್ಲದೇ ಈ ವಿವಾದಕ್ಕೆ ಚಂದನ್‍ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಅನಂತರ "ಸೀಜರ್' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ "ನಾನೆಲ್ಲೂ ಆ ಹಾಡು ಮಾಡಿದ್ದು ನಾನು ಅಂತ ಹೇಳಿಕೊಂಡಿಲ್ಲ. ಆ ಹಾಡು ಮಾಡಿದ್ದು ವಿಜೇತ್‌. ನಾನು ಹಾಡಿದ್ದೇನೆ ಅಷ್ಟೇ. ಹಲವು ವರ್ಷಗಳ ಹಿಂದೆ ನಮ್ಮಿಬ್ಬರ ಭೇಟಿಯಾದಾಗ, ವಿಜೇತ್‌ ಒಂದು ಟ್ಯೂನ್‌ ಮಾಡಿಕೊಂಡಿದ್ದರು. ಕೇಳಿ ಖುಷಿಯಾಯಿತು. ಅದಕ್ಕೆ ಸಾಹಿತ್ಯ ಬರೆದು ಹಾಡಿದ್ದೆ. ಆದರೆ, ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಕೊನೆಗೆ ಬಿಡುಗಡೆಯಾಗಿ ಜನಪ್ರಿಯವಾಯಿತು.

ಆ ಹಾಡಿನ ಕೊನೆಯಲ್ಲಿ ಬರುವುದು ಮೂರೇ ಹೆಸರು. ಒಂದು ನಂದು, ಇನ್ನೊಂದು ಐಂದ್ರಿತಾದು, ಮತ್ತೊಂದು ವಿಜೇತ್‌ದು. ನಾನೆಲ್ಲೂ ಇದು ನನ್ನ ಹಾಡು ಅಂತ ಹೇಳಿಕೊಂಡಿಲ್ಲ. ಅಷ್ಟಕ್ಕೂ ಆ ಅಲ್ಬಂನ ನಿರ್ಮಾಪಕ ನಾನಲ್ಲ. ನಾನೊಬ್ಬ ಗಾಯಕ ಅಷ್ಟೇ. ವಿಜೇತ್‌ಗೆ ಏನು ಸಿಗಬೇಕು ಎನ್ನುವುದು ತೀರ್ಮಾನಿಸಬೇಕಾಗಿದ್ದು ನಿರ್ಮಾಪಕರು' ಎನ್ನುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದರು ಚಂದನ್‍ಶೆಟ್ಟಿ.

* ಲಕ್ಷ್ಮಿಗೋವಿಂದರಾಜು ಎಸ್.

Tags:

ಚಂದನ್‍ಶೆಟ್ಟಿ

ಕನ್ನಡ ರ‍್ಯಾಪರ್

ಯೂಟ್ಯೂಬ್‍ ಸ್ಟಾರ್

ಬಿಗ್‍ಬಾಸ್ ಸೀಸನ್ 5 ವಿನ್ನರ್

Chandan Shetty

Kannada Rapper

youtube star

Bigboss Season 5 Winner

Author/Source:

ಲಕ್ಷ್ಮಿ ಗೋವಿಂದ್ ರಾಜ್

Tue, 26 Jun 2018 07:02:35 +0000 lakshmi 304485 at https://www.udayavani.com https://www.udayavani.com/kannada/news/web-focus/304485/youtube-star-chandan-rap-rope-in-sandalwood#comments ಸ್ಟೈಲೊ ಸ್ಟೈಲೋ ಚಿಕಲಕ ಚಿಕ ಸ್ಟೈಲ್ಲೋ https://www.udayavani.com/kannada/news/web-focus/287972/stylo-stylo-chikalaka-chika-stylo

ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಅಭಿರುಚಿಗಳೂ ಬದಲಾಗಿವೆ. ಈ ಬದಲಾವಣೆಗೆ ಕೂದಲ ವಿನ್ಯಾಸವೂ ಹೊರತಾಗಿಲ್ಲ. ಈ ಹಿಂದೆ ರಾಜ್ ಕುಮಾರ್, ವಿಷ್ಣುವರ್ಧನ್, ಅಮಿತಾಭ್ ಬಚ್ಚನ್ ಅವರ ಹೇರ್ ಸ್ಟೈಲ್ "ಟ್ರೆಂಡ್' ಆಗಿತ್ತು. ಈಗ ಈ "ಫಿಲ್ಮ್ ಸ್ಟಾರ್'ಗಳ ಸ್ಥಾನವನ್ನು ಕ್ರಿಕೆಟಿಗರೂ ಕೂಡಾ ಆಕ್ರಮಿಸಿಕೊಂಡಿದ್ದಾರೆ. ಈ ಆಟಗಾರರ ಕೇಶ ವಿನ್ಯಾಸಗಳು "ವೈರಲ್' ಆಗುತ್ತಿದೆ.

ಕೊಹ್ಲಿ ಕೇಶ ವಿನ್ಯಾಸದ ಮೇಲೆ ಯುವಕರ ಕಣ್ಣು: ಅದರಲ್ಲೂ ಕೊಹ್ಲಿ ಸ್ಪೈಕ್, ಧೋನಿ ಮೋಹಾಕ್, ಸುನೀಲ್ ನರೈನ್ ಡ್ರ್ಯಾಗನ್, ಲಸಿತ್ ಮಾಲಿಂಗ ಗುಂಗುರು ವಿನ್ಯಾಸ, ಹಾರ್ದಿಕ್ ಪಾಂಡ್ಯ ಸೈಡ್ ಕಟ್ ಸ್ಲೋಪ್ ಕಟಿಂಗ್ ಅದರಲ್ಲಿ ಸ್ಟ್ರೀಕ್ (ತಲೆಯ ಒಂದು ಭಾಗಕ್ಕೆ ಅಂದರೆ, ಎಂಟತ್ತು ಕೂದಲಿಗೆ ಬಣ್ಣ ಹಚ್ಚುವುದು) ಅಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ಕೇಶ ವಿನ್ಯಾಸ ಟ್ರೆಂಡಿಂಗ್ ನಲ್ಲಿದ್ದು, ಈಗಿನ ಯುವ ಜನತೆ ಅನುಕರಿಸುತ್ತಿದ್ದಾರೆ.

ಇತ್ತೀಚೆಗೆ ಫಂಕಿ, ಸ್ಪೈಕ್, ಕಾರ್ಪೊರೇಟ್, ಪಾಶ್ಚಾತ್ಯ, ಸಿನಿಮಾ ನಟರ ಹಾಗೂ ಕ್ರಿಕೆಟ್ ಆಟಗಾರರ ಕೇಶ ವಿನ್ಯಾಸ ಶೈಲಿಯು ತುಂಬಾ ಟ್ರೆಂಡಿಯಾಗಿದ್ದು, ಯುವಕರ ಸಮೂಹವೇ ಇದನ್ನು ಬಹಳ ಅಚ್ಚುಕಟ್ಟಾಗಿ ನಕಲು ಮಾಡಿ ಫಾಲೋ ಮಾಡುತ್ತಿದೆ. ಈಗಿನ ಯುವ ಜನತೆಗೆ ಹೇರ್ ಸಲೂನ್ ಗಳಲ್ಲಿ ಹಲವಾರು ವಿಧದ ಕೇಶ ವಿನ್ಯಾಸದ ಬಗೆಗಳನ್ನು ಕಾಣಬಹುದಾಗಿದೆ.

ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಯೊಂದು ಸರಣಿಗಳಿಗೂ ತಮ್ಮ ಕೇಶವಿನ್ಯಾಸವನ್ನು ಯಾವ ರೀತಿ ಬದಲಾಯಿಸುತ್ತಾರೋ ಅದೇ ಹೆಸರಿನಲ್ಲಿ ಆ ಕೇಶ ವಿನ್ಯಾಸ ಜನಪ್ರಿಯವಾಗುತ್ತದೆ. ಅಲ್ಲದೇ ಆ ತರಹದ ಕೇಶ ವಿನ್ಯಾಸವನ್ನು ಅವರ ಅಭಿಮಾನಿಗಳು ಅನುಕರಿಸುತ್ತಾರೆ. ಉದಾಹರಣೆಗೆ: "ಕೊಹ್ಲಿ ಸ್ಟೈಲ್ ಸ್ಪೈಕ್ ಕಟಿಂಗ್'.

ಈ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ "ಮೋಹಾಕ್’ ಹೇರ್ ಸ್ಟೈಲ್ನೊಂದಿಗೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರೆ, ಅವರ ಅಭಿಮಾನಿಗಳು ಅದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ಬುಕ್, ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಅಪ್ಲೋಡ್ ಮಾಡಿ ತರಹೇವಾರಿ ಕಾಮೆಂಟ್ ಗಳನ್ನು ಮತ್ತು ಲೈಕ್ ಗಳನ್ನು ಅವರ ಗೆಳೆಯರಿಂದ ಪಡೆಯುತ್ತಾರೆ.

ಆಟದಷ್ಟೇ ಫೇಮಸ್ಸು ಇವರ ಹೇರ್ ಸ್ಟೈಲು: ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಷ್ಟು ಹೆಸರು ಗಳಿಸಿದ್ದಾರೋ, ಅದೇ ರೀತಿಯಲ್ಲಿ ಅವರ ಕೇಶ ವಿನ್ಯಾಸವೂ ಕೂಡಾ ತುಂಬಾ ಹೆಸರುವಾಸಿಯಾಗಿ ಟ್ರೆಂಡಿಂಗ್ನಲ್ಲಿದೆ.

ಇವರಲ್ಲದೆ ಶ್ರೀಲಂಕಾದ ವೇಗದ ಬೌಲರ್ "ಲಸಿತ್ ಮಾಲಿಂಗ' ಅವರ ಗುಂಗುರು ಕೂದಲು ವಿನ್ಯಾಸ, ಹಾಗೂ ಗುಂಗುರು ಕೂದಲಿಗೆ ಅವರು ಮಾಡಿಸಿರುವ ಸ್ಟ್ರೀಕ್ ಕಲರಿಂಗ್ ಮಾಡಿಸಿರುವ ಶೈಲಿಯನ್ನು ಅವರ ಅಭಿಮಾನಿಗಳು ಅನುಕರಿಸಿರುವುದು ಕೂಡಾ ಒಂದು ಟ್ರೆಂಡ್.

ವೆಸ್ಟ್ ಇಂಡೀಸ್ ನ ಆಟಗಾರ ಸುನೀಲ್ ನರೈನ್ರ ಡ್ರ್ಯಾಗನ್ ಕೇಶ ವಿನ್ಯಾಸ, ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿನೋ ರೋನಾಲ್ಡೋ ಸ್ಪೈಕ್ ವಿಥ್ ಪಂಕ್ ಕೇಶ ವಿನ್ಯಾಸ, ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ರವೀಂದ್ರ ಜಡೇಜಾ ಅವರಲ್ಲದೇ ಕೆ.ಎಲ್.ರಾಹುಲ್, ರಿಷಬ್ ಪಂತ್, ಆಂಡ್ರೆ ರಸೆಲ್, ಉಮೇಶ್ ಯಾದವ್ ಸೇರಿದಂತೆ ಇನ್ನಿತರೆ ತಮಗಿಷ್ಟದ ಆಟಗಾರರ ಕೇಶ ವಿನ್ಯಾಸಕ್ಕೆ ಈಗಿನ ಯುವ ಸಮೂಹ ಮೊರೆ ಹೋಗಿದ್ದಾರೆ.

ಹುಚ್ಚು ಹಿಡಿಸುವ ಕಿಚ್ಚನ ಕೇಶ ವಿನ್ಯಾಸ!: ಸ್ಯಾಂಡಲ್ವುಡ್ ಕೂಡಾ ಇದಕ್ಕೆ ಹೊರತಾಗಿಲ್ಲ ಇತ್ತೀಚೆಗೆ ತೆರೆ ಕಂಡ ಕನ್ನಡದ ಆರಡಿ ಕಟೌಟು ಕಿಚ್ಚ ಸುದೀಪ್ ಅವರ "ಹೆಬ್ಬುಲಿ' ಚಿತ್ರಕ್ಕೆ ತಮ್ಮ ಹೇರ್ ಸ್ಟೈಲ್ ಅನ್ನು ಬದಲಿಸಿದ್ದೆ ತಡ, ಅದನ್ನೇ ಅನುಕರಿಸಿ ಅವರ ಅಭಿಮಾನಿಗಳು ಅದೇ ರೀತಿಯಲ್ಲಿ ತಮ್ಮ ಕೇಶ ವಿನ್ಯಾಸವನ್ನು ಬದಲಿಸಿ ಅದೇ ಗೆಟಪ್ ನಲ್ಲಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸಿ ಅಭಿಮಾನ ಮೆರೆದಿದ್ದಾರೆ.

ಅಲ್ಲದೇ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ "ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾದಲ್ಲಿ ಮಾಡಿಸಿಕೊಂಡ ಕೇಶವಿನ್ಯಾಸವನ್ನು ಸಿನಿಮಾ ನೋಡಿದ ಅಭಿಮಾನಿಗಳು ಮರುದಿನ ನಕಲು ಮಾಡಿರುವುದನ್ನು ಸ್ಮರಿಸಬಹುದು. ಅಲ್ಲದೇ ಇದೀಗ ಅವರ ಬಹುನಿರೀಕ್ಷಿತ ಚಿತ್ರ "ಕೆಜಿಎಫ್'ನಲ್ಲಿರುವ ಕೇಶ ವಿನ್ಯಾಸ ಗೆಟಪ್ ಕೂಡಾ ಜನರಿಗೆ ಹುಚ್ಚು ಹಿಡಿಸುವಂತಿದೆ.

ಇದಲ್ಲದೇ ಸೂಪರ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಅವರು ಎ, ಉಪೇಂದ್ರ, ಸೂಪರ್, ಹಾಲಿವುಡ್, ಬುದ್ದಿವಂತ, ಹಾಗೂ ಸೂಪರ್ ಚಿತ್ರಗಳಲ್ಲಿ ಅವರು ಮಾಡಿದ ಕೇಶ ವಿನ್ಯಾಸ ಈಗಲೂ ಅವರ ನೆಚ್ಚಿನ ಅಭಿಮಾನಿಗಳ ಫೇವರೇಟ್ ಆಗಿದೆ.

ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ "ದಿ ವಿಲನ್’ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದು, ಕಿಚ್ಚ ಮತ್ತು ಶಿವಣ್ಣ ಅವರ ಹೇರ್ಸ್ಟೈಲ್ ಮೆಚ್ಚಿಕೊಂಡಿರುವ ಅಭಿಮಾನಿಗಳು ಅದನ್ನೇ ಅನುಕರಿಸಿ ಕೇಶ ವಿನ್ಯಾಸ ಬದಲಿಸಿಕೊಂಡು ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಕಿಕ್ ಕೊಡುವ ಕೇಶ ವಿನ್ಯಾಸ!: ಇತ್ತಿಚೇಗಂತೂ ಚಂದನವನದಲ್ಲಿ ಭಾರಿ ಸದ್ದು ಮಾಡುತ್ತಿರುವ "ಟಗರು' ಚಿತ್ರದಲ್ಲಿನ ಶಿವಣ್ಣ ಮತ್ತು ಡಾಲಿ ಧನಂಜಯ್ ಅವರ ಹೇರ್ ಸ್ಟೈಲ್ ಅವರ ಅಭಿಮಾನಿಗಳಿಗೆ ಕ್ರೇಜ್ ಹುಟ್ಟುಹಾಕಿದ್ದು, ಕಿಕ್ ಕೊಡುವಂತಿದೆ.

ಮುಖ್ಯವಾಗಿ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ ಮುಂದಿನ ಚಿತ್ರ "ನಟ ಸಾರ್ವಭೌಮ'ಕ್ಕಾಗಿ ಮಾಡಿಸಿಕೊಂಡ ಕೇಶ ವಿನ್ಯಾಸವನ್ನು ಅವರ ಅಭಿಮಾನಿಗಳು ನಕಲು ಮಾಡಿ ಅಭಿಮಾನವನ್ನು ಮೆರೆದಿದ್ದಾರೆ.

ಅಲ್ಲದೇ ಈ ಹೊಸ ಕೇಶ ವಿನ್ಯಾಸ ಈಗ ನಂ.1 ಟ್ರೆಂಡಿಂಗ್ನಲ್ಲಿರುವುದು ವಿಶೇಷ. ಇದಲ್ಲದೇ ಇತ್ತೀಚೆಗೆ ಕಾಮಿಡಿ ನಟ ಚಿಕ್ಕಣ್ಣ ತಮ್ಮ ಗಂಗುರು ಕೂದಲಿಗೆ ಪೆಪ್ಪರ್ ಅಂಡ್ ಸಾಲ್ಟ್ ಕಲರಿಂಗ್ (ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣಗಳಿಂದ ಕೂಡಿದ್ದು) ಕೂಡಾ ಯೂತ್ಫುಲ್ ಟ್ರೆಂಡಿಂಗ್‍ನಲ್ಲಿದೆ.

ಬಾಲಿವುಡ್ ನಟರಿಗೂ ಉಂಟು ಕೇಶ ವಿನ್ಯಾಸದ ಗೀಳು: ಬಾಲಿವುಡ್ ನಲ್ಲೂ ಕೇಶ ವಿನ್ಯಾಸದ ಗೀಳಿಗೆ ನಟರು ಬಿದಿದ್ದು, ತಮ್ಮ ಒಂದೊಂದು ಚಿತ್ರಗಳಲ್ಲೂ ವಿಭಿನ್ನ ಕೇಶ ವಿನ್ಯಾಸ ಮತ್ತು ಟ್ರೆಂಡ್ ಸೆಟ್ಟರ್ ಆಗಿರುವ ಅಮೀರ್ ಖಾನ್ ಅವರು ಈ ಹಿಂದೆ ಗಜಿನಿ ಚಿತ್ರಕ್ಕೆ ಭಿನ್ನ ಕೇಶ ವಿನ್ಯಾಸ ಮಾಡಿಸಿದ್ದರೆ, ಇತ್ತೀಚೆಗೆ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ವಿಭಿನ್ನ ಹೇರ್ ಸ್ಟೈಲ್ನಲ್ಲಿ ಮಿಂಚಿದ್ದಾರೆ.

ಇದೀಗ ತಮ್ಮ ಮುಂದಿನ "ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪೋಸ್ಟರ್ ನಲ್ಲಿ ಢಿಫರೆಂಟ್ ಹೇರ್ಸ್ಟೈಲ್ ಮಾಡಿಸಿ ಯೂತ್ ಐಕಾನ್ ಆಗಿದ್ದಾರೆ. ಇವರಲ್ಲದೇ ರಣವೀರ್ ಸಿಂಗ್, ಶಾಹಿದ್ ಕಪೂರ್, ರುತೀಕ್ ರೋಷನ್, ವರುನ್ ಧವನ್, ಶಾರೂಖ್ ಖಾನ್, ಸುಶಾಂತ್ ಸಿಂಗ್, ಮತ್ತು ರಣಬೀರ್ ಕಪೂರ್ ಅವರ ಕೇಶ ವಿನ್ಯಾಸಕ್ಕೂಈಗಿನ ಯುವ ಸಮೂಹ ಮಾರು ಹೋಗಿದ್ದಾರೆ.

"ಹೇರ್ ಸ್ಟೈಲ್ನಿಂದಲೇ ಯೂತ್ ಐಕಾನ್ ಆಗ್ತಾರೆ': ಅಲ್ಲದೇ ದಕ್ಷಿಣ ಭಾರತದ ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಪ್ರತಿಯೊಂದು ಚಿತ್ರಕ್ಕೂ ತರಹೇವಾರಿ ಕೇಶ ವಿನ್ಯಾಸಗಳಿಂದ ಹೆಸರು ಗಳಿಸಿ ಯೂತ್ ಐಕಾನ್ ಆಗಿದ್ದು, ಇದೀಗ ಅವರ ಮುಂದಿನ ಚಿತ್ರ ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾದ ಕೇಶ ವಿನ್ಯಾಸ ಈಗಾಗಲೇ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ.

ಅಲ್ಲದೇ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರೋಬೋ ಚಿತ್ರದಲ್ಲಿನ ಹೇರ್ ಸ್ಟೈಲ್, ಸ್ಪೈ ಚಿತ್ರದಲ್ಲಿನ ಮಹೇಶ್ ಬಾಬು, ಮಾಸ್ ಮಹಾರಾಜ ರವಿತೇಜ, ಯೂತ್ ಐಕಾನ್ ಜೂನಿಯರ್ ಎನ್.ಟಿ.ಆರ್, ಡಾರ್ಲಿಂಗ್ ಪ್ರಭಾಸ್, ಸಿಂಗಂ ಸ್ಟಾರ್ ಸೂರ್ಯ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ, ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ, ಸೇರಿದಂತೆ ಮಲ್ಟಿ ಟ್ಯಾಲೆಂಟೆಡ್ ವಿಕ್ರಮ್ ಅವರ ಹೇರ್ ಸ್ಟೈಲ್ ಅಭಿಮಾನಿಗಳ ಅನುಕರಣೆಗಳಾಗಿವೆ.

ಅಭಿಮಾನಿಗಳ ತಲೆ ಮೇಲೆ ರೊನಾಲ್ಡೊ "ಸಿಗ್ನೇಚರ್': ಖ್ಯಾತ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿನೋ ರೋನಾಲ್ಡೋ ಅವರ "ಸಿಗ್ನೇಚರ್' ಹೇರ್ ಸ್ಟೈಲ್, ಮೆಸ್ಸಿಯ "ಫಾಕ್ಸ್ ಹಾವ್ಕ್' ಮತ್ತು ನೆಯ್ಮರ್ಸ್ರ ಪಾಯಿಂಟೆಡ್ ಹೇರ್ ಸ್ಟೈಲ್ ಟ್ರೆಂಡಿಯಾಗಿದೆ. ಅಲ್ಲದೇ ಹಾಲಿವುಡ್ ಚಿತ್ರತಾರೆಗಳಾದ ಟಾಮ್ ಕ್ರ್ಯೂಸ್, ಲಿಯೋನಾರ್ಡೊ ಡಿಕಾಪ್ರಿಯೊ, ವಿಲ್ ಸ್ಮಿತ್, ರಾಬರ್ಟ್ ಡೌನಿ ಜೆಆರ್, ಮತ್ತು ಕ್ರಿಸ್ಟೋಫರ್ ನೋಲನ್ ಅವರ ಕೇಶ ವಿನ್ಯಾಸಗಳು ಟ್ರೆಂಡಿಯಾಗಿವೆ.

ಈ ರೀತಿಯಾಗಿ ಕ್ರೀಡಾ ಮತ್ತು ಸಿನಿಮಾ ತಾರೆಗಳು ಮಾಡಿದ ಕೇಶ ವಿನ್ಯಾಸಗಳೆಲ್ಲ ಟ್ರೆಂಡ್‍ಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಿನ್ಯಾವ ಕೇಶ ವಿನ್ಯಾಸ ಶೈಲಿ ಬರುತ್ತವೋ ಕಾದು ನೋಡೋಣ.

Tags:

ಹೇರ್ ಸ್ಟೈಲ್

Hair style

ಸ್ಟಾರ್ ನಟರು

Star actors

ಕ್ರಿಕೆಟಿಗರು

Cricketers

ಆಟಗಾರರು

players

ಟ್ರೆಂಡ್

Trend

Youth Follow

Author/Source:

ಲಕ್ಷ್ಮಿ ಗೋವಿಂದ್ ರಾಜ್

Sun, 22 Apr 2018 07:30:00 +0000 lakshmi 287972 at https://www.udayavani.com https://www.udayavani.com/kannada/news/web-focus/287972/stylo-stylo-chikalaka-chika-stylo#comments