Udayavani - ಉದಯವಾಣಿ - ಸತೀಶ್ ಮಲ್ಯ https://www.udayavani.com/kannada-news-authors/%E0%B2%B8%E0%B2%A4%E0%B3%80%E0%B2%B6%E0%B3%8D-%E0%B2%AE%E0%B2%B2%E0%B3%8D%E0%B2%AF en ಚಿನ್ನ ಖರೀದಿ, ರೇಟ್ ಬೆನಿಫಿಟ್, ಪೋಂಜಿ ಸ್ಕೀಮು ಅಂದ್ರೇನು ! https://www.udayavani.com/kannada/news/web-focus/352186/gold-scheme-rate-benefit-ponzy-sheme-what-does-these-mean

ಮಧ್ಯಮ ವರ್ಗದ ಸಣ್ಣ ಉಳಿತಾಯದ ಜನರಿಗೆ ಚಿನ್ನ ಗಗನ ಕುಸುಮ ಎಂಬ ಮಾತಿದೆ. ಇದು ನಿಜವೇನೋ ಹೌದು.

ಆದರೆ ವರ್ಷದ ಕೆಲವು ಸಂದರ್ಭಗಳಲ್ಲಿ ಭವಿಷ್ಯಕ್ಕೆಂದು ಸ್ವಲ್ಪ ಸ್ವಲ್ಪವಾದರೂ ಚಿನ್ನವನ್ನು ಖರೀದಿಸದಿರುವವರು ಇಲ್ಲವೇ ಇಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಇದಕ್ಕೆ ಕಾರಣ ಬಹಳ ಸರಳ ಮತ್ತು ನೇರ. ಅದೆಂದರೆ ಮಧ್ಯಮ ವರ್ಗದ ಜನರಿಗೆ, ಸಣ್ಣ ಉಳಿತಾಯದಾರರಿಗೆ ಚಿನ್ನ ಒಂದು ಅಪದ್ಧನ. ಕಷ್ಟಕಾಲ ಒದಗುವುದಕ್ಕೆ ಸಂಪತ್ತು !

ಅಂತಿರುವಾಗ ಮಧ್ಯಮ ವರ್ಗದ ಸಣ್ಣ ಉಳಿತಾಯದಾರರಿಗೆಂದೇ ಚಿನ್ನಾಭರಣ ಉದ್ಯಮಿಗಳು, ವ್ಯಾಪಾರಸ್ಥರು, ಮಳಿಗೆಗಳು ಚಿನ್ನ ಉಳಿತಾಯ ಯೋಜನೆ ಅಥವಾ ಅದೃಷ್ಟಕರ ಕಂತು ಖರೀದಿ ಯೋಜನೆ ಅಥವಾ ಭವಿಷ್ಯದ ಚಿನ್ನದ ಖರೀದಿಯ ಮುಂಗಡ ಯೋಜನೆ ಎಂದೆಲ್ಲ ನಾನಾ ರೀತಿಯ ಸ್ಕೀಮುಗಳನ್ನು ರೂಪಿಸಿರುತ್ತಾರೆ.

ಈ ಸ್ಕೀಮುಗಳಲ್ಲಿ ಅದೃಷ್ಟದ ಲಕ್ಕಿ ಡ್ರಾ ಇರುವುದು ಸರ್ವ ಸಾಮಾನ್ಯ. ಈ ರೀತಿಯ ಸ್ಕೀಮು ಒಂದು, ಎರಡು ಅಥವಾ ಮೂರು ವರ್ಷಗಳ ಒಳಗೆ ಮುಗಿಯುವ ಯೋಜನೆಗಳಾಗಿರುತ್ತವೆ ಮತ್ತು ಇವುಗಳಡಿ ತಿಂಗಳು ತಿಂಗಳು ಕ್ರಮಬದ್ಧವಾಗಿ ನಗದು ಕಂತು ಕಟ್ಟುವುದು ಒಂದು ರೀತಿಯ ಶಿಸ್ತಿನ ಉಳಿತಾಯ ಯೋಜನೆಯೇ ಆಗಿರುತ್ತದೆ.

ಸ್ಕೀಮಿನ ಅವಧಿಯೊಳಗೆ ಮುಗಿಯುವುದರೊಳಗೆ ಅದೃಷ್ಟದ ಲಕ್ಕೀ ಡ್ರಾದಲ್ಲಿ ವಿಜಯಿಯಾದರೆ ಉಳಿದ ಕಂತು ಕಟ್ಟುವ ಪ್ರಶ್ನೆಯೇ ಇರುವುದಿಲ್ಲ. ಅದೃಷ್ಟಶಾಲಿಗಳಾಗಿ ಮೂಡಿ ಬಾರದಿದ್ದರೂ ಡಿಸ್ಕೌಂಟ್ ರೂಪದಲ್ಲಿ ಕೊನೇ ಕಂತು ಮಾಫಿಯಾಗುವ ಅವಕಾಶವೂ ಇರುತ್ತದೆ.

ಒಟ್ಟಿನಲ್ಲಿ ಈ ಬಗೆಯ ಸರಳ, ಆಕರ್ಷಕ ಸ್ಕೀಮುಗಳಿಂದ ಮಧ್ಯಮ ವರ್ಗದ ಸಣ್ಣ ಉಳಿತಾಯದಾರರಿಗೆ ಚಿನ್ನವನ್ನು ವರ್ಷಂಪ್ರತಿ ಖರೀದಿಸುತ್ತಲೇ ಹೋಗುವ ಅವಕಾಶ ಪ್ರಾಪ್ತವಾಗುವುದು ನಿಜ. ಎಲ್ಲಕ್ಕಿಂತ ಮುಖ್ಯವಾಗಿ ಈ ಸ್ಕೀಮುಗಳು ಪೋಂಜಿ ಸ್ಕೀಮುಗಳಾಗಿರುವುದಿಲ್ಲ.

ಪೋಂಜಿ ಸ್ಕೀಮು ಎಂದರೆ ಚೈನ್ ಸ್ಕೀಮ್; ಸರಣಿ ಸದಸ್ಯರನ್ನು ಮಾಡುವ ದೊಡ್ಡ ಘೊಟಾಳೆಯ, ಅಂತಿಮವಾಗಿ ಎಲ್ಲರಿಗೂ ಪಂಗನಾಮ ಬೀಳುವ ಸ್ಕೀಮುಗಳು. ಆದುದರಿಂದ ಚಿನ್ನದ ಕಂತು ಖರೀದಿ, ಅದೃಷ್ಟದ ಲಕ್ಕೀ ಡ್ರಾ ಯೋಜನೆಯ ಸ್ಕೀಮುಗಳು ಅಷ್ಟರ ಮಟ್ಟಿಗೆ ನಂಬಿಗಸ್ಥ ಸ್ಕೀಮುಗಳು ಎನ್ನಬಹುದು.

ಹಾಗಿದ್ದರೂ ಈ ಬಗೆಯ ಸ್ಕೀಮುಗಳ ರೀತಿ- ನೀತಿ, ಸ್ವರೂಪ, ರೂಪರೇಖೆ ಇತ್ಯಾದಿಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಅಂತೆಯೇ ನಾವಿಲ್ಲಿ ಸಂಕ್ಷಿಪ್ತವಾಗಿ ಅವನ್ನು  ಪ್ರಶ್ನೋತ್ತರ ರೂಪದಲ್ಲಿ  ಗುರುತಿಸಬಹುದು :

1. ಗ್ರಾಹಕರು ಕಟ್ಟಬೇಕಾದ ಕಂತುಗಳು ಎಷ್ಟು ?
ಗ್ರಾಹಕರು ಸಮಾನ ಮೊತ್ತದ ಹತ್ತು ಕಂತುಗಳನ್ನು ಕಟ್ಟಬೇಕು.

2.ಕಂತು ಕಟ್ಟಬೇಕಾದ ನಿಗದಿತ ದಿನಾಂಕ ಯಾವುದು ?
ಗ್ರಾಹಕರು ಮೊದಲ ಕಂತು ಕಟ್ಟಿದ ದಿನದ ಬಳಿಕದ ಪ್ರತೀ ತಿಂಗಳ ಅದೇ ದಿನದಂದು ಕಂತು ಕಟ್ಟತಕ್ಕದ್ದು. ಉದಾಹರಣೆಗೆ ಗ್ರಾಹಕರು ಮೊದಲ ಕಂತನ್ನು 5ನೇ ತಾರೀಕಿನಂದು ಕಟ್ಟಿದ್ದರೆ, ಅನಂತರದ ಉಳಿದ ಎಲ್ಲ ಕಂತುಗಳನ್ನು ಪ್ರತೀ ತಿಂಗಳ 5ನೇ ತಾರೀಕಿನಂದೇ ಕಟ್ಟತಕ್ಕದ್ದು.

3. ಕಂತು ಕಟ್ಟುವುದಕ್ಕೆ ರಿಯಾಯಿತಿ ದಿನಗಳು ಇವೆಯೇ ?
ಇಲ್ಲ. ಯಾವುದೇ ರಿಯಾಯಿತಿ ದಿನಗಳಿಲ್ಲ. ಇದನ್ನು ಸದಸ್ಯರಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ.

4. ಗ್ರಾಹಕರಿಂದ ಕೆವೈಸಿ (ಗ್ರಾಹಕರ ಪರಿಚಯ ಮಾಹಿತಿ) ದಾಖಲೆಗಳನ್ನು ನಾವು ಪಡೆದುಕೊಳ್ಳಬಹುದೇ ?
ಹೌದು. ಯಾರ ಹೆಸರಿನಲ್ಲಿ ಸ್ಕೀಮನ್ನು ತೆರೆಯಲು ಬಯಸಲಾಗಿದೆಯೋ ಆ ವ್ಯಕ್ತಿಯ ಮೂಲ ಬ್ಯಾಂಕ್ ಪಾಸ್ ಬುಕ್ ಅನ್ನು ತರುವಂತೆ ಗ್ರಾಹಕರನ್ನು ಕೇಳಿಕೊಳ್ಳಲಾಗುತ್ತದೆ.  ಬ್ಯಾಂಕಿನ ಹೆಸರು, ಶಾಖೆಯ ಹೆಸರು, ಖಾತೆಯ ನಂಬ್ರ (ಹದಿನೈದು ಅಂಕಿಗಳು),  IFSC ಕೋಡ್ ಇತ್ಯಾದಿ ಮಾಹಿತಿಗಳಿರುವ ಸಾಫ್ಟ್ ಪ್ರತಿಯನ್ನು  ಪಡೆದೆಕೊಳ್ಳಬಹುದಾಗಿರುತ್ತದೆ.

ಸಾಮಾನ್ಯವಾಗಿ ಕೆಲವೊಂದು ರೀತಿಯ  ಜೆರಾಕ್ಸ್ ಪ್ರತಿಗಳು 12 ತಿಂಗಳ ಕಾಲಾವಧಿಯಲ್ಲಿ ಮಾಸಿ ಹೋಗುವುದರಿಂದ ಸಾಫ್ಟ್ ಪ್ರತಿಯನ್ನು ಪಡೆದಿಟ್ಟುಕೊಳ್ಳಲಾಗುತ್ತದೆ. ಒಂದೊಮ್ಮೆ ಪತಿಯು ತನ್ನ ಪತ್ನಿಯ ಹೆಸರಿನಲ್ಲಿ ಸ್ಕೀಮ್ ತೆರೆಯಲು ಬಯಸಿದರೆ, ಪತ್ನಿಯ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ.

5. ಕೆವೈಸಿಯನ್ನು ಹೆಚ್ಚುವರಿ ದಾಖಲೆಯಾಗಿ ಸ್ವೀಕರಿಸುತ್ತಾರೆಯೇ ?
ಕನಿಷ್ಠ ಒಂದು ವಿಳಾಸ ದಾಖಲೆ ಮತ್ತು ಪಾನ್ ಕಾರ್ಡ್ ಪ್ರತಿಯನ್ನು ಪಡೆದಿಟ್ಟುಕೊಳ್ಳುವುದು ಸೂಕ್ತವೆಂದು ತಿಳಿಯಲಾಗಿರುತ್ತದೆ.  ಸ್ಕೀಮ್ ಕಂತುಗಳು 40,000 ರೂ. ಮೀರಿದಲ್ಲಿ ಪಾನ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಡೆದಿಟ್ಟುಕೊಳ್ಳಬೇಕು ಎಂಬ ನಿಯಮವೂ ಇರಬಲ್ಲುದು.

(ಇನ್ನೂ ಇದೆ)

Tags:

ಚಿನ್ನ ಖರೀದಿ; ರೇಟ್ ಬೆನಿಫಿಟ್

ಪೋಂಜಿ ಸ್ಕೀಮು

Gold Scheme

Rate Benefit

Ponzy sheme

Author/Source:

ಸತೀಶ್ ಮಲ್ಯ

Mon, 14 Jan 2019 00:30:00 +0000 satishmallya 352186 at https://www.udayavani.com https://www.udayavani.com/kannada/news/web-focus/352186/gold-scheme-rate-benefit-ponzy-sheme-what-does-these-mean#comments ಚಿನ್ನದ ಕಂತು ಖರೀದಿ ಉಳಿತಾಯ ಯೋಜನೆ ಜನಸಾಮಾನ್ಯರಿಗೆ ಎಷ್ಟು ಉಪಯುಕ್ತ? https://www.udayavani.com/kannada/news/web-focus/350576/gold-saving-schemes-how-beneficial-to-common-people

ಉಳಿತಾಯದ ಹಣವನ್ನು ಲಾಭದಾಯಕ ಯೋಜನೆಗಳಲ್ಲಿ ತೊಡಗಿಸಿ ಅತ್ಯಧಿಕ ಇಳುವರಿ ಪಡೆಯುವುದರೊಂದಿಗೆ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಹತ್ತು ಉತ್ಕೃಷ್ಟ  ಮಾರ್ಗೋಪಾಯಗಳ ಪಟ್ಟಿಯಲ್ಲಿ  ಚಿನ್ನದ ಮೇಲಿನ ಹೂಡಿಕೆ ಕೊನೇ ಸ್ಥಾನದಲ್ಲಿರುವುದನ್ನು ನಾವು ಕಂಡುಕೊಂಡೆವು.

ಆದರೂ ಭಾರತೀಯರಿಗೆ, ವಿಶೇಷವಾಗಿ ಭಾರತೀಯ ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ಅಂದಿಗೂ ಇಂದಿಗೂ ಚಿನ್ನವೇ ಪರಮೋಚ್ಚ ಹೂಡಿಕೆ ಮಾಧ್ಯಮವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದುದರಿಂದಲೇ ಸಾಮಾನ್ಯ ಭಾರತೀಯರು ಶೇರು, ಇತ್ಯಾದಿ ಹಣಕಾಸು ಮಾರುಕಟ್ಟೆಗಳ ಗೋಜಿಗೆ ಹೋಗದೆ ಸಣ್ಣ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸಿಡುವುದು ಸರ್ವವ್ಯಾಪಿಯಾಗಿರುವ ವಿದ್ಯಮಾನವಾಗಿದೆ.

ಆದರೆ ಚಿನ್ನದ ಹೂಡಿಕೆಯಲ್ಲಿ ಕೆಲವೊಂದು ತೊಡಕುಗಳಿವೆ. ಅವೆಂದರೆ ಚಿನ್ನದ ಬೆಲೆ ಬಲು ದುಬಾರಿ; ಚಿನ್ನವನ್ನು  ಒಡವೆ ರೂಪದಲ್ಲಿ ಅಥವಾ ಗಟ್ಟಿ ರೂಪದಲ್ಲಿ ಹೊಂದಿರುವುದರಲ್ಲಿ  ಸಾಕಷ್ಟು  ಅಭದ್ರತೆ ಇದೆ; ಮೇಲಾಗಿ ಚಿನ್ನವನ್ನು ಅಲ್ಪ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಡುವುದು ಕೂಡ ಕಷ್ಟವೇ; ಒಮ್ಮೆಲೇ ಒಂದೇ  ದೊಡ್ಡ ಗಂಟಿನಲ್ಲಿ ಚಿನ್ನದ ಮೇಲೆ ಹಣ ಹೂಡುವ ಸಾಮರ್ಥ್ಯ ಜನಸಾಮಾನ್ಯರಿಗೆ  ಇರುವುದಿಲ್ಲ.

ಹಾಗಿರುವಾಗ ಚಿನ್ನವನ್ನೇ ಹೂಡಿಕೆ ಮಾಧ್ಯಮವನ್ನಾಗಿ ಆಯ್ಕೆ ಮಾಡುವ ಜನ ಸಾಮಾನ್ಯರು ಏನು ಮಾಡಬೇಕು; ಅವರಿಗೆ ಗೋಲ್ಡ್ ಬಾಂಡ್ ಎಂದರೇನೆಂದು ಗೊತ್ತಿಲ್ಲ. ಗೋಲ್ಡ್ ಇಟಿಎಫ್ ಕೂಡ ಗೊತ್ತಿಲ್ಲ. ಚಿನ್ನದ online ಖರೀದಿಯಂತೂ ಅವರಿಗೆ ಕಿರಿಕಿರಿಯ, ಕಷ್ಟದ ವಿಷಯ.

ಅಂತಿರುವಾಗ ಜನ ಸಾಮಾನ್ಯರ ನೆರವಿಗೆ ಬರುವುದು ಚಿನ್ನ ಖರೀದಿಯ ಉಳಿತಾಯ ಯೋಜನೆಗಳು !

ಚಿನ್ನಾಭರಣ ವ್ಯಾಪಾರೀ ಸಂಸ್ಥೆಗಳು ಸಾದರಪಡಿಸುವ ಚಿನ್ನ ಉಳಿತಾಯ ಯೋಜನೆಗಳೇ ಈ ದಿನಗಳಲ್ಲಿ ಹೆಚ್ಚು ಆಕರ್ಷಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇವುಗಳಲ್ಲಿ ನಾವು ಆಯ್ಕೆ ಮಾಡುವ ನಿರ್ದಿಷ್ಟ ಮೊತ್ತದ ಕಂತನ್ನು ತಿಂಗಳು ತಿಂಗಳೂ ರಿಕರಿಂಗ್ ಡೆಪಾಸಿಟ್ ನ ಹಾಗೆ ಕಟ್ಟಬಹುದು.

ಒಪ್ಪಿಕೊಂಡ ವಾಯಿದೆ ಮುಗಿದಾಗ ಕಂತು-ಖರೀದಿ ಯೋಜನೆಯಲ್ಲಿ ಸಂಗ್ರಹಗೊಳ್ಳುವ ಹಣದ ಮೊತ್ತಕ್ಕೆ ಒಂದಿಷ್ಟು ಹೆಚ್ಚಿನ ಮೊತ್ತವನ್ನು ಸೇರಿಸಿ ನಮ್ಮ ಆಯ್ಕೆಯ, ನಮ್ಮ ಬಜೆಟ್ ಮಿತಿಯೊಳಗಿನ ಚಿನ್ನದ ಒಡವೆಯನ್ನು ಖರೀದಿಸಬಹುದು. ಅತ್ತ ಉಳಿತಾಯವೂ ಆಯಿತು; ಇತ್ತ ಆ ಉಳಿತಾಯದಿಂದ ಚಿನ್ನಾಭರಣ ಖರೀದಿಯೂ ಸಾಧ್ಯವಾಯಿತು.

ಆದುದರಿಂದಲೇ ಇಂದು ದೇಶದ ಬಹುತೇಕ ಎಲ್ಲ ನಗರ, ಪಟ್ಟಣಗಳಲ್ಲಿನ ಚಿನ್ನದ ಮಳಿಗೆಗಳಲ್ಲಿ "ಚಿನ್ನದ ಕಂತು ಖರೀದಿ ಉಳಿತಾಯ'' ಯೋಜನೆಗಳನ್ನು ಹೆಂಗಳೆಯರಿಗಾಗಿ, ಜನ ಸಾಮಾನ್ಯರಿಗಾಗಿ ರೂಪಿಸಲಾಗಿರುತ್ತದೆ. ಮತ್ತು ಅವು ಆಕರ್ಷಕವಾಗಿವೆ.

ಬಹುತೇಕ ಚಿನ್ನ ಉಳಿತಾಯ ಯೋಜನೆಗಳಲ್ಲಿ ಲಕ್ಕಿ ಡ್ರಾ ಕೂಡ ಅಂತರ್ಗತವಾಗಿರುತ್ತದೆ. ಕಂತು ಕಟ್ಟುವ ಅವಧಿಯಲ್ಲಿ ಅದೃಷ್ಟ ಖುಲಾಯಿಸಿತೆಂದರೆ ಮುಂದಿನ ಕಂತುಗಳನ್ನು ಕಟ್ಟಬೇಕಾಗಿಲ್ಲ. ಪೂರ್ತಿ ಕಂತುಗಳಿಗೆ ಸಮಾನವಾದ ಮೊತ್ತದ ಚಿನ್ನದ ಒಡವೆಗಳನ್ನು ಖರೀದಿಸುವುದಕ್ಕೆ ಅವಕಾಶ ಇರುತ್ತದೆ !

ಕೆಲವೊಂದು ಚಿನ್ನದ ವ್ಯಾಪಾರಸ್ಥರಲ್ಲಿ ಚಿನ್ನ ಉಳಿತಾಯದ 12 ಕಂತುಗಳ ಯೋಜನೆಯಲ್ಲಿ ಗ್ರಾಹಕರು 11 ಕಂತುಗಳನ್ನು ಕ್ರಮಬದ್ಧವಾಗಿ, ಲೋಪವಿಲ್ಲದೆ, ಕಟ್ಟಿದರೆ 12ನೇ ಕಂತನ್ನು ಆ ಮಳಿಗೆಯವರೇ ಉಡುಗೊರೆ ರೂಪದಲ್ಲಿ ಕೊಡುವ ಯೋಜನೆ ಇರುತ್ತದೆ.

ಉದಾಹರಣೆಗೆ ನೀವು ತಿಂಗಳಿಗೆ 5,000 ರೂ. ಕಂತನ್ನು 11 ತಿಂಗಳ ಕಾಲ ಕಟ್ಟಿದರೆ ನೀವು ಕಟ್ಟಿದ ಒಟ್ಟು ಮೊತ್ತ  55,000 ರೂ. ಆಗುವುದು; ಆಗ 12ನೇ ಕಂತಿನ 5,000 ರೂ. ಮೊತ್ತವನ್ನು ಆ ವ್ಯಾಪಾರಿಯೇ ನಿಮ್ಮ ಖಾತೆಗೆ ಜಮೆ ಮಾಡುತ್ತಾರೆ. ಎಂದರೆ ನೀವು 60,000 ರೂ. ಮೌಲ್ಯದ ಚಿನ್ನಾಭರಣ ಖರೀದಿಸುವುದಕ್ಕೆ ಅವಕಾಶ ಇರುತ್ತದೆ. ಕೆಲವು ವ್ಯಾಪಾರಸ್ಥರು ಗ್ರಾಹಕರ ಕೊನೇ ಕಂತಿನ ಶೇ.90ರಷ್ಟು ರಿಯಾಯಿತಿಯನ್ನು ಕೊಡುವುದಿದೆ.

ಕೆಲವೊಂದು ಚಿನ್ನಾಭರಣ ಉದ್ಯಮ ಸಂಸ್ಥೆಗಳ ಚಿನ್ನ ಉಳಿತಾಯ ಯೋಜನೆಗಳು ಇನ್ನೂ ಆಕರ್ಷಕವಿರುತ್ತವೆ. ಉದಾ: Tanishq ನ ಗೋಲ್ಡ್ ಹಾರ್ವೆಸ್ಟ್ ಸ್ಕೀಮ್.

ಇದರಡಿ ಗ್ರಾಹಕರು ಕನಿಷ್ಠ 2,000 ರೂ. ತಿಂಗಳ ಕಂತಿನ ಖಾತೆ ತೆರೆದರೆ ಇದರ ಮೆಚ್ಯುರಿಟಿ, ಖಾತೆ ತೆರೆದ ದಿನಾಂಕದಿಂದ 300ನೇ ದಿನ ಮುಗಿದಾಗ ಆರಂಭವಾಗುತ್ತದೆ. ಈ ಯೋಜನೆಯಡಿ ಗ್ರಾಹಕರು ಕೊನೇ ಕಂತಿನ ಶೇ.75ರ ಡಿಸ್‌ಕೌಂಟ್‌ ಗೆ ಅರ್ಹರಾಗುತ್ತಾರೆ. 300ನೇ ದಿನದ ಬಳಿಕ ಮತ್ತು 365ನೇ ದಿನ ಮುಗಿಯುವ ಮುನ್ನ ಗ್ರಾಹಕರು ಯೋಜನೆಯಿಂದ ಹೊರಬರಲು ಬಯಸಿದರೆ, ಯೋಜನೆಯಡಿ ಬಾಕಿ ಉಳಿಯುವ ದಿನಗಳನ್ನು ಲೆಕ್ಕಿಸಿ, ಅವರಿಗೆ ಒಂದು ತಿಂಗಳ ಕಂತಿನ ಶೇ.55ರಿಂದ ಶೇ.75ರ ವರೆಗಿನ ಡಿಸ್ಕೌಂಟ್ ಸಿಗುತ್ತದೆ.

ಭವಿಷ್ಯತ್ತಿನ ಖರೀದಿ ಯೋಜನೆಗಾಗಿ ಮುಂಗಡ ಎಂದೇ ವರ್ಣಿತವಾಗಿರುವ ಚಿನ್ನ ಖರೀದಿ ಯೋಜನೆಗಳ ರೂಪರೇಖೆಯನ್ನು ಸಂಕ್ಷಿಪ್ತವಾಗಿ ನಾವು ಈ ಕೆಳಗಿನಂತೆ ಗುರುತಿಸಬಹುದು :

1. ಗ್ರಾಹಕರು ಕಟ್ಟಬೇಕಾದ ಕಂತುಗಳು ಎಷ್ಟು ?
ಸಮಾನ ಮೊತ್ತದ., ನಿರ್ದಿಷ್ಟ ಸಂಖ್ಯೆಯ, ಕಂತುಗಳನ್ನು  ಕಟ್ಟಬೇಕು.

2.ಕಂತು ಕಟ್ಟಬೇಕಾದ ನಿಗದಿತ ದಿನಾಂಕ ಯಾವುದು ?
ಗ್ರಾಹಕರು ಮೊದಲ ಕಂತು ಕಟ್ಟಿದ ದಿನದ ಬಳಿಕದ ಪ್ರತೀ ತಿಂಗಳ ಅದೇ ದಿನದಂದು ಕಂತು ಕಟ್ಟತಕ್ಕದ್ದು. ಉದಾಹರಣೆಗೆ ಗ್ರಾಹಕರು ಮೊದಲ ಕಂತನ್ನು 5ನೇ ತಾರೀಕಿನಂದು ಕಟ್ಟಿದರೆ, ಅನಂತರದ ಉಳಿದ ಎಲ್ಲ ಕಂತುಗಳನ್ನು ಪ್ರತೀ ತಿಂಗಳ 5ನೇ ತಾರೀಕಿನಂದೇ ಕಟ್ಟತಕ್ಕದ್ದು.

3. ಕಂತು ಕಟ್ಟುವುದಕ್ಕೆ ರಿಯಾಯಿತಿ ದಿನಗಳು ಇವೆಯೇ ?
ಇಲ್ಲ. ಯಾವುದೇ ರಿಯಾಯಿತಿ ದಿನಗಳು ಇರುವುದಿಲ್ಲ. ಇದನ್ನು ಸದಸ್ಯರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗುತ್ತದೆ.

4. ಗ್ರಾಹಕರಿಂದ ಕೆವೈಸಿ (ಗ್ರಾಹಕರ ಪರಿಚಯ ಮಾಹಿತಿ) ದಾಖಲೆಗಳನ್ನು ಕೇಳುತ್ತಾರೆಯೇ?
ಹೌದು. ಯಾರ ಹೆಸರಿನಲ್ಲಿ ಸ್ಕೀಮನ್ನು ತೆರೆಯಲು ಬಯಸಲಾಗಿದೆಯೋ ಆ ವ್ಯಕ್ತಿಯ ಮೂಲ ಬ್ಯಾಂಕ್ ಪಾಸ್ ಬುಕ್ ತರುವಂತೆ ಗ್ರಾಹಕರನ್ನು ಕೇಳಬಹುದಾಗಿರುತ್ತದೆ.  ಬ್ಯಾಂಕಿನ ಹೆಸರು, ಶಾಖೆಯ ಹೆಸರು, ಖಾತೆಯ ನಂಬ್ರ (ಹದಿನೈದು ಅಂಕಿಗಳು),  IFSC ಕೋಡ್ ಇತ್ಯಾದಿ ಮಾಹಿತಿಗಳಿರುವ ಸಾಫ್ಟ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ.  ಜೆರಾಕ್ಸ್ ಪ್ರತಿಗಳು 12 ತಿಂಗಳ ಕಾಲಾವಧಿಯಲ್ಲಿ ಮಾಸಿ ಹೋಗುವುದರಿಂದ ಸಾಫ್ಟ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ. ಒಂದೊಮ್ಮೆ ಪತಿಯು ತನ್ನ ಪತ್ನಿಯ ಹೆಸರಿನಲ್ಲಿ ಸ್ಕೀಮ್ ತೆರೆಯಲು ಬಯಸಿದರೆ, ಪತ್ನಿಯ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಬಹುದಾಗಿರುತ್ತದೆ.

5. ಕೆವೈಸಿಯನ್ನು ಹೆಚ್ಚುವರಿ ದಾಖಲೆಯಾಗಿ ಕೇಳುತ್ತಾರೆಯೇ ?
ಕನಿಷ್ಠ ಒಂದು ವಿಳಾಸ ದಾಖಲೆ ಮತ್ತು ಪ್ಯಾನ್ ಕಾರ್ಡ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ. ಸ್ಕೀಮ್ ಕಂತುಗಳು 40,000 ರೂ. ಮೀರಿದಲ್ಲಿ ಪಾನ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬಹುದಾಗಿರುತ್ತದೆ.

Tags:

ಚಿನ್ನದ ಕಂತು ಖರೀದಿ ಉಳಿತಾಯ ಯೋಜನೆ

ಜನಸಾಮಾನ್ಯರಿಗೆ ಎಷ್ಟು ಉಪಯುಕ್ತ

Gold saving schemes

How beneficial to common people

Author/Source:

ಸತೀಶ್ ಮಲ್ಯ

Mon, 07 Jan 2019 00:30:00 +0000 satishmallya 350576 at https://www.udayavani.com https://www.udayavani.com/kannada/news/web-focus/350576/gold-saving-schemes-how-beneficial-to-common-people#comments ಮಕ್ಕಳ ಉಜ್ವಲ ಭವಿಷ್ಯಕ್ಕೆ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವೇ ? https://www.udayavani.com/kannada/news/web-focus/348747/how-about-gold-as-an-avenue-of-investment-to-secure-child-s-future

ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ಹಣ ಕೂಡಿಟ್ಟು ಅದನ್ನು ಲಾಭದಾಯಕವಾಗಿ ವೃದ್ದಿಸುವಂತೆ ಮಾಡುವ ನಿಟ್ಟಿನಲ್ಲಿ ಯಾವೆಲ್ಲ ಯೋಜನೆಗಳು, ಮಾರ್ಗೋಪಾಯಗಳು ಇವೆ ಎಂಬ ಕಳೆದ ಹಲವು ವಾರಗಳಿಂದ ನಾವು ನಡೆಸಿಕೊಂಡು ಬಂದಿರುವ ಈ ಚರ್ಚೆಯಲ್ಲಿ ನಾವು ಈ ಬಾರಿ ಚಿನ್ನವನ್ನು ಒಂದು ಹೂಡಿಕೆ ಮಾಧ್ಯಮವಾಗಿ ಹೇಗೆ ಎಂಬುದನ್ನು ಚರ್ಚಿಸಬಹುದಾಗಿದೆ.

ಅನಾದಿ ಕಾಲದಿಂದಲೂ ಚಿನ್ನವನ್ನು ಮನೆತನ, ಕುಟುಂಬದ ಆಪದ್ಧನ ಎಂದೇ ಪರಿಗಣಿಸಲಾಗಿದೆ. ವರ್ಷಂಪ್ರತಿ ಚಿನ್ನವನ್ನು ಸ್ವಲ್ಪ ಸ್ವಲ್ಪವೇ ಖರೀದಿಸಿಡುವ, ವಿಶೇಷವಾಗಿ ಅಕ್ಷಯ ತೃತೀಯ, ವರಮಹಾಲಕ್ಷ್ಮೀ ವ್ರತ ಇವೇ ಮೊದಲಾದ ಧಾರ್ಮಿಕ ಸಂದರ್ಭಗಳಲ್ಲಿ  ಕುಟುಂಬದ ಸುಖ, ಸಮೃದ್ದಿಗೆಂದು ಚಿನ್ನವನ್ನು ಖರೀದಿಸುವ ಪರಿಪಾಠ ಭಾರತೀಯರಲ್ಲಿ ಲಾಗಾಯಿತಿನಿಂದಲೂ ನಡೆದುಕೊಂಡು ಬಂದಿದೆ.

ಆದರೆ ಭಾರತೀಯರ ಚಿನ್ನದ ಮೇಲಿನ ವ್ಯಾಮೋಹ ಕೂಡಿಡುವ ಉದ್ದೇಶದ್ದಾಗಿದೆಯೇ ಹೊರತು ಅದೊಂದು ಲಾಭದಾಯಕ ಹೂಡಿಕೆ ಮಾಧ್ಯಮವಾಗಿ ಎಂದೂ ಪರಿಗಣಿತವಾದುದಿಲ್ಲ. ಹೂಡಿಕೆ ಎಂಬ ಪರಿಕಲ್ಪನೆಯಲ್ಲಿ  ಲಾಭ ನಗದೀಕರಣದ ಉದ್ದೇಶ ಅಂತರ್ಗತವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.

ಯಾವುದೇ ಹೂಡಿಕೆ ಗರಿಷ್ಠ ಲಾಭದ ಮಟ್ಟವನ್ನು ತಲುಪಿದಾಗ ಅದರ ಸ್ವಲ್ಪಾಂಶವನ್ನೋ ಅರ್ಧಾಂಶವನ್ನೋ ಮಾರಿ ಮೂಲ ಹೂಡಿಕೆ ಮೊತ್ತವನ್ನು ಮರಳಿ ಪಡೆಯುವ ತಂತ್ರಗಾರಿಕೆಯ ಲಾಭದ ನಗದೀಕರಣದ ದೃಷ್ಟಿಯಿಂದ ಬಹುಮುಖ್ಯವಾಗುತ್ತದೆ.  ಲಾಭ ನಗದೀಕರಣದ ಪ್ರಕ್ರಿಯೆಯು ಶೇರು ಹೂಡಿಕೆಯಲ್ಲಿ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಶೇರು ಮೌಲ್ಯ ಗಗನಚುಂಬಿಯಾಗುವಷ್ಟೇ ತ್ವರಿತಗತಿಯಲ್ಲಿ ಧರಾಶಾಯಿಯೂ ಆಗುತ್ತದೆ ಎಂಬುದೇ ಇದಕ್ಕೆ ಕಾರಣ.

ಚಿನ್ನದ ಸಂದರ್ಭದಲ್ಲಿ ಭಾರತೀಯರ ವ್ಯಾಮೋಹವು ಹೂಡಿಕೆ ಪರಿಕಲ್ಪನೆಯನ್ನು ಮೀರಿದ್ದಾಗಿರುತ್ತದೆ. ಏಕೆಂದರೆ ಎಂತಹ ಕಷ್ಟಕರ, ವಿಷಮ ಸಂದರ್ಭದಲ್ಲೂ ಅವರು ಅದನ್ನು ಮಾರುವ ಆಲೋಚನೆ ಮಾಡುವುದಿಲ್ಲ. ಅಂತಹ ತುರ್ತಿದ್ದರೆ ತಮ್ಮಲ್ಲಿನ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಾರೆಯೇ ಹೊರತು ಚಿನ್ನವನ್ನು ಮಾರುವ ಆಲೋಚನೆ ಮಾಡುವುದಿಲ್ಲ. ಹಾಗಾಗಿ ಲಾಭನಗದೀಕರಣದ ಅವಕಾಶವನ್ನು ಸುಲಭದಲ್ಲಿ ಕೈಚೆಲ್ಲಿ ಸಾಲದ ಶೂಲಕ್ಕೆ ಬೀಳುವುದೇ ಭಾರತೀಯರ ಚಿನ್ನದ ಗುಣಲಕ್ಷಣವಾಗಿದೆ. ಆ ಮಾತು ಹಾಗಿರಲಿ.

ಮಕ್ಕಳ ಭವಿಷ್ಯಕ್ಕೆಂದು ದೀರ್ಘಾವಧಿಗೆ ಚಿನ್ನವನ್ನು ಖರೀದಿಸುವ ಸಂದರ್ಭದಲ್ಲಿ ಅದು ಕೊನೆಯ ತನಕವೂ ಲಾಭದಾಯಕತೆಯನ್ನು ಖಾತರಿ ಪಡಿಸುತ್ತದೆಯೇ ಎಂಬ ಪ್ರಶ್ನೆ ಹೂಡಿಕೆ ದೃಷ್ಟಿಯಿಂದ ಮುಖ್ಯವಾಗುತ್ತದೆ. ವಿಶ್ಲೇಷಕರ ದೃಷ್ಟಿಯಲ್ಲಿ ಚಿನ್ನದ ಮೇಲಿನ ಹೂಡಿಕೆಯು ದೀರ್ಘಾವಧಿಯ ಲಾಭದಾಯಕತೆಯು ಆಕರ್ಷಕವಾಗಿರುವುದಿಲ್ಲ.

ದೀರ್ಘಾವಧಿ ಹೂಡಿಕೆ ದೃಷ್ಟಿಯಿಂದ ಚಿನ್ನದಲ್ಲಿ ಅನೇಕ ರೀತಿಯ ಹಿನ್ನಡೆಗಳಿವೆ. ಭೌತಿಕ ರೂಪದಲ್ಲಿ ಚಿನ್ನವನ್ನು ದೀರ್ಘಕಾಲ ಸುರಕ್ಷಿತವಾಗಿ, ಭದ್ರವಾಗಿ ಇರಿಸಿಕೊಳ್ಳುವುದು ಕಷ್ಟಕರ. ಒಡವೆಯ ರೂಪದಲ್ಲಿ ಚಿನ್ನವನ್ನು ಹೊಂದಿರುವುದು ಹೂಡಿಕೆ ದೃಷ್ಟಿಯಿಂದ ಲಾಭಕರವಲ್ಲ. ಒಡವೆಯನ್ನು  ನಗದೀಕರಿಸುವಾಗ ನಷ್ಟವಾಗಿ ಹೋಗುವ ತೇಮಾನು ಬಾಬ್ತು ನೈಜ ಲಾಭದ ಪ್ರಮಾಣವನ್ನು ಹೊಡೆದು ಹಾಕುತ್ತದೆ.

ಭೌತಿಕ ರೂಪದ ಚಿನ್ನವನ್ನು  ಬ್ಯಾಂಕ್ ಲಾಕರ್ ಗಳಲ್ಲಿ ಭದ್ರವಾಗಿ ಇರಿಸೋಣ ಎಂದರೆ ಅದಕ್ಕೆ ವರ್ಷಂಪ್ರತಿ ತಗಲುವ ಶುಲ್ಕ ಇತ್ಯಾದಿಗಳು ಕೂಡ ಕಡಿಮೆ ಇರುವುದಿಲ್ಲ. ಲಾಕರ್ಗಳೇ ಲೂಟಿಗೊಂಡ ಸಂದರ್ಭದಲ್ಲಿ ಲಾಕರ್ ಬಳಕೆದಾರನಿಗೆ ಯಾವುದೇ ವಿಮಾ ಪರಿಹಾರ ಇರುವುದಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಚಿನ್ನವನ್ನು ನಗದೀಕರಿಸಲು ವ್ಯಾಪಾರಸ್ಥರ ಬಳಿ ಹೋದಾಗ ಅವರು ತಮ್ಮಲ್ಲಿನ ಹೊಸ ವಿನ್ಯಾಸದ ಒಡವೆಗಳನ್ನು ಖರೀದಿ ಮಾಡುವಂತೆ ಒತ್ತಾಯ ಮಾಡುತ್ತಾರೆ. ನಗದೇ ಬೇಕೆಂದು ಹಠ ಹಿಡಿದರೆ ಅಂದಿನ ದಿನದ ಚಿನ್ನದ ಮೌಲ್ಯದಲ್ಲಿ ಕನಿಷ್ಠ ಶೇ.1ನ್ನು ಕಳೆದು ಉಳಿದ ಮೊತ್ತವನ್ನು ಕೊಡುತ್ತಾರೆ !

ಇಂತಹ ಸಂದರ್ಭದಲ್ಲಿ ಗೋಲ್ಡ್ ಬಾಂಡ್ ರೂಪದಲ್ಲಿ ಹಣ ಹೂಡಿಕೆ ಮಾಡುವುದೇ ಹೆಚ್ಚು ಲಾಭದಾಯಕ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ.

ಒಡವೆ ರೂಪದ ಚಿನ್ನ ಮತ್ತು ಸಾವರೀನ್ ಗೋಲ್ಡ್ ಬಾಂಡ್ ಹೂಡಿಕೆಯಲ್ಲಿ ನಮಗೆ ಎದುರಾಗುವ ಸವಾಲುಗಳನ್ನು ನಾವು ಈ ಕೆಳಗಿನಂತೆ ಗುರುತಿಸಬಹುದು :

1. ಮೇಕಿಂಗ್ ಚಾರ್ಜ್ : ಪ್ರತೀ ಗ್ರಾಂ ಚಿನ್ನಕ್ಕೆ ಇಂತಿಷ್ಟೇ ಎಂದು ನಿಗದಿಸಲ್ಪಟ್ಟಿರುವ ಮೇಕಿಂಗ್ ಚಾರ್ಜ್ ಇರುತ್ತದೆ.  ಅಥವಾ ಚಿನ್ನದ ಶೇಕಡಾವಾರು ತೂಕ ದೊಂದಿಗೆ ಜಿಎಸ್ಟಿ ಅನ್ವಯವಾಗುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಇದು ಅನ್ವಯವಾಗುವುದಿಲ್ಲ.

2. ತೆರಿಗೆ : ಮೂರು ವರ್ಷಗಳ ಬಳಿಕ ನಗದೀಕರಣಕ್ಕೆ ಮುಂದಾಗುವಾಗ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್  ಅನ್ವಯಾಗುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಇದು ಅನ್ವಯವಾಗುವುದಿಲ್ಲ. ಐದು ವರ್ಷಗಳ ಬಳಿಕ ಸಾವರೀನ್ ಬಾಂಡ್ ಮಾರಿದಾಗ ಎಲ್ಟಿಸಿಜಿ ಮತ್ತು ಇಂಡೆಕ್ಸೇಶನ್ ವಿನಾಯಿತಿ ಸಿಗುತ್ತದೆ.

2. ಶುದ್ಧತೆ : ಚಿನ್ನದ ಶುದ್ಧತೆಗೆ ಯಾವುದೇ ಭರವಸೆ ಇರುವುದಿಲ್ಲ; ಒಡವೆ ರೂಪದ ಚಿನ್ನವು ಇತರ ಲೋಹಾಂಶ ಹೊಂದಿರುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಚಿನ್ನದ ದರವು 0.999 ಶುದ್ಧತೆಯ ಚಿನ್ನದ ದರವನ್ನು ಹೊಂದಿರುತ್ತದೆ.

3. ಭದ್ರತೆ/ಸುರಕ್ಷತೆ : ಭೌತಿಕ ಚಿನ್ನವನ್ನು ನಾವೇ ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯಕರ; ಕಳ್ಳಕಾರರ ಭಯ; ಲೂಟಿ, ದರೋಡೆಯ ಭೀತಿ ಇರುವುದು ಸಹಜ.  ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಚಿನ್ನ ಡಿಮ್ಯಾಟ್ ರೂಪದಲ್ಲಿ ಇರುತ್ತದೆ - ಎಂದರೆ ಡಿಜಿಟಲ್ ರೂಪದಲ್ಲಿ ಇರುತ್ತದೆ. ಹಾಗಾಗಿ ಕಳ್ಳಕಾರರ, ಲೂಟಿಕೋರರ ಭಯ ಇರುವುದಿಲ್ಲ.

4. ನಗದೀಕರಣ : ಭೌತಿಕ ರೂಪದ ಚಿನ್ನವನ್ನು ಯಾವಾಗ ಬೇಕಾದರೂ ಮಾರಬಹುದಾಗಿದೆ.  ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿರುವ ಚಿನ್ನವು 8 ವರ್ಷಗಳ ಮಟ್ಟಿಗೆ ಲಾಕ್ ಆಗಿ ಇರುತ್ತದೆ. ಆದರೂ ಹೂಡಿಕೆ ಮಾಡಲ್ಪಟ್ಟ ಐದು ವರ್ಷಗಳ ಬಳಿಕ ಅದನ್ನು ಮಾರುವ ಪ್ರಕ್ರಿಯೆಗೆ ಒಳಪಡಿಸಬಹುದಾಗಿರುತ್ತದೆ.

5. ಬಡ್ಡಿ ಆದಾಯ: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ವರ್ಷಂಪ್ರತಿ ಶೇ.2.5ರ ವಾರ್ಷಿಕ ಬಡ್ಡಿ ಆದಾಯ ನಿರಂತರವಾಗಿ ಇರುತ್ತದೆ. ಭೌತಿಕ ಚಿನ್ನಕ್ಕೆ ಅದು ಇರುವುದಿಲ್ಲ.

6. ಭದ್ರತೆಗೆ ತಗಲುವ ಶುಲ್ಕ: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮಿನಲ್ಲಿ  ಮೆಚ್ಯುರಿಟಿ ತನಕವೂ ಚಿನ್ನವನ್ನು ಇರಿಸಿಕೊಂಡದರೆ ಯಾವುದೇ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುವುದಿಲ್ಲ; ಮತ್ತು ಭೌತಿಕ ಚಿನ್ನದ ಭದ್ರತೆಗೆ ತಗಲುವ ಶುಲ್ಕದ ವೆಚ್ಚವೂ ಇರುವುದಿಲ್ಲ.

ಈ ಎಲ್ಲ ಅಂಶಗಳನ್ನು ಸರಿಯಾಗಿ ಮನನಮಾಡಿಕೊಂಡಾಗ ಲಾಭದಾಯಕ ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ಭೌತಿಕ ರೂಪದಲ್ಲಿ ಹೊಂದುವುದಕ್ಕಿಂತ ಸಾವರೀನ್ ಗೋಲ್ಡ್ ಬಾಂಡ್ ರೂಪದಲ್ಲೇ ಹೊಂದಿರುವುದೇ ಸೂಕ್ತ ಎಂಬುದು ಖಚಿತವಾಗುತ್ತದೆ.

ಒಟ್ಟಿನಲ್ಲಿ ಚಿನ್ನವೂ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುವುದಕ್ಕೆ ನೆರವಾಗುವ ಉತ್ತಮ ಹೂಡಿಕೆ ಮಾಧ್ಯಮವೂ ಹೌದು; ಆದರೆ ನಾವು ಗಮನಿಸಬೇಕಾದ ಸಂಗತಿ ಎಂದರೆ ಚಿನ್ನವು ಆಕರ್ಷಕ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಗಳ  ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಮಾಧ್ಯಮವಾಗಿದೆ ಎಂಬುದು !

Tags:

ಮಕ್ಕಳ ಉಜ್ವಲ ಭವಿಷ್ಯ

ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವೇ ? gold

avenue of investment

secure child's future

Author/Source:

ಸತೀಶ್ ಮಲ್ಯ

Mon, 31 Dec 2018 00:30:00 +0000 satishmallya 348747 at https://www.udayavani.com https://www.udayavani.com/kannada/news/web-focus/348747/how-about-gold-as-an-avenue-of-investment-to-secure-child-s-future#comments ಸುಕನ್ಯಾ ಸಮೃದ್ಧಿಯಲ್ಲಿದೆ ಹೆಣ್ಣುಮಕ್ಕಳ ಉನ್ನತಿ,ಭದ್ರತೆ, ಸ್ವಾವಲಂಬನೆ https://www.udayavani.com/kannada/news/web-focus/347610/girl-child-s-financial-security-self-reliance-lies-in-sukanya-samriddhi-plan

ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು  ಹಣವನ್ನು ಲಾಭದಾಯಕವಾಗಿ ಕೂಡಿಡುವ ಮಾರ್ಗೋಪಾಯಗಳನ್ನು ಚರ್ಚಿಸುವ ಸರಣಿಯಲ್ಲಿ ನಾವು ಈ ಬಾರಿ ಸುಕನ್ಯಾ ಸಮೃದ್ದಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮತ್ತು ನಿರಖು ಠೇವಣಿಗಳ (ಎಫ್ ಡಿ)  ಬಗ್ಗೆ ಚಿಂತನೆ ನಡೆಸಬಹುದಾಗಿದೆ.

ನಮ್ಮ ಮುಂದಿರುವ ಅದೆಷ್ಟೋ ಹೂಡಿಕೆ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ, ತಿಳಿವಳಿಕೆ ಇಲ್ಲದಿರುವುದು ಅಥವಾ ಅದನ್ನು ತಿಳಿದುಕೊಳ್ಳುವಷ್ಟು ವ್ಯವಧಾನ ನಮ್ಮಲ್ಲಿ ಇಲ್ಲದಿರುವುದೇ ನಮ್ಮ ಹೂಡಿಕೆ ಪ್ರವೃತ್ತಿಗೆ ಇರುವ ಬಹುದೊಡ್ಡ ಅಡಚಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ನಮಗೆ ಉಪಲಬ್ಧವಿರುವ ವಿವಿಧ ಹೂಡಿಕೆ ಅವಕಾಶಗಳು, ಸ್ಕೀಮುಗಳು, ಯೋಜನೆಗಳ ಬಗ್ಗೆ ನಾವು ಮೊದಲಾಗಿ ಕೂಲಂಕಷವಾಗಿ ತಿಳಿದುಕೊಳ್ಳಬೇಕು. ಅನಂತರವೇ ಅವುಗಳು ದೀರ್ಘಾವಧಿಯಲ್ಲಿ ಲಾಭದಾಯಕವೇ, ಆಕರ್ಷಕವೇ ಎಂಬಿತ್ಯಾದಿ ಲೆಕ್ಕಾಚಾರಗಳನ್ನು ತುಲನಾತ್ಮಕವಾಗಿ ಮಾಡಬೇಕು.

ಅಂತಿರುವಾಗ ಈಗ ನಮ್ಮ ಮುಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಸಾಧಕ ಬಾಧಕಗಳು ಏನು ಎಂಬುದನ್ನು ಅರಿಯಲು ಮುಂದಾಗಬೇಕಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದದ್ದು ಪ್ರಕೃತ ಕೇಂದ್ರದಲ್ಲಿ  ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ. 2015-¬ -16ರ ಕೇಂದ್ರ ಬಜೆಟ್ನಲ್ಲಿ  ಬೇಟಿ ಬಚಾವೋ ಬೇಟಿ ಪಢಾವೋ ಎಂಬ ಆಕರ್ಷಕ ಶೀರ್ಷಿಕೆಯ ಈ ಯೋಜನೆಯನ್ನು ಸರಕಾರ ಜಾರಿಗೆ ತಂದಿತು.

ಹೆಸರೇ ಹೇಳುವಂತೆ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು ಹೆಣ್ಣು ಮಕ್ಕಳ ಆರ್ಥಿಕ ಅಭ್ಯುದಯಕ್ಕಾಗಿ ರೂಪಿಸಲಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಪ್ರಾಯದ ಹೆಣ್ಣು ಮಕ್ಕಳಿಗಾಗಿ 21 ವರ್ಷಗಳ ಸುದೀರ್ಘ ಅವಧಿಯ ಈ ಯೋಜನೆಯು ಪ್ರಕೃತ ಶೇ.8.5ರ ವಾರ್ಷಿಕ ಇಳುವರಿಯನ್ನು ಹೊಂದಿದೆ. ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಮದುವೆ ಮುಂತಾಗಿ ಯಾವುದೇ ಗುರಿಯನ್ನು ಸುಲಭದಲ್ಲಿ ಸಾಧಿಸುವುದಕ್ಕೆ ಕಲ್ಪಿಸಲಾಗಿರುವ ಉತ್ತಮ ಯೋಜನೆ ಇದಾಗಿದೆ.

ಸುಕನ್ಯಾ ಯೋಜನೆಯಡಿಯ ಹೂಡಿಕೆ (ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.), ಬಡ್ಡಿ ಮತ್ತು ಅದರ ಪಕ್ವತೆಯ ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ.

ಹೆತ್ತವರು ಹತ್ತು ವರ್ಷ ಕೆಳಹರೆಯದ ತಮ್ಮ ಇಬ್ಬರು ಪುತ್ರಿಯರ ಹೆಸರಲ್ಲಿ ಈ ಯೋಜನೆಯಡಿ ಹಣ ಹೂಡಬಹುದಾಗಿದೆ. ಹೀಗೆ ಹೂಡುವ ಹಣವು ಈ ಯೋಜನೆಯಲ್ಲಿ 21 ವರ್ಷಗಳ ಲಾಕ್ ಆಗಿರುತ್ತದೆ, ಅರ್ಥಾತ್ ಅದನ್ನು ಹಿಂಪಡೆಯುವ ಅವಕಾಶ ಇರುವುದಿಲ್ಲ. ಆದರೆ ಈ ಯೋಜನೆಯಡಿಯ ಹೂಡಿಕೆಯ ಇಳುವರಿಯು ಇಷ್ಟು ದೀರ್ಘದ, ಅಂದರೆ, 21 ವರ್ಷಗಳ ಕಾಲಾವಧಿಯಲ್ಲಿ, ನಿರಂತರವಾಗಿ ಏರುತ್ತಲೇ ಸಾಗುವುದೆಂದು ತಿಳಿಯಬಹುದಾದ, ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ತುಂಬಿಕೊಡುವುದಿಲ್ಲ ಎನ್ನುವುದು ಗಮನಾರ್ಹ.

ಸುಕನ್ಯಾ ಯೋಜನೆಗೆ ಸೇರ್ಪಡೆಗೊಳ್ಳುವ ಬಾಲಕಿಯು 18 ವರ್ಷ ಮುಗಿಸಿದಾಗ ಆಕೆಯ ಹೆಸರಿನ ಖಾತೆಯಿಂದ ಶೇ.50ರಷ್ಟು  ಮೊತ್ತವನ್ನು ಹಿಂಪಡೆಯುವುದಕ್ಕೆ ಅವಕಾಶ ಇರುತ್ತದೆ. ವರ್ಷವೊಂದರಲ್ಲಿ ಈ ಯೋಜನೆಯಡಿ ಒಬ್ಬ ಖಾತೆದಾರಳ ಹೆಸರಿನಲ್ಲಿ ಗರಿಷ್ಠ 1.50 ಲಕ್ಷ  ರೂ. ಮಾತ್ರವೇ ಹೂಡುವುದಕ್ಕೆ ಅವಕಾಶ ಇರುತ್ತದೆ.

ಇವಿಷ್ಟು ಮೂಲ ಸಂಗತಿಗಳೊಂದಿಗೆ ನಾವಿನ್ನು ಚರ್ಚಿಸಬೇಕಾದ ಸಂಗತಿ ಎಂದರೆ ಸುಕನ್ಯಾ ಸಮೃದ್ದಿ ಯೋಜನೆಯಡಿ ನಮ್ಮ ಹೂಡಿಕೆ ಪಡೆಯುವ ಇಳುವರಿ (ಶೇ.8.5ರ ಬಡ್ಡಿ) ನಿಜಕ್ಕೂ ಆಕರ್ಷಕವೇ, ಲಾಭದಾಯಕವೇ, ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕಾಪಿಡುವ ಶಕ್ತಿ ಹೊಂದಿರುವ ಯೋಜನೆಯೇ ಎಂಬುದಾಗಿದೆ. ಇದನ್ನು ತಿಳಿಯಬೇಕಿದ್ದರೆ ನಾವು ಈ ಯೋಜನೆಯನ್ನು ಇದೇ ಬಗೆಯ ಆದರೆ ಸ್ವಲ್ಪ ಕಡಿಮೆ ಅವಧಿಯ (15 ವರ್ಷ) ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಜತೆಗೆ ತುಲನೆ ಮಾಡಬೇಕಾಗುತ್ತದೆ. ಏಕೆಂದರೆ ಪಿಪಿಎಫ್ ಯೋಜನೆಯಲ್ಲಿ ಸುಕನ್ಯಾಗೆ ಹೋಲಿಸಿದರೆ ಕೆಲವೊಂದು ಉತ್ತಮ ಮತ್ತು ಆಕರ್ಷಕ ಗುಣಲಕ್ಷಣಗಳು ಇವೆ.

ಪರಿಣತರನ್ನು ಉಲ್ಲೇಖೀಸಿ ಹೇಳುವುದಾದರೆ ಸುಕನ್ಯಾ ಸಮೃದ್ಧಿ ಯೋಜನೆಯು ಹೂಡಿಕೆ ಭದ್ರತೆಯ ದೃಷ್ಟಿಯಿಂದ, ನಿಖರ ಇಳುವರಿಯ ದೃಷ್ಟಿಯಿಂದ ಉತ್ತಮವಾಗಿದೆ. 21 ವರ್ಷಗಳ ವರ್ಷಂಪ್ರತಿ 1.50 ಲಕ್ಷ ರೂ. ಹೂಡುತ್ತಾ ನಿಶ್ಚಿಂತೆಯಿಂದ ಇರಬಹುದಾದ ಸುಭದ್ರ ಯೋಜನೆ ಇದಾಗಿದೆ ಎಂಬುದು ಪರಿಣತರ ಅಭಿಪ್ರಾಯ.

ಆದರೆ ಪಿಪಿಎಫ್ ಮತ್ತು ನಿರಖು ಠೇವಣಿಯಂತಹ ಸುಕನ್ಯಾ ರೀತಿಯ ಡೆಟ್ ಫಂಡ್ಗಳನ್ನು ತುಲನೆ ಮಾಡಿದರೆ, ಪಿಪಿಎಫ್ ಯೋಜನೆ ತಕ್ಕಡಿಯಲ್ಲಿ ಹೆಚ್ಚು ತೂಗುತ್ತದೆ ಎಂಬುದು ಸ್ಪಷ್ಟವಿದೆ.

ಇದಕ್ಕೆ ಕಾರಣ ಸ್ಪಷ್ಟ ಮತ್ತು ಸರಳವಿದೆ : ಪಿಪಿಎಫ್ ನಲ್ಲೂ ವರ್ಷಕ್ಕೆ ಗರಿಷ್ಠ 1.50 ಲಕ್ಷ ರೂ. ಹೂಡುವುದಕ್ಕೆ ಅವಕಾಶವಿದೆ. ಇದರಡಿಯ ಹೂಡಿಕೆ ಮೊತ್ತ, ಬಡ್ಡಿ ಮತ್ತು ಪಕ್ವತೆಯ ಸಮಯದಲ್ಲಿ ಕೈಗೆ ಸಿಗುವ ದೊಡ್ಡ ಗಂಟಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ.

ಪಿಪಿಎಫ್ ಹೂಡಿಕೆ ಮೊತ್ತ ಸುಭದ್ರ, ಸುರಕ್ಷಿತ ಮತ್ತು ನಿಶ್ಚಿಂತೆಯದ್ದಾಗಿರುತ್ತದೆ. ದೀರ್ಘಾವಧಿಯ ಗುರಿಗಳನ್ನು ಸಾಧಿಸುವುದಕ್ಕೆ ಅನುಕೂಲಕರವೂ ಸುಲಭವೂ ಆಕರ್ಷಕವೂ ಆಗಿರುತ್ತದೆ.

ಸುಕನ್ಯಾ ಯೋಜನೆಯ ಲಾಕ್ ಇನ್ ಪೀರಿಯಡ್ 21 ವರ್ಷಗಳದ್ದಾದರೆ ಪಿಪಿಎಫ್ ಲಾಕ್ ಇನ್ ಪೀರಿಯಡ್ ಕೇವಲ 15 ವರ್ಷ. ಆದರೆ ಪ್ರಕೃತ ಪಿಪಿಎಫ್ ಬಡ್ಡಿ (ಶೇ.8) ಸುಕನ್ಯಾ ಯೋಜನೆಗಿಂತ (ಶೇ.8.5) ಸ್ವಲ್ಪ ಕಡಿಮೆಯೇ ಇದೆ. ಪಿಪಿಎಫ್ ಬಡ್ಡಿ ದರ ನಿಗದಿತವಾಗಿರುವುದಿಲ್ಲ; ಬದಲಾಗುತ್ತಲೇ ಇರುತ್ತದೆ. ಸುಕನ್ಯಾ ಯೋಜನೆಗಿಂತಲೂ ಪಿಪಿಎಫ್ ಯೋಜನೆಯಡಿ ಐದು ವರ್ಷಗಳ ಬಳಿಕ ಆಂಶಿಕವಾಗಿ ಹಣ ಹಿಂಪಡೆಯುವುದಕ್ಕೆ ಇನ್ನೂ ಉತ್ತಮ ಸೌಕರ್ಯವಿದೆ.

ಸುಕನ್ಯಾ ಯೋಜನೆಗೆ ಬಾಲಕಿಯೊಬ್ಬಳು 9 ವರ್ಷ ಪ್ರಾಯದಲ್ಲಿ ಸೇರಿದ ಪಕ್ಷದಲ್ಲಿ ಆಕೆಗೆ 18 ವರ್ಷವಾಗುವಾಗ ಶೇ.50ರ ಹಣ ಹಿಂಪಡೆಯುವಿಕೆ ಅವಕಾಶವು ಆ ಹೊತ್ತಿನ ಗುರಿಯನ್ನು ಸಾಧಿಸಲು ಅಪರ್ಯಾಪ್ತವಾಗಿರುತ್ತದೆ ಎನ್ನುವುದೊಂದು ಸ್ವಲ್ಪ ಮಟ್ಟಿನ ಹಿನ್ನಡೆಯ ಸಂಗತಿ.

ಅದೇನಿದ್ದರೂ ಸುಕನ್ಯಾ ಸಮೃದ್ಧಿ ಯೋಜನೆಯು ಅಬಲೆ ಎನಿಸಿಕೊಳ್ಳುವ ಹೆಣ್ಣು ಮಗುವಿಗೆ ಪ್ರಾಯಪ್ರಬುದ್ಧಳಾದಾಗ ಆರ್ಥಿಕವಾಗಿ ಸಬಲೆ ಎನಿಸಿಕೊಳ್ಳುವುದಕ್ಕೆ ಹೆತ್ತವವರು ಕಲ್ಪಿಸುವ ಒಂದು ಸುವರ್ಣಾವಕಾಶದ ಯೋಜನೆಯೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂದಿನ ದಿನಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ನೇರವಾಗಿ ಇಲ್ಲವೇ ಆನ್ಲೈನ್ ಮೂಲಕವೂ ತೆರೆಯುವುದಕ್ಕೆ ಅವಕಾಶವಿದೆ. ಹಾಗೆಯೇ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಸಿಪ್) ಮೂಲಕ ವರ್ಷಂಪ್ರತಿಯ ಹೂಡಿಕೆಯನ್ನು ಕ್ರಮಬದ್ಧವಾಗಿ ಮುಂದುವರಿಸಿಕೊಂಡು ಹೋಗುವುದಕ್ಕೂ ಅವಕಾಶವಿದೆ.

Tags:

ಸುಕನ್ಯಾ ಸಮೃದ್ಧಿಯಲ್ಲಿದೆ  ಹೆಣ್ಣು ಮಕ್ಕಳ ಉನ್ನತಿ

ಭದ್ರತೆ

ಸ್ವಾವಲಂಬನೆ

Girl child

financial security

self reliance

Sukanya Samriddhi Plan

Author/Source:

ಸತೀಶ್ ಮಲ್ಯ

Mon, 24 Dec 2018 00:30:00 +0000 satishmallya 347610 at https://www.udayavani.com https://www.udayavani.com/kannada/news/web-focus/347610/girl-child-s-financial-security-self-reliance-lies-in-sukanya-samriddhi-plan#comments ಮಕ್ಕಳ ಭವಿಷ್ಯಕ್ಕೆ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಲಾಭದಾಯಕವೇ ? https://www.udayavani.com/kannada/news/web-focus/346179/is-it-beneficial-to-buy-insurance-plan-for-the-future-of-chiildren

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವೆಲ್ಲ ಮಾಧ್ಯಮಗಳಲ್ಲಿ ಲಾಭದಾಯಕವಾಗಿ ಹಣ ಹೂಡುವುದಕ್ಕೆ ಅವಕಾಶವಿದೆ ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ನಾವು ಕಳೆದ ವಾರ ರಿಯಲ್ ಎಸ್ಟೇಟ್ ಹೂಡಿಕೆ ಆಯ್ಕೆಯ ವಿಸ್ತೃತ ಅಧ್ಯಯನ ನಡೆಸಿದೆವು.

ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿರುವುದು ಸಹಜವೇ ಆದರೂ ವಾಸ್ತವತೆ ಮಾತ್ರ ಬೇರೆಯೇ ಇರುತ್ತದೆ ಎನ್ನುವುದಕ್ಕೆ ಇನ್ಶೂರೆನ್ಸ್ ಪ್ಲಾನ್ ಗಳು ಒಳ್ಳೆಯ ಉದಾಹರಣೆಗಳಾಗಿರುತ್ತವೆ.

ಏಕೆಂದರೆ ದೀರ್ಘಾವಧಿ ಹೂಡಿಕೆಯಲ್ಲಿ ಹಣ ಹಲವು ಪಟ್ಟು ವೃದ್ದಿಸುವುದಕ್ಕೆ ಸಾಕಷ್ಟು  ಅವಕಾಶಗಳು, ಕಾಲಾವಧಿ ಇರುತ್ತವೆ ಎಂಬುದೊಂದು ಸಾಮಾನ್ಯ ನಂಬಿಕೆ. ಆದರೆ ವಾಸ್ತವದಲ್ಲಿ ಹಾಗೇನೂ ಆಗಬೇಕಾದ್ದದ್ದಿಲ್ಲ. ದೀರ್ಘಾವಧಿಯ ಲೆಕ್ಕಾಚಾರಗಳು ಎಷ್ಟೋ ವೇಳೆ ತಲೆಕೆಳಗಾಗುವುದಿದೆ.

ಹಾಗಾಗಿ ನಾವು ದೀರ್ಘಾವಧಿಯಲ್ಲಿ ಹಣ ಕಳೆದುಕೊಂಡೆವೋ, ಲಾಭ ಮಾಡಿದೆವೋ, ಹಣದುಬ್ಬರದಿಂದ ಕೊರೆದು ಹೋಗುವಷ್ಟು ಹಣದ ಮೌಲ್ಯವನ್ನು ನಾವು ಲಾಭದಾಯಕತೆಯಲ್ಲಿ  ಸರಿಗಟ್ಟಿದೆವೋ ಎಂಬಿತ್ಯಾದಿ ಸಂಗತಿಗಳು ನಮ್ಮ ಲೆಕ್ಕಾಚಾರಕ್ಕೆ ಎಷ್ಟೋ ವೇಳೆ ಸಿಗುವುದಿಲ್ಲ.

ಈ ಹಿನ್ನೆಲೆಯಲ್ಲಿ ನಾವು ವಿಮಾ ಮಾಧ್ಯಮವನ್ನು ಕೂಡ ಚರ್ಚಿಸಬೇಕಾಗುತ್ತದೆ. ಎಷ್ಟೋ ಮಂದಿ ಹೆತ್ತವರು ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ವಿಮಾ ಪಾಲಿಸಿಗಳನ್ನು ಖರೀದಿಸಿಡುತ್ತಾರೆ. ದೀರ್ಘಾವಧಿಯಲ್ಲಿ ಈ ಪಾಲಿಸಿಗಳು ಮಗು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ದೊಡ್ಡ ಹಣದ ಗಂಟನ್ನು ಕೊಡುತ್ತದೆ ಎಂಬ ಭಾವನೆ ಅವರದ್ದಾಗಿರುತ್ತದೆ.

ಹೀಗಾಗಿ ಹೆತ್ತವರು ಸಹಜವಾಗಿಯೇ ಚೈಲ್ಡ್ ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿಗಳನ್ನು ಖರೀದಿಸುವ ಆಯ್ಕೆಯನ್ನು ಪರಿಗಣಿಸುತ್ತಾರೆ. ವಿಮಾ ಪಾಲಿಸಿಗಳ ಬಗ್ಗೆ ಜನ ಸಾಮಾನ್ಯರಲ್ಲಿ ಹಿಂದಿನಿಂದಲೂ ಒಂದು ಗೌರವದ ಮತ್ತು ಪ್ರಶ್ನಾತೀತವಾದ ಅಭಿಪ್ರಾಯವಿದೆ. ಅದೆಂದರೆ ಈ ಪಾಲಿಸಿಗಳು ನಮ್ಮ ಪಾಲಿನ ಆಪದ್ಭಾಂಧವ ಎಂಬುದು !

ಹೂಡಿಕೆ ತಜ್ಞರು ಮತ್ತು ಪರಿಣತರ ಪ್ರಕಾರ ವಿಮಾ ಪಾಲಿಸಿಗಳು ಹೂಡಿಕೆಯ ದೃಷ್ಟಿಯಿಂದ ಏನೇನೂ ಲಾಭದಾಯಕವಲ್ಲ. ವಿಮೆಯ ಉದ್ದೇಶದಲ್ಲಿ ಲಾಭದಾಯಕ ಹೂಡಿಕೆಯ ಅಂಶ ಅಡಕವಾಗಿರುವುದೇ ಇಲ್ಲ ಎಂಬುದನ್ನು ಜನರು ಅರಿಯದಾಗಿರುತ್ತಾರೆ.

ಆರ್ಥಿಕ ಪರಿಣತರು ಹೇಳುವ ಪ್ರಕಾರ ವಿಮಾ ಹೂಡಿಕೆ ಅತ್ಯಂತ ನಿಕೃಷ್ಟ ಇಳುವರಿಯನ್ನು ತರುತ್ತವೆ. ಇವುಗಳಿಂದ ಸಿಗುವ ವಾರ್ಷಿಕ ಇಳುವರಿ ಅಥವಾ ರಿಟರ್ನ್ ಶೇ.4 ರಿಂದ 6 ಅಥವಾ ಅದಕ್ಕಿಂತ ಕಡಿಮೆ. ಎಂದರೆ ಇವು ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕೂಡ ಖಾತರಿಪಡಿಸುವುದಿಲ್ಲ.

ಮಕ್ಕಳ ಶ್ರೆಯೋಭಿವೃದ್ಧಿಗೆಂದೇ ರೂಪಿಸಲ್ಪಟ್ಟಿರುವುದಾಗಿ ಹೇಳಲ್ಪಡುವ ವಿಮಾ ಯೋಜನೆಗಳು ಮಕ್ಕಳಿಗಾಗಲೀ ಯೌವನಸ್ಥರಿಗಾಗಲೀ ಎಷ್ಟು ಮಾತ್ರಕ್ಕೂ ಲಾಭದಾಯಕವಾಗಲಾರವು. ಏಕೆಂದರೆ ಇವುಗಳನ್ನು ಕೊಂಡ ಬಳಿಕದಲ್ಲಿ  ತಿಂಗಳು ತಿಂಗಳೂ ಪಾವತಿಸುವ ಪ್ರೀಮಿಯಂಗಳು ಪಾವತಿದಾರರ ಮಟ್ಟಿಗೆ ತುಟ್ಟಿಯಾಗೇ ಪರಿಣಮಿಸುವವು.

ನಿಜಕ್ಕೂ ವಿಮೆ ಬೇಕಿರುವುದು ಮಕ್ಕಳಿಗಲ್ಲ; ದೊಡ್ಡವರಿಗೆ ಎಂಬುದನ್ನು ಕೂಡ ಎಷ್ಟೋ ಮಂದಿ ಹೆತ್ತವರು ಹೂಡಿಕೆ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಿದ್ದರೂ ವಿಮಾ ಪಾಲಿಸಿಗಳ ಆಶ್ವಾಸಿತ ಮೊತ್ತ ತುಂಬ ಕಡಿಮೆ ಇದ್ದು ಅವು ಕಾಲಕ್ರಮದಲ್ಲಿ ಅಥವಾ ಮೆಚ್ಯುರಿಟಿ ಸಮಯದಲ್ಲಿ ಆಗಿನ ಹಣದ ಮೌಲ್ಯದೆದುರು ನಗಣ್ಯವಾಗಿರುತ್ತವೆ.

ಮಕ್ಕಳ ಹೆಸರಲ್ಲಿ ಹೆತ್ತವರು ಎಂಡೋಮೆಂಟ್ ವಿಮಾ ಪಾಲಿಸಿಗಳನ್ನು ಖರೀದಿಸುವುದು ಕೂಡ ಕಂಡುಬರುತ್ತದೆ. ಇವು ದೀರ್ಘಾವಧಿಯ, ಕಡಿಮೆ ಪ್ರೀಮಿಯಂನ ಯೋಜನೆಗಳಾಗಿರುತ್ತವೇನೋ ನಿಜ; ಆದರೆ ಇವುಗಳ ಆಶ್ವಾಸಿತ ಮೊತ್ತ ತುಂಬಾ ಕಡಿಮೆ ಇರುತ್ತದೆ ಮತ್ತು ಇವುಗಳ ಇಳುವರಿ ಶೇ.ಆರನ್ನು ಕೂಡ ದಾಟದಿರುವುದು ಹಣದ ಲೆಕ್ಕಾಚಾರ ಅರಿಯದ ಜನಸಾಮಾನ್ಯರಿಗೆ ಗೊತ್ತೇ ಇರುವುದಿಲ್ಲ.

ಒಂದೊಮ್ಮೆ ಹೆತ್ತವರು ವಿಮಾ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಟರ್ಮ್ ಕವರ್ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಯ ಅವಕಾಶಗಳು ಪರಸ್ಪರ ಅಂತರ್ಗತವಾಗಿರುವ ಸ್ಕೀಮುಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಲೇಸು ಎಂಬುದು ಪರಿಣತರ ಅಭಿಪ್ರಾಯ.

ಈ ರೀತಿಯ ಅವಳಿ ಲಾಭದ ಮ್ಯೂಚುವಲ್ ಫಂಡ್ ಸ್ಕೀಮುಗಳು ಅತ್ಯಧಿಕ ಇಳುವರಿ (ರಿಟರ್ನ್) ಕೊಡುತ್ತವೆ; :ಹೂಡಿಕೆಯ ಮಟ್ಟಿಗೆ ಹೆಚ್ಚು ಪಾರದರ್ಶಕವಾಗಿರುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಶೇ.10ರ ವರೆಗೂ ಹೋಗಬಹುದಾದ ಹಣದುಬ್ಬರ ಪ್ರಮಾಣ, ಇವನ್ನು ಸಂಭಾಳಿಸುವಷ್ಟು ಮಟ್ಟಿನ ಲಾಭದಾಯಕತೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಇರುತ್ತದೆ ಎನ್ನುವುದು ಗಮನಾರ್ಹವಾಗುತ್ತದೆ.

ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜಂಟರು ತಮಗೆ ಲಾಭದಾಯಕ ಕಮಿಷನ್ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಜನರು ಯುಲಿಪ್ ಕೇಳಿದರೆ ಎಂಡೋಮೆಂಟ್ ಪಾಲಿಸಿಯೇ  ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ.

ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆ, ಎಚ್ಚರಿಕೆ ಇಲ್ಲದಿರುವುದರಿಂದ ಅವರು ಸುಲಭದಲ್ಲಿ ಎಂಡೋಮೆಂಟ್ ಸ್ಕೀಮುಗಳಲ್ಲಿ ಏಜಂಟರ ಕುಟಿಲತೆಯಿಂದಾಗಿ ಸಿಲುಕಿಕೊಳ್ಳುತ್ತಾರೆ. ಮನಿ ಬ್ಯಾಕ್ ಪಾಲಿಸಿಗಳು ಆಕರ್ಷಕವೆಂಬ ಭಾವನೆ, ನಂಬಿಕೆ ಜನರಲ್ಲಿರುವುದು ಸಹಜವೇ. ಆದರೆ ಮನಿ ಬ್ಯಾಕ್ ಪಾಲಿಸಿಗಳಡಿ ಜನರ ಕೈಗೆ ಕಾಲಕಾಲಕ್ಕೆ ಬರುವ ಹಣ ಹಾಗೆಯೇ ಕರಗಿ ಹೋಗಿ ಪಾಲಿಸಿ ಮೆಚೂÂರ್ ಆದಾಗ ದೊಡ್ಡ ಮೊತ್ತ ಕೈಗೆ ಬರುವುದರಿಂದ ವಂಚಿತರಾಗುತ್ತಾರೆ.

ಎಂಡೋಮೆಂಟ್ ಪ್ಲಾನ್ಗಿಂತ ಯುಲಿಪ್ ಎಷ್ಟೋ ಮೇಲು ಎಂಬುದನ್ನು ನಾವು ಈ ಕೆಳಗಿನ ಸಂಕ್ಷಿಪ್ತ ವಿಶ್ಲೇಷಣೆಯಲ್ಲಿ ಅರಿಯಬಹುದಾಗಿದೆ.

ಮೊದಲಾಗಿ ಯುಲಿಪ್ ಸ್ಕೀಮನ್ನು ನೋಡೋಣ :

1. ರಿಟರ್ನ್ : ಮ್ಯೂಚುವಲ್ ಫಂಡ್  ಜತೆ ತುಲನೆ ಮಾಡುವಷ್ಟು ಅತ್ಯಧಿಕ ರಿಟರ್ನ್ ಇರುತ್ತದೆ.

2. ತೆರಿಗೆ ಲಾಭ : ಸೆ.80ಸಿ ಅಡಿ 1.5 ಲಕ್ಷ ರೂ. ತನಕದ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ; ಮೆಚ್ಯುರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

3. ನಗದೀಕರಣ : ಐದು ವರ್ಷಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಐದು ವರ್ಷಗಳ ಅನಂತರ ಸರೆಂಡರ್ ಚಾರ್ಜ್ ಇರುವುದಿಲ್ಲ.

4. ಹಣ ಹಿಂಪಡೆಯುವಿಕೆ : ಐದು ವರ್ಷಗಳ ಬಳಿಕ ಶೇ.20 ಮೀರದಿರುವ ಮೊತ್ತದ ಹಣ ಹಿಂಪಡೆಯುವಿಕೆಗೆ ಅವಕಾಶ ಇರುತ್ತದೆ.

5. ಹೂಡಿಕೆ ಬದಲಾಯಿಸುವ ಅವಕಾಶ : ರಿಸ್ಕ್ ಪ್ರೊಫೈಲ್ಗೆ ಅನುಗುಣವಾಗಿ ಈಕ್ವಿಟಿ - ಡೆಟ್ ಹಣ ಹೂಡಿಕೆ ಪ್ರಮಾಣವನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ.

ಎಂಡೋಮೆಂಟ್ ಪ್ಲಾನ್ :

1. ರಿಟರ್ನ್ ಶೇ.4ರಿಂದ 6

2. ತೆರಿಗೆ ಲಾಭ : ಯೂಲಿಪ್ನ ಹಾಗೇ ಇರತ್ತದೆ.

3. ನಗದೀಕರಣ ಸೌಕರ್ಯ : ಕೆಲವು ವಿಮಾ ಕಂಪೆನಿಗಳು ಪಾಲಿಸಿ ಮೇಲೆ ಶೇ.8-9ರ ಬಡ್ಡಿಗೆ ಸಾಲ ನೀಡುತ್ತವೆ.

4. ಹಣ ಹಿಂಪಡೆಯುವಿಕೆ : 10 ವರ್ಷಗಳ ವಿಮಾ ಸ್ಕೀಮಿನಡಿ ಎರಡು ಅಥವಾ ಮೂರು ವರ್ಷ ಪ್ರೀಮಿಯಂ ಕಟ್ಟಿದ್ದಲ್ಲಿ  ಮಾತ್ರವೇ ನಿಮಗೆ ಸರೆಂದರ್ ವ್ಯಾಲ್ಯೂ ಸಿಗುತ್ತದೆ.

5. ಹೂಡಿಕೆ ಸ್ವರೂಪದಲ್ಲಿನ ಬದಲಾವಣೆ : ಯಾವುದೇ ಆಯ್ಕೆ ಇರುವುದಿಲ್ಲ.

ಮಕ್ಕಳ ಉಜ್ವಲ ಭವಿಷ್ಯದ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸುವ ಪ್ರಶ್ನೆ ಬಂದಾಗ ವಿಮಾ ಹೂಡಿಕೆ ಅಷ್ಟೇನೂ ಆಕರ್ಷಕವೂ ಲಾಭದಾಯಕವೂ ಅಲ್ಲ ಎಂಬುದನ್ನು ಅರಿಯದ ಜನಸಾಮಾನ್ಯರಿಂದಾಗಿ ವಿಮಾ ಏಜಂಟರು ಖೂಬ್ ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದು ಇಂದಿನ ವಾಸ್ತವ.

Tags:

ಮಕ್ಕಳ ಭವಿಷ್ಯ

ಇನ್ಶೂರೆನ್ಸ್ ಪ್ಲಾನ್

Insurance plan

future of chiildren

Author/Source:

ಸತೀಶ್ ಮಲ್ಯ

Mon, 17 Dec 2018 05:07:25 +0000 satishmallya 346179 at https://www.udayavani.com https://www.udayavani.com/kannada/news/web-focus/346179/is-it-beneficial-to-buy-insurance-plan-for-the-future-of-chiildren#comments ಮಕ್ಕಳ ಭವಿಷ್ಯಕ್ಕಾಗಿ ರಿಯಲ್ ಎಸ್ಟೇಟ್ ಹೂಡಿಕೆ ನಿಜಕ್ಕೂ ಉತ್ತಮವೇ? https://www.udayavani.com/kannada/news/web-focus/344497/children-s-future-real-estate-investment-boon-or-bane

ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಹಣ ಉಳಿಸಿ ದೀರ್ಘಾವಧಿಗೆ ಹೂಡಿಕೆ ಮಾಡ ಬಯಸುವ ಹೆಚ್ಚಿನೆಲ್ಲ ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ಹಣ ಹೂಡಿದರೆ ಹೆಚ್ಚು ಲಾಭಕರ ಎಂಬ ಪ್ರಶ್ನೆ ಕಾಡುವುದು ಸಹಜ.

ಎಷ್ಟೋ ವೇಳೆ ಹೆತ್ತವರು ತಪ್ಪು ಮಾಧ್ಯಮವನ್ನು ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದುದರಿಂದ ಹೂಡಿಕೆ ಮಾಧ್ಯಮವನ್ನು ಆಯ್ಕೆ ಮಾಡುವಾಗ ಹೆತ್ತವರು ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.

ಹೆತ್ತವರ ಮುಂದಿರುವ ಆಯ್ಕೆಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದಾಗಿರುತ್ತದೆ ಎಂಬುದನ್ನು ನಾವು ಗಮನಿಸಬಹುದು. ಮಕ್ಕಳ ಭವಿಷ್ಯಕ್ಕೆಂದು ಒಂದು ತುಂಡು ಭೂಮಿಯನ್ನು ಖರೀದಿಸಿಡುವ ಹೆತ್ತವರ ಸಂಖ್ಯೆ ಕಡಿಮೆ ಏನಿಲ್ಲ. ಅದೇ ರೀತಿ ನಗರವಾಸಿ ಹೆತ್ತವರು ತಾವು ಬಾಡಿಗೆ ಮನೆಯಲ್ಲಿರುತ್ತಾ ಮಕ್ಕಳ ಭವಿಷ್ಯಕ್ಕೆಂದು ಫ್ಲ್ಯಾಟ್ ಖರೀದಿಸಿ ಅದನ್ನು ಬಾಡಿಗೆಗೆ ಹಾಕಿ ಅದರಿಂದ ಬರುವ ಆದಾಯವನ್ನು ಸಾಲ ತೀರಿಸಲು, ಅಥವಾ ಸ್ವಂತ ವಾಸಕ್ಕೆ ಬಳಸುವ ಆಯ್ಕೆಯನ್ನು ಪರಿಗಣಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಎದುರಾಗುವ ಬಹುಮುಖ್ಯ ಪ್ರಶ್ನೆ ಏನೆಂದರೆ ರಿಯಲ್ ಎಸ್ಟೇಟ್, ಫ್ಲ್ಯಾಟ್ ಅಥವಾ ಖಾಲಿ ನಿವೇಶನದ ಮೇಲಿನ ಹೂಡಿಕೆ ಆಕರ್ಷಕವೇ, ಲಾಭದಾಯಕವೇ, ನಷ್ಟದಾಯಕವೇ ಎಂಬಿತ್ಯಾದಿ ವಿಷಯಗಳು.

ರಿಯಲ್ ಎಸ್ಟೇಟ್ ನಲ್ಲಿ ಕೆಲವೊಂದು ವಿಷಯಗಳು ಬಹುಮುಖ್ಯವಾಗಿರುವುದನ್ನು ನಾವು ಮೊದಲೇ ತಿಳಿದಿರುವುದು ಒಳ್ಳೆಯದು. ಅವೆಂದರೆ :

1. ಪ್ರಾಪರ್ಟಿ ಟ್ಯಾಕ್ಸ್ (ಆಸ್ತಿ ತೆರಿಗೆ)

2. ಆಸ್ತಿ ನಿರ್ವಹಣಾ ವೆಚ್ಚ

3. ಅತ್ಯಧಿಕ ಪ್ರಮಾಣದ ವ್ಯವಹಾರ ವೆಚ್ಚ

4. ಆಸ್ತಿಯನ್ನು ಮಾರುವಾಗ ಎದುರಾಗುವ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್

5. ರಿಯಲ್ ಎಸ್ಟೇಟ್ ಹೂಡಿಕೆ ನಗದಾಗಿ ಪರಿವರ್ತಿಸಲಾಗದ ಹೂಡಿಕೆ

6. ಫ್ಲ್ಯಾಟ್ ಖರೀದಿಸಿದ ಸಂದರ್ಭದಲ್ಲಿ ಅದರ ವಿಭಜನೆ ಅಸಾಧ್ಯವಿರುವುದು.

7. ಫ್ಲ್ಯಾಟ್ ನ ಒಂದು ಕೊಠಡಿಯನ್ನು ಅಥವಾ ಮನೆಯನ್ನು ತತ್‌ಕ್ಷಣ ಖರ್ಚಿಗಾಗಿ ಮಾರಲು ಅಸಾಧ್ಯವಿರುವುದು.

ಈ ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಿಯಲ್ ಎಸ್ಟೇಟ್ ಹೂಡಿಕೆ ಸುಲಭ, ನಗದೀಕರಣ ಬಲು ಕಷ್ಟ. ಅದನ್ನು ಅಡವಿಟ್ಟು ಸಾಲ ಪಡೆಯುವ ಪ್ರಕ್ರಿಯೆ ಕೂಡ ಸಂಕೀರ್ಣವಾದದ್ದು. ಏಕೆಂದರೆ ಲೀಗಲ್ ಒಪಿನೀಯನ್, ಟೈಟಲ್ ಡೀಡ್ ಠೇವಣಿ, ಲೋನ್ ಪ್ರಾಸೇಸಿಂಗ್ ಶುಲ್ಕ ಮುಂತಾದವೆಲ್ಲ ಕಿರಿಕಿರಿಯ ವಿಷಯವಾಗುವುದು ನಿಶ್ಚಿತ.

ಅಂತಿರುವಾಗ ಮಕ್ಕಳ ಭವಿಷ್ಯಕ್ಕೆಂದು ರಿಯಲ್ ಎಸ್ಟೇಟ್ ಹೂಡಿಕೆ ಸಾಧುವೇ, ಅಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಈ ಸಂದರ್ಭದಲ್ಲಿ ನಾವು ಇನ್ನೂ ಒಂದು ದೃಷ್ಟಿಕೋನದಿಂದ ರಿಯಲ್ ಎಸ್ಟೇಟ್ ಹೂಡಿಕೆ ಮತ್ತು ಬ್ಯಾಲನ್ಸ್ಡ್ ಫಂಡ್ (ಮ್ಯೂಚುವಲ್ ಫಂಡ್) ಹೂಡಿಕೆಯಲ್ಲಿನ ಲಾಭದಾಯಕತೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಬಹುದು :

ಮೊದಲನೇಯದಾಗಿ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಗಮನಿಸೋಣ :

ನೀವು 60 ಲಕ್ಷ ರೂ. ಗೆ ಮನೆಯೊಂದನ್ನು ಖರೀದಿಸುತ್ತೀರಿ ಎಂದಿಟ್ಟುಕೊಳ್ಳೋಣ. ಬ್ಯಾಂಕ್ ಸಾಲಕ್ಕೆ ಇದರ ಡೌನ್ ಪೇಮೆಂಟ್ 10 ಲಕ್ಷ; ಮನೆ ಸಾಲ 50 ಲಕ್ಷ; ಒಟ್ಟು 60 ಲಕ್ಷ.

ಈ ಸಾಲದ ಮೇಲಿನ ಬಡ್ಡಿ ಶೇ.8.5; ಸಾಲ ಮರುಪಾವತಿಯ ಅವಧಿ 15 ವರ್ಷ; ಸಾಲ ಮರುಪಾವತಿಯ ಇಎಂಐ : 49,237 (ತಿಂಗಳ ಸಾಲದ ಕಂತು).

15 ವರ್ಷದ ಸಾಲದ ಅವಧಿಯಲ್ಲಿ 50 ಲಕ್ಷ ಪಾವತಿಸುವಾಗ ನಾವು ಪಾವತಿಸುವ ಬಡ್ಡಿ ಮೊತ್ತ : 38.63 ಲಕ್ಷ ರೂ.

ಎಂದರೆ ನಾವು ಒಟ್ಟು ಪಾವತಿಸುವ ಮೊತ್ತ : 98.63 ಲಕ್ಷ ರೂ.

ಸಾಲ ಮರುಪಾವತಿಯ 15 ವರ್ಷಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ಶೇ.8ರ ಬೆಳವಣಿಗೆಯನ್ನು ಕಂಡಿತೆಂದಾದರೆ ನಮ್ಮ ಆಸ್ತಿ ಮೌಲ್ಯ 1.9 ಕೋಟಿ ರೂ. ಆಗುತ್ತದೆ.

ಎಂದರೆ  ನಿವ್ವಳ ಆಸ್ತಿ ಮೌಲ್ಯ 91.7 ಲಕ್ಷ ರೂ. ಆಗಿರುತ್ತದೆ.

ಈಗ ನಾವು ಇದೇ 60 ಲಕ್ಷ ರೂ. ಹೂಡಿಕೆಯನ್ನು (50 ಲಕ್ಷ ರೂ. ಸಾಲ ಮೊತ್ತ ಮತ್ತು 10 ಲಕ್ಷ ರೂ. ಡೌನ್ ಪೇಮೆಂಟ್ ಮೊತ್ತ) ಬ್ಯಾಲನ್ಸ್ಡ್ ಫಂಡ್ ನಲ್ಲಿ ಹೂಡಿದಲ್ಲಿ ಅದು ಯಾವ ಮೊತ್ತಕ್ಕೆ ಬೆಳೆಯಲು ಸಾಧ್ಯ ಎಂಬುದನ್ನು ನೋಡೋಣ :

1. ಬ್ಯಾಲನ್ಸ್ಡ್ ಫಂಡ್ ಹೂಡಿಕೆಯಲ್ಲಿ ಮೊತ್ತ ಮೊದಲಾಗಿ 10 ಲಕ್ಷ ರೂ.ಗಳನ್ನು ಏಕಗಂಟಿನಲ್ಲಿ ಶೇ.10ರ ಇಳುವರಿಯೊಂದಿಗೆ ಹೂಡೋಣ.

2. ಅನಂತರ ಪ್ರತೀ ತಿಂಗಳೂ (ಗೃಹಸಾಲ ಕಂತನ್ನು ಕಟ್ಟುವ ರೀತಿಯಲ್ಲಿ) 15 ವರ್ಷಗಳ ಅವಧಿಗೆ ಪ್ರತೀ ತಿಂಗಳಿಗೆ 49,237 ರೂ. ಹೂಡೋಣ.

ಈಗ ನಮ್ಮ ಹೂಡಿಕೆ ಸ್ವರೂಪ ಈ ಕೆಳಗಿನಂತಿರುವುದನ್ನು ನಾವು ಕಾಣಬಹುದು :

1. ಬ್ಯಾಲನ್ಸ್ಡ್ ಫಂಡ್ ನಲ್ಲಿ ಏಕ ಗಂಟಿನ ಹೂಡಿಕೆ 10 ಲಕ್ಷ ರೂ.

2. 15 ವರ್ಷಗಳ ಅವಧಿಯಲ್ಲಿ ಪ್ರತೀ ತಿಂಗಳೂ 49,237 ರೂ. ಪ್ರಕಾರ ಪಾವತಿಸುವ ಸಿಪ್ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್).

15 ವರ್ಷಗಳ ಬಳಿಕ ನಮ್ಮ ಹೂಡಿಕೆ :
1. ಏಕಗಂಟಿನ ಹೂಡಿಕೆಯ ಮೌಲ್ಯ : 41.77 ಲಕ್ಷ ರೂ.

2. ಸಿಪ್ ಕಂತು ಮೊತ್ತದ ಒಟ್ಟು ಮೌಲ್ಯ : 2.04 ಕೋಟಿ ರೂ.

ನಿವ್ವಳ ಗಳಿಕೆ : 1.4 ಕೋಟಿ ರೂ.

ಈ ಮೇಲಿನ ವಿಶ್ಲೇಷಣೆಯಲ್ಲಿ ನಾವು ರಿಯಲ್ ಎಸ್ಟೇಟ್ ಗಿಂತ ಬ್ಯಾಲನ್ಸ್ಡ್ ಫಂಡ್ ಹೂಡಿಕೆಯೇ ಹೆಚ್ಚು ಲಾಭದಾಯಕ, ಆಕರ್ಷಕ, ಸುಲಭ ನಗದೀಕರಣಕ್ಕೆ ಅವಕಾಶವಿರುವ ಹೂಡಿಕೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಆದರೂ ಜನಸಾಮಾನ್ಯರು ಇಂದಿಗೂ ತಮ್ಮ  ಕುಟುಂಬದ, ಮಕ್ಕಳ, ಮನೆ ಮಂದಿಯ ಭವಿಷ್ಯಕ್ಕೆಂದು ನಿವೇಶವನ್ನು ಅಥವಾ ಮನೆಯನ್ನು ಖರೀದಿಸುವ ಲೆಕ್ಕಾಚಾರವನ್ನೇ ಹೊಂದಿರುವುದನ್ನು ನಾವು ಕಾಣುತ್ತೇವೆ.

Tags:

ಮಕ್ಕಳ ಭವಿಷ್ಯ

ರಿಯಲ್ ಎಸ್ಟೇಟ್ ಹೂಡಿಕೆ

ನಿಜಕ್ಕೂ ಉತ್ತಮವೇ? Children's future

Real estate investment

boon or bane

Author/Source:

ಸತೀಶ್ ಮಲ್ಯ

Mon, 10 Dec 2018 05:51:10 +0000 satishmallya 344497 at https://www.udayavani.com https://www.udayavani.com/kannada/news/web-focus/344497/children-s-future-real-estate-investment-boon-or-bane#comments ಮಕ್ಕಳಿಗೂ ಹೆತ್ತವರಿಗೂ ವರದಾನವಾಗಿರುವ ಉನ್ನತ ಶಿಕ್ಷಣ ಸಾಲ https://www.udayavani.com/kannada/news/web-focus/342710/higher-education-loan-a-boon-to-both-parents-and-children

ಮಕ್ಕಳ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಕೂಡ ಸಾಲದು ಎನ್ನುವ ಸನ್ನಿವೇಶದಲ್ಲಿ ನಾವಿದ್ದೇವೆ. ಶಿಕ್ಷಣ ರಂಗದ ವ್ಯಾಪಾರೀಕರಣವಾಗಿರುವುದೇ ಇದಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಉನ್ನತ ಶಿಕ್ಷಣ, ವಿದೇಶ ಶಿಕ್ಷಣದ ಮಾತು ಹಾಗಿರಲಿ; ಮಕ್ಕಳನ್ನು ಇಂದು ಎಲ್‌ಕೆಜಿ , ಯುಕೆಜಿ ಗೆ ಸೇರಿಸುವುದಕ್ಕೇ ಲಕ್ಷ ರೂಪಾಯಿ ಬೇಕಿರುವುದು ಸುಳ್ಳಲ್ಲ. ತಮ್ಮ  ಮಗು ಎಲ್‌ಕೆಜಿ ಯಿಂದ ಹಿಡಿದು ಹನ್ನೆರಡನೇ ತರಗತಿಯ ವರೆಗೆ ಉತ್ತಮ ಗುಣಮಟ್ಟದ ಶಾಲೆಯಲ್ಲಿ ಕಲಿಯ ಬೇಕೆಂದು ಹೆತ್ತವರು ಬಯಸುವುದು  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಸರಿಯೇ ಆಗಿದೆ.

ಆದರೆ ಅದಕ್ಕೆ ಎಲ್‌ಕೆಜಿ ಯಿಂದಲೇ ಸುರಿಯಬೇಕಾಗಿರುವ ಲಕ್ಷ ಲಕ್ಷ ಹಣವನ್ನು ಅವರು ಎಲ್ಲಿಂದ ತರಬೇಕು ? ಎಲ್‌ಕೆಜಿ ಯಿಂದ 12ನೇ ತರಗತಿ ವರೆಗಿನ ಶಿಕ್ಷಣವೇ ಇಂದು ಮಕ್ಕಳ ಭವಿಷ್ಯಕ್ಕೆ  ಅತ್ಯಂತ ನಿರ್ಣಾಯಕವಾಗುತ್ತದೆ. ಅನಂತರದ ಉನ್ನತ ವೃತ್ತಿ ಪರ ಕೋರ್ಸುಗಳ ಶಿಕ್ಷಣಕ್ಕೆ ದೊಡ್ಡ ಮೊತ್ತದ ಸಾಲ ನೀಡುವ ಬ್ಯಾಂಕ್‌ ಯೋಜನೆಗಳಿವೆ. ಹಾಗಿದ್ದರೂ ಎಲ್‌ಕೆಜಿ ಯಿಂದ 12ನೇ ತರಗತಿ ವರೆಗಿನ ಶಿಕ್ಷಣಕ್ಕಾಗಿ ಕೂಡ ಹೆತ್ತವರು ಮಗು ಹುಟ್ಟಿದಾಗಿನಿಂದಲೇ ಸೂಕ್ತ ಯೋಜನೆಗಳಲ್ಲಿ ಹಣ ಹೂಡಲು ತೊಡಗುವುದು ಅತೀ ಅಗತ್ಯ ಮತ್ತು ಅಪೇಕ್ಷಣೀಯ ಕೂಡ.

ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಮಗು ಹುಟ್ಟಿದಾಗಿನಿಂದಲೇ ಹಣ ತೊಡಗಿಸುವ ಹೆತ್ತವರ ಸಂಖ್ಯೆ ಅತ್ಯಲ್ಪ ಎನ್ನುವ ಕಳವಳಕಾರಿ ಅಂಶ ಎಚ್‌ಎಸ್‌ಬಿಸಿ ಹಣಕಾಸು ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಈ ಸಮೀಕ್ಷೆಯ ಪ್ರಕಾರ ಗೊತ್ತಾಗಿರುವ ಇನ್ನೊಂದು ಅತ್ಯಂತ ಕಳವಳಕಾರಿ ಸಂಗತಿ ಎಂದರೆ ನಮ್ಮ ದೇಶದಲ್ಲಿ ಶೇ. 31ರಷ್ಟು ಪ್ರಮಾಣದ ಹೆತ್ತವರು ಮಕ್ಕಳ ಶಿಕ್ಷಣಕ್ಕೆ ಕಿರು ಅವಧಿಯ ಸಾಲವನ್ನು ಪಡೆಯುತ್ತಾರೆ; ಶೇ.26 ಮಂದಿ ಹೆತ್ತವರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕುಟುಂಬಿಕರಿಂದ, ಸ್ನೇಹಿತರು, ಬಂಧು-ಮಿತ್ರರಿಂದ ಕೈ ಸಾಲ ಪಡೆಯುತ್ತಾರೆ.

ಮಕ್ಕಳ ಒಟ್ಟು 16 - 17 ವರ್ಷದ ಶಿಕ್ಷಣಕ್ಕೆಂದು ಮಗು ಹುಟ್ಟಿದಾಗಿನಿಂದಲೇ ಉತ್ತಮ, ಆಕರ್ಷಕ ಯೋಜನೆಗಳಲ್ಲಿ ಹಣ ಹೂಡಲು ತೊಡಗುವ ಹೆತ್ತವರ ಸಂಖ್ಯೆ ನಗಣ್ಯವಾಗಿದೆ ಎನ್ನುತ್ತದೆ ಎಚ್‌ಎಸ್‌ಬಿಸಿ ಸಮೀಕ್ಷೆ. ಅಂದ ಹಾಗೆ ಈ ಸಮೀಕ್ಷೆ ಮಕ್ಕಳ ಭವಿಷ್ಯಕ್ಕೆ  ಹಿಡಿಯಲಾಗಿರುವ ಕನ್ನಡಿಯೇ ಆಗಿದೆ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ.

ಹೆತ್ತವರು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಅತ್ಯಂತ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಹಣ ಕೂಡಿಡುವುದೇ ಅವರ ಚಿಂತೆಗೆ ಮುಖ್ಯ ಕಾರಣವಾಗಿದೆ. ಮಕ್ಕಳಿಗಾಗಿ ನಿರ್ದಿಷ್ಟ ಯೋಜನೆಗಳಲ್ಲಿ, ನಿರ್ದಿಷ್ಟ ಅವಧಿಗೆ ತೊಡಗಿಸಲಾಗುವ ಹಣ ಉದ್ದೇಶಿತ ಗುರಿ ಸಾಧಿಸಲು ಯಾವ ಪ್ರಮಾಣದಲ್ಲಿ ಬೆಳೆಯಬೇಕು ಎಂಬ ಕಲ್ಪನೆ ಬಹುಮಂದಿಯಲ್ಲಿ ಇಲ್ಲದಿರುವುದು ಕೂಡ ಕಳವಳದ ಸಂಗತಿಯಾಗಿದೆ.

ಅದೇನಿದ್ದರೂ ನಾವಿಲ್ಲಿ  ಮಕ್ಕಳ ಉನ್ನತ ಶಿಕ್ಷಣದ ಗುರಿಯನ್ನು ಸಾಧಿಸಲು ಉಪಲಬ್ಧವಿರುವ ಶೈಕ್ಷಣಿಕ ಸಾಲದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಲೇಸು :

1. ಅರ್ಹತೆ : ಶೈಕ್ಷಣಿಕ ಸಾಲ ಪಡೆಯಲು ಮಗುವಿಗೆ ಇರಬೇಕಾದ ಮೂಲ ಅರ್ಹತೆ ಎಂದರೆ ಅದು ಭಾರತೀಯ ಪ್ರಜೆಯಾಗಿರಬೇಕು; 16ರಿಂದ 35ರ ವಯೋಮಿತಿಯ ಒಳಗೆ ಇರುವಂತಿರಬೇಕು.

2. ಬಡ್ಡಿ ದರ : ಬ್ಯಾಂಕುಗಳು ಸಾಮಾನ್ಯವಾಗಿ ಒಂದ ವರ್ಷದ ಎಂಸಿಎಲ್‌ಆರ್‌ (ಮಾರ್ಜಿನಲ್‌ ಕಾಸ್ಟ್‌ ಆಫ್ ಫ‌ಂಡ್ಸ್‌ ಬೇಸ್‌ಡ್‌ ಆನ್‌ ಲೆಂಡಿಂಗ್‌ ರೇಟ್‌) ಬಳಸುತ್ತವೆ ಮತ್ತು ಹೆಚ್ಚುವರಿಯಾಗಿ ಇದು ಶೇ.1.3 ರಿಂದ ಶೇ.3ರ ವರೆಗೆ ಇರುತ್ತದೆ. ಅಂದರೆ ಶೈಕ್ಷಣಿಕ ಸಾಲಗಳ ಮೇಲಿನ ಬಡ್ಡಿ ದರ ವಾರ್ಷಿಕ ಶೇ.8ರಿಂದ ಶೇ.15ರ ವರೆಗೆ ಇರುತ್ತದೆ.

3. ಮಾರೇಟೋರಿಯಂ : ಅಂದರೆ ಸಾಲ ಮರುಪಾವತಿ ಆರಂಭಿಸುವುದಕ್ಕೆ ಇರುವ ಬಿಡುವಿನ ಅವಧಿ : ಉನ್ನತ ಶಿಕ್ಷಣ ಕೋರ್ಸು (ವೈದ್ಯಕೀಯ, ತಾಂತ್ರಿಕ, ಇತ್ಯಾದಿ) ಮುಗಿದ ದಿನದಿಂದ ಒಂದು ವರ್ಷದ ತನಕದ ಏಕಪ್ರಕಾರದ ಬಿಡುವಿನ ಅವಧಿಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ.

4. ಗ್ಯಾರಂಟರ್‌/ಕೊಲ್ಯಾಟರಲ್‌ : ನಾಲ್ಕು ಲಕ್ಷ ರೂ. ವರೆಗಿನ ಶಿಕ್ಷಣ ಸಾಲಕ್ಕೆ ಯಾವುದೇ ಹೆಚ್ಚುವರಿ ಭದ್ರತೆ ಅಥವಾ ಥರ್ಡ್‌ ಪಾರ್ಟಿ ಗ್ಯಾರಂಟಿ ಅಗತ್ಯವಿರುವುದಿಲ್ಲ.

4ರಿಂದ 7.5 ಲಕ್ಷ ರೂ. ವರೆಗಿನ ಶಿಕ್ಷಣ ಸಾಲಕ್ಕೆ ಥರ್ಡ್‌ ಪಾರ್ಟಿ ಗ್ಯಾರಂಟಿ ಬೇಕಾಗುತ್ತದೆ. 7.5 ಲಕ್ಷ ಮೀರುವ ಮೊತ್ತದ ಶಿಕ್ಷಣ ಸಾಲಕ್ಕೆ ಕೊಲ್ಯಾಟರಲ್‌ (ಹೆಚ್ಚುವರಿ ಭದ್ರತೆ) ಬೇಕಾಗುತ್ತದೆ.

5. ತೆರಿಗೆ ಲಾಭಗಳು : 1961ರ ಆದಾಯ ತೆರಿಗೆ ಕಾಯಿದೆಯ ಸೆ.80ಇ ಅಡಿ ಶಿಕ್ಷಣ ಸಾಲದ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆ ರಿಯಾಯಿತಿ ಇದೆ. ಇದು ಸಾಲ ಮರುಪಾವತಿ ಆರಂಭಿಸಲಾದ ವರ್ಷದಿಂದ ಆರಂಭವಾಗುತ್ತದೆ ಮತ್ತು ಈ ಸೌಕರ್ಯ 8 ವರ್ಷದ ವರೆಗೆ ಅಥವಾ ಪೂರ್ತಿ ಬಡ್ಡಿ ಪಾವತಿಯ ತನಕ, ಯಾವುದು ಮೊದಲೋ ಅದು, ಸಾಲ ಮರುಪಾವತಿದಾರನಿಗೆ ಇರುತ್ತದೆ.

ಹೆತ್ತವರು ತಮ್ಮ ನಿವೃತ್ತಿಗೆಂದು ಕೂಡಿಡುವ ನಿಧಿಯನ್ನು ಅಂತೆಯೇ ಉಳಿಸಿಕೊಳ್ಳುವ ದೃಷ್ಟಿಯಿಂದ ಹೇಳುವುದಾದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಕ್ಷಣ ಸಾಲವನ್ನೇ ಆಯ್ಕೆ ಮಾಡುವುದು ಒಳ್ಳೆಯ ಉಪಾಯವಾದೀತು. ಮಾತ್ರವಲ್ಲ ಮನೆ ನಡೆಸುವ ತಿಂಗಳ ಖರ್ಚಿನ ಮೇಲೆ ಯಾವುದೇ ಒತ್ತಡ ಉಂಟಾಗುವುದಿಲ್ಲ. ಹಣದುಬ್ಬರದ ದೃಷ್ಟಿಯಿಂದ ಹೇಳುವುದಾದರೆ ತಿಂಗಳು ತಿಂಗಳೂ ಏರುತ್ತಲೇ ಹೋಗುವ ಮನೆ ನಿರ್ವಹಣೆ ಖರ್ಚು, ನಿರಂತರವಾಗಿ ಕೊರೆದು ಹೋಗುತ್ತಿರುವ ರೂಪಾಯಿಯ ಖರೀದಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಮೇಲಾಗಿ ಬ್ಯಾಂಕ್‌ ಸಾಲ ಪಡೆದು ಶಿಕ್ಷಣ ಕೈಗೊಳ್ಳುವ ಮಕ್ಕಳಿಗೆ ಅತ್ಯಧಿಕ ಹಣಕಾಸು ನಿರ್ವಹಣೆಯ ಶಿಸ್ತು ಮತ್ತು ಜವಾಬ್ದಾರಿ ತನ್ನಿಂತಾನೇ ಬಂದಿರುತ್ತದೆ. ಮಕ್ಕಳು ಬೆಳೆದು ಉದ್ಯೋಗಕ್ಕೆ ತೊಡಗುವ ವರೆಗೂ ಶಿಕ್ಷಣ ಸಹಿತ ಅವರ ಎಲ್ಲ ಖರ್ಚು ವೆಚ್ಚಗಳನ್ನು ಹೆತ್ತವರು ನಿಭಾಯಿಸುವ ಪದ್ಧತಿ ಭಾರತದ ವಿಶಿಷ್ಟತೆ ಎನ್ನಬಹುದು. ಮುಂದುವರಿದ ದೇಶಗಳಲ್ಲಾದರೆ ಹೆತ್ತವರಿಗೆ ಅವರ ಮಕ್ಕಳ ಜವಾಬ್ದಾರಿ ಅವರು ಪ್ರೌಢ ವಯಸ್ಕರಾಗುವ ತನಕ ಮಾತ್ರ ಇರುತ್ತದೆ. ಅನಂತರ ಅವರವರ ಜೀವನೋಪಾಯವನ್ನು ಅವರವರೇ ನೋಡಿಕೊಳ್ಳಬೇಕು !

ನಮ್ಮ ದೇಶದಲ್ಲೀಗ ಬ್ಯಾಂಕುಗಳು ಭಾರತೀಯ ಮತ್ತು ವಿದೇಶೀ ಉನ್ನತ ಶಿಕ್ಷಣಕ್ಕೆ ಸುಲಭದಲ್ಲಿ, ಪರ್ಯಾಪ್ತ ಸಾಲ ನೀಡುತ್ತವೆ. ಇವುಗಳ ಮೇಲಿನ ಬಡ್ಡಿ ದರ ಶೇ.8 ಇರುತ್ತದೆ. ಉನ್ನತ ಶಿಕ್ಷಣ ಮುಗಿದು ಉದ್ಯೋಗಾವಕಾಶ ಅರಸುವ ಒಂದು ವರ್ಷ ವರೆಗಿನ ಅವಧಿಗೆ ಸಾಲ ಮರುಪಾವತಿ ರಜೆ ಇರುತ್ತದೆ. ಈ ಎಲ್ಲ ಸೌಕರ್ಯಗಳು ಹೆತ್ತವರಿಗೆ ಮತ್ತು ಅವರ ಮಕ್ಕಳಿಗೆ ವರದಾನವೇ ಆಗಿರುತ್ತದೆ ಎನ್ನಲು ಅಡ್ಡಿ ಇಲ್ಲ.

Tags:

ಉನ್ನತ ಶಿಕ್ಷಣ ಸಾಲ

ಮಕ್ಕಳಿಗೂ ಹೆತ್ತವರಿಗೂ ವರದಾನ. Higher education loan

a boon

parents and children

Author/Source:

ಸತೀಶ್ ಮಲ್ಯ

Mon, 03 Dec 2018 05:00:40 +0000 satishmallya 342710 at https://www.udayavani.com https://www.udayavani.com/kannada/news/web-focus/342710/higher-education-loan-a-boon-to-both-parents-and-children#comments ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು? ದೀರ್ಘಾವಧಿ ಹೂಡಿಕೆ ಅಗತ್ಯ https://www.udayavani.com/kannada/news/web-focus/339237/long-term-investment-needed-for-child-s-higher-education-goal

ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸುವುದು ಬಹುತೇಕ ಎಲ್ಲ ಹೆತ್ತವರ ಜೀವನೋದ್ದೇಶವಾಗಿರುವುದರಲ್ಲಿ ಯಾವುದೇ ಅತಿಶಯ ಇಲ್ಲ. ಹಾಗಿದ್ದರೂ ಈ ನಿಟ್ಟಿನಲ್ಲಿ ವಸ್ತು ನಿಷ್ಠ  ಚಿಂತನೆ ಹಿಂದೆಂದಿಗಿಂತಲೂ ಇಂದು ಮುಖ್ಯವಾಗುತ್ತದೆ.

ಮಕ್ಕಳು ದೊಡ್ಡವರಾದಾಗ ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಮುಂತಾಗಿ ಏನೇನೆಲ್ಲ ಆಗಬೇಕೆಂದು ಹೆತ್ತವರು ಕನಸು ಕಾಣುತ್ತಾರೆ. ಆದರೆ ಮಕ್ಕಳಿಗಾಗಿನ ತಮ್ಮ ಈ ಆಶೋತ್ತರಗಳನ್ನು ಈಡೇರಿಸುವ ಆರ್ಥಿಕ ಮಾರ್ಗೋಪಾಯಗಳನ್ನು ಮಾತ್ರ ಬಹತೇಕ ಹೆಚ್ಚಿನ ತಂದೆ-ತಾಯಿಗಳು ಅರಿತಿರುವುದಿಲ್ಲ ಎನ್ನುವುದು ವಾಸ್ತವ.

ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಕ್ಕೆ ನಾವೆಂದೂ ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಳ್ಳದಿರುವುದು. ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ದೀರ್ಘಾವಧಿಯ ಯೋಜನೆ ಇರುವುದು ಮುಖ್ಯ. ನಾವು ಕನಸು ಕಾಣುವವರಾದರೆ ಸಾಲದು; ಅದನ್ನು ನನಸುಗೊಳಿಸುವ ಸಂಕಲ್ಪ ಕೂಡ ನಮ್ಮಲ್ಲಿರಬೇಕಾಗುತ್ತದೆ.

ಮಕ್ಕಳ ಭವ್ಯ ಭವಿಷ್ಯಕ್ಕಾಗಿ ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ರೂಪಿಸುವುದು ಅಗತ್ಯವಾಗಿರುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ಎಲ್ಕೆಜಿ, ಯುಕೆಜಿ ಯಿಂದಲೇ ಹೆತ್ತವರು ಸಾವಿರಗಟ್ಟಲೆ ರೂಪಾಯಿಗಳನ್ನು ಶೈಕ್ಷಣಿಕ ಶುಲ್ಕ, ವೆಚ್ಚವಾಗಿ ಭರಿಸಬೇಕಾಗಿರುತ್ತದೆ. ಅಂತಿರುವಾಗ ಅವರ ಸ್ನಾತಕೋತ್ತರ, ವೃತ್ತಿ ಶಿಕ್ಷಣ, ವಿದೇಶ ಶಿಕ್ಷಣ ಇತ್ಯಾದಿಗಳಿಗೆ ತಗಲುವ ಖರ್ಚು, ವೆಚ್ಚಗಳ ಹೊರೆ ಅತ್ಯಪಾರವಾಗಿರುತ್ತದೆ.

ಆದುದರಿಂದಲೇ ಮಕ್ಕಳ ಶೈಕ್ಷಣಿಕ, ಔದ್ಯೋಗಿಕ ಭವಿಷ್ಯಕ್ಕೆಂದು ಅವರ ಚಿಕ್ಕ ಪ್ರಾಯದಿಂದಲೇ ಹೆತ್ತವರು ದೀರ್ಘಾವಧಿ ಯೋಜನಗಳಲ್ಲಿ ಹಣ ಹೂಡುವುದು ಅಗತ್ಯವೂ ಅನಿವಾರ್ಯವೂ ಆಗಿರುತ್ತದೆ. ಅಂತೆಯೇ ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆ, ವ್ಯವಧಾನ, ಅರಿವು, ತಿಳಿವಳಿಕೆ ಹೊಂದಿರುವ ಅಗತ್ಯವಿದೆ. ಅಂತೆಯೇ ನಾವಿಲ್ಲಿ ಮಕ್ಕಳ ಭದ್ರ, ಭವ್ಯ ಭವಿಷ್ಯವನ್ನು ಸಾಕಾರಗೊಳಿಸಲೆಂದೇ ರೂಪಿಸಲಾಗಿರುವ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಬಹುದು.

ಮಕ್ಕಳ ಭವಿಷ್ಯಕ್ಕಾಗಿ  ದೀರ್ಘಾವಧಿಯ ಯೋಜನೆಗಳಲ್ಲಿ ಹಣ ಹೂಡುವ ಮುನ್ನ ಹೆತ್ತವರು ಅನೇಕ ರೀತಿಯ ಹೋಮ್ ವರ್ಕ್ ಮಾಡಬೇಕಾಗಿರುತ್ತದೆ. ಮಕ್ಕಳ ಆಸಕ್ತಿಯ ವಿಷಯ ಯಾವುದು, ಕಲಿಕೆಯ ಮಟ್ಟ ಹೇಗಿದೆ, ಬುದ್ಧಿಮತ್ತೆಯ ಮಟ್ಟ ಹೇಗಿದೆ, ಆತ ಅಥವಾ ಆಕೆ ಕಲೆ, ಸಾಹಿತ್ಯ, ವಿಜ್ಞಾನ, ಸಂಗೀತ, ಚಿತ್ರಕಲೆಯೇ ಮುಂತಾಗಿ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರುತ್ತಾನೆ/ಳೆ ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ಅಗತ್ಯವಾಗುತ್ತದೆ.

ಮಕ್ಕಳ ಜ್ಞಾನಾಸಕ್ತಿ ಬಗೆಗಿನ ಈ ಸಂಗತಿಗಳು ಏಕೆ ಮುಖ್ಯವಾಗುತ್ತವೆ ಎಂದರೆ ಅವರ ಜೀವನದ ಶೈಕ್ಷಣಿಕ ಗುರಿಗಳನ್ನು ಅಂದಾಜಿಸಲು ಸಾಧ್ಯವಾಗುವ ಕಾರಣಕ್ಕೆ. ಇವತ್ತಿನ ದಿನದಲ್ಲಿ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಅಥವಾ ಎಂಬಿಎ, ಅರೆ ವೈದ್ಯಕೀಯ ಮೊದಲಾದ ಶಿಕ್ಷಣಕ್ಕೆ ತಗಲುವ ಖರ್ಚು, ವೆಚ್ಚಗಳು 16 ವರ್ಷದ ಬಳಿಕ ಎಷ್ಟಾಗಬಹುದು ಎಂಬುದನ್ನು ಅಂದಾಜಿಸಬೇಕಾದರೆ ಅವುಗಳ ಮೇಲಾಗುವ ಹಣದುಬ್ಬರದ ಪರಿಣಾಮವನ್ನು ಕೂಡ ಸಣ್ಣ ಮಟ್ಟಿಗೆ ಅಧ್ಯಯನ ಮಾಡಬೇಕಾಗುತ್ತದೆ; ಲೆಕ್ಕಾಚಾರ ಹಾಕಬೇಕಾಗುತ್ತದೆ.

ಉದಾಹರಣೆಗೆ ಇವತ್ತು ಇಂಜಿನಿಯರಿಂಗ್ ಕೋರ್ಸ್ ಕೈಗೊಳ್ಳಲು 4 ಲಕ್ಷ ರೂ. ಬೇಕು ಎಂದಿಟ್ಟುಕೊಳ್ಳೋಣ. 16 ವರ್ಷದ ಬಳಿಕ ಇದೇ ಕೋರ್ಸಿಗೆ ಕನಿಷ್ಠ 10 ಲಕ್ಷವಾದರೂ ಬೇಕಾಗಬಹುದು. ಎಂದರೆ ನಾವು ಹೆತ್ತವರಾಗಿ ಮಕ್ಕಳ ಹೆಸರಲ್ಲಿ  ಮಾಡುವ ಹೂಡಿಕೆಯು ಶೇ.15ರ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ಎಂದರೆ ಮಗು ಹುಟ್ಟಿದಾಕ್ಷಣವೇ ಅದರ ಹೆಸರಲ್ಲಿ ತಿಂಗಳಿಗೆ 1,300 ರೂ.ಗಳನ್ನು ತೆಗೆದಿಡಬೇಕಾಗುತ್ತದೆ.

ಇದೇ ರೀತಿ ಇವತ್ತು ಎರಡು ವರ್ಷಗಳ ಫುಲ್ ಟೈಮ್ ಎಂಬಿಎ ಕೋರ್ಸಿಗೆ 11.50 ಲಕ್ಷ  ರೂ. ಬೇಕಿದೆ ಎಂದಾದರೆ 21 ವರ್ಷಗಳ ಬಳಿಕ ಈ ವೆಚ್ಚ ಕನಿಷ್ಠ 40 ಲಕ್ಷ ರೂ. ಆಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಈಗಿನ ಶೇ.6ರ ಹಣದುಬ್ಬರ ಅಂತೆಯೇ ಮುಂದುವರಿದರೆ ಈ ಅಂದಾಜು ಮೊತ್ತ ಅತಿಶಯದ ಮೊತ್ತವಾಗುವುದಿಲ್ಲ ಎನ್ನುವುದು ಖಚಿತವಾಗುತ್ತದೆ.

ಈಗಿನ ಈಕ್ವಿಟಿ ಶೇರು ಮಾರುಕಟ್ಟೆಯಲ್ಲಿನ ಹೂಡಿಕೆಯು ವರ್ಷಕ್ಕೆ ಶೇ.15ರ (ವಾರ್ಷಿಕ ಚಕ್ರಬಡ್ಡಿ ಪ್ರಮಾಣದಲ್ಲಿ) ಬೆಳೆಯುವುದೆಂಬ ಲೆಕ್ಕಾಚಾರದಲ್ಲಿ 40 ಲಕ್ಷ ರೂ.ಗಳ ಗುರಿಯನ್ನು ತಲುಪಲು ಈಗಿಂದಲೇ ತಿಂಗಳಿಗೆ 2,233 ರೂ.ಗಳನ್ನು ತೆಗೆದಿಡಬೇಕಾಗುತ್ತದೆ.

ಇಷ್ಟಕ್ಕೂ ಹಣದುಬ್ಬರದಿಂದ ನಮ್ಮ ಹೂಡಿಕೆ ಮೌಲ್ಯ ಕೊರೆದು ಹೋಗುವುದನ್ನು ನಾವು ಎಂದೂ ಮರೆಯುವ ಹಾಗಿಲ್ಲ. ರೂಪಾಯಿಯ ಮಾರುಕಟ್ಟೆ ಖರೀದಿ ಮೌಲ್ಯ ಯಾವ ಪ್ರಮಾಣದಲ್ಲಿ ಕೊರೆದು ಹೋಗುತ್ತಿದೆ ಎಂಬುದನ್ನು ಹಣದುಬ್ಬರ ಪ್ರಮಾಣ ಸ್ಪಷ್ಟವಾಗಿ ಸಾರುತ್ತದೆ.

ಈ ಹಿನ್ನೆಲೆಯಲ್ಲಿ ನಾವು ಮಗುವಿನ ಭವ್ಯ ಭವಿಷ್ಯಕ್ಕಾಗಿ ದೀರ್ಘಾವಧಿಯ ಹೂಡಿಕೆಗಾಗಿ ಕೆಲವೊಂದು ಯೋಜನೆಗಳನ್ನು ಇಲ್ಲಿ ಚರ್ಚಿಸಬಹುದಾಗಿದೆ. ಅವುಗಳು ಅನುಕ್ರಮವಾಗಿ ಹೀಗಿವೆ :

1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

2. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ)

3. ಈಕ್ವಿಟಿ ಮ್ಯೂಚುವಲ್ ಫಂಡ್ ಗಳು

ಈ ಮೂರು ಯೋಜನೆಗಳನು ವಿಸ್ತೃತವಾಗಿ ಚರ್ಚಿಸುವ ಮುನ್ನ ಒಂದು ಮಾತನ್ನು ನಾವು ನೆನಪಿನಲ್ಲಿಟ್ಟು ಕೊಳ್ಳಬೇಕು. ಮಕ್ಕಳಿಗಾಗಿ ಸಂಪತ್ತು ಕೂಡಿಡುವುದು ಹೆತ್ತವರ ಉದ್ದೇಶ ಅಲ್ಲ. ಕೂತು ಉಣ್ಣುವವನಿಗೆ ಹೊನ್ನ ಮಡಿಕೆಯೂ ಸಾಲದು ಎಂಬ ಮಾತಿದೆ.

ಮಕ್ಕಳಿಗೆ ಹೆತ್ತವರು ಕೊಡಬೇಕಿರುವುದು ಎಂದೂ ಕರಗದ ಜ್ಞಾನ ಸಂಪತ್ತನ್ನು. ಅದಕ್ಕಾಗಿ ಅವರಿಗೆ ಹೆತ್ತವರು ಗರಿಷ್ಠ ಸಾಧ್ಯವಿರುವ ಉತ್ತಮ ಶಿಕ್ಷಣವನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀಡಬೇಕಾಗಿದೆ. ಆ ದಿಶೆಯಲ್ಲಿನ ಗುರಿಯನ್ನು ಸಾಧಿಸಲು ಹಣ ಒಂದು ಮಾಧ್ಯಮವೇ ಹೊರತು ಅದುವೇ ಸರ್ವಸ್ವ ಅಲ್ಲ !

Tags:

ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು? ದೀರ್ಘಾವಧಿ ಹೂಡಿಕೆ ಅಗತ್ಯ

Long term investment

child's higher education goal

Author/Source:

ಸತೀಶ್ ಮಲ್ಯ

Mon, 19 Nov 2018 05:59:04 +0000 satishmallya 339237 at https://www.udayavani.com https://www.udayavani.com/kannada/news/web-focus/339237/long-term-investment-needed-for-child-s-higher-education-goal#comments ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ, ಆಯ್ಕೆ ನಿಮ್ಮದು ! https://www.udayavani.com/kannada/news/web-focus/337496/you-can-own-gold-option-is-yours

ನಗ ಎಂದೂ ನಗಣ್ಯ ಅಲ್ಲ! Top Ten ಹೂಡಿಕೆಯಲ್ಲಿ  ಚಿನ್ನ ಹೇಗೆ ? ಟಾಪ್ ಟೆನ್ ಹೂಡಿಕೆ ಆಯ್ಕೆಗಳಲ್ಲಿ ಕೊನೆಯ ಹತ್ತನೇ ಸ್ಥಾನದಲ್ಲಿ ಚಿನ್ನ ಇದೆ. ಇಂಗ್ಲಿಷ್ನಲ್ಲಿ  ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬ ಮಾತಿದೆ. ಟಾಪ್ ಟೆನ್ ಹೂಡಿಕೆ ಪಟ್ಟಿಯಲ್ಲಿ ಚಿನ್ನ ಕೊನೆಯ ಸ್ಥಾನದಲ್ಲಿದೆಯಾದರೂ ಅದು ಎಷ್ಟು ಮಾತ್ರಕ್ಕೂ  ನಗಣ್ಯ ಹೂಡಿಕೆಯ ಆಯ್ಕೆ ಅಲ್ಲ ! ನಗಣ್ಯ ಎನ್ನುವಲ್ಲಿ ನಗ ಇರುವುದನ್ನು ಕೂಡ ನಾವು ಮನಗಾಣಬೇಕು. ಆದುದರಿಂದ ನಗ ಎಂದೂ ನಗಣ್ಯ ಆಗಲಾರದು.

ಅಂದ ಹಾಗೆ ದೀಪಾವಳಿಯ ಈ ಹಬ್ಬದ ದಿನಗಳಲ್ಲಿ  22 ಕ್ಯಾರೆಟ್ ಆಭರಣ ಚಿನ್ನದ ಧಾರಣೆ  ಗ್ರಾಮಿಗೆ  2,980 ರೂ. ಇದೆ. ಈ ಧಾರಣೆಯಲ್ಲಿ  ಚಿನ್ನ ಬಹುತೇಕ ಗರಿಷ್ಠ ಮಟ್ಟ  ತಲುಪಿದೆ ಎನ್ನಬಹುದಾದರೂ ಸದ್ಯದಲ್ಲೇ ಚಿನ್ನ 3,000 ರೂ. ಮುಟ್ಟಲೂ ಬಹುದಾಗಿದೆ. ಹಾಗಿರುವಾಗ ಚಿನ್ನದಲ್ಲಿ ಹಣ ಹೂಡಬೇಕೇ ? ಚಿನ್ನವನ್ನು ಈ ಉತ್ತಮ ಬೆಲೆಗೆ ಮಾರಬೇಕೇ ? ತಟಸ್ಥವಾಗಿ ಇರುವುದೇ ಲೇಸೇ? ಎಂಬಿತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ.

ಹೂಡಿಕೆಯಾಗಿ ಚಿನ್ನ ನಿಜಕ್ಕೂ ಒಂದು ಹೂಡಿಕೆಯ ಮಾಧ್ಯಮ ಹೌದೇ ಅಲ್ಲವೇ ಎಂಬ ಬಗ್ಗೆ ಹೂಡಿಕೆ ಪರಿಣತರಲ್ಲಿ ಅಂದಿಗೂ, ಇಂದಿಗೂ, ಎಂದೆಂದಿಗೂ ಮುಗಿಯದ ಚರ್ಚೆ, ವಿಭಿನ್ನ ಅಭಿಪ್ರಾಯ ಇದ್ದೇ ಇದೆ. ಅನೇಕ ಪರಿಣತರ ಅಭಿಪ್ರಾಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಒಂದು ಡೆಡ್ ಇನ್ವೆಸ್ಟ್ಮೆಂಟ್ ! ಇದಕ್ಕೆ ಮುಖ್ಯ ಕಾರಣ ಚಿನ್ನವನ್ನು  ಆಭರಣ ರೂಪಕ್ಕೆ ತಂದಾಗ ಅದರಲ್ಲಿ ಹೂಡಿಕೆದಾರನ ಶತ್ರುವಾಗಿ ವೇಸ್ಟೇಜ್ ಕಾಣಿಸಿಕೊಳ್ಳುತ್ತಾನೆ. ಏಕೆಂದರೆ ಆಭರಣಕ್ಕೆ ಬರುವಲ್ಲಿ  ಉಂಟಾಗುವ ಈ ವೇಸ್ಟೇಜ್ ಹೂಡಿಕೆದಾರನ ಮಟ್ಟಿಗೆ ಸಂಪೂರ್ಣ ನಷ್ಟದ ಬಾಬ್ತು !

ಈ ವೇಸ್ಟೇಜ್ ಎಂಬುದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಎಲ್ಲರಗೂ ತಿಳಿದ ಹಾಗೆ ಅಪ್ಪಟ ಚಿನ್ನದಿಂದ ಆಭರಣ ತಯಾರಿಸಲಾಗದು. ಅದಕ್ಕೆ ಸ್ವಲ್ಪಾಂಶ ಬೆಳ್ಳಿ ಅಥವಾ ತಾಮ್ರ ಸೇರಿಸಿದರೆ ಮಾತ್ರವೇ ಅದು ಕುಶಲ ಕರ್ಮಿಯ ಪರಿಣತ ಹಸ್ತದಲ್ಲಿ ಅತ್ಯಾಕರ್ಷಕ ಒಡವೆಯಾಗಿ ಪರಿವರ್ತಿತವಾಗುತ್ತದೆ. ಈ ಪ್ರಕ್ರಿಯೆಯಲ್ಲಿ  ಆಭರಣ ಚಿನ್ನವು ಮಿಶ್ರ ಲೋಹದಿಂದ ಕೂಡಿದುದಾಗಿರುತ್ತದೆ.

ಹಾಗಾಗಿ ಚಿನ್ನಾಭರಣ ತಯಾರಿಯಲ್ಲಿ ನಷ್ಟವಾಗುವ ಚಿನ್ನದ ಪ್ರಮಾಣ ಮತ್ತು ಒಡವೆಗೆ ತಗಲುವ ಮಜೂರಿ ವೆಚ್ಚ ಇವು ಮತ್ತೆಂದೂ ಮರಳಿ ಬಾರದ ವೆಚ್ಚಗಳು. ಎಂದರೆ ಚಿನ್ನದ ಒಡವೆಯೊಂದನ್ನು ಮಾರಲು ಹೋದಾಗ ಅಥವಾ ಅದನ್ನು ಕರಗಿಸಿ ಬೇರೊಂದು ವಿನ್ಯಾಸದ ಆಭರಣದ ಮಾಡಲು ಮುಂದಾದಾಗ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜ್ಗಳು ನಷ್ಟದ ಬಾಬತ್ತಾಗುತ್ತವೆ. ಒಡವೆಯಲ್ಲಿನ ಇತರೇ ಲೋಹಗಳ ಪ್ರಮಾಣ ಕಳೆದು ಉಳಿಯುವ ಚಿನ್ನಕ್ಕೆ ಮಾತ್ರವೇ ಬೆಲೆ ಎಂದರ್ಥ.

ಉದಾಹರಣಗೆ ನಾವು 70,000 ರೂ. ಮೌಲ್ಯದ ಒಂದು ಸುಂದರ ಚಿನ್ನದ ನೆಕ್ಲೇಸ್ ಕೊಂಡಾಗ ಅದರ ಮಜೂರಿ ವೆಚ್ಚವೇ 20,000 ರೂ ಗಳಷ್ಟಿರುತ್ತದೆ. ಎಂದರೆ ಅದೇ ನೆಕ್ಲೇಸನ್ನು ನಾವು ಕಾಲಕ್ರಮದಲ್ಲಿ  ಮಾರಲು ಹೋದಾಗ, ಅಥವಾ ಕರಗಿಸಿ ಬೇರೋಂದು ವಿನ್ಯಾಸನ ಒಡವೆ ಮಾಡಲು ಮುಂದಾಗುವಾಗ ನಮಗೆ ದಕ್ಕುವುದು ನಿಜವಾದ ಚಿನ್ನದ ಬೆಲೆ ಮಾತ್ರ; ಎಂದರೆ 50,000 ರೂ; ಉಳಿದ 20,000 ರೂ. ನಷ್ಟ ದ ಹೊರೆಯನ್ನು ನಾವು ಅನುಭವಿಸಲೇಬೇಕು !

ಸಾಮಾನ್ಯವಾಗಿ ಚಿನ್ನಾಭರಣದಲ್ಲಿ ಮೇಕಿಂಗ್ ಚಾರ್ಜ್ ಶೇ.6ರಿಂದ 14ರ ವರೆಗೆ ಇರುತ್ತದೆ; ಕೆಲವೊಮ್ಮೆ ಇದು ಶೇ.25ರ ವರೆಗೂ ಹೋಗುವುದುಂಟು. ಇದಕ್ಕೆ ಮುಖ್ಯ ಕಾರಣ ಚಿನ್ನಾಭರಣದ ಅತ್ಯಾಕರ್ಷಕ ವಿನ್ಯಾಸ, ಕುಸುರಿ ಕೆಲಸ.

ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ನಾಣ್ಯ, ಬಾರ್ ರೂಪದಲ್ಲಿ ಖರೀದಿಸುವುದೇ ಸೂಕ್ತ ಎನಿಸುತ್ತದೆ. ಈ ಮಾಧ್ಯಮದಲ್ಲಿ ಯಾವುದೇ ಮೇಕಿಂಗ್ ಚಾರ್ಜ್, ವೇಸ್ಟೇಜ್ ನಷ್ಟ ಮುಂತಾಗಿ ಯಾವುದೂ ಇರುವುದಿಲ್ಲ. ಹಾಗಿದ್ದರೂ ಇವುಗಳನ್ನು ಒಳ್ಳೆಯ ಧಾರಣೆ ಬಂದಾಗ ಮಾರಲು ಚಿನ್ನಾಭರಣ ಮಳಿಗೆಗೆ ಹೋದರೆ ಅವರು ಅಂದಿನ ಮಾರುಕಟ್ಟೆ ಧಾರಣೆಯನ್ನು ಪರಿಗಣಿಸುವರಾದರೂ ನಮಗೆ ಕೊಡಬೇಕಾದ ನಗದು ಮೊತ್ತದಲ್ಲಿ ಶೇ.1ನ್ನು ಕಳೆದು ಕೊಡುತ್ತಾರೆ ಎನ್ನುವುದು ಗಮನಾರ್ಹ.

ಚಿನ್ನದ ಅಂತಾರಾಷ್ಟ್ರೀಯ ಬೆಲೆಗೂ ದೇಶೀಯ ಧಾರಣೆಗೂ ವ್ಯತ್ಯಾಸ ಇರುವುದನ್ನು ನಾವು ಯಾವತ್ತೂ ಕಾಣಬಹುದು. ಉದಾಹರಣೆಗೆ ಈ ದಿನಗಳಲ್ಲಿ ಅಂತಾರಾಷ್ಟ್ರೀಯ ಚಿನ್ನದ ಬೆಲೆ ಶೇ.6ರಷ್ಟು ಕಡಿಮೆಯಾಗಿದೆ. ಆದರೆ ಇದೇ ವೇಳೆ ಭಾರತದಲ್ಲಿ ಚಿನ್ನದ ಧಾರಣೆ ಶೇ.8ರಷ್ಟು ಏರಿದೆ. ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕ ಎನಿಸುವಷ್ಟು  ಹಳದಿ ಲೋಹದ ಮೇಲಿನ ಮೋಹ ಇರುವುದೇ ಇದಕ್ಕೆ ಒಂದು ಕಾರಣವಾದರೆ ಇನ್ನೂ ಹಲವಾರು ಕಾರಣಗಳೂ ಇವೆ.

ಅಂತಾರಾಷ್ಟ್ರೀಯ ಚಿನ್ನದ ಧಾರಣೆ ಇಳಿಯುವುದಕ್ಕೆ ಮುಖ್ಯ ಕಾರಣ ಅಮೆರಿಕದ ಡಾಲರ್ ಬಲಿಷ್ಠವಾಗುತ್ತಿರುವುದು. ಅಮೆರಿಕನ್ ಡಾಲರ್ ತನ್ನ ಬಲಿಷ್ಠತೆಯಿಂದಾಗಿ  ಇಡಿಯ ವಿಶ್ವಕ್ಕೇ ವಾಣಿಜ್ಯ ಕರೆನ್ಸಿಯಾಗಿ ಭದ್ರ ಸ್ಥಾನವನ್ನು ಪಡೆದಿದೆ. ಹಾಗಾಗಿ ಡಾಲರ್ ಮೌಲ್ಯ ಏರಿದರೆ  ಅಂತಾರಾಷ್ಟ್ರೀಯ ಚಿನ್ನದ ಮೌಲ್ಯ ಇಳಿಮುಖವಾಗುತ್ತದೆ.

ಡಾಲರ್ ಮತ್ತು ಚಿನ್ನಕ್ಕೆ ಸರಿಸಮನಾಗಿ ಎಲ್ಲ ದೇಶಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಇನ್ನೊಂದು ವಸ್ತು ಎಂದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ. ತನ್ನ ಆವಶ್ಯಕತೆಯ ಶೇ.80ರಷ್ಟು ಕಚ್ಚಾ ತೈಲವನ್ನು ಆಮದಿಸಿಕೊಳ್ಳುವ ಭಾರತದ ಆರ್ಥಿಕತೆಯ ಮೇಲೆ ತೈಲ ಬೆಲೆಯಲ್ಲಾಗುವ ಏರಿಕೆಯಿಂದಾಗುವ ಪರಿಣಾಮ ಅತ್ಯಪಾರ. ಏಕೆಂದರೆ ತೈಲ ಆಮದು ವೆಚ್ಚವನ್ನು ಭಾರತ ಡಾಲರ್ ಮೂಲಕ ಪಾವತಿಸಬೇಕು.

ಹಾಗೆಯೇ ಭಾರತೀಯರು ಮುಂದಿಡುವ ಚಿನ್ನದ ಬೇಡಿಕೆಯನ್ನು ಈಡೇರಿಸಲು ಕೂಡ ಭಾರತ ಸರಕಾರ ಚಿನ್ನವನ್ನು ಆಮದಿಸಿ ಅದರ ವೆಚ್ಚವನ್ನು ಡಾಲರ್ ಮೂಲಕ ಪಾವತಿಸಬೇಕು ! ಆದುದರಿಂದ ಚಿನ್ನ, ಡಾಲರ್ ಮತ್ತು ತೈಲ ಇವು ಎಲ್ಲ ದೇಶಗಳ ಆರ್ಥಿಕತೆಯನ್ನು ನಿಯಂತ್ರಿಸುವ, ಪ್ರಭಾವ ಬೀರುವ ಬಲಿಷ್ಠ  ಸಾಧನಗಳಾಗಿವೆ.

ಚಿನ್ನದ ಮೇಲಿನ ಹೂಡಿಕೆ ಮೇಲ್ನೋಟಕ್ಕೆ ಸುಭದ್ರ, ಆಕರ್ಷಕ ಅನ್ನಿಸಿದರೂ ಪರಿಣತರ ಲೆಕ್ಕಾಚಾರಗಳ ಪ್ರಕಾರ ಇದರಲ್ಲಿ ವಾಸ್ತವತೆ ಇಲ್ಲ. ಯಾವುದೇ ಹೂಡಿಕೆಯು ಶೇ.15ರ ಇಳುವರಿಯನ್ನು (ಲಾಭವನ್ನು)ತಂದುಕೊಟ್ಟರೆ ಅದು ಅತ್ಯಾಕರ್ಷಕ ಹೂಡಿಕೆ ಎನಿಸಿಕೊಳ್ಳುತ್ತದೆ. ಆದರೆ ಚಿನ್ನದ ವಿಷಯದಲ್ಲಿ ಹಾಗಿಲ್ಲ ಎನ್ನುತ್ತಾರೆ ಪರಿಣತರು. ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆಯ ಮೌಲ್ಯವನ್ನು ಸ್ವಲ್ಪ ಮಟ್ಟಿಗೆ ಮಾತ್ರವೇ ಚಿನ್ನ ತಾಳಿಕೊಳ್ಳುತ್ತದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ಅದೇನಿದ್ದರೂ ಚಿನ್ನವನ್ನು ಒಡವೆಯ ರೂಪದಲ್ಲಿ ಹೂಡಿಕೆ ಉದ್ದೇಶದಿಂದ ಖರೀದಿಸುವುದು ಅಷ್ಟೇನೂ ಸೂಕ್ತವಲ್ಲ. ವೇಸ್ಟೇಜ್, ಮೇಕಿಂಗ್ ಚಾರ್ಜ್ ಎಂದೆಲ್ಲ ತಗಲುವ ನಷ್ಟದ ಬಾಬ್ತು ದೇವರಿಗೇ ಪ್ರೀತಿ ಎನ್ನುವುದು ಸತ್ಯ.

ಹಾಗಿರುವಾಗ ಹೂಡಿಕೆಯ ಉದ್ದೇಶದಲ್ಲಿ  ಚಿನ್ನವನ್ನು ನಾಣ್ಯದ ರೂಪದಲ್ಲಿ, ಬಾರ್ ಅಥವಾ ಗಟ್ಟಿ ರೂಪದಲ್ಲಿ ಖರೀದಿಸುವುದರಲ್ಲೇ ಬುದ್ಧಿವಂತಿಕೆ ಇರುತ್ತದೆ. ಹಾಗೆಯೇ ಗೋಲ್ಡ್ ಇಟಿಎಫ್ ಮೂಲಕವೂ ಚಿನ್ನವನ್ನು ಆನ್ ಲೈನ್ನಲ್ಲಿ ಅಭೌತಿಕ ರೂಪದಲ್ಲಿ ಖರೀದಿಸಬಹುದಾಗಿದೆ. ಗೋಲ್ಡ್ ಇಟಿಎಫ್ ಖರೀದಿ ಮತ್ತು ಮಾರಾಟಕ್ಕೆ  ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ವೇದಿಕೆ ಕಲ್ಪಿಸುತ್ತವೆ. ಇನ್ನೂ ಒಂದು ಆಯ್ಕೆ ಎಂದರೆ ಗೋಲ್ಡ್ ಬಾಂಡ್ ಗಳನ್ನು  ಖರೀದಿಸುವ ಮೂಲಕ ಪೇಪರ್-ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ. ಆಯ್ಕೆ ನಿಮ್ಮದು !

Tags:

ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ. ಆಯ್ಕೆ ನಿಮ್ಮದು !You can own gold; option is yours!

Author/Source:

ಸತೀಶ್ ಮಲ್ಯ

Mon, 12 Nov 2018 06:54:28 +0000 satishmallya 337496 at https://www.udayavani.com https://www.udayavani.com/kannada/news/web-focus/337496/you-can-own-gold-option-is-yours#comments ಇದು ಹಿರಿಯ ನಾಗರಿಕರಿಗೆ ನೆಮ್ಮದಿ, ಭದ್ರತೆ ನೀಡುವ ಆಕರ್ಷಕ ಸ್ಕೀಮ್ https://www.udayavani.com/kannada/news/web-focus/336016/this-scheme-is-tailor-made-for-senior-citizens

ಟಾಪ್ ಟೆನ್ ಹೂಡಿಕೆ ಆಯ್ಕೆಗಳನ್ನು ಅವಲೋಕಿಸುವಲ್ಲಿ  ಏಳನೇ ಕ್ರಮಾಂಕದಲ್ಲಿ ನಾವು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು (ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ - SCSS ಯೋಜನೆ) ಗಮನಿಸಬಹುದು.

ಎಲ್ಲಕ್ಕಿಂತ ಮೊದಲು ನಾವು ಉಳಿತಾಯ ಮತ್ತು ಹೂಡಿಕೆ ಎಂಬೆರಡು ಪದಗಳ ಅರ್ಥ ವ್ಯತ್ಯಾಸವನ್ನು  ಬಹಳ ಸೂಕ್ಷ್ಮವಾಗಿ ಕಾಣಬೇಕಾಗುತ್ತದೆ. ಉಳಿತಾಯ ಎಂದರೆ ಖರ್ಚಾಗಬಹುದಾದ ಹಣವನ್ನು ಖರ್ಚು ಮಾಡದೆ ಕಾಲಕಾಲಕ್ಕೆ  ಜೋಪಾನವಾಗಿ ಶೇಖರಿಸಿಡುವುದು. ಇದರ ಅರ್ಥ ಉಳಿತಾಯದ ಹಣ "ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ' ಎಂಬರ್ಥದಲ್ಲಿ ಹೆಚ್ಚಾಗುತ್ತಾ ಹೋಗುವುದು.

ಹೀಗೆ  ಹೆಚ್ಚಾಗುತ್ತಾ ಹೋಗುವ ಹಣದಲ್ಲಿ ತನ್ನಿಂತಾನೇ ಯಾವುದೇ ರಿಸ್ಕ್ ಇರುವುದಿಲ್ಲ. ಏಕೆಂದರೆ ಅದು ನಮ್ಮ  ವಶದಲ್ಲೇ ಭದ್ರವಾಗಿರುತ್ತದೆ; ಬೇಕೆಂದಾಗ, ಅಗತ್ಯಕ್ಕೆ ಅನುಗುಣವಾಗಿ, ಥಟ್ಟನೆ ನಮ್ಮ ಕೈಗೆ ಸಿಗುವಂತಿರುತ್ತದೆ. ಆದುದರಿಂದ ಉಳಿತಾಯದ ಹಣ ಕೇವಲ ಶೇಖರಣೆಯ ಉದ್ದೇಶ ಹೊಂದಿರುವುದರಿಂದ ಅದು ತನ್ನಿಂತಾನೇ ಯಾವುದೇ ಇಳುವರಿ, ಆದಾಯ, ಲಾಭ ವನ್ನು ತಂದುಕೊಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಹಣ. ಈ ಹಣಕ್ಕೆ ಸಿಗುವ ವಾರ್ಷಿಕ ಬಡ್ಡಿ ಕೇವಲ ಶೇ. 4 !

ಉಳಿತಾಯದ ಹಣವನ್ನು ಹೆಚ್ಚಿನ ಬಡ್ಡಿ, ಲಾಭದ ಉದ್ದೇಶಕ್ಕೆ ಬಳಸಿದಾಗ ಅದು ಹೂಡಿಕೆ ಎನಿಸಿಕೊಳ್ಳುತ್ತದೆ. ಹೂಡಿಕೆ ಎಂದಾಕ್ಷಣ ಅದರಲ್ಲಿ ರಿಸ್ಕ್ ಅಂತರ್ಗತವಾಗಿರುತ್ತದೆ. ಹೆಚ್ಚು ಲಾಭ, ಹೆಚ್ಚು ಬಡ್ಡಿ ಎಂದಾಕ್ಷಣ ಹೆಚ್ಚು ರಿಸ್ಕ್, ಹೆಚ್ಚು ಅಭದ್ರತೆ, ಹೆಚ್ಚು ಅನಿಶ್ಚಿತತೆ ಇರುವುದು ಸಹಜವೇ.

ರಾಷ್ಟ್ರೀಕೃತ ಬ್ಯಾಂಕ್ ಠೇವಣಿ ಹೆಚ್ಚು ಸುಭದ್ರ; ಆದರೆ ಅದಕ್ಕೆ ಸಿಗುವ ಬಡ್ಡಿ  ಶೇ.7-8 ಮಾತ್ರ; ಅದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಅಂದರೆ ಎನ್ ಬಿ ಎಫ್ ಸಿ ಗಳಲ್ಲಿ) ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ ರಿಸ್ಕ್ ಕೂಡ ಇರುತ್ತದೆ. ಪೋಂಜಿ ಸ್ಕೀಮಿನಲ್ಲಿ ಹಣ ಹೂಡಿದರೆ ಅತ್ಯಧಿಕ ಲಾಭದ ಆಮಿಷ ಇರುತ್ತದೆ. ಆದರೆ ರಿಸ್ಕ್ ಅತ್ಯಂತ ಭಯಂಕರವಾಗಿರುತ್ತದೆ !

60 ವರ್ಷ ವಯಸ್ಸು ದಾಟಿರುವ ಹಿರಿಯ ನಾಗರಿಕರಿಗೆಂದೇ ಸರಕಾರ ರೂಪಿಸಿರುವ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಅಥವಾ ಎಸ್ ಸಿ ಎಸ್ ಎಸ್ ಯೋಜನೆ ಹೂಡಿಕೆ ಮತ್ತು ಉಳಿತಾಯದ ದೃಷ್ಟಿಯಿಂದ ಅತ್ಯಂತ ಸುಭದ್ರ, ಆಕರ್ಷಕ ಮತ್ತು ಅತ್ಯಧಿಕ ಇಳುವರಿ ತಂದು ಕೊಡುವ ಯೋಜನೆಯಾಗಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ - ಎಸ್ ಸಿ ಎಸ್ ಎಸ್ - ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಅಂಚೆ ಇಲಾಖೆ ! ನಿಜ ಅಂಚೆ ಇಲಾಖೆಯಲ್ಲಿ ಈ ಯೋಜನೆಯಡಿ ಹಣ ಹೂಡುವವರೇ ಅತ್ಯಧಿಕ. ಏಕೆಂದರೆ ಅಂಚೆ ಇಲಾಖೆ ದೇಶದ ಉದ್ದಗಲದಲ್ಲಿ ಸಾಮಾನ್ಯರ ನೇರ ಸೇವೆಗೆ ಉಪಲಬ್ಧವಿರುವ ಸರಕಾರಿ ಸಂಸ್ಥೆಯಾಗಿದೆ.

ಹಾಗಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೂಡ ಹಿರಿಯ ನಾಗರಿಕರ ಉಳಿತಾಯ ಸ್ಕೀಮ್ (SCSS ) ಇದೆ. ಆದರೆ ಅದನ್ನು ವಿಶೇಷವಾಗಿ ಪ್ರಚುರಪಡಿಸಲಾಗಿಲ್ಲ. ಹಾಗಾಗಿ ಎಲ್ಲರೂ ಅಂಚೆ ಇಲಾಖೆಯ ಕಡೆಗೇ ಮುಖಮಾಡುತ್ತಾರೆ.  ಅಂತಿದ್ದರೂ ಈ ಖಾತೆಯನ್ನು ಅಂಚೆ ಕಚೇರಿಯಲ್ಲೂ ಬ್ಯಾಂಕಿನಲ್ಲೂ  ತೆರೆಯುವುದಕ್ಕೆ  ಹಿರಿಯ ನಾಗರಿಕರಿಗೆ ಅವಕಾಶ ಇರುತ್ತದೆ ಎನ್ನುವುದು ಮುಖ್ಯ.

ಈ ಸ್ಕೀಮ್ ನಲ್ಲಿ ಹಿರಿಯ ನಾಗರಿಕರು ಗರಿಷ್ಠ 15 ಲಕ್ಷ ರೂ. ಗಳನ್ನು ಇರಿಸಬಹುದಾಗಿದೆ. ಈ ಠೇವಣಿಯ ಕಾಲಾವಧಿ 15 ವರ್ಷಗಳದ್ದಾಗಿರುತ್ತದೆ; ಪ್ರಕೃತ ಈ ಠೇವಣಿ ಮೇಲೆ ವಾರ್ಷಿಕ ಶೇ.8.70 ಬಡ್ಡಿ ನೀಡಲಾಗುತ್ತಿದೆ. ಬಡ್ಡಿಯನ್ನು ತ್ರೈಮಾಸಿಕ ನೆಲೆಯಲ್ಲಿ ಪಾವತಿಸಲಾಗುತ್ತದೆ.

ಈ ಯೋಜನೆಯಲ್ಲಿ ವರ್ಷವೊಂದರಲ್ಲಿ ಹೂಡಲಾಗುವ 1.50 ಲಕ್ಷ ರೂ. ವರೆಗಿನ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿಯ  ಲಾಭ ಇರುತ್ತದೆ. ಹಾಗಿದ್ದರೂ ಠೇವಣಿ ಮೇಲಿನ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಹಣ ಹಿಂಪಡೆದಾಗ ಅದಕ್ಕೆ ತೆರಿಗೆ ಲಗಾವಾಗುವುದಿಲ್ಲ. ಹಣಕಾಸು ವರ್ಷವೊಂದರಲ್ಲಿ ಪಾವತಿಯಾಗುವ ಬಡ್ಡಿಯು 10,000 ರೂ. ದಾಟಿದಲ್ಲಿ ಅದರ ಮೇಲಿನ ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡಲಾಗುತ್ತದೆ. ಹಣ ಠೇವಣಿ ಇರಿಸಿದ ಒಂದು ವರ್ಷದ ಬಳಿಕ ಅವಧಿಪೂರ್ವ ಹಿಂಪಡೆತಕ್ಕೆ ಅವಕಾಶ ಇರುತ್ತದೆ; ಆದರೆ ಅದಕ್ಕೆ ದಂಡವೂ ಅನ್ವಯಿಸುತ್ತದೆ.

ಆರ್ ಬಿ ಐ ಟ್ಯಾಕ್ಸೇಬಲ್ ಬಾಂಡ್ :

ಟಾಪ್ ಟೆನ್ ಹೂಡಿಕೆಯ 8ನೇ ಕ್ರಮಾಂಕದಲ್ಲಿ ನಾವು ಆರ್ ಬಿ ಐ ಟ್ಯಾಕೇಸಬಲ್ ಬಾಂಡ್ ಗಳನ್ನು ಪರಿಗಣಿಸಬಹುದಾಗಿದೆ.

ಈ ಹಿಂದೆ ಇದ್ದ  2003ರ ಶೇ.8.00 ಸೇವಿಂಗ್ಸ್ ಟ್ಯಾಕ್ಸೇಬಲ್ ಬಾಂಡ್ ಗಳ ಸ್ಥಾನದಲ್ಲಿ  ಕೇಂದ್ರ ಸರಕಾರ ಈಚೆಗೆ ಶೇ.7.75ರ ಸೇವಿಂಗ್ಸ್ ಟ್ಯಾಕ್ಸೇಬಲ್ ಬಾಂಡ್ ಗಳನ್ನು ಹೊರತಂದಿದೆ. ಈ ಬಾಂಡ್ಗಳ ಅವಧಿ 7 ವರ್ಷ. ಇವುಗಳನ್ನು demat ರೂಪದಲ್ಲೂ ಪಡೆಯಬಹುದಾಗಿದೆ. ಡಿ ಮ್ಯಾಟ್ ರೂಪದಲ್ಲಿ  ಇವುಗಳನ್ನು ಹೂಡಿಕೆದಾರರ ಬಾಂಡ್ ಲೆಜ್ಜರ್ ಅಕೌಂಟ್ಗೆ ಅಥವಾ ಬಿಎಲ್ಎ ಗೆ ಹಾಕಲಾಗುತ್ತದೆ. ಸರ್ಟಿಫಿಕೇಟ್ ರೂಪದಲ್ಲೂ ಇವುಗಳನ್ನು ಹೂಡಿಕೆದಾರರು ಪಡೆಯಲು ಅವಕಾಶ ಇರುತ್ತದೆ.

ರಿಯಲ್ ಎಸ್ಟೇಟ್ :

ಟಾಪ್ ಟೆನ್ ಹೂಡಿಕೆ ಆಯ್ಕೆಯಲ್ಲಿ 9ನೇ ಸ್ಥಾನದಲ್ಲಿರುವ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ  ಬೇಕೆಂದಾಗ ಹಣ ನಗದೀಕರಿಸುವ ಅವಕಾಶ ಬಹಳ ಕ್ಷೀಣವಾಗಿರುತ್ತದೆ. ನಾವು ಸ್ವಂತಕ್ಕೆ ಕಟ್ಟಿಕೊಳ್ಳುವ ಮನೆಯು ನಮ್ಮ ಉಳಿತಾಯದ ಫಲ ಎಂದೇ ತಿಳಿಯಲಾಗುತ್ತದೆ. ಅದನ್ನು ಹೂಡಿಕೆ ಎಂದು ಪರಿಗಣಿಸುವಂತಿಲ್ಲ. ಒಂದೊಮ್ಮೆ ನಾವು ಸ್ವತಃ ವಾಸಿಸುವ ಉದ್ದೇಶ ಹೊಂದಿಲ್ಲವಾದರೆ ಅಂತಹ ವಾಸದ ಕಟ್ಟಡವು ಹೂಡಿಕೆಯ ರೂಪದ್ದಾಗಿರುತ್ತದೆ.

ಹೂಡಿಕೆ ರೂಪದ ರಿಯಲ್ ಎಸ್ಟೇಟ್ ಸೊತ್ತು ಅತ್ಯಧಿಕ ಬೆಲೆ ಪಡೆಯಬೇಕೆಂದರೆ ಅದು ಇರುವ ತಾಣ ಅಥವಾ ಸ್ಥಳ ಬಹಳ ಮುಖ್ಯವಾಗುತ್ತದೆ. ಆರ್ಥಿಕ ಚಟುವಟಿಕೆಗಳ ತಾಣಕ್ಕೆ ನಿಕಟವಾದಷ್ಟೂ ರಿಯಲ್ ಎಸ್ಟೇಟ್ ಸೊತ್ತಿಗೆ ಬೆಲೆ ಹೆಚ್ಚು.  ರಿಯಲ್ ಎಸ್ಟೇಟ್ ಸೊತ್ತಿನ ರೂಪದ ಕಟ್ಟಡ, ಭೂಮಿ ಇತ್ಯಾದಿಗಳನ್ನು ಬಾಡಿಗೆ ಆದಾಯಕ್ಕೆ ಸುಲಭದಲ್ಲಿ ಒಳಗೊಳಿಸಬಹುದಾಗಿರುತ್ತದೆ.

ಆದುದರಿಂದ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಕ್ಯಾಪಿಟಲ್ ಅಪ್ರಿಸಿಯೇಶನ್ (ಬಂಡವಾಳ ವೃದ್ಧಿ) ಮತ್ತು ಬಾಡಿಗೆ ಆದಾಯ ಇರುವುದರಿಂದ ಇದು ಈ ಎರಡು ಬಗೆಯ ಇಳುವರಿಯನ್ನು ಖಾತರಿ ಪಡಿಸುತ್ತದೆ.

ಇತರ ಎಲ್ಲ ಬಗೆಯ ಹೂಡಿಕೆ ಆಯ್ಕೆಗಳನ್ನು ಹೋಲಿಸಿದಾಗ ರಿಯಲ್ ಎಸ್ಟೇಟ್ ಹೂಡಿಕೆಯು ಅತ್ಯಂತ ನಿಕೃಷ್ಟ ನಗದೀಕರಣವನ್ನು ಹೊಂದಿರುತ್ತದೆ. ಎಂದರೆ ಬೇಕೆಂದಾಗ ಹಣ ಹಿಂಪಡೆಯುವುದಕ್ಕೆ ಬಹುತೇಕ ಶೂನ್ಯ ಅವಕಾಶ ಇರುತ್ತದೆ. ರಿಯಲ್ ಎಸ್ಟೇಟ್ ಹೂಡಿಕೆಗೆ ಅನೇಕಾನೇಕ ಬಗೆಯ ಸರಕಾರಿ ಅನುಮೋದನೆ, ಅನುಮತಿ, ಪರವಾನಿಗೆ ಮುಂತಾದ ಆವಶ್ಯಕತೆಗಳು, ನಿರ್ಬಂಧಗಳು ಇರುವುದು ಬಹುಮಟ್ಟಿನ ರಿಸ್ಕ್ ಎಂದೇ ಪರಿಗಣಿಸಲ್ಪಡುತ್ತದೆ.

Tags:

ಹಿರಿಯ ನಾಗರಿಕರಿಗೆ ನೆಮ್ಮದಿ

ಭದ್ರತೆ ನೀಡುವ ಆಕರ್ಷಕ ಸ್ಕೀಮ್. tailor-made scheme

Senior Citizens

Author/Source:

ಸತೀಶ್ ಮಲ್ಯ

Mon, 05 Nov 2018 06:33:41 +0000 satishmallya 336016 at https://www.udayavani.com https://www.udayavani.com/kannada/news/web-focus/336016/this-scheme-is-tailor-made-for-senior-citizens#comments